1 00:00:53,262 --> 00:00:55,473 ಅಂತಿಮ ಯುದ್ಧ 2 00:02:41,537 --> 00:02:42,413 ಅಲ್ಲಿ. 3 00:02:42,496 --> 00:02:46,041 ನಮ್ಮ ಮೊತ್ತ ಮೊದಲ ಅಪಾರ್ಟ್ಮೆಂಟ್. ಊಟ ಮತ್ತು ಬಿಯರ್ ಕೆಳಗಿಟ್ಟಿದ್ದೀವಿ. 4 00:02:50,629 --> 00:02:51,881 ಓ, ನನ್ನ ದೇವರೇ. 5 00:02:51,964 --> 00:02:53,507 ಸುಸ್ವಾಗತ, ಮಿಸೆಸ್ ರೀಸ್. 6 00:02:56,051 --> 00:02:58,053 -ಅಬ್ಬಾ! -ಅದನ್ನು ನಂಬುವೆಯ? ಅಬ್ಬಾ! 7 00:02:59,680 --> 00:03:01,974 -ನಂಬಬಲ್ಲೆ. ಹೌದು. -ಇದು ಹುಚ್ಚುತನ. 8 00:03:02,057 --> 00:03:06,562 ನನ್ನ ಪ್ರಕಾರ, 30 ವರ್ಷಕ್ಕೆ ಸಹಿ ಮಾಡುವ ಸಾಲವು ಅದನ್ನು ಸಾರಿ ಹೇಳುತ್ತದೆ. 9 00:03:06,645 --> 00:03:09,732 30 ವರ್ಷಗಳು. ಇಲ್ಲಿ? ನಾವು ಹುಚ್ಚರಾ? 10 00:03:09,815 --> 00:03:12,109 ನನಗೆ ಗೊತ್ತಿಲ್ಲ. ಅದನ್ನೇನು ಕೇಳಬೇಕೇ? 11 00:03:13,068 --> 00:03:15,613 ಇದು ನಿಜವಾಗಿಯೂ ಕೆಟ್ಟದಾಗಿದೆ. 12 00:03:20,659 --> 00:03:23,329 -ಈ ವಾಲ್ಪೇಪರ್ನ್ನ ತೆಗಿಯಬೇಕು. -ಹೌದು. 13 00:03:23,412 --> 00:03:25,873 -ಮತ್ತು ಕಾರ್ಪೆಟ್. -ಖಂಡಿತ. ನೋಟ ಇರಬೇಕು. 14 00:03:27,917 --> 00:03:30,544 -ಉದಾಹರಣೆಗೆ, ಗನ್ ಸುರಕ್ಷಿತವಾಗಿಡಬಹುದು. -ವಾವ್! 15 00:03:30,628 --> 00:03:34,006 ಕೆಲಸದ ಬೆಂಚ್, ಜೆಬಿಎಡಿ ಧ್ವಜ, ಈ ಸ್ಥಳವನ್ನು ಸರಿಯಾಗಿ ಅಲಂಕರಿಸೋಣ. 16 00:03:34,548 --> 00:03:36,800 ಓಹ್, ಇಲ್ಲ, ಈ ಕೋಣೆ ನನ್ನ ಕಚೇರಿಯಾಗಲಿದೆ. 17 00:03:36,884 --> 00:03:38,052 ಏನು? 18 00:03:38,135 --> 00:03:40,638 ಇದು ನನ್ನ ಕಛೇರಿ. ನೀನು ಗ್ಯಾರೇಜ್ ಹೊಂದಬಹುದು. 19 00:03:41,513 --> 00:03:44,099 ಇಲ್ಲ. ಅದು ಆಗುವುದಿಲ್ಲ. ಆಗದ್ದು. 20 00:03:44,183 --> 00:03:46,852 -ನೋಡೋಣ. -ಮಲಗುವ ಕೋಣೆಗಳನ್ನು ನೋಡ್ತೀಯಾ? 21 00:03:46,936 --> 00:03:51,398 ಹೌದು. ಆದರೆ ನಾವು ಕೆಲಸ ಮಾಡಲು ಇಲ್ಲಿದ್ದೇವೆ, ಬೇರೆ ಆಲೋಚನೆ ಬೇಡ. 22 00:03:51,482 --> 00:03:53,025 ಅದನ್ನೂ ನೋಡೋಣ. 23 00:04:09,124 --> 00:04:13,337 15 ಗಂಟೆಗಳ ಹಿಂದೆ 24 00:04:17,424 --> 00:04:20,386 ಲೋ, ಬೇವರ್ಸಿಗಳಾ... ತೂಕ ಇದೆಯೇನ್ರೋ? 25 00:04:20,469 --> 00:04:23,013 -ಎಣಿಸ್ತಿರಿ! -ಬನ್ರೋ ಬೀಚಿಂದ ಹೊರಕ್ಕೆ. 26 00:04:24,390 --> 00:04:25,307 ಎದ್ದೇಳ್ರೋ! 27 00:04:27,893 --> 00:04:30,604 ಆ ಗಂಟೆಯನ್ನು ಬಾರಿಸಿರೋ. ಅದೇ ನಿಮ್ಮ ಮೋಕ್ಷ. 28 00:04:31,313 --> 00:04:32,398 ಹೋಗಿ ಹೊಡೀರಿ. 29 00:04:32,982 --> 00:04:35,109 ಮೊದಲ ಸಲ ನೋವಾಗುತ್ತೆ ಅಷ್ಟೇ ಕಣ್ರೋ. 30 00:04:35,192 --> 00:04:37,653 -ತೂಕ ಇದೆಯೇನ್ರೋ? -ನನಗೆ ತೂಕ ಇದೆ! 31 00:04:37,736 --> 00:04:40,364 -ನನಗೇನೋ ಕಾಣಿಸ್ತಿಲ್ಲಪ್ಪ. -ಮೂರು! 32 00:04:40,447 --> 00:04:43,242 ಸೋಲೊಪ್ಪಿಕೊಳ್ಳೋರು ಬೇಡ. ಒಂದು ದಿಮ್ಮಿ ಎತ್ತಕ್ಕಾಗಲ್ಲ, 33 00:04:43,325 --> 00:04:44,827 ಶತ್ರುವನ್ನ ಹೇಗೆ ಹೊಡೀತೀರ? 34 00:04:48,497 --> 00:04:52,251 ಸಾಗಿಸಿ! ಸಾಗಿಸಿ ಅದನ್ನ! ಮಧ್ಯ ಬಿಡೋ ಹಾಗಿಲ್ಲ. 35 00:04:55,796 --> 00:04:58,048 ಜೆಎಜಿ ಇಲ್ಲಿದ್ದಾರೆ. ಕ್ಯಾಪ್ಟನ್ ಹೋವಾರ್ಡ್. 36 00:05:06,098 --> 00:05:07,349 ಎಲ್ಲವೂ ಕ್ರಮದಲ್ಲಿದೆಯೇ? 37 00:05:08,142 --> 00:05:10,310 ಓಡಿನ್ಸ್ ಸ್ವೋರ್ಡ್ ಬಗ್ಗೆ, 38 00:05:10,394 --> 00:05:12,730 ನಾವು ನಿರಾಕರಣೆಯನ್ನು ಹೊಂದಿರಬೇಕು. 39 00:05:13,439 --> 00:05:15,232 "ಹೊಂದಿರಬೇಕು" ಅಂದ್ರೆ? 40 00:05:15,315 --> 00:05:16,817 ದುರಂತಗಳು ಸಂಭವಿಸುತ್ತವೆ. 41 00:05:16,900 --> 00:05:20,487 ಈ ಕಾರ್ಯ ಟೀಮ್ ಇಂಟೆಲಿಜೆನ್ಸ್ ಮೇಲೆ ಕಟ್ಟಿದರು. ನಾವು ಜವಾಬ್ದಾರರಲ್ಲ. 42 00:05:22,614 --> 00:05:24,199 ಪ್ರಯೋಗ ಏನಾಯ್ತು? 43 00:05:26,035 --> 00:05:29,955 ನ್ಯಾಯವಾಗಿ ಹೇಳಬೇಕಂದ್ರೆ, ಇದ್ಯಾವುದರ ಪರೀಕ್ಷೆಯೂ ಆಗಿಲ್ಲ ಅನ್ನೋದು ಗಮನಿಸಿ. 44 00:05:30,456 --> 00:05:33,250 ಎನ್ಡಿಎಎ ಸ್ಪಷ್ಟವಿದೆ. ಇದು ನ್ಯಾಯಾಲಯದ ಮುಂದೆ ಹೋದರೆ-- 45 00:05:33,333 --> 00:05:34,585 ರಕ್ಷಣೆ ಇದೆಯಾ ಇಲ್ವಾ? 46 00:05:39,423 --> 00:05:40,507 ಆದೇಶ ಎಂದರೆ ಆದೇಶ. 47 00:05:41,258 --> 00:05:43,469 ಜೇಮ್ಸ್ ರೀಸ್ ಪರಿಗಣಿಸ್ತಾನಾ ಅನುಮಾನವಿದೆ. 48 00:05:47,097 --> 00:05:51,727 ಆಕಸ್ಮಿಕಗಳನ್ನು ಗಂಭೀರವಾಗಿ ಪರಿಗಣಿಸಲು ಇದು ಸಮಯ ಎಂದು ನಾನು ನಂಬುತ್ತೇನೆ. 49 00:05:54,146 --> 00:05:55,731 ಯಾವ ರೀತಿಯ ಆಕಸ್ಮಿಕಗಳು? 50 00:05:56,315 --> 00:05:57,775 ಯುದ್ಧತಂತ್ರದ ಹಿಂದಿರುವಿಕೆ. 51 00:05:58,442 --> 00:06:00,736 ಹಸ್ತಾಂತರ ಮಾಡದ ದೇಶಗಳ ಪಟ್ಟಿ ಮಾಡಿದ್ದೀನಿ. 52 00:06:00,819 --> 00:06:02,654 -ಕಟ್ಟುಕತೆ. -ಎಲ್ಲರೂ ಸತ್ತಿದ್ದಾರೆ. 53 00:06:03,572 --> 00:06:04,948 ನನಗೊಂದು ಕುಟುಂಬವಿದೆ. 54 00:06:05,032 --> 00:06:07,826 ಜೇಮ್ಸ್ ರೀಸ್ ಕಾರಣದಿಂದ ನಾನು ಕ್ಯಾಮರೂನ್ಗೆ ಹೋಗಲ್ಲ. 55 00:06:07,910 --> 00:06:09,787 ಮಾತಾಡುವುದನ್ನು ನಿಲ್ಲಿಸು. 56 00:06:13,123 --> 00:06:14,333 ನಾವು ನೇವಲ್ ಕಮಾಂಡ್, 57 00:06:15,000 --> 00:06:17,044 ಯಾರೋ ವಾಲ್ ಸ್ಟ್ರೀಟ್ ದಡ್ಡರಲ್ಲ. 58 00:06:18,629 --> 00:06:22,800 ಕಾನೂನು ರಕ್ಷಣೆಯನ್ನು ಹೊಂದಿರುವವರೆಗೆ, ನಾವು ರಕ್ಷಿಸುವ ಸ್ಥಾನವನ್ನು ಹೊಂದಿದ್ದೇವೆ. 59 00:06:23,884 --> 00:06:27,262 ಮತ್ತು ಅವಮಾನಿತ ಕಮಾಂಡರ್ ರೀಸ್ ಇಲ್ಲಿ ಬರಲು ಬಯಸಿದರೆ, 60 00:06:27,930 --> 00:06:31,058 ಇಲ್ಲಿನ 5000 ನಾವಿಕರಿಗೆ ಹೇಳಿಕೊಳ್ಳೋಕಾದರೂ ಏನಾದರೂ ಇರುತ್ತೆ. 61 00:06:35,979 --> 00:06:36,980 ನನಗೆ ಕಾಣ್ತಿದಾರೆ. 62 00:06:38,941 --> 00:06:41,485 ನೀನು ಹಾರ್ನ್ನ ಎತ್ತಿದ ಮೇಲೆ ದಿನಾ ಭೇಟಿಯಾಗ್ತಾರೆ. 63 00:06:44,154 --> 00:06:48,659 ಕಾಕ್ಸ್ ಮತ್ತು ಹೋವಾರ್ಡ್ ಸರ್ಕಾರಿ ಬೊಕ್ಕಸದಲ್ಲೇ ಬದುಕುತ್ತಿರೋದ್ರಿಂದ ಆ ಅವಕಾಶ ಇದೆ. 64 00:06:49,535 --> 00:06:51,954 ಪಿಲ್ಲರ್ ಮಾತ್ರ... ಬೇಸ್ ಬಿಟ್ಟು ಬರ್ತಿಲ್ಲ. 65 00:06:52,579 --> 00:06:55,874 ಪೂರ್ತಿ ಎನ್ಏಬಿಯನ್ನ ಎದುರು ಹಾಕಿಕೊಳ್ಳೋಕೆ ನೋಡ್ತಿಲ್ಲ ತಾನೇ ನೀನು? 66 00:07:19,231 --> 00:07:22,192 ಬಹುಶಃ ನಾವು ಮೊದಲು ಇಬ್ಬರನ್ನ ಕೊಂದು ಪಿಲ್ಲರ್ಗೆ ಕಾಯೋಣ. 67 00:07:23,652 --> 00:07:25,279 ಸ್ನೈಪರ್ ಶಾಟ್ ಹೊಡೆಯೋಣ. 68 00:07:26,113 --> 00:07:27,197 ದೋಣಿಯಿಂದಲಾ? 69 00:07:29,199 --> 00:07:31,160 ಅದು ಆಗಬಹುದು, ಆಗದಿರಬಹುದು. 70 00:07:33,245 --> 00:07:34,663 ಮಿಸ್ ಮಾಡ್ಕೊಳ್ಳೋ ಹಾಗಿಲ್ಲ. 71 00:07:39,960 --> 00:07:41,128 ಮೊಸುಲ್ ನೆನಪಿದೆಯೇ? 72 00:07:42,546 --> 00:07:43,755 ಹೌದು, ಅದರ ಬಗ್ಗೆ ಏನು? 73 00:07:45,924 --> 00:07:47,551 ಸಾಯಿದತಿ ಅಲ್ ಜಮೀಲಾ? 74 00:07:50,762 --> 00:07:52,139 ಹೋವಾರ್ಡ್ನ ಕುಟುಂಬವಿದೆ. 75 00:07:55,225 --> 00:07:56,226 ದಿಟ್ಟ ನಡೆ. 76 00:08:23,754 --> 00:08:25,756 ಕ್ಯಾಲಿಫೋರ್ನಿಯಾ ಗವರ್ನರ್ ತ್ವರಿತ ಪ್ರತಿಕ್ರಿಯೆಯನ್ನು ಬಯಸುತ್ತಾರೆ 77 00:08:25,881 --> 00:08:28,383 ಸೈನಿಕರು ತಿರುಗಿಬಿದ್ದಾಗ: ಆಂತರಿಕ ಭಯೋತ್ಪಾದನೆಯ ಇತಿಹಾಸ 78 00:08:32,471 --> 00:08:34,556 ಬೇರೆ ಏನೇ ಇದ್ದರೂ ಎಫ್ಬಿಐನ ಕೇಳಿ. 79 00:08:39,686 --> 00:08:42,898 ಜೇಮ್ಸ್ ರೀಸ್ ಮೈಕ್ ಟೆಡೆಸ್ಕೋನ ಕೊಂದಿಲ್ಲ, ಅದು ನೀವು ನಿಮ್ಮವರು. 80 00:08:42,981 --> 00:08:46,568 ಟಾಲೋಸ್ ಸೆಕ್ಯೂರಿಟಿ ಕೊಡುತ್ತಾರೆ. ಅವರು ಕೊಲೆಗಾರರಲ್ಲ. 81 00:08:47,152 --> 00:08:48,987 ನಿನ್ ಬಗ್ಗೆ ನಂಗ್ ಗೊತ್ತಿಲ್ವಾ? 82 00:08:49,071 --> 00:08:51,865 ಆರ್ಡಿ-4895ನ ನೇವಿ ಸೀಲ್ಗಳ ಮೇಲೆ ಪರೀಕ್ಷಿಸಿದ್ದೀರಿ. 83 00:08:51,949 --> 00:08:55,452 ಪರೀಕ್ಷೆಗಳಿಂದ ಗಡ್ಡೆಗಳಾಗಿದ್ದಕ್ಕೆ ಅವರನ್ನ ಕೊಂದಿರಿ ಅಂತನೂ ಗೊತ್ತು. 84 00:08:55,535 --> 00:08:59,122 ಇದು ನನ್ನ ಕಥೆ. ನೀವು ನನ್ನ ಕೊಂದರೆ ಎಲ್ಲರಿಗೂ ನಿಜ ತಿಳಿಯುತ್ತದೆ. 85 00:08:59,206 --> 00:09:01,583 ನಿಮ್ಮ ಹಾಳಾದ ಡೀಲ್ ಬಿದ್ದುಹೋಗುತ್ತದೆ. 86 00:09:07,464 --> 00:09:09,508 ಇಂದು, ಭಯದಿಂದ ಎಚ್ಚರಗೊಳ್ಳುವುದು ಸುಲಭ. 87 00:09:10,801 --> 00:09:15,597 ನಾವು ಟಿವಿಯಲ್ಲಿ ಈ ವಾರ ನೋಡಿದ ಹಿಂಸೆಯ ಕೃತ್ಯಗಳನ್ನ ನಿರ್ಲಕ್ಷಿಸಬಾರದು. 88 00:09:16,390 --> 00:09:22,271 ಆದರೆ ಆಡಳಿತ ಜೇಮ್ಸ್ ಸಲ್ಲಿವನ್ ರೀಸ್ನ ದೇಶೀಯ ಭಯೋತ್ಪಾದಕನನ್ನಾಗಿ ವರ್ಗೀಕರಿಸಲು 89 00:09:22,854 --> 00:09:24,773 ಬೇಗ ಕಾರ್ಯನಿರ್ವಹಿಸಿದೆ. 90 00:09:32,114 --> 00:09:35,993 ಈಗ ಪ್ರಶ್ನೆಗಳಿಗೆ ತೆರೆಯೋಣ, ಏಕೆಂದರೆ ಹಲವಾರು ಇವೆ ಎಂದು ನನಗೆ ಖಾತ್ರಿಯಿದೆ. 91 00:09:36,618 --> 00:09:37,577 ಹಿಂದಿನಲ್ಲಿ. ಹಾಂ. 92 00:09:37,661 --> 00:09:41,748 ಮೇಡಂ ಸೆಕ್ರೆಟರಿ, ನಿಮಗೆ ಕಮಾಂಡರ್ ರೀಸ್ ವೈಯಕ್ತಿಕವಾಗಿ ಗೊತ್ತು, ಹೌದಾ? 93 00:09:42,457 --> 00:09:44,793 ನಾವು ಹಲವಾರು ಬಾರಿ ಭೇಟಿಯಾಗಿದ್ದೇವೆ, ಹೌದು. 94 00:09:44,876 --> 00:09:47,629 ಅವರಿಗೇನಾದರೂ ಆಗಿರಬಹುದು ಅಂತ ನಿಮಗೆ ಅನುಮಾನ ಬಂತಾ? 95 00:09:50,215 --> 00:09:52,050 ನೀವು ಸಶಸ್ತ್ರ ಪಡೆಗಳಿಗೆ ಸೇರಿದಾಗ, 96 00:09:52,134 --> 00:09:56,430 ಆಂತರಿಕ ಹಾಗೂ ಬಾಹ್ಯ ಬೆದರಿಕೆಗಳ ವಿರುದ್ಧ ಸಂವಿಧಾನ ರಕ್ಷಿಸಲು ಪ್ರತಿಜ್ಞೆ ಮಾಡುತ್ತೀರಿ. 97 00:09:56,513 --> 00:10:00,392 ಕಮಾಂಡರ್ ರೀಸ್ ಆ ಪ್ರಮಾಣವನ್ನು ಪೂರೈಸುತ್ತಿರೋದರ ಬಗ್ಗೆ ನನಗೆ ಅನುಮಾನವಿದೆ. 98 00:10:01,018 --> 00:10:02,269 ಯಾರ ವಿರುದ್ಧ, ಮೇಡಮ್? 99 00:10:05,605 --> 00:10:08,567 ಜೇಮ್ಸ್ ಒಂದು ಲಕ್ಷ್ಯದ ಮೇಲಿದ್ದೇನೆ ಎಂದು ನಂಬಿದ್ದಾನೆ, 100 00:10:08,650 --> 00:10:10,694 ಅದು ಮುಗಿಯೋವರೆಗೂ ಅವನು ನಿಲ್ಲಲ. 101 00:10:10,777 --> 00:10:15,407 ಅವನನ್ನು ಹಿಡಿಯಲು, ಮುಂದಿನ ಬಲಿಪಶು ಯಾರಂತ ನಿರ್ಧರಿಸಿ, ಅವನಿಗಿಂತ ಮುಂಚೆಯೇ ಹೋಗಬೇಕು. 102 00:10:15,532 --> 00:10:17,284 ಅಂದರೆ ಅಗ್ರಗಣ್ಯವಾಗಿ, 103 00:10:17,367 --> 00:10:21,371 ಸ್ಟೀವ್ ಹಾರ್ನ್ ಹಾಗೂ ಕ್ಯಾಪ್ಸ್ಟೋನ್ ಇಂಡಸ್ಟ್ರೀಸಿಗೆ ಸಂಬಂಧಿಸಿದವರ ಹುಡುಕುವುದು. 104 00:10:21,455 --> 00:10:24,249 ನಮ್ಮ ಮುಖ್ಯ ಗುರಿ ಸೆರೆಹಿಡಿಯುವುದು. ಆದರೆ ಮೊದಲ ಆದ್ಯತೆ 105 00:10:24,333 --> 00:10:26,918 ಮುಂದೆ ಪ್ರಾಣಹಾನಿಯಾಗದಂತೆ ತಡೆಯುವುದು. 106 00:10:27,002 --> 00:10:30,964 ಆ ಎರಡು ವಿಷಯಗಳು ವಿರೋಧಾಭಾಸದಲ್ಲಿವೆ ಅಂದರೆ ನಮ್ಮ ಕತೆ ಅಷ್ಟೇ. 107 00:10:33,008 --> 00:10:34,384 -ಅರ್ಥವಾಯಿತಾ? -ಹಾಂ, ಸರ್. 108 00:10:35,844 --> 00:10:37,512 ಸರಿ, ನಾವು ಅವನನ್ನು ಹುಡುಕೋಣ. 109 00:10:42,601 --> 00:10:45,395 -ಹೇಗಿದ್ದೀರಾ? -ತೋಳು ತುಂಬಾ ನೋಯುತ್ತಿದೆ. 110 00:11:02,788 --> 00:11:04,748 ಜೇಮ್ಸ್ ರೀಸ್ ಎಲ್ಲಿದ್ದಾರೆ ಗೊತ್ತಾ? 111 00:11:10,420 --> 00:11:13,298 ಸರಿ, ಇದೇ ವಿಷಯ. ನನಗೆ ಮಾಹಿತಿ ಬೇಕು. 112 00:11:13,382 --> 00:11:14,424 ಮತ್ತೆ ನೋಡು. 113 00:11:14,508 --> 00:11:18,136 ರೀಸ್ ಮೇಲೆ 5,000 ಪದಗಳನ್ನು ಬರೆದು ನನ್ನ ಕಥೆಯನ್ನು ಪ್ರಕಟಿಸಲು-- 114 00:11:18,220 --> 00:11:20,305 ನೀನು ಗಾಜಿನ ಮೇಲೆ ನಡೀತಿದ್ದೀಯ, ಕಣಮ್ಮ. 115 00:11:20,389 --> 00:11:21,890 ನೀವಿಲ್ಲದೆ ನಾನು ಮುಗಿಸಲಾರೆ. 116 00:11:22,432 --> 00:11:24,226 ನಾನು ಇಲ್ಲದೆ ನಿಮಗವನು ಸಿಗಲ್ಲ. 117 00:11:28,313 --> 00:11:31,149 ಏನು ಇದ್ದರೂ ಹೇಳು. ಏನು ಮಾಡಬಹುದೆಂದು ನಾನು ನೋಡುತ್ತೇನೆ. 118 00:11:32,192 --> 00:11:33,735 ಅದೇ ಒಳ್ಳೆಯದು. 119 00:11:35,737 --> 00:11:38,198 ನಿಮಗೆ ಸ್ಟೀವ್ ಹಾರ್ನ್ ಕಂಪ್ಯೂಟರ್ ಪ್ರವೇಶ ಇದೆ. 120 00:11:38,281 --> 00:11:40,450 "ಕ್ಯಾಪ್ ಟೇಬಲ್" ಹುಡುಕಿ. 121 00:11:40,534 --> 00:11:43,412 ನ್ಯೂಬೆಲ್ಲಂ ಮಾರಿ ದುಡ್ಡು ಮಾಡಿದವರೆಲ್ಲ ಅದರಲ್ಲಿದ್ದಾರೆ. 122 00:11:43,495 --> 00:11:45,497 ಅವುಗಳಲ್ಲಿ ಹೆಚ್ಚಿನ ಖಾತೆಗಳು ಅಸಲಿಯೇ, 123 00:11:45,580 --> 00:11:50,210 ಆದರೆ ಕೆಲವರು ನೇವಿ ಸೀಲ್ಗಳ ಮೇಲೆ ಆರ್ಡಿ-4895 ಎಂಬ ಮದ್ದನ್ನು ಕಾನೂನುಬಾಹಿರವಾಗಿ 124 00:11:50,293 --> 00:11:53,839 ಪರೀಕ್ಷಿಸುವ ಪಿತೂರಿಯ ಪಾವತಿಗಳನ್ನು ಪ್ರತಿನಿಧಿಸುವವರಾಗಿದ್ದಾರೆ. 125 00:11:53,922 --> 00:11:56,216 ಇದರಲ್ಲಿ ರೀಸಿಂದ ಎಷ್ಟು ಬರುತ್ತಿದೆ? 126 00:11:56,299 --> 00:11:59,094 ಮೂರು ದಿನ ಕಾಡಿನಲ್ಲಿ ದೆವ್ವಗಳೊಂದಿಗೆ ಮಾತಾಡ್ತಾ ಕಳೆದ. 127 00:11:59,177 --> 00:12:01,930 ನಿಮ್ಮ ಸ್ನೇಹಿತೆಯನ್ನು ಕೆಸರಿನಿಂದ ಎಳೆಯೋ ಮೊದಲಾ? 128 00:12:02,013 --> 00:12:04,474 ಅವನು ನನ್ನನ್ನು ಕೆಸರುಗದ್ದೆ ಒಳಗೆ ಹಾಕಿದನು. 129 00:12:04,558 --> 00:12:06,768 ಕೇಳಿ, ನಾನು ರೀಸ್ನ ರಕ್ಷಿಸಲು ಬಂದಿಲ್ಲ. 130 00:12:07,352 --> 00:12:09,146 ಅವನನ್ನು ನಿಲ್ಲಿಸಬೇಕೆಂದು ಗೊತ್ತು. 131 00:12:10,230 --> 00:12:12,941 ಆದರೆ ಇತರರಿಗೂ ಶಿಕ್ಷೆಯಾಗಬೇಕು. 132 00:12:27,164 --> 00:12:30,375 ಹಾರ್ನ್ನ ಕಂಪ್ಯೂಟರ್ನಲ್ಲಿ ಸಿಎಆರ್ಟಿ ಡೀಪ್ ಡೈವ್ ರನ್ ಮಾಡಿ. 133 00:12:30,459 --> 00:12:31,460 ನಿಜವಾಗಲೂ? 134 00:12:33,253 --> 00:12:34,254 ಸರಿ, ಸರ್. 135 00:12:38,800 --> 00:12:41,428 ನಾನು ರಸ್ತೆ ಕೆಳಗಿರೋ ಲೈಬ್ರರಿಯಲ್ಲಿ ಇರುತ್ತೇನೆ-- 136 00:12:41,511 --> 00:12:45,056 ಕೊನೆಯ ಬಾರಿ ನಿನ್ನ ಬಿಟ್ಟಾಗ, ನೀನು ಸ್ಯಾನ್ ಫ್ರಾನ್ಸಿಸ್ಕೋಗೆ ಓಡಿಹೋದೆ. 137 00:12:46,391 --> 00:12:48,727 ಜ್ಯೂನಿಯರ್, ಅವಳು ಈ ಕೋಣೆಯನ್ನು ಬಿಡಬಾರದು. 138 00:12:54,649 --> 00:12:56,818 ಕ್ಷಮಿಸಿ, ಸರ್. ಅವಳಿಗೆ ಕಾಯಲು ಕೇಳಿದೆ. 139 00:13:03,617 --> 00:13:05,785 ಆರಾಮಿರಿ, ಜೆರಾಲ್ಡ್. ಇದು ನಿಮ್ಮ ಕಛೇರಿ. 140 00:13:07,037 --> 00:13:09,206 ಮೇಡಂ. ನೀವು ಊರಿನಲ್ಲಿರುವುದು ನೋಡಿದೆ. 141 00:13:09,706 --> 00:13:11,958 ನೀವು ಇರ್ತೀರಿ ಎಂದು ನಿರೀಕ್ಷಿಸಿರಲಿಲ್ಲ. 142 00:13:12,709 --> 00:13:14,336 ಇದೊಂದು ಅನಪೇಕ್ಷಿತ ಭೇಟಿ. 143 00:13:18,215 --> 00:13:19,424 ಮತ್ತು ಇದು ಯಾರು? 144 00:13:19,508 --> 00:13:21,426 ಡಿಸಿಐಎಸ್ ಏಜೆಂಟ್ ಆಜಾದ್. 145 00:13:23,595 --> 00:13:26,932 ಈ ಸಂಭಾಷಣೆಗಾಗಿ ಎಲ್ಲವೂ ಪ್ರೋಟೋಕಾಲ್ ಪ್ರಕಾರವಾಗಿರಬೇಕಿತ್ತು ನನಗೆ. 146 00:13:31,102 --> 00:13:34,898 ಆಪರೇಷನ್ ಓಡಿನ್ಸ್ ಸ್ವೋರ್ಡಿಂದ ಟಿಐಪಿ ತೆಗೆದಿದ್ದೀನಿ. 147 00:13:35,732 --> 00:13:39,653 ಇಡೀ ತುಕಡಿಯನ್ನು ಯಾವ ರೀತಿಯ ಬುದ್ಧಿವಂತಿಕೆ ಕೊಂದಿತು ಎಂದು ಕುತೂಹಲವಿತ್ತು. 148 00:13:40,654 --> 00:13:42,864 ನನಗೆ ಇಂಟೆಲ್ ಪ್ಯಾಕೇಜಿನ ಪರಿಚಯವಿದೆ. 149 00:13:44,574 --> 00:13:47,285 ಸರಿ, ಆಗ ಇದು ಸಾಕಷ್ಟು ದುರ್ಬಲವಾಗಿದೆ ಅಂತ ಒಪ್ತೀರ. 150 00:13:48,245 --> 00:13:52,040 ಒಬ್ಬ ಶಸ್ತ್ರಾಸ್ತ್ರ ವ್ಯಾಪಾರಿಯ ಆಗಮನ ಆಧರಿಸಿದ ಪ್ರಮುಖ ಕಾರ್ಯಾಚರಣೆಯಾ? 151 00:13:52,832 --> 00:13:53,875 ಹೆಚ್ಚೇನು ಇಲ್ಲವಾ? 152 00:13:54,876 --> 00:13:56,461 ಯಾರಾದರೂ ಪರಿಶೀಲಿಸುತ್ತಾರೆಯೇ? 153 00:13:57,587 --> 00:14:00,966 ನನಗೆ ಪೆಂಟಗಾನಿಂದ ಸ್ಥಾಯಿ ಆದೇಶ ಇತ್ತು, 154 00:14:02,634 --> 00:14:05,845 ಯಾವುದೇ ಕ್ರಿಯಾಶೀಲ ಇಂಟೆಲ್ ಬಂದರೆ ಕಹಾನಿಯ ಮೇಲೆ ದಾಳಿ ಮಾಡೋಕೆ. 155 00:14:06,888 --> 00:14:09,140 ವರದಿ ಎತ್ತಿ ಹಿಡಿದ ಅಧಿಕಾರಿ... 156 00:14:10,559 --> 00:14:11,393 ಯಾರದು? 157 00:14:14,521 --> 00:14:16,565 ಅದು ಲ್ಯಾಂಗ್ಲಿಗೆ ಸಂಬಂಧಿಸಿದ ಪ್ರಶ್ನೆ. 158 00:14:20,902 --> 00:14:21,987 ಥ್ಯಾಂಕ್ ಯೂ. 159 00:14:23,446 --> 00:14:24,281 ಅಷ್ಟೆನಾ? 160 00:14:24,990 --> 00:14:25,824 ಸದ್ಯಕ್ಕೆ. 161 00:14:30,287 --> 00:14:33,498 ಅಡ್ಮಿರಲ್, ನಿಮ್ಮ ಭೇಟಿ ಸಂತೋಷವಾಯಿತು. ಸಂಪರ್ಕದಲ್ಲಿರುತ್ತೇನೆ. 162 00:14:40,171 --> 00:14:42,132 ಕ್ಯಾಪ್ಟನ್ ಹೋವಾರ್ಡ್ ಕರೆಯಿರಿ. ಈಗಲೇ. 163 00:14:59,190 --> 00:15:03,528 ಒಳಬರುವ ಕರೆ ವಾರ್ಕಾಮ್ 164 00:15:06,573 --> 00:15:09,743 ಅಮ್ಮ, ಕೋಚ್ ಹೇಳಿದರು, ಗೆದ್ದರೆ ರಾಜ್ಯ ಮಟ್ಟಕ್ಕೆ ಹೋಗಿ 165 00:15:09,826 --> 00:15:12,412 ನಮ್ಮದೇ ಆದ ರೀತಿಯಲ್ಲಿ ಪಾವತಿಸಬೇಕಂತ. ಎಲ್ಲರಂತೆ. 166 00:15:12,495 --> 00:15:15,832 ಅದು ಎಂಥಾ ನ್ಯಾಯ? ಶಾಲೆಯವರು ನಮಗೆ ಬಸ್ಸು ಕೊಡಬೇಕಲ್ಲವೇ? 167 00:15:15,915 --> 00:15:17,917 -ನಾನು ಮಾತಾಡ್ತೀನಿ. -ಬೇಗ ಬಂದಿದ್ದೀರಿ. 168 00:15:18,001 --> 00:15:20,420 ಹೇ. ನಾನು… 169 00:15:23,423 --> 00:15:25,383 ಕೇಳಿ ಇಲ್ಲಿ, ನಾವು... 170 00:15:27,052 --> 00:15:28,845 -ಕೀಸ್ಗೆ ಹೋಗ್ತಿದ್ದೇವೆ. -ಏನು? 171 00:15:28,928 --> 00:15:30,096 ಹೌದು. ಇಂದು ರಾತ್ರಿ. 172 00:15:30,180 --> 00:15:32,015 -ಏನು? -ನನಗೆ ಟಿಕೆಟ್ ಸಿಕ್ಕಿತು. 173 00:15:33,224 --> 00:15:34,559 ಪ್ಯಾಕ್ ಮಾಡಬೇಕಾಗಿದೆ. 174 00:15:35,602 --> 00:15:37,228 ನನಗೆ ಸಾಧ್ಯವಿಲ್ಲ. ಸಾಕರ್ ಇದೆ. 175 00:15:37,312 --> 00:15:39,606 ಸಾಕರ್ ಇಲ್ಲ. ನಿಮ್ಮ ವಸ್ತುಗಳನ್ನು ತಗೊಳ್ಳಿ. 176 00:15:40,106 --> 00:15:41,066 ಏನಾಯ್ತ? 177 00:15:41,149 --> 00:15:41,983 ಇಲ್ಲ. 178 00:15:43,610 --> 00:15:47,405 ಇಲ್ಲ. ವಿಷಯಗಳು ಇತ್ಯರ್ಥವಾಗುವವರೆಗೆ ಇದನ್ನು ರಜೆ ಎಂದು ಭಾವಿಸಿ. 179 00:15:48,114 --> 00:15:50,283 -ಏನು ಇತ್ಯರ್ಥ ಆಗೋವರೆಗೂ? -ಕೇಳು, 180 00:15:50,367 --> 00:15:51,785 ಇದು ಮಜಾ ಇರುತ್ತೆ, ಓಕೆ? 181 00:15:51,868 --> 00:15:54,871 -ಇದು ಏನೇ ಇರಲಿ, ಇದು ತಮಾಷೆ ಅಲ್ಲ. -ನನ್ನ ಮಾತು ಕೇಳು! 182 00:15:57,499 --> 00:16:01,127 ನೀವಿಬ್ಬರೂ ನಿಮ್ಮ ಬ್ಯಾಗ್ ಪ್ಯಾಕ್ ಮಾಡ್ಕೊಳ್ಳಿ. ಆಯ್ತಾ? 183 00:16:01,670 --> 00:16:04,881 -ಬನ್ನಿ. ಹೋಗೋಣ! -ಅರ್ಥವಾಗಿಲ್ಲ. ಕೀಸ್ನ ದ್ವೇಷಿಸುತ್ತೀರಿ. 184 00:16:26,486 --> 00:16:30,031 ಹೇ. ನಾವು ಹೊರಡಬೇಕು. ಹೋವಾರ್ಡ್ ಕೀ ವೆಸ್ಟ್ಗೆಟಿಕೆಟ್ಗಳ ಖರೀದಿಸಿದ. 185 00:16:33,493 --> 00:16:35,078 -ಯಾವಾಗ? -ಇಂದು ರಾತ್ರಿ. 186 00:16:35,829 --> 00:16:36,913 ಓಡು, ಮೊಲವೇ, ಓಡು. 187 00:16:38,581 --> 00:16:39,582 ರೆಡಿ ಇರ್ತೀವಿ. 188 00:16:53,138 --> 00:16:55,598 ಕೇಳು, ಬ್ರದರ್. ನಾನು ಯೋಚಿಸುತ್ತಿದ್ದೆ... 189 00:16:57,642 --> 00:16:58,977 ಇದು ಹೇಗೇ ಆದರೂ, 190 00:17:00,395 --> 00:17:03,690 ಫೆಡ್ಗಳು ತನಿಖೆ ನಡೆಸ್ತಾ ಇರ್ತಾರೆ. ನಡೆಸ್ತಾನೇ ಇರ್ತಾರೆ. 191 00:17:05,817 --> 00:17:09,237 ನಿನ್ನ ಏಜೆನ್ಸಿ ಕವರ್ನೊಂದಿಗೆ ಸಹ ಏನನ್ನಾದರೂ ಕಂಡುಕೊಳ್ಳುತ್ತಾರೆ. 192 00:17:10,196 --> 00:17:11,114 ಉಪಾಯ ಇದೆಯಾ? 193 00:17:12,198 --> 00:17:13,032 ಹೌದು. 194 00:17:18,246 --> 00:17:19,748 ಮಂಕೋರಾ ಬಗ್ಗೆ ಕೇಳಿದ್ದೀಯಾ? 195 00:17:21,374 --> 00:17:23,626 ಪೆರುವಿನ ಕರಾವಳಿಯ ಪುಟ್ಟ ಸರ್ಫ್ ಪಟ್ಟಣ. 196 00:17:25,086 --> 00:17:27,088 ದೊಡ್ಡ, ದೊಡ್ಡ ಅಲೆಗಳಿಂದ ತುಂಬಿರುತ್ತೆ. 197 00:17:28,757 --> 00:17:32,677 ಬಿಸಿನೀರಿನ ಬುಗ್ಗೆ, ಮಣ್ಣಿನ ಸ್ನಾನ, ಅಯಾಹುವಾಸ್ಕಾ, ಆಸ್ಟ್ರೇಲಿಯಾದ ಹುಡುಗೀರು. 198 00:17:34,387 --> 00:17:35,930 ನಿವೃತ್ತಿಗೆ ಕೆಟ್ಟ ಸ್ಥಳವಲ್ಲ. 199 00:17:39,559 --> 00:17:40,560 ನನ್ನನ್ನು ಕ್ಷಮಿಸು. 200 00:17:41,227 --> 00:17:42,270 ಯಾವುದಕ್ಕಾಗಿ? 201 00:17:44,272 --> 00:17:46,232 ನಿನ್ನ ಇದಕ್ಕೆ ಎಳೆದಿದ್ದಕ್ಕಾಗಿ. 202 00:17:47,317 --> 00:17:49,694 ಅವರು ನನ್ನನ್ನು ಇದಕ್ಕೆ ಕರೆತಂದರು, ಬ್ರದರ್. 203 00:17:51,654 --> 00:17:54,157 ನೀನಲ್ಲ. ನೆನಪಿರಲಿ. 204 00:17:55,158 --> 00:17:56,159 ಹೌದು. 205 00:18:29,692 --> 00:18:31,319 ನೀನಿದನ್ನು ಮಾಡಲೇಬೇಕಾ? 206 00:18:58,221 --> 00:18:59,681 -ಏಜೆಂಟ್ ಲಯೂನ್-- -ಅಲ್ಲೇ. 207 00:19:01,891 --> 00:19:03,393 ಕಂಪ್ಯೂಟರ್ಸ್ ಹುಡುಕಿದೆವು. 208 00:19:03,476 --> 00:19:08,064 ಪಿಲ್ಲರ್ ಆರ್ಡಿ-4895 ಔಷಧಿಯನ್ನ ಉಲ್ಲೇಖಿಸುವ ಹಲವಾರು ಪತ್ರವ್ಯವಹಾರಗಳನ್ನು ಕಂಡುಕೊಂಡೆವು, 209 00:19:08,147 --> 00:19:10,149 ರೀಸ್ ತುಕಡಿಯ ವೈದ್ಯಕೀಯ ವರದಿ ಸಹ. 210 00:19:11,067 --> 00:19:13,278 ಟ್ಯುೂಮರ್ ಬಗ್ಗೆ ಪಿಲ್ಲರ್ಗೆ ಗೊತ್ತಿತ್ತು. 211 00:19:13,361 --> 00:19:16,948 ಅಷ್ಟೇ ಅಲ್ಲ, ಸರ್. ಪ್ರಯೋಗದಲ್ಲಿ ಅವರ ಪಾಲಿನ ಹಣ ಸಹ ಪಡೆದರು. 212 00:19:17,031 --> 00:19:18,700 ಫಿನ್ಸೆನ್ ಟೇಬಲ್ ಬಿಡಿಸಿದೆ. 213 00:19:18,783 --> 00:19:21,411 ಗ್ಲೋಬಲ್ ಸಿಸ್ಟಮ್ಸ್ ಪ್ಲಸ್, ಜೆರಾಲ್ಡ್ ಪಿಲ್ಲರ್. 214 00:19:21,494 --> 00:19:24,122 ಎಸ್ಎಕ್ಸ್ಎ ಕನ್ಸಲ್ಟಿಂಗ್, ಲಿಯೊನಾರ್ಡ್ ಹೋವಾರ್ಡ್. 215 00:19:24,914 --> 00:19:26,958 ಅಲ್ಲಿರುವವನು ಬಿಲ್ ಕಾಕ್ಸ್. 216 00:19:27,041 --> 00:19:30,712 ಸೌಲ್ ಆಗ್ನನ್ ಮತ್ತು ಮಾರ್ಕಸ್ ಬೋಯ್ಕಿನ್ಗೆ ಬೇರೆ ಕಂಪನಿಗಳಿವೆ. 217 00:19:30,795 --> 00:19:33,423 ಜೊತೆಗೆ ಇನ್ನೊಂದು, ಒಬೆರಾನ್ ಅನಲಿಟಿಕ್ಸ್. 218 00:19:33,506 --> 00:19:35,425 -ಅದು ಯಾರು? -ಗೊತ್ತಿಲ್ಲ. 219 00:19:36,175 --> 00:19:38,761 ಬಹುಶಃ ವಾರ್ಕಾಮ್ ಕಮ್ಯಾಂಡ್ ಅವರಿಗೆ ಗೊತ್ತಿರಬಹುದು. 220 00:19:39,387 --> 00:19:40,930 ಎನ್ಸಿಐಎಸ್ಗೆ ವರ್ಗಾಯಿಸಬೇಕು-- 221 00:19:41,014 --> 00:19:43,975 ಎನ್ಸಿಐಎಸ್ ಏಜೆಂಟ್ ಜೋಶ್, ಹಾರ್ನ್ಗೆ ಕೆಲಸ ಮಾಡ್ತಿದ್ದ. 222 00:19:44,058 --> 00:19:47,103 ನಮ್ಮ ಬೇಸಿನ ಸಂಪರ್ಕದ ಮೂಲಕ ನಾವು ನೇರವಾಗಿ ಹೋಗಬೇಕಾಗಿದೆ. 223 00:19:47,186 --> 00:19:49,898 ಇವರು ಉನ್ನತ ಅಧಿಕಾರಿಗಳು. ಒಂದು ಪ್ರಕ್ರಿಯೆ ಇದೆ. 224 00:19:49,981 --> 00:19:51,733 ಜೇಮ್ಸ್ ರೀಸ್ ಇಲ್ಲಿದ್ದಾನೆ. 225 00:19:52,483 --> 00:19:55,528 ಈಗ ಕೊರೊನಾಡೋನಲ್ಲಿದ್ದಾನೆ. ಅವನ ಪಟ್ಟಿಯನ್ನು ಹೊಂದಿದ್ದೇವೆ. 226 00:20:00,909 --> 00:20:02,035 ಒಪ್ಪಿಗೆಯಾ? 227 00:20:03,578 --> 00:20:06,497 ಡೆಪ್, ನೀನು ರೀಸ್ ಮನೆಗೆ ಹೋಗು. ಅನುಮಾನ ಬಂದರೆ ತಿಳಿಸು. 228 00:20:06,581 --> 00:20:08,416 -ಏನಾಯ್ತು? -ನೀನು ಹೋವಾರ್ಡ್ ಹಿಂದೆ. 229 00:20:08,499 --> 00:20:12,295 ಬರನೆಕ್ನ ಯಾರಾದ್ರೂ ನೋಡ್ಕೊಳಿ. ಮ್ಯಾಕ್, ನಿನಗೆ ಕಾಕ್ಸ್. ಪೊಲೀಸರಿಗೆ ಹೇಳು. 230 00:20:12,378 --> 00:20:14,088 ನಿಮಗೆ ಮಾಹಿತಿ ಕೊಟ್ಟಿದ್ದು ನಾನು. 231 00:20:14,172 --> 00:20:17,634 ಕುಳಿತುಕೊ! ಅದೃಷ್ಟ ಇದ್ದರೆ ಇದು ಹೇಗೆ ಕೊನೆಯಾಗುತ್ತೋ ನೋಡ್ತೀಯ. 232 00:20:23,222 --> 00:20:25,183 ಏನು ಮಾಡಿದ್ದೀರಿ ಎಂದು ಹೇಳುತ್ತೀರಾ? 233 00:20:25,266 --> 00:20:27,477 ನಾನು ಏನನ್ನೂ ಮಾಡಲಿಲ್ಲ, ಪ್ರತಿಯಾಗಿ. 234 00:20:27,560 --> 00:20:29,020 ಯಾಕೆ ಓಡುತ್ತಿದ್ದೀರಿ? 235 00:20:30,146 --> 00:20:33,107 ಅಡ್ಮಿರಲ್ ಯಾವುದರಲ್ಲೋ ತೊಡಗಿಸಿಕೊಂಡಿದ್ದಾರೆ. ಏನೋ... 236 00:20:33,775 --> 00:20:37,278 ಏನೋ ಕೆಟ್ಟದ್ದು. ಅದನ್ನ ಮುಚ್ಚಿಹಾಕೋಕೆ ನನಗೆ ಹೇಳಿದರು. ನಾನು-- 237 00:20:39,280 --> 00:20:43,534 ನೋಡು, ಆಗ ನನಗೂ ಬೇಜಾರಾಯ್ತು, ಜೆರಾಲ್ಡ್ ನನಗೆ ಒಳ್ಳೆಯವರಾಗಿದ್ದರು. ನಮಗೆ. 238 00:20:44,786 --> 00:20:47,413 ನಮ್ಮನ್ನ ಬೆಂಬಲಿಸಿ, ನನಗೆ ಪ್ರಮೋಷನ್ ಕೊಡಿಸಿದರು-- 239 00:20:47,497 --> 00:20:48,665 ಅವರಿಗೆ ತಿಳಿದಿದೆಯೇ? 240 00:20:48,748 --> 00:20:52,627 ಅದರ ಬಗ್ಗೆ ಅಲ್ಲ, ಆನ್. ಇದು ಮುಂದೆ ಒಳ್ಳೇದಾಗುತ್ತೆ, ಈಗಲ್ಲ.. 241 00:20:53,211 --> 00:20:54,796 -ಕೀಸಲ್ಲಾ? -ಅಪ್ಪ! 242 00:20:54,879 --> 00:20:57,006 ನಾನು ಬರುತ್ತೇನೆ ಎಂದು ಡ್ರೈವರ್ಗೆ ಹೇಳು. 243 00:20:59,509 --> 00:21:00,885 ದಯವಿಟ್ಟು, ಆನ್, ಪ್ಲೀಸ್-- 244 00:21:00,969 --> 00:21:03,221 ಅಪ್ಪಾ, ಟ್ಯಾಕ್ಸಿ ಅಲ್ಲ. ಎಫ್ಬಿಐ. 245 00:21:08,101 --> 00:21:11,145 ಪರವಾಗಿಲ್ಲ. ನಾನು ಅದನ್ನು ನಿಭಾಯಿಸುತ್ತೇನೆ. 246 00:21:11,229 --> 00:21:13,106 ಕ್ಷಮಿಸಿ. ನಾನು ಬರುತ್ತಿದ್ದೇನೆ. 247 00:21:17,735 --> 00:21:21,447 ಕೆಲವು ವಸ್ತುಗಳನ್ನ ಜೋಡಿಸ್ತಿದ್ದೀವಿ. ಏನಾಗಬೇಕಿತ್ತು, ಏಜೆಂಟ್? 248 00:21:25,243 --> 00:21:26,995 ಎಲ್ಲಿಗೆ, ಕ್ಯಾಪ್ಟನ್? 249 00:21:41,759 --> 00:21:45,680 ಕೊರೊನಾಡೋ ಸೇವಾ ರಸ್ತೆಗಳಲ್ಲಿ ಕಾಲು ಮೈಲಿವರೆಗೆ ಮಿಲಿಟರಿ ಬೆಂಗಾವಲಾ? 250 00:21:45,763 --> 00:21:49,934 ಏನಂದ್ರೆ, ಸರ್, ನೀವು ಬೇಸ್ ಒಳಗೆ ಬಂದಿದ್ದೇ, ಕೊರೊನಾಡೋ ಬಿಟ್ಟಿರಿ. 251 00:22:09,954 --> 00:22:11,706 ಎಂಥಾ ದಿನವಪ್ಪಾ ಇದು. 252 00:22:11,789 --> 00:22:13,458 ಒಬ್ಬ ಹುಚ್ಚ ಸೀಲ್ ತಪ್ಪಿಸಿಕೊಂಡ, 253 00:22:13,541 --> 00:22:17,795 ಆದರೆ ಅವನಿಲ್ಲದಿರೋ ಬಾಗಿಲನ್ನೇ ಎಫ್ಬಿಐ ಬಡಿಯುತ್ತಿದೆ. 254 00:22:17,879 --> 00:22:19,839 ನಾವು ವಾರಂಟ್ ಇರೋ ಫೆಡರಲ್ ಏಜೆಂಟ್ಸ್-- 255 00:22:19,922 --> 00:22:21,382 ಅದನ್ನು ತೆಗೆಯಿರಿ. 256 00:22:21,466 --> 00:22:25,928 ಯಾವುದೋ ಪೇಪರ್ ಮೇಲೆ ರಬ್ಬರ್ ಸ್ಟ್ಯಾಂಪ್ ಮಾಡ್ಕೊಂಡು ತಂದರೆ ನಾನು ಭಯಪಡಬೇಕಾ? 257 00:22:26,012 --> 00:22:29,057 ನಾನು ಹೇಳದೇ ನನ್ನ ಕಛೇರಿಗೆ ಯಾರೂ ಬರಲ್ಲ. 258 00:22:32,477 --> 00:22:35,897 ಆದರೆ ಪರವಾಗಿಲ್ಲ, ಏಜೆಂಟ್. ಏಕೆಂದರೆ ಮರೆಮಾಡಲು ನನಗೆ ಏನೂ ಇಲ್ಲ. 259 00:22:38,191 --> 00:22:41,319 ಅವರನ್ನು ಒಳಗೆ ಬಿಡಿ. ಅವರು ಫೆಡರಲ್ ಏಜೆಂಟರಲ್ವಾ? 260 00:22:42,737 --> 00:22:43,905 ಹೋಗಿ. ಹೋಗಿ. 261 00:22:50,078 --> 00:22:51,621 ಏನು ಬೇಕೋ ತಗೊಳ್ಳಿ, ಏಜೆಂಟ್. 262 00:22:52,830 --> 00:22:54,207 ಯಾಕೆ ಬಂದಿದ್ದೀರಾ ಗೊತ್ತು. 263 00:22:54,791 --> 00:22:58,669 ನಿಮ್ಮ ಯಾವುದೇ ಪ್ರಶ್ನೆಗಳಿಗೆ ಉತ್ತರ ಸಿಗಬಹುದಂತ ಅಂದ್ಕೋತೀನಿ. 264 00:23:00,880 --> 00:23:05,009 ನೀವು ತಪ್ಪು ಹೆಜ್ಜೆ ಇಟ್ಟಿದ್ದೀರಿ ಅಂತ ಗೊತ್ತಾದಾಗ 265 00:23:05,718 --> 00:23:09,055 ನಿಮ್ಮನ್ನ ಕಳಿಸಿದ ಆ ನಾಯಿಗೆ ಹಾಳಾಗಿ ಹೋಗಕ್ಕೆ ಹೇಳಿ. 266 00:23:19,357 --> 00:23:20,441 ಏನಾಗ್ತಿದೆ, ಮ್ಯಾಕ್? 267 00:23:20,942 --> 00:23:22,276 ಹೊವಾರ್ಡ್ಸ್ ಕಾಣ್ತಿಲ್ಲ. 268 00:23:22,360 --> 00:23:25,905 ಬ್ಯಾಗ್ ಪ್ಯಾಕ್ ಆಗಿದೆ, ಮಯಾಮಿಗೆ ಟಿಕೆಟ್, ಫ್ಲೈಟ್ ಮಿಸ್ ಮಾಡಿದ್ದಾರೆ. 269 00:23:25,988 --> 00:23:29,075 ಕಾಕ್ಸ್ ಕಾಣ್ತಿಲ್ಲ. ವೇಗವಾಗಿ ಟ್ರ್ಯಾಕ್ ಮಾಡುತ್ತಿದ್ದೇವೆ. 270 00:23:46,592 --> 00:23:48,636 ಆರಾಮಾಗಿದ್ದೀಯಾ, ಬಿಲ್? 271 00:24:01,399 --> 00:24:03,359 ಜೇಮ್ಸ್ ರೀಸ್ ಇನ್ನೂ ಪತ್ತೆಯಾಗಿಲ್ಲ 272 00:24:07,780 --> 00:24:11,742 ಹೇ. ಅದು ನಿನ್ನ ತಪ್ಪಲ್ಲ. ಯಾರೂ ಅದನ್ನ ಊಹಿಸಿಲ್ಲ. 273 00:24:24,130 --> 00:24:25,089 ಚಿಲ್ಲರೆ ಇಟ್ಕೋ. 274 00:24:55,661 --> 00:24:57,455 ಸರಿ, ಇದು ಹೇಗೆ ಆಗುತ್ತದೆ? 275 00:26:23,291 --> 00:26:25,001 ಓಲ್ಡ್ ಮಿಸೆರಿ ನೆನಪಿದೆಯಾ? 276 00:26:25,084 --> 00:26:26,043 ಹಾಂ? 277 00:26:26,127 --> 00:26:29,839 ಅದರಂತೆಯೇ ಒಂದು ಕಂಡುಕೊಂಡೆ, 400 ಪೌಂಡ್ಗಳ "ಸಾಯಿ, ಮಗನೇ" ಅಂತ. 278 00:26:29,922 --> 00:26:35,177 ಇದನ್ನ ಗೇಟರ್ ಬೀಚಲ್ಲಿ ಎಳೆಯುತ್ತಿದ್ದೆವು, ಸೋಲುವವರು ಅಂತ ಕರೆಸಿಕೊಂಡು. ನೆನಪಿದೆ. 279 00:26:36,095 --> 00:26:38,264 -ತೋಳು ಮುರಿದಿದೆ. -ಹೌದಾ? 280 00:26:39,682 --> 00:26:41,058 ನೋಯುತ್ತಿದೆಯೇನೋ? 281 00:26:42,977 --> 00:26:44,478 ನಿನಗೆ ಏನು ಬೇಕು, ರೀಸ್? 282 00:26:46,439 --> 00:26:47,815 ಯಾರ್ಯಾರಿಗೆ ಗೊತ್ತು ಹೇಳು. 283 00:26:56,991 --> 00:26:58,576 ಪಿಲ್ಲರ್ ಚಾಲನೆ ನೀಡಿದರು. 284 00:27:00,077 --> 00:27:03,539 ಇದನ್ನ ನಿಭಾಯಿಸೋಕೆ ಹೋವಾರ್ಡ್ ಎಲ್ಲಾ ವಿವರಗಳನ್ನು ಖಚಿತಪಡಿಸಿಕೊಂಡರು. 285 00:27:03,622 --> 00:27:05,750 ಸಾಗಾಣಿಕೆ? ವೈದ್ಯ ಸಿಬ್ಬಂದಿ? 286 00:27:06,876 --> 00:27:09,211 ಜನರು ಕೇವಲ ಆದೇಶಗಳನ್ನು ಅನುಸರಿಸುತ್ತಿದ್ದರು. 287 00:27:10,421 --> 00:27:13,049 ಬಿ-12 ಮದ್ದು ಕೊಡುತ್ತಿದ್ದಾರೆ ಅಂದುಕೊಂಡಿದ್ರು. 288 00:27:13,674 --> 00:27:16,677 ಪ್ರಯೋಗದ ಬಗ್ಗೆ ನಮಗಷ್ಟೇ ಗೊತ್ತಿತ್ತು. 289 00:27:19,972 --> 00:27:23,392 ನಾವು ನಿವೃತ್ತರಾದಾಗ ಅವರು ಏನು ನೀಡುತ್ತಾರೆಂದು ನಿನಗೆ ತಿಳಿದಿದೆ. 290 00:27:25,227 --> 00:27:26,729 ನಿಮ್ಮ ಜೀವನ ಕೊಡುತ್ತೀರಿ, 291 00:27:28,314 --> 00:27:30,441 ಪಿಂಚಣಿ ಮತ್ತು ಪ್ಯಾಡಲ್ ಪಡೆಯುತ್ತೀರಿ. 292 00:27:31,567 --> 00:27:33,819 "ನಿಮ್ಮ ಸೇವೆಗೆ ಧನ್ಯವಾದಗಳು." 293 00:27:39,325 --> 00:27:41,285 ನೀನು ಸಹೋದರತ್ವದ ಭಾಗವಾಗಿದ್ದೆ. 294 00:27:41,827 --> 00:27:43,579 ಅದೇ ನಿನಗೆ ಸಿಕ್ಕಿದ್ದು. 295 00:27:45,539 --> 00:27:47,666 ನಮ್ಮ ಸಹೋದರರನ್ನು ಸಾಯಲು ವಿದೇಶಿ ಭೂಮಿಯ 296 00:27:48,417 --> 00:27:53,130 ಹೇಲು ತುಂಬಿದ ದರಿದ್ರ ಸುರಂಗಗಳಲ್ಲಿ ಕಳುಹಿಸಿದ್ದೀರಿ. 297 00:27:55,591 --> 00:27:58,427 ಹೇಳಿ, ಅದು ಏನು? ನೀವೇ ಅದನ್ನು ಮಾಡಲು ಸಾಧ್ಯವಿಲ್ಲವೇ? 298 00:28:02,640 --> 00:28:03,641 ಹೇ. 299 00:28:04,642 --> 00:28:07,520 ಬಡ್ಸ್ನಲ್ಲಿ ನಾವೇ ತೂಕ ಹೊರಬೇಕಾಗಿರಲಿಲ್ಲ. 300 00:28:07,603 --> 00:28:10,606 ನಮ್ಮ ಎಡಕ್ಕೆ, ಬಲಕ್ಕೆ ಯಾವಾಗಲೂ ಗೆಳೆಯರಿದ್ದರು. 301 00:28:11,899 --> 00:28:14,402 ತಂಡದ ಅಗತ್ಯವಿದ್ದಾಗ ಅವರನ್ನ ಕರೆಸಿಕೊಳ್ತೀವಿ. 302 00:28:16,612 --> 00:28:18,114 ನಿಮ್ಮ ತಂಡ ಎಲ್ಲಿದೆ, ಬಿಲ್? 303 00:28:25,329 --> 00:28:26,622 ತೂಕ ನಿಮ್ಮ ಹತ್ತಿರ ಇದೆ. 304 00:29:36,609 --> 00:29:39,028 ದೇವರೇ, ರೀಸ್. ನೀನು ಏನು ಮಾಡಿದೆ? 305 00:29:39,862 --> 00:29:41,739 -ಸರಿ, ಕ್ಯಾಪ್ಟನ್. -ದಯವಿಟ್ಟು. 306 00:29:43,824 --> 00:29:45,409 ನನಗಾ ಉಪಕಾರ ಮಾಡೋಕೆ ರೆಡಿನಾ? 307 00:29:45,493 --> 00:29:48,037 ದಯವಿಟ್ಟು. ಈಗಷ್ಟೇ ಕಾಗದ ಚಲಾಯಿಸಿದೆ, ರೀಸ್. 308 00:29:50,122 --> 00:29:53,000 ನಿನಗೆ ನಾನು ಗೊತ್ತು. ಜೇಮ್ಸ್, ನಿನಗೆ ಗೊತ್ತು. ನಾ-- 309 00:29:53,876 --> 00:29:57,129 ನಾನು ರೆಡ್ ಟೇಪ್ ನಿರ್ವಹಿಸುತ್ತೇನೆ. ದಯವಿಟ್ಟು, ರೀಸ್. 310 00:29:58,672 --> 00:29:59,673 ಜೇಮ್ಸ್. 311 00:30:00,508 --> 00:30:01,550 ನನಗೆ ಕುಟುಂಬವಿದೆ. 312 00:30:02,676 --> 00:30:03,719 ನನಗೂ ಇತ್ತು. 313 00:30:05,221 --> 00:30:06,472 ರಾಮಿರೆಜ್ಗೂ ಇತ್ತು. 314 00:30:07,348 --> 00:30:09,558 -ಕಾರ್ಟೀಸ್ ಕುಟುಂಬವನ್ನು ಹೊಂದಿದ್ದ. -ಇಲ್ಲ. 315 00:30:09,642 --> 00:30:14,897 ನಿನ್ ಗಂಡ ನನ್ನ ತುಕಡಿಗೆ ಮಾಡಿದ ಕೆಲಸದಿಂದ ಡಾನಿ ಮಿಚೆಲ್ಗೆ ಅವನ ಮಗು ನೋಡೋ ಯೋಗ ಇಲ್ಲ. 316 00:30:14,980 --> 00:30:17,900 ಆ ನೆಪ ಹೇಳೋ ಕಾಲ ಮಿಂಚಿಹೋಗಿದೆ, ಕ್ಯಾಪ್ಟನ್ ಹೋವಾರ್ಡ್. 317 00:30:17,983 --> 00:30:21,904 ಈಗ, ನಾನು ನಿನಗೆ ಹೇಳಿದ್ದ ಕೆಲಸ ಮಾಡ್ತೀಯಾ? 318 00:30:24,198 --> 00:30:25,783 ಅದು ಆಗಲ್ಲ, ರೀಸ್. ನಾ-- 319 00:30:29,745 --> 00:30:30,579 ಸರಿ. 320 00:30:31,163 --> 00:30:32,748 -ಕ್ಷಮಿಸು. -ಅರ್ಥವಾಯ್ತು. 321 00:30:33,958 --> 00:30:34,959 ಧನ್ಯವಾದಗಳು. 322 00:30:35,668 --> 00:30:39,213 ನನ್ನ ಮಗುವಿನ ಸಾವಿಗೆ ಸಹಾಯ ಮಾಡಿದ್ದೀರಿ, ಈಗ ನಿಮ್ಮದಕ್ಕೆ ಮಾಡ್ತೀನಿ. 323 00:30:39,296 --> 00:30:40,923 ಇಲ್ಲ ರೀಸ್. ದೇವರೇ, ಬೇಡ ರೀಸ್. 324 00:30:41,006 --> 00:30:42,633 -ಏನ್ಮಾಡ್ತಿದ್ಯಾ? -ಇಲ್ಲ! ಬೇಡ! 325 00:30:42,716 --> 00:30:45,344 -ಅವನನ್ನು ಹಿಡಿದುಕೋ! ಬೇಡ, ರೀಸ್! -ಬೇಡ! 326 00:30:45,427 --> 00:30:47,596 -ನಿಲ್ಲಿಸು, ದೇವರೇ! -ಬೇಡ! 327 00:30:48,264 --> 00:30:49,265 ದಯವಿಟ್ಟು. 328 00:30:53,227 --> 00:30:55,104 ದಯವಿಟ್ಟು. ದಯವಿಟ್ಟು ನಿಲ್ಲಿಸಿ. 329 00:30:55,646 --> 00:30:56,814 -ರೀಸ್. -ಎದ್ದೇಳು. 330 00:30:57,314 --> 00:30:58,983 ಬಾ, ಎದ್ದೇಳು. 331 00:30:59,066 --> 00:31:01,485 ನನ್ನ ಮಾತು ಕೇಳು, ದಯವಿಟ್ಟು ಮಾತು ಕೇಳು. ಸರಿ. 332 00:31:02,778 --> 00:31:04,321 ನಿನಗೆ ಒಂದು ಅವಕಾಶವಿದೆ. 333 00:31:04,405 --> 00:31:06,824 ಈಗಲೇ, ನಿನಗೊಂದು ಅವಕಾಶ ನೀಡುತ್ತಿದ್ದೇನೆ. 334 00:31:06,907 --> 00:31:08,909 ಜೀವನದಲ್ಲಿ ಒಂದು ಸಲ ಒಳ್ಳೆಯದು ಮಾಡೋಕೆ. 335 00:31:10,035 --> 00:31:14,164 ನಿನ್ನ ಹೆಂಡತಿ ಮತ್ತು ಮಗ ಪೆಸಿಫಿಕ್ನಲ್ಲಿ ಮುಳುಗದಂತೆ ರಕ್ಷಿಸು. ಮಾಡಬಹುದು. ಆಯ್ತಾ? 336 00:31:14,248 --> 00:31:15,249 ಸರಿ. 337 00:31:15,332 --> 00:31:16,584 ನೀನು ಇದನ್ನು ಮಾಡಬಹುದು. 338 00:31:22,798 --> 00:31:23,882 ಮಾಡ್ತೀಯಾ? 339 00:31:28,554 --> 00:31:31,098 ಹೌದು. ನಾನು ಮಾಡುತ್ತೇನೆ. 340 00:31:31,181 --> 00:31:32,391 ಒಳ್ಳೆಯ ವ್ಯಕ್ತಿ. 341 00:31:33,183 --> 00:31:34,226 ದೇವರೇ, ಕಾಪಾಡು. 342 00:31:39,273 --> 00:31:40,608 ಹೋವಾರ್ಡ್ನ ಶುದ್ಧಗೊಳಿಸು. 343 00:31:42,568 --> 00:31:44,528 ಮುಗಿಯುವವರೆಗೆ ಇವರನ್ನ ಹೋಗಲು ಬಿಡಬೇಡ. 344 00:31:45,946 --> 00:31:48,073 ಇರು, ನೀನೆಲ್ಲಿ ಹೋಗ್ತಿದ್ದೀಯ? 345 00:31:49,074 --> 00:31:50,075 ಮನೆಗೆ. 346 00:31:51,243 --> 00:31:52,745 "ಮನೆಗೆ" ಎಂದರೆ? 347 00:31:54,830 --> 00:31:55,998 ಅವರನ್ನ ನೋಡಬೇಕು. 348 00:32:36,664 --> 00:32:38,082 ನಿನಗೆ ಏನು ಬೇಕು, ರೀಸ್? 349 00:32:43,462 --> 00:32:47,216 ನಿನಗೆ ನೋವಾಗಬೇಕೆಂದು ನನ್ನ ಉದ್ದೇಶವಲ್ಲ. ಅದು ಉದ್ದೇಶವಾಗಿರಲಿಲ್ಲ. 350 00:32:49,426 --> 00:32:53,055 ನಿನಗೇನಾದ್ರೂ ಬೇಕಾದ್ರೆ ಮಾತ್ರ ಮಾಡ್ತೀಯ ಅನ್ನೋ ಭಾವನೆ ನನಗೆ ಬರ್ತಿಲ್ಲ. 351 00:32:54,932 --> 00:32:58,060 ಯುದ್ಧದ ಕೆಲವು ಸಂಗತಿಗಳು ಅಷ್ಟೇನೂ ಒಳ್ಳೆಯವಲ್ಲ. 352 00:32:58,727 --> 00:33:02,690 ಹೌದು, ಆದರೆ ನೀನು ಯುದ್ಧದಲ್ಲಿಲ್ಲ. ಮನೆಯಲ್ಲಿದ್ದೀಯ. ಅದಕ್ಕೆ ವ್ಯತ್ಯಾಸವಿದೆ. 353 00:33:04,024 --> 00:33:05,025 ಇನ್ನು ಮುಂದೆ ಇಲ್ಲ. 354 00:33:39,309 --> 00:33:42,521 ಧನ್ಯವಾದಗಳು, ಲೆಫ್ಟಿನೆಂಟ್, ಏನಾದರೂ ಇದ್ದರೆ ತಿಳಿಸುತ್ತೇವೆ. 355 00:33:43,313 --> 00:33:47,276 ಕೊರೊನಾಡೋ ಪಿಡಿ ಎಸ್ಡಿ ಜೊತೆ ಹೆಚ್ಚಿನ ಘಟಕ ಪಡೆಯಲು ಯತ್ನಿಸ್ತಿದ್ದಾರೆ. 356 00:33:48,110 --> 00:33:49,528 ಅಡ್ಮಿರಲ್ ಬಗ್ಗೆ ಏನಾದರೂ? 357 00:33:49,611 --> 00:33:54,158 ಶಿಪ್ಪಿಂಗ್ ಲಾಗ್ಸ್, ಪರೀಕ್ಷಾ ಫಲಿತಾಂಶಗಳು ನಾರ್ಮಲ್ ಇವೆ. ಕಾಪಿಗಳನ್ನ ಕೂಡ ಮಾಡಿದ್ದ. 358 00:33:55,033 --> 00:33:59,705 ಸೀಲ್ಗಳ ಮೇಲೆ ಔಷಧಿ ರಹಸ್ಯ ಪರೀಕ್ಷೆ ಮಾಡಿದರ ಸಾಕ್ಷಿಯನ್ನ ಪಿಲ್ಲರ್ ಯಾಕೆ ಹಸ್ತಾಂತರಿಸುತ್ತಾನೆ? 359 00:34:02,833 --> 00:34:04,084 ಇದೇನು ದರಿದ್ರ ಇದು? 360 00:34:10,257 --> 00:34:11,717 ಸ್ವಲ್ಪ ಮಾತಾಡಬೇಕು. 361 00:34:13,177 --> 00:34:14,887 ಟೋನಿ. ಒಂದು ಮಾತು? 362 00:34:16,472 --> 00:34:18,432 -ಕುಳಿತುಕೋ. -ಪರವಾಗಿಲ್ಲ. 363 00:34:19,391 --> 00:34:21,727 ನೀವು ಯಾರು, ಹೇಗೆ ನನ್ನ ಜೀವನ ಹಾಳು ಮಾಡ್ತೀರಾ? 364 00:34:22,770 --> 00:34:24,188 ಬಿಜಾನ್ ಆಜಾದ್, ಡಿಸಿಐಎಸ್. 365 00:34:26,899 --> 00:34:28,025 ಒಂದು ಕ್ಷಣ ನಿಲ್ಲಿ. 366 00:34:33,447 --> 00:34:34,990 ನಿನ್ನ ಕೆಲಸ ನಿಲ್ಲಿಸಬೇಕಿದೆ. 367 00:34:35,657 --> 00:34:36,575 ಅಂದ್ರೆ? 368 00:34:36,658 --> 00:34:39,203 ನಿಮ್ಮ ತಂಡವನ್ನ ಆಯಾ ಇಲಾಖೆಗೆ ಒಪ್ಪಿಸಿದ್ದೀವಿ. 369 00:34:39,286 --> 00:34:43,415 ಪೆಂಟಗಾನಲ್ಲಾದ ದುಷ್ಕೃತ್ಯವನ್ನ ಎಫ್ಬಿಐ ತನಿಖೆ ಮಾಡ್ತಾರೆ, ಬದಲಾಗಿ ಇವರಲ್ಲ. 370 00:34:43,499 --> 00:34:44,541 ಅದು ಸರಿ. 371 00:34:44,625 --> 00:34:48,003 ಏಜೆಂಟ್, ಈ ಕೇಸಿಂದ ನಿಮ್ಮನ್ನ ಹೊರಗೆಳೆಯೋಕೆ ನನಗಿಷ್ಟ ಇಲ್ಲ. 372 00:34:48,086 --> 00:34:50,380 ನಾನು ಕೇಳಿದ ಹಾಗೆ, ಒಳ್ಳೆ ಕೆಲಸ ಮಾಡ್ತೀರ. 373 00:34:50,881 --> 00:34:52,466 -ಮಿತಿಮೀರಿದ್ದೀರ. -ಮಿತಿ? 374 00:34:52,549 --> 00:34:55,636 ಈ ಅಡ್ಮಿರಲ್ ತನ್ನ ಸ್ವಂತ ಜನರ ಮೇಲೆ ಅಕ್ರಮ ಪ್ರಯೋಗ ನಡೆಸಿದರು. 375 00:34:55,719 --> 00:34:57,846 ಅಕ್ರಮವಾಗಿರಲಿಲ್ಲ. ತಾಂತ್ರಿಕವಾಗಿ ಅಲ್ಲ. 376 00:34:57,930 --> 00:34:59,515 ಇದರ ಬಗ್ಗೆ ಮಾತಾಡುತ್ತಿದ್ದೀರ. 377 00:35:00,265 --> 00:35:04,186 ಪಿಲ್ಲರಿಗೆ ಪ್ರಯೋಗವನ್ನು ಅಧಿಕೃತಗೊಳಿಸೋಕೆ ತುರ್ತುಪರಿಸ್ಥಿತಿಯ ಅಧಿಕಾರವಿತ್ತು. 378 00:35:07,272 --> 00:35:11,318 ಪ್ರಯೋಗ ಅಪರಾಧವಾಗಿರಲಿಲ್ಲ. ಆದರೆ ಮುಚ್ಚಿಡಲಾಗಿದೆ ಎಂದು ನಾವು ನಂಬುತ್ತೇವೆ. 379 00:35:13,320 --> 00:35:15,030 ನಿಮಗೆ ಕಛೇರಿ ಬಿಡುತ್ತೇನೆ. 380 00:35:23,539 --> 00:35:27,584 ಪಿಲ್ಲರ್ ಮತ್ತು ಅವರ ಅಧಿಕಾರಿಗಳ ಬಗ್ಗೆ ಗೊತ್ತಿರೋದೆಲ್ಲಾ ಡಿಸಿಐಎಸ್ಗೆ ಹೇಳಿಬಿಡು. 381 00:35:29,837 --> 00:35:31,463 ಆಮೇಲೆ ರಜೆ ಮೇಲೆ ಹೋಗು. 382 00:35:33,173 --> 00:35:34,675 ರೀಸ್ ಇನ್ನೂ ಹೊರಗಿದ್ದಾನೆ. 383 00:35:35,801 --> 00:35:36,927 ಒಂದು ಸಣ್ಣ ರಜೆ. 384 00:35:37,678 --> 00:35:40,222 ನಿನಗೆ ಇದರಿಂದ ಕಷ್ಟ ಕೊಡೋಕೆ ಯಾರೂ ನೋಡ್ತಿಲ್ಲ. 385 00:35:40,848 --> 00:35:45,227 ವಾಷಿಂಗ್ಟನ್ ಎಲ್ಎಗೆ ಕರೆಮಾಡಿದ್ದಾರೆ. ಕೇಸ್ ವಹಿಸಿಕೊಳ್ಳೋಕೆ ಎಫ್ಟಿಎಫ್ ಕಳಿಸ್ತಿದ್ದಾರೆ. 386 00:35:47,813 --> 00:35:50,357 ಮೊದಲಿನಿಂದಲೂ ಕೇಸ್ ಅವರದಾಗಬೇಕಿತ್ತು. 387 00:36:05,372 --> 00:36:07,291 ನಿನಗೆ ಯಾಕೆ ಇದು ಇಷ್ಟು ಅವಶ್ಯಕ? 388 00:36:07,374 --> 00:36:08,834 -ಏನು? -ಈ ಕತೆ. 389 00:36:09,751 --> 00:36:14,006 ಇದರಿಂದ ಹೆಸರು ಗಳಿಸೋಕೆ ನೋಡ್ತಿದ್ದೀಯಾ, ಇಲ್ಲಾ ಇದರಿಂದ ಏನಾದರೂ ಆಗುತ್ತೆ ಅಂದ್ಕೊಂಡಾ? 390 00:36:14,089 --> 00:36:16,758 ನನ್ನ ಕೆಲಸದಲ್ಲಿ ಆಕಾಂಕ್ಷೆ ಮತ್ತು ನಂಬಿಕೆ ಇರಬಾರದಾ? 391 00:36:16,842 --> 00:36:18,135 ಆಯ್ಕೆ ಮಾಡೋಹಾಗಿದ್ದರೆ. 392 00:36:28,437 --> 00:36:33,025 ನನಗೆ ನಾಲ್ಕು ವರ್ಷವಿದ್ದಾಗ ನನ್ನಪ್ಪ ಸಿಸಿಪಿಯಿಂದ ದೂರವಾಗಿ ಕ್ಸಿಯೋಪಿಂಗ್ ಅಡಳಿತದ 393 00:36:33,609 --> 00:36:35,444 ವಿರುದ್ಧ ಹೋಗಲು ನಿರ್ಧರಿಸಿದರು. 394 00:36:36,278 --> 00:36:39,406 ಅದಕ್ಕೆ ನನ್ನ, ನನ್ನ ತಾಯಿ, ಅಣ್ಣನನ್ನ ಅಮೆರಿಕಕ್ಕೆ ಕಳಿಸಿದರು. 395 00:36:41,992 --> 00:36:43,368 ಅವರನ್ನು ಮತ್ತೆ ನೋಡಲಿಲ್ಲ. 396 00:36:45,579 --> 00:36:49,207 ನಾನು ಆರು ವರ್ಷದವಳಾಗಿದ್ದಾಗ ನನ್ನ ಮನೆ, 397 00:36:49,291 --> 00:36:51,877 ನನ್ನ ಭಾಷೆ ಮತ್ತು ಹೆಸರನ್ನು ಕಳೆದುಕೊಂಡೆ, 398 00:36:52,502 --> 00:36:55,172 ಎಲ್ಲಾ ನನ್ನ ತಂದೆ ನಿಲುವು ತೆಗೆದುಕೊಂಡಿದ್ದಕ್ಕೆ. 399 00:36:56,965 --> 00:37:00,510 ಆದ್ದರಿಂದ, ಹೌದು, ನನಗೂ ಸತ್ಯವೇ ಮುಖ್ಯ ಅನ್ನೋ ನಂಬಿಕೆ. 400 00:37:03,096 --> 00:37:05,641 ಅದರಲ್ಲೂ ಇದು ಡೇವಿಡ್ ವಿರುದ್ಧ ಗೋಲಿಯತ್ ಅಂತಾದಾಗ. 401 00:37:06,308 --> 00:37:09,353 ಮತ್ತು ರೀಸ್ ಯಾರು? ಡೇವಿಡ್ ಅಥವಾ ಗೋಲಿಯತ್? 402 00:37:15,651 --> 00:37:17,277 ಅದನ್ನೇ ಯೋಚಿಸ್ತಾ ಇದ್ದೀನಿ. 403 00:37:35,003 --> 00:37:36,672 ಇವತ್ತೊಂದು ತಮಾಷೆ ನಡೀತು. 404 00:37:39,383 --> 00:37:43,553 ಆರ್ಡಿ-4895ನ ಪೆಂಟಗಾನೇ ಅಧಿಕೃತಗೊಳಿಸಿತು ಅಂತ ಗೊತ್ತಾಯ್ತು. 405 00:37:44,930 --> 00:37:48,934 ವಿಚಿತ್ರ ಅಂದ್ರೆ ಫಿನ್ಸೆನ್ಗೂ ಅನಾವರಣ ಮಾಡಲಾಗದ ಒಬ್ಬ ಪಾಲುದಾರರಿದ್ದಾರೆ. 406 00:37:49,017 --> 00:37:51,061 ಹಾರ್ನ್ ಜೊತೆ ಕೆಲಸ ಮಾಡುವ ಮತ್ತೊಬ್ಬರು. 407 00:37:52,354 --> 00:37:53,355 ಪೆಂಟಗಾನ್? 408 00:37:57,109 --> 00:37:58,485 ಅದು ನಿಮ್ಮ ಗೋಲಿಯತ್. 409 00:38:02,739 --> 00:38:05,367 ಬರ್ತಿನಿ. ನನ್ನ ತಂಡವನ್ನ ಕೇಸ್ನಿಂದ ತೆಗೆದಿದ್ದಾರೆ. 410 00:38:06,034 --> 00:38:07,244 ಮತ್ತೆ ನಾನು? 411 00:38:11,081 --> 00:38:15,085 ನಿಮ್ಮ ಕಥೆಯನ್ನು ಮುಗಿಸಿ, ಮಿಸ್ ಬರನೆಕ್, ಸಾಧ್ಯವಾದಷ್ಟು ಬೇಗ ಅದನ್ನು ಪ್ರಕಟಿಸಿ. 412 00:38:36,106 --> 00:38:39,109 ಮನೆಗೆ ಹೋಗು. ಎಲ್ಏ ಬರೋವರೆಗೂ ನಾನು ಇಲ್ಲಿ ನೋಡಿಕೊಳ್ತೀನಿ. 413 00:38:52,289 --> 00:38:55,792 ಓಡಿನ್ಸ್ ಸ್ವೋರ್ಡ್ ಜೊತೆ ವ್ಯಾಪಿಸುವಂಥ ಪಾವತಿಗಳ ಸಾಕ್ಷಿ ಎಫ್ಬಿಐ, 414 00:38:55,876 --> 00:38:58,170 ಕಾರ್ಟ್, ಮತ್ತು ಫಿನ್ಸೆನ್ ಹತ್ತಿರ ಇದ್ದರೂ 415 00:38:58,253 --> 00:39:01,006 ಆರ್ಡಿ-4895 ಅಧಿಕೃತಗೊಳಿಸುವುದರಲ್ಲಿ ಲೊರೈನ್ ಹಾರ್ಟ್ಲೀ ಹೆಸರಿದೆ. 416 00:39:03,008 --> 00:39:05,635 $20 ಮಿಲಿಯನ್ ಮೌಲ್ಯದ 417 00:39:19,232 --> 00:39:21,068 -ಹಲೋ? -ಹೇ, ಜೋರ್ಡ್, ನಾನು. 418 00:39:22,694 --> 00:39:24,362 ನನ್ನ ಬಳಿ ರೀಸ್ ಕಥೆ ಇದೆ. 419 00:39:24,446 --> 00:39:28,742 ಹೌದು, ನಾನು ಕೇಳಿದೆ. ದ ಅಟ್ಲಾಂಟಿಕ್ಗಾ? ಇದನ್ನ ಇನ್ನೂ ಜಾಸ್ತಿ ಮಾಡೋಕಾ ಏನು? 420 00:39:28,825 --> 00:39:30,077 ಇಲ್ಲ, ಇದು ದೊಡ್ಡದು. 421 00:39:30,619 --> 00:39:34,414 ನನ್ನ ಹತ್ತಿರ ರಕ್ಷಣಾ ಕಾರ್ಯದರ್ಶಿ ಲೊರೈನ್ ಹಾರ್ಟ್ಲೀ ಸಹಿ ಮಾಡಿದ ಇಯುಏ ಇದೆ. 422 00:39:34,498 --> 00:39:38,752 ರೀಸ್ ಮತ್ತವನ ತಂಡಕ್ಕೆ ಗೆಡ್ಡೆ ಉಂಟುಮಾಡಿದಂಥ ಪ್ರಯೋಗಗಳನ್ನು ಆಕೆಯೇ ಆದೇಶಿಸಿದ್ದು. 423 00:39:38,835 --> 00:39:40,087 ದೇವರೇ. 424 00:39:40,170 --> 00:39:42,422 ಅದಕ್ಕಿಂತ ಹೆಚ್ಚಾಗಿ, ಸ್ಟೀವ್ ಹಾರ್ನೇ ತನ್ನ 425 00:39:42,506 --> 00:39:45,717 ಬಂಡವಾಳ ಕಾಪಾಡೋಕೆ ದುಡ್ಡು ಕೊಟ್ಟು ಈ ವಿಷಯ ಮುಚ್ಚಿಹಾಕಿಸಿದ್ದು. 426 00:39:45,801 --> 00:39:47,511 ಇರು, ಸೆಕ್ ಡೆಫ್ ಪಾಲು ಕೊಂಡರಾ? 427 00:39:47,594 --> 00:39:51,723 ಎಫ್ಬಿಐಯಿಂದಲೂ ಪತ್ತೆಮಾಡಲಾಗದ ಷೇರುದಾರರಿದ್ದಾರೆ. ಹಾರ್ಟ್ಲೀಯ ಒಳಗೊಳ್ಳುವಿಕೆಯಿಂದ 428 00:39:51,807 --> 00:39:54,559 ನಾನು ಮಾಡಿದ ಅದೇ ತೀರ್ಮಾನಕ್ಕೆ ಓದುಗರು ಬರುತ್ತಾರೆ. 429 00:39:54,643 --> 00:39:57,813 ಕನಿಷ್ಠ ಅವಳು ಮಾಡಿರೋದಕ್ಕೆ ಉತ್ತರಿಸಲು ಒತ್ತಾಯಿಸಕ್ಕಾದರೂ. 430 00:39:59,940 --> 00:40:04,027 ವೋಲ್ಟ್ ಸ್ಟ್ರೀಮ್ನ ಅನುಕೂಲ ತಕ್ಷಣದ ಪ್ರತಿಕ್ರಿಯೆ ಅಂತೀಯ. ಯಾವಾಗ ಪ್ರಕಟಿಸಬಹುದು? 431 00:40:04,861 --> 00:40:08,323 ಅದನ್ನು ಕಳುಹಿಸು. ಅದೆಲ್ಲ ಇದ್ದರೆ ಗಂಟೆಯೊಳಗೆ ಮಾಡಬಹುದು. 432 00:40:08,865 --> 00:40:09,866 ಸರಿ. 433 00:40:12,452 --> 00:40:14,412 ರಹಸ್ಯ ಪರೀಕ್ಷೆಗಳು ಮತ್ತು ಸ್ಟಾಕ್ ಪಾವತಿಗಳು: ಜೇಮ್ಸ್ ರೀಸ್ ವಿರುದ್ಧ ಲೊರೈನ್ ಹಾರ್ಟ್ಲೀಯ ಯುದ್ಧ 434 00:40:14,496 --> 00:40:15,497 ಕೇಟೀ ಬರನೆಕ್ ಅವರಿಂದ 435 00:40:17,499 --> 00:40:18,917 ಕಳುಹಿಸಿ 436 00:40:19,000 --> 00:40:20,669 ಕಳುಹಿಸಲಾಗುತ್ತಿದೆ... 437 00:40:20,752 --> 00:40:22,087 ಸಂದೇಶ ಕಳುಹಿಸಲಾಗಿದೆ. 438 00:40:51,867 --> 00:40:55,537 ಇದು ನಿನಗಿಷ್ಟ ಅಂತ ಗೊತ್ತು, ಆದರೆ ನಿನ್ನ ಹೊಸ ರಾತ್ರಿಯಂಗಿ ಸಿಕ್ಕಿತು. 439 00:40:55,620 --> 00:40:56,705 ಏನನ್ಸುತ್ತೆ? 440 00:40:58,081 --> 00:41:01,668 ಜೀವನದಲ್ಲಿ ಕನಿಷ್ಠ ಒಂದು ಉತ್ತಮ ನಿರ್ಧಾರ ಮಾಡಿದೆ ಎಂದು ಭಾವಿಸುತ್ತೇನೆ. 441 00:41:04,462 --> 00:41:05,797 ಪಕ್ಕಾನಾ? 442 00:41:06,840 --> 00:41:08,884 -75% ಇರಬಹುದು. -ತರಲೆ ಮಾಡಬೇಡ. 443 00:41:17,517 --> 00:41:18,685 ನಾನು ಗರ್ಭಿಣಿ. 444 00:41:22,397 --> 00:41:23,815 ಈಗ ಮುತ್ತು ಕೊಟ್ಟಿದ್ದಕ್ಕಾ? 445 00:41:24,399 --> 00:41:27,402 -ಗರ್ಭಿಣಿ ಅಂದ್ರೆ? -ನಾನು ಗರ್ಭಿಣಿ. 446 00:41:27,485 --> 00:41:29,529 ಆದ್ದರಿಂದ ನೀನು ಮನೆಗೆ ಬರಬೇಕು. 447 00:41:30,113 --> 00:41:30,989 ನಿಜವಾಗಲೂ? 448 00:41:31,072 --> 00:41:33,200 ಹಾಗೆ, 75, 80 ಪ್ರತಿಶತ ಖಚಿತ. 449 00:41:42,459 --> 00:41:43,460 ಐ ಮಿಸ್ ಯೂ. 450 00:41:53,637 --> 00:41:55,305 ನೀನು ಉತ್ತಮ ತಾಯಿಯಾಗುತ್ತೀಯ. 451 00:41:58,433 --> 00:42:00,977 ಹುಡುಗ ಆದರೆ ಮ್ಯಾಥ್ಯೂ ಅಂತ ಇಟ್ರೆ ಹೆಂಗೆ? 452 00:42:03,313 --> 00:42:04,356 ಮ್ಯಾಥ್ಯೂ? 453 00:42:06,191 --> 00:42:07,943 ನನಗೆ ಗನ್ನರ್ ಹೆಸರು ತುಂಬಾ ಇಷ್ಟ. 454 00:42:08,026 --> 00:42:09,027 ಗನ್ನರ್? 455 00:42:10,111 --> 00:42:11,655 -ಹುಡುಗಿಯ ಬಗ್ಗೆ ಏನು? -ಗೇಜ್. 456 00:42:12,405 --> 00:42:13,949 -ಹುಡುಗಿಗೆ ಗೇಜಾ? -ಗೇಜ್. 457 00:42:14,532 --> 00:42:15,575 ಲ್ಯೂಸಿ ಆದರೆ? 458 00:42:18,078 --> 00:42:19,412 ಇಷ್ಟ ಆಯ್ತು. ಲ್ಯೂಸಿ. 459 00:42:34,469 --> 00:42:35,470 ಜೇಮ್ಸ್. 460 00:42:41,476 --> 00:42:42,519 ಲಾರೆನ್? 461 00:42:52,904 --> 00:42:53,738 ಜೇಮ್ಸ್. 462 00:42:54,489 --> 00:42:58,201 ರಾತ್ರಿಯಿಡೀ ಕುಟುಂಬಗಳಿಗೆ ಕರೆ ಮಾಡಿದ್ದಾರೆ. ಏನಾಯ್ತು? 463 00:42:58,910 --> 00:42:59,911 ನನ್ ಜೊತೆ ಮಾತಾಡು. 464 00:43:00,578 --> 00:43:01,579 ಅಪ್ಪಾ. 465 00:43:05,292 --> 00:43:06,459 ಬನ್ನಿ. 466 00:43:07,919 --> 00:43:09,087 ಬಂದು ನೋಡ್ತೀರಾ? 467 00:43:09,754 --> 00:43:13,383 ನಿಂಗೊತ್ತಾ, ನಿಂಗೆ ಆಘಾತ ಆಗಿದೆ ಅಂತ ಮಾತ್ರ ನಂಗೆ ಅವ್ರು ಹೇಳಿದ್ರು. 468 00:43:13,466 --> 00:43:14,759 ನೀನು ಅಡಗಿರ್ಬೇಕಂತೆ. 469 00:43:14,843 --> 00:43:15,885 ಬನ್ನಿ. 470 00:43:20,515 --> 00:43:21,349 ಐ ಲವ್ ಯೂ. 471 00:43:21,433 --> 00:43:24,728 ಅವರನ್ನು ತನ್ನಿ! ವಾಪಸ್ ತನ್ನಿ! ಎಡಕ್ಕೆ! ಸಿಸಿಪಿ ಎಡಕ್ಕಿದೆ! 472 00:43:32,694 --> 00:43:33,862 ನಾನು ಬರುತ್ತಿದ್ದೇನೆ! 473 00:43:35,405 --> 00:43:36,406 ನಡೀರಿ! 474 00:43:39,034 --> 00:43:39,993 ಇಲ್ಲ, ಡಾನಿ! 475 00:43:43,038 --> 00:43:45,248 ಅಪ್ಪಾ. ಅಪ್ಪಾ. 476 00:43:46,416 --> 00:43:47,625 ಎಲ್ಲವೂ ಸರಿಯಾಗಿದೆಯಾ? 477 00:43:47,709 --> 00:43:50,837 ಹೇ! ಎಚ್ಚರವಾಗೋ! ಎದ್ದೇಳು! 478 00:43:56,051 --> 00:43:57,469 ಸಾಕು ಅಂತ ಹೇಳಿದ್ದೆ. 479 00:43:58,928 --> 00:44:01,723 ಮೂರು ಪ್ರವಾಸಗಳ ಹಿಂದೆ. ಮೂರು ಪ್ರವಾಸಗಳ ಹಿಂದೆ. 480 00:44:01,806 --> 00:44:05,060 -ಈ ಮಾತುಕತೆ ನನಗೆ ಬೇಡ. -ಲ್ಯೂಸಿಗೆ ಏನು ಹೇಳಲಿ? 481 00:44:05,143 --> 00:44:07,979 -ನಾನು ಏನು ಹೇಳಬೇಕಂತೀಯಾ? -ಅವಳಿಗೆ ಸತ್ಯವನ್ನು ಹೇಳು. 482 00:44:08,813 --> 00:44:11,691 ನಾನು ಅವಳು ಮತ್ತು ನಿನಗಾಗಿ ಹೋರಾಡುತ್ತಿದ್ದೇನೆ. 483 00:44:11,775 --> 00:44:13,568 ನಮಿಗ್ ಗೊತ್ತು ಅದು ಬೇಡ ಅಂತ. 484 00:44:13,651 --> 00:44:16,529 ನೀನು ಅಲ್ಲಿಗೆ ಹೋದಾಗ, ನಿನಗಾಗಿ ಹೋರಾಡುತ್ತಿರ್ತೀಯ. 485 00:44:20,325 --> 00:44:21,618 ಲಾರೆನ್, ವಾಪಸ್ ಬಾ. 486 00:44:24,496 --> 00:44:26,748 "ಇರಲು ಸಾಧ್ಯವೇ ಇರಲಿಲ್ಲ ಒಂದು ಸುಂದರ ನೋಟ, 487 00:44:27,499 --> 00:44:30,502 ಅದನ್ನು ನೋಡಲು ಯಾರೂ ಇರಲಿಲ್ಲ, ಚಿಕ್ಕ ಹುಡುಗನ ಹೊರತುಪಡಿಸಿ, 488 00:44:30,585 --> 00:44:32,670 ಕಿಟಕಿಯತ್ತ ನೋಡುತ್ತಿದ್ದವ. 489 00:44:33,296 --> 00:44:37,550 ಇತರ ಮಕ್ಕಳಿಗೆ ಅರಿವೇ ಇಲ್ಲದಷ್ಟು ಸಂಭ್ರಮಗಳನ್ನು ಅವನಾಗಲೇ ಕಂಡಿದ್ದ, 490 00:44:37,634 --> 00:44:40,845 ಆದರೆ ಅವನನ್ನು ಶಾಶ್ವತವಾಗಿ ನಿರ್ಬಂಧಿಸಬೇಕಾದ ಒಂದು ಸಂತೋಷದತ್ತ 491 00:44:40,929 --> 00:44:43,431 ಕಿಟಕಿಯಿಂದ ನೋಡುತ್ತಿದ್ದನು." 492 00:44:46,810 --> 00:44:49,104 ಅಧ್ಯಾಯ 17. "ವೆಂಡಿ ಬೆಳೆದಾಗ..." 493 00:44:50,730 --> 00:44:54,359 -ಅಪ್ಪಾ, ನಾನು ಗೆದ್ದೆ! ಸ್ಪೆಲ್ಲಿಂಗ್ ಬೀ ಗದ್ದೆ. -ಬೂಟು ತೆಗಿ, ಲ್ಯೂಸಿ. 494 00:44:54,442 --> 00:44:56,820 ನಾನು ಏನು ಹೇಳಿದೆ? ಅಭ್ಯಾಸದಿಂದ ಸಿದ್ಧಿ. 495 00:44:57,654 --> 00:44:59,656 ಉತ್ತಮ ಕೆಲಸ! ಚಿನ್ನ, ಟ್ರೋಫಿ ಗೆದ್ದೆ. 496 00:44:59,739 --> 00:45:01,699 ಕೊನೆಯ ಪದವು "ಡಿಸಪ್ಪಿಯರ್". 497 00:45:02,700 --> 00:45:06,454 ಇನ್ನೊಬ್ಬ ಹುಡುಗಿಗೆ ಎರಡು ಪಿ ಇರೋದು ತಿಳಿದಿರಲಿಲ್ಲ. ಆದರೆ ನಂಗೊತ್ತಿತ್ತು. 498 00:45:06,538 --> 00:45:07,622 ಖಂಡಿತ ನಿಂಗೊತ್ತು. 499 00:45:11,209 --> 00:45:12,419 ಡಿಸಪ್ಪಿಯರ್. 500 00:45:13,628 --> 00:45:14,629 ಡಿ... 501 00:45:15,797 --> 00:45:16,798 ಐ... 502 00:45:18,341 --> 00:45:19,342 ಎಸ್... 503 00:45:20,510 --> 00:45:21,594 ಎ... 504 00:45:21,678 --> 00:45:22,971 ಬಾ, ನಾವು ಹೋಗಬೇಕು. 505 00:45:23,513 --> 00:45:24,514 ಪಿ... 506 00:45:27,851 --> 00:45:28,852 ಇ... 507 00:45:29,310 --> 00:45:30,311 ಎ... 508 00:45:47,120 --> 00:45:48,371 ಹೇ. 509 00:45:48,455 --> 00:45:49,831 ಇನ್ನೇನು ಮಲಗ್ತಾಳೆ. 510 00:46:18,818 --> 00:46:21,488 ತ್ರೀಮಾ ಕೇಟೀ ಸಂದೇಶ 511 00:46:21,571 --> 00:46:27,577 ಹಾರ್ಟ್ಲೀ ಅನುಮೋದಿಸಿದ್ದು. 512 00:47:15,333 --> 00:47:19,087 ಇಲ್ಲ, ಮೂರು ಹಡಗುಗಳ ತಂಡ ಮಾಡಿ. ನಾನೇ ಅವರನ್ನು ಕಳಿಸಿಕೊಡ್ತೀನಿ. 513 00:47:28,429 --> 00:47:29,556 ನಮ್ಮಿಬ್ಬರನ್ನೇ ಬಿಡಿ. 514 00:47:31,224 --> 00:47:33,184 ನಾವು ಮುಗಿಸಿದಾಗ ನಿನಗೆ ಹೇಳುತ್ತೇನೆ. 515 00:47:40,233 --> 00:47:42,026 ನಿಮಗೆ ಗಂಟೆಗಟ್ಟಲೆ ಕರೆ ಮಾಡಿದೆ. 516 00:47:42,110 --> 00:47:45,822 ಇವತ್ತೆಂಥ ದೊಡ್ಡ ಅನಾಹುತ ಆಯ್ತು ಅಂತ ನಿನಗೆ ಗೊತ್ತೇ ಇಲ್ವಾ? 517 00:47:47,865 --> 00:47:49,617 ನನಗೆ ಸ್ವಲ್ಪ ಗೊತ್ತಿದೆ, ಸರ್. 518 00:47:53,955 --> 00:47:58,334 ಹಾರ್ಟ್ಲೀ ನಮ್ಮನ್ನ ಸಿಲುಕಿಸೋಕೆ ನೋಡಿದಳು, ಆದರೆ ನಾನು ನೀನು ಕೊಟ್ಟ ಉಪಾಯ ಹೂಡಿದೆ. 519 00:48:01,879 --> 00:48:06,384 ಇನ್ನೇನು ಗೊತ್ತು? ಏನಾದರೂ ಬೇಕು. ಈ ಹೆಂಗಸು ಆಡುತ್ತಿರುವ ಆಟ ಯಾರಿಗೆ ಗೊತ್ತು. 520 00:48:08,511 --> 00:48:09,554 ಏನದು? 521 00:48:18,187 --> 00:48:19,397 ಅದು ನಿಮಗಾಗಿ, ಸರ್. 522 00:48:25,194 --> 00:48:26,029 ಹೇಳಿ? 523 00:48:26,738 --> 00:48:27,864 ಅಡ್ಮಿರಲ್ ಪಿಲ್ಲರ್. 524 00:48:30,742 --> 00:48:33,369 ನಿಮ್ಮ ಸಂಪೂರ್ಣ ವೃತ್ತಿಜೀವನವನ್ನ ಸುರಕ್ಷಿತವಾಗಿ 525 00:48:34,120 --> 00:48:36,247 ಗೋಡೆಗಳ ಹಿಂದೆ ಮರೆಮಾಚಿ, ನಿಮಗಾಗಿ 526 00:48:37,165 --> 00:48:39,334 ಹೋರಾಡಲು ಇತರರನ್ನು ಕಳುಹಿಸುತ್ತಿದ್ದೀರ. 527 00:48:41,252 --> 00:48:44,922 ನನಗನ್ನಿಸ್ತಿದೆ ನಿಮಗಿಂತ ಜಾಸ್ತಿ ಯುದ್ಧ ನನ್ನ ಮಗಳೇ ನೋಡಿದ್ದಾಳೆ ಅಂತ. 528 00:48:48,551 --> 00:48:50,928 ಮತ್ತು ಅದನ್ನು ಸರಿಪಡಿಸಬೇಕು ಎಂದು ಭಾವಿಸಿದೆ. 529 00:48:51,012 --> 00:48:52,930 ಏನಂದುಕೊಂಡಿದ್ದೀಯಾ ನಿನ್ನ ನೀನು? 530 00:48:54,057 --> 00:48:55,558 ನೀನೇನು ದೊಡ್ಡ ಸ್ಪೆಷಲ್ಲಾ? 531 00:48:56,100 --> 00:48:57,935 ನೀನು ಏನೇನೂ ಅಲ್ಲ. 532 00:48:58,353 --> 00:49:02,065 ವಿಮಾನದ ಕೆಳಗೆ ಬೀಸೋ ಹೊಗೆಯ ತುಣುಕು ನೀನು ಅಷ್ಟೇ. 533 00:49:02,857 --> 00:49:04,067 ಹೌದೇನು? 534 00:49:06,152 --> 00:49:09,280 700 ಬಾಲ್ ಬೇರಿಂಗ್ಗಳಿವೆ ಕ್ಲೇಮೋರ್ ಗಣಿಯಲ್ಲಿ. 535 00:49:10,531 --> 00:49:12,992 ಅದರಲ್ ಎರಡು ಗಣಿಗಳು ನಿಮ್ಮ ಕಡೆ ತಿರುಗಿದ್ದರೆ, 536 00:49:13,076 --> 00:49:17,914 ಒಟ್ಟು 1,400 ಬಾಲ್ ಬೇರಿಂಗ್ಗಳು, 1,400. 537 00:49:18,498 --> 00:49:22,877 ನೀವು ಕೊಂದ ಒಂದೊಂದು ಸೀಲಿಗೂ ನೂರು. 538 00:49:24,128 --> 00:49:25,755 ಏನು ಮಾತಾಡ್ತಾ ಇದ್ದೀಯಾ? 539 00:49:31,010 --> 00:49:32,887 ನನಗೆ ಆಯ್ಕೆ ಇರಲಿಲ್ಲ, ಸರ್. 540 00:49:41,646 --> 00:49:43,314 ರೀಸ್. ಕಮಾಂಡರ್! 541 00:49:45,191 --> 00:49:46,442 ಇದನ್ನು ಮಾಡಬೇಡ! 542 00:49:47,485 --> 00:49:48,736 ನನ್ನ ಮಾತು ಕೇಳಿಸ್ತಾ? 543 00:49:48,820 --> 00:49:50,196 ನೀನು ನಿಲ್ಲಬೇಕು-- 544 00:49:56,077 --> 00:49:59,580 ಇದು ವಾರ್ಕಾಮ್ ಮೀರಿ ಹೋಗುತ್ತದೆ. ಅದು ನಿನಗೆ ಗೊತ್ತು, ತಾನೇ? 545 00:50:00,581 --> 00:50:03,918 ಬೇರೆ ಯಾರು ಭಾಗಿಯಾಗಿದ್ದರೆಂದು ಹೇಳ್ತೀನಿ, ಆದರೆ ನಾನು ಸತ್ತರೆ... 546 00:50:05,420 --> 00:50:06,629 ನಾನು ಸತ್ತರೆ... 547 00:50:10,133 --> 00:50:11,134 ನಿನಗೆ ತಿಳಿಯಲ್ಲ. 548 00:50:11,217 --> 00:50:14,929 ಸರಿ, ನಾವು ಮಾತಿನ ಸಲುವಾಗಿ ಅಂದುಕೊಳ್ಳೋಣ, ಅಡ್ಮಿರಲ್, 549 00:50:16,264 --> 00:50:17,765 ಈಗಾಗಲೇ ತಿಳಿದಿದ್ದೀನಂತ. 550 00:50:24,272 --> 00:50:27,191 ದ್ರೋಹಿ ಹೋವಾರ್ಡ್ 551 00:50:40,913 --> 00:50:42,248 ಯಾರಾದ್ರೂ ನೋಡ್ತಿದ್ದೀರಾ? 552 00:50:42,331 --> 00:50:46,586 ಎನ್ಏಬಿ ವಾಯುವ್ಯ ಮೂಲೆಯಲ್ಲಿ ಸ್ಫೋಟದ ವರದಿ. ವಾರ್ಕಾಮ್ ಸ್ಫೋಟಿಸಿತು. ಮೇಲಿನ ಮಹಡಿ. 553 00:50:46,669 --> 00:50:49,213 ಅದನ್ನು ಲಾಕ್ ಮಾಡಿ. ಒಂದೊಂದಾಗಿ, ಒಂದೊಂದಾಗಿ. 554 00:51:01,768 --> 00:51:04,604 ರೀಸ್ ಬೇಸಲ್ಲಿದ್ದಾನಾ? ನೋಡಿ ದೃಢೀಕರಿಸಿದರಾ? 555 00:51:05,730 --> 00:51:09,817 ಅದು ಅಡ್ಮಿರಲ್ ಕಚೇರಿ. ಯಾವುದೋ ಬಾಂಬ್. ರಿಮೋಟಿಂದ ಸ್ಫೋಟಿಸಿರಬಹುದು. 556 00:52:02,578 --> 00:52:03,579 ರೀಸ್! 557 00:52:30,106 --> 00:52:33,192 ಹೇ! ತಡಿ, ನಿನಗೆ ಏನಾಯಿತು ಎಂದು ನನಗೆ ತಿಳಿದಿದೆ. 558 00:52:33,276 --> 00:52:36,070 ನಿನಗೆ ಏನಾಯಿತು ನನಗೆ ಗೊತ್ತು. ಅವರು ನಿನಗೆ ಮಾಡಿದ್ದು. 559 00:52:36,153 --> 00:52:37,655 ನೀನು ಇಲ್ಲಿ ಇರಬಾರದು. 560 00:52:37,738 --> 00:52:41,117 ನಿನ್ನ ಕುಟುಂಬವನ್ನು ಏಕೆ ಕೊಂದರಂತ. ಇರು! ಹಾರ್ನಿಂದ ಸಾಕ್ಷ್ಯಇದೆ. 561 00:52:43,786 --> 00:52:45,079 ಮತ್ತು ಪಿಲ್ಲರ್. 562 00:52:46,330 --> 00:52:47,582 ನಮ್ಮ ಹತ್ರ ಇವೆ, ರೀಸ್. 563 00:52:49,542 --> 00:52:52,128 ಇಲ್ಲಿಂದ ನ್ಯಾಯವೇ ಇದನ್ನ ಕರ್ಕೊಂಡು ಹೋಗೋಕೆ ಬಿಡು. 564 00:52:54,714 --> 00:52:56,090 ನಾನೇ ನ್ಯಾಯ. 565 00:53:01,345 --> 00:53:02,346 ನಾನು ಬಿಡಲ್ಲ. 566 00:53:04,724 --> 00:53:06,684 ನೀನು ಇದನ್ನು ಮಾಡುವುದಕ್ಕೆ ಬಿಡಲಾರೆ. 567 00:53:35,463 --> 00:53:37,173 ನಾನು ನಿನಗೆ ಮತ್ತೆ ಹೇಳುವುದಿಲ್ಲ. 568 00:53:39,550 --> 00:53:40,801 ಪಟ್ಟಿಯಿಂದ ಹೊರಗಿರು. 569 00:54:12,583 --> 00:54:15,294 -ಹಾಂ? -ಏನಾಗುತ್ತಿದೆ? ಒಂದು ಗಂಟೆ ಕಳೆದಿದೆ. 570 00:54:15,378 --> 00:54:17,213 ನೀನು ಹೇಳು. ನಾನು ಕಾಯುತ್ತಿದ್ದೆ. 571 00:54:18,172 --> 00:54:21,050 -ಕಾಯ್ತಿದ್ಯಾ? -ಇಂಟರ್ನೆಟ್ ಹೇಗೆ ಕೆಲಸ ಮಾಡುತ್ತೆ ನೋಡು. 572 00:54:21,133 --> 00:54:24,095 ನಾನೇನಾದರೂ ಪ್ರಕಟಿಸಬೇಕಂದ್ರೆ ನೀನು ನನಗೆ ಮೊದಲು ಕಳಿಸಬೇಕು. 573 00:54:25,262 --> 00:54:26,514 ಅದನ್ನು ಕಳುಹಿಸಿದೆ. 574 00:54:27,181 --> 00:54:30,226 ಇವರಿಗೆ: ಜೋರ್ಡಾನ್ ಗ್ರಾಫ್ - ಕಥೆ 575 00:54:30,893 --> 00:54:31,811 ಇಲ್ಲವಲ್ಲ. 576 00:54:36,482 --> 00:54:37,942 ಜೋರ್ಡಾನ್, ನಾನು ಹೋಗಬೇಕು. 577 00:54:38,025 --> 00:54:41,529 ಇಲ್ಲ, ಕೇಟೀ, ಮತ್ತೆ ನನಗೆ ಹೀಗೆ ಮಾಡಬೇಡ... ದಯವಿಟ್ಟು. 578 00:55:10,057 --> 00:55:13,436 ನಿಮ್ಮ ಕಥೆಯನ್ನು ಓದಿದ್ದೇನೆ, ಮಿಸ್ ಬರನೆಕ್. ಅದ್ಭುತ ಬರವಣಿಗೆ. 579 00:55:18,190 --> 00:55:20,067 ದುರದೃಷ್ಟವಶಾತ್, ಅದು ತಪ್ಪು. 580 00:55:23,946 --> 00:55:27,116 ನೀವು ಹೊರಟು ಹೋಗಬೇಕೆಂದು ಬಯಸಿದರೆ, ನಾವು ಹಿಂಬಾಲಿಸಲ್ಲ. 581 00:55:28,242 --> 00:55:32,163 ಆದರೆ ಅರ್ಧ ಕಥೆಯೊಂದಿಗೆ ಪ್ರೆಸ್ಸಿಗೆ ಹೋಗುವಂಥ ಪತ್ರಕರ್ತರು ನೀವಲ್ಲ. 582 00:55:34,498 --> 00:55:36,000 ನಿಮಗೆ ಸತ್ಯ ಬೇಕಾದರೆ... 583 00:55:38,294 --> 00:55:39,336 ಸಂಪೂರ್ಣ ಸತ್ಯ, 584 00:55:40,129 --> 00:55:42,381 ಸಂದರ್ಶನವನ್ನು ನೀಡಲು ತಯಾರಾಗಿದ್ದೇನೆ. 585 00:55:44,050 --> 00:55:45,301 ನಿಮಗೆ ಆಸಕ್ತಿ ಇದ್ದರೆ.