1 00:00:53,262 --> 00:00:55,473 ಅಂತಿಮ ಯುದ್ಧ 2 00:01:04,440 --> 00:01:07,902 ಹೆಲಿಕಾಪ್ಟರ್ ಬಿದ್ದಿದೆ. ಅಂಗಳದ ಆಗ್ನೇಯ ಮೂಲೆ. 3 00:01:07,985 --> 00:01:08,903 ನಜಾಫ್, ಇರಾಕ್ 2007 4 00:01:08,986 --> 00:01:12,490 ಬಿಲ್ಡಿಂಗ್ 16ರಿಂದ ಹೋಗುತ್ತಿದ್ದೇವೆ. ಹೆಲಿಕಾಪ್ಟರ್ ಬಿದ್ದಿರುವಂತಿದೆ. 5 00:01:13,407 --> 00:01:17,411 ವಾರಂಟ್ ಆಫೀಸರ್ ಲಿಜ್ ರೇಲಿ, ಸಿಕ್ಕಿಹಾಕೊಂಡಿದ್ದೇನೆ! ಈಗಲೇ ಕ್ಯೂಆರ್ಎಫ್ ಬೇಕು. 6 00:01:17,495 --> 00:01:20,748 ಹ್ಯಾಮರ್ಹೆಡ್. ಬಿದ್ದಿರೋ ಕಿಯೋವಾ ಕಡೆ ಹೋಗುತ್ತಿದೇವೆ. ಇಟಿಎ? 7 00:01:20,831 --> 00:01:22,333 ಬಹಳ ಬೇಗ, ಅಣ್ಣಾ. 8 00:01:22,416 --> 00:01:26,045 ಎರಡಕ್ಕಿಂತ ಕಡಿಮೆ ನಿಮಿಷಗಳ ಒಳಗೆ. ಫಾಸ್ಟ್ ಮೂವರ್ ಮತ್ತೆ ಬೆಂಬಲ ಬೇಕು. 9 00:01:26,128 --> 00:01:30,382 ನೆಗೆಟಿವ್, ಕಮಾಂಡರ್, ರಕ್ಷಿಸಬೇಡಿ. ಕ್ರಾಶ್ ಸೈಟ್ನಲ್ಲಿ ಬಹಳ ಹಾಜಿಗಳಿದ್ದಾರೆ. 10 00:01:30,508 --> 00:01:31,383 ಅನುಮಾನವೇ ಇಲ್ಲ. 11 00:01:31,467 --> 00:01:34,220 -ಉತ್ತರಕ್ಕೆ ಹೋಗುತ್ತಿದೇವೆ... -ತುಂಬಾ ಕಷ್ಟವಿದೆ. 12 00:01:34,303 --> 00:01:37,389 ಬೀದೀಲಿ ಸಿಗೋ ಕಬಾಬ್ ತಿನ್ನಬೇಡ ಅಂತ ಹೇಳಿದ್ದೆ, ಡಾನಿ. 13 00:01:37,473 --> 00:01:38,766 -ಅಯ್ಯೋ! -ಬೇಸ್ಗೆ ಬಾ. 14 00:01:38,849 --> 00:01:42,019 ರೇಂಜರ್ಗಳು ಮತ್ತೆ ಕ್ಯೂಆರ್ಎಫ್ ಬರ್ತಿದಾರೆ. ಇಟಿಎ 20 ನಿಮಿಷ. 15 00:01:42,102 --> 00:01:43,854 -ಅಯ್ಯೋ! -ಕೇಳಿಸಿತಾ? 16 00:01:43,938 --> 00:01:46,982 -ಅವಳ ಹತ್ತಿರ 20 ನಿಮಿಷ ಇಲ್ಲ. -ಕಮಾಂಡರ್, ಕೇಳಿಸಿತಾ? 17 00:01:49,652 --> 00:01:51,445 ಸಿಗ್ನಲ್...ಅಡ್ಡಿ... 18 00:01:51,529 --> 00:01:53,614 -ಕಮಾಂಡರ್. -ಕ್ರಾಶ್ ಸೈಟ್ಗೆ ಹೋಗ್ತಿದೀವಿ. 19 00:01:53,697 --> 00:01:56,534 -ಕಾಕ್ಸ್ ನಿಮ್ನ ಸಾಯಿಸ್ತಾರೆ. -ಮಾತು ಕೇಳೋಕೆ ಹೇಳ್ತೀನಿ. 20 00:01:56,617 --> 00:01:58,828 ಡಾನಿ, ತಡ್ಕೋ! ಈ ಕಾರು ಗಲೀಜು ಮಾಡಬೇಡ! 21 00:01:58,911 --> 00:02:00,579 ಬಿಗಿಹಿಡಿದಿದ್ದೇನೆ. 22 00:02:02,540 --> 00:02:03,541 ನಡೀರಿ! 23 00:02:30,568 --> 00:02:31,735 ಹೋಗ್ತಿದೀವಿ! 24 00:02:31,819 --> 00:02:32,862 ನಡೀರಿ! 25 00:02:34,071 --> 00:02:35,281 ನಡೀರಿ! ಬೇಗ! 26 00:02:36,991 --> 00:02:38,117 ಡಾನಿ! 27 00:02:38,200 --> 00:02:39,910 ಹೋಗಿ ಬಾಸ್. ನಾನಿದೀನಿ. ಬನ್ನಿ! 28 00:02:39,994 --> 00:02:43,789 -ಫ್ರೆಂಡ್ಲೀಗಳು! ಫ್ರೆಂಡ್ಲೀಗಳು! -ಫ್ರೆಂಡ್ಲೀಗಳು! ಫ್ರೆಂಡ್ಲೀಗಳು! 29 00:02:43,873 --> 00:02:44,915 ಫ್ರೆಂಡ್ಲೀಗಳು! 30 00:02:45,541 --> 00:02:47,793 -ಮೇಲಕ್ಕೆ! ಮೇಲಕ್ಕೆ! -ಬಡ್ಡಿಮಕ್ಕಳು! 31 00:02:49,169 --> 00:02:50,504 ಫ್ರೆಂಡ್ಲೀಗಳು! 32 00:02:50,588 --> 00:02:52,214 ನನ್ನ ಬಲಗಡೆಗೆ ಇದ್ದಾರೆ! 33 00:02:56,886 --> 00:02:58,888 -ನಿಮ್ಮ ಆರು ಇದೆ ಬಾಸ್. -ಹೇಯ್. 34 00:02:58,971 --> 00:03:01,181 ಮಾತಾಡು ರೇಲಿ, ಹೇಗಿದೀಯಾ? 35 00:03:02,349 --> 00:03:03,350 ಚೆನ್ನಾಗಿದ್ದೆ... 36 00:03:03,434 --> 00:03:05,311 ಇದು ಸ್ವಲ್ಪ ಸದರ್ನ್ ಬೆಲ್ಲಾ? 37 00:03:05,394 --> 00:03:07,313 ಫೋರ್ಟ್ ರಕರ್, ಅಲಬಾಮಾ. 38 00:03:08,814 --> 00:03:10,024 ಸೋರುತ್ತಿದೆಯಾ? 39 00:03:10,107 --> 00:03:11,400 ಬೆನ್ನು ಎಕ್ಕುಟ್ಟೋಗಿದೆ. 40 00:03:11,483 --> 00:03:13,736 ನನ್ನ ನೋಡು. ನೀನು ಶೂರ ಯೋಧ, ರೈಲಿ? 41 00:03:13,819 --> 00:03:15,863 ಹಾಳಾಗ್ಲಿ. ರೋಲ್ ಟೈಡ್. 42 00:03:16,572 --> 00:03:19,033 ಸರಿ. ರೋಲ್ ಟೈಡ್. 43 00:03:19,116 --> 00:03:21,243 ನಿನ್ನ ಮನೆಗೆ ಕರೆದುಕೊಂಡು ಹೋಗುತ್ತೀವಾ? 44 00:03:21,327 --> 00:03:22,411 ಅಪ್ಪಾ! 45 00:03:36,675 --> 00:03:38,510 ಅದು ಹುಶಾರಾಗುತ್ತಾ, ಅಪ್ಪಾ? 46 00:04:51,333 --> 00:04:53,877 ನಾವು ಇದನ್ನು ಎಲ್ಲಾ ಕಡೆ ಹುಡುಕಿದ್ದೇವೆ. 47 00:04:53,961 --> 00:04:56,213 ಈಗ ಸರಿಯಾದ ಜಾಗಕ್ಕೆ ಬಂದಿದ್ದೇವೆ. 48 00:04:56,296 --> 00:05:00,300 ವ್ಯಾಪಾರ ಮಾಡಬೇಕು ಅಂತ ಆಸೆ ಇತ್ತು. ಇದು ಬಂದಿದ್ದು ಒಳ್ಳೆಯದಾಯಿತು. 49 00:05:00,384 --> 00:05:01,844 -ರಾತ್ರಿ ಹೋಗ್ತಿದೀರಾ? -ಹೌದು 50 00:05:01,927 --> 00:05:03,679 ಬಹಳ ಸಮಯ ತಗೊಳೊಲ್ಲ. 51 00:05:03,762 --> 00:05:05,139 -ನೋಡಿ ಖುಷಿ ಆಯ್ತು -ನಂಗೂ. 52 00:05:05,222 --> 00:05:07,808 -ಡ್ರಾಪ್ ಮಾಡಬೇಕಾ? -ನನ್ನ ಡ್ರೈವರ್ ಕೆಳಗಿದಾನೆ. 53 00:05:07,891 --> 00:05:09,309 ಮುಂದಿನ ಬಾರಿ ಸಿಗಾರ್ ನಂದು. 54 00:05:09,393 --> 00:05:11,603 ಖಂಡಿತ. ಮತ್ತೆ ಸಿಗೋಣ. 55 00:05:13,564 --> 00:05:15,649 ಮೈಕ್, ಕಾದಿದ್ದಕ್ಕೆ ಥ್ಯಾಂಕ್ಸ್. 56 00:05:15,733 --> 00:05:16,692 ಸರಿ. 57 00:05:18,152 --> 00:05:20,029 -ನೋಡಿ ಸಂತೋಷವಾಯಿತು. -ನಂಗೂ. 58 00:05:22,489 --> 00:05:23,741 ಪ್ರಯರ್ ಇಲ್ಲದೆಯೂ... 59 00:05:24,366 --> 00:05:27,870 ಇದು ಅಂತಿಮ ನಿರ್ಧಾರವಲ್ಲ. ನಾಲ್ಕನೇ ಮಹಡಿಯಲ್ಲಿ ಇನ್ನೂ ಒಂದು ಮತವಿದೆ. 60 00:05:27,953 --> 00:05:30,205 ಲೋರೀನ್ ಹಾರ್ಟ್ಲಿ ಸುಮ್ಮನೇ ಇರುವುದಿಲ್ಲ. 61 00:05:30,289 --> 00:05:31,457 ಕೇಳು, ಮೈಕ್. 62 00:05:34,460 --> 00:05:36,545 ಅದು ಈ ಜಗತ್ತು ನ್ಯೂಬೆಲಮ್ ಈಗಲೂ 63 00:05:36,628 --> 00:05:41,258 ಮಾರುಕಟ್ಟೆಯಲ್ಲಿರೋ ಅತ್ಯಂತ ಒಳ್ಳೆಯ ಮಿಲಿಟರಿ ಒಪ್ಪಂದ ಅಂತ ಜಗತ್ತಿಗೆ ಅರ್ಥ ಆಗ್ತಿರೋ ಶಬ್ದ. 64 00:05:41,341 --> 00:05:43,093 ಅದನ್ನು ಮಾಡಿದೆ. ಸರೀನಾ? 65 00:05:43,177 --> 00:05:46,805 ಯಾವುದೇ ಸಮಯದಲ್ಲೂ ಎಲಾಯಸ್ ರೈಬರ್ಗ್ ಫೋನ್ ಮಾಡಬಹುದು. 66 00:05:46,889 --> 00:05:49,683 ಮರು ಪರಿಗಣನೆ ಮಾಡಿದಾರೆ ಅಂತ ಕರ್ಟ್ಗೆ ಹೇಳುತ್ತಾರೆ. 67 00:05:50,684 --> 00:05:52,227 ಇದನ್ನು ನಿಮಗೇ ಮಾರುತ್ತೇನೆ. 68 00:05:53,145 --> 00:05:56,440 ಆರ್ಡಿ-4895, ಹಕ್ಕುಸ್ವಾಮ್ಯ, ಸಂಶೋಧನೆಗಳೆವನ್ನೂ ಮಾರುತ್ತೇನೆ... 69 00:05:56,982 --> 00:05:58,442 ಅವು ನಿಮ್ಮದು. 70 00:05:58,525 --> 00:06:00,903 ನಂತರ ನೀವು ಅದನ್ನು ಬೇಕಾದಂಗೆ ಪ್ಲೇನೋಗೆ ಕೊಡಿ.. 71 00:06:02,362 --> 00:06:03,280 ನಾವು ಬೇರೆಯಾಗೋಣ. 72 00:06:03,363 --> 00:06:06,658 ನಿಮಗೆ ಬೇಕಾಗಿದ್ದು ಸಿಗುತ್ತದೆ, ನನಗೆ ನನ್ನ ಕಂಪನಿ ಸಿಗುತ್ತದೆ. 73 00:06:10,704 --> 00:06:12,372 ಮಂಡಳಿ ಅದಕ್ಕೆ ಒಪ್ಪುವುದಿಲ್ಲ. 74 00:06:12,456 --> 00:06:16,251 ನಾವು ಒಳ್ಳೇ ಡೀಲ್ ಕೊಡುತ್ತೇವೆ. ಇದೇನೆಂದು ನಮಗೆ ಗೊತ್ತು. 75 00:06:16,335 --> 00:06:19,213 ಮೈಕ್, ನಾವು ಈ ಕಂಪನಿ ಮಾರುತ್ತಿದ್ದೇವೆ. ಇಡೀ ಕಂಪನಿ. 76 00:06:19,296 --> 00:06:21,090 ಸರಿ? ಅದು ಪ್ಲಾನ್. 77 00:06:21,173 --> 00:06:23,008 ಮತ್ತೆ ಪರ್ಯಾಯ? ಸರಿ, 78 00:06:24,051 --> 00:06:26,678 ನ್ಯೂಬೆಲಮ್ ಮುಂದಾಳು ನೀವಾಗಿದ್ದರೇ ನಂಗಿಷ್ಟ. 79 00:06:27,721 --> 00:06:29,223 ಪ್ಲಾನೋಗೆ ಅದು ಬೇಕಿಲ್ಲ. 80 00:06:51,411 --> 00:06:53,914 ಅಯ್ಯೋ. ಹಲ್ಲಿ, 8:00 ಗಂಟೆ ಆಯಿತು. 81 00:06:53,997 --> 00:06:55,874 ಬೇಗ ಏಳುವವರನ್ನು ಕಂಡರೆ ಆಗೋದಿಲ್ಲ. 82 00:06:55,958 --> 00:06:58,210 ಅವರು ನಿನಗೆ ತಿಂಡಿ ಮಾಡಿಟ್ಟರೂ ಕೂಡ? 83 00:07:01,088 --> 00:07:03,423 ಇವತ್ತು ನಾವು ಮನಗೆ ಹೋಗುತ್ತಿದ್ದೇವಾ? 84 00:07:03,966 --> 00:07:05,425 ಗೊತ್ತಿಲ್ಲ. 85 00:07:06,135 --> 00:07:08,512 ಹಾರ್ನ್ ಎಸ್ಟೇಟ್ ನಿರರ್ಥಕವೆಂದು ತೋರುತ್ತದೆ. 86 00:07:08,595 --> 00:07:11,098 ಅದು ಕಠಿಣ ಜಾಗ, ಟಾಲೋಗಳೇ ತುಂಬಿದ್ದಾರೆ. 87 00:07:11,890 --> 00:07:13,350 ಹಿಡಿಯುವುದು ಸುಲಭವಲ್ಲ. 88 00:07:14,143 --> 00:07:17,020 ನಮ್ಮ ಪ್ರಯತ್ನಗಳನ್ನು ಕ್ಯಾಪ್ಸ್ಟೋನ್ ಮೇಲೆ ಮಾಡಬೇಕು. 89 00:07:17,896 --> 00:07:20,232 ಹಾರ್ನ್ ಅನ್ನು ಸಜೀವವಾಗಿ ಸೆರೆಹಿಡಿಯಬಹುದು. 90 00:07:20,315 --> 00:07:23,944 ರೀಸ್, ಅದು ಸರಿಯಾಗಿ ಹಣಕಾಸು ಜಿಲ್ಲೆಯ ಮಧ್ಯದಲ್ಲೇ ಇದೆ. 91 00:07:24,027 --> 00:07:25,863 ಅದು ಸುಲಭವಾಗಬಹುದಾ? 92 00:07:28,699 --> 00:07:29,908 ನೋಡೋಕ್ ಒಂದೇ ದಾರಿ. 93 00:07:38,125 --> 00:07:44,131 ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್ 94 00:07:56,768 --> 00:07:59,062 ಪಾರ್ಟಿ ಹಾಳು ಮಾಡೋಕೆ ಬಂದವರು ಇದಾರೆ. 95 00:08:00,522 --> 00:08:02,191 ಹೌದು, ಕಾಣ್ತಾ ಇದೆ. 96 00:08:06,987 --> 00:08:08,071 ಈ ಕಡೆ ಬನ್ನಿ. 97 00:08:21,710 --> 00:08:25,214 ಗ್ವೆನೆತ್ ಪಾಲ್ಟ್ರೋ ದಿನವೂ $250 ಸ್ಮೂತೀ ಕುಡಿಯುತ್ತಾಳೆಂದು ಓದಿದೆ. 98 00:08:25,297 --> 00:08:28,675 ನಂಬುತ್ತೀಯಾ? ಮಾಕಾ, ಅಶ್ವಗಂಧ ಹಾಗೂ ಚಂದ್ರನ ಧೂಳು. 99 00:08:29,218 --> 00:08:30,677 ಥ್ಯಾಂಕ್ಸ್, ಎಡ್ಡಿ 100 00:08:30,761 --> 00:08:35,307 ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅಹಂಕಾರಕ್ಕಲ್ಲದೇ ದೇಹಕ್ಕೆ ಆಹಾರ ನೀಡಬೇಕೆಂದು ನನಗನಿಸುತ್ತದೆ. 101 00:08:35,390 --> 00:08:38,435 -ಸ್ಟೀವ್ ಹಾರ್ನ್, ಹೇಗಿದೀರಾ? -ಸ್ಪೆಷಲ್ ಏಜೆಂಟ್ ಲಾಯುನ್. 102 00:08:38,518 --> 00:08:41,688 ಇವರು ಯುಎಸ್ ಮಾರ್ಶಲ್ಸ್ ಸರ್ವೀಸ್ನ ಮೆಕೆಂಜೀ ವಿಲ್ಸನ್. 103 00:08:41,772 --> 00:08:45,317 ನಿಮ್ಮ ಒಂದು ಟಾಲೋಸ್ ಸೆಕ್ಯೂರಿಟಿ ವಿವರಗಳ ಬಗ್ಗೆ ಮಾತಾಡಬೇಕು. 104 00:08:45,400 --> 00:08:46,693 ಏಡ್ರಿಯನ್ ಗೊರ್ಡೋನಿಸ್. 105 00:08:46,777 --> 00:08:50,656 ಗಾರ್ಡೋ ಮೇಲೆ ಗುಂಡು ಹಾರಿಸ್ದಾಗ ಯಾರಾದ್ರು ಒಪ್ಪಿಕೊಳ್ತಾರಂತ ಗೊತ್ತಿತ್ತು. 106 00:08:50,739 --> 00:08:52,866 ಎಲ್ಎಯಲ್ಲಿ ಅವರ ಕೆಲಸವೇನಿತ್ತು? 107 00:08:52,950 --> 00:08:54,743 ಗೊತ್ತಿಲ್ಲ, ಕೆಲಸದಲ್ಲಿರಲಿಲ್ಲ. 108 00:08:54,826 --> 00:08:57,829 ಅವರು ನಿಮಗೆ ಕೆಲಸ ಮಾಡುತ್ತಾರೆ. ಏನು ಕೆಲಸ ಮಾಡುತ್ತಿದ್ದರು? 109 00:08:57,913 --> 00:09:00,916 ಟಾಲೋದ ಬಹಳಷ್ಟು ಆಪರೇಟರ್ಗಳು ನನಗೆ ಕೆಲಸ ಮಾಡುತ್ತಾರೆ. 110 00:09:00,999 --> 00:09:03,043 ಅವರು ಸ್ವತಂತ್ರ ಗುತ್ತಿಗೆದಾರರು. 111 00:09:03,126 --> 00:09:05,212 ಶಕ್ತಿ ಪ್ರದರ್ಶನ ಎದ್ದು ಕಾಣುತ್ತಿದೆ. 112 00:09:05,295 --> 00:09:08,423 ಅದು ಎಸ್ಒಪಿನಾ ಅಥವಾ ಯಾರಾದರೂ ನಿಮ್ಮ ಹಿಂದೆ ಬರುತ್ತಿದ್ದಾರಾ? 113 00:09:09,466 --> 00:09:12,052 ಕ್ಯಾಪ್ಸ್ಟೋನ್ ಅಪಾರ ಸಂಪತ್ತನ್ನು ಉತ್ಪಾದಿಸುತ್ತದೆ. 114 00:09:12,135 --> 00:09:14,096 ಮತ್ತೆ ಗಣನೀಯ ಪ್ರಮಾಣದ ಶತ್ರುಗಳೂ ಕೂಡ. 115 00:09:14,179 --> 00:09:17,683 ಆಫ್ರಿಕನ್ ಟೆಲಿಕಾಮ್ ಉದ್ಯಮದಲ್ಲಿ ನಮಗೆ ಗಣನೀಯವಾದ ಪಾಲಿದೆ. 116 00:09:17,766 --> 00:09:21,061 ಬೋಕೋ ಹರಾಮ್ ಹಾಗೂ ಅಲ್-ಶಬಾಬ್ಗೆ ಅದು ಇಷ್ಟವಾಗುತ್ತಿಲ್ಲ. 117 00:09:21,144 --> 00:09:23,897 -ಲಾಟಿನ್ ಅಮೇರಿಕದ ಆಸೆ. -ದೊಡ್ ಮನುಷ್ಯ, ದೊಡ್ ಸಮಸ್ಯೆ. 118 00:09:24,982 --> 00:09:28,610 ಕೆಲವರಿಗಾದರೂ ಹೊಟ್ಟೆಕಿಚ್ಚಾಗದೇ ಇಂಥ ಆಫೀಸ್ ಪಡೆಯಲು ಸಾಧ್ಯವಿಲ್ಲ. 119 00:09:29,152 --> 00:09:31,196 ಜೇಮ್ಸ್ ರೀಸ್ಗೆ ಕೋಪ ಬರಿಸಿದ್ದೀರಾ? 120 00:09:32,948 --> 00:09:34,866 ಆ ಹೆಸರು ಕೇಳಿಲ್ಲ. 121 00:09:34,950 --> 00:09:36,994 ನಿಮ್ಮವನಿಗೆ ಅವರು ಖಂಡಿತವಾಗೂ ಗೊತ್ತು. 122 00:09:37,077 --> 00:09:38,912 ಗೋರ್ಡೋ ಮೊದಲು ಗುಂಡು ಹಾರಿಸಿದ್ದು. 123 00:09:39,621 --> 00:09:44,334 ಜೇಮ್ಸ್ ರೀಸ್ ನಿಮ್ಮ ವಿಪಿ, ಸೌಲ್ ಆಗನ್ ಸಾವಿಗೂ ಕಾರಣವೆಂದು ನಮಗೆ ಅನುಮಾನವಿದೆ. 124 00:09:46,295 --> 00:09:48,755 ಸೌಲ್ ಡ್ರಗ್ ಓವರ್ಡೋಸ್ನಿಂದ ಸತ್ತರೆಂದು ಕೇಳಿದೆ. 125 00:09:49,589 --> 00:09:52,092 ನಾನು ಈ ಜೇಮ್ಸ್ ರೀಸ್ ಬಗ್ಗೆ ಚಿಂತೆ ಮಾಡಬೇಕಾ? 126 00:09:52,175 --> 00:09:54,511 ಅವನು ನಿನಗೆ ಗೊತ್ತಿಲ್ಲವೆಂದು ನಟಿಸಬೇಡ. 127 00:09:54,594 --> 00:09:58,473 ನಿನ್ನ ಹಚ್ಚೆಗಳ ಪ್ರಕಾರ ನೀನು ಮತ್ತೆ ರೀಸ್ ಒಂದೇ ಯೂನಿಟ್ಟ್ನಲ್ಲಿದ್ದಿರಿ. 128 00:09:58,557 --> 00:10:02,019 ಬೋನ್ ಫ್ರಾಗ್. ಸೀಲ್ಸ್ ಹೀಗೆ ಮೃತರಾದವರನ್ನ ಗೌರವಿಸುತ್ತಾರೆ. 129 00:10:02,561 --> 00:10:06,732 ಇಲ್ಲಿ ಮಿ. ಹಾರ್ನ್ ಫ್ರಾಗ್ಮನ್ ಆಗಿದ್ದರು, ಅಥವಾ... 130 00:10:08,608 --> 00:10:10,235 ಅವನು ಸುಳ್ಳು ಹೇಳುತ್ತಿರಬಹುದು. 131 00:10:13,363 --> 00:10:17,993 ಮ್ಯಾಕ್ನ ಹಿಂದಿನ ಸೈನ್ಯ. ಮೂರು ನಿಯೋಜನೆಗಳು. ಅಪ್ರಾಮಾಣಿಕತೆಯ ಬಗ್ಗೆ ಚಿಂತಿಸುವುದಿಲ್ಲ. 132 00:10:18,076 --> 00:10:18,910 ಇಲ್ಲ, ಸರ್. 133 00:10:18,994 --> 00:10:22,122 ನಾನು ಫೋರ್ಟ್ ಬ್ರಾಗ್ ನೆರಳಲ್ಲೇ ಬೆಳೆದೆ, ಮಿಸ್ ವಿಲ್ಸನ್. 134 00:10:22,205 --> 00:10:27,252 ನನ್ನ ಗೆಳೆಯರು, ಕುಟುಂಬ, ಎಲ್ಲರೂ ಸೇವೆ ನೀಡಿದರು. ಎಸ್ಎಟಿ ಸ್ಕೋರ್ನಿಂದ ನಾನೊಬ್ಬನೇ ಬೇರೆಯಾದೆ. 135 00:10:27,336 --> 00:10:30,589 ಆದರೆ ಆ ಸಂಸ್ಕೃತಿಯ ಮೇಲೆ ನನಗೆ ಯಾವತ್ತೂ ಗೌರವವಿತ್ತು. 136 00:10:31,590 --> 00:10:33,425 ನನ್ನ ಹಚ್ಚೆಗಳು ನೆನಪುಗಳಾಗಿವೆ. 137 00:10:34,718 --> 00:10:36,094 ಮೆಚ್ಚುಗೆ. 138 00:10:39,931 --> 00:10:42,517 ನಿಮೆಗೆ ಬೇಕಾದ್ದನ್ನು ಪಡೆದೇ ಪಡೆಯುತ್ತೀರಾ ಅಲ್ವಾ? 139 00:10:42,601 --> 00:10:46,104 ಜೀವನವಿಡೀ ಯಶಸ್ಸು, ನಿಮಗಷ್ಟೇ ಗೊತ್ತು. 140 00:10:46,188 --> 00:10:48,732 ರೀಸ್ ತನ್ನ ಮಿಕವನ್ನು ಬೇಟೆಯಾಡಿ ಕೊಲ್ಲುತ್ತಾನೆ. 141 00:10:48,815 --> 00:10:50,400 ಅವನಿಗೆ ಗೊತ್ತಿರುವುದು ಅಷ್ಟೇ. 142 00:10:50,484 --> 00:10:53,528 ನೀವು ಕೇಸ್ನಲ್ಲಿರುವುದು ನನಗೆ ಸಂತೋಷವಾಗಿದೆ. 143 00:10:53,612 --> 00:10:57,824 ನನಗೆ ಮೀಟಿಂಗ್ಗಳಿದೆ ಮತ್ತು ಫ್ಯೂಜಿಟಿವ್ ಟಾಸ್ಕ್ ಫೋರ್ಸ್? ಅತ್ಯುತ್ತಮ ನೋಟವಲ್ಲ. 144 00:10:57,949 --> 00:11:01,161 ನನ್ನ ಸೆಕ್ಯುರಿಟಿ ಸಾಕಷ್ಟಿಲ್ಲವೆಂದು ನಿಮಗೆ ಅನಿಸಿದರೆ ದಯವಿಟ್ಟು 145 00:11:01,244 --> 00:11:04,081 ಬೀದಿ ಮೇಲೆ ಹೋಗಿ ಆರಾಮವಾಗಿರಿ. 146 00:11:04,164 --> 00:11:08,418 -ನನ್ನವರಿಂದ ನಿಮಗೆ ತೊಂದರೆಯಾಗುವುದಿಲ್ಲ. -ಒಳ್ಳೆಯದು, ಥ್ಯಾಂಕ್ಸ್. 147 00:11:14,841 --> 00:11:16,802 ಇದು ಯಾವತ್ತೂ ವೈಯುಕ್ತಿಕವಾಗಬಾರದು. 148 00:11:17,511 --> 00:11:19,971 ವೈಯುಕ್ತಿಕವಾಗಿ ಅವನು ಕೆಟ್ಟವನು ಅನ್ನಿಸೋಲ್ಲ. 149 00:11:20,639 --> 00:11:24,017 ಅವನನ್ನು ಇಷ್ಟಡೋದು ನಮ್ಮ ಕೆಲಸವಲ್ಲ. ಅದು ಅವನನ್ನು ರಕ್ಷಿಸುವುದು. 150 00:11:25,685 --> 00:11:27,813 ತಕ್ಷಣ ಭೇಟಿಯಾಗಿದ್ದಕ್ಕೆ ಥ್ಯಾಂಕ್ಸ್. 151 00:11:27,896 --> 00:11:31,441 ವದಂತಿಗಳಿರುವುದರಿಂದ ಮಾರಾಟದ ಮೊದಲು ಒಂದು ಪ್ರೊಫೈಲ್ ತೆಗೆದುಕೊಂಡೆವು. 152 00:11:31,525 --> 00:11:35,362 ದ ಅಟ್ಲಾಂಟಿಕ್ ಮೇಲಿನ ಕವರ್ ಡೀಲ್ ಬೆಲೆಯನ್ನು ನಿರ್ಧರಿಸಲು ಸಹಾಯ ಮಾಡಬಹುದು. 153 00:11:36,029 --> 00:11:37,906 ತೊಂದರೆಯೇನಿಲ್ಲ, ಹೌದು. 154 00:11:38,698 --> 00:11:42,577 ವಾಣಿಜ್ಯ ಮಾರುಕಟ್ಟೆಗೆ ಔಷಧಿ ತಯಾರಿಸುವ ನ್ಯೂಬೆಲ್ಲಮ್ ಸ್ಥಾಪಕರು ನೀವು, 155 00:11:42,661 --> 00:11:45,664 -ಅಲ್ಜೈಮರ್ಸ್.. -ಡಾ.ಟೆಡೆಸ್ಕೋ ನರವಿಜ್ಞಾನವನ್ನು ಓದಿದ್ದಾರೆ. 156 00:11:45,747 --> 00:11:48,875 -ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ.. -ಬರ್ಕಲಿ, ಬಯೋ ನೋಡಿದ್ದೇನೆ. 157 00:11:48,959 --> 00:11:51,420 ಏಕೆಂದು ಅರ್ಥವಾಗುತ್ತಿಲ್ಲ. 158 00:11:51,503 --> 00:11:55,048 ಅಲ್ಜೈಮರ್ಸ್ ಯಾಕೆ? ಯಾವುದೇ ಕೌಟುಂಬಿಕ ಹಿನ್ನೆಲೆ ಇರಲಿಲ್ಲ. 159 00:11:58,677 --> 00:12:00,429 ಆಲ್ಜೆಮಾನ್ನ ಹೂವುಗಳು 160 00:12:00,512 --> 00:12:02,180 ಪದವಿ ಓದುತ್ತಿರುವಾಗ ಓದಿದೆ, ಮತ್ತೆ... 161 00:12:02,264 --> 00:12:06,810 ತನ್ನ ಆತ್ಮವನ್ನ ಕಳೆದುಕೊಳ್ಳುವ ಯೋಚನೆ ದುಃಸ್ವಪ್ನವಾಗಿ ಕಾಡುತ್ತದೆ. 162 00:12:06,893 --> 00:12:09,438 ಆಗ, ನಾನು ಇದನ್ನು ಬದಲಾಯಿಸಬಹುದು ಎಂದುಕೊಂಡಿದ್ದೆ. 163 00:12:10,230 --> 00:12:13,859 "ಆಗ"? ಆ ಆಶಾವಾದವನ್ನು ಈಗ ಕಳೆದುಕೊಂಡಿದ್ದೀಯಾ? 164 00:12:13,942 --> 00:12:19,114 ಇಲ್ಲ. ನಮ್ಮ ಮಾನವ ಉನ್ನತಿ ಕಾರ್ಯಕ್ರಮ ಮಿ. ಟೆಡೆಸ್ಕೋ ಅವರ ಜೀವನದ ಕೆಲಸಗಳ ಶೃಂಗವಾಗಿದೆ. 165 00:12:19,197 --> 00:12:23,493 ಕ್ಯಾಪ್ಸ್ಟೋನ್ ಅಲ್ಲಿ ಬಂದ ಮೇಲೆ ನೀವು ಮಿಲಿಟರಿ ನೆಲೆಗಳಿಗೆ ಬದಲಾದಿರಿ, 166 00:12:23,577 --> 00:12:25,454 ಸೈನಿಕರ ಉನ್ನತಿ ಪ್ರಾರಂಭಿಸಿದಿರಿ. 167 00:12:25,954 --> 00:12:29,833 ಕೆಲವರು ಇದು ನಿಮ್ಮ ಜೀವನದ ಕೆಲಸದ ನಿರಾಶಾವಾದಿ ಬಳಕೆ ಎಂದೂ ಹೇಳಬಹುದು. 168 00:12:29,916 --> 00:12:33,628 ಡಿಒಡಿ ಜೊತೆಗಿನ ನಮ್ಮ ಸಂಪರ್ಕಗಳು ನಮ್ಮನ್ನು ಉದ್ಯಮದ ಮುಂದಾಳುವಾಗಿಸಿವೆ. 169 00:12:33,712 --> 00:12:37,048 ಹಸಿವು ನಿಗ್ರಹ, ನಿದ್ರೆಯ ಸಹಾಯ, ವಿಒ೨ ಮ್ಯಾಕ್ಸ್ ಏಜೆಂಟ್ಗಳಲ್ಲಿ... 170 00:12:37,132 --> 00:12:39,426 ನಾನು ಹೇಳಿದ ಹಾಗೆ, ಒಂದು ನಿರಾಶಾವಾದಿ ಬಳಕೆ. 171 00:12:41,887 --> 00:12:43,346 ಎಕ್ಸ್ಕ್ಯೂಸ್ ಮೀ. 172 00:12:45,348 --> 00:12:49,227 ಮಿ. ಬುರಾನೆಕ್, ನೀವು ಕೇಳುತ್ತಿರುವುದೆಲ್ಲವೂ ಆನ್ಲೈನ್ನಲ್ಲಿ ಲಭ್ಯವಿದೆ. 173 00:12:50,395 --> 00:12:54,399 ನಮ್ಮ ಹೊಸ ವಿಸ್ತರಣಾ ಪ್ರವರ್ತನೆಗಳ ಬಗ್ಗೆ ಕೇಳಲು ಇಷ್ಟಪಡುತ್ತೀರಾ? 174 00:12:54,483 --> 00:12:56,401 ನಾವು ವಿಸ್ತರಿಸುತ್ತಿರುವುದು... 175 00:12:56,485 --> 00:12:59,154 ಇಲ್ಲ. ನನಗೆ ಬೇಕಾದ್ದೆಲ್ಲವೂ ಸಿಕ್ಕಿದೆ. ಥ್ಯಾಂಕ್ಸ್. 176 00:13:16,213 --> 00:13:17,422 ಹೇಯ್! ಏನಿದು? 177 00:13:17,506 --> 00:13:21,635 ಸಾರಿ. ನಾನು ಬಂದಿದ್ದು ನಿಮ್ಮನ್ನ ಸಂದರ್ಶನ ಮಾಡೋಕೆ, ಪಾಡ್ ಹಿಡ್ಕೊಂಡಿರೋನಲ್ಲ. 178 00:13:22,677 --> 00:13:24,554 ಫಾರ್ಮಾ ಟೈಮ್ಸ್ನ ಸಂದರ್ಶನ ಓದಿದೆ. 179 00:13:24,638 --> 00:13:28,892 ಸ್ಟೀವ್ ಹಾರ್ನ್ ನಿಮಗೆ ವಹಿಸಿದ ಕೆಲಸದ ಬಗ್ಗೆ ನೀವು ಚಿಂತಿಸುತ್ತಿದೀರಿ ಎಂದುಕೊಂಡೆ. 180 00:13:28,975 --> 00:13:33,772 ನಾನು ಮತ್ತೆ ಸ್ಟೀವ್ ಗೆಳೆಯರಲ್ಲದಿರಬಹುದು, ಆದರೆ ಅವನಿಗೆ ಲಾಭ ಮಾಡುವುದು ಹೇಗೆಂದು ಗೊತ್ತು. 181 00:13:33,855 --> 00:13:36,816 ಅದಕ್ಕೆ ನೀವು ಕಾನ್ಫರನ್ಸ್ ರೂಮಲ್ಲಿ ಕೆಲಸ ಮಾಡುತ್ತಿದ್ದೀರಿ. 182 00:13:36,900 --> 00:13:40,278 ಅವರು ಪೆಂಟ್ಹೌಸ್ನಿಂದ ನಿಮ್ಮ ಕಂಪನಿಯ ಭವಿಷ್ಯ ನಿರ್ಧರಿಸುತ್ತಾರೆ. 183 00:13:41,071 --> 00:13:42,948 ಆರ್ಡಿ-4895 ಅಂದರೇನು? 184 00:13:46,243 --> 00:13:48,495 ನೀವು ಎಷ್ಟು ನಿಗಾ ವಹಿಸುತ್ತೀರಿ? 185 00:13:49,621 --> 00:13:53,041 ಇದು ಬಳಕೆದಾರರಲ್ಲಿ ಗಡ್ಡೆಗಳನ್ನು ಉಂಟುಮಾಡುತ್ತಿತ್ತೆಂದು ಹೇಳಿದರೆ 186 00:13:53,124 --> 00:13:57,087 ಯಾರೂ ಬಳಕೆದಾರರಿಲ್ಲ. ಆರ್ಡಿ-4895 ಮಾನವ ಪ್ರಯೋಗಗಳನ್ನು ತಲುಪಿಲ್ಲ. 187 00:13:58,296 --> 00:13:59,631 ತಲುಪಿದ್ದರೆ? 188 00:14:01,967 --> 00:14:04,386 ಇದನ್ನು ಎರಡು ತಿಂಗಳ ಹಿಂದೆ ಸಿರಿಯಾಕ್ಕೆ ಹೋದ 189 00:14:04,469 --> 00:14:07,639 ನೇವಿ ಸೀಲ್ಗಳ ಮೇಲೆ ಬಳಸಿದ್ದು ಅವರು ವಾಪಸ್ಸು ಬರದೇ ಇದ್ದರೆ? 190 00:14:09,349 --> 00:14:10,767 ಅದರ ಬಗ್ಗೆ ಮಾತಾಡುತ್ತೀರಾ? 191 00:14:16,022 --> 00:14:17,983 ನಿಜವಾಗ್ಲೂ, 192 00:14:18,858 --> 00:14:22,988 ನೀವು ಏನು ಹೇಳ್ತಾ ಇದೀರಾ ಅಂತ ನಂಗೊತ್ತಿಲ್ಲ. 193 00:14:35,625 --> 00:14:39,296 ನೆನಪು ಮಾಡಿಕೊಳ್ಳಿ, ಬೀಗ ಹಾಕಿ, ಟಾಯ್ಲೆಟ್ನಲ್ಲಿ ಫ್ಲಷ್ ಮಾಡಿಬಿಡಿ. 194 00:14:39,921 --> 00:14:42,549 ಮಾತಾಡಲು ಸಿದ್ಧರಾದಾಗ, ಸಂಪರ್ಕಿಸಿ. 195 00:15:40,190 --> 00:15:43,693 ಇದು ನಿಮ್ಮ ಗುರಿಯ ಸ್ಥಳ. ಹಾರ್ನ್ ಇಲ್ಲಿ ಮಾತ್ರ ಕಾಣುತ್ತಾನೆ. 196 00:15:44,694 --> 00:15:45,904 ಗೊತ್ತಿಲ್ಲ. 197 00:15:46,404 --> 00:15:49,616 ನಾಗರಿಕರಿಗೆ ಹಾನಿ ಮಾಡದೇ ನಾವು ಆರು ಆಪರೇಟರ್ಗಳನ್ನ ಹೊಡೀಬೇಕು. 198 00:15:49,741 --> 00:15:52,619 ಹಾರ್ನ್ನನ ಸಜೀವವಾಗಿ ತಂದು ಎಫ್ಬಿಐನಿಂದ ತಪ್ಪಿಸ್ಕೋಬೇಕಾ? 199 00:15:52,702 --> 00:15:54,788 ಅವನು ಸಜೀವವಾಗೇ ಬೇಕಾ? 200 00:15:56,623 --> 00:15:57,707 ಹೌದು. 201 00:15:58,958 --> 00:16:00,710 ಅವನು ಉತ್ತರ ಕೊಡೋ ಪ್ರಶ್ನೆಗಳಿವೆ. 202 00:16:03,546 --> 00:16:06,591 ಅವನು ನಂಗೇನು ಮಾಡಿದ? ಯಾರು ಅವನಿಗೆ ಸಹಾಯ ಮಾಡಿದ್ದು? 203 00:16:14,849 --> 00:16:16,101 ಹೇಗಿದ್ದೀಯಾ, ರೀಸ್? 204 00:16:17,560 --> 00:16:18,561 ಚೆನ್ನಾಗಿದ್ದೀಯಾ? 205 00:16:19,771 --> 00:16:20,939 ಚೆನ್ನಾಗಿದ್ದೀನಿ. 206 00:16:25,276 --> 00:16:29,698 ಹೇಯ್, ಈ ಮಾತ್ರೆಗಳು ಕೆಲಸ ಮಾಡುತ್ತಿವೆ. ನಾನು ವೇಳಾಪಟ್ಟಿ ಕಾಯ್ದುಕೊಂಡರೆ... 207 00:16:32,117 --> 00:16:34,703 ಪರವಾಗಿಲ್ಲ. ನಾವು ಇದನ್ನು ಮಾಡುತ್ತೇವೆ. 208 00:16:35,954 --> 00:16:37,080 ಸರಿ. 209 00:16:37,664 --> 00:16:39,624 ನಾನು ರಾನ್ ಜೊತೆ ಮಾತಾಡ್ತೀನಿ. 210 00:16:39,708 --> 00:16:42,627 ನಮಗೆ ಇನ್ನೂ ಸ್ವಲ್ಪ ದಿನ ಸಿಗುತ್ತಾ ಅಂತ ನೋಡ್ತೀನಿ. 211 00:16:51,511 --> 00:16:53,555 ಟೆಡೆಸ್ಕೋ ಒಂದು ದುರ್ಬಲ ಕೊಂಡಿ. 212 00:16:53,638 --> 00:16:56,725 ಮಾರಾಟವೂ ಬೇಕಿಲ್ಲ. ಹಾರ್ನ್ನನ್ನ ಕಂಡರೆ ಅವನಿಗೆ ಆಗಲ್ಲ. 213 00:16:56,808 --> 00:17:00,437 ನಾನು ಆರ್ಡಿ-4895 ಬಗ್ಗೆ ಹೇಳಿದಾಗ, ಕೋಪ ಮಾಡಿಕೊಂಡ. 214 00:17:00,520 --> 00:17:02,230 ಅವನು ಒಳಗೊಂಡಿರಬಹುದಾ? 215 00:17:03,106 --> 00:17:06,651 -ಅವನಿಗೆ ಖಂಡಿತವಾಗಿಯೂ ಏನೋ ಗೊತ್ತು? -ನಿನ್ನ ಸಮಯಾವಧಿ ಎಷ್ಟು? 216 00:17:07,610 --> 00:17:08,737 ಆಧರಿಸಿದೆ. 217 00:17:16,411 --> 00:17:20,081 ನೀನು ಎಸ್ಎಫ್ನಲ್ಲಿರುವುದು ಗೊತ್ತು. ನಿನ್ನ ಮೇಲೆ ಎಫ್ಬಿಐ ಕಳಿಸಬೇಕು. 218 00:17:20,165 --> 00:17:22,542 -ಅಯ್ಯೋ! -ಏನದು? 219 00:17:29,799 --> 00:17:30,842 ಕೇಟೀ? 220 00:17:35,054 --> 00:17:38,349 ವಿಶ್ವವಿದ್ಯಾಲಯದಲ್ಲಿ ಇಬ್ಬರಿದ್ದಾರೆ, ಚೆರೋಕಿಯಲ್ಲಿ ಒಬ್ಬರು. 221 00:17:38,433 --> 00:17:41,853 ಅಂದ್ರೆ ನಿನಗೆ ಗೊತ್ತಿರುವವರಲ್ಲಿ ಎಷ್ಟು ಜನ ಮಿಡತೆ ಬಳಸುತ್ತಾರೆ? 222 00:17:41,936 --> 00:17:43,688 ಕೆಲವರೇ ಇರಬಹುದು. 223 00:17:44,230 --> 00:17:46,065 ಏನ್ ಹೇಳ್ಬೇಕು ಅಂತಿದ್ಯ ಜ್ಯೂನಿಯರ್? 224 00:17:46,941 --> 00:17:48,485 ಏನಂದ್ರೆ, 225 00:17:49,360 --> 00:17:51,863 ಅವರು ಅಷ್ಟೆಲ್ಲ ಸೆಲ್ ಫೋನ್ ಮಾರೋಕೆ ಸಾಧ್ಯ ಇಲ್ಲ. 226 00:17:51,946 --> 00:17:54,741 ಅದೊಂದು ಮರೆ, ಅಷ್ಟೇ, ಹೇಳ್ತಾ ಇದೀನಿ. 227 00:17:54,824 --> 00:17:57,202 ನಿನ್ನ ಹತ್ತಿರ ಸಿಕ್ಕಾಪಟ್ಟೆ ಸಮಯ ಇದೆ. 228 00:17:57,994 --> 00:18:00,079 ಟೂಲಾ, ನನ್ನ ಹತ್ತಿರ ಬಹಳ ಸಮಯ ಇದೆ. 229 00:18:00,163 --> 00:18:02,040 ವರದಿಗಾರಳ ಬಗ್ಗೆ ಹೇಗೆ ನಡೀತಿದೆ? 230 00:18:04,375 --> 00:18:08,254 -ಚೆನ್ನಾಗಿದೆ ಬಾಸ್, ಎಲ್ಲವೂ ತಣ್ಣಗಿದೆ... -ಇಲ್ಲಿ ಇನ್ನೂ ಜನ ಬೇಕು, ಸರ್. 231 00:18:08,338 --> 00:18:10,340 ಅಲ್ಲಿ ಇರುವಷ್ಟೇ ಜನ. 232 00:18:10,423 --> 00:18:14,052 ತಿಳೀತು. ಮತ್ತೆ ಎಲ್ಲರ ಸಹನೆಯನ್ನೂ ನಾನು ಮೆಚ್ಚಿಕೊಳ್ಳುತ್ತೇನೆ. 233 00:18:15,053 --> 00:18:18,181 ನಾವು ಸರಿಯಾದ ಸ್ಥಳದಲ್ಲಿದ್ದೇವೆ. ಬೆನ್ನಟ್ಟಲು ಬಿಡುತ್ತೇವೆ. 234 00:18:19,349 --> 00:18:21,392 ನಮ್ಮ ಅಂತಿಮ ಎಚ್ಚರಿಕೆಯ ವರದಿ ಅನೇಕ 235 00:18:21,476 --> 00:18:24,312 ಸಹಿಯಿರದ ಶೋಧನಾ ನಿಯೋಜನೆಗಳ ಒಪ್ಪಂದವನ್ನು ತೋರಿಸುತ್ತಿದೆ. 236 00:18:24,395 --> 00:18:25,396 ನಾವೆಲ್ಲಿದ್ದೇವೆ? 237 00:18:25,480 --> 00:18:28,066 ರಾತ್ರಿಯೊಳಗೆ ಅವು ವಿಡಿಆರ್ಲ್ಲಿ ಲಭ್ಯವಿರುತ್ತವೆ. 238 00:18:28,149 --> 00:18:29,192 ಥ್ಯಾಂಕ್ ಯೂ. 239 00:18:29,275 --> 00:18:32,237 ಇದನ್ನ ಬೇಗ ಮುಗಿಸುವ ಪ್ರಯತ್ನವನ್ನು ಮೆಚ್ಚುತ್ತೇನೆ, ಮೈಕ್. 240 00:18:33,363 --> 00:18:36,616 ಆದರೆ ನಾವು ಮೌಲ್ಯಮಾಪನದ ಪ್ರಶ್ನೆಯನ್ನು ಮತ್ತೆ ತೆರೆಯಬೇಕು. 241 00:18:37,700 --> 00:18:39,494 ಪ್ರಾಥಮಿಕತೆಗಳು ಬದಲಾಗಿವೆ. 242 00:18:40,203 --> 00:18:43,623 ನಾವು ಆಫರ್ ಕೊಟ್ಟಾಗಿನಿಂದ, ಪೆಂಟಗಾನ್ನಲ್ಲಿನ ನಿಮ್ಮ ಸಂಪರ್ಕ 243 00:18:43,706 --> 00:18:45,375 ಗಣನೀಯವಾದ ಅಪಾಯದಲ್ಲಿದೆ. 244 00:18:45,458 --> 00:18:47,335 ನಮ್ಮ ಸಂಪರ್ಕ ಧೃಢವಾಗಿದ್ದಾರೆ. 245 00:18:50,797 --> 00:18:54,843 ನಿಮಗೆ ಚಿಂತೆಯಿದ್ದಲ್ಲಿ, ನಾವು ಡೀಲ್ ಅನ್ನು ಸಂಪೂರ್ಣವಾಗಿ ನಿಲ್ಲಿಸಬಹುದು. 246 00:19:05,687 --> 00:19:06,813 ನಿಮ್ಮ ನಂಬರ್ ಎಷ್ಟು? 247 00:19:10,108 --> 00:19:11,651 ಒಂಟಿಯಾಗಿ ಬಿಡಿ. 248 00:19:22,078 --> 00:19:24,372 ನೀವೂ ಮೈಕ್, ಪ್ಲೀಸ್. 249 00:20:04,829 --> 00:20:06,080 ನ್ಯೂಬೆಲಮ್ ಫಾರ್ಮಾಸ್ಯೂಟಿಕಲ್ಸ್ 250 00:20:06,164 --> 00:20:07,540 ಬಂಡವಾಳದ ಕೋಷ್ಟಕ: ನ್ಯೂಬೆಲಮ್ ಫಾರ್ಮಾಸ್ಯೂಟಿಕಲ್ಸ್ 251 00:20:07,624 --> 00:20:09,083 ಅಧಿಕೃತ ಶೇರುಗಳು:45,000,000 ಬಾಕಿಯಿರುವ ಶೇರುಗಳು: 40,000,000 252 00:20:09,167 --> 00:20:10,460 ಉಳಿದ ನೀಡಿರದ ಶೇರುಗಳು: 5,000,000 253 00:20:38,947 --> 00:20:41,741 -ಮೈಕ್? -ಸೀಲ್ಗಳನ್ನು 2 ತಿಂಗಳ ಮುಂಚೆ ಕಳಿಸಲಾಯಿತಾ? 254 00:20:41,824 --> 00:20:42,742 ಹೌದು. 255 00:20:42,825 --> 00:20:44,619 ನನ್ನ ಬಳಿ ಉಪಯುಕ್ತವಾದದ್ದಿದೆ. 256 00:20:44,702 --> 00:20:48,373 ಚಾಟ್ನಲ್ಲಿ ಬೇಡ. ಖುದ್ದಾಗಿ ಭೇಟಿಯಾಗುವವರೆಗೂ ಸುಮ್ಮನಿರು. 257 00:20:48,456 --> 00:20:50,208 ಅದು ಈವತ್ತು ರಾತ್ರಿಯೇ ಆಗಬೇಕು. 258 00:20:50,291 --> 00:20:53,670 ಸರಿ. ವಿವರ ಕಳಿಸುತ್ತೇನೆ. ನಿನ್ನ ಸ್ಮಾರ್ಟ್ಫೋನ್ ತರಬೇಡ. 259 00:21:20,113 --> 00:21:22,031 ಬೆಲೆಯ ಬಗ್ಗೆ ಮಾತಾಡಿದಿರಾ? 260 00:21:25,493 --> 00:21:28,413 ಈವತ್ತು ನನ್ನಿಂದ ಗಲಾಟೆಯಾಗಿದ್ದಲ್ಲಿ ಸಾರಿ. 261 00:21:31,040 --> 00:21:33,584 ತೊಂದರೆಯಿಲ್ಲ, ಅದನ್ನು ಬಗೆಹರಿಸೋಣ. 262 00:21:37,338 --> 00:21:42,260 ಈ ವರ್ಷಗಳಲ್ಲಿ ನಾವು ಬಹಳ ಪ್ರಯತ್ನಿಸಿದ್ದೇವೆ. ಅದು ಕೆಲವೊಮ್ಮೆ ನೋವು ಕೊಟ್ಟಿದೆ. 263 00:21:42,343 --> 00:21:45,138 ನಿನ್ನ ವಿಶ್ವಾಸವನ್ನು ನಾನು ಮೆಚ್ಚುತ್ತೇನೆ, ಮೈಕ್. 264 00:21:45,638 --> 00:21:48,891 ನಿನ್ನ ಕೆಲಸದಿಂದಾಗಿ ಈವತ್ತಿಗೂ ಬದುಕಿರುವ ಜನರಿದ್ದಾರೆ. 265 00:21:48,975 --> 00:21:52,562 ಏನಾದರೂ ಒಳ್ಳೆಯದು ಮಾಡಬಹುದು ಎನ್ನುವ ಮಾತನ್ನು ನೀನು ಉಳಿಸಿಕೊಂಡೆ. 266 00:21:55,648 --> 00:21:56,774 ಥ್ಯಾಂಕ್ ಯೂ, ಮೈಕ್. 267 00:21:59,110 --> 00:22:01,029 ನಾಳೆ ಭೇಟಿಯಾಗುತ್ತೇನೆ, ಸ್ಟೀವ್. 268 00:22:25,303 --> 00:22:27,680 ಇಂಟರ್ನಲ್ ಸರ್ವರ್ನಲ್ಲಿ ಲಾಗಿನ್ ಆಗಿದ್ದಾನೆ. 269 00:22:27,764 --> 00:22:31,309 ಏನು ಕಾಪಿ ಮಾಡಿದ ಅಂತ ಗೊತ್ತಿಲ್ಲ, ಅವ ಮಾಧ್ಯಮದ ಜೊತೆ ಮಾತಾಡ್ತಿರಬಹ್ದು. 270 00:23:52,557 --> 00:23:54,016 ಈಗೇನು ಮಾಡುವುದು? 271 00:23:57,228 --> 00:23:58,771 ಪಡೆ ವಿಭಜನೆಗೊಳ್ಳುತ್ತಿದೆ. 272 00:24:00,273 --> 00:24:01,524 ಹಾರ್ನ್ನನ ನೋಡುತ್ತಿರು. 273 00:24:21,252 --> 00:24:22,253 ಏನು? 274 00:24:22,920 --> 00:24:26,048 ಹಾರ್ನ್ನನ್ನು ನೋಡುತ್ತಿದ್ದಾಗಿನಿಂದ ಅವನ ಪಡೆ ಇಬ್ಭಾಗವಾಗಿಲ್ಲ. 275 00:24:26,132 --> 00:24:28,718 -ಒಮ್ಮೆಯೂ ಇಲ್ಲ. ಏನಾಗ್ತಾ ಇದೆ? -ತಿಳಿಸ್ತೀನಿ. 276 00:24:38,769 --> 00:24:43,649 ಪ್ರಯಾಣಿಕರ ಗಮನಕ್ಕೆ. ಪ್ರಯಾಣಿಸುವಾಗ ನಿಮ್ಮ ಕ್ಲಿಪ್ಪರ್ ಕಾರ್ಡ್ ಬಳಸಲು ಮರೆಯಬೇಡಿ... 277 00:24:45,401 --> 00:24:49,155 ನೇರವಾಗಿ ಹೇಳುತ್ತೇನೆ. ನ್ಯೂಬಲಮ್ ಏನಾದರೂ ಅಕ್ರಮ ಮಾಡುತ್ತಿದ್ದರೆ, 278 00:24:49,238 --> 00:24:52,783 ಅದು ನನಗೆ ಗೊತ್ತಿರಲಿಲ್ಲ. ನಿನ್ನ ವರದಿಗೆ ಅದನ್ನು ಹೊಂದಿಸಲಾಗದಿದ್ದರೆ.. 279 00:24:52,867 --> 00:24:55,453 ನಿಮ್ಮ ಮೇಲೆ ನಂಬಿಕೆಯಿದ್ದೇ ನಾನಿಲ್ಲಿ ಬಂದದ್ದು. 280 00:24:55,536 --> 00:24:57,705 ಆರ್ಡಿ-4895 ಮಿದುಳಿನ ಹಾಗೂ ಅಮಿಗ್ಡಾಲಾ 281 00:24:57,788 --> 00:25:00,958 ಮಧ್ಯದ ಕೊಂಡಿಯನ್ನು ಸ್ತಬ್ಧವಾಗಿಸಲು ತಯಾರಿಸಿದ ಔಷಧವಾಗಿದೆ. 282 00:25:01,042 --> 00:25:05,254 ಇದು ಸಂಬಂಧಿಸಿದ ಯುದ್ಧದ ಆಘಾತವಿಲ್ಲದೇ ನೆನಪಿನ ಡೇಟಾ ಇಡಲು ಸಹಾಯ ಮಾಡುತ್ತದೆ. 283 00:25:05,796 --> 00:25:07,882 ಯುದ್ಧದ ಆಘಾತ? ಪಿಟಿಎಸ್ಡಿ ರೀತಿಯದ್ದಾ? 284 00:25:07,965 --> 00:25:12,428 ಹೌದು, ಎರಡು ವರ್ಷದ ಹಿಂದೆ ನಾವು ಆರ್ಡಿ-4895 ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆವು. 285 00:25:12,511 --> 00:25:16,724 ಪಿಟಿಎಸ್ಡಿ ವಿರುದ್ಧದ ರಕ್ಷಣೆ ಹಾರ್ನ್ರ ಕನಸು. ಅದು ಅವರ ಬಿಳೀ ತಿಮಿಂಗಲವಾಗಿತ್ತು. 286 00:25:16,807 --> 00:25:20,019 ಪ್ರಾಣಿಗಳ ಮೇಲಿನ ಪರೀಕ್ಷೆ ನಂತರ ಅವರು ಪ್ರಾಜೆಕ್ಟ್ ನಿಲ್ಸಿದ್ರು. 287 00:25:20,102 --> 00:25:22,939 ಆಗ ನನಗೆ ಅರ್ಥವಾಗಲಿಲ್ಲ, ಆದರೆ ಎರಡು ತಿಂಗಳ ಹಿಂದೆ, 288 00:25:23,022 --> 00:25:25,274 ನಮ್ಮ ಕ್ಯಾಪ್ ಟೇಬಲ್ನಲ್ಲಿ ಅಸಹಜತೆ ಕಂಡಿತು. 289 00:25:25,358 --> 00:25:27,526 -ಕ್ಯಾಪ್ ಟೇಬಲ್ ಅಂದ್ರೆ? -ಬಂಡವಾಳ ಕೋಷ್ಟಕ. 290 00:25:27,610 --> 00:25:31,447 ಕಂಪನಿಯಲ್ಲಿನ ಶೇರುದಾರರು ಮತ್ತು ಪಾಲುಗಳ ಲೆಕ್ಕವಿಡುವ ಲೆಕ್ಕದ ಖಾತೆ. 291 00:25:31,572 --> 00:25:34,075 ಅರ್ಥವಾಗುತ್ತಿಲ್ಲ. ಇದಕ್ಕೂ ಸತ್ತ ಸೀಲ್ಗಳಿಗೂ ಏನು ಸಂಬಂಧ? 292 00:25:35,368 --> 00:25:36,452 ಎಲ್ಲವೂ. 293 00:25:46,754 --> 00:25:52,718 ಟ್ರಾನ್ಸಿಟ್ ಸ್ಟೇಷನ್ 294 00:26:08,234 --> 00:26:09,402 ದೇವರೇ! 295 00:26:11,028 --> 00:26:12,738 ಇಲ್ಲಿ ಎಷ್ಟು ನಡೆದಿದೆ? 296 00:26:12,822 --> 00:26:15,241 ಪ್ರತೀ ಕಂತೂ 12, 15 ಮಿಲಿಯನ್ ಆಗಿತ್ತು. 297 00:26:15,324 --> 00:26:18,995 ಆದರೆ ರೈಬರ್ಗ್ಗೆ ಮುಖ್ಯ ಆಸಕ್ತಿ ಆರ್ಡಿ-4895 ಆಗಿತ್ತು. 298 00:26:19,078 --> 00:26:22,581 ಅದು ಆ ಸೀಲ್ಗಳಲ್ಲಿ ಗಡ್ಡೆ ಉಂಟುಮಾಡಿತೆಂದು ನೀವು ಅಂದುಕೊಂಡರೆ, 299 00:26:22,665 --> 00:26:24,041 ಈವತ್ತೇ ಅದನ್ನು ಪ್ರಕಟಿಸಿ. 300 00:26:24,125 --> 00:26:25,334 ಡೀಲ್ ಕಡಿತಗೊಳಿಸಬಹುದು. 301 00:26:25,418 --> 00:26:27,837 ಹಾಗಲ್ಲ. ಪರಿಶೀಲನೆಯಿದೆ, ಎಡಿಟರ್ಗಳಿರುತ್ತಾರೆ... 302 00:26:27,920 --> 00:26:30,881 ಅಲ್ಲದೇ ಖಜಾಂಚಿ, ಹಣಕಾಸು ಅಪರಾಧಗಳ ಜಾರಿಗೊಳಿಸುವಿಕೆಯ ಸಮಯ. 303 00:26:30,965 --> 00:26:32,008 ಎಷ್ಟು ಕಾಲ? 304 00:26:32,633 --> 00:26:36,637 ಇದು ಮುಖ್ಯ, ಚೆನ್ನಾಗಿ ಮಾಡಿದ್ದೀಯಾ. ನಿನಗೆ ಡೀಲ್ ನಿಲ್ಲಿಸಲು ಸಾಧ್ಯಾವಾದರೆ... 305 00:26:41,517 --> 00:26:42,977 ನಿನ್ನ ಫೋನ್ ತಂದಿದಿದ್ದೀಯಾ? 306 00:26:43,060 --> 00:26:45,396 ನೀನು ಹೇಳಿದ ಕಾರಲ್ಲೇ ಬಿಟ್ಟೆ. 307 00:26:45,479 --> 00:26:48,649 ನಾನು ಹೇಳಿದ್ದು ಆಫೀಸಲ್ಲಿ ಬಿಡು ಅಂತ. ನಡಿ, ನಾವು ಹೋಗ್ಬೇಕು. 308 00:28:01,639 --> 00:28:03,641 ಹೋಗಬೇಕು, ನಡಿ. 309 00:28:26,539 --> 00:28:28,999 ಅವರಿಗೆ ನಾವು ಭೇಟಿಯಾಗುವುದು ಗೊತ್ತಿತ್ತು. 310 00:28:32,044 --> 00:28:34,588 ಉಸಿರಾಡು. ಹಾಗೇ. ನಿನ್ನ ಎದೆ ಬಡಿದುಕೊಳ್ಳುತ್ತಿದೆ. 311 00:28:34,672 --> 00:28:36,882 ಇಲ್ಲಿ ಬಾ. ನೀನು ಶಾಂತವಾಗಬೇಕು. 312 00:28:36,966 --> 00:28:40,136 FBI ಏಜೆಂಟ್ ಇದರ ಭಾಗವಲ್ಲ. ಅವನು ಸಹಾಯ ಮಾಡಬಹುದು. 313 00:28:40,219 --> 00:28:42,847 ಇಲ್ಲಿ ಎಫ್ಬಿಐ ಮುಖ್ಯವಲ್ಲ. ಇದನ್ನು ಕುಡಿ. 314 00:28:42,930 --> 00:28:43,889 ಬಾಯಾರಿಕೆಯಾಗಿಲ್ಲ. 315 00:28:43,973 --> 00:28:46,434 ಶಾಂತವಾಗದಿದ್ದರೆ ನಿನಗೆ ಶಾಕ್ ಆಗುತ್ತದೆ. 316 00:28:48,561 --> 00:28:51,939 ನೀನೊಬ್ಬ ಯುದ್ಧ ವರದಿಗಾರ್ತಿ. ಮೊದಲು ಯುದ್ಧ ನೋಡಿದ್ದೀಯ. 317 00:28:52,022 --> 00:28:54,316 ಗನ್ನ ಯುದ್ಧದಲ್ಲಿ ಅಲ್ಲ. 318 00:28:55,568 --> 00:28:59,363 ಈಗ ನೋಡಿದೆ ತಾನೇ. ಮಾತಾಡು. ಹಾರ್ನ್ ಯಾಕೆ ನಿನ್ನ ಹಿಂದೆ ಬಿದ್ದಿದ್ದ? 319 00:29:04,577 --> 00:29:09,874 ಆರ್ಡಿ-4895 ನ್ಯೂಬೆಲಮ್ ಫಾರ್ಮಾಸ್ಯೂಟಿಕಲ್ಸ್ ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಔಷಧವಾಗಿತ್ತು. 320 00:29:09,957 --> 00:29:14,211 ಅದರ ಗುರಿ ಮಿದುಳಿನಲ್ಲಿ ಆಘಾತದ ನೆನಪನ್ನು ನಿಲ್ಲಿಸಿ 321 00:29:14,295 --> 00:29:17,173 ಆ ಮೂಲಕ ಪಿಟಿಎಸ್ಡಿಅನ್ನು ನಿಲ್ಲಿಸುವುದಾಗಿತ್ತು. 322 00:29:17,256 --> 00:29:22,178 ಅದು ಹೆಗ್ಗಣಗಳು, ನಾಯಿಗಳಲ್ಲಿ ಕೆಲಸ ಮಾಡಿತು. ನಂತರ, ಹಾರ್ನ್ ಮಾನವರಲ್ಲಿ ಅದನ್ನು ತಳ್ಳಿದ. 323 00:29:23,304 --> 00:29:24,722 ಅದರಿಂದಲೆ ಮಿದುಳಿನ ಗಡ್ಡೆ. 324 00:29:24,805 --> 00:29:26,724 ಹೌದು, ಆರ್ಡಿ-4895 ಕೆಲಸ ಮಾಡಿದರೆ, 325 00:29:26,807 --> 00:29:30,811 ನ್ಯೂಬೆಲಮ್ ಫಾರ್ಮಾಸ್ಯೂಟಿಕಲ್ಸ್ ಜಗತ್ತಿನ ಮೌಲ್ಯಯುತ ಕಂಪನಿಗಳಲ್ಲಿ ಒಂದಾಗುತ್ತದೆ. 326 00:29:30,895 --> 00:29:33,731 ಅದು ವಿಫಲವಾದರೆ ಹಾರ್ನ್ರ ಎಲ್ಲಾ ಹೂಡಿಕೆಗಳು ಏನೂ ಇಲ್ಲ. 327 00:29:33,814 --> 00:29:37,067 ಅವರ $15, $20 ಬಿಲಿಯನ್ಗಳು ಮುಳುಗಿಹೋಗುತ್ತವೆ. 328 00:29:37,151 --> 00:29:39,445 ಆದಕ್ಕೇ ಮಾರಾಟಕ್ಕೆ ಅವಸರ ಮಾಡುತ್ತಿದ್ದಾರೆ. 329 00:29:39,528 --> 00:29:41,155 ಬೇರೆ ಯಾರಿಗೆ ಗೊತ್ತಿತ್ತು? 330 00:29:41,238 --> 00:29:46,327 ಎರಡೂ ತಿಂಗಳ ಹಿಂದೆ, ಹಾರ್ನ್ ನ್ಯೂಬೆಲ್ಲಂನಲ್ಲಿ ತಮ್ಮ ಶೇರುಗಳಲ್ಲಿ $100 ಮಿಲಿಯನ್ ತೆಗೆದುಕೊಂಡು 331 00:29:46,410 --> 00:29:49,705 ಅದನ್ನು ಒಂದಿಷ್ಟು ಶೆಲ್ ಕಂಪನಿಗಳಿಗೆ ವರ್ಗಾಯಿಸಿದರು. 332 00:29:49,788 --> 00:29:51,916 ಎರಡು ತಿಂಗಳ ಹಿಂದೆ ಇನ್ನೇನಾಯಿತು? 333 00:29:52,500 --> 00:29:56,086 ಆ ಶೇರುಗಳು ಸಿರಿಯಾಕ್ಕೆ ಪಾವತಿಯಾಗಿದ್ದವು. ನನ್ನವರನ್ನು ಕೊಂದಿದ್ದಕ್ಕೆ. 334 00:29:57,296 --> 00:30:00,633 ಕಥೆ ಮುಗಿಸುತ್ತೇನೆ. ಈಗ ಇದಕ್ಕೆ ಅಟ್ಲಾಂಟಿಕ್ ಬೆಂಬಲ ಕೊಡುತ್ತಿದೆ. 335 00:30:00,716 --> 00:30:04,011 ಅಂದರೆ ಮುಖ್ಯ ವಾರ್ತಾ ಸಂಸ್ಥೆಗಳು ಇದನ್ನು ಪ್ರಸಾರ ಮಾಡುತ್ತವೆ. 336 00:30:04,970 --> 00:30:07,765 ನನಗೆ ಹೆಸರುಗಳು ಬೇಕು. ಲಾಭ ಮಾಡಿಕೊಳ್ಳುವವರು. ಯಾರು? 337 00:30:08,474 --> 00:30:10,059 ನನಗೆ ಕಂಪನಿಗಳು ತಿಳಿದಿವೆ. 338 00:30:10,142 --> 00:30:11,810 ನನಗೆ ಕಂಪನಿಗಳ ಹೆಸರು ಕೊಡು. 339 00:30:13,145 --> 00:30:16,815 ನನಗೆ ಸಮಯ ಬೇಕು, ನಾನು ಫಿನ್ಸೆನ್ ಜೊತೆ ಮಾತಾಡಿ ಶೇರುದಾರರನ್ನು... 340 00:30:16,941 --> 00:30:19,485 -ಇಲ್ಲ. -ಇದೆಲ್ಲವೂ ಕುಸಿದು ಹೋಗುತ್ತದೆ. 341 00:30:19,610 --> 00:30:22,071 ಹಾರ್ನ್, ಎಲ್ಲರೂ, ಅವರನ್ನು ಶೂಲಕ್ಕೇರಿಸುತ್ತಾರೆ. 342 00:30:22,154 --> 00:30:24,323 ಇದು ನಿನ್ನ ಹಾಳಾದ ಕಥೆಯ ಬಗ್ಗೆ ಅಲ್ಲ. 343 00:30:28,160 --> 00:30:28,994 ಹೆಸರುಗಳು. 344 00:30:29,870 --> 00:30:30,704 ಈಗ! 345 00:30:39,421 --> 00:30:40,673 ರೀಸ್! ಬಾ! 346 00:30:54,895 --> 00:30:58,816 -ಈ ಓಣಿಯಲ್ಲೊಂದು ಬಸ್ ಸ್ಟೇಷನ್ ಇದೆ. -ರೀಸ್, ನೀನು ನಾನು ಹೇಳಿದ್ದು ಕೇಳುತ್ತಿಲ್ಲ. 347 00:30:58,899 --> 00:31:02,695 ನನ್ನ ಸ್ನೇಹಿತರು ಹಾಗೂ ಕುಟುಂಬವನ್ನು ಕೊಂದವರು ಜೈಲಿಗೆ ಹೊಗುತ್ತಿಲ್ಲ. 348 00:31:03,737 --> 00:31:04,947 ಸ್ವಚ್ಛ ಮಾಡಿಕೋ. 349 00:31:05,030 --> 00:31:07,241 ಇನ್ನೂ ಕೊಲೆ ಮಾಡಿದರೆ, ಕಥೆ ಸಾಯುತ್ತದೆ. 350 00:31:07,324 --> 00:31:09,702 ಹಾರ್ನ್, ಎಲ್ಲರೂ, ಯಾರೂ ಕೇರ್ ಮಾಡುವುದಿಲ್ಲ! 351 00:31:09,785 --> 00:31:13,289 ವಾರ್ತೆಯಲ್ಲಿ ನಿನ್ನ ಮುಖ ಇರುತ್ತದೆ! ಭಯೋತ್ಪಾದಕ ಎಂದುಕೊಳ್ಳುತ್ತಾರೆ.. 352 00:31:13,372 --> 00:31:16,667 ಸ್ಯಾನ್ ಫ್ರಾನ್ಸಿಸ್ಕೋ ಬಿಟ್ಟುಬಿಡು ಹಾರ್ನ್ ನಿನ್ನ ಕೊಲ್ಲುತ್ತಾನೆ. 353 00:31:16,792 --> 00:31:19,920 ನೀನು ಮತ್ತೆ ಯುದ್ಧಭೂಮಿಗೆ ಬಂದರೆ ಅದು ನನ್ನ ತಪ್ಪಲ್ಲ. 354 00:31:52,536 --> 00:31:55,497 ನನ್ನನ್ನು ಎಬ್ಬಿಸಲೆಂದೇ ಕಾಲ್ ಮಾಡುತ್ತೀಯಾ ಅಂತ ಗೊತ್ತು. 355 00:31:55,581 --> 00:31:59,710 ಹೌದು, ಸಾರಿ ಬ್ರದರ್, ನಿನಗೆ ಫಿನ್ಸೆನ್ಗೆ ಪ್ರವೇಶ ಇದೆಯಾ? 356 00:31:59,793 --> 00:32:01,128 ಪಡೆಯಬಹುದು. 357 00:32:01,211 --> 00:32:03,839 ಒಂದು ಪಟ್ಟಿ ಕಳಿಸುತ್ತೇನೆ, ಕ್ಯಾಪ್ ಟೇಬಲ್, ಬೆನ್. 358 00:32:03,922 --> 00:32:07,760 ಆರ್ಡಿ-4895ರಿಂದ ಲಾಭ ಪಡೆದ ಹಾರ್ನ್ನ ನೆಟ್ವರ್ಕ್ನಲ್ಲಿರುವ ಎಲ್ಲರೂ. 359 00:32:08,385 --> 00:32:10,888 ಶೆಲ್ ಕಂಪನಿಗಳು. ಹೆಸರು ಕೊಡಬಹುದಾ? 360 00:32:10,971 --> 00:32:13,724 ನಾವು ಉಪಕೆಲಸವನ್ನು ದಾಟಿ ಹೋಗುತ್ತಿದ್ದೇವೆ. 361 00:32:14,850 --> 00:32:17,978 ಅದನ್ನು ನಾನು ನಿರ್ಧರಿಸುತ್ತೇನೆ, ಜನರು ಪ್ರಶ್ನೆ ಕೇಳುತ್ತಾರೆ. 362 00:32:18,812 --> 00:32:20,397 ಹೆಸರಗಳನ್ನು ಕೊಡುತ್ತೀಯಾ? 363 00:32:25,152 --> 00:32:26,195 ಕಳಿಸು. 364 00:32:29,114 --> 00:32:30,240 ಅಯ್ಯೋ. 365 00:32:31,617 --> 00:32:34,495 ಇದರಲ್ಲಿ ಯಾರೂ "ಸೋಲು" ಅನ್ನೋ ಪದ ಬಳಸುವುದಿಲ್ಲ. 366 00:32:34,578 --> 00:32:37,206 ಸೆನೇಟರ್ ಪ್ರಯರ್ ಇಲ್ಲದೇ ಬಂಡಿಗಳನ್ನು ಸುತ್ತುಹಾಕೋಣ. 367 00:32:37,289 --> 00:32:38,916 ಹೊಸ ಬಜೆಟ್ ಮತ್ತೆ ಪಡೆಯೋಣ. 368 00:32:38,999 --> 00:32:41,919 ನಿಮಗೆ ಲಾರೆನ್ ಗೊತ್ತು. ಅವಳು ಹೊಡೆತ ತಿನ್ನುವುದಿಲ್ಲ. 369 00:32:42,002 --> 00:32:43,128 ಸುಮ್ಮನೇ ಇರು. 370 00:32:44,463 --> 00:32:46,340 ಏನಾದರೂ ಇದ್ದಲ್ಲಿ, ಅವಳು... 371 00:32:46,423 --> 00:32:50,094 ಎಕ್ಸ್ಕ್ಯೂಸ್ ಮೀ, ನಾನು ಮಾಡಬೇಕಾದ ಒಂದು ಕೆಲಸ ಇದೆ. 372 00:33:18,831 --> 00:33:20,374 ಇದಾ ಬೇಕಿರೋದು, ರಿಚರ್ಡ್? 373 00:33:22,668 --> 00:33:27,214 ಪೆಂಟಗಾನ್ನಲ್ಲಿ ಕ್ರಿಪ್ಟೆಕ್ಸ್ ಫೋನ್ಗಳು ಸಾಮಾನ್ಯ, ನಮ್ಮ ನೆಟ್ವರ್ಕ್ನಲ್ಲಿ ನಡೆದರೆ ಮಾತ್ರ. 374 00:33:27,297 --> 00:33:30,134 ನೀವು ವಕೀಲರನ್ನು ಕೇಳಬಹುದು, ಅವರೂ ಇದನ್ನೇ ಹೇಳುತ್ತಾರೆ. 375 00:33:30,217 --> 00:33:31,635 ನೀವು ಸಹಕಾರ ನೀಡಬೇಕು. 376 00:33:31,719 --> 00:33:35,889 ನಾನು ಏಜೆಂಟ್ ಆಜಾದ್, ಡಿಸಿಐಎಸ್. 377 00:33:35,973 --> 00:33:39,893 ಅವರು ಹಾರ್ನ್ರ ಪಾವತಿಗಳನ್ನು ನಿಮ್ಮ ತಾಯಿಯ ಹೆಸರಿನಲ್ಲಿದ್ದ ಖಾತೆಗೆ ಹಾಕಿದರು. 378 00:33:39,977 --> 00:33:42,646 -ಇದು ಎಷ್ಟು ದಿನ ನಡೆಯಿತು? -ಸುಮಾರು 2 ವರ್ಷ, ಮೇಡಮ್. 379 00:33:42,730 --> 00:33:47,609 ವಿಚಿತ್ರವಾಗಿದೆ, ಯಾಕಂದ್ರೆ ನಾನು 2014ರಲ್ಲಿ ಮ್ಯಾಗಿಯ ಶವಸಂಸ್ಕಾರಕ್ಕೆ ಹೋಗಿದ್ದೆ. 380 00:33:51,405 --> 00:33:52,865 ಏನು ನಿರೀಕ್ಷಿಸುತ್ತಿದ್ದೆ? 381 00:33:54,408 --> 00:33:57,619 ನೀವು $700 ಬಿಲಿಯನ್ ಬಜೆಟ್ ಅನ್ನು ಬದಲಾಯಿಸುತ್ತಿದ್ದಿರಿ. 382 00:33:57,703 --> 00:34:00,122 ಅದು ನನ್ನ ಕೆಲಸ, ರಿಚರ್ಡ್. 383 00:34:01,582 --> 00:34:04,710 ಲೋರೇನ್, ಡೈವೋರ್ಸ್ನಲ್ಲಿ ಜೆಸಿಕಾ ಮೋಸ ಮಾಡಿದ್ದು ಗೊತ್ತಲ್ಲ. 384 00:34:04,793 --> 00:34:09,923 ನೀನು ನನಗೆ ಮಾಡಿದಷ್ಟೇ ದಡ್ಡತನದಿಂದ ಹಾರ್ನ್ಗೂ ಕೆಲಸ ಮಾಡು ಹೇಡಿ ಬೋಳೀಮಗನೇ! 385 00:34:11,592 --> 00:34:14,136 ಆದರೆ ನಿನ್ನನ್ನು ಒಂದು ಸಂದೇಶ ಕಳಿಸಲು ಬಳಸುತ್ತೇವೆ. 386 00:34:15,471 --> 00:34:17,139 ನಾನು ಎರಡೂ ಬದಿ ಕೆಲಸ ಮಾಡಬೇಕಾ? 387 00:34:21,810 --> 00:34:22,895 ಸರಿ. 388 00:34:23,729 --> 00:34:24,730 ಮಾಡುತ್ತೇನೆ. 389 00:34:25,647 --> 00:34:27,608 ನಾನು ನನ್ನ ವಕೀಲರ ಜೊತೆ ಮಾತಾಡಬೇಕು. 390 00:34:27,691 --> 00:34:32,571 ಅಕ್ಷರಶಃ ಅಲ್ಲ, ಆದರೆ ನಾವು ನಿನಗೆ ಏನೇ ಮಾಡಿದರೂ ಅದೊಂದು ಸಂದೇಶ ಕಳಿಸುತ್ತದೆ. 391 00:34:33,197 --> 00:34:35,073 ಹಾರ್ನ್ಗೆ ಸೈನಿಕನಾಗುವುದು ಇಷ್ಟ. 392 00:34:35,908 --> 00:34:37,326 ಅವನಿಗೆ ಯುದ್ಧ ಸಿಗುತ್ತಿದೆ. 393 00:34:58,055 --> 00:35:01,600 ವಾರ್ತೆ - ಪ್ಲೇನೋ ಇಂಟರ್ನ್ಯಾಷನಲ್ ಹಾಗೂ ನ್ಯೂಬೆಲ್ಲಮ್ ಬೃಹತ್-ಒಪ್ಪಂದದ ಹೊಸ್ತಿಲಲ್ಲಿ 394 00:35:25,249 --> 00:35:28,836 ಅನುಮಾನಿಸಿದ ಹೇಸರು ಅಲ್ಲಿದ್ದವು. ಮಾರ್ಕಸ್ ಬಾಯ್ಕಿನ್, ಸೌಲ್ ಆಗ್ನನ್, 395 00:35:28,919 --> 00:35:30,838 ಇಬ್ಬರಿಗೂ ಕಂಪನಿಯಲ್ಲಿ ಪಾಲಿತ್ತು. 396 00:35:31,755 --> 00:35:35,259 ಮುಂದಿನವುಗಳು ಬರುವ ಮೊದಲು ಕುಳಿತುಕೋ. 397 00:35:36,468 --> 00:35:38,804 ನನ್ನವರು ಎರಡು ಬಾರಿ ಧೃಢೀಕರಿಸಿದ್ದಾರೆ. 398 00:35:40,264 --> 00:35:42,349 ಏಕೆಂದರೆ ಈ ಹೆಸರುಗಳು... 399 00:35:43,350 --> 00:35:44,643 ಎಲ್ಲವು ಬದಲಿಸುತ್ತವೆ. 400 00:35:46,520 --> 00:35:48,063 ಬಾಯಿ ಬಿಡು, ಬೆನ್. 401 00:36:06,748 --> 00:36:07,958 ಅದು ಎಡ್ಮಿರಲ್. 402 00:36:10,168 --> 00:36:11,795 ಏನ್ ಹೇಳ್ತಾ ಇದೀಯಾ? 403 00:36:13,797 --> 00:36:15,674 ಪಿಲ್ಲರ್ ಹೆಸರು ಟೇಬಲ್ನಲ್ಲಿತ್ತು. 404 00:36:16,633 --> 00:36:19,803 ಹೋವಾರ್ಡ್ನದ್ದೂ ಕೂಡ. ಮತ್ತೆ ಕಮಾಂಡರ್ ಕಾಕ್ಸ್. 405 00:36:23,056 --> 00:36:24,182 ಅದು ವಾರ್ಕಾಮ್ 406 00:36:27,019 --> 00:36:28,770 ಬೋಳೀಮಕ್ಕಳು. 407 00:36:31,857 --> 00:36:33,275 ಅವರ ಹತ್ರ ಎರಡೂ ದಾರಗಳಿವೆ. 408 00:36:34,151 --> 00:36:38,196 ವಿಚಿತ್ರವಾಗಿದೆ. ಎಡ್ಮಿರಲ್, ನಿನ್ನ ಕಮಾಂಡ್, ಲಾರೆನ್ ಮತ್ತೆ ಲ್ಯೂಸಿನ ಕೊಂದ್ರಾ? 409 00:36:42,910 --> 00:36:43,869 ಯಾಕೆ? 410 00:36:44,620 --> 00:36:46,121 ಅವರೆಲ್ಲರೂ ಮಾಡಿದ ಕಾರಣಕ್ಕೇ. 411 00:36:49,458 --> 00:36:52,044 ಅವರು ಅದರಿಂದ ಪಾರಾಗಬಹುದು ಅಂತ ಅಂದುಕೊಂಡಿದ್ದರು. 412 00:36:55,964 --> 00:36:58,592 ನಾನು ನಿನಗೊಂದು ಶಾಪಿಂಗ್ ಲಿಸ್ಟ್ ಕೊಡ್ತೀನಿ. ಲಿಜ್. 413 00:36:58,675 --> 00:37:00,135 ರಾಸಾಯನಿಕ ಸಾಧನ. 414 00:37:00,218 --> 00:37:02,220 ಕೆಲವು ಕ್ರೆಗ್ಸ್ ಲಿಸ್ಟಲ್ಲಿ ನೋಡಬಹುದು. 415 00:37:02,304 --> 00:37:05,515 ಹೈ ಸ್ಕೂಲ್ನಲ್ಲಿರುವ ಹುಡುಗನಿಗೆ ವಿಜ್ಞಾನದ ಹುಚ್ಚಿದೆ ಅನ್ನು. 416 00:37:05,599 --> 00:37:09,102 ಬೇರೆ ಎಲ್ಲವನ್ನೂ, ವಿಭಿನ್ನ ಅಂಗಡಿಗಳು, ನಗರಗಳಲ್ಲಿ ಹರಡು. 417 00:37:09,186 --> 00:37:11,188 ಕ್ಯಾಶ್ ಪಾವತಿ ಮಾಡು. 418 00:37:11,271 --> 00:37:13,774 ಮಾರ್ಕೋನಿಂದ ಸಾಕಷ್ಟು ಉಳಿದಿರಬೇಕು. 419 00:37:13,857 --> 00:37:16,193 ನಾವು ನಿಜವಾಗಿಯೂ ಬಾಂಬ್ ನಿರ್ಮಿಸುತ್ತೇವಾ? 420 00:37:16,276 --> 00:37:18,195 ನಾವು ಇಎಫ್ಪಿ ನಿರ್ಮಿಸುತ್ತೇವೆ. 421 00:37:19,821 --> 00:37:24,493 ಹೇಯ್, ಒಂದು ನಿಮಿಷ ನಿಲ್ಲಿ. ನಡೆಯುತ್ತಿರುವುದನ್ನು ಅರ್ಥ ಮಾಡಿಕೊಳ್ಳಿ... 422 00:37:24,576 --> 00:37:26,119 ಲಿಜ್. ನನಗೆ ಸಮಯವಿಲ್ಲ. 423 00:37:26,203 --> 00:37:29,539 ಹಾಗಾದರೆ ಬೆನ್ನ ಕರೆಯೋಣ. ಇದರ ಬಗ್ಗೆ ವಿಚಾರ ಮಾಡೋಣ... 424 00:37:29,623 --> 00:37:31,041 ಇಲ್ಲಿ ಕೇಳು! 425 00:37:31,124 --> 00:37:33,502 ನಾನು ನಜಾಫ್ನಲ್ಲಿ ನಿನಗಾಗಿ ಬಂದಾಗ... 426 00:37:34,461 --> 00:37:36,588 ಸರೀನಾ? ನಾವು ಚಿಂತಿಸಲಿಲ್ಲ. 427 00:37:37,130 --> 00:37:40,300 -ನೀನೂ ಹಾಗೆ ಮಾಡಬೇಡ! -ಬೆನ್, ಬೂಜರ್, ಡಾನಿ. 428 00:37:40,384 --> 00:37:41,760 ಅದು ಸರಿ ಅಂತ ಗೊತ್ತಿತ್ತು. 429 00:37:42,469 --> 00:37:45,180 ಹಾರ್ನ್ನಿಂದ ಅವರಲ್ಲಿ ಇಬ್ಬರು ಸತ್ತಿದ್ದಾರೆ. 430 00:37:47,975 --> 00:37:51,603 ಡಾನಿ? ದಾಣಿ ಮಿಚೆಲ್ ಬಗ್ಗೆ ಮಾತಾಡುತ್ತಿದ್ದೀಯಾ? 431 00:37:52,396 --> 00:37:56,692 ಡಾನಿ ನಜಾಫ್ನಲ್ಲೂ ಇರಲಿಲ್ಲ ರೀಸ್. ಆ ಹುಡುಗ ಶಾಲೆಯಲ್ಲಿ 07ನೇ ಕ್ಲಾಸ್ನಲ್ಲಿದ್ದ. 432 00:37:56,775 --> 00:37:58,235 ಅವನು ರೇಫ್ ಹೇಸ್ಟಿಂಗ್ಸ್. 433 00:38:12,666 --> 00:38:17,087 ಸರಿ. ಸರಿ. ನನ್ನ ನೆನಪು ಎಕ್ಕುಟ್ಟೋಗಿದೆ. 434 00:38:18,088 --> 00:38:22,426 ಏನೂ ಬದಲಾಗಲ್ಲ. ನಮ್ಮ ಹತ್ತಿರ ಹೆಸರಿದೆ. ಅವರನ್ನು ಸಜೀವವಾಗಿ ಹಿಡಿಯಬೇಕೆಂದಿಲ್ಲ. 435 00:38:26,513 --> 00:38:28,515 ಒಂದು ಕ್ಷಣ ಕೇಳುತ್ತೀಯಾ? 436 00:38:28,598 --> 00:38:30,809 ಸ್ವಲ್ಪ ನನ್ನ ನೋಡುತ್ತೀಯಾ? 437 00:38:30,892 --> 00:38:34,104 ನೀನು ಆನ್ನು ಅನುಭವಿಸುತ್ತಿದ್ದೀಯಾ, ಅದರ ಮಧ್ಯ ಇದೀಯಾ ಅಂತ 438 00:38:34,187 --> 00:38:37,357 ನಂಗೊತ್ತು, ನಾನು ನಿನ್ನ ಜೊತೆ ಇದೀನಿ. ನಂಗೂ ಹಾರ್ನ್ ಸಾಯಬೇಕು. 439 00:38:37,441 --> 00:38:39,693 ಆದರೆ ನಾಗರಿಕರನ್ನು ಕೊಲ್ಲೋದು ನನಗಿಷ್ಟ ಇಲ್ಲ 440 00:38:39,776 --> 00:38:42,320 ಅದು ಭಾನುವಾರದ ನಡಿಗೆಗೆ ತಪ್ಪು ಸಮಯವಾಗಿತ್ತು. 441 00:38:42,404 --> 00:38:44,281 ನಮ್ಮ ಹೋರಾಟ ಅವರ ವಿರುದ್ಧ ಅಲ್ಲ. 442 00:38:47,034 --> 00:38:49,578 ನೀನು ಹೇಳುವುದನ್ನು ನಾವು ಕೇಳಬೇಕು. ಅರ್ಥ ಆಯ್ತಾ? 443 00:38:52,831 --> 00:38:53,832 ಅರ್ಥ ಆಯ್ತು. 444 00:38:59,463 --> 00:39:03,341 ಇಎಫ್ಪಿಗಳು ತುಂಬಾ ನಿಖರವಾಗಿವೆ. 445 00:39:07,012 --> 00:39:08,597 ಯಾವುದೇ ನಾಗರಿಕ ಅವಘಢಗಳಿಲ್ಲ. 446 00:39:14,019 --> 00:39:15,395 ನೀನು ಇದನ್ನು ಮಾಡುತ್ತೀಯಾ? 447 00:40:53,451 --> 00:40:57,122 ಹದ್ದಿನ ಮೇಲೆ ಕಣ್ಣಿಟ್ಟಿರು. ಪಡೆ ಇನ್ನೂ ಗೂಡಿನಲ್ಲಿದೆ. 448 00:40:57,789 --> 00:41:01,084 ಅರ್ಧ ಸ್ಯಾನ್ ಪ್ರಾನ್ಸಿಸ್ಕೋ ಕೂಡ. ನಿನ್ ಬಳಿ ಬಹಳಷ್ಟು ಬೋಗಿಗಳಿವೆ. 449 00:41:03,336 --> 00:41:05,172 ಅವು ಸ್ಫೋಟದಿಂದ ದೂರ ಉಳಿಯುತ್ತವೆ. 450 00:41:06,131 --> 00:41:07,340 ಹಾಗಿಲ್ಲದಿದ್ದಲ್ಲಿ? 451 00:41:08,842 --> 00:41:09,718 ರೀಸ್? 452 00:41:10,552 --> 00:41:12,888 ಡ್ರೈವ್ ಮಾಡುತ್ತಿರು. ಬೇಡ. ಇದು ನಡೆಯುತ್ತದೆ. 453 00:41:17,100 --> 00:41:20,729 ನಗರದಲ್ಲಿನ ಪ್ರತೀ ನ್ಯೂಸ್ ನೆಟ್ವರ್ಕ್ಗೂ ಅನಾಮಧೇಯ ಸುದ್ದಿ ಬಂತು. 454 00:41:20,812 --> 00:41:25,025 ಮೈಕ್ ಟೆಡೆಸ್ಕೋ ಹಾಗೂ 2 ಟಾಲೋಸ್ ಆಪರೇಟರ್ಗಳನ್ನು ಬಾರ್ಟ್ ಸ್ಟೇಷನ್ನಲ್ಲಿ ಕೊಂದರು. 455 00:41:30,322 --> 00:41:33,867 ಎಸ್ಎಫ್ಪಿಡಿಗೆ ಕರೆ ಮಾಡು, ಯೂನಿಟ್ಗಳನ್ನ ಕರೆಸು. ಎಲ್ಲರ ಫೋಟೋ ಬೇಕು. 456 00:41:33,950 --> 00:41:36,703 -ವಾಹನಗಳಿಗೆ ಟ್ಯಾಗ್ ನಡೆಸು. ಏನೋ ನಡೀತಿದೆ. -ಸರಿ ಸರ್. 457 00:41:37,954 --> 00:41:40,081 ಪ್ಲಾನೋ ಒಂದು ತಾಸಿನಲ್ಲಿ 18% ಕುಸಿದಿದೆ. 458 00:41:40,165 --> 00:41:42,417 -ಏನೋ ಮೋಸವಿರಬಹುದಾ? -ಇರಲೇಬೇಕು. 459 00:42:12,781 --> 00:42:17,327 -ಮಿ.ಹಾರ್ನ್, ಟೆಡೆಸ್ಕೋ ಕೊಲೆಯಾದರಾ? -ಇದು ಪ್ಲಾನೋದ ಸ್ವಾಧೀನ ಯೋಜನೆಯನ್ನ ಭಾಧಿಸುತ್ತಾ? 460 00:42:17,410 --> 00:42:21,206 ಕೆಲವೇ ವಾರಗಳಲ್ಲಿ ಇಬ್ಬರು ಸಹಯೋಗಿಗಳು ಸತ್ತಿದ್ದಾರೆ. ನೀವೇನು ಹೇಳ್ತೀರಾ? 461 00:42:25,085 --> 00:42:29,881 ನಿಮ್ಮೆಲ್ಲರ ಹಾಗೇ ನನಗೂ ಮೈಕ್ ಬಗ್ಗೆ ಇವತ್ತು ಬೆಳಿಗ್ಗೆನೇ ತಿಳೀತು. ನನಗೆ ಆಘಾತವಾಗಿದೆ. 462 00:42:30,715 --> 00:42:32,801 ಮೈಕ್ ಒಬ್ಬ ನಿಜವಾದ ಸ್ನೇಹಿತ, ದಾರ್ಶನಿಕ. 463 00:42:32,884 --> 00:42:34,719 ಅವನಿಂದ ನ್ಯೂಬೆಲಂನಲ್ಲಿ ಹೂಡಿಕೆ ಮಾಡಿದೆ. 464 00:42:35,303 --> 00:42:38,932 ಸೌಲ್ ಬಗ್ಗೆ ನಾನು ಏನು ಹೇಳಬಹುದೆಂದು ನನಗೆ ಗೊತ್ತಿಲ್ಲ. 465 00:42:39,015 --> 00:42:43,353 ಆದರೆ ಮಾಜಿ ನೇವಿ ಸೀಲ್ ಜೇಮ್ಸ್ ರೀಸ್ ಕೈವಾಡ ನನ್ನ ಸಹೋದ್ಯೋಗಿಯ ಸಾವಿನಲ್ಲಿ ಇತ್ತೆಂದು 466 00:42:43,436 --> 00:42:45,605 ನನಗೆ ಇತ್ತೀಚಿಗೆ ತಿಳಿದುಬಂತು. 467 00:42:47,065 --> 00:42:49,150 ಹೌದು, ಸಾಧ್ಯವಾದಷ್ಟೂ ಕಳಿಸಿ. 468 00:42:50,193 --> 00:42:52,112 ಸ್ವಾಟ್ ಗೆ ತಯಾರಾಗಿರಲು ಹೇಳಿ. 469 00:42:53,196 --> 00:42:55,448 ನಾನು ತಮಾಷೆ ಮಾಡುತ್ತಿದ್ದರೆ ಚೆನ್ನಾಗಿತ್ತು. 470 00:42:57,909 --> 00:43:00,078 ಪಿಡಿ ಬರುತ್ತಿದೆ. ಆರ್ ನಿಮಿಷಗಳಲ್ಲಿ. 471 00:43:04,416 --> 00:43:05,417 ನನ್ನ ಜೊತೆ. 472 00:43:06,668 --> 00:43:07,961 ಈಗ. 473 00:43:13,591 --> 00:43:17,095 ಈಗ, ಕಮಾಂಡರ್ ರೀಸ್ ಯುದ್ಧದ ಆಘಾತಕ್ಕೆ ಸಂಬಂಧಿಸಿದ ಒಂದು ರೀತಿಯ ಮಾನಸಿಕ 474 00:43:17,178 --> 00:43:18,763 ವಿರಾಮವನ್ನು ಹೊಂದಿದ್ದರು. 475 00:43:19,180 --> 00:43:21,725 ಎಚ್ಚರಿಕೆ ಬಗ್ಗೆ ಚಿಂತಿಸದಿದ್ದರೂ, ಮೈಕ್ ಆದ್ರಿಂದ, 476 00:43:21,808 --> 00:43:23,810 ಚಿಂತಿಸಬೇಕಾಗಿತ್ತೇನೋ. 477 00:43:27,689 --> 00:43:28,690 ಕರ್ಮ! 478 00:43:28,773 --> 00:43:29,774 ಯಾಕಿಷ್ಟು ಹೊತ್ತು? 479 00:43:30,650 --> 00:43:31,735 ಬೇಗ! 480 00:43:35,613 --> 00:43:39,034 ಕಾನೂನು ಸಂಸ್ಥೆಗಳು ರೀಸ್ ಉದ್ದೇಶದ ಬಗ್ಗೆ ಏನಾದರೂ ಸೂಚನೆ ನೀಡಿವೆಯೇ? 481 00:43:39,117 --> 00:43:41,077 ಟೆಡೆಸ್ಕೋ ಜೊತೆ ಅವರ ಸಂಬಂಧವೇನು? 482 00:43:41,161 --> 00:43:45,707 ನಾನು ಹೇಳೋದಿಷ್ಟೇ, ಜೇಮ್ಸ್ ರೀಸ್ ಮಾನಸಿಕವಾಗಿ, ಭಾವನಾತ್ಮಕವಾಗಿ ಅಸ್ವಸ್ಥರಾಗಿದ್ದಾರೆ. 483 00:43:46,833 --> 00:43:50,545 ಇದು ಒಬ್ಬ ವೀರ ಯೋಧನ ದುರಂತಮಯ, ಆದರೆ ಆಶ್ಚರ್ಯವಾಗದ ಪರಿಸ್ಥಿತಿ. 484 00:43:55,508 --> 00:43:56,551 ನಿಲ್ಲಿ! 485 00:43:57,093 --> 00:43:59,512 -ಅಲ್ಲಾಡಬೇಡಿ! -ನಾನು ಅಲ್ಲಾಡುತ್ತಿಲ್ಲ! 486 00:43:59,596 --> 00:44:01,806 ಬೇರೆ ಏನೇ ಇದ್ದರೂ ಎಫ್ಬಿಐ ಅನ್ನು ಕೇಳಿ. 487 00:44:13,276 --> 00:44:16,696 ಜೇಮ್ಸ್ ರೀಸ್ ಮೈಕ್ ಟೆಡೆಸ್ಕೋನ ಕೊಂದಿಲ್ಲ, ಅದು ನೀವು, ನಿಮ್ಮವರು. 488 00:44:19,282 --> 00:44:20,158 ಅಯ್ಯೋ. 489 00:44:21,785 --> 00:44:25,163 ಟಾಲೋಸ್ ಸೆಕ್ಯೂರಿಟಿ ಕೊಡುತ್ತಾರೆ. ಅವರು ಕೊಲೆಗಾರರಲ್ಲ. 490 00:44:25,830 --> 00:44:27,457 ನಿನ್ ಬಗ್ಗೆ ನಂಗ್ ಗೊತ್ತಿಲ್ವಾ? 491 00:44:27,540 --> 00:44:29,459 ನಡಿ, ಚಲಿಸು. 492 00:44:37,926 --> 00:44:41,012 ಆರ್ಡಿ-4895ನ್ನು ನೇವಿ ಸೀಲ್ಗಳ ಮೇಲೆ ಪರೀಕ್ಷಿಸಿದ್ದೀರಿ. 493 00:44:41,096 --> 00:44:44,766 ಆ ಪರೀಕ್ಷೆಗಳಿಂದ ಗಡ್ಡೆಗಳಾಗಿದ್ದಕ್ಕೆ ಅವರನ್ನ ಕೊಂದಿರಿ ಅಂತನೂ ನಂಗೊತ್ತು. 494 00:44:45,433 --> 00:44:48,937 ಇದು ನನ್ನ ಕಥೆ. ನೀವು ನನ್ನ ಕೊಂದರೆ ಎಲ್ಲರಿಗೂ ನಿಜ ತಿಳಿಯುತ್ತದೆ. 495 00:44:49,020 --> 00:44:51,106 ನಿಮ್ಮ ಹಾಳಾದ ಡೀಲ್ ಬಿದ್ದುಹೋಗುತ್ತದೆ. 496 00:44:51,815 --> 00:44:53,024 ಚಲಿಸು. ಹಾಳಾಗ್ಲಿ. 497 00:44:58,446 --> 00:45:01,074 ನಿನ್ನೆ ಡೀಲ್ ಮುಗೀತು, ಮಿಸ್. ಬುರಾನೆಕ್. 498 00:45:01,157 --> 00:45:05,870 ಮೈಕ್ಗೆ ಹೀಗಾಗಿದ್ದಕ್ಕೆ ಅದನ್ನ ಈವತ್ತೇ ಹೇಳೋದು ಚೆನ್ನಾಗಿರಲ್ಲ ಅನ್ನಿಸಿತು. 499 00:45:26,433 --> 00:45:27,976 ಡ್ರೈವ್! ಡ್ರೈವ್! 500 00:45:29,978 --> 00:45:31,229 ಚಲಿಸು! ಚಲಿಸು! 501 00:45:59,924 --> 00:46:01,134 ಏಳು! 502 00:46:02,802 --> 00:46:05,054 ಪರಿಧಿ! ಮುಖ್ಯವಾಗಿದ್ದಕ್ಕೆ ಬಂದಿದ್ದೇವೆ! 503 00:46:09,767 --> 00:46:10,894 ಬಾ! 504 00:46:12,729 --> 00:46:14,814 ನಡಿ! ನಡಿ! ನಡಿ! 505 00:46:33,583 --> 00:46:36,252 ಇದನ್ನ ಹಾಕಿಕೋ. ಇದನ್ನ ಹಾಕಿಕೋ! 506 00:46:36,336 --> 00:46:37,629 ಹುಶಾರಾಗಿರು! 507 00:46:37,712 --> 00:46:40,215 ಕೇಳು, ಹಾಳಾದ ಫ್ಯಾನ್! ಧೈರ್ಯ ತೋರಿಸೋ ಸಮಯ! 508 00:47:06,616 --> 00:47:07,700 ಹೋಗೋ ಸಮಯ, ಏಳು. 509 00:47:31,766 --> 00:47:32,642 ಪ್ಲೀಸ್! 510 00:47:36,563 --> 00:47:38,523 ಪ್ಲೀಸ್, ನಿಲ್ಲಿ! ಪ್ಲೀಸ್! 511 00:48:00,461 --> 00:48:02,672 ಸಿಕ್ಕ, ಲಿಜ಼್. ಝುಲುವಿನ ಸ್ಥಳದಲ್ಲಿ ಸಿಗೋಣ. 512 00:48:02,755 --> 00:48:06,259 -ರೀಸ್, ಎಲ್ಲಿದೀಯಾ? ಏನಾಯ್ತು? -ಝುಲು. 20 ನಿಮಿಷ, ನಡಿ. 513 00:48:07,719 --> 00:48:08,803 ಕಾರ್ನಿಂದ ಕೆಳಗಿಳಿ. 514 00:48:09,971 --> 00:48:10,972 ಚಲಿಸು! 515 00:48:11,973 --> 00:48:12,974 ಸರಿ, ಸರಿ. 516 00:50:19,767 --> 00:50:21,769 ಅನುವಾದಿಸಿದವರು : ರಾಜು