1 00:00:05,965 --> 00:00:07,967 ಈ ಸಂಚಿಕೆಯಲ್ಲಿ ಆತ್ಮಹತ್ಯೆಯನ್ನೊಳಗೊಂಡ ದೃಶ್ಯವಿದೆ. 2 00:00:08,050 --> 00:00:09,927 ವೀಕ್ಷಕರ ವಿವೇಚನೆ ಪಾಲಿಸಿ. 3 00:00:10,136 --> 00:00:12,179 ಈ ಹಿಂದೆ... 4 00:00:12,430 --> 00:00:14,390 ಪ್ರಪಂಚಕ್ಕೆ ಒಂದು ಕ್ರಾಂತಿಯ ಅವಶ್ಯಕತೆ ಇದೆ. 5 00:00:15,266 --> 00:00:17,184 ಮತ್ತು ನೀನು ಅದರ ಧ್ವನಿಯಾಗಲಿರುವೆ. 6 00:00:17,351 --> 00:00:20,354 ನನಗೆ ಅವಳ ಬಗ್ಗೆ ಒಳ್ಳೆಯ ಭಾವನೆ ಇಲ್ಲ. ತೊಂದರೆ ಸೃಷ್ಟಿಸುತ್ತಾಳೆ. 7 00:00:20,438 --> 00:00:23,107 ಇದೇ ಕಣೆ, ಪುಟ್ಟಿ. ಇದೇ ನಿನ್ನ ಕುಟುಂಬ. 8 00:00:23,482 --> 00:00:26,861 ಈವ್, ನನ್ನ ಜಾಗದಲ್ಲಿ ನೀನು ವಿದ್ಯುತ್ ಉಪಯೋಗಿಸುವಂತಿಲ್ಲ. 9 00:00:27,111 --> 00:00:29,321 ಏನು ಮಾಡಬೇಕಂತ ನೀವು ನಮಗೆ ಹೇಳಬೇಕಿಲ್ಲ. 10 00:00:31,782 --> 00:00:35,661 ನಾನು ದ್ವಿಲಿಂಗಿ. ಹಾಗಾಗಿ ಇದನ್ನು ಮಾಡಬಲ್ಲೆ ಅಂದುಕೊಳ್ಳುವೆ. 11 00:00:36,120 --> 00:00:40,374 ಸ್ಕಯಿನ್ ಇರುವ ಜನರನ್ನು ರಕ್ಷಿಸುವುದಕ್ಕಾಗಿ ನಮ್ಮಮ್ಮನ ಜೀವ ಅಪಾಯದಲ್ಲಿದೆ. 12 00:00:40,458 --> 00:00:42,501 -ನಿನ್ನದನ್ನು ಮುಚ್ಚಿಟ್ಟಿರುವೆ. -ನನಗಿದು ಬೇಡ. 13 00:00:45,296 --> 00:00:47,089 -ಏನಿದು? -ಇದು ಅರ್ಧ. 14 00:00:48,883 --> 00:00:50,718 -ಶಾಕ್ ಕೊಡು ಇವನಿಗೆ. -ನನಗೆ ಬೇಕಿಲ್ಲ. 15 00:00:51,093 --> 00:00:52,928 ಎಲ್ಲಾ ಹೆಂಗಸರಿಗೂ ಹೊರಡಲು ಹೇಳಿದರು. 16 00:00:53,137 --> 00:00:54,597 ನಿನ್ನ ಇರಿಸಿಕೊಳ್ಳಬಹುದಂದರು. 17 00:00:56,056 --> 00:00:57,349 ಕದಲಬೇಡ. 18 00:00:57,725 --> 00:00:58,559 ಅದನ್ನು ಕೊಡು. 19 00:01:01,979 --> 00:01:04,064 ನೀವೆಲ್ಲರೂ, ಮುಚ್ಕೊಂಡು ಕೂತ್ಕೊಳ್ಳಿ! 20 00:01:18,287 --> 00:01:21,290 -ಎಷ್ಟು ಬೆಲೆ ಹೇಳುವೆ? -ಒಂದು ಅವಧಿಗೆ £20. ನಗದು ಮಾತ್ರ. 21 00:01:29,840 --> 00:01:31,967 ನೀವೆಲ್ಲರೂ ಅದನ್ನು ಕಲಿಯಬೇಕಂತಿದ್ದೀರಾ? 22 00:01:32,384 --> 00:01:34,011 -ನೀನೇನಾ ರಾಕ್ಸಿ? -ಹೌದು. 23 00:01:34,637 --> 00:01:35,513 20 ಪೌಂಡ್. 24 00:01:39,141 --> 00:01:40,392 ನಿನ್ನ ವಿಡಿಯೋಗಳು ಮಸ್ತಿವೆ. 25 00:01:43,771 --> 00:01:46,023 ಅವನ ಮೀಸೆಗೆ ನೀನು ಕಿಡಿ ಹೊತ್ತಿಸಿದಾಗ… 26 00:01:46,190 --> 00:01:47,566 ಒಬ್ಬರು ದುಡ್ಡು ಕೊಟ್ಟಿಲ್ಲ. 27 00:01:49,860 --> 00:01:50,820 ಯಾರದು? 28 00:01:52,822 --> 00:01:54,657 ಕಿಯರಾ, ಏನು ಮಾಡ್ತಿದ್ದೀಯಾ? ಬಾ. 29 00:01:59,119 --> 00:02:00,287 ಇದು ತುಂಬಾ ದುಬಾರಿ. 30 00:02:00,496 --> 00:02:03,457 ಆಯ್ತು. ಮತ್ತೆ, ಏನು? ಏನನ್ನು ತಿಳಿದುಕೊಳ್ಳಬೇಕು? 31 00:02:06,252 --> 00:02:08,254 ಆಯ್ತು, ಆಯ್ತು, ಆಯ್ತು. 32 00:02:25,020 --> 00:02:26,939 ಸರಿ, ನೀನು. ಹಾಂ, ಬಾ ಇಲ್ಲಿ. 33 00:02:27,064 --> 00:02:28,607 ಓಯ್. ಬಾ ಇಲ್ಲಿ. 34 00:02:30,401 --> 00:02:31,318 ಡಬ್ಬಿ ಪ್ರಯತ್ನಿಸು. 35 00:02:44,206 --> 00:02:46,458 ಇಲ್ಲ. ಏನು ಮಾಡುತ್ತಿರುವೆ? ಕಿಡಿ ಹೊತ್ತಿಸು. 36 00:02:46,667 --> 00:02:49,670 ಅದು ನನ್ನಲ್ಲಿದ್ದ ಮಾತ್ರಕ್ಕೆ ಅದನ್ನು ಬಳಸಲು ಬರುತ್ತೆ ಅಂತಲ್ಲ. 37 00:02:51,255 --> 00:02:53,507 ಸರಿ. ಇದು ಗಾಳವನ್ನು ಎಸೆದಂತೆ. 38 00:02:53,591 --> 00:02:56,343 ನೀವು ಹೊಡೆಯುವಾಗ ಮಾಡುವಂತೆ ಬರುತ್ತೆ. ಕಿಬ್ಬೊಟ್ಟೆಯಿಂದ. 39 00:02:57,136 --> 00:02:58,554 ಇಲ್ಲಿ ಯಾರು ಹೊಡೆದಾಡಿದ್ದೀರಿ? 40 00:02:59,889 --> 00:03:01,223 ನಿಜವಾದ ಹೊಡೆದಾಟ. 41 00:03:02,850 --> 00:03:04,894 ನಿಜವಾಗಿ ಹೊಡೆದಾಡಿದ್ದೇನೆ. ಬಾಯಿ ಮುಚ್ಚು. 42 00:03:04,977 --> 00:03:09,398 ಸರಿ. ಏನಂದ್ರೆ, ಕಣ್ಣಿನಿಂದ ಗುರಿಯಿಡಬೇಕು, ಆದರೆ ಹೃದಯದಿಂದ ಹೊಡೆಯಬೇಕು. 43 00:03:19,700 --> 00:03:21,327 ಸರಿ. ನೀನು. ಬಾ, ಮತ್ತೆ. 44 00:03:25,748 --> 00:03:27,833 ಮತ್ತೊಮ್ಮೆ ಪ್ರಯತ್ನಿಸೋಣ, ಆದರೆ ಚಿಕ್ಕದಾಗಿ. 45 00:03:28,500 --> 00:03:29,376 ಗಮನವಿರಿಸು. 46 00:03:33,964 --> 00:03:35,341 ನಿಜವಾಗಿ ಗಮನವಿರಿಸು. 47 00:03:36,383 --> 00:03:37,384 ಯಾರ ಮೇಲೆ ದ್ವೇಷ? 48 00:03:50,606 --> 00:03:52,024 ನನ್ನಲ್ಲಿ ಶಕ್ತಿ ಇದೆ. 49 00:03:53,359 --> 00:03:58,197 ದಿ ಪವರ್ 50 00:03:59,615 --> 00:04:02,660 ಮೃತನನ್ನು ಪಾಲ್ ಜೋರ್ಡನ್, 26, ಎಂದು ಗುರುತಿಸಲಾಗಿದೆ, 51 00:04:02,743 --> 00:04:04,620 ಪ್ಯೂಜೆಟ್ ರಿಡ್ಜಿನ ನಾಯಿ ನಡೆಸುವವನು. 52 00:04:04,828 --> 00:04:07,665 ಜೋರ್ಡನ್ ಸಾಮಾಜಿಕ ಜಾಲತಾಣದಲ್ಲಿ ಗಾಬರಿಗೊಳಿಸುವ ಸಂದೇಶ ಹಾಕಿ 53 00:04:07,748 --> 00:04:12,044 ಸಿಯಾಟಲ್ನ ಮೇಯರ್ ಮಾರ್ಗೋ ಕ್ಲೆಯರಿ-ಲೋಪೆಜ್ರಿಗೆ ದ್ವೇಷದ ಸಂದೇಶ ಕಳುಹಿಸಿರಬಹುದು. 54 00:04:14,838 --> 00:04:16,590 ತನ್ನ ಸಾವಿಗೆ ಮುಂಚಿನ ದಿನಗಳಲ್ಲಿ, 55 00:04:16,674 --> 00:04:19,343 ಜೋರ್ಡನ್ ಅರ್ಬನ್ಡಾಕ್ಸ್ ಎಂಬ ನಿಗೂಢ 56 00:04:19,426 --> 00:04:23,305 ಸಾಮಾಜಿಕ ಮಾಧ್ಯಮದ ಪ್ರಭಾವಿಯ ಮುಕ್ತ ಹಿಂಬಾಲಕನೆಂದು ನಂಬಲಾಗಿದೆ. 57 00:04:23,472 --> 00:04:26,266 ಅರ್ಬನ್ಡಾಕ್ಸಿನ ನಿಜವಾದ ರೂಪ ನಿಗೂಢವಾಗಿರುವಂತೆಯೇ, 58 00:04:26,350 --> 00:04:29,228 ಈಓಡಿ ಬಗ್ಗೆಯ ಆತನ ನಿಲುವು ದೇಶದಲ್ಲೆಡೆ ಹುಡುಗಿಯರು ಮತ್ತು ಮಹಿಳೆಯರ 59 00:04:29,311 --> 00:04:31,605 ವಿರುದ್ಧ ದ್ವೇಷದ ಅಪರಾಧಗಳು ಹೆಚ್ಚಲು ಕಾರಣವಾಗಿದೆ. 60 00:04:31,772 --> 00:04:35,901 ಎಲ್ಲೆಡೆಯೂ ದುರ್ಬಲ ಮನಸ್ಸುಗಳು, ಯಾವುದೋ ಒಂದಕ್ಕೆ ತಮ್ಮ ಕಾರ್ಯವನ್ನು ತಗುಲಿಹಾಕಲು ನೋಡುತ್ತಿವೆ. 61 00:04:36,527 --> 00:04:38,654 ನಿಜವಾದ ಶಕ್ತಿಯ ಬಗ್ಗೆ ಮಾತನಾಡುತ್ತಿದ್ದೇನೆ. 62 00:04:39,405 --> 00:04:42,533 ಈ ಹುಡುಗಿಯರಿಗೆ ಕಾದಾಡುವುದು ಗೊತ್ತಿಲ್ಲ. ಅವರೇನೂ ಗುಂಡು ತಾಕದಂಥವರಲ್ಲ. 63 00:04:43,158 --> 00:04:47,037 ನಿನ್ನನ್ನು ಈವ್ ಎಂದು ಕರೆದುಕೊಳ್ಳುವೆ. ನಿನ್ನ ಈಡನ್ ತೋಟವನ್ನು ಕಾಪಾಡಿಕೋ. 64 00:04:54,044 --> 00:04:56,839 {\an8}ಅನೇಕ ರಾಜ್ಯಗಳಲ್ಲಿ ಬಹಳಷ್ಟು ಬಂಧನಗಳು ವರದಿಯಾಗಿವೆ, 65 00:04:56,964 --> 00:04:59,717 {\an8}ಇಲ್ಲಿ ಅರ್ಬನ್ಡಾಕ್ಸಿಗೆ ಕೋಟಿಗಟ್ಟಲೆ... 66 00:04:59,800 --> 00:05:01,635 ನಿನಗೆ ಅಂತಹ ಶಕ್ತಿ ಬೇಕು. 67 00:05:13,939 --> 00:05:14,773 ಅಬ್ಬಬ್ಬಾ. 68 00:05:14,857 --> 00:05:18,277 -ನಿನ್ನೊಂದಿಗೆ ದೊಡ್ಡ ಗುಂಪೇ ಇದೆ. -ಅವರಿಲ್ಲದೆ ನಾನೆಲ್ಲಿಗೂ ಹೋಗುವಂತಿಲ್ಲ. 69 00:05:18,360 --> 00:05:20,779 ಶಾಲೆಗೆ ಬರಲು ನಮ್ಮಪ್ಪನೊಂದಿಗೆ ಜಗಳವಾಡಬೇಕಾಯಿತು. 70 00:05:20,863 --> 00:05:24,283 ಛೆ. ನಾನು ವಾರ್ತೆಗಳನ್ನು ನೋಡಿದೆ. ಆ ಹುಚ್ಚ ಮೈಗೆ ಬೆಂಕಿ ಹಚ್ಚಿಕೊಂಡ. 71 00:05:24,491 --> 00:05:26,493 -ಆರಾಮ ಇದ್ದೀಯಾ? -ಚೆನ್ನಾಗಿದ್ದೇನೆ. 72 00:05:26,577 --> 00:05:28,912 ಜನ ನನ್ನನ್ನು ಗುರಾಯಿಸದಿದ್ದರೆ ಸಾಕು. 73 00:05:29,163 --> 00:05:31,040 ನಡೆದಿರುವುದು ದೊಡ್ಡ ಅನಾಹುತ. 74 00:05:31,123 --> 00:05:35,544 ನೀನೀಗ ಸುಮಾರಾಗಿ ಜನಪ್ರಿಯಳು. ನಿಮ್ಮಮ್ಮ ಮುಂದಿನ ಅಧ್ಯಕ್ಷೆ ಆಗುವರು. ನಾನು ಹೇಳುವೆ. 75 00:05:35,627 --> 00:05:36,754 ರಯಾನನ್ನು ನೋಡಿದೆಯಾ? 76 00:05:37,463 --> 00:05:41,133 ಇಲ್ಲ. ಅವನು ಇಲ್ಲಿಗೆ ನೆನ್ನೆಯೂ ಬರಲಿಲ್ಲ. ನೀವಿಬ್ಬರೂ ಜಗಳ ಆಡಿದ್ರಾ? 77 00:05:52,853 --> 00:05:54,188 ಸುಡು, ಚಿನ್ನ, ಸುಡು. 78 00:05:55,814 --> 00:05:57,691 ವಾಕ್ ಸ್ವಾತಂತ್ರ್ಯ. ನನ್ನನ್ನು ಮುಟ್ಟಬೇಡಿ. 79 00:05:57,775 --> 00:06:00,569 -ನನ್ನ ತಂದೆ ಮೊಕದ್ದಮೆ ಹೂಡಲಿದ್ದಾರೆ. ಬಿಡಿ. -ಅವರ ಕರೆಸೋಣ. 80 00:06:00,652 --> 00:06:02,321 -ಹಾಂ. ಹೋಗು ದೂರ. -ನಡಿ. 81 00:06:02,404 --> 00:06:04,740 -ಆರಾಮವಾಗಿದ್ದೀಯಾ? -ಹಾಂ, ಚೆನ್ನಾಗಿದ್ದೇನೆ. 82 00:06:29,098 --> 00:06:32,518 ಮಿ. ಬ್ಲೀಸ್, ತುಂಡೆ ಓಜೋ. 83 00:06:37,106 --> 00:06:38,023 ಕುಳಿತುಕೋ. 84 00:06:40,442 --> 00:06:42,486 ಕಾರ್ಪೇಥಿಯಾಗೆ ಸ್ವಾಗತ, ತುಂಡೆ ಓಜೋ. 85 00:06:44,696 --> 00:06:47,491 ನಿನ್ನ ರಿಯಾಧ್ ವಿಡಿಯೋದಿಂದ ಸಾಕಷ್ಟು ಜನಪ್ರಿಯನಾಗಿರುವೆ. 86 00:06:48,450 --> 00:06:49,284 ಹಾಂ. 87 00:06:50,744 --> 00:06:53,080 ಸರಿಯಾದ ಜಾಗ, ಸರಿಯಾದ ಸಮಯ. ಅದೃಷ್ಟ ಅಷ್ಟೇ. 88 00:06:53,330 --> 00:06:56,792 ಮಹಿಳೆಯರು ಪುರುಷರನ್ನು ಸುಲಭವಾಗಿ ನಿಯಂತ್ರಿಸುವ ಜಾಗಕ್ಕೆ ಯಾರಾದರೂ ಹೋಗಬೇಕು. 89 00:07:00,796 --> 00:07:02,339 ನಿನಗೆ ಆ ಕಣ್ಣಿದೆ, ತುಂಡೆ. 90 00:07:03,006 --> 00:07:04,800 ಇದು ಕೌಶಲ್ಯವೂ ಆಗಬಹುದು. 91 00:07:06,885 --> 00:07:10,514 ಜೊತೆಗೆ, ನಾನಂದುಕೊಳ್ಳುವೆ, ವಿರುದ್ಧ ಲಿಂಗವನ್ನು ಆಕರ್ಷಿಸುವ ಗುಣ? 92 00:07:10,597 --> 00:07:11,473 ನೀವು ಹೇಳಿದಂತೆಯೇ. 93 00:07:13,892 --> 00:07:16,687 ಉತ್ತರದ ನೆಲಮಹಡಿಯಿಂದ ಒಂದು ಗುಂಪಿನ ಹೆಂಗಸರು ತಪ್ಪಿಸಿಕೊಂಡರು, 94 00:07:16,895 --> 00:07:18,689 ಎಷ್ಟೋ ಕಾಲದಿಂದ ಬಂಧಿಸಲ್ಪಟ್ಟಿದ್ದರು. 95 00:07:18,856 --> 00:07:21,984 -ಭಯಗೊಂಡಿದ್ದಾರೆ. -ತಪ್ಪು. ಕೋಪದಲ್ಲಿದ್ದಾರೆ, ಸೇರಿಸ್ಕೋತಿದ್ದಾರೆ. 96 00:07:22,192 --> 00:07:25,195 ಇಲ್ಲಿರುವವಳು ನಾಯಕಿಯಾಗಿ ಉದಯಿಸುತ್ತಿರುವಳು. 97 00:07:27,531 --> 00:07:28,949 ಅವಳ ಹೆಸರು "ಜೋಯಾ". 98 00:07:29,825 --> 00:07:32,828 ನೀನು ಅಲ್ಲಿಗೆ ಹೋಗಿ ಅವರ ಮುಂದಿನ ನಡೆಯನ್ನು ಕಂಡುಹಿಡಿ, 99 00:07:32,911 --> 00:07:34,288 ಈ ಜೋಯಾಳನ್ನು ಭೇಟಿಯಾಗು. 100 00:07:34,371 --> 00:07:37,749 -ನೀವೇ ಹೋಗಬಹುದಲ್ವಾ? -ನಾನು ವಿಕ್ಟರ್ ಮೊಸ್ಕಲೇವ್ ಸಂದರ್ಶನ ಮಾಡಬೇಕು. 101 00:07:39,459 --> 00:07:41,044 ಎಲ್ಲವೂ ವೇಗವಾಗಿ ಜರುಗುತ್ತಿದೆ. 102 00:07:41,128 --> 00:07:43,755 ಈ ಮಹಿಳೆಯರ ಬಳಿ ಇರುವುದು ಮತ್ತೊಂದು ಪಳೆಯುಳಿಕೆಯ ಇಂಧನ. 103 00:07:43,839 --> 00:07:45,966 ಯಾರಾದರೂ ಇದರಿಂದ ದುಡ್ಡು ಮಾಡಲು ನೋಡುತ್ತಾರೆ. 104 00:07:46,425 --> 00:07:48,302 -ಒಂದು ಯುದ್ಧ ನಡೆಯಲಿದೆ. -ಯುದ್ಧವೇ? 105 00:07:49,344 --> 00:07:53,015 ಇಲ್ಲ, ಇಲ್ಲ, ಇಲ್ಲ. ಈ ಈಓಡಿ ಎಲ್ಲವನ್ನೂ ಬದಲಾಯಿಸಲಿದೆ. 106 00:07:54,141 --> 00:07:56,351 ಮುಕ್ತಗೊಂಡು ಮುನ್ನಡೆಯುವ ಮಹಿಳೆಯರು. 107 00:07:56,435 --> 00:07:58,562 ಎಲ್ಲಾ ನಡೆಸುವ ಉತ್ತಮ ವಿಧಾನ ತೋರಿಸಲಿದ್ದಾರೆ. 108 00:07:58,729 --> 00:08:00,606 ಟ್ಯಾಂಕುಗಳಲ್ಲಿ ಸೈನಿಕರನ್ನು ಹುರಿಯುವುದೇ? 109 00:08:03,233 --> 00:08:06,695 ಏನಂತೀಯಾ, ತುಂಡೆ? ಶುರುಮಾಡಿದ್ದನ್ನು ಮುಗಿಸುವೆಯಾ? 110 00:08:13,452 --> 00:08:16,121 ಕಾರ್ಪೇಥಿಯಾ ಮಾನವ ಕಳ್ಳಸಾಗಣೆಯ ವಿಶ್ವ ರಾಜಧಾನಿ. 111 00:08:17,664 --> 00:08:21,627 ತಂಗುದಾಣಗಳಿರುವ ನೆಲಮಾಳಿಗೆಗಳು ಮತ್ತು ಪಾಳುಬಿದ್ದ ಕಟ್ಟಡಗಳಿರುವ ಬಹಳಷ್ಟು ಊರುಗಳಿವೆ, 112 00:08:22,502 --> 00:08:24,922 ಎಲ್ಲರಿಗೂ ಊರುಗಳಲ್ಲಿ ನಡೆಯುವುದು ತಿಳಿದಿತ್ತು, 113 00:08:25,339 --> 00:08:29,593 ಆದರೆ ಮೌನ ವಹಿಸಲು ಅಥವಾ ಬದುಕಿಕೊಳ್ಳಲು ಲಂಚ ಪಡೆದೋ ಅಥವಾ ಜಾಣ ಕುರುಡು ಪಾಲಿಸಿದರು. 114 00:08:30,260 --> 00:08:34,348 ಈಗ ಮಹಿಳೆಯರು ಬಂಧಗಳಿಂದ ಮುಕ್ತರಾಗುತ್ತಾ ಈ ಊರುಗಳನ್ನು ಸುಟ್ಟು ಹಾಕುತ್ತಿದ್ದಾರೆ. 115 00:09:04,336 --> 00:09:05,212 ನಿರಾಶ್ರಿತರು. 116 00:09:06,004 --> 00:09:08,298 ಆ ಕೊಲೆಗಾತಿಯರಿಂದ ತಪ್ಪಿಸಿಕೊಂಡ ಗಂಡಸರು. 117 00:09:24,773 --> 00:09:25,649 ಪ್ರಯತ್ನಿಸು. 118 00:09:49,131 --> 00:09:52,092 ರಸ್ತೆ ಮೇಲೆ ಹುಷಾರು. ಮಹಿಳೆಯರು ಗಂಡಸರನ್ನು ಕಾರಿನಿಂದ ಎಳೀತಿದ್ದಾರೆ. 119 00:09:53,135 --> 00:09:54,678 ಅವರು ಯಾರನ್ನೂ ಬಂಧಿಸುವುದಿಲ್ಲ. 120 00:09:57,389 --> 00:09:58,932 ಉತ್ತರದಲ್ಲಿ ನಿನಗೇನು ಬೇಕು? 121 00:10:01,059 --> 00:10:02,060 ನಾನೊಬ್ಬ ಪತ್ರಕರ್ತ. 122 00:10:04,730 --> 00:10:06,857 ಜೋಯಾ ಎಂಬ ಮಹಿಳೆಯನ್ನು ಹುಡುಕುತ್ತಿರುವೆ. 123 00:10:11,111 --> 00:10:13,655 "ಜನರಲ್ ಜೋಯಾ" ಎಂದು ಕರೆದುಕೊಳ್ಳುತ್ತಾಳೆ. 124 00:10:14,740 --> 00:10:15,782 ಮುಕ್ತಗೊಂಡ ಸೂಳೆ. 125 00:10:16,450 --> 00:10:19,786 ಈಗ ಕಾಲು ಮುಚ್ಚಿ, ದೊಡ್ಡ ಕ್ರಾಂತಿಕಾರಿಯಂತೆ ಆಡ್ತಾಳೆ. 126 00:10:24,374 --> 00:10:25,334 ಏನಂದ? 127 00:10:26,126 --> 00:10:27,377 "ಅವಳಿಗೆ ಗುಂಡು ಹೊಡಿ." 128 00:10:55,655 --> 00:10:59,451 ಎಲ್ಲಾ ಮಹಿಳೆಯರಿಗೆ ಟ್ಯಾಗ್ ವ್ಯವಸ್ಥೆ ಮಾಡಲು ಮಾಸ್ಕೊ ತಯಾರಿದೆ. 129 00:11:00,118 --> 00:11:02,037 ಇಡೀ ದೇಶಕ್ಕಾ? ಅದಕ್ಕಾಗುವ ಖರ್ಚು… 130 00:11:02,120 --> 00:11:05,540 ಕೋಟಿಗಳು. ಅವರನ್ನೆಲ್ಲ ಬಂಧಿಸಲು ಬೇಕಾಗುವ ಸೆರೆಮನೆಗಳನ್ನು 131 00:11:05,624 --> 00:11:07,250 ಕಟ್ಟುವ ಖರ್ಚಿಗಿಂತ ಕಡಿಮೆಯೇ. 132 00:11:08,418 --> 00:11:11,088 ವಿದ್ಯುತ್ತನ್ನು ಬಳಸಿದಾಗ ಟ್ಯಾಗ್ ಎಚ್ಚರಿಸುತ್ತದೆ, 133 00:11:11,421 --> 00:11:13,840 ಬಳಕೆದಾರರು ಎಲ್ಲಿದ್ದಾರೆಂದು ತಿಳಿಯುವ ಪ್ರಯೋಜನವೂ ಇದೆ. 134 00:11:14,383 --> 00:11:15,467 ಚಿನ್ನ. 135 00:11:16,843 --> 00:11:18,387 ನಿನಗಾಗಿ ಸ್ವಲ್ಪ ಒಡವೆ ತಂದಿರುವೆ. 136 00:11:31,066 --> 00:11:31,900 ಪಾದ. 137 00:11:58,552 --> 00:12:00,804 ಈಗ ದಯವಿಟ್ಟು ನಿನ್ನ ಕೋಣೆಯಲ್ಲಿ ತಿನ್ನು. 138 00:12:11,690 --> 00:12:13,733 ತೆರೆ. ತೆರೆದುಕೋ. 139 00:12:22,492 --> 00:12:23,618 ಏನು ಮಾಡುತ್ತಿರುವೆ? 140 00:12:24,286 --> 00:12:27,289 ದೇವರೇ. ನೀನು ಸೋದರಿಯರಲ್ಲೊಬ್ಬಳು ಅಂದುಕೊಂಡೆ. 141 00:12:28,748 --> 00:12:32,419 -ಯಾಕೆ ಒಡೆಯಲು ನೋಡುತ್ತಿರುವೆ? -ಸೋದರಿ ವೆರೋನಿಕಾ ನನ್ನ ಮೊಬೈಲ್ ಕಸಿದುಕೊಂಡರು. 142 00:12:33,670 --> 00:12:35,964 ಎರಡು ದಿನ ರೈಲೀ ಜೊತೆ ನನ್ನ ಕರೆ ತಪ್ಪಿತು. 143 00:12:36,548 --> 00:12:38,300 ಹಾಗೆ ಮಾತ್ರ ನಾನವಳನ್ನು ನೋಡಬಲ್ಲೆ. 144 00:12:38,800 --> 00:12:42,179 ಅವಳಿಗೆ ಮೂರು ವರ್ಷ. ಅಮ್ಮ ಯಾಕೆ ತನ್ನೊಂದಿಗಿಲ್ಲ ಎಂದು ಆಕೆಗೆ ಅರ್ಥವಾಗದು. 145 00:12:42,262 --> 00:12:44,014 ಬಿಟ್ಟು ಹೋದೆ ಅಂದುಕೊಳ್ಳುವಳು. 146 00:12:47,934 --> 00:12:49,186 ಹೇ. ಬೇಡ, ಪರವಾಗಿಲ್ಲ. 147 00:12:51,646 --> 00:12:54,441 ಹೇ, ಅಳಬೇಡ. ಅಳಬೇಡ. ಪರವಾಗಿಲ್ಲ. 148 00:12:56,610 --> 00:12:58,737 ಕೇಳು. ಅಳಬೇಡ. ಆಯ್ತಾ? 149 00:12:59,446 --> 00:13:02,741 ನೀನು ರೈಲೀ ಜೊತೆ ಮಾತನಾಡುವೆ. ರೈಲೀ ಜೊತೆ ಈಗಲೇ ಮಾತನಾಡುವೆ. 150 00:13:03,241 --> 00:13:04,201 ಆಯ್ತಾ? 151 00:13:06,328 --> 00:13:07,621 ಸರಿ. ಆಯಿತು. 152 00:13:08,121 --> 00:13:12,000 ಅದು ಏರಲು ನೀನು ಅವಕಾಶ ಕೊಡಬೇಕು. ನೀರು ಕುದಿಯುವಂತೆ. 153 00:13:12,626 --> 00:13:18,507 ಮತ್ತು ನಿನಗೆ ನಡೆದಿರುವಂತಹ ಪ್ರತಿ ಕೆಟ್ಟ ಸಂಗತಿಯ ಬಗ್ಗೆ ಆಲೋಚಿಸು. 154 00:13:19,508 --> 00:13:22,093 ಅದು ನಿನ್ನ ಹೃದಯದಲ್ಲಿದೆ ಮತ್ತು ಬೆಳೆಯುತ್ತಿದೆ. 155 00:13:22,677 --> 00:13:23,720 ಸರಿ. 156 00:13:25,764 --> 00:13:28,934 ಈಗ, ಅದೆಲ್ಲವನ್ನೂ ಹೊರಹಾಕು. 157 00:13:35,941 --> 00:13:38,652 -ನೀನು ಅದ್ಭುತ. -ಇದನ್ನು ಮಾಡಿದ್ದು ನೀನು, ಹಾಗಾಗಿ… 158 00:13:46,952 --> 00:13:47,994 ಹಾಯ್, ಪಾಪು. 159 00:13:48,495 --> 00:13:50,705 ಅಮ್ಮ ನಿನ್ನನ್ನು ತುಂಬಾ ನೆನೆಸಿಕೊಂಡಳು. 160 00:13:50,789 --> 00:13:52,207 ಹಾಯ್, ಅಮ್ಮ. 161 00:13:54,084 --> 00:13:56,503 ಇವಳೇ ನನ್ನ ಮಗಳು. ಮುದ್ದಾಗಿದ್ದಾಳೆ ಅಲ್ವಾ? 162 00:13:56,586 --> 00:13:58,380 ರೈಲೀ, ಅಮ್ಮನ ಗೆಳತಿಗೆ ಹಾಯ್ ಹೇಳು. 163 00:13:58,463 --> 00:14:00,006 -ಹಾಯ್. -ಹಾಯ್. 164 00:14:06,137 --> 00:14:09,432 ನಿನ್ನ ಕೈ ಹೇಗಿದೆ, ರೈಲೀ-ಮುದ್ದು? ಸುಟ್ಟ ಗಾಯ ಶಮನವಾದಂತಿದೆ. 165 00:14:10,016 --> 00:14:11,810 ಅಮ್ಮ ನಿನಗೆ ನೋವು ಮಾಡಬಯಸಲಿಲ್ಲ. 166 00:14:14,896 --> 00:14:15,772 ಬ್ಯಾಬ್ಸ್. 167 00:14:17,566 --> 00:14:19,067 -ಏನಿದು? -ಬಾಡಿಗೆ. 168 00:14:21,903 --> 00:14:25,115 ಹೌದು. ಇಂತಹ ಮನೆಯನ್ನು ನಡೆಸಲು ತುಂಬಾ ಖರ್ಚಾಗುತ್ತದೆ. 169 00:14:25,615 --> 00:14:28,785 -ನಾನು ಧನ್ಯವಾದ ಹೇಳಲ್ಲ, ಆದರೂ… -ನಿನಗೆ ಬೊಬ್ಬೆಗಳು ಏಳಬಹುದು. 170 00:14:29,995 --> 00:14:34,165 ಇಲ್ಲ. ನೀನು ಮಾಡಿರುವುದಕ್ಕೆ ಎಷ್ಟು ಹಣ ಕೊಟ್ಟರೂ ಪರಿಹಾರವಾಗಲ್ಲ. 171 00:14:36,543 --> 00:14:37,502 ರಾಕ್ಸ್? 172 00:14:53,184 --> 00:14:56,146 ಒಳಗೆ ಬಾ, ಪುಟ್ಟಿ. ಲೆಸ್ಟರ್ ಸ್ಪ್ರಿಂಕ್ ಗೊತ್ತಲ್ವಾ? 173 00:14:56,229 --> 00:14:59,649 ವರ್ಷಗಳಿಂದ ನಮ್ಮ ಕುಟುಂಬ ನೋಡ್ಕೋತಿದ್ದಾರೆ. ಇವಳು ರಾಕ್ಸಿ, ನನ್ನ ಕಿರಿಮಗಳು. 174 00:15:00,692 --> 00:15:03,445 ಕುಳಿತುಕೋ. ನನ್ನ ಉಯಿಲನ್ನು ಓದುತ್ತಿದ್ದೇವೆ. 175 00:15:08,074 --> 00:15:11,661 ಈಗ, ಮೊಂಕ್ ಮತ್ತು ಮಕ್ಕಳು 176 00:15:13,163 --> 00:15:15,373 ಯಾವಾಗಲೂ ಮೂರು ಭಾಗವಾಗಬೇಕಿತ್ತು. 177 00:15:16,082 --> 00:15:19,961 ಈಗ ಟೆರ್ರಿ ಇಲ್ಲದ ಮೇಲೆ, ಆ ಮೂರನೆಯ ಭಾಗ ಯಾರಿಗೆ ಅಂತ ನಾನು ನಿರ್ಧರಿಸಬೇಕು. 178 00:15:20,045 --> 00:15:21,338 ಅದನ್ನು ನಿರ್ಧರಿಸಿ ಆಗಿದೆ. 179 00:15:21,421 --> 00:15:24,549 ಲಿಯಾಟ್ ಮತ್ತು ನಾನು ಕುಟುಂಬ ಶುರುಮಾಡಿದ್ದೇವೆ. ಹೆಚ್ಚಿನ ಭದ್ರತೆ ಬೇಕು. 180 00:15:27,302 --> 00:15:30,472 -ನೀನೇನಂತೀಯಾ, ಡ್ಯಾರೆಲ್? -ನೀವು ಹೇಗೆ ಹೇಳಿದರೆ ಹಾಗೆ, ಅಪ್ಪ. 181 00:15:32,557 --> 00:15:33,725 ನನ್ನ ಪಾಲು ನನಗೆ ಸಂತೋಷ. 182 00:15:33,808 --> 00:15:38,021 ರಿಕ್ಕಿ ಮತ್ತು ಟೆರ್ರಿ ಮಾತ್ರ ಜೊತೆಯಾಗಿ ಕೆಲಸ ಮಾಡುತ್ತಿದ್ದರು, ರಿಕ್ಕಿಗೆ ತನ್ನ ಪಾಲು ಸಿಗಬೇಕು. 183 00:15:38,188 --> 00:15:41,733 ಹೇಳಿದ್ದು ನನಗೆ ನೆನಪಿದೆ. ಆದರೆ ಜಗತ್ತು ಬದಲಾಗುತ್ತಿದೆ, ಅಲ್ವಾ? 184 00:15:41,816 --> 00:15:45,737 ಇನ್ನು ಹತ್ತು ವರ್ಷಗಳಲ್ಲಿ, ಮಹಿಳಾ ಉಸ್ತುವಾರಿ ಇಲ್ಲದೆ ನಮಗೆ ದಿಕ್ಕೇ ತೋಚದಂತಾಗುವುದು. 185 00:15:49,616 --> 00:15:52,661 ಕಾಗದಗಳ ಕೆಲಸಕ್ಕೆ ಯಾವುದೇ ಅವಸರ ಇಲ್ಲ. 186 00:15:52,827 --> 00:15:56,706 ಅದು ಒಳ್ಳೆಯದೇ, ಯಾಕೆಂದರೆ ಸಹಿ ಮಾಡುವ ಮುನ್ನ ನನ್ನ ಹಿರಿಮಗ ಮತ್ತು ಕಿರಿಮಗಳು ಹೇಗೆ 187 00:15:57,332 --> 00:15:59,542 ಕಾರ್ಯನಿರ್ವಹಿಸುತ್ತಾರೆಂದು ನೋಡಬಯಸುವೆ. 188 00:16:00,293 --> 00:16:01,961 ಇದು ಅಸಂಬದ್ಧ. 189 00:16:16,768 --> 00:16:19,062 ಛೆ. ಛೆ. 190 00:16:34,077 --> 00:16:35,662 ಹಲೋ. ಶಾಂತಿಯಿಂದ ಬಂದಿರುವೆ. 191 00:16:35,954 --> 00:16:37,372 ನಾನೊಬ್ಬ ಪತ್ರಕರ್ತ. 192 00:16:38,957 --> 00:16:40,834 ಗೊತ್ತಾ, ಒಬ್ಬ ಪತ್ರಕರ್ತ? 193 00:16:41,292 --> 00:16:44,295 -ಡಾರಿಯಸ್ ಪರ ಗೂಢಚಾರಿ ಇರಬೇಕು. -ಡಾರಿಯಸ್ ಸತ್ತಿದ್ದಾನೆ. 194 00:16:45,130 --> 00:16:46,256 ನಿನ್ನ ಹಿಂಬಾಲಿಸಿದನೇ? 195 00:16:46,464 --> 00:16:49,592 ಅವರು ಮತ್ತೆ ದಾಳಿ ಮಾಡಲ್ಲ, ನಾವು ಹಳ್ಳಿಯನ್ನು ಸುಟ್ಟ ಮೇಲಂತೂ. 196 00:16:49,884 --> 00:16:51,594 ನಿನಗದು ಗೊತ್ತಿಲ್ಲ. 197 00:16:52,429 --> 00:16:53,722 ಅವನನ್ನು ಕಳುಹಿಸಿಬಿಡಿ. 198 00:16:56,349 --> 00:16:57,183 ಇಲ್ಲ. 199 00:16:58,810 --> 00:17:00,353 ಆಯ್ತಾ? ಸರಿ. 200 00:17:03,440 --> 00:17:04,274 -ಒಬ್ಬನೇ? -ಹಾಂ. 201 00:17:04,399 --> 00:17:05,275 ಯಾರು ನೀನು? 202 00:17:06,776 --> 00:17:09,195 ನನ್ನ ಹೆಸರು ತುಂಡೆ. ತುಂಡೆ ಓಜೋ. 203 00:17:09,404 --> 00:17:11,531 ನಾನೊಬ್ಬ ಪತ್ರಕರ್ತ. ಸಿಎನ್ಎನ್. 204 00:17:11,740 --> 00:17:13,283 -ಗುರುತಿನ ಚೀಟಿ ಇದೆಯೇ? -ಇಲ್ಲ. 205 00:17:13,366 --> 00:17:16,161 -ಇಲ್ಲ. ನೀವು ಜಾಲತಾಣದಲ್ಲಿ ನೋಡಬಹುದು… -ಶಸ್ತ್ರ ಇದೆಯೇ? 206 00:17:16,953 --> 00:17:18,037 ಇಲ್ಲ. ಇಲ್ಲ. 207 00:17:21,833 --> 00:17:24,002 ಸರಿ, ಕೇಳಿ. ನಾನು ವಿವರಿಸಬಲ್ಲೆ. 208 00:17:30,175 --> 00:17:31,885 ಏನು ನಡೆಯುತ್ತಿದೆ? ಏನಾಗುತ್ತಿದೆ? 209 00:17:36,097 --> 00:17:36,931 ಬೇಗ. 210 00:17:38,475 --> 00:17:40,268 -ಸರಿ. ಸರಿ. ಸರಿ. -ಕದಲಬೇಡ. 211 00:19:34,465 --> 00:19:35,967 ಹೆಣ್ಣು ಮಗು. 212 00:20:29,312 --> 00:20:31,814 ಮೇಡಂ, ನಿಮ್ಮ ಕೇಶ ವಿನ್ಯಾಸ ಮಾಡಲು ಇಲ್ಲಿ ಬಂದಿರುವೆ. 213 00:20:32,148 --> 00:20:32,982 ಬಾ. 214 00:20:37,862 --> 00:20:38,988 ನೀನೆಲ್ಲಿ ಇರುವೆ? 215 00:20:40,031 --> 00:20:41,282 ಬೊಟಾನಿಕಾ ಡಿ ಜೋಸ್. 216 00:20:42,784 --> 00:20:43,993 ನಿನ್ನ ಮನೆ ಚೆನ್ನಾಗಿದೆಯಾ? 217 00:20:44,619 --> 00:20:47,372 ಇಲ್ಲ, ಮೇಡಂ. ಆದರೆ ಬಾಡಿಗೆ ಕಡಿಮೆ. 218 00:20:47,664 --> 00:20:48,498 ಹಾಂ. 219 00:20:50,667 --> 00:20:51,834 ಒಬ್ಬಳೇ ಇರುವೆಯಾ? 220 00:20:53,795 --> 00:20:56,965 -ಆರು ಬೇರೆ ಮಹಿಳೆಯರೊಂದಿಗೆ ಇರುವೆ. -ಆರೇ? 221 00:20:58,299 --> 00:21:00,677 ಸರಿ, ಹೇಗಿದ್ದರೂ ದೂರವೇನಿಲ್ಲ. 222 00:21:00,760 --> 00:21:02,637 ಟ್ರ್ಯಾಂ ಓಡುವಾಗ, ಮೇಡಂ. 223 00:21:02,971 --> 00:21:05,223 -ಹೆಚ್ಚಾಗಿ ನಡೆದುಕೊಂಡು ಹೋಗುವೆ. -ನಡೆಯುವೆಯಾ? 224 00:21:07,558 --> 00:21:08,518 ನೀನು ನಡೆಯುವೆ. 225 00:21:18,903 --> 00:21:20,863 ಇಂದು ಕೂದಲು ಕತ್ತರಿಸಬೇಕಾ, ಮೇಡಂ? 226 00:21:22,615 --> 00:21:25,326 ಇಲ್ಲ. ನನಗೆ ಬೇರೆ ಒಳ್ಳೆಯ ಆಲೋಚನೆ ಇದೆ. 227 00:21:28,329 --> 00:21:30,081 ಜೀವನಗಳನ್ನು ಬದಲಾಯಿಸಿಕೊಳ್ಳೋಣ. 228 00:22:47,909 --> 00:22:50,453 -ಕ್ಷಮಿಸಿ. ನಾನು… -ಸುಂದರವಾಗಿ ಕಾಣ್ತೀಯ. 229 00:23:01,047 --> 00:23:02,548 ನಿಮಗಿಲ್ಲಿ ಒಂಟಿತನ ಕಾಡಬಹುದು. 230 00:23:03,966 --> 00:23:05,176 ನಿಜ ಏನಂದ್ರೆ 231 00:23:06,594 --> 00:23:09,263 ನನ್ನ ತಮ್ಮನನ್ನು ಮರುಪಡೆಯಲು ಈ ಹಣವನ್ನು ಬಿಟ್ಟುಕೊಡುವೆ. 232 00:23:11,891 --> 00:23:13,059 ಅವನ ಪತ್ತೆಮಾಡಿದ್ದೇವೆ. 233 00:23:14,310 --> 00:23:15,812 ಬಾಟ್ಜೋರಿಗ್ ಜೈಲಲ್ಲಿದ್ದಾನೆ. 234 00:23:17,230 --> 00:23:18,731 ಅವನು ಅಪರಾಧಿಯಲ್ಲ. 235 00:23:18,815 --> 00:23:22,401 ಲಂಚ ಕಟ್ಟಲಾಗದಿದ್ದಕ್ಕೆ ಅವನಿಗೆ ಐದು ವರ್ಷ ಶಿಕ್ಷೆ ವಿಧಿಸಿದರು. 236 00:23:30,243 --> 00:23:31,327 ನಾನಂದುಕೊಂಡೆ 237 00:23:33,246 --> 00:23:34,080 ಬಹುಶಃ 238 00:23:35,623 --> 00:23:37,542 ಅಧ್ಯಕ್ಷರ ಬಳಿ ನೀವು ಮಾತನಾಡಬಹುದೆಂದು? 239 00:23:41,295 --> 00:23:42,755 ನನಗೊಬ್ಬ ತಂಗಿ ಇದ್ದಾಳೆ. 240 00:23:45,007 --> 00:23:46,801 ಆಕೆ ನಿಮ್ಮ ಬಗ್ಗೆ ಹೆಮ್ಮೆಪಡಬಹುದು. 241 00:24:50,406 --> 00:24:52,658 ಓಯ್. ಓಯ್, ಓಯ್, ಓಯ್. 242 00:24:53,910 --> 00:24:55,995 -ನಾನು ಮಾತಾಡುವೆ. -ಅಪ್ಪ ಎಲ್ರನ್ನೂ ಕಳಿಸಿದರು. 243 00:24:56,078 --> 00:24:58,164 ಇದು ಹಾಗೆ ನಡೆಯಲ್ಲ. ನಮಗೊಂದು ವ್ಯವಸ್ಥೆ ಇತ್ತು. 244 00:24:58,247 --> 00:25:01,000 ವ್ಯವಹಾರ ನಂದು. ಡ್ಯಾರೆಲ್ ಮತ್ತು ಟೆರ್ರಿ ನನ್ನಡಿ ಇದ್ರು. 245 00:25:01,125 --> 00:25:02,627 ನಾನು ಯಾರಡಿಯೂ ಕೆಲಸ ಮಾಡಲ್ಲ. 246 00:25:03,211 --> 00:25:05,880 ಅಪ್ಪ ನಿನ್ನೊಂದಿಗೆ ತಮಾಷೆ ಮಾಡುತ್ತಿದ್ದಾರೆ. 247 00:25:06,172 --> 00:25:08,424 ಇದೇನೇ ಆದರೂ, ಒಂದು ವಾರದೊಳಗೆ ಮುಗಿಯುತ್ತೆ. 248 00:25:09,425 --> 00:25:11,928 ನಾನು ಹಿರಿಯವನು. ಇದು ಹೇಗೆ ಅಂತ ಅವರಿಗೆ ಗೊತ್ತು. 249 00:25:13,221 --> 00:25:15,681 -ಪ್ರಿಮ್ರೋಸ್ ಪ್ರಮುಖ ಪೂರೈಕೆದಾರರು. -ಗೊತ್ತು. 250 00:25:15,765 --> 00:25:17,975 ಒಳ್ಳೆಯದು. ನೀನದನ್ನು ಕೆಡಿಸುವುದಿಲ್ಲ, ತಾನೇ? 251 00:25:18,392 --> 00:25:20,561 ನಾವಿಲ್ಲಿ ಮಾರಾಟವನ್ನು ಅಂಗೀಕರಿಸಬೇಕು. ಅಷ್ಟೇ. 252 00:25:23,231 --> 00:25:28,819 ನೋಡು, ರಾಕ್ಸಿ. ದಯವಿಟ್ಟು ರಿಕ್ಕಿಯನ್ನು ಮಾತನಾಡಲು ಬಿಡು. ಅವನು ಅದನ್ನೇ ಮಾಡುವುದು. 253 00:25:34,408 --> 00:25:37,286 ಈ ಮನೆ ಹಿಂದೆ ಡೇವಿಡ್ ಹ್ಯಾಸೆಲ್ಹಾಫ್ನದ್ದಾಗಿತ್ತು. 254 00:25:38,162 --> 00:25:39,789 -ಸಾಧ್ಯವೇ ಇಲ್ಲ. -ಸಾಧ್ಯವೇ. 255 00:25:41,374 --> 00:25:43,668 ಈಜುಕೊಳಕ್ಕೆ ಪೂರ್ಣ ಅವಧಿಯ ಜೀವರಕ್ಷಕ ಇದ್ದ. 256 00:25:47,129 --> 00:25:49,507 ಕುಡಿದ ನೂರಾರು ಹುಡುಗಿಯರು ವಸತಿ ಬೀದಿಗೆ ಇಳಿದಾಗ ವಿದ್ಯುತ್ ಆಘಾತ ಪಡೆದ ಹದಿಹರೆಯದ ಹುಡುಗ 257 00:25:55,346 --> 00:25:56,514 ತಗೋ. ಒಣಗಲು ಇರಿಸು. 258 00:25:57,223 --> 00:25:59,475 ಪ್ರಿಮ್ರೋಸ್, ಏನಪ್ಪಾ ಸುಂದರ. 259 00:25:59,558 --> 00:26:01,519 -ರಿಕ್ಕಿ, ಮಗನೇ. -ತುಂಬಾ ದಿನಗಳಾದವು. 260 00:26:02,144 --> 00:26:04,939 ಲಿಯಾಟ್ ಹೇಗಿದ್ದಾಳೆ? ಸುಂದರವಾದ ಮದುವೆ. 261 00:26:05,022 --> 00:26:06,816 ಹಾಂ. ಚೆನ್ನಾಗಿದ್ದಾಳೆ. ಕೇಳಿದಳು. 262 00:26:07,775 --> 00:26:09,819 ಡ್ಯಾರೆಲ್, ಶಾಲೆ ಹೇಗಿದೆ? 263 00:26:09,902 --> 00:26:12,071 -ಚೆನ್ನಾಗಿದೆ. -ಆಕ್ಸ್ಫರ್ಡಿಗೆ ಹೊರಟೆಯಾ? 264 00:26:12,154 --> 00:26:14,699 ಇಲ್ಲ, ಕೇಂಬ್ರಿಜ್, ರೀ, ತೊಂದರೆಯಲ್ಲಿ ಸಿಲುಕದಿದ್ದರೆ. 265 00:26:14,782 --> 00:26:17,326 ಅಯ್ಯೋ. ಏನು, ಅಪರಾಧಿಯಾಗದೆ ಇರುವೆಯೇನು? 266 00:26:17,410 --> 00:26:18,452 ಹಾಂ, ಅಂದುಕೊಳ್ಳುವೆ. 267 00:26:19,245 --> 00:26:20,079 ಏನು? 268 00:26:21,080 --> 00:26:22,623 ಟೆರ್ರಿ ಬಗ್ಗೆ ಕೇಳಿ ದುಃಖವಾಯಿತು. 269 00:26:22,999 --> 00:26:24,959 ಅವನ ಮನಸ್ಸು ಒಳ್ಳೆಯದು, ಆ ಹುಡುಗನದು. 270 00:26:25,251 --> 00:26:27,420 -ಧನ್ಯವಾದ, ಪ್ರಿಂರೋಸ್. -ಹಾಂ, ಧನ್ಯವಾದ. 271 00:26:28,838 --> 00:26:30,965 ಸರಿ, ಇದು ಯಾರು, ಮತ್ತೆ? 272 00:26:31,048 --> 00:26:32,758 -ಅವಳು ನಮ್ಮ ತಂಗಿ. -ಮಲತಂಗಿ. 273 00:26:34,010 --> 00:26:35,011 ರಾಕ್ಸ್. 274 00:26:35,761 --> 00:26:39,307 ರಾಕ್ಸಿ ಮೊಂಕ್. ನಿನ್ನ ಬಗ್ಗೆ ಕೇಳಿದ್ದೇನೆ. 275 00:26:41,976 --> 00:26:43,519 ತಂದೆಯಂತೆ ಮಗಳು. 276 00:26:43,769 --> 00:26:45,271 ಹುಷಾರಾಗಿರು, ರಿಕ್ಕಿ. 277 00:26:45,980 --> 00:26:47,857 ನಿನ್ನ ತಾಯಿಗೆ ನಡೆದದ್ದು ದುರಂತ. 278 00:26:48,316 --> 00:26:51,986 ಆ ಗೂಂಡಾಗಳನ್ನು ಅದಕ್ಕಾಗಿ ಕಳಿಸಿದ ಬೋಳಿಮಗ ಸಿಗಲಿ ಎಂದು ಆಶಿಸುತ್ತೇನೆ. 279 00:26:52,361 --> 00:26:56,073 ಗ್ಲೋರಿಯಾ. ಇಲ್ಲಿ ನನ್ನ ಸ್ನೇಹಿತರಿಗೆ ಕುಡಿಯಲು ಏನು ಬೇಕೋ ತಂದುಕೊಡು. 280 00:26:57,575 --> 00:27:00,536 ನಿನ್ನ ತಂದೆ ಮತ್ತು ನಾನು ಈ ಕಲ್ಲುಗಳ ಬಗ್ಗೆಯೇ ಮಾತಾಡ್ತಿದ್ದೆವು. 281 00:27:01,078 --> 00:27:04,165 ನೀವೇ ನೋಡುವಂತೆ, ಅವು ದೋಷರಹಿತವಾಗಿವೆ. 282 00:27:04,623 --> 00:27:08,127 ಮಿಕ್ಕ ಅಂದವಾದವು ಕೂಡ ಅವನ ಗಮನ ಸೆಳೆಯಬಹುದು ಅಂದುಕೊಂಡೆ. 283 00:27:12,340 --> 00:27:15,885 -ಹುಡುಗಿಯರು. -ಹಾಂ. ಈಜುವುದೆಂದರೆ ಇಷ್ಟ. 284 00:27:25,019 --> 00:27:26,187 ಸರಿ, ಡೇವಿಡ್? 285 00:27:29,190 --> 00:27:30,191 ಯಾರು ನೀನು? 286 00:27:30,274 --> 00:27:33,319 ಬರ್ನಿ ಮೊಂಕ್ ಮಗಳು, ಅಂದು ಸಿಕ್ಕಿದ್ದವಳು. ಏನು ಮಾಡುತ್ತಿರುವೆ? 287 00:27:33,694 --> 00:27:37,114 -ಏನಂತೆ ಕಾಣಿಸುತ್ತಿದೆ? -ನಮ್ಮಪ್ಪನಿಗೆ ದುಡ್ಡು ಕೊಡಬೇಕಾದಂತೆ ಕಾಣುತ್ತೆ. 288 00:27:37,198 --> 00:27:39,658 ಅವರ ಪೂರೈಕೆದಾರನ ಜೊತೆ ಸ್ನೇಹ ಬೆಳೆಸಿದ್ದೀಯ. 289 00:27:39,742 --> 00:27:42,036 ಬರ್ನಿಗೆ ಇದು ಗೊತ್ತಾದರೆ ಸಂತೋಷವಾಗಲ್ಲ. 290 00:27:42,661 --> 00:27:44,914 -ಹೋಗೇ. ಮುಚ್ಕೊಂಡು ಹೋಗು. -ಏನೋ ಅಂದೆ? 291 00:27:46,457 --> 00:27:47,666 ದರಿದ್ರದ್ದು. 292 00:27:50,544 --> 00:27:53,214 ಕಳೆದ ಬಾರಿ, ಅದನ್ನು ಬಳಸುವ ಗುಂಡಿಗೆ ಅವಳಲ್ಲಿ ಇರಲಿಲ್ಲ. 293 00:27:53,547 --> 00:27:55,049 ಬಾರೇ, ನೋಡ್ಕೊಳ್ಳೋಣ. 294 00:27:58,177 --> 00:27:59,011 ಓಯ್. 295 00:28:02,473 --> 00:28:03,307 ಹಾಳಾಗಿ ಹೋಗಲಿ. 296 00:28:03,766 --> 00:28:06,060 -ಏನು ಬೇಕು ನಿನಗೆ? -ನಮ್ಮಪ್ಪನ ಹಣ. 297 00:28:07,228 --> 00:28:09,980 -ಈಗ ನನ್ನ ಬಳಿ ಇಲ್ಲ ಅಲ್ವಾ? -ನಾಳೆ ಬೆಳಿಗ್ಗೆ 9:00ಕ್ಕೆ. 298 00:28:10,064 --> 00:28:13,484 ಬರ್ನಿ ಮೊಂಕಿಗೆ ಕೊಡಬೇಕಾದ ಎಲ್ಲಾ ಬಾಕಿ ಸಮೇತ ಮನೆಗೆ ಬರಬೇಕು. 299 00:28:14,276 --> 00:28:16,862 ಇದು ಅಸಂಬದ್ಧ. ನೀನಿಲ್ಲಿಗೆ ಹೀಗೆ ಬಂದು... 300 00:28:19,573 --> 00:28:20,699 -ಏನು ಮಾಡ್ತೀ? -ರಾಕ್ಸಿ. 301 00:28:21,242 --> 00:28:22,952 ನಾಳೆ ಬೆಳಿಗ್ಗೆ, 9:00ಕ್ಕೆ. 302 00:28:24,245 --> 00:28:26,414 -ಇಲ್ಲ. -ಇದು ನಿನಗೆ ಕೊನೆಯ ಎಚ್ಚರಿಕೆ. 303 00:28:26,747 --> 00:28:27,581 ಬೇಡ. 304 00:28:38,884 --> 00:28:41,429 ಅಯ್ಯೋ. ಡೇವಿಡ್. 305 00:28:41,720 --> 00:28:43,431 ನನ್ನ ಕೊಳದಲ್ಲಿ ಹೇಲಿದೆಯಲ್ಲೋ. 306 00:29:07,329 --> 00:29:08,789 -ಏನಿದು ವಿಚಿತ್ರ? -ಏನಾಯಿತು? 307 00:29:09,373 --> 00:29:12,918 -ಬುದ್ಧಿವಂತ ಹುಡುಗಿ. ನೀರು ಪಸರಿಸುತ್ತದೆ. -ನನ್ನ ಪಾದಕ್ಕೇನೋ ಕಚಗುಳಿ ಇಡ್ತು. 308 00:29:15,713 --> 00:29:16,755 ಮತ್ತೆ ಆಯ್ತು ನೋಡು. 309 00:29:17,590 --> 00:29:19,967 ಅವರನ್ನು ಕದಲಿಸಲು ನೀನು ಅವರನ್ನು ಮುಟ್ಟಬೇಕಿಲ್ಲ. 310 00:29:20,050 --> 00:29:22,344 ದೇವರೇ. ಸುಮ್ಮನಿರು. ಯಾವುದೋ ಮೀನಿರಬೇಕು. 311 00:29:22,845 --> 00:29:24,763 ಪರವಾಗಿಲ್ಲ. ಯಾವುದೋ ಮೀನಿರಬೇಕು. 312 00:29:24,847 --> 00:29:26,765 -ಅದು ಯಾವುದೇ ಮೀನಲ್ಲ. -ಅದು ಮೀನೇ. 313 00:29:26,849 --> 00:29:28,142 ಅದೊಂದು ಹಾವು. 314 00:29:28,225 --> 00:29:30,978 -ಅದು ಹಾವಲ್ಲ. -ಅದು ಹಾವೇ. 315 00:29:31,061 --> 00:29:34,315 -ಸಾಗರದಲ್ಲಿ ಹಾವುಗಳಿಲ್ಲ ಅಂತ ಇವರಿಗೆ ಹೇಳು. -ನೀವು ಇಲ್ಲಿಗೆ ಹೊಸಬರು. 316 00:29:35,232 --> 00:29:37,818 ಹಾಂ. ಇವರು ಜೀನ್. ಈಗಷ್ಟೇ ಅಲಬಾಮಾದಿಂದ ಬಂದರು. 317 00:29:40,237 --> 00:29:42,072 ಅಲಬಾಮಾದಲ್ಲಿ ಎಲ್ಲಿ? 318 00:29:43,199 --> 00:29:44,158 ಗಂಟರ್ಸ್ವಿಲ್. 319 00:29:46,660 --> 00:29:47,828 ಹಿಂದೆ ಭೇಟಿಯಾಗಿದ್ದೀವಾ? 320 00:29:49,205 --> 00:29:50,831 ಇಲ್ಲ ಅನ್ಸುತ್ತೆ. 321 00:29:51,707 --> 00:29:53,250 ನಿನ್ನನ್ನು ಎಲ್ಲೋ ನೋಡಿದಂತಿದೆ. 322 00:29:55,961 --> 00:29:58,631 ಈವ್ ಪವಾಡಗಳನ್ನು ಸೃಷ್ಟಿಸುತ್ತಾಳೆ. ನಿಜವಾದವು. 323 00:29:59,131 --> 00:30:02,092 -ಪಕ್ಷಿಗೆ ಜೀವ ತುಂಬಿದಳು. -ಹೌದು. ನನ್ನನ್ನು ಗುಣಪಡಿಸಿದಳು. 324 00:30:02,176 --> 00:30:05,596 ಚಿಕ್ಕವಳಿಂದ ನನಗೆ ಮೂರ್ಛೆ ಬರುತ್ತಿತ್ತು. ಈವ್ ನನ್ನ ಮೇಲೆ ಕೈ ಇಟ್ಟಳು… 325 00:30:05,679 --> 00:30:09,642 -ತಿಂಗಳಿನಿಂದ ಒಮ್ಮೆಯೂ ಘಟಿಸಿಲ್ಲ. -ನಿನ್ನ ವಿದ್ಯುತ್ತಿನಿಂದ ಇಷ್ಟೆಲ್ಲಾ ಮಾಡುವೆಯಾ? 326 00:30:11,143 --> 00:30:12,311 ದೇವರೊಂದಿಗೆ ಮಾಡುವೆ. 327 00:30:13,187 --> 00:30:14,563 ಈವ್ ದೇವರೊಂದಿಗೆ ಮಾತಾಡ್ತಾಳೆ. 328 00:30:15,648 --> 00:30:17,066 ದೇವರು ಒಬ್ಬ ಹೆಣ್ಣು ಅಂತಾಳೆ. 329 00:30:17,358 --> 00:30:19,443 ಹಾಂ, ತಪ್ಪು ತಿಳಿಯಬೇಡ. 330 00:30:20,236 --> 00:30:22,196 ನನಗೆ ಧಾರ್ಮಿಕ ನಂಬಿಕೆ ಅಷ್ಟಿಲ್ಲ. 331 00:30:24,031 --> 00:30:26,200 ನನ್ನ ತಂದೆ ಒಬ್ಬ ಪಾದ್ರಿ, ಹಾಗಾಗಿ… 332 00:30:27,868 --> 00:30:30,955 ಜೀನ್, ಈವ್ ನಿಜವಾದವಳು. ನಾವೆಲ್ಲರೂ ನೋಡಿದ್ದೇವೆ. 333 00:30:31,121 --> 00:30:33,707 ಪರವಾಗಿಲ್ಲ. ನಾನೂ ಹಾಗೇ ಇದ್ದೆ. 334 00:30:33,832 --> 00:30:36,669 ನನ್ನ ದತ್ತುಪಾಲಕರು ಭಾನುವಾರ ಚರ್ಚಿಗೆ ಕರೆದೊಯ್ಯುತ್ತಿದ್ದರು. 335 00:30:37,211 --> 00:30:38,629 ನಾನು ನಂಬುತ್ತಲೇ ಇರಲಿಲ್ಲ. 336 00:30:40,839 --> 00:30:42,007 ಆದರೆ ಅದನ್ನು ನೋಡು. 337 00:30:45,302 --> 00:30:48,597 ಇದು ದೇವರ ಸಾಕ್ಷಿಯಲ್ಲದಿದ್ದರೆ, ಬೇರೆ ಏನಂತ ನನಗೆ ಗೊತ್ತಿಲ್ಲ. 338 00:31:03,028 --> 00:31:03,862 ಈವ್. 339 00:31:06,156 --> 00:31:07,408 ಇದನ್ನು ವಿವರಿಸುವೆಯಾ? 340 00:31:09,076 --> 00:31:10,411 ಬಾಗಿಲಿನ ಹಿಡಿಕೆಯಂತಿದೆ. 341 00:31:12,788 --> 00:31:16,542 ಈವ್, ನೀನು ಇಲ್ಲಿ ಇರಲು ಬಯಸಿದರೆ, ನಿಯಮಗಳನ್ನು ಯಾಕೆ ಮುರಿಯುವೆ? 342 00:31:17,042 --> 00:31:19,378 ಯಾಕೆಂದರೆ ನಿಯಮಗಳಿಗೆ ಯಾವುದೇ ಅರ್ಥವಿಲ್ಲ, 343 00:31:19,461 --> 00:31:21,922 ನಿಮ್ಮ ಅಮೂಲ್ಯವಾದ ಬೈಬಲ್ನ ಎಷ್ಟೋ ಕಥೆಗಳಂತೆ. 344 00:31:22,923 --> 00:31:24,341 ಕನ್ಯೆಯರಿಗೆ ಮಗು ಹುಟ್ಟುವುದೇ? 345 00:31:24,425 --> 00:31:26,218 ಹುಡುಗರು ನೀರನ್ನು ವೈನ್ ಮಾಡುವುದೇ? 346 00:31:26,302 --> 00:31:28,262 ಅದೆಲ್ಲಾ ದೇವರದ್ದು, ಈ ಶಕ್ತಿ ಅಲ್ಲವೇ? 347 00:31:30,264 --> 00:31:34,018 ಆ ಕಥೆಗಳು ದೇವರ ಸತ್ಯ ಎಂದು ಅವುಗಳನ್ನು ನಂಬುವೆ, 348 00:31:34,476 --> 00:31:36,478 ಐಡಹೋನ ಈವ್ ಜೋನ್ಸ್. 349 00:31:37,688 --> 00:31:40,858 ಕಂಡ ಕೂಡಲೇ ನನಗೆ ಸತ್ಯ ತಿಳಿಯುವುದು ಆದರೆ ನೀನೊಂದು ಸುಳ್ಳು. 350 00:31:40,941 --> 00:31:42,234 ಹೀಗಲ್ಲ, ವೆರೋನಿಕಾ. 351 00:31:42,484 --> 00:31:44,945 ನೀನು ಆಗಿರುವೆ ಅಂದುಕೊಂಡ ವ್ಯಕ್ತಿ ಅಸ್ತಿತ್ವದಲ್ಲಿಲ್ಲ. 352 00:31:45,613 --> 00:31:48,657 ನಿನ್ನ ಹೆಸರು, ನಿನ್ನ ವಿಳಾಸ, ನಿನ್ನ ಪಾಲಕರು, 353 00:31:49,074 --> 00:31:51,452 ನೀನು ನಮಗೆ ಹೇಳಿರುವ ಎಲ್ಲವೂ ಸುಳ್ಳೇ. 354 00:31:53,120 --> 00:31:54,496 ನನಗೆ ನಿನ್ನ ಭಯವಿಲ್ಲ. 355 00:31:55,247 --> 00:31:59,501 ನೀನು ಯಾರೆಂದು ಕಂಡುಹಿಡಿದು ನೀನು ಸೇರಬೇಕಾದ ಜಾಗಕ್ಕೆ ಕಳಿಸುವೆ. 356 00:32:15,392 --> 00:32:18,479 ನೀನೆಂಥ ಹುಡುಗಿ ಅಂತ ನನಗೆ ಗೊತ್ತು, ಆ್ಯಲಿಸನ್. 357 00:32:37,539 --> 00:32:41,669 ಸರಿ ಹೇಳಿದರು. ನಾನು ವಂಚಕಿ. ನಾನು ಕೊಲೆಗಡುಕಿ. 358 00:32:42,503 --> 00:32:45,339 ನನ್ನನ್ನು ಹೊರಗೆ ಹಾಕುತ್ತಾರೆ, ವಾಪಸ್ ಕಳುಹಿಸುತ್ತಾರೆ. 359 00:32:45,422 --> 00:32:49,093 ನೀನು ಈ ಜಾಗವನ್ನು ನಿಯಂತ್ರಿಸಿದರೆ ಅಲ್ಲ. ನೀನು ಅವರನ್ನು ನಂಬಿಸಿದರೆ ಅಲ್ಲ. 360 00:32:49,551 --> 00:32:51,387 ನಂಬಿಕೆಯೇ ಶಕ್ತಿ. 361 00:33:12,700 --> 00:33:15,744 ಸರಿ. ಮೊದಲು, ಸರಿಯಾಗಿ ಗುದ್ದುವುದು ಹೇಗೆ ಎಂದು ತಿಳಿಯಬೇಕು. 362 00:33:15,828 --> 00:33:18,997 ಹೆಬ್ಬೆರಳು ಮುಷ್ಠಿಯಿಂದ ಹೊರಗೆ, ಗೆಣ್ಣಿನ ಕೆಳಗೆ, ತಗುಲದಂತಿರಲು. 363 00:33:19,081 --> 00:33:22,084 ಈ ಮೊದಲೆರಡು ಗೆಣ್ಣುಗಳನ್ನು ನಿಮ್ಮ ಕೈಗಳಿಗೆ ನೇರವಾಗಿರಿಸಿ. ನೋಡಿ? 364 00:33:22,418 --> 00:33:25,879 ನೇರವಾಗಿದೆ. ಇದರಿಂದ ಹೊಡೆಯಬೇಕು. ಉಂಗುರದ್ದು ಮತ್ತು ಕಿರುಬೆರಳಿನಿಂದಲ್ಲ. 365 00:33:26,839 --> 00:33:28,966 ಸ್ವಲ್ಪ ಕುಗ್ಗಿರಿ. ಮೈಗೆ ಏಟುಗಳು. 366 00:33:29,174 --> 00:33:33,679 ಚಲನಚಿತ್ರಗಳಲ್ಲಿ ಮುಖಕ್ಕೆ ಹೊಡೆಯುತ್ತಾರೆ, ಹಾಗೆ ಮಾಡಿದರೆ ನಿಮ್ಮ ಕೈ ಮುರಿಯುತ್ತೆ. 367 00:33:33,846 --> 00:33:36,390 ಎದೆಗೆ ಹೊಡೆದು ನಿಮ್ಮ ಸೊಂಟದಿಂದ ತಿರುಗಿಸಿ. 368 00:33:36,515 --> 00:33:37,599 ಚಿಕ್ಕದಾಗಿ, ವೇಗವಾಗಿ. 369 00:33:38,308 --> 00:33:40,936 ಚಿಕ್ಕದಾಗಿ, ವೇಗವಾಗಿ. ಮತ್ತೆ ಹಿಂದೆಯೇ ಬರಲಿ. 370 00:33:42,479 --> 00:33:44,064 ಈಗ ಬಜಾಯಿಸಿ, ಮಕ್ಕಳಾ. 371 00:33:53,282 --> 00:33:54,116 ಸುಡು. 372 00:34:07,004 --> 00:34:09,339 ಜೋಸ್. ಜೋಸ್. 373 00:34:22,186 --> 00:34:23,645 ಗುರು, ಏನೋ ಇದು? 374 00:34:55,928 --> 00:34:57,221 ಏನು ಮಾಡುತ್ತಿರುವೆ? 375 00:35:00,557 --> 00:35:02,017 ಹಾಂ, ಮತ್ತೆ ನಾನು... 376 00:35:02,351 --> 00:35:06,188 ಕ್ಷಮಿಸು. ಹೃದಯದ ಹೊರಗೆ ನಾನು ಆಲೋಚಿಸಲೇ ಇಲ್ಲ. 377 00:35:09,191 --> 00:35:11,568 ಅವನಿಗೆ ಏನಾಯಿತು ಎಂದು 378 00:35:12,486 --> 00:35:13,445 ನಾನು ಕೇಳ್ಪಟ್ಟೆ. 379 00:35:15,989 --> 00:35:18,408 ನಾನು ನಿನ್ನ ಜೊತೆ ಅಲ್ಲಿ ಇರಬೇಕಾಗಿತ್ತು, 380 00:35:19,576 --> 00:35:21,787 ಯಾಕೆಂದರೆ ನಿನ್ನನ್ನು ದ್ವೇಷಿಸುವ ಜನರು, 381 00:35:22,663 --> 00:35:25,791 ಅವರಿಗಿನ್ನೂ ಗೊತ್ತಿಲ್ಲ, ಆದರೆ ನನ್ನನ್ನೂ ದ್ವೇಷಿಸುತ್ತಾರೆ. 382 00:35:28,335 --> 00:35:32,756 ಮತ್ತು ನಿನ್ನನ್ನು ನೋಯಿಸಲು ಬಯಸುವ ಜನರು, ನನ್ನನ್ನೂ ನೋಯಿಸಬೇಕು ಅಂತಿದ್ದಾರೆ. 383 00:35:34,758 --> 00:35:37,386 ಮತ್ತು ನೀನು ಇದನ್ನು ತಿಳಿದಿರು, ಜೋಸ್, 384 00:35:38,220 --> 00:35:39,596 ನಾನು ನಿನ್ನೊಂದಿಗಿದ್ದೇನೆ. 385 00:35:43,642 --> 00:35:44,601 ನಾನು ಇದರಲ್ಲಿರುವೆ. 386 00:35:54,570 --> 00:35:55,654 ನಾನೂ ಇದರಲ್ಲಿರುವೆ. 387 00:37:03,555 --> 00:37:05,933 ಸಿಎನ್ಎನ್ನಲ್ಲಿ ಯಾವುದೇ ಐರೋಪ್ಯ ಪತ್ರಕರ್ತರು ಇಲ್ಲವೇ? 388 00:37:06,892 --> 00:37:08,101 ನಾನೊಬ್ಬ ಪ್ರತಿನಿಧಿ. 389 00:37:10,938 --> 00:37:12,522 ಹೆಂಗಸರು ನಿನ್ನ ಮೆಚ್ಚಿದ್ದಾರೆ. 390 00:37:18,695 --> 00:37:20,906 ನಿಮ್ಮ ಕಥೆ ಹೇಳಲು ನಾನಿಲ್ಲಿಗೆ ಬಂದಿರುವೆ. 391 00:37:24,701 --> 00:37:26,244 ಲೈಂಗಿಕ ಗುಲಾಮಗಿರಿಯ ಅಂತ್ಯ. 392 00:37:27,955 --> 00:37:28,789 ಹೇಳು. 393 00:37:32,584 --> 00:37:34,252 ನನ್ನ ಕೈಗಳಿಂದ ವಿದ್ಯುತ್ 394 00:37:35,128 --> 00:37:38,256 ಬರದಿದ್ದಾಗ ನಿನ್ನಂಥ ಗಂಡಸರು ಎಲ್ಲಿದ್ದರು? 395 00:37:42,970 --> 00:37:43,804 ನನಗೆ ಸಾಕಾಗಿದೆ. 396 00:37:44,179 --> 00:37:47,265 ಇಲ್ಲ, ಇರಿ. ನಾನು ಈಓಡಿಯ ಮೊದಲ ವಿಡಿಯೋ ನೈಜೀರಿಯಾದಿಂದ ಪ್ರಕಟಿಸಿದೆ. 397 00:37:47,349 --> 00:37:50,602 ಸೌದಿಗೆ, ರಿಯಾಧಿಗೆ ಹೋದೆ. ಅಲ್ಲಿ ಪ್ರತಿಭಟನೆಯನ್ನು ಚಿತ್ರೀಕರಿಸಿದೆ. 398 00:37:50,686 --> 00:37:54,272 ಆ ಮಹಿಳೆಯರಿಗಾಗಿ ಜೀವವನ್ನು ಅಪಾಯಕ್ಕೊಡ್ಡಿದೆ. ನಾನಿದನ್ನು ಮಾಡಬೇಕು. 399 00:37:55,232 --> 00:37:56,274 ಮಾಡಲೇಬೇಕು. 400 00:38:00,070 --> 00:38:01,655 ಲೈಂಗಿಕ ಗುಲಾಮಗಿರಿಯ ಅಂತ್ಯ. 401 00:38:04,408 --> 00:38:05,742 ಈ ಮೂರ್ಖನ ಮಾತು ಕೇಳಿದ್ರಾ? 402 00:38:08,453 --> 00:38:09,454 ಎಷ್ಟು? 403 00:38:11,081 --> 00:38:15,293 ಹಣವೇ? ಹಾಂ, ನಾನು ನಿಮಗೆ ಕೊಡಬಲ್ಲೆ, ಆದರೆ ಇದು ನಿಮಗೆ ಧ್ವನಿಯನ್ನು ಕೊಡುತ್ತದೆ. 404 00:38:15,377 --> 00:38:17,087 ನಿನ್ನನ್ನು ಜನಪ್ರಿಯನನ್ನಾಗಿಸುತ್ತದೆ. 405 00:38:18,213 --> 00:38:20,048 ಇದರಿಂದ ನನಗೆ ಪ್ರಯೋಜನ ಹೇಗೆ ಮಾಡುವೆ? 406 00:38:21,758 --> 00:38:22,759 ನಿಮಗೇನು ಬೇಕು? 407 00:38:24,553 --> 00:38:26,388 ನಾನು ನನ್ನ ಅಕ್ಕನನ್ನು ನೋಡಬೇಕು. 408 00:38:28,223 --> 00:38:29,307 ಸರಿ. 409 00:38:30,517 --> 00:38:32,352 -ಆಕೆ ಎಲ್ಲಿದ್ದಾಳೆ? -ಅರಮನೆಯಲ್ಲಿ. 410 00:38:33,562 --> 00:38:34,938 ಅಲ್ಲಿ ಕೆಲಸ ಮಾಡ್ತಾಳಾ? 411 00:38:36,189 --> 00:38:37,232 ಅಲ್ಲಿ ಇರ್ತಾಳೆ. 412 00:38:41,862 --> 00:38:46,908 ಟಾಟಿಯಾನಾ ತನ್ನ ಗಂಡ ಎಷ್ಟು ದಪ್ಪ ಇದ್ದಾನೋ ಅವಳು ಅಷ್ಟೇ ಹಾಳಾಗಿರಬಹುದು, ಆದರೂ ಆಕೆ ನನ್ನ ಅಕ್ಕನೇ. 413 00:38:48,243 --> 00:38:49,745 ಅವಳಿಗೆ ಕಾಳಜಿ ಇದೆಯಾ ತಿಳಿಯಬೇಕು. 414 00:39:29,951 --> 00:39:31,870 ನೀನು ನನಗೆ ಧ್ವನಿಯಾಗುವೆಯಾ? 415 00:39:33,413 --> 00:39:37,876 "ಕಾಪಾಡಿ" ಎಂದು ಎಂಟು ಬೇರೆ ಭಾಷೆಗಳಲ್ಲಿ ಹೇಳುವುದನ್ನು ಕಲಿತಿರುವೆ. 416 00:39:41,421 --> 00:39:44,049 ನನ್ನನ್ನು ಕಳುಹಿಸಿದ ಎಲ್ಲಾ ದೇಶಗಳಲ್ಲೂ, 417 00:39:45,217 --> 00:39:47,427 ನನ್ನ ತಲೆಯನ್ನು ಹಾಸಿಗೆಯೊಳಗೆ ಒತ್ತಿದರು. 418 00:39:52,015 --> 00:39:55,769 ಶಾಂತಿಯನ್ನು ಕೇಳುವವರೇ ಸಾಮಾನ್ಯವಾಗಿ ಮೊದಲು ನೋವನ್ನು ಉಂಟುಮಾಡುವವರು. 419 00:39:56,812 --> 00:39:58,647 ಎಲ್ಲರಿಗೂ ನಮ್ಮ ನರಳಾಟ ಗೊತ್ತಿತ್ತು. 420 00:40:00,148 --> 00:40:02,067 ನೀನು ತಿಳುವಳಿಕೆ ಕೊಡಲು ಬರೆಯುತ್ತಿಲ್ಲ, 421 00:40:03,610 --> 00:40:06,905 ಅವರು ಎಷ್ಟು ಸುರಕ್ಷಿತರು ಎಂದು ನೆನಪಿಸಲು ಬರೆಯುತ್ತಿರುವೆ. 422 00:40:13,870 --> 00:40:15,622 ನಾನು ನಿನಗೆ ಸಂದರ್ಶನ ಕೊಡುತ್ತೇನೆ. 423 00:40:18,083 --> 00:40:20,669 ಆದರೆ ಅವರಿಗೆ ಶಾಂತಿಯನ್ನು ಕೊಡುವುದಿಲ್ಲ. 424 00:40:23,630 --> 00:40:26,633 ದೊಡ್ಡದೊಂದು ಬದಲಾವಣೆ ಬರುತ್ತಿದ್ದು ತನ್ನ ತಂಡವನ್ನು 425 00:40:28,009 --> 00:40:29,845 ಆರಿಸಿಕೊಳ್ಳಲು ಹೋಗಿ ನನ್ನಕ್ಕನಿಗೆ ಹೇಳು. 426 00:40:44,359 --> 00:40:49,990 ಕೇಳು, ಚಿನ್ನ. ಪವಾಡಗಳು ನಕಲಿಯಿರಬಹುದು, ಆದರೆ ನೀನು ನಿಜ. 427 00:40:50,574 --> 00:40:55,078 ಅವರನ್ನು ಹೇಗೆ ಗುಣಪಡಿಸುವೆ, ಅವರಿಗೆ ಹೇಗೆ ಅನಿಸುತ್ತದೆ, ಅನ್ನೋದು ನಿಜ. 428 00:40:56,204 --> 00:40:58,748 ನಂಬಲು ಅವರಿಗೆ ಏನನ್ನಾದರೂ ಹೇಗೆ ಕೊಡುವೆ, 429 00:40:59,833 --> 00:41:01,084 ಅನ್ನೋದು ನಿಜ. 430 00:41:02,127 --> 00:41:04,337 ನಿನ್ನಂಥ ಹುಡುಗಿಯರಿಗೆ ದೇವರೇ ಇದ್ದಿಲ್ಲ. 431 00:41:06,047 --> 00:41:07,465 ಅವರಂಥ ಹುಡುಗಿಯರಿಗೆ. 432 00:41:10,302 --> 00:41:12,721 ನೀನೊಂದು ಹೊಸ ಧರ್ಮವನ್ನೇ ಸ್ಥಾಪಿಸಬಹುದು, 433 00:41:13,763 --> 00:41:16,099 ನಕಲಿ ಪವಾಡಗಳ ಆಧಾರವಾಗಲ್ಲ, 434 00:41:18,101 --> 00:41:19,978 ನಿಜವಾದ ಶಕ್ತಿಯಾಧಾರಿತವಾಗಿ. 435 00:41:23,481 --> 00:41:26,860 ನೀನೊಂದು ಕ್ರಾಂತಿಯ ಧ್ವನಿ. 436 00:41:27,235 --> 00:41:29,529 ನಿನ್ನ ಸಮಯ ಬಂದಿದೆ. 437 00:41:42,834 --> 00:41:46,171 -ಸವನ್ನಾ. ಸವನ್ನಾ. ಸವನ್ನಾ. -ಎಲ್ಲಿಗೆ ಹೋದೆ, ಸವನ್ನಾ? 438 00:41:46,254 --> 00:41:48,006 -ಸವನ್ನಾ, ಎಲ್ಲಿದ್ದೀಯಾ? -ಸವನ್ನಾ. 439 00:41:48,089 --> 00:41:49,716 -ಸವನ್ನಾ. -ಎಲ್ಲಿದ್ದೀಯಾ? 440 00:41:49,799 --> 00:41:52,385 ಸವನ್ನಾ. ಸವನ್ನಾ. 441 00:41:53,595 --> 00:41:54,429 ಸವನ್ನಾ. 442 00:41:54,596 --> 00:41:56,932 -ಸವನ್ನಾ, ಬಾ. ಸವನ್ನಾ. -ಎಲ್ಲಿದ್ದೀಯಾ? 443 00:41:57,015 --> 00:41:59,309 -ಇರಿ. ಏನು ನಡೆಯುತ್ತಿದೆ? -ಅವಳು ಅಲ್ಲಿದ್ದಾಳಾ? 444 00:41:59,392 --> 00:42:00,977 -ಇರಿ. -ಅವಳು ಕಾಣಿಸುತ್ತಿಲ್ಲ. 445 00:42:01,061 --> 00:42:03,188 ಸವನ್ನಾ ಕಾಣುತ್ತಿಲ್ಲ. ಕಾಣೆಯಾಗಿದ್ದಾಳೆ. 446 00:42:03,271 --> 00:42:07,692 ಬಚ್ಚಲು ಮನೆಯಲ್ಲಿ ಒಂದು ಚಾಕು ಇತ್ತು. ನೆಲದ ಮೇಲೆಲ್ಲಾ ರಕ್ತ ಚೆಲ್ಲಿತ್ತು. 447 00:42:07,776 --> 00:42:09,653 ರಕ್ತ? ಚಾಕು? ನಾವು ಅವಳನ್ನು ಹುಡುಕಬೇಕು. 448 00:42:09,736 --> 00:42:11,988 ವೆರೋನಿಕಾ ಒಳಗೆ ಹೋಗಿ ಅಂದರು. ಇದು ಅಪಾಯಕಾರಿ. 449 00:42:12,072 --> 00:42:14,282 ನಾವು ಕೈ ಚೆಲ್ಲುವುದು ಬೇಡ. ಅವಳನ್ನು ಹುಡುಕೋಣ. 450 00:42:14,574 --> 00:42:16,701 -ನೀರಿಗೆ ಇಳಿಯೋಣ. -ಸರಿ. 451 00:42:17,494 --> 00:42:19,913 -ಬಂದೆವು. -ಈಗಲೇ ಒಳಗೆ ಹೋಗಿ. ನಾವು ನೋಡ್ಕೊಳ್ತೀವಿ. 452 00:42:20,330 --> 00:42:22,582 ಸವನ್ನಾ. ಸವನ್ನಾ. 453 00:42:24,042 --> 00:42:25,919 ಸವನ್ನಾ. ಸವನ್ನಾ. 454 00:42:26,294 --> 00:42:27,921 ಸವನ್ನಾ. ಸವನ್ನಾ. 455 00:42:43,687 --> 00:42:46,064 ಸವನ್ನಾ. ಸವನ್ನಾ. 456 00:43:00,745 --> 00:43:02,622 ಬಿಡು ನನ್ನನ್ನು. ಬಿಡು. 457 00:43:03,123 --> 00:43:06,167 -ಇಲ್ಲ. ಇಲ್ಲ. ಇಲ್ಲ. -ನನ್ನನ್ನು ಬಿಡು. ನನ್ನನ್ನು ಬಿಡು. 458 00:43:07,294 --> 00:43:10,297 ದಯವಿಟ್ಟು ನನ್ನನ್ನು ಬಿಡು. ದಯವಿಟ್ಟು ನನ್ನನ್ನು ಬಿಡು. 459 00:43:10,630 --> 00:43:13,800 ದಯವಿಟ್ಟು ನನ್ನನ್ನು ಬಿಡು. ದಯವಿಟ್ಟು ನನ್ನನ್ನು ಬಿಡು. 460 00:43:20,265 --> 00:43:22,267 ವೆರೋನಿಕಾ ಅವಳನ್ನು ನೋಡಲು ಬಿಡಬೇಡಿ. 461 00:43:24,227 --> 00:43:26,271 -ಇಲ್ಲಿ. ಕೆಳಗಿಳಿಸಿ. ಹಾಂ. -ಇಲ್ಲಾ? ಸರಿ. 462 00:43:26,521 --> 00:43:27,522 ನಿಧಾನವಾಗಿ. 463 00:43:33,111 --> 00:43:34,571 ಸರಿ, ಸರಿ, ಸರಿ. 464 00:43:36,698 --> 00:43:38,491 ನನ್ನ ಮಗುವನ್ನು ನೋಡಲು ಬಿಡುತ್ತಿಲ್ಲ. 465 00:43:40,952 --> 00:43:44,998 ನನ್ನ ತಾಯಿ ಈಓಡಿ ತಗೊಂಡಿದ್ದರಿಂದ ಈಗ ರೈಲೀನ ದತ್ತು ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ. 466 00:43:45,081 --> 00:43:47,584 ನಾವು ರೈಲೀಯನ್ನು ಇಲ್ಲಿಗೆ ಕರೆತರುತ್ತೇವೆ, ಆಯ್ತಾ? 467 00:43:47,667 --> 00:43:50,128 ಆದರೆ ನೀನಿಲ್ಲದೆ ಅದನ್ನು ಮಾಡಲಾಗದು. ಆಯ್ತಾ? 468 00:43:51,004 --> 00:43:53,506 -ಇದು ನನ್ನಿಂದ ಹೊರಹೋಗಬೇಕು. -ತಡಿ. ತಡಿ. 469 00:43:53,590 --> 00:43:55,508 ನನಗೆ ಈ ದರಿದ್ರ ಬೇಡ. 470 00:43:55,592 --> 00:43:59,095 -ಇದು ನನ್ನಿಂದ ಹೊರಹೋಗಬೇಕು. -ನನ್ನನ್ನು ನೋಡು. ನನ್ನನ್ನು ನೋಡು. ನಿಲ್ಲು. 471 00:43:59,637 --> 00:44:01,473 ನಿಲ್ಲು, ಆಯ್ತಾ? ದಯವಿಟ್ಟು ಹಾಗೆ ಹೇಳಬೇಡ. 472 00:44:01,723 --> 00:44:06,269 ದಯವಿಟ್ಟು. ದಯವಿಟ್ಟು ಹಾಗನ್ನಬೇಡ. ದಯವಿಟ್ಟು. ಇದು ಸರಿ ಹೋಗುತ್ತದೆಂದು ನಾನು ಮಾತು ಕೊಡುವೆ. 473 00:44:06,353 --> 00:44:10,565 ನಾನು ಮಾತು ಕೊಡುವೆ. ಇದು ಸರಿ ಹೋಗುತ್ತದೆಂದು ನಾನು ಮಾತು ಕೊಡುವೆ. ಆಯ್ತಾ? 474 00:44:10,732 --> 00:44:13,026 ನಾನು ಮಾತು ಕೊಡುವೆ. ನಾನಿದ್ದೇನೆ. 475 00:44:14,694 --> 00:44:15,612 ನಾನಿದ್ದೇನೆ. 476 00:44:28,333 --> 00:44:32,545 ನಾನು ಹುಡುಗಿ ಎಂದು ನನಗೆ ತಿಳಿದಾಗ ನನಗೆ ಏಳು ವರ್ಷವಾಗಿತ್ತು. ಗೊತ್ತಾಯ್ತಲ್ಲ? 477 00:44:33,296 --> 00:44:35,006 ಅಲ್ಲಿಯವರೆಗೂ ನಾನು ಮಗುವಾಗಿದ್ದೆ. 478 00:44:35,799 --> 00:44:38,802 ಆಮೇಲೆ ತಕ್ಷಣ ನಾನು ಹುಡುಗಿಯಾಗಿದ್ದೆ, ಅದರ ಅರ್ಥ ನನಗೆ ತಿಳಿದಿತ್ತು. 479 00:44:40,136 --> 00:44:42,013 ಅಂದರೆ ನಾನು ಕೀಳುವರ್ಗದಲ್ಲಿದ್ದೆ. 480 00:44:42,764 --> 00:44:45,266 ಅದು ಕೀಳುವರ್ಗ ಎಂದು ತಿಳಿಯುವಂತೆ ಜಗತ್ತು ಮಾಡುತ್ತದೆ. 481 00:44:46,601 --> 00:44:49,771 ಅದೇ ಕಾರಣಕ್ಕಾಗಿ ನಾನು ಒಂದಷ್ಟು ಮಾತ್ರೆಗಳನ್ನು ತೆಗೆದುಕೊಂಡಿದ್ದೆ. 482 00:44:50,730 --> 00:44:55,235 ಶಾಲೆಯಲ್ಲಿ ನನ್ನ ಕೆಲವು ನಗ್ನ ಚಿತ್ರಗಳು ಹರಿದಾಡುತ್ತಿದ್ದವು. 483 00:44:56,736 --> 00:44:59,114 "ನನಗೆ ಈ ದರಿದ್ರ ಸಾಕು" ಎಂದು ನಾನಂದುಕೊಂಡೆ. 484 00:44:59,948 --> 00:45:00,824 ಏನಾಯ್ತು? 485 00:45:01,533 --> 00:45:04,285 ನೆರೆಮನೆಯವರು ನನ್ನನ್ನು ಕಂಡು 911ಗೆ ಕರೆ ಮಾಡಿದರು. 486 00:45:06,162 --> 00:45:09,666 ನನಗೆ 9 ವರ್ಷವಾಗಿದ್ದಾಗ, ನನ್ನ ಅಂಕಲ್ ಏನು ಮಾಡಿದರೆಂದು ಅಮ್ಮನಿಗೆ ಹೇಳಿದೆ. 487 00:45:11,084 --> 00:45:13,795 ಆಕೆಗೆ ತುಂಬಾ ಕೋಪ ಬಂದು ನನ್ನ ಮುಖದ ಮೇಲೆ ಪದೇ ಪದೇ ಹೊಡೆದಳು. 488 00:45:15,422 --> 00:45:18,383 ಆತನ ಬಾಲ್ಯ ಚೆನ್ನಾಗಿರಲಿಲ್ಲ, ಆತನಿಗೇನೂ ಗೊತ್ತಿಲ್ಲ, 489 00:45:18,466 --> 00:45:20,677 ಮತ್ತು ಆತನ ಬಗ್ಗೆ ಕೆಟ್ಟದಾಗಿ ಹೇಳಬಾರದೆಂದಳು. 490 00:45:22,929 --> 00:45:25,849 ಹಾಗಾಗಿ ಮತ್ತೆ ಯಾರಿಗೂ ನಾನು ಏನನ್ನೂ ಹೇಳಲಿಲ್ಲ. 491 00:45:29,436 --> 00:45:31,438 ಅವರಿಗೆ ನಂಬಲು ಏನಾದರೂ ಬೇಕು. 492 00:45:41,448 --> 00:45:42,949 ಅವರು ನಿನ್ನನ್ನು ನಂಬುವಂತೆ ಮಾಡು. 493 00:45:56,171 --> 00:45:58,381 ನಿನ್ನೊಳಗೆ ದೇವರು ಹೇಗೆ ಚಲಿಸುವರು ತೋರಿಸು. 494 00:46:05,597 --> 00:46:06,806 ಎಲ್ಲಿಗೆ ಹೊರಟಿರುವೆ? 495 00:46:08,016 --> 00:46:09,017 ನನ್ನನ್ನು ಹಿಂಬಾಲಿಸಿ. 496 00:46:15,315 --> 00:46:16,149 ಇಲ್ಲಿ. 497 00:46:22,113 --> 00:46:25,783 ಅವರನ್ನು ಚಲಿಸಲು ನೀನು ಅವರನ್ನು ಮುಟ್ಟಬೇಕಿಲ್ಲ. 498 00:46:35,126 --> 00:46:38,254 ನಮ್ಮಂಥ ಹುಡುಗಿಯರಿಗೆ ಎಂದಿಗೂ ದೇವರು ಇದ್ದಿಲ್ಲ. 499 00:46:44,886 --> 00:46:46,554 ನಾವು ಏನೂ ಅಲ್ಲ ಎಂದು ಹೇಳುತ್ತಾರೆ. 500 00:46:48,014 --> 00:46:50,808 ಮತ್ತು ನಾವು ಬೇಡಿ, ಭೀತರಾಗಿ, ಮುಗುಳ್ನಗುತ್ತೇವೆ. 501 00:46:51,559 --> 00:46:55,021 ಅದು ನಮ್ಮನ್ನು ಕಾಪಾಡುತ್ತದೆಂದು ಮೌನ ವಹಿಸುತ್ತೇವೆ. 502 00:46:55,605 --> 00:46:59,359 ಮತ್ತು ನಾವೇನೇ ಮಾಡಿದರೂ, ನಮ್ಮನ್ನೊಂದು ಕೊರತೆ ಕಾಡುತ್ತೆ. 503 00:46:59,651 --> 00:47:02,612 ಯಾವಾಗಲೂ ನಮಗೆ ಎಟುಕದ ಒಂದು ಸ್ಥಾಯಿ ಇರುತ್ತದೆ, 504 00:47:03,238 --> 00:47:05,073 ನಮ್ಮನ್ನು ಅವಮಾನದಲ್ಲಿ ಮುಳುಗಿಸುತ್ತಾರೆ. 505 00:47:05,365 --> 00:47:08,618 ಮತ್ತು ಇಷ್ಟೆಲ್ಲಾ ಸಮಯ ನಮ್ಮ ಮಾತುಗಳಿಗೆ ಬೆಲೆಯೇ ಸಿಕ್ಕಿಲ್ಲ. 506 00:47:08,701 --> 00:47:10,578 ನಾವು ಮಾತನಾಡಿದಾಗ ಅವರು ಕೇಳಲಿಲ್ಲ. 507 00:47:11,663 --> 00:47:14,624 ಆದರೆ ಈಗ ಪ್ರಪಂಚ ಕೇಳಲಿದೆ. 508 00:47:16,834 --> 00:47:19,587 ಇದು ನಮ್ಮ ಸಮಯ. 509 00:47:28,179 --> 00:47:30,431 ಇದು ನಮ್ಮ ಸಮಯ. 510 00:49:51,698 --> 00:49:53,700 ಮುಂದಿನ ಬಾರಿ... 511 00:49:54,784 --> 00:49:56,119 ನಮಗೆ ಒಂದೇ ಅವಕಾಶ ಇರೋದು. 512 00:49:56,411 --> 00:49:59,706 ಬಂಡುಕೋರರ ನಾಯಕಿ ಜೋಯಾ ಎಂಬ ಹೆಂಗಸು. ಅವಳಿಗೆ ಒಬ್ಬ ಮಗಳಿದ್ದಾಳೆ. 513 00:50:00,415 --> 00:50:02,291 ಛೆ. ಅದನ್ನು ಪ್ರಕಟಿಸಿದ್ದು ಯಾರು? 514 00:50:02,834 --> 00:50:06,129 ಹೆಚ್ಚು ಬರುತ್ತದೆ. ವಿಡಿಯೋದಲ್ಲಿನ ಹುಡುಗಿ ಯಾರೆಂದು ಅವರಿಗೆ ತಿಳಿಯಬೇಕು. 515 00:50:06,629 --> 00:50:08,172 ಬಂದು ನನ್ನನ್ನು ಹುಡುಕೇ ಮುಂಡೆ. 516 00:50:08,256 --> 00:50:09,132 ಸರಿ ಕಣೆ, ಮುಂಡೆ. 517 00:50:09,215 --> 00:50:11,676 ಕುಟುಂಬವೆಂದರೆ ಕೆಲವೊಮ್ಮೆ ತ್ಯಾಗ ಮಾಡಬೇಕು. ಬಾ. 518 00:50:11,759 --> 00:50:15,263 -ನನಗೆ ಈ ಕುಟುಂಬ ಬೇಕಿಲ್ಲ. -ನೀನೇನು ಮಾಡಿರುವೆ ನಿನಗೆ ಗೊತ್ತಿಲ್ಲ. 519 00:50:15,805 --> 00:50:16,681 ನಿನ್ನ ಕೊಲ್ಲುವೆ. 520 00:50:17,849 --> 00:50:18,850 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 521 00:50:18,933 --> 00:50:19,934 ಸೃಜನಶೀಲ ಮೇಲ್ವಿಚಾರಕರು ವಿವೇಕ್