1 00:00:05,965 --> 00:00:08,175 {\an8}ವಿಮಾನ ಟಿಎಫ್564 ವಿಮಾನದಲ್ಲಿನ ಧ್ವನಿಮುದ್ರಣ 2 00:00:08,259 --> 00:00:12,096 {\an8}-ನನಗೆ ಉಸಿರಾಡಲಾಗುತ್ತಿಲ್ಲ. -ಚಿನ್ನ, ಇನ್ನೇನು ತಲುಪಿದೆವು. ಸುಧಾರಿಸಿಕೋ. 3 00:00:12,179 --> 00:00:14,890 {\an8}-ಆಕೆ ಕೂರಬೇಕು. -ಕ್ಷಮಿಸಿ. ಆಕೆಗೆ ಹಾರಾಟದ ಭಯವಿದೆ. 4 00:00:14,974 --> 00:00:18,602 {\an8}ನನಗರ್ಥವಾಗುತ್ತೆ. ಇಳಿಯಲು ಆರಂಭಿಸಿದ್ದೇವೆ. ನೀವು ಕುಳಿತುಕೊಳ್ಳಬೇಕು. 5 00:00:18,686 --> 00:00:20,771 {\an8}-ನನ್ನನ್ನು ಮುಟ್ಟಬೇಡ. -ಸರ್. 6 00:00:20,855 --> 00:00:22,982 {\an8}-ಚಿನ್ನ, ಆಕೆ ಸಹಾಯ ಮಾಡ್ತಿದ್ದಾರೆ. -ದೂರ ಇರು. 7 00:00:23,065 --> 00:00:24,442 {\an8}ಸಮಾಧಾನ ಮಾಡಿಕೊಳ್ಳಿ. 8 00:00:25,025 --> 00:00:27,069 {\an8}ಅಯ್ಯೋ, ದೇವರೇ. ಅಯ್ಯೋ, ದೇವರೇ. 9 00:00:31,240 --> 00:00:36,078 ದಿ ಪವರ್ 10 00:00:44,503 --> 00:00:45,755 ನಮಗೆ ಗೊತ್ತಿರುವುದು, 11 00:00:45,921 --> 00:00:48,174 ಬೆಳಿಗ್ಗೆ 5:48ಕ್ಕೆ ಪೈಲಟಿನ ಸಂದೇಶ ಬಂತು. 12 00:00:49,550 --> 00:00:51,969 ವಿಮಾನವು ಇಳಿಯಲು ಆರಂಭಿಸುತ್ತಿದ್ದಂತೆ, 13 00:00:52,052 --> 00:00:56,056 ತುರ್ತು ಭೂಸ್ಪರ್ಶಕಾಗಿ ಇಲ್ಲಿ ತಿರುಗಿಸಿದ್ದಾರೆ, ಆದರೆ ತೀರಾ ಕೆಳಗಿಳಿದಿದ್ದಾರೆ. 14 00:00:59,351 --> 00:01:01,896 ಸಾವು ನೋವಿನ ಪ್ರಮಾಣ ಹೆಚ್ಚಿದೆ. 15 00:01:06,317 --> 00:01:08,569 ದೇವರೇ. ಇದಕ್ಕೆ ಕಾರಣ ಏನು ನಿಮಗೆ ಗೊತ್ತೇ? 16 00:01:08,652 --> 00:01:12,281 ಪೈಲೆಟ್ ಸಂಪರ್ಕ ಸಾಧನದ ಪ್ರಕಾರ, ಯಾವುದೋ ವಿದ್ಯುತ್ ಏರುಪೇರಿನಿಂದ ಘಟಿಸಿರಬೇಕು. 17 00:01:16,368 --> 00:01:18,370 ಅಯ್ಯೋ. ಮಾಧ್ಯಮದವರು. 18 00:01:18,454 --> 00:01:22,333 ನಮ್ಮ ಮಾಧ್ಯಮದವರನ್ನು ಕರೆಸು. ಕುಟುಂಬಗಳಿಗೆ ತಿಳಿಸುವವರೆಗೂ ಹೆಸರುಗಳನ್ನು ಹೇಳಬಾರದು. 19 00:01:22,416 --> 00:01:26,545 -ಬೇಗ ಒಂದು ಹೇಳಿಕೆ ತಯಾರಿಬೇಕು. -ಚಿಂತಿಸಬೇಡಿ. ನನ್ನ ಹುಡುಗರು ನೋಡಿಕೊಳ್ತಾರೆ. 20 00:01:27,546 --> 00:01:33,177 -ಡೇನಿಯಲ್, ನಾನಿದನ್ನು ನಿಭಾಯಿಸಬಲ್ಲೆ. -ಗೊತ್ತು, ಆದರೆ ತುಂಬಾ ಹೊತ್ತು ಎದ್ದಿದ್ದೀರಿ. 21 00:01:33,677 --> 00:01:37,681 ಸ್ವಲ್ಪ ವಿಶ್ರಾಂತಿ ಪಡೆಯಿರಿ. ಆಯ್ತಾ? ಈ ಗೋಜಲನ್ನು ನಾನು ನೋಡಿಕೊಳ್ಳುವೆ. 22 00:01:37,765 --> 00:01:43,103 ನಿಮ್ಮ ಜನರ ಕಾಳಜಿ ವಹಿಸಿ. ಒಳ್ಳೆ ಕೆಲಸ. ಸರಿ. ಹೋಗೋಣ. 23 00:01:45,606 --> 00:01:47,775 ರಾಜ್ಯಪಾಲರೇ, ಒಂದು ಹೇಳಿಕೆ ಕೊಡಿ ದಯವಿಟ್ಟು? 24 00:01:47,942 --> 00:01:52,446 ಬೆಂಬಲಾತ್ಮಕವಾಗಿಯೇ ಹೇಳಿದಂತಿದೆ, ಆದರೆ ನನ್ನ ಕಥೆ ಮುಗಿಯಿತೆಂದು ನನಗೇಕೆ ಅನಿಸುತ್ತಿದೆ? 25 00:01:52,530 --> 00:01:55,574 ಯಾಕೆಂದರೆ ಡೇನಿಯಲ್ ಥರದವರಿಗೆ ಅರ್ಥವಾಗುವ ಭಾಷೆ ಅಸಂಬದ್ಧತೆಯೊಂದೇ. 26 00:01:57,368 --> 00:01:58,202 ಸರಿ. 27 00:02:05,584 --> 00:02:09,171 ನೈಜೀರಿಯಾದ ಆ ವಿದ್ಯುತ್ ಇರುವ ವಿಡಿಯೋ ಗೊತ್ತಲ್ವಾ? 28 00:02:10,548 --> 00:02:12,716 ಈ ವಿಮಾನದಲ್ಲಿ ಹದಿಹರೆಯದ ಹುಡುಗಿಯರು ಇದ್ದರಾ? 29 00:02:12,800 --> 00:02:15,386 ಬದುಕುಳಿದವರನ್ನು ಯು-ಡಬ್ಗೆ ಕರೆದೊಯ್ದರು. ನೋಡೋಣ. 30 00:03:11,066 --> 00:03:13,986 ಸಿಸ್ಟರ್ಸ್ ಆಫ್ ಕ್ರೈಸ್ಟ್ ಕಾನ್ವೆಂಟ್ 31 00:03:18,449 --> 00:03:21,827 ವಿದ್ಯುತ್ ಹುಡುಗಿಯರು???? 32 00:03:27,458 --> 00:03:30,586 -ಹಲೋ? -ತುಂಡೆ, ನಾನು ಸಿಎನ್ಎನ್ನಿಂದ ವಿನ್ ಸೇನಾ. 33 00:03:31,295 --> 00:03:34,173 ಇರಿ. ಕ್ಷಮಿಸಿ. ಸಿಎನ್ಎನ್ ಅಂದ್ರಾ? 34 00:03:34,256 --> 00:03:36,967 ಹಾಂ. ವಿದ್ಯುತ್ ಹುಡುಗಿಯರ ನಿಮ್ಮ ವಿಡಿಯೋವನ್ನು ನೋಡಿದೆವು. 35 00:03:37,051 --> 00:03:40,095 ನಿಮ್ಮಲ್ಲಿರುವುದನ್ನು ಕೊಳ್ಳುತ್ತೇವೆ, ಹೆಚ್ಚಿನದಕ್ಕಾಗಿ ಒಪ್ಪಂದ. 36 00:03:43,223 --> 00:03:45,434 ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. 37 00:03:46,810 --> 00:03:50,564 -ತುಂಡೆ, ನಾವು... -ಕ್ಷಮಿಸಿ. ತಪ್ಪಾದ ಸಂಖ್ಯೆಗೆ ಕರೆ ಮಾಡಿದ್ದೀರಿ. 38 00:03:51,982 --> 00:03:54,068 ನಿನ್ನ ವ್ಯವಹಾರದ ಪರೀಕ್ಷೆ ಯಾವಾಗ ಇದೆ ಅಂದೆ? 39 00:03:54,360 --> 00:03:56,278 -ಮೂರು ವಾರಗಳಲ್ಲಿ. -ಇನ್ನು ಮೂರೇ ವಾರಗಳು. 40 00:03:56,362 --> 00:03:58,113 -ನಿನಗೆ ಬೇಕಾದಷ್ಟು ಸಮಯವಿದೆ. -ಇಲ್ಲ. 41 00:03:58,197 --> 00:04:00,115 ನಿನ್ನ ವಯಸ್ಸಿನವರು ಓದುತ್ತಿದ್ದಾರೆ. 42 00:04:00,199 --> 00:04:05,371 ಬದಲಾಗಿ, ನೀನು ಊರೆಲ್ಲಾ ಸುತ್ತಾಡಿಕೊಂಡು, ತಲೆಹರಟೆ ಚಿತ್ರಿಸಿಕೊಂಡು, ಆ ಪಾಪದ ಹುಡುಗಿ… 43 00:04:06,288 --> 00:04:09,792 ಬಲವಂತವಾಗಿ ಹಳ್ಳಿಗೆ ಹೋಗಬೇಕಾಯಿತು. ಜನ ಅವಳನ್ನು ಮಾಟಗಾತಿ ಎನ್ನುತ್ತಿದ್ದಾರೆ. 44 00:04:12,962 --> 00:04:18,550 ನನ್ನ ಮುಂದೆಯೇ ಎದೆ ಉಬ್ಬಿಸುತ್ತಿರುವೆಯಾ? ಊರಿನಲ್ಲಿ ದೊಡ್ಡ ಮನುಷ್ಯ ನೀನು, ಅಲ್ವೇನೋ? 45 00:04:20,010 --> 00:04:24,306 ನೀನು ನಿನ್ನ ಚಿಕ್ಕಪ್ಪನಂತೆ ಆಗುತ್ತೀಯಾ, ಬೇಗ ಹೋಗಿ ಮಸಣ ಸೇರಿಕೊಳ್ಳುವೆಯಾ? 46 00:04:25,224 --> 00:04:27,977 ನಿನಗೀಗ ಮುಂದೆ ನೋಡುವ ಸಮಯವಾಗಿದೆ. 47 00:04:28,060 --> 00:04:29,853 ಆ ಪತ್ರಿಕೋದ್ಯಮ ಕೆಲಸವನ್ನು ಮರೆತುಬಿಡು. 48 00:04:32,523 --> 00:04:33,440 ತುಂಡೆ. 49 00:04:36,318 --> 00:04:38,445 ನ್ದುಡಿ ಮತ್ತು ಅವಳ ಕುಟುಂಬವನ್ನು ಬಿಡು. 50 00:04:40,698 --> 00:04:42,533 ಈಗಾಗಲೇ ಮರ್ಯಾದೆ ಕಳೆದಿರುವೆ. 51 00:05:09,226 --> 00:05:10,227 ಇಂದು ಬೇಡ. 52 00:05:12,104 --> 00:05:13,605 -ಇಂದು ಬೇಡ. -ಏನು? 53 00:05:14,565 --> 00:05:15,399 ಹುಡುಗಿಯರು ಬೇಡ. 54 00:05:16,483 --> 00:05:18,485 ನಿನ್ನ ತಂದೆ ತಾಯಿಯರಿಗೆ ಸಂದೇಶ ಬಂದಿರುತ್ತೆ. 55 00:05:21,238 --> 00:05:22,239 ಇದು ತುಂಬಾ ವಿಚಿತ್ರ. 56 00:05:23,907 --> 00:05:24,742 ಕ್ಷಮಿಸು. 57 00:05:32,249 --> 00:05:33,917 ಏನು ಮಾಡ್ತಿದ್ದೀರಿ? 58 00:05:36,045 --> 00:05:38,672 -ಹೇ. -ಏನಿದು ದರಿದ್ರ? 59 00:05:38,756 --> 00:05:40,716 -ನಿನ್ನ ಬಸ್ ಒಳಗೆ ಬಿಡಲಿಲ್ವಾ? -ಇಲ್ಲ. 60 00:05:40,799 --> 00:05:42,676 "ಎಲ್ಲಾ ಹುಡುಗಿಯರು ಇಳಿಯಿರಿ" ಎಂದ. 61 00:05:43,343 --> 00:05:45,763 ಅವಳ ಮೊಣಕೈಗಳಿಂದ ಕಿಡಿಗಳು ಬರುತ್ತಿದ್ದವು. 62 00:05:47,139 --> 00:05:47,973 ಮೊಣಕೈಗಳಿಂದಲೇ? 63 00:05:48,140 --> 00:05:50,350 ಬಸ್ ಖಾಲಿಯಿತ್ತು, ಒಳಗೆ ಮೂವರು ಹುಡುಗರಿದ್ದರು. 64 00:05:54,021 --> 00:05:55,898 -ನಾನು ಮತ್ತೆ ಸಿಗುತ್ತೇನೆ. -ಸರಿ. 65 00:05:55,981 --> 00:05:57,274 -ಜೋಸ್. ಹೇ. -ಹೇ. 66 00:05:57,357 --> 00:05:59,568 ಮತ್ತೆ ಕ್ಯಾಟ್ ಜೊತೆ ಸೇರುತ್ತಿರುವೆಯಾ? 67 00:05:59,651 --> 00:06:03,030 -ಅಂದರೆ, ಅವಳಲ್ಲಿರುವುದು ಗೊತ್ತಲ್ವಾ? -ಅವಳಲ್ಲಿ ಇದೆಯೇನು? 68 00:06:05,741 --> 00:06:07,826 ಒಬ್ಬ ಹುಡುಗಿ ಅದನ್ನು ಸೀನುವುದನ್ನು ನೋಡಿದೆಯಾ? 69 00:06:07,910 --> 00:06:10,120 -ಸುಳ್ಳು ಹೇಳಬೇಡ. -ಅಯ್ಯೋ. ಸಕ್ಕತ್ತಾಗಿದೆ. 70 00:06:10,204 --> 00:06:11,622 ಆಮೇಲೆ ಏನು ಮಾಡುತ್ತಿರುವೆ? 71 00:06:11,705 --> 00:06:14,374 ಕ್ಯಾಟ್ ಜೊತೆ ಕಳೆಯಲಿದ್ದೇನೆ. ಶುಕ್ರವಾರ ಸಿಗುತ್ತೇನೆ. 72 00:06:14,917 --> 00:06:16,668 -ಸರಿ. -ಹೇ. 73 00:06:17,336 --> 00:06:18,337 -ಹಾಯ್. -ಆರಾಮವೇನು? 74 00:06:18,796 --> 00:06:22,132 ಬಸ್ಸಿನಿಂದ ಇಳಿಯುತ್ತಿದ್ದೆ, ಆದರೆ ಏನಾಗುತ್ತಿದೆ ಅಂತ ಗೊತ್ತಿರಲಿಲ್ಲ. 75 00:06:22,216 --> 00:06:23,717 ಇಲ್ಲ, ಅವನು ಹುಚ್ಚ ಬಿಡು. 76 00:06:25,344 --> 00:06:27,638 ಮತ್ತೆ ನಾನು ಯೋಚಿಸುತ್ತಿದ್ದೆ… 77 00:06:28,263 --> 00:06:30,766 ಆಮೇಲೆ ಏನು ಮಾಡುತ್ತಿರುವೆ? ರಾತ್ರಿ ಜೊತೆ ಇರೋಣವೇ? 78 00:06:31,850 --> 00:06:35,395 -ಇಂದು ರಾತ್ರಿ ಕ್ಯಾಟ್ ಜೊತೆ. ಕ್ಷಮಿಸು. -ಶುಕ್ರವಾರ? 79 00:06:36,396 --> 00:06:39,983 ಸರಿ. ಹಾಂ. ಅದನ್ನು ಅವಳು ಸೀನುವುದನ್ನು ನೋಡಿದೆಯಾ? 80 00:06:40,150 --> 00:06:42,069 -ಸಾಧ್ಯವೇ ಇಲ್ಲ. -ಸಕ್ಕತ್ತಾಗಿದೆ. 81 00:06:44,780 --> 00:06:49,451 ಕೇಳಿರಿ, ಸೌತ್ ಸಿಯಾಟಲ್ ಹೈ. ಮೊದಲ ತರಗತಿಯನ್ನು ರದ್ದುಪಡಿಸಲಾಗಿದೆ. 82 00:06:50,119 --> 00:06:52,663 ಎಲ್ಲಾ ವಿದ್ಯಾರ್ಥಿಗಳು ತಮ್ಮ ಸ್ವಂತ ಕೋಣೆಗಳಿಗೆ ತೆರಳಿ. 83 00:06:53,580 --> 00:06:55,165 ಆದಷ್ಟು ಬೇಗ, ದಯವಿಟ್ಟು. 84 00:06:55,249 --> 00:06:59,419 ಒಳ್ಳೆಯದು. ಸರಿ, ಎಲ್ಲರೂ ಕೂರೋಣ. ಎಲ್ಲರೂ ಕುಳಿತುಕೊಳ್ಳಿ. 85 00:06:59,545 --> 00:07:00,921 ಅವನಿಗೆ ಶಾಕ್ ಕೊಟ್ಟಳಂತೆ. 86 00:07:01,171 --> 00:07:02,631 ಇದನ್ನು ತೆರೆದೇ ಇಡೋಣ. 87 00:07:05,384 --> 00:07:07,928 -ಸರಿ, ಕುಳಿತುಕೊಳ್ಳಿ ಈಗ. -ತುಂಬಾ ವಿಚಿತ್ರವಾಗಿದೆ. 88 00:07:14,476 --> 00:07:18,522 ಗವರ್ನರ್ ಕಚೇರಿಯಿಂದ ನಮಗೊಂದು ನಿರ್ದೇಶನ ಬಂದಿದೆ, 89 00:07:19,273 --> 00:07:23,569 ಶಾಲೆಯಲ್ಲಿ ಕೆಲವು ಹುಡುಗಿಯರು ಅನುಭವಿಸುತ್ತಿರುವ 90 00:07:23,652 --> 00:07:26,989 ಸಮಸ್ಯೆಯ ಬಗ್ಗೆಯ ವದಂತಿಗಳನ್ನು ಪರಿಹರಿಸುವುದಕ್ಕೆ. 91 00:07:29,783 --> 00:07:35,747 ಇದು ತಕ್ಷಣ ಮತ್ತು ಅನಪೇಕ್ಷಿತವಾಗಿ ವಿದ್ಯುತ್ ಹರಿಸುವ ಬಗ್ಗೆಯ ವಿಚಾರವಾಗಿದೆ. 92 00:07:41,712 --> 00:07:44,590 ಇದರಿಂದ ಯಾರಿಗಾದರೂ ಸಮಸ್ಯೆ ಆಗುತ್ತೆ ಎನ್ನುತ್ತಿಲ್ಲ. 93 00:07:45,716 --> 00:07:51,054 ಇದು ನಮ್ಮೆಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದ್ದಾಗಿದೆ. 94 00:07:56,685 --> 00:07:58,645 ಹಾಗಾಗಿ, ಅದು ನಿಮ್ಮಲ್ಲಿದ್ದರೆ, 95 00:08:00,355 --> 00:08:03,400 ದಯವಿಟ್ಟು, ನೀವು ಯಾರೆಂದು ಪರಿಚಯಿಸಿಕೊಳ್ಳುವಿರಾ? 96 00:08:15,662 --> 00:08:18,832 ನಿಮಗೆ ಗೊತ್ತಿರುವ ಯಾರಲ್ಲಾದರೂ ಅದು ಇದ್ದರೆ ನಿಮ್ಮ ಕೈ ಮೇಲೆತ್ತಿ? 97 00:08:18,916 --> 00:08:21,960 -ಮಿ. ಎಲ್ಲಿಸ್, ಏನ್ರೀ ಇದು. -ಸುಮ್ಮನೆ ಇದನ್ನು ಮುಗಿಸೋಣ. 98 00:08:29,885 --> 00:08:30,719 ಓ, ದೇವರೇ. 99 00:08:30,802 --> 00:08:32,930 -ಟೇಯ್ಲರ್ ವೈಟ್ ಬಳಿ ಇದೆ. -ಅದು ಸುಳ್ಳು. 100 00:08:35,057 --> 00:08:37,684 -ದಯವಿಟ್ಟು ಮುಂದೆ ಬಾ, ಟೇಯ್ಲರ್. -ಬಾ ಇಲ್ಲಿ. 101 00:08:39,436 --> 00:08:41,939 ಕಳೆದ ವಾರ ಬೇರೆಯಾದೆವು, ಈಗ? ತಮಾಷೆ ಮಾಡ್ತಿದ್ದೀರಾ? 102 00:08:44,942 --> 00:08:48,320 -ನಾನು ಮಾಡಬಲ್ಲೆ. -ಆ್ಯಶ್ಲೀ, ಧನ್ಯವಾದ. 103 00:08:49,029 --> 00:08:50,489 ಬ್ರೀ ಡಿಯಾಜ್ ಮಾಡಬಲ್ಲಳು. 104 00:08:58,497 --> 00:09:01,333 -ಏಂಜಲ್ ತಾನು ಮಾಡಬಲ್ಲೆ ಅಂತಾಳೆ. -ಅವಳಿಗೆ ನನ್ನ ಮೇಲೆ ಕೋಪ. 105 00:09:01,541 --> 00:09:03,460 -ಇದು ಅಸಂಬದ್ಧ. -ನಾನು ಮಾಡಬಲ್ಲೆ. 106 00:09:03,919 --> 00:09:04,878 ಹೊರಗೆ. 107 00:09:07,214 --> 00:09:09,675 ಕ್ಯಾಟ್ ಕೋಲ್ ಮತ್ತು ಜೋಸ್ ಇಬ್ಬರಲ್ಲೂ ಇದೆ. 108 00:09:16,390 --> 00:09:17,599 ಹೊರಡೋಣ, ಮಹಿಳೆಯರೇ. 109 00:09:20,560 --> 00:09:21,603 ಚೀಲಗಳನ್ನು ಬಿಡಿ. 110 00:09:28,485 --> 00:09:29,403 ಕಳ್ಳಿ. 111 00:09:34,116 --> 00:09:38,412 -ಬೇರೆ ಯಾರಾದರೂ? -ರೀ… ಇದು ಅನ್ಯಾಯ. ನೀವು ಹೀಗೆ ಮಾಡಬಾರದು. 112 00:09:53,844 --> 00:09:56,179 ಅವಳನ್ನು ಹೋಗಲು ಬಿಡಬೇಡಿ. ಕಾವಲುಗಾರರೇ. 113 00:09:56,638 --> 00:09:57,472 ಅವಳನ್ನು ತಡೆಯಿರಿ. 114 00:09:59,391 --> 00:10:03,395 ಮುಂದೆ ನೋಡಿ. ಬನ್ನಿ. ನೋಡುವುದೇನಿಲ್ಲ. ಬರುತ್ತಲೇ ಇರಿ. 115 00:10:04,104 --> 00:10:05,522 ಇದು ಹಾಳಾಗಿ ಹೋಗಿದೆ. 116 00:10:06,023 --> 00:10:08,275 ಬೇಗ. ಬನ್ನಿ, ಬನ್ನಿ, ಬನ್ನಿ. ಬನ್ನಿರಿ. 117 00:10:09,276 --> 00:10:12,237 46 ಪ್ರಯಾಣಿಕರು, ಒಬ್ಬ ವಿಮಾನ ಪರಿಚಾರಕಿ. 118 00:10:12,404 --> 00:10:14,531 ಇಷ್ಟು ಜನ ಈ ಅಪಘಾತದಲ್ಲಿ ಬದುಕುಳಿದರು. 119 00:10:14,614 --> 00:10:16,825 -ಅವಳನ್ನು ದೂರ ಇರಿಸಲಾರಿರಿ. -ಅರ್ಥವಾಗುತ್ತದೆ. 120 00:10:16,908 --> 00:10:20,871 ನಿಮಗೆ ಅರ್ಥವಾಗುತ್ತಿಲ್ಲ. ನನ್ನ ಮಗಳಿಗೆ 12. ಕಾರಣವಿಲ್ಲದೆ ಅವಳನ್ನು ಇರಿಸಿದ್ದೀರಿ. 121 00:10:21,079 --> 00:10:22,789 ನಾನವಳನ್ನು ಈಗಲೇ ನೋಡಬೇಕು. 122 00:10:23,165 --> 00:10:27,002 -ಮಿ. ಕೆಲ್ಲಿ. ಸಮಾಧಾನವಾಗಿರಿ. -ಫೆಡ್ಸ್ ಇಲ್ಲೇನು ಮಾಡುತ್ತಿದ್ದಾರೆ? 123 00:10:27,085 --> 00:10:30,297 -ಮಾಕಯ್ಲ ಎಲ್ಲಿದ್ದಾಳೆ ಈಗಲೇ ಹೇಳಿ. -ನಿಮ್ಮ ಮಗಳು ಚೆನ್ನಾಗಿದ್ದಾಳೆ. 124 00:10:30,380 --> 00:10:34,509 ಅವಳಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಅವಳಿಂದ ಯಾವುದೇ ಅಪಾಯ ಇಲ್ಲವೆಂತಾದಾಗ ಬಿಡುತ್ತಾರೆ. 125 00:10:34,593 --> 00:10:35,552 ಯಾವುದರ ಅಪಾಯ? 126 00:10:35,635 --> 00:10:39,306 ವಿಮಾನದಲ್ಲಿ ಅವಘಡದ ಭಾಗವೆಂದು ಪ್ರಯಾಣಿಕರು ನಿಮ್ಮ ಮಗಳನ್ನು ಗುರುತಿಸಿದ್ದಾರೆ. 127 00:10:39,389 --> 00:10:41,975 ಅವಳಿನ್ನೂ 12 ವರ್ಷದ ಮಗು, ಯಾವುದೇ ಭಯೋತ್ಪಾದಕಿ ಅಲ್ಲ. 128 00:10:42,059 --> 00:10:45,270 -ಇಲ್ಲಿ ಎಲ್ಲವೂ ಸರಿ ಇದೆಯೇ? -ಇದು ಎಫ್ಬಿಐ ವಿಚಾರ, ಮೇಡಂ. 129 00:10:45,354 --> 00:10:50,567 ನಾನು ಮಾರ್ಗೋ ಕ್ಲೆಯರಿ-ಲೋಪೆಜ್, ಮೇಯರ್. ಅಪಘಾತಗಳು ಎನ್ಟಿಎಸ್ಬಿಗೆ ಸಂಬಂಧಿಸಿದವು, ಅಲ್ವಾ? 130 00:10:50,650 --> 00:10:54,154 ನನಗೇನಾದರೂ ಗೊತ್ತಿಲ್ಲದೇ ಇದ್ದು ಅಲ್ಲಿ ಅಪರಾಧ ಚಟುವಟಿಕೆ ನಡೆದಿದ್ದರ ಹೊರತು. 131 00:10:57,574 --> 00:11:01,536 ಡಾ. ಶೂಲ್ಟ್ಜ್ ಮೂರನೇ ಶಸ್ತ್ರಚಿಕಿತ್ಸಾ ಕೋಣೆಗೆ. ಡಾ. ಶೂಲ್ಟ್ಜ್ ಓಆರ್ 3ಕ್ಕೆ. 132 00:11:01,828 --> 00:11:03,080 ನಿಮ್ಮ ನಿಯೋಜನೆ ಎಲ್ಲಿತ್ತು? 133 00:11:06,416 --> 00:11:07,542 ಅಫ್ಘಾನಿಸ್ತಾನ. 134 00:11:08,752 --> 00:11:12,589 -ನಿಮ್ಮ ಸೇವೆಗಾಗಿ ಧನ್ಯವಾದ, ಶ್ರೀ… -ಕೆಲ್ಲಿ. ಜಾನ್ ಕೆಲ್ಲಿ. 135 00:11:14,216 --> 00:11:15,342 ಕೂರಬಹುದೇ? 136 00:11:21,681 --> 00:11:24,768 -ಕೈ ಹೇಗಿದೆ? -ಪರವಾಗಿಲ್ಲ. ಚೆನ್ನಾಗಿದ್ದೇನೆ. 137 00:11:24,935 --> 00:11:28,188 -ನನ್ನ ಮಗಳನ್ನು ನೋಡಬೇಕೆಂದರೆ ಈ ಬೇವರ್ಸಿಗಳು… -ಅವಳ ಹೆಸರು ಮಾಕಯ್ಲನಾ? 138 00:11:31,191 --> 00:11:36,363 -ಅವಳು ತುಂಬಾ ಭಯಗೊಂಡಿರುತ್ತಾಳೆ. -ಹೌದು, ಅರ್ಥವಾಗುತ್ತೆ. ನನಗೂ ಮೂವರಿದ್ದಾರೆ. 139 00:11:39,116 --> 00:11:44,413 ನೋಡಿ. ಅವಳೇನೂ ತಪ್ಪು ಮಾಡಿಲ್ಲ. ಅಂದರೆ ಅವಳು ಬೇಕಾಗಿ… 140 00:11:46,665 --> 00:11:51,503 ಏನಾಯ್ತು ಅಂತಲೂ ನನಗೆ ಸರಿಯಾಗಿ ಗೊತ್ತಿಲ್ಲ. ಅವಳಿಗೆ ಹಾರಾಟದ ಭಯ, ಹಾಗಾಗಿ ಗಾಬರಿಗೊಂಡಳು. 141 00:11:52,921 --> 00:11:55,424 ಅವಳು ಒಳ್ಳೆಯ ಮಗು. ಯಾರಿಗೂ ತೊಂದರೆ ಕೊಡುವವಳಲ್ಲ. 142 00:12:01,096 --> 00:12:03,306 ಕೇಳಿ. ಏನಾಗುತ್ತಿದೆ ಎಂದು ಕಂಡುಕೊಳ್ಳುವೆ. 143 00:12:03,932 --> 00:12:05,934 ಅದರ ಮಧ್ಯೆ, ನನಗೊಂದು ಸಹಾಯ ಮಾಡುವಿರಾ? 144 00:12:07,477 --> 00:12:09,396 ಒಬ್ಬ ಏಜೆಂಟನ್ನು ಹೊಡೆದುರುಳಿಸಿದರೆ, 145 00:12:09,479 --> 00:12:12,482 ಖಂಡಿತ ಇಂದು ನಿಮ್ಮ ಮಗಳನ್ನು ನೀವು ನೋಡಲಾಗುವುದಿಲ್ಲ, 146 00:12:12,607 --> 00:12:15,569 ಹಾಗಾಗಿ ನನ್ನಿಂದ ಸುದ್ದಿ ಬರುವವರೆಗೂ ಇಲ್ಲೇ ಕೂತಿರಿ. 147 00:12:15,652 --> 00:12:19,489 -ಹಾಂ. ಅದನ್ನು ಮಾಡಬಲ್ಲೆ. -ಹೌದಾ? ಸರಿ. 148 00:12:21,825 --> 00:12:24,119 ಹೆಲೆನ್, ನಾನು ಮಾಕಯ್ಲ ಕೆಲ್ಲಿಯನ್ನು ನೋಡಬೇಕು. 149 00:12:24,202 --> 00:12:27,414 ಈ ಫೆಡ್ಸ್ ಅವಳ ತಂದೆಯನ್ನೇ ನೋಡಲು ಬಿಡುತ್ತಿಲ್ಲ. 150 00:12:27,831 --> 00:12:29,458 ಸರಿ. ಮತ್ತೆ ಅವರ ಸುತ್ತ ಹೋಗೋಣ. 151 00:12:33,086 --> 00:12:34,546 ಹೇ. ಎಲ್ಲವೂ ಸರಿ ಇದೆಯೇ? 152 00:12:34,629 --> 00:12:37,507 ಯು-ಡಬ್ನ ಪ್ರತ್ಯೇಕತೆಯಲ್ಲಿ ಕೆಲಸ ಮಾಡುವ ಯಾರಾದರೂ ಗೊತ್ತಾ? 153 00:12:37,632 --> 00:12:41,178 ಒಂದು ಅಪಘಾತದಲ್ಲಿ ಬದುಕುಳಿದವರನ್ನು ಮಾತನಾಡಲು ಫೆಡ್ಸ್ ಬಿಡುತ್ತಿಲ್ಲ. 154 00:12:41,261 --> 00:12:43,555 ಹೌದು, ಗೊತ್ತಿದ್ದಾರೆ. ಟಾಶ್ ಬಳಿ ಮಾತನಾಡಿಸುವೆ. 155 00:12:44,389 --> 00:12:46,266 ಟಾಶ್? ನಿನ್ನ ಮಾಜಿಯೇ? 156 00:12:47,559 --> 00:12:49,186 ಖಂಡಿತ. ಅದು ಒಳ್ಳೆಯದೇ. 157 00:13:01,072 --> 00:13:02,365 ಲಾಜರಸ್ ಉಗಮಿಸಿದ್ದಾನೆ. 158 00:13:11,374 --> 00:13:12,250 ಧನ್ಯಳಾಗು. 159 00:13:17,672 --> 00:13:21,092 ಪರವಾಗಿಲ್ಲ, ಹುಡುಗಿ. ನಿನಗಿಲ್ಲಿ ಯಾರೂ ತೊಂದರೆ ಕೊಡುವುದಿಲ್ಲ. 160 00:13:30,227 --> 00:13:34,606 -ನಾನೆಲ್ಲಿದ್ದೇನೆ? -ಇದು ಸಿಸ್ಟರ್ಸ್ ಆಫ್ ಕ್ರೈಸ್ಟ್ ಕಾನ್ವೆಂಟ್. 161 00:13:35,732 --> 00:13:38,735 ನಾನು ಸಿಸ್ಟರ್ ಮರಿಯಾ. ನಿನ್ನ ಹೆಸರೇನು? 162 00:13:40,695 --> 00:13:43,114 -ಈವ್. -ಒಳ್ಳೆ ಆಯ್ಕೆ. 163 00:13:44,616 --> 00:13:45,867 ಅವು ತಾಜಾ ಆಗಿವೆ. 164 00:13:45,951 --> 00:13:47,452 ಆಹಾರವನ್ನು ಇಲ್ಲೇ ಬೆಳೆಯುವೆವು, 165 00:13:47,661 --> 00:13:52,165 ಕಡಲಕಳೆಯಿಂದ ಸಾಬೂನನ್ನು ತಯಾರಿಸಿ ಖರ್ಚಿಗೆ ಹಣವನ್ನು ಗಳಿಸುತ್ತೇವೆ, 166 00:13:52,791 --> 00:13:58,213 ನಿಮ್ಮೆಲ್ಲರನ್ನೂ ನಾವು ಸೇರಿಸಿಕೊಂಡಿರುವುದರಿಂದ ಅದು ಹೆಚ್ಚೆಚ್ಚು ಆಗುತ್ತಿದೆ. 167 00:13:58,672 --> 00:14:01,508 ನಿನ್ನಂಥ ಹೆಚ್ಚು ಹುಡುಗಿಯರು ನಮ್ಮಲ್ಲಿಗೆ ಬರುತ್ತಿದ್ದಾರೆ. 168 00:14:02,217 --> 00:14:04,636 ನನ್ನಂಥ ಹುಡುಗಿಯರೇ? ಅದು ಎಂತಹ ಹುಡುಗಿ? 169 00:14:05,595 --> 00:14:07,681 ಬೇರೆ ಎಲ್ಲೂ ಹೋಗಲು ಸ್ಥಳವಿಲ್ಲದ ಹುಡುಗಿಯರು. 170 00:14:10,600 --> 00:14:14,688 ನೀನು ಇಷ್ಟರಲ್ಲೇ ಅವರನ್ನು ಭೇಟಿಯಾಗುವೆ. ಅವರು ಮಲಗುವ ಕೋಣೆಯಲ್ಲಿದ್ದಾರೆ. 171 00:14:19,192 --> 00:14:22,988 ಇದು ನಿನ್ನ ಚೀಲದಲ್ಲಿ ಸಿಕ್ಕಿತು. 172 00:14:23,738 --> 00:14:26,157 -ನನ್ನ ವಸ್ತುಗಳನ್ನು ಹುಡುಕಿದ್ರಾ? -ನೋಡಬೇಕಾಯಿತು. 173 00:14:27,200 --> 00:14:32,747 ನಾವು ಇಲ್ಲಿ ಮಾದಕ ಪದಾರ್ಥಗಳು, ಮದ್ಯ ಮತ್ತು ಆಯುಧಗಳನ್ನು ಅನುಮತಿಸುವುದಿಲ್ಲ. 174 00:14:36,876 --> 00:14:39,170 ನೀನು ಆಸ್ತಿಕಳೇ? 175 00:14:39,963 --> 00:14:43,466 -ನಾನು ಪ್ರತಿ ದಿನ ದೇವರೊಂದಿಗೆ ಮಾತನಾಡುವೆ. -ಈಗ ಮಾತನಾಡುತ್ತಿರುವೆಯಾ? 176 00:14:44,843 --> 00:14:46,219 ಅವರು ಮಾತನಾಡುತ್ತಾರೇನು? 177 00:14:46,469 --> 00:14:50,765 ಆಕೆ. ಆಕೆ ಮಾತನಾಡುವರು. ಎಲ್ಲಾ ಸಮಯದಲ್ಲೂ. 178 00:14:51,474 --> 00:14:54,394 ಇಂಥ ಭಕ್ತಿ ಇರುವುದು ಎಂತಹ ಪುಣ್ಯ. 179 00:14:57,188 --> 00:14:59,858 ಈವ್, ನಿನ್ನನ್ನು ಭೇಟಿಯಾಗಿ ಸಂತೋಷವಾಯಿತು. 180 00:15:00,442 --> 00:15:02,986 ನೀನು ರಸ್ತೆಯಲ್ಲಿ ನನಗೆ ಸಿಕ್ಕಿದ್ದು ಆಕಸ್ಮಿಕವಲ್ಲ. 181 00:15:04,112 --> 00:15:08,450 ಹಾಗಾಗಿ ನಿನಗಿಷ್ಟ ಬಂದಷ್ಟು ಕಾಲ ವಿರಮಿಸು, ದಯಮಾಡಿ. 182 00:15:09,284 --> 00:15:10,243 ಸಿಗೋಣ. 183 00:15:56,873 --> 00:15:58,833 ಅವಳನ್ನು ಹಾಗೆ ಗುರಾಯಿಸ್ತಾ ಇರ್ತೀಯಾ? 184 00:15:59,584 --> 00:16:01,419 ಸಿಸ್ಟರ್ ವೆರೋನಿಕಾ? ಸಿಸ್ಟರ್ ವೆರೋನಿಕಾ! 185 00:16:01,503 --> 00:16:05,256 ಹೇ. ಏನು, ಯಾವತ್ತೂ ಯಾವ ಹುಡುಗಿಗೂ ಮೂರ್ಛೆ ಬಂದಿರುವುದು ನೋಡಿಲ್ವಾ? 186 00:16:11,930 --> 00:16:16,559 ಇದು ಆಘಾತಕಾರಿಯಾಗಿ ಕಂಡುಬಂದರೂ, ಈ ದೃಶ್ಯವನ್ನು ಮಾರ್ಪಡಿಸಿದಂತೆ ಆಧಾರವಿಲ್ಲ. 187 00:16:16,810 --> 00:16:21,106 -ಅದೊಂದು ಆ್ಯಪ್ ಎಂದು ಕೆಲವರು ನಂಬುತ್ತಾರೆ. -ಅಥವಾ ಟೇಸರ್ಗಳು. ಟೇಸರ್ಗಳಂತೆ ಕಾಣ್ತಿವೆ. 188 00:16:21,189 --> 00:16:23,733 ಇದು ವಿಡಿಯೋ ಗೇಮ್ಸಿಂದ ಆಗಿರೋ ಸಮಸ್ಯೆಯೇ? 189 00:16:25,235 --> 00:16:27,028 ಮುಂದೆ, ನಿಮ್ಮ ಮತ್ತು ಪರಿಣಿತರ 190 00:16:27,112 --> 00:16:31,449 ಅಭಿಪ್ರಾಯವನ್ನು ಪಡೆಯಲಿದ್ದೇವೆ, ವಿದ್ಯುತ್ ಹುಡುಗಿಯರ ಪೊಳ್ಳಿನ ಬಗ್ಗೆ. 191 00:16:32,325 --> 00:16:34,202 -ಏನು? -ಹೇ. ಲೇ. ಜರುಗೇ. 192 00:16:34,285 --> 00:16:37,038 …ಮಕ್ಕಳು ವಾರಗಳಿಂದ ಏನನ್ನು ನೋಡುತ್ತಿದ್ದಾರೆ ತಿಳಿಯೋಣ, 193 00:16:37,122 --> 00:16:39,624 ವಿಶ್ವದೆಲ್ಲೆಡೆಯಿಂದ ಹೊಚ್ಚ ಹೊಸ ದೃಶ್ಯಗಳು ಲಭಿಸಿವೆ. 194 00:16:42,293 --> 00:16:44,671 ಇದು ಪೊಳ್ಳಾ? ನೀವೇ ನಿರ್ಧರಿಸಿ. 195 00:16:45,046 --> 00:16:47,966 ಈ ಮುಂದಿನ ದೃಶ್ಯಗಳು ಕೆಲ ವೀಕ್ಷಕರಿಗೆ ಸಂಕಟ ತರಬಹುದು. 196 00:16:48,049 --> 00:16:48,883 ನೋಡ್ಕೊಳ್ಳಿ. 197 00:16:58,143 --> 00:17:00,311 ಅಯ್ಯೋ, ದೇವರೇ. 198 00:17:00,645 --> 00:17:01,646 ಬೇವರ್ಸಿ. 199 00:17:02,355 --> 00:17:03,273 ಓಡಿ! 200 00:17:06,317 --> 00:17:07,944 ಸರಿ. ಸರಿ. ಸರಿ. 201 00:17:08,027 --> 00:17:10,196 ಹಿಂಸಾತ್ಮಕ ಅಪರಾಧಗಳನ್ನು ಯಾರೂ ಗಮನಿಸುತ್ತಿಲ್ಲ... 202 00:17:10,363 --> 00:17:11,531 ಹೇ, ಲೇ. ಜರುಗುತ್ತೀಯಾ? 203 00:17:11,740 --> 00:17:14,159 ...ಅಥವಾ ಯುಎಸ್ ಪೊಲೀಸ್ ಪಡೆ ತಮ್ಮ ಮಿತಿ ಮೀರಿ 204 00:17:14,325 --> 00:17:17,746 ಇದು ಒಳ್ಳೆಯದೇ ಎನ್ನುತ್ತಿದ್ದಾರೆ. ಇದು ಮೂರ್ಖತನ. 205 00:17:17,912 --> 00:17:19,038 ನಿಮ್ಮಲ್ಲಿದು ಇದೆಯೇನು? 206 00:17:20,582 --> 00:17:23,126 ನಮ್ಮೆಲ್ಲರಲ್ಲೂ. ಅಂದರೆ, ಬಹುತೇಕ ಮಂದಿಯಲ್ಲಿ. 207 00:17:23,752 --> 00:17:25,086 ಅದಕ್ಕೇ ನಾವಿಲ್ಲಿರೋದು. 208 00:17:25,962 --> 00:17:28,882 ಮತ್ತೆ ಈಗ ಎಲ್ಲರಲ್ಲೂ ಇದೆಯಾ? ಎಲ್ಲರೂ ವಿಶೇಷವಾದವರಾ? 209 00:17:29,048 --> 00:17:31,509 ನಿನ್ನಿಂದ ಆಗುವುದು ಯಾರಿಂದಲೂ ಸಾಧ್ಯವಿಲ್ಲ, ಚಿನ್ನ. 210 00:17:34,012 --> 00:17:36,306 -ಬಟ್ಟೆಗಳ ದಾನ ಬಂದಿದೆ. -ಅರೆ ವಾಹ್. 211 00:17:36,389 --> 00:17:38,683 -ಯಾರೂ ನನ್ನನ್ನು ಮುಟ್ಟಬೇಡಿ. -ಸರಿದುಕೋ, ಸರಿ. 212 00:17:44,189 --> 00:17:47,859 ಹುಡುಗಿಯರೇ, ಹೊರಗೆ. ಕುಟುಂಬ ಸಭೆ. 213 00:17:50,445 --> 00:17:55,158 ನಮ್ಮ ಗಮನಕ್ಕೆ ಬಂದಿರುವ ಹಾಗೆ ನಿಮ್ಮಲ್ಲಿ ಕೆಲವರು ಉಲ್ಲೇಖಿಸಿರುವ ಇತ್ತೀಚಿನ ಸಮಸ್ಯೆಗಳು, 214 00:17:55,825 --> 00:17:57,911 ಬೆರಳುಗಳು ಮತ್ತು ಕಿಡಿಗಳಿಗೆ ಸಂಬಂಧಿಸಿದಂತೆ, 215 00:17:57,994 --> 00:18:01,080 ಅಮೆರಿಕದುದ್ದಕ್ಕೂ ಹರಡುತ್ತಿದೆ, ಬಹುಶಃ ಅದರ ಆಚೆಯೂ ಇರಬಹುದು. 216 00:18:01,456 --> 00:18:05,543 ಮತ್ತು ಈ ರೂಪಾಂತರವು ಅತ್ಯಂತ ಅಪಾಯಕಾರಿಯಂತೆ ಗೋಚರಿಸುತ್ತದೆ. 217 00:18:05,627 --> 00:18:09,339 ಕೋಳಿಯ ದುರಾದೃಷ್ಟಕರ ವ್ಯಾಪಾರ, ನನ್ನ ಪ್ರಕಾರ, 218 00:18:09,714 --> 00:18:13,635 ಆ ವಿಚಾರ ಬೇಡ, ನಾವು ಯಾವುದರೊಂದಿಗೆ ಸೆಣೆಸಾಡುತ್ತಿದ್ದೇವೆ ಎಂದು ಸೂಚಿಸುತ್ತದೆ. 219 00:18:13,718 --> 00:18:16,888 ಇದು ನಮ್ಮ ಸುರಕ್ಷತೆಗಾಗಿ. ನಾನು ಹೇಳಿದರೆ, ನೀವು ಹೊರಹೋಗುತ್ತೀರಿ. 220 00:18:17,555 --> 00:18:20,141 ವಿದ್ಯುತ್ ಇಲ್ಲ. ಈಗ ಕೆಲಸ ನೋಡಿ. 221 00:18:22,185 --> 00:18:23,186 ಹೋಗಿ! 222 00:18:24,229 --> 00:18:26,064 ಹೋಗೋಣ. ಬನ್ನಿ, ಹುಡುಗಿಯರೇ. 223 00:18:29,150 --> 00:18:34,197 ಪ್ರತಿ ವಸಂತ ಮತ್ತು ಬೇಸಿಗೆಯಂದು ನಮಗಿನ್ನೊಬ್ಬ ಖುಷಿಯಾದ ಹುಡುಗ ಬೇಕು 224 00:18:34,531 --> 00:18:38,076 ಊದು, ಲೈಜಾ, ಊದು ಊದು, ಲೈಜಾ, ಊದು 225 00:18:39,118 --> 00:18:42,747 ಊದು, ಲೈಜಾ, ಊದು ಊದು, ಲೈಜಾ, ಊದು 226 00:18:43,957 --> 00:18:47,252 ಊದು, ಲೈಜಾ, ಊದು ಊದು, ಲೈಜಾ, ಊದು 227 00:18:47,919 --> 00:18:51,548 ಊದು, ಲೈಜಾ, ಊದು ಊದು, ಲೈಜಾ, ಊದು 228 00:18:52,465 --> 00:18:55,468 ಊದು, ಲೈಜಾ, ಊದು ಊದು, ಲೈಜಾ, ಊದು 229 00:18:56,386 --> 00:19:00,056 ಊದು, ಲೈಜಾ, ಊದು ಊದು, ಲೈಜಾ, ಊದು 230 00:19:00,932 --> 00:19:04,143 ಊದು, ಲೈಜಾ, ಊದು ಊದು, ಲೈಜಾ, ಊದು 231 00:19:04,811 --> 00:19:06,229 ಊದು, ಲೈಜಾ, ಊದು 232 00:19:06,563 --> 00:19:08,648 ಇದು ಅವಶ್ಯಕವೇ? 233 00:19:08,857 --> 00:19:12,193 ಯಾವುದರೊಂದಿಗೆ ವ್ಯವಹರಿಸುತ್ತಿದ್ದೇವೆಂದು ತಿಳಿಯುವವರೆಗೂ ಇದು ಮುಂಜಾಗ್ರತೆ. 234 00:19:12,277 --> 00:19:14,904 ಬಹಳ ವದಂತಿಗಳಿವೆ, ಆದರೆ ಬಹಳ ಉತ್ತರಗಳಿಲ್ಲ. 235 00:19:14,988 --> 00:19:19,033 ಸರಿ. ಮತ್ತೆ ನೀನು ಮತ್ತು ರಾಬ್ ಡಾಕ್ಟರ್ಸ್ ವಿಥೌಟ್ ಬಾರ್ಡರ್ಸಲ್ಲಿ ಭೇಟಿಯಾದಿರಾ? 236 00:19:19,367 --> 00:19:23,329 ಹಾಂ. ಹಾಂ. ವೈದ್ಯಕೀಯ ಶಿಕ್ಷಣ ಮುಗಿದದ್ದೇ ಆರು ತಿಂಗಳು ಕಾಂಬೋಡಿಯಾದಲ್ಲಿದ್ದೆವು. 237 00:19:23,496 --> 00:19:27,333 ಆ ಪ್ರವಾಸ ತನ್ನ ಜೀವನ, ವೈದ್ಯಶಾಸ್ತ್ರದ ಮೇಲ್ನೋಟವನ್ನೇ ಬದಲಾಯಿಸಿತು ಅಂತಾರೆ. 238 00:19:28,418 --> 00:19:31,546 ಹೌದು, ನನಗೂ ಅಷ್ಟೇ. ನನಗೆ ತುಂಬಾ ವಿಚಾರಗಳ ಸ್ಪಷ್ಟತೆ ಸಿಕ್ಕಿತು. 239 00:19:33,089 --> 00:19:37,135 ಸರಿ. ಪ್ರತಿ 20 ನಿಮಿಷಗಳಿಗೊಮ್ಮೆ ಪ್ರತಿನಿಧಿಗಳು ಪರೀಕ್ಷಿಸುತ್ತಿದ್ದಾರೆ, ಹಾಗಾಗಿ ಸಮಯ ನೋಡಿಕೋ. 240 00:19:37,886 --> 00:19:39,554 -ಮತ್ತೊಮ್ಮೆ ಧನ್ಯವಾದ. -ಇರಲಿ. 241 00:19:49,439 --> 00:19:50,273 ಮಾಕಯ್ಲ? 242 00:19:56,279 --> 00:20:00,950 ಹಾಯ್. ನಾನು ಮಾರ್ಗೋ. ನಾನು ಇಲ್ಲಿನ ಮೇಯರ್, ಸಿಯಾಟಲಲ್ಲಿ. 243 00:20:01,159 --> 00:20:04,662 -ನನಗೆ ನಮ್ಮಪ್ಪ ಬೇಕು. -ನಿಮ್ಮಪ್ಪನೊಂದಿಗೆ ಮಾತನಾಡಿದೆ. ಮೇಲೆ ಇದ್ದಾರೆ. 244 00:20:05,663 --> 00:20:08,082 ಅವರ ಬಳಿ ಯಾಕೆ ಬಿಡುತ್ತಿಲ್ಲ? ನಾನು ತೊಂದರೆಯಲ್ಲಿದ್ದೀನಾ? 245 00:20:08,166 --> 00:20:10,209 ಇಲ್ಲ. ಇಲ್ಲ. ಯಾರೂ ತೊಂದರೆಯಲ್ಲಿಲ್ಲ. 246 00:20:10,752 --> 00:20:14,130 ಏನಾಯ್ತು ಎಂದು ತಿಳಿಯಲು ಬಂದಿದ್ದೇನೆ ಅಷ್ಟೇ. 247 00:20:15,340 --> 00:20:17,634 ನಾನೇನೂ ಮಾಡಲಿಲ್ಲ ಎಂದು ಅವರಿಗೆ ಈಗಾಗಲೇ ಹೇಳಿದೆ. 248 00:20:17,717 --> 00:20:21,721 ವಿಮಾನ ಅಲ್ಲಾಡಿದರೆ ನನಗೆ ಇಷ್ಟವಾಗುವುದಿಲ್ಲ. ನಾನು ಸಾಯುತ್ತಿದ್ದೇನೆ ಅನಿಸುತ್ತದೆ. 249 00:20:23,222 --> 00:20:26,184 ನನ್ನ ಮಗಳು ಜೋಸ್'ಗೂ ಹಾರಾಟವೆಂದರೆ ಭಯವಿತ್ತು. 250 00:20:29,437 --> 00:20:32,315 ನಡೆದದ್ದರ ಬಗ್ಗೆ ನಿನಗೇನಾದರೂ ನೆನಪಿದೆಯೇ? 251 00:20:35,526 --> 00:20:38,780 ಇದರಿಂದ ನನಗೆ ಸ್ಪಷ್ಟತೆ ಸಿಕ್ಕಿದರೆ ನೀನು ಮನೆಗೆ ಹೋಗಬಹುದು. 252 00:20:45,328 --> 00:20:46,204 ನನ್ನ ಕೈಗಳು. 253 00:20:48,039 --> 00:20:50,541 ಕೆಲ ದಿನಗಳ ಹಿಂದೆ ನೋಯಲು ಆರಂಭಿಸಿದವು. 254 00:20:50,833 --> 00:20:55,088 ಅಂದರೆ ಒಗೆಯುವ ಯಂತ್ರದಲ್ಲಿ ಬಟ್ಟೆಯನ್ನು ಮುಟ್ಟಿದರೆ ಶಾಕ್ ಹೊಡೆಯುತ್ತಲ್ಲ? 255 00:20:56,089 --> 00:20:58,341 ನನಗೆ ಹಾರಾಟದ ಬಗ್ಗೆ ತುಂಬಾ ಭಯವಿತ್ತು, 256 00:20:59,217 --> 00:21:01,761 ಹಾಗಾಗಿ ನನಗೆ ಮಲಗಲು ನಮ್ಮಪ್ಪ ಬೆನಡ್ರಿಲ್ ಕೊಟ್ಟರು. 257 00:21:02,971 --> 00:21:07,600 ಆಮೇಲೆ ವಿಮಾನ ಅಲ್ಲಾಡುತ್ತಿತ್ತು. ನಾನು ಎಚ್ಚರಗೊಂಡು, ಭಯಭೀತಳಾದೆ. 258 00:21:07,684 --> 00:21:11,646 ಉಸಿರಾಡಲು ಕಷ್ಟವಾಗುತ್ತಿತ್ತು, ಪಕ್ಕದಲ್ಲಿ ಒಬ್ಬ ಹೆಂಗಸು ಬೆಲ್ಟ್ ಧರಿಸಲು ಹೇಳುತ್ತಿದ್ದಳು. 259 00:21:11,729 --> 00:21:12,981 ವಿಮಾನ ಪರಿಚಾರಕಿಯೇ? 260 00:21:14,732 --> 00:21:17,652 ಆಮೇಲೆ ನನ್ನ ಕೈಗಳು ಮತ್ತೆ ನೋಯಲಾರಂಭಿಸಿದವು, 261 00:21:18,152 --> 00:21:20,863 ಮತ್ತು ಆಕೆ ನನಗೆ ಬೆಲ್ಟ್ ಹಾಕಲು ಬಗ್ಗಿದಳು. 262 00:21:22,031 --> 00:21:25,118 ತಕ್ಷಣ, ಹೊದಿಕೆಗೆ ಬೆಂಕಿ ಹೊತ್ತಿಕೊಂಡಿತು. 263 00:21:26,327 --> 00:21:30,707 ಎಲ್ಲರೂ ಕೂಗಾಡುತ್ತಿದ್ದರು. ಎಲ್ಲವೂ ಹಾರಾಡುತ್ತಿತ್ತು, ಮತ್ತು ಆ ವಿಮಾನ… 264 00:21:32,583 --> 00:21:35,169 ನಾನು ಯಾರಿಗೂ ತೊಂದರೆ ಕೊಡಲು ಉದ್ದೇಶಿಸಲಿಲ್ಲ. 265 00:21:35,795 --> 00:21:37,880 -ಚಿನ್ನ… -ನಾನೇನು ಮಾಡಿದೆ ನನಗೆ ಗೊತ್ತಿಲ್ಲ. 266 00:21:38,006 --> 00:21:40,925 ಪರ್ವಾಗಿಲ್ಲ. ಇದನ್ನು ಪರಿಹರಿಸೋಣ. ಪರ್ವಾಗಿಲ್ಲ. 267 00:21:42,051 --> 00:21:42,885 ಪರ್ವಾಗಿಲ್ಲ. 268 00:21:43,011 --> 00:21:47,015 -ಆ ಹೆಂಗಸಿಗೆ ನನ್ನ ಕ್ಷಮೆ ಯಾಚನೆ ತಿಳಿಸುವಿರಾ? -ಯಾವ ಹೆಂಗಸು? ವಿಮಾನ ಪರಿಚಾರಕಿಯೇ? 269 00:21:49,308 --> 00:21:50,435 ನಾನಾಕೆಯನ್ನು ನೋಯಿಸಿದೆ. 270 00:21:52,562 --> 00:21:54,939 ಆ ಹುಡುಗಿಗೆ ಬೆಲ್ಟ್ ಹಾಕಲು ಇಷ್ಟವಿಲ್ಲ ಅಂದುಕೊಂಡೆ. 271 00:21:55,523 --> 00:21:58,609 ಆಮೇಲೆ ಅವಳಿಗೆ ಮೂರ್ಛೆ ಬಂದಂತಾಯಿತು, ಹಾಗಾಗಿ ಅವಳನ್ನು ಹಿಡಿದುಕೊಂಡೆ. 272 00:21:59,235 --> 00:22:02,113 ಅವಳ ತಲೆಗೆ ಪೆಟ್ಟಾಗದಿರುವುದು ನನ್ನ ಉದ್ದೇಶವಾಗಿತ್ತು. 273 00:22:02,196 --> 00:22:05,241 ನೀವು ನೋಡಿದಿರಾ? ಹೊದಿಕೆಗೆ ಬೆಂಕಿ ಹೇಗೆ ಹೊತ್ತಿಕೊಂಡಿತು ಅಂತ? 274 00:22:05,366 --> 00:22:08,286 ಇಲ್ಲ. ನಾನೇನೂ ನೋಡಲಿಲ್ಲ. ತುಂಬಾ ಬೇಗ ನಡೆಯಿತು. 275 00:22:08,786 --> 00:22:11,998 ನನ್ನನ್ನು ತಳ್ಳಲು ನೋಡುತ್ತಿದ್ದಳು, ಅವಳ ಕೈಗಳು ಇಲ್ಲಿದ್ದವು. 276 00:22:12,457 --> 00:22:15,043 ಮತ್ತೆ ನನಗೊಂದು ಆಘಾತ ಆದಂತಾಯಿತು. 277 00:22:16,294 --> 00:22:20,965 ವಿಪರೀತ ನೋವಾಯಿತು, ಆಮೇಲೆ ಏನೂ ನೋವಾಗಲೇ ಇಲ್ಲ. 278 00:22:21,966 --> 00:22:23,926 ಅದ್ಭುತವಾದ ಅನುಭವವಾಯಿತು. 279 00:22:37,899 --> 00:22:42,695 ನಾನದನ್ನು ವಿವರಿಸಲಾರೆ. ಅವಳಿಂದ ನನಗೆ ಬಂತು ಅನಿಸುತ್ತಿದೆ. 280 00:22:46,365 --> 00:22:48,701 ನಮ್ಮಿಬ್ಬರಿಂದ ವಿಮಾನದ ಪತನ ಆಯಿತು ಅನಿಸುತ್ತದೆ. 281 00:22:50,995 --> 00:22:52,705 ಹೊರಡೋಣ, ಮೇಯರ್. ಸಮಯ ಮುಗೀತು. 282 00:23:02,423 --> 00:23:05,176 ಈ ಕೋಣೆ ಕಡ್ಡಾಯವಾಗಿ ಅನುಮೋದಿತ ಸದಸ್ಯರಿಗೆ ಮಾತ್ರ. 283 00:23:05,259 --> 00:23:07,845 ದೇವರೇ. ರಾಬ್, ನೀನು ನಂಬುವುದಿಲ್ಲ... 284 00:23:07,929 --> 00:23:10,515 ಜೋಸ್ ಬಗ್ಗೆ. ನಾವೀಗಲೇ ಅವಳ ಶಾಲೆಗೆ ತೆರಳಬೇಕು. 285 00:23:10,598 --> 00:23:12,809 ಏನು? ಏನು? ಏನು ನಡೆಯುತ್ತಿದೆ? 286 00:23:15,269 --> 00:23:17,355 ಇಷ್ಟು ಬೇಗ ಬಂದಿದ್ದಕ್ಕೆ ಧನ್ಯವಾದಗಳು. 287 00:23:17,438 --> 00:23:19,398 -ನಿಮಗೆ ಬಿಡುವಿಲ್ಲ ಅಂತ ಗೊತ್ತು… -ಜೋಸ್. 288 00:23:20,942 --> 00:23:23,694 -ಜೋಸೆಲಿನ್ ಕ್ಲೆಯರಿ-ಲೋಪೆಜ್? -ಜೋಸ್. 289 00:23:23,861 --> 00:23:25,905 -ದೇವರೇ. -ಜೋಸ್? 290 00:23:25,988 --> 00:23:29,075 -ಅಮ್ಮ, ನಾನಿಲ್ಲಿದ್ದೇನೆ. -ಓ, ದೇವರೇ. 291 00:23:29,242 --> 00:23:32,787 -ದೇವರೇ. ಆರಾಮವಾಗಿದ್ದೀಯಾ, ಚಿನ್ನ? -ಏನು ನಡೆಯುತ್ತಿದೆ ಇಲ್ಲಿ? 292 00:23:33,246 --> 00:23:34,539 -ಚೆನ್ನಾಗಿದ್ದೇನೆ. -ದೇವರೇ. 293 00:23:34,622 --> 00:23:37,375 ಇಲ್ಲೇನು ಮಾಡುತ್ತಿರುವೆ? ಅಪ್ಪ ಬರ್ತಾರೆ ಅಂದುಕೊಂಡಿದ್ದೆ. 294 00:23:38,126 --> 00:23:39,877 ಅಂದರೆ, ನಮಗಿಬ್ಬರಿಗೂ ಚಿಂತೆಯಾಯಿತು. 295 00:23:41,629 --> 00:23:43,089 ನಿಮ್ಮಮ್ಮ ನಮಗೆ ನೆರವಾಗಬೇಕು. 296 00:23:43,673 --> 00:23:45,299 ಆಕೆ ನಮಗೆ ನೆರವಾಗಬೇಕು. 297 00:23:45,675 --> 00:23:47,051 ಏನು ಮಾಡುತ್ತಿರುವೆ, ಜೋ? 298 00:23:47,760 --> 00:23:51,472 ನಮ್ಮ ಮನೆಗೆ ಬಂದಿರುವೆ, ಊಟ ಮಾಡಿರುವೆ. ನಮ್ಮ ಮಕ್ಕಳನ್ನು ಅಪರಾಧಿಗಳಂತೆ ನೋಡ್ತೀಯಾ? 299 00:23:51,764 --> 00:23:54,517 ಏನಾಗಿದೆ? ತಲೆ ಕೆಟ್ಟಿದೆಯೇ? ಮನುಷ್ಯತ್ವ ಕಳೆದುಹೋಗಿದೆಯೇ? 300 00:23:54,600 --> 00:23:57,436 -ಅವರನ್ನು ನಿಭಾಯಿಸಬೇಕಾಯಿತು. -ಅಯ್ಯೋ, ದೇವರೇ. 301 00:23:57,520 --> 00:24:01,274 ಅವುಗಳನ್ನು ಈಗಲೇ ತೆರೆಯದಿದ್ದರೆ ನಿನ್ನ ಕತ್ತಿಗೆ ಬಿಗಿಯುತ್ತೇನೆ. 302 00:24:01,357 --> 00:24:03,234 -ಕೇಳಿಸಿತಾ? ಕೇಳಿಸಿತೇನು? -ಹಾಂ. 303 00:24:10,408 --> 00:24:14,662 ಇನ್ನೊಂದು ಗಂಟೆಯಲ್ಲಿ ಈ ಎಲ್ಲಾ ಹುಡುಗಿಯರು ಮನೆಯಲ್ಲಿ ತಮ್ಮ ಪಾಲಕರೊಂದಿಗೆ ಇಲ್ಲದಿದ್ದರೆ, 304 00:24:14,745 --> 00:24:16,164 ನಿಮಗೆ ದೊಡ್ಡ ಸಮಸ್ಯೆ ಆಗುತ್ತದೆ. 305 00:24:16,706 --> 00:24:20,042 -ಹಾಂ. -ಇದು ಸರಿ ಹೋಗುತ್ತೆ, ಆಯ್ತಾ? 306 00:24:20,168 --> 00:24:21,043 ಸರಿ. 307 00:24:36,100 --> 00:24:39,770 ಕೆಲವು ಹುಡುಗಿಯರು ಅದನ್ನು ಗುರಿಯಿಟ್ಟು ಚೆನ್ನಾಗಿ ನಿಯಂತ್ರಿಸಬಲ್ಲೆರೆಂದು ಬಲ್ಲೆ. 308 00:24:41,647 --> 00:24:45,568 ಯಾವುದನ್ನು ಎಷ್ಟು ಪ್ರಮಾಣದಲ್ಲಿ ಹೊಡೆಯಬೇಕು ಎಂದು ಅವರಿಗೆ ತಿಳಿದಂತಿದೆ. 309 00:24:49,363 --> 00:24:51,824 -ಸರಿ. -ಆದರೆ ನನ್ನದು… 310 00:24:53,784 --> 00:24:55,453 ನನ್ನದು ಹಾಗೆ ಕೆಲಸ ಮಾಡುವುದಿಲ್ಲ. 311 00:24:56,537 --> 00:24:58,247 ಸರಿ. ನಿನ್ನದು ಹೇಗೆ ವರ್ತಿಸುತ್ತೆ? 312 00:25:15,264 --> 00:25:17,475 -ನೋಡಿ? -ಹೇ. ಹೇ. 313 00:26:09,443 --> 00:26:10,278 ಇದು? 314 00:26:14,031 --> 00:26:17,410 ಗೊತ್ತಾ, ನೀವಿಲ್ಲಿ ಅಸಂಬದ್ಧವಾದ ಕಾನ್ವೆಂಟ್ ವ್ಯವಹಾರ ನಡೆಸುತ್ತಿದ್ದೀರಿ. 315 00:26:17,493 --> 00:26:20,579 ನೀನು ಸಂಕಷ್ಟದಲ್ಲಿದ್ದೆ. ಆ ರಸ್ತೆಯ ಮೇಲೆ ಇನ್ನೇನು ಸಾಯುವವಳಿದ್ದೆ. 316 00:26:20,663 --> 00:26:24,208 ಗೊತ್ತಾ ಅದು? ನಿನ್ನನ್ನು ವೈದ್ಯರು ಬಂದು ಪರೀಕ್ಷಿಸಬೇಕು. 317 00:26:24,917 --> 00:26:28,587 ಆದರೆ ಶುಕ್ರವಾರ ಚಂಡಮಾರುತ ಬರುವುದಿದೆ, ಹಾಗಾಗಿ ಅದರ ನಂತರ ಆಗಬೇಕು. 318 00:26:28,671 --> 00:26:30,798 ಕೆಲಕಾಲ ಯಾರೂ ಒಳಗೂ, ಹೊರಗೂ ಹೋಗಿ ಬರುವುದಿಲ್ಲ. 319 00:26:33,592 --> 00:26:34,593 ನಾನು ಹೋಗಬಹುದಾ? 320 00:26:35,678 --> 00:26:39,557 ಮಧ್ಯಾಹ್ನದ ಒಳಗೆ ನೀನು ಹೊರಟರೆ. ಆಮೇಲೆ ನಾವು ಈ ಜಾಗಕ್ಕೆ ಬೀಗ ಹಾಕುತ್ತೇವೆ. 321 00:26:42,268 --> 00:26:45,730 ನೀನು ಕಛೇರಿಗೆ ಭೇಟಿಕೊಟ್ಟು ಗುರುತಿನ ಅರ್ಜಿಗಳನ್ನು ಭರ್ತಿ ಮಾಡಬೇಕು. 322 00:26:45,813 --> 00:26:50,109 -ಎಲ್ಲಾ ಹುಡುಗಿಯರು ದಾಖಲೆಯಲ್ಲಿರಬೇಕು. -ಊಹೂಂ, ಹುಡುಗಿ. ಕಾಗದದ ಸುಳಿವು ಬೇಡ. 323 00:26:51,485 --> 00:26:55,281 -ನನಗೆ ಶೂ ಸಿಕ್ಕಿದ್ದೇ ಹೊರಡುತ್ತೇನೆ. -ನಮಗೂ ಅದು ಅನುಕೂಲಕರ. 324 00:27:09,837 --> 00:27:11,047 ಹೆಚ್ಚೇನೂ ಸಿಗುವುದಿಲ್ಲ. 325 00:27:13,341 --> 00:27:14,842 ಬಡತನದ ಪ್ರತಿಜ್ಞೆ ಮಾಡಿದ್ದೇವೆ. 326 00:27:25,978 --> 00:27:29,690 ಸಿಸ್ಟರ್ ಮೋನಿಕಾ, ದಾರಿ ತಪ್ಪಿದ ಮಕ್ಕಳ ಪೋಷಕ ಸಂತಳು. 327 00:27:32,068 --> 00:27:36,030 ಕುಳಿತುಕೋ, ಈವ್. ನನಗೆ ಯಾವ ತೊಂದರೆಯೂ ಬೇಡ. 328 00:27:36,364 --> 00:27:39,075 ಪೊಲೀಸ್ ಬೇಡ. ಮಾತಷ್ಟೇ. 329 00:27:46,540 --> 00:27:52,505 ಸಿಸ್ಟರ್ ವೆರೋನಿಕಾ ಸ್ವಲ್ಪ ಗಡಸು ಎನಿಸಬಹುದು, ನಾನು ಆಣೆ ಮಾಡುವೆ, ಆಕೆ ಒಳ್ಳೆಯ ಹೆಂಗಸು. 330 00:27:53,631 --> 00:27:55,549 ಅದ್ಭುತ ಕೆಲಸಗಳನ್ನು ಮಾಡಿದ್ದಾರೆ. 331 00:27:57,885 --> 00:28:01,097 ಕ್ಯಾರೋಲಿನಾ ತೀರದಲ್ಲಿ ಅಲೆಗಳನ್ನೆಬ್ಬಿಸುತ್ತಿರುವ ಬಂಡಾಯವೆದ್ದ ಸನ್ಯಾಸಿನಿಯರು 332 00:28:01,263 --> 00:28:02,932 {\an8}ಏಡ್ಸ್: ನಮಗೆ ಸಂಶೋಧನೆ ಬೇಕು. ಚಿತ್ತವಿಕೋಪ ಅಲ್ಲ! 333 00:28:03,015 --> 00:28:05,476 ಸಲಿಂಗಿಗಳಿಗಾಗಿ ಮಾನವ ಹಕ್ಕುಗಳು! 334 00:28:06,185 --> 00:28:08,646 ಕ್ಯಾಥೋಲಿಕ್ ಅವರಂತೆ ಭಾಸವಾಗುವುದಿಲ್ಲ. 335 00:28:08,729 --> 00:28:11,857 ಅದಲ್ಲ. ನಾವು ನಮ್ಮ ಹೃದಯಗಳಲ್ಲಿ ಸನ್ಯಾಸಿನಿಯರು. 336 00:28:13,025 --> 00:28:17,446 ಹೃದಯಗಳಲ್ಲಿ ಕ್ರಿಸ್ತನ ಸೋದರಿಯರು, ಆದರೆ ಚರ್ಚಿನಲ್ಲಲ್ಲ. 337 00:28:19,407 --> 00:28:23,285 ನಾನು ಕಿರಿಯವಳಾಗಿದ್ದಾಗ, ನನ್ನ ಸತ್ಯವನ್ನು ನಂಬಿ ಬದುಕಲು ನಿರ್ಧರಿಸಿದೆ. 338 00:28:25,663 --> 00:28:29,625 "ನಾನು ಇದೇನೇ" ಎಂದು ನನ್ನ ಕುಟುಂಬಕ್ಕೆ ತಿಳಿಸಿದೆ. 339 00:28:32,002 --> 00:28:36,340 "ನಾನೊಬ್ಬ ಹೆಣ್ಣು, ನೀನು ಅಂದುಕೊಂಡಿರುವಂತಹ ಗಂಡಸಲ್ಲ." 340 00:28:37,800 --> 00:28:39,927 ನನ್ನನ್ನು ಬಹಿಷ್ಕರಿಸಿದರು. 341 00:28:40,803 --> 00:28:43,806 ಕುಟುಂಬವಿಲ್ಲ. ಕೆಲಸ ಕಳೆದುಕೊಂಡೆ. 342 00:28:45,975 --> 00:28:47,268 ಬೀದಿಗೆ ಬಿದ್ದೆ, 343 00:28:49,979 --> 00:28:51,772 ಆಗ ವೆರೋನಿಕಾ ಸಿಕ್ಕರು, 344 00:28:53,566 --> 00:28:54,900 ನನಗೆ ಮಾರ್ಗದರ್ಶಿಸಿದರು. 345 00:28:56,444 --> 00:29:01,991 ಆದರೆ ಆಕೆಯ ಕರುಣೆಯಿಂದ, ಆಕೆಯನ್ನೂ ಬಹಿಷ್ಕರಿಸಿದರು. 346 00:29:05,411 --> 00:29:09,874 ಇಲ್ಲಿರುವ ಎಲ್ಲಾ ಮಹಿಳೆಯರು, ಅವರೆಲ್ಲರೂ ಬಹಿಷ್ಕೃತರೇ, 347 00:29:10,749 --> 00:29:15,379 {\an8}ನ್ಯಾಯಕ್ಕಾಗಿ ನಿಂತವರು, ದುರ್ಬಲರಿಗಾಗಿ ನಿಂತವರು. 348 00:29:16,005 --> 00:29:20,676 ಆಕೆ ಜನರ ಪರ ನಿಲ್ಲುವವರಾದರೆ, ವಿದ್ಯುತ್ತಿಗೆ ಯಾಕೆ ವಿರುದ್ಧವಾಗಿದ್ದಾರೆ? 349 00:29:20,759 --> 00:29:22,428 ವೆರೋನಿಕಾ ಒಬ್ಬ ಕ್ರಾಂತಿಕಾರಿ, 350 00:29:24,096 --> 00:29:27,975 ಆದರೆ ಈ ಶಕ್ತಿ ನಂಬಿಕೆಯ ಒಂದು ಬಿಕ್ಕಟ್ಟು. 351 00:29:28,767 --> 00:29:34,482 ಮತ್ತು ಆಕೆಗೆ ಚಿಂತೆ ಇದೆ. ಬದಲಾವಣೆಯೊಂದಿಗೆ ಪರಿಣಾಮಗಳೂ ಬರುತ್ತವೆ ಎಂದು ಅರಿತಿದ್ದಾರೆ. 352 00:29:36,609 --> 00:29:39,862 ತಾಳ್ಮೆಯಿಂದಿರು, ಮತ್ತು ಇರು. 353 00:29:42,615 --> 00:29:45,242 ಬಂಡಾಯಗಾರ್ತಿ ಸನ್ಯಾಸಿನಿಯರು, ದಾರಿ ತಪ್ಪಿದ ಹುಡುಗಿಯರು. 354 00:29:45,826 --> 00:29:48,954 ನೋಡಿದ್ಯಾ? ನಿನಗೆ ಹೊಂದುವ ಒಂದು ಜಾಗ ಇದೆ ಅಂತ ಹೇಳಿದ್ದೆ. 355 00:29:54,168 --> 00:29:56,086 ಅಮೆರಿಕಾದಲ್ಲಿ ಪ್ರತಿಭೆಯಿದೆ 356 00:29:56,170 --> 00:29:58,380 ಅಂದರೆ, ಅದು ಸಾಧ್ಯವೇ? 357 00:29:58,464 --> 00:30:01,717 ಹರಡುವಂಥದ್ದು ಇರಬಹುದು. ಏನಾದರೂ ಅಥವಾ ಯಾರನ್ನಾದರೂ ಅವಳು ಮುಟ್ಟಿರಬಹುದು. 358 00:30:01,800 --> 00:30:04,345 ರೋಗಾಣುವಿನ ಬಗ್ಗೆ ಮಾತನಾಡುತ್ತಿದ್ದೇವೆಯೇ? ಏನು ದರಿದ್ರ? 359 00:30:04,553 --> 00:30:07,264 ಮಕ್ಕಳು ಪ್ರಕಟಿಸುತ್ತಿದ್ದಾರೆ, ಜನ ಪೊಳ್ಳು ಅಂತಿದ್ದಾರೆ. 360 00:30:07,348 --> 00:30:10,017 ಬೆಂಕಿ ಮತ್ತು ವ್ಯತ್ಯಯ ಇತ್ತು. ಡ್ಯಾಂಡನ್ಗೆ ಎಚ್ಚರಿಸಿದೆ. 361 00:30:10,100 --> 00:30:11,018 ಹೌದು ನಂಗೊತ್ತು. 362 00:30:11,310 --> 00:30:14,647 ದೇವರೇ. ಇದು ನಮ್ಮ ಮಗುವಿಗೆ ಆಗುತ್ತಿದೆ ಎಂದು ನಾನು ನಂಬಲಾರೆ. 363 00:30:17,525 --> 00:30:19,360 ಆರಾಮವಾಗಿರ್ತಾಳೆ. ಚೆನ್ನಾಗಿರ್ತಾಳೆ. 364 00:30:19,443 --> 00:30:24,698 ಇಲ್ಲ. ವಿಮಾನದಲ್ಲಿನ ಆ ಹುಡುಗಿ, ಅವಳನ್ನು ಪ್ರಾಣಿಯಂತೆ ಬಂಧಿಸಿ ಪರೀಕ್ಷೆ ಮಾಡುತ್ತಿದ್ದರು. 365 00:30:25,282 --> 00:30:29,119 ನಮ್ಮ ಮಗಳನ್ನು ಪ್ರಯೋಗಾಲಯದ ಇಲಿಯಂತೆ ಬಳಸುವುದು ನನಗೆ ಸಮ್ಮತವಿಲ್ಲ. 366 00:30:29,203 --> 00:30:32,122 -ಅದು ಆ ರೀತಿ ನಡೆಯುತ್ತಿಲ್ಲ ಎನ್ನುವೆ. -ನಿನಗೆ ಹೇಗೆ ಗೊತ್ತು? 367 00:30:32,206 --> 00:30:35,000 ಪ್ರೌಢಶಾಲೆಯಲ್ಲಿ 50 ಮಂದಿ ಇದ್ದರೆ, ಅಲ್ಲಿಂದ ಬಹಿರ್ಗಣಿಸಿದರೆ, 368 00:30:35,084 --> 00:30:38,212 ನೂರಾರು ಸಾವಿರಾರು ಹುಡುಗಿಯರು ಇದನ್ನು ಅನುಭವಿಸುತ್ತಿರುತ್ತಾರೆ. 369 00:30:38,295 --> 00:30:40,589 ಅವಳಿಗೆ ಸಹಾಯ ಕೊಡಿಸಬೇಕು ಮತ್ತು ಮೌನವಾಗಿ ಮಾಡಬೇಕು. 370 00:30:40,673 --> 00:30:43,384 ಮ್ಯಾಟಿ ಒಡನಾಡಿದ್ದ ಆ ಸಮಾಲೋಚಕರನ್ನು ಸಂಪರ್ಕಿಸುವೆಯಾ? 371 00:30:43,467 --> 00:30:46,845 -ಆತನ ಹೆಸರೇನು? ಡಾಕ್ಟರ್… -ಇದು ಹೊರಹೋಗುವ ಮುನ್ನ ಹೆಲೆನಿಗೆ ತಿಳಿಸುವೆ. 372 00:30:48,472 --> 00:30:51,976 -ಹೊರಗೆ ಹೇಗೆ ಹೋಗುತ್ತೆ? -ನಾವಿದನ್ನು ಎಂದಿಗೂ ರಹಸ್ಯವಾಗಿ ಇಡಲಾಗದು, ರಾಬ್. 373 00:30:52,059 --> 00:30:54,311 -ಇದು ರಾಜಕೀಯವಾಗುತ್ತೆ. -ಹಾಗೆ ಮಾಡಬೇಡ. 374 00:30:54,395 --> 00:30:55,229 ಏನು? 375 00:30:55,312 --> 00:30:57,481 ಸಿಯಾಟಲ್ ಮೇಯರ್ ಧ್ವನಿ ನನ್ನ ಬಳಿ ಪ್ರಯೋಗಿಸಬೇಡ. 376 00:30:57,565 --> 00:31:01,110 -ನಾನು ಶತ್ರು ಅಲ್ಲ. -ನಿಜವಾಗಲೂ, ನನ್ನ ಧ್ವನಿಯ ಬಗ್ಗೆ ವಾದ ಮಾಡಬೇಕಾ? 377 00:31:01,318 --> 00:31:04,488 -ನಿನಗೆ ಅದನ್ನು ಮಾಡಬೇಕಾ? -ನಾನು ಅದರ ಬಗ್ಗೆ ವಾದಿಸುತ್ತಿಲ್ಲ. 378 00:31:04,738 --> 00:31:06,115 -ಧನ್ಯವಾದ. -ಹೇ. 379 00:31:07,825 --> 00:31:09,660 ಹಾವು ಮೀನು ಕೊಲ್ಲುವಂಥ 380 00:31:09,743 --> 00:31:12,162 ವಿದ್ಯುದಾಘಾತ ಉತ್ಪಾದಿಸಬಲ್ಲ ವಿಲಕ್ಷಣ ಜೀವಿ. 381 00:31:12,413 --> 00:31:15,249 -ನಿನ್ನ ದೂರದ ಸಂಬಂಧಿಗಳು. -"ಹಾವುಮೀನು" ಎಂಬ ಹೆಸರಿದ್ದರೂ... 382 00:31:15,332 --> 00:31:18,711 -ವಾಪಸ್ ಕೊಡು. ನಾನು ನೋಡುತ್ತಿದ್ದೆ. -ಪಾಪ ಅಮ್ಮ ಮತ್ತು ಅಪ್ಪ. 383 00:31:19,378 --> 00:31:22,381 ಹಾವುಮೀನಿನಿಂದ ಅವರ ಪ್ರಿಯವಾದ ಮಗುವಿಗೆ ಗುಪ್ತರೋಗ ಬಂದಂತಿದೆ. 384 00:31:22,464 --> 00:31:24,883 -ಗುಪ್ತರೋಗ ಅಂದರೆ? -ಕೊಡು. 385 00:31:25,134 --> 00:31:26,510 -ಮ್ಯಾಟಿ. -ಏನು ಮಾಡುತ್ತಿರುವೆ? 386 00:31:26,594 --> 00:31:27,469 ಬಿಡು. 387 00:31:31,015 --> 00:31:34,226 -ಏನದು? -ಮ್ಯಾಟಿ. ಆರಾಮವಾಗಿರುವೆಯಾ? 388 00:31:34,435 --> 00:31:35,603 ಜೋಸ್. ಏನಾಯಿತು? 389 00:31:35,686 --> 00:31:38,939 ಬೇಕಾಗಿ ಮಾಡಲಿಲ್ಲ. ಅದು ಆಕಸ್ಮಿಕ. ರಿಮೋಟ್ ಕಿತ್ತುಕೊಳ್ಳಲು ನೋಡಿದೆ. 390 00:31:39,023 --> 00:31:40,733 ಮ್ಯಾಟಿ. ನಾನು ನೋಡುವೆ. 391 00:31:41,233 --> 00:31:43,569 ನಾನು ನೋಡ್ತೀನಿ. ನಾನು ನೋಡುವೆ. ನಾನು ನೋಡುವೆ. 392 00:31:43,652 --> 00:31:45,904 -ಆರಾಮವಾಗಿದ್ದಾನಾ? -ಅವನ ಕಣ್ಣಿಗೆ ಏನಾಯಿತು? 393 00:31:45,988 --> 00:31:49,408 ಮಾರ್ಗೋ, ಫ್ರಾಂಕಿಗೆ ಗಾಡಿ ತರಲು ಹೇಳು. ಇವನನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. 394 00:31:49,867 --> 00:31:53,120 -ಇದೊಂದು ಆಕಸ್ಮಿಕ. ಇದೊಂದು ಆಕಸ್ಮಿಕ. -ಸರಿ ಹೋಗುತ್ತೆ. 395 00:31:53,203 --> 00:31:54,705 ಸರಿ ಹೋಗುತ್ತೆ. ಆರಾಮವಾಗಿರು. 396 00:32:53,180 --> 00:32:54,223 ಬಾ, ನ್ದುಡಿ. 397 00:33:01,271 --> 00:33:04,608 -ಇಲ್ಲೇನು ಮಾಡುತ್ತಿರುವೆ? -ಹೇ, ಹೇ. ಮಾತಾಡಬೇಕು ಅಷ್ಟೇ. 398 00:33:05,025 --> 00:33:06,944 -ದಯವಿಟ್ಟು, ದಯವಿಟ್ಟು… -ನಾನು ಬರಲಾರೆ. 399 00:33:18,455 --> 00:33:23,377 ನೀನು ಇಲ್ಲಿರಬಾರದು. ನಮ್ಮಜ್ಜಿ ನಮ್ಮಿಬ್ಬರನ್ನು ನೋಡಿದರೆ, ಕಥೆ ಮುಗಿದಂತೆಯೇ. 400 00:33:23,460 --> 00:33:25,003 ನಂಗೊತ್ತು. ನಂಗೊತ್ತು. ಏನಂದ್ರೆ… 401 00:33:27,548 --> 00:33:31,093 ನ್ದುಡಿ, ದಯವಿಟ್ಟು ನನ್ನನ್ನು ಕ್ಷಮಿಸು. ನನ್ನನ್ನು ಕ್ಷಮಿಸು. 402 00:33:31,969 --> 00:33:34,680 -ನನ್ನನ್ನು ಕ್ಷಮಿಸು. ನಾನು ಸುಮ್ಮನೆ... -ಏನು? 403 00:33:36,014 --> 00:33:38,225 ನಾನು ಸುಮ್ಮನೆ… ನಿನ್ನನ್ನು ನೋಡಬೇಕೆನಿಸಿತು. 404 00:33:57,911 --> 00:33:59,580 ಸಿಎನ್ಎನ್ನಿಂದ ಕೆಲಸದ ಆಮಿಷ ಬಂದಿದೆ. 405 00:34:04,042 --> 00:34:06,420 -ಇರು. ನ್ದುಡಿ… -ನಿನ್ನ ಮೇಲೆ ಸಿಟ್ಟು ಬಂದಿದೆ. 406 00:34:09,423 --> 00:34:13,761 ತುಂಡೆ, ಅದು ನನ್ನ ಕಥೆಯಾಗಿತ್ತು. ಅದನ್ನು ಕಂಡುಹಿಡಿದಿದ್ದು ನಾನು. 407 00:34:15,179 --> 00:34:16,805 ನಿನಗೆ ಬರಲೂ ಇಷ್ಟವಿರಲಿಲ್ಲ. 408 00:34:19,183 --> 00:34:21,143 ಅಡುನೋಲಾ ಜೊತೆ ಚಕ್ಕಂದ ಆಡ್ತಿದ್ದೆ ನೀನು. 409 00:34:22,811 --> 00:34:25,439 ಯಾವುದೋ ಕೆಲಸದ ಅಸಂಬದ್ಧ ನೆಪ ಹೇಳಿಕೊಂಡು. 410 00:34:27,983 --> 00:34:29,526 ಮತ್ತು ನನ್ನ ಮುಖವನ್ನು 411 00:34:31,361 --> 00:34:34,239 ಇಡೀ ಪ್ರಪಂಚವೆಲ್ಲಾ ನೋಡುವಂತೆ ಅಂತರ್ಜಾಲದಲ್ಲಿ ಹಾಕುವೆ. 412 00:34:37,117 --> 00:34:41,038 ಈಗ ಇಲ್ಲಿ ಬಂದು, ನನ್ನ ಸಲಹೆಯನ್ನು ಕೇಳುತ್ತಿರುವೆ. 413 00:34:43,123 --> 00:34:46,001 -ಯಾಕೆಂದರೆ ನಿನಗೆ ನಾನು ತಮಾಷೆ, ಅಲ್ವಾ? -ಇಲ್ಲ. ಇಲ್ಲ, ನ್ದುಡಿ. 414 00:34:47,711 --> 00:34:52,674 ನಿನಗೊಂದು ಸಲಹೆ. ಒಮ್ಮೆಯಾದರೂ ನೀನು ನಂಬುವುದನ್ನು ಮಾಡು. 415 00:34:58,597 --> 00:34:59,723 ಒಬ್ಬ ಗಂಡಸಾಗು, ತುಂಡೆ. 416 00:35:09,399 --> 00:35:13,570 ನ್ದುಡಿ, ನನಗೇನು ಮಾಡಬೇಕೋ ಗೊತ್ತಿಲ್ಲ. 417 00:35:19,284 --> 00:35:20,661 ಅದು ನನ್ನ ಸಮಸ್ಯೆಯಲ್ಲ. 418 00:35:27,167 --> 00:35:28,001 ನ್ದುಡಿ. 419 00:35:30,003 --> 00:35:32,798 ನ್ದುಡಿ. ಬಾ ಒಳಗೆ. 420 00:35:37,094 --> 00:35:40,305 ಇಷ್ಟು ರಾತ್ರಿಯಲ್ಲಿ ಇಲ್ಲೇಕೆ ಮಾಡುತ್ತಿರುವೆ? 421 00:35:41,098 --> 00:35:41,932 ಈಗ ಹೋಗು. 422 00:36:25,976 --> 00:36:29,313 ಸುಮ್ಮನೆ ಹೊರಡುವೆ ಏನು? ಅಪ್ಪ ಅಮ್ಮ ತಲೆ ಕೆಡಿಸಿಕೊಳ್ಳುತ್ತಾರೆ. 423 00:36:29,396 --> 00:36:31,815 ಇದು ಜೀವನದಲ್ಲಿ ಒಮ್ಮೆ ಬರುವ ಅವಕಾಶ. 424 00:36:31,899 --> 00:36:34,693 ಸಿಎನ್ಎನ್ ಕರೆ ಮಾಡಿದರು. ಅವರಿಗೆ ನನ್ನ ವರದಿಗಾರಿಕೆ ಬೇಕು. 425 00:36:34,776 --> 00:36:37,446 ವರದಿಗಾರಿಕೆಯೇ? ನೀನು ವಿಡಿಯೋ ಸೆಲ್ಫಿ ತೆಗೆಯುತ್ತಿರುವೆ. 426 00:36:37,529 --> 00:36:41,700 ಬೇರೆ ವರದಿಗಾರರಿಗೆ ಆಗದವರನ್ನು ಮಾತನಾಡಿಸಬಲ್ಲೆ, ಅವರು ಹೋಗಲಾಗದ ಕಡೆ ಹೋಗಬಲ್ಲೆ. 427 00:36:41,783 --> 00:36:44,620 ಅಪ್ಪ ನಿನ್ನನ್ನು ಮತ್ತೆ ಮನೆಗೆ ಮರಳಲು ಬಿಡುವುದಿಲ್ಲ. 428 00:36:44,953 --> 00:36:46,705 ಶಾಲೆ, ಕೆಲಸವನ್ನು ಮರೆಯುತ್ತಿರುವೆ. 429 00:36:46,788 --> 00:36:49,124 ಅವರಿಗೆ ನನ್ನಿಂದ ಬೇಕಾದವು. ನನಗೆ ಬೇಕಾಗಿರುವುದು? 430 00:36:51,001 --> 00:36:53,629 ದಾಮಿ, ನ್ದುಡಿ ಸರಿಯಾಗಿ ಹೇಳಿದಳು. ನನ್ನ ಯಜಮಾನ ನಾನೇ ಆಗಬೇಕು. 431 00:36:54,546 --> 00:36:56,048 ಇಲ್ಲಿ ನನ್ನ ಜೀವನ ವ್ಯರ್ಥ. 432 00:36:56,590 --> 00:36:59,426 ನನಗೆ ಆಸಕ್ತಿ ಇಲ್ಲದ ಓದಿನಿಂದ ಸಮಯ ವ್ಯರ್ಥವಾಗುತ್ತಿದೆ. 433 00:36:59,635 --> 00:37:02,638 ನನಗೆ ಇಷ್ಟವಾಗದ ಕೆಲಸ, ಆಸಕ್ತಿ ಇಲ್ಲದ ಹುಡುಗಿಯರು. 434 00:37:05,015 --> 00:37:09,186 ನೀನು ಹೇಳುತ್ತಿರುವ ಬಹುತೇಕ ವಿಚಾರ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಹುಡುಗಿಯರು? 435 00:37:10,020 --> 00:37:13,649 -ಅವರೇನೂ ಅಷ್ಟು ಕೆಟ್ಟವರಲ್ಲ. -ದಾಮಿ, ಈ ಶಕ್ತಿ ಹಬ್ಬುತ್ತಿದೆ. 436 00:37:14,358 --> 00:37:17,110 ಇಲ್ಲಿ ನೈಜೀರಿಯಾದಲ್ಲಿ ಎಲ್ಲವನ್ನೂ ಬದಲಾಯಿಸುತ್ತದೆ, 437 00:37:17,194 --> 00:37:20,030 ಆದರೆ ವಿಶ್ವದೆಲ್ಲೆಡೆ, ಊಹಿಸಲೂ ಆಗದಂಥ ರೀತಿಯಲ್ಲಿ. 438 00:37:20,322 --> 00:37:24,576 ಇದು ದೊಡ್ಡದು. ದಾಮಿ, ಅಲ್ಲಾಹ್ ನನಗೆ ದಾರಿ ತೋರುತ್ತಿದ್ದಾರೆ. 439 00:37:27,162 --> 00:37:28,372 ಇದೇ ನನ್ನ ಗುರಿ. 440 00:37:31,291 --> 00:37:33,210 -ಕಣ್ಣಿಗೆ ಅಷ್ಟು ಹತ್ತಿರದಲ್ಲಿ. -ಜೋಸ್. 441 00:37:33,710 --> 00:37:34,544 ನಮ್ಮ ಮೊಲೆಗಳನ್ನು ದಯವಿಟ್ಟು ಪರೀಕ್ಷಿಸಿ 442 00:37:34,628 --> 00:37:35,712 ನನ್ನ ಮೊಲೆಗಳು ಇಷ್ಟವೇ? 443 00:37:35,796 --> 00:37:38,173 ನಮ್ಮ ಮಕ್ಕಳು ಗೊತ್ತಲ್ವಾ? ಯಾವಾಗಲೂ ಜಗಳವೇ. 444 00:37:38,256 --> 00:37:39,091 ಸರಿ, ಏನೋ ಒಂದು. 445 00:37:44,096 --> 00:37:45,472 ಹಾಂ, ಗೊತ್ತು, ಗೊತ್ತು. 446 00:37:46,598 --> 00:37:48,725 ಚಿನ್ನ, ವೈದ್ಯರಿಗೆ ಫಲಿತಾಂಶ ಸಿಕ್ಕಿದೆ. 447 00:37:50,352 --> 00:37:52,562 ಶುಭ ವಾರ್ತೆ. ಅವನ ಪ್ರತಿಫಲಿತಗಳು ಚೆನ್ನಾಗಿವೆ. 448 00:37:53,146 --> 00:37:56,441 ಅವನ ಕಣ್ಣು ರೆಪ್ಪೆ ಬೇಗ ಮುಚ್ಚಿತು, ಹಾಗಾಗಿ ಚರ್ಮದ ಮೇಲೆ ಮಾತ್ರ ಗಾಯವಾಗಿದೆ. 449 00:37:56,817 --> 00:38:00,821 -ಅಬ್ಬಾ, ದೇವರೇ. -ಆದರೆ… "ಆದರೆ" ಎಂದು ಕೇಳಿದೆ. 450 00:38:01,446 --> 00:38:02,823 ಅವನ ಕಣ್ಣಿಗೆ ಅಪಾಯವಿಲ್ಲ, 451 00:38:02,906 --> 00:38:07,160 ಆದರೆ ಇನ್ನೊಂದು ಅಭಿಪ್ರಾಯಕ್ಕಾಗಿ ನೀವು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರನ್ನು ಭೇಟಿಯಾಗಿ. 452 00:38:07,828 --> 00:38:09,454 ಗಾಯದ ಕಲೆಗಳು ಉಳಿಯಬಹುದು. 453 00:38:11,456 --> 00:38:12,499 ಅಯ್ಯೋ. 454 00:38:13,625 --> 00:38:15,877 -ಸರಿ. ತುಂಬಾ ಧನ್ಯವಾದಗಳು. -ಧನ್ಯವಾದ. 455 00:38:16,086 --> 00:38:19,131 ತುರ್ತು ನಿಗಾ ಘಟಕಕ್ಕೆ ಡಾ. ಸ್ಟೀವನ್ಸ್, ದಯವಿಟ್ಟು. 456 00:38:19,214 --> 00:38:22,426 ಪರವಾಗಿಲ್ಲ. ಎಲ್ಲವೂ ಸರಿಹೋಗುತ್ತೆ. ಎಲ್ಲವೂ ಸರಿಹೋಗುತ್ತೆ. 457 00:38:22,509 --> 00:38:25,470 ಚರ್ಮದ ಕಸಿಯಿಂದ ಇತ್ತೀಚೆಗೆ ಏನು ಬೇಕಾದರೂ ಮಾಡಬಲ್ಲರು. 458 00:38:25,637 --> 00:38:28,015 -ನಿಜವಾಗಲೂ, ಅವನು ಸರಿ ಹೋಗುತ್ತಾನೆ. -ಹಾಂ. 459 00:38:34,021 --> 00:38:38,692 ಚಿನ್ನ, ತಡಿ. ಈಗಲೇ ಬಂದೆ. ಟಾಶ್, ಹೇಗಿದ್ದೀಯಾ? 460 00:38:38,775 --> 00:38:40,569 -ಹಾಯ್. -ಹೇಗಿರುವೆ? ತುಂಬಾ ದಿನಗಳಾದವು. 461 00:38:40,652 --> 00:38:41,778 ಹೌದು. ಚೆನ್ನಾಗಿದ್ದೀಯ. 462 00:38:58,295 --> 00:38:59,463 ನೀನು ಬೇಕಾಗಿ ಮಾಡಲಿಲ್ಲ. 463 00:39:01,089 --> 00:39:03,592 -ಅದು ಆಕಸ್ಮಿಕ ಎಂದು ಗೊತ್ತು. -ನಿಲ್ಲಿಸು. 464 00:39:05,343 --> 00:39:06,386 ಏನು ನಿಲ್ಲಿಸುವುದು? 465 00:39:08,180 --> 00:39:11,308 ನಾವು ಆತ್ಮೀಯರು, ನೀನು ಶ್ರೇಷ್ಠ ತಾಯಿ ಎಂಬ ನಟನೆಯನ್ನು ನಿಲ್ಲಿಸು. 466 00:39:11,475 --> 00:39:13,435 ನಾನು ಯಾವ ರೀತಿಯಲ್ಲೂ ನಟಿಸುತ್ತಿಲ್ಲ. 467 00:39:13,518 --> 00:39:16,271 ಒಂದು ವರ್ಷದಲ್ಲಿ ನಾವು ಇಂದೇ ಇಷ್ಟೆಲ್ಲಾ ಸಮಯ ಕಳೆದಿರುವುದು. 468 00:39:17,230 --> 00:39:20,108 ಯಾಕೆಂದರೆ ನಿನ್ನ ಪರಿಪೂರ್ಣ ಜೀವನಕ್ಕೆ ನಾನು ಭಾರ. 469 00:39:21,068 --> 00:39:24,738 ಜೋಸ್, ಅದು ನಿಜವಲ್ಲ. ನಿನ್ನನ್ನು ಪ್ರೀತಿಸುತ್ತೇನೆ. 470 00:39:26,907 --> 00:39:30,035 ಹೆಚ್ಚಿನ ಸಮಯ ಜೊತೆಯಲ್ಲಿ ಕಳೆಯಲಾಗದಿರುವುದಕ್ಕೆ ಕ್ಷಮಿಸು. 471 00:39:30,869 --> 00:39:33,246 ನನ್ನೊಂದಿಗೆ ಸಮಯ ಕಳೆಯುವುದು ನಿನಗೆ ಬೇಕಿಲ್ಲವೇನೋ. 472 00:39:34,539 --> 00:39:35,373 ಏನು? 473 00:39:37,417 --> 00:39:40,754 ಅಯ್ಯೋ, ದೇವರೇ. ಆತ ನನ್ನ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ? 474 00:39:41,838 --> 00:39:44,674 ಜೋಸ್. ಬಾ. ಹೋಗಿ ಕೆಲವು ಉತ್ತರಗಳನ್ನು ಪಡೆಯೋಣ. 475 00:40:09,282 --> 00:40:13,662 ಚಿನ್ನ, ಅವಳು ಚೆನ್ನಾಗಿದ್ದಾಳೆ. ದಿನದಲ್ಲಿ ಇಂಥವು ಹತ್ತಾರು ಮಾಡುತ್ತಾರೆ. ಬಿಡು. 476 00:40:15,580 --> 00:40:19,084 ಜೋಸ್, ನೀನು ಆದಷ್ಟು ಕದಲದೆ ಇರಬೇಕು, ಆಯ್ತಾ? 477 00:40:25,924 --> 00:40:29,261 -ಅಮ್ಮ? ಅಪ್ಪ! -ಹೊರತೆಗೆಯಿರಿ. ಅವಳನ್ನು ಈಗಲೇ ಹೊರತೆಗೆಯಿರಿ. 478 00:40:30,178 --> 00:40:31,012 ಅಮ್ಮ! 479 00:40:40,063 --> 00:40:41,898 -ಮತ್ತೊಮ್ಮೆ ಪ್ಲೇ ಮಾಡುವೆಯಾ? -ಹಾಂ. 480 00:40:49,030 --> 00:40:52,075 -ಮತ್ತೆ, ಚೆನ್ನಾಗಿದ್ದಾಳಾ? -ಇದನ್ನು ನೋಡಿ. 481 00:40:57,497 --> 00:40:59,624 -ಏನನ್ನು ನೋಡುತ್ತಿರುವೆ? -ಅದನ್ನು ನೋಡಿದೆಯಾ? 482 00:41:00,000 --> 00:41:03,503 ಅದು ಅವರ ಕೈಗಳಿಂದ ಬರುತ್ತಿಲ್ಲ. ಸರಿಯಾಗಿ ಅಲ್ಲಿಂದ ಬರುತ್ತಿದೆ. 483 00:41:03,587 --> 00:41:06,965 ದೇಶದೆಲ್ಲೆಡೆ ಕೆಲ ಸಹೋದ್ಯೋಗಿಗಳಿಂದ ಕೇಳಿದ್ದೆ. ಆದರೆ ನೋಡಿರಲಿಲ್ಲ. 484 00:41:07,132 --> 00:41:09,759 ನಮಗೂ ಕೆಲ ಪ್ರಕರಣಗಳು ಬಂದಿದ್ದವು, ಕಲೆಗಳಿದ್ದ ಹುಡುಗಿಯರು. 485 00:41:10,969 --> 00:41:15,473 ಸರಿ. ಮತ್ತೆ, ಸ್ಕ್ಯಾನ್ ಒಳಗೆ ಹೋದಾಗ ಜೋಸ್ ಕಿಡಿ ಕಾರಿದಳು. 486 00:41:15,557 --> 00:41:18,977 ಯಂತ್ರವು ಕೆಟ್ಟಿತು, ಆದರೆ ನಮಗೆ ಈ ಸುಂದರ, ಸ್ಪಷ್ಟ ಚಿತ್ರವನ್ನು ಕೊಟ್ಟಿತು. 487 00:41:19,060 --> 00:41:22,772 ಕುಗ್ಗಿರುವ ಮಾಂಸಖಂಡಗಳು, ಮತ್ತು ಇವು ಕತ್ತಿನ ಮೂಳೆಯ ನರಗಳಿಗೆ ಈ ಸ್ಥಳಗಳಲ್ಲಿ 488 00:41:22,856 --> 00:41:25,066 ಸೇರುತ್ತವೆ, ಅಲ್ಲಿ ಮತ್ತು ಅಲ್ಲಿ. 489 00:41:25,358 --> 00:41:28,153 ಅವು ನಿಯಂತ್ರಕ ಕೋಶಗಳಾ, ಸೈನೋಏಟ್ರಿಯಲ್ ನೋಡ್ ಥರ? 490 00:41:28,236 --> 00:41:31,364 -ವಿದ್ಯುತ್ ಸಂಜ್ಞೆಗಳಿಗೆ ಕಾರಣ ಇರಬಹುದು. -ಸರಳವಾಗಿ ಹೇಳಿ. 491 00:41:35,952 --> 00:41:38,580 -ಇದೊಂದು ಅಂಗ. -ಇದೊಂದು ಹೊಸ ಅಂಗ. 492 00:41:38,788 --> 00:41:40,707 ಹಾಂ. ವಿದ್ಯುಚ್ಛಕ್ತಿ ಉತ್ಪಾದಿಸುವಂಥದ್ದು. 493 00:41:42,876 --> 00:41:46,213 ಅಂದರೆ, ಕೇಳಲು ವಿಚಿತ್ರವಾಗಿದೆ. 494 00:41:46,338 --> 00:41:50,342 ಇಲ್ಲ, ಹಾಗೇನಿಲ್ಲ. ಹೃದಯ, ಕಣ್ಣು, ಮೆದುಳು, ಎಲ್ಲವೂ ವಿದ್ಯುತ್ ಉತ್ಪಾದಿಸುತ್ತವೆ. 495 00:41:50,425 --> 00:41:54,763 -ಆ ಅಂಗಗಳಂತಲ್ಲದೆ, ಇದು ಇದನ್ನಷ್ಟೇ ಮಾಡುತ್ತದೆ. -ಇದು ಎಲ್ಲಿಂದ ಬಂತು? 496 00:41:54,846 --> 00:41:58,058 ಒಬ್ಬಳೇ ಹುಡುಗಿ ಆಗಿದ್ದರೆ, ಯಾವುದೋ ರೂಪಾಂತರ ಎನ್ನಬಹುದಾಗಿತ್ತು. 497 00:41:58,141 --> 00:42:02,270 ಪ್ರಕೃತಿಯು ಅಚ್ಚರಿಪಡಿಸುತ್ತದೆ, ನನಗದು ಗೊತ್ತು, ಆದರೆ ನೂರಾರು ಸಾವಿರ ಜನ ಇದ್ದಾರೆ. 498 00:42:02,354 --> 00:42:06,066 ಯಾವುದಾದರೂ ಅನುವಂಶಿಕ ಆಕಸ್ಮಿಕ ಘಟಿಸಿರಬಹುದು. 499 00:42:06,608 --> 00:42:09,736 ಯಾವುದೋ ಮೊದಲೇ ಇದ್ದಂತೆ, ಸುಪ್ತವಾಗಿ, ಮತ್ತು ಅದು ತಕ್ಷಣ… 500 00:42:09,819 --> 00:42:11,196 ಆದರೆ ಹಾಗೆ ಯಾಕೆ ಮಾಡುತ್ತದೆ? 501 00:42:11,279 --> 00:42:13,531 ಅದು ಪ್ರಾಕೃತಿಕವಾಗಿರಬಹುದು, ನಿನಗೆ ಅನ್ಸಲ್ವಾ? 502 00:42:13,615 --> 00:42:17,202 -ಮಾಲಿನ್ಯ, ಮಲಿನಗೊಂಡ ಮಣ್ಣು, ಒತ್ತಡಕಾರಕಗಳು. -ಬದುಕುಳಿಯುವುದು. 503 00:42:17,953 --> 00:42:18,787 ಹಾಂ. 504 00:42:20,163 --> 00:42:22,249 ಅಯ್ಯೋ, ದೇವರೇ. ಮತ್ತೆ, ಇರಿ. 505 00:42:22,332 --> 00:42:27,587 ನಿಮ್ಮ ಪ್ರಕಾರ ಈ ಹುಡುಗಿಯರಿಗೆ ಇದನ್ನು ನಾವು ಮಾಡಿರಬಹುದು 506 00:42:29,631 --> 00:42:32,050 ಅಥವಾ ಅವರೇ ಅಗತ್ಯತೆಗೆ ತಕ್ಕಂತೆ ವೃದ್ಧಿಸಿಕೊಂಡಿರಬಹುದು. 507 00:42:45,146 --> 00:42:49,067 ಡ್ಯಾನ್ನ ವೈಯಕ್ತಿಕ ಸಂಪರ್ಕ ತಲುಪಿದ್ದೀರಿ. ಸಂದೇಶ ಬಿಡಿ ಅಥವಾ ಸಹಾಯಕರನ್ನು ಸಂಪರ್ಕಿಸಿ. 508 00:42:56,408 --> 00:42:59,911 ಏನಿದು, ಮಾರ್ಗೋ? ಈಗೆಷ್ಟು ಸಮಯವಾಗಿದೆ ಎಂದು ನಿಮಗೆ ಏನಾದರೂ ಗೊತ್ತಾ? 509 00:42:59,995 --> 00:43:01,162 ಇದು ದೌರ್ಜನ್ಯ. 510 00:43:01,288 --> 00:43:04,416 ಅದು ಅಂಗ. ಹುಡುಗಿಯರು ಹೊಸ ಅಂಗವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. 511 00:43:04,499 --> 00:43:08,003 ವಿಕಾಸ ಹೊಂದುತ್ತಿದ್ದಾರೆ. ವಿದ್ಯುತ್, ಬೆಂಕಿಗಳು, ವಿಮಾನ ಅಪಘಾತ. 512 00:43:08,086 --> 00:43:11,298 ನಾವೇನೂ ಮಾಡಲಿಲ್ಲ. ಹೆಚ್ಚು ಸಂಪನ್ಮೂಲಗಳನ್ನು ಹಾಕಬೇಕಿತ್ತು. 513 00:43:11,381 --> 00:43:14,634 -ಸಮಾಧಾನವಾಗಿರು, ಆಯ್ತಾ? ಉಸಿರಾಡು. -ಸಮಾಧಾನವಾಗಿರಲು ನನಗೆ ಹೇಳಬೇಡಿ. 514 00:43:15,427 --> 00:43:16,886 ಇದು ಸಾಂಕ್ರಾಮಿಕವಾಗಿರಬಹುದು. 515 00:43:16,970 --> 00:43:19,431 ಸಾಂಕ್ರಾಮಿಕ ಹೇಗಾಗುತ್ತೆ? ವಿಕಾಸ ಎಂದೆ ನೀನು. 516 00:43:19,514 --> 00:43:22,392 ಸರಿ, ವಿಮಾನದಲ್ಲಿನ ಆ ಹುಡುಗಿ, ಮಾಕಯ್ಲ ಕೆಲ್ಲಿ, 517 00:43:23,143 --> 00:43:26,021 ಅವಳು ಅದನ್ನು ಒಬ್ಬ ವಿಮಾನ ಪರಿಚಾರಕಿಗೆ ವರ್ಗಾಯಿಸಿದಳು. 518 00:43:27,480 --> 00:43:28,773 ಅದು ನಿನಗೆ ಹೇಗೆ ಗೊತ್ತು? 519 00:43:29,983 --> 00:43:32,402 ಎಫ್ಬಿಐ ತನಿಖೆಯಲ್ಲಿ ಮೂಗು ತೂರಿಸದೇ ಇಲ್ಲದಿದ್ದರೆ. 520 00:43:34,154 --> 00:43:37,699 ಬೋಳಿಮಗನೇ. ಇದೆಲ್ಲಾ ಗೊತ್ತಿದ್ದೂ ನನ್ನಿಂದ ಮುಚ್ಚಿಟ್ಟಿದ್ದೆಯಾ? 521 00:43:37,782 --> 00:43:39,034 ಜನರಿಗೆ ಗೊತ್ತಿಲ್ಲದೇ? 522 00:43:39,117 --> 00:43:42,329 ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುವ ಯಾವುದೇ ಬಾಧ್ಯತೆ ನನಗಿಲ್ಲ. 523 00:43:42,787 --> 00:43:44,289 ರಹಸ್ಯವಾಗಿರಿಸಿದ್ದು ಯಾರು? 524 00:43:44,372 --> 00:43:47,417 ವಾಷಿಂಗ್ಟನ್ನಿನಲ್ಲಿ ತುಂಬಾ ಜನ ಇದ್ದಾರೆ, ನಮಗಿಂತ ಬುದ್ದಿವಂತರು, 525 00:43:47,500 --> 00:43:48,793 ಯೋಜನೆಗಳನ್ನು ಆಯೋಜಿಸುವರು. 526 00:43:48,877 --> 00:43:51,713 ಸರಿಯಾದ ತಯಾರಿಯಿಲ್ಲದೆ ಯಾರಿಗೂ ಗಾಬರಿ ಹುಟ್ಟಿಸಬೇಕಂತಿಲ್ಲ. 527 00:43:51,796 --> 00:43:53,465 ಉತ್ತರಗಳು ಸಿಗುವವರೆಗೂ ಕಾಯೋಣ. 528 00:43:53,548 --> 00:43:57,385 ಇಲ್ಲ. ನಿನ್ನ ಸೆನೇಟ್ ಪ್ರಚಾರಕ್ಕಾಗಿ ನೀನು ನಿಧಿ ಸಂಗ್ರಹಿಸುತ್ತಿರುವೆ, 529 00:43:57,469 --> 00:43:59,471 ಇದು ನಿನ್ನ ಅವಕಾಶವನ್ನು ಹಾಳುಗೆಡವಬಹುದು. 530 00:43:59,554 --> 00:44:02,223 ಡೇನಿಯಲ್, ಇದು ಯಾವುದೇ ಪ್ರಚಾರಕ್ಕಿಂತ ದೊಡ್ಡ ವಿಚಾರ. 531 00:44:02,474 --> 00:44:05,852 ನಾವು ಪಾಲಕರನ್ನು ಸಜ್ಜುಗೊಳಿಸಬೇಕು, ನಮ್ಮ ಹುಡುಗಿಯರನ್ನು ಸಜ್ಜುಗೊಳಿಸಬೇಕು. 532 00:44:05,935 --> 00:44:07,937 ಅವರಿಗೆ ಏನಾಗುತ್ತಿದೆ ತಿಳಿಯಬೇಕು. 533 00:44:08,021 --> 00:44:11,775 ಸಂದೇಶಗಾರರಿಗೆ ಏನು ಮಾಡ್ತಾರೆ ಗೊತ್ತಲ್ವಾ? ಕೋವಿಡ್ ಸಂದರ್ಭದಲ್ಲಿ ನೆನೆಸಿಕೋ? 534 00:44:11,858 --> 00:44:14,652 ಉದ್ರಿಕ್ತ ಗುಂಪಿಗೆ ಗುರಿಯಾಗಿಸುವಂತೆ ನಾನಲ್ಲಿ ಇರಲಾರೆ. 535 00:44:14,736 --> 00:44:16,988 ಡಿಸಿ ಇದನ್ನು ಕೈಗೆತ್ತಿಕೊಳ್ಳುವವರೆಗೂ ಕಾಯೋಣ. 536 00:44:17,072 --> 00:44:21,159 ಅಲ್ಲಿಯವರೆಗೂ, ನಾವು ಉನ್ಮಾದಗೊಳ್ಳದೆ ನಮ್ಮ ಭಾವನೆಗಳನ್ನು ಮುಚ್ಚಿ ಇರಿಸೋಣ. 537 00:44:21,618 --> 00:44:25,872 ನಿನ್ನನ್ನು ನೀನು ವೀರ ಎಂದು ಬಿಂಬಿಸಿಕೊಳ್ಳಲು ಕ್ಯಾಮೆರಾ ಮುಂದೆ ನಿಲ್ಲಲು ಇಷ್ಟಪಡುವೆ. 538 00:44:25,955 --> 00:44:28,249 ಆದರೆ ನೀನು ನೆಮ್ಮದಿಗೆ ಒಂದು ಮೂಲವಾಗಬಹುದಾದಾಗ, 539 00:44:28,333 --> 00:44:31,878 ಜನರು ಒಂಟಿ ಮತ್ತು ಗಾಬರಿಗೊಳ್ಳದಂತೆ ನೀನು ಅವರಿಗೆ ಸಹಾಯ ಮಾಡಬಹುದಾದಾಗ, 540 00:44:32,253 --> 00:44:33,755 ನೀನು ಪುಕ್ಕಲನಾಗುವೆ. 541 00:44:34,672 --> 00:44:36,674 ಇದನ್ನು ನನಗೆ ಹಾಳು ಮಾಡಬೇಡ, ಮಾರ್ಗೋ. 542 00:44:37,592 --> 00:44:40,512 -ಗಂಭೀರವಾಗಿ ಹೇಳಿದೆ. -ಹೌದಾ? ನಾನೂ ಅಷ್ಟೇ. 543 00:44:44,182 --> 00:44:46,935 -ಇದು ಪೊಳ್ಳಲ್ಲದೆ ಬೇರೇನಲ್ಲ. -ಇದೊಂದು ಪೊಳ್ಳು. 544 00:44:47,018 --> 00:44:49,938 ಅದು ಸುಳ್ಳು ಸುದ್ದಿ. 545 00:44:50,021 --> 00:44:53,066 ಈಗಲೂ ಮಾಹಿತಿ ಕಲೆಹಾಕುತ್ತಿದ್ದೇವೆ, ಆದರೆ ಇದು ಪೊಳ್ಳಂತನಿಸುತ್ತಿದೆ. 546 00:44:53,149 --> 00:44:55,026 ಸಾಕು. ಧನ್ಯವಾದ. 547 00:44:55,944 --> 00:44:56,861 ಧನ್ಯವಾದ. 548 00:44:59,406 --> 00:45:01,449 -ತಯಾರಿದ್ದೀರಾ? -ನೀನು? 549 00:45:04,411 --> 00:45:08,331 ನಿನ್ನೆಲ್ಲಾ ಪರಿಶ್ರಮದ ಬಳಿಕವೂ ಇದರಲ್ಲಿ ನಿನ್ನನ್ನು ಕರೆಸಿದ್ದಕ್ಕೆ ಕ್ಷಮಿಸು. 550 00:45:08,957 --> 00:45:13,586 ನಾವು ಈ ಪಯಣವನ್ನು ಜೊತೆಯಾಗಿ ಆರಂಭಿಸಿದಾಗ ನೀವು ಮಾತು ಕೊಟ್ಟಿದ್ದೇ ಇದನ್ನು. 551 00:45:14,295 --> 00:45:17,382 ನೀವು ಮತ್ತು ನಾನು ಈ ಹಾಳಾದ ರಾಜಕೀಯ ಪ್ರಪಂಚದಲ್ಲಿ. 552 00:45:17,674 --> 00:45:21,511 ನಾವು ಯಶಸ್ವಿಯಾಗುತ್ತೇವೆ, ಯಾಕೆಂದರೆ ನಾವು ಸರಿಯಾದದ್ದನ್ನು ಮಾಡಲಿದ್ದೇವೆ. 553 00:45:23,847 --> 00:45:27,809 -ಖಂಡಿತ ಹಾಳಾಗಿದೆ. -ಮತ್ತೆ, ಎಲ್ಲವನ್ನೂ ನಾಶಗೊಳಿಸಿ. 554 00:45:27,892 --> 00:45:30,603 ಅಯ್ಯೋ. ಮನರಂಜನೆಗೆ ನಾನಂತೂ ತಯಾರಾಗಿದ್ದೇನೆ. 555 00:45:34,107 --> 00:45:34,941 ಸರಿ. 556 00:45:53,084 --> 00:45:54,043 ಶುಭೋದಯ. 557 00:45:55,587 --> 00:46:00,049 ಈ ನಮ್ಮ ಸುಂದರ ನಗರದಲ್ಲಿ ಈ ವಾರ ಬಹಳ ಘಟನಾತ್ಮಕ ಮತ್ತು ಒತ್ತಡದಿಂದ ತುಂಬಿದೆ. 558 00:46:00,300 --> 00:46:03,511 ವದಂತಿಗಳಿಂದ ಬಹಳಷ್ಟು ಮಂದಿ ಚಿಂತೆಗೊಂಡಿದ್ದಾರೆಂದು ಬಲ್ಲೆ, 559 00:46:03,595 --> 00:46:05,305 ಶಾಲೆಗಳಲ್ಲಿ ನಡೆಯುತ್ತಿರುವುದರಿಂದ. 560 00:46:05,388 --> 00:46:09,767 ಅಧಿಕಾರದಲ್ಲಿರುವ ಜನರು ಇದೆಲ್ಲಾ ಪೊಳ್ಳು ಎಂದು ನಮಗೆ ಹೇಳುತ್ತಿದ್ದಾರೆ. 561 00:46:10,894 --> 00:46:13,521 ನಿಮ್ಮ ಕಣ್ಣು ಕಿವಿಗಳ ಸಾಕ್ಷಿಯನ್ನೇ ತಿರಸ್ಕರಿಸಲು. 562 00:46:15,273 --> 00:46:20,195 ಮತ್ತೆ, ಇದು ಪೊಳ್ಳಲ್ಲ. 563 00:46:23,239 --> 00:46:28,369 ನಿಮ್ಮ ಮೇಯರ್ ಆಗಿ ಇಲ್ಲಿ ಮಾತನಾಡಲು ಬಂದಿರುವೆ. ಹಾಗೆಯೇ ಒಬ್ಬ ತಾಯಿಯಾಗಿ ಮಾತನಾಡಲು ಬಂದಿರುವೆ. 564 00:46:28,828 --> 00:46:32,832 ನನಗೆ ಮನೆಯಲ್ಲಿ ಇಬ್ಬರು ಸುಂದರ ಹೆಣ್ಣುಮಕ್ಕಳಿದ್ದಾರೆ, ನಿಮ್ಮ ಬಗ್ಗೆ ಗೊತ್ತಿಲ್ಲ, 565 00:46:32,916 --> 00:46:37,128 {\an8}ಆದರೆ ನನ್ನ ಮಕ್ಕಳ ದೇಹಗಳಲ್ಲಿ ಏನಾಗುತ್ತೆ ಎಂಬುದನ್ನು ರಾಜಕಾರಣಿಗಳು 566 00:46:37,212 --> 00:46:39,714 {\an8}ನಿರ್ಧರಿಸುವುದು ನನಗೆ ಸರಿ ಅನಿಸುತ್ತಿಲ್ಲ. 567 00:46:40,215 --> 00:46:44,260 ಹಿಂದೆ, ತಮ್ಮ ದೇಹಗಳಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯನ್ನು ಮಹಿಳೆಯರಿಗೆ ಕೊಡದಿದ್ದಾಗ 568 00:46:44,344 --> 00:46:46,429 ಏನಾಗುವುದೆಂದು ನಾವೆಲ್ಲರೂ ನೋಡಿದ್ದೇವೆ. 569 00:46:46,513 --> 00:46:51,893 ಅವಮಾನ ಮತ್ತು ಹತಾಶೆಯ ಆ ಚಕ್ರವನ್ನು ನಾವೆಲ್ಲರೂ ನೋಡಿ ಅಥವಾ ಅನುಭವಿಸಿ 570 00:46:52,769 --> 00:46:53,937 ಬಂದಿದ್ದೇವೆ. 571 00:46:54,854 --> 00:47:00,401 ಅಕ್ರಮ ಗರ್ಭಪಾತಗಳು, ಯಾವುದೇ ಸಂಪನ್ಮೂಲಗಳಿಲ್ಲದ ಹದಿಹರೆಯದ ಹುಡುಗಿಯರು ಜನ್ಮ ಕೊಡುವುದು. 572 00:47:00,485 --> 00:47:02,820 ಮುಂದೆ ಬರಲು ಹೆದರುವ ಅತ್ಯಾಚಾರದ ಸಂತ್ರಸ್ತೆಯರು, 573 00:47:03,154 --> 00:47:05,865 ಮತ್ತು ಮೌನವಾಗಿ ಕೊರಗುತ್ತಿರುವ ಹೆರಿಗೆಯಾದ ಬಾಣಂತಿಯರು. 574 00:47:06,407 --> 00:47:08,618 ಮುಚ್ಚಿಡುವುದನ್ನು ಅಂತ್ಯಗೊಳಿಸೋಣ. 575 00:47:10,912 --> 00:47:12,914 ಸದ್ಯಕ್ಕೆ ನಮಗೆ ಗೊತ್ತಿರುವುದಿಷ್ಟೇ. 576 00:47:14,707 --> 00:47:18,753 ಹದಿಹರೆಯದ ಹುಡುಗಿಯರನ್ನು ಬಾಧಿಸುತ್ತಿರುವ ವಿದ್ಯುತ್ ಪರಿಸ್ಥಿತಿ ರೋಗಾಣುವಲ್ಲ. 577 00:47:18,836 --> 00:47:20,797 ಇದನ್ನು ಮಾಡುತ್ತೇನೆಂದು ನಿನಗೆ ಹೇಳಿದಳಾ? 578 00:47:23,383 --> 00:47:26,844 ವೈದ್ಯರು ಯುವತಿಯರ ಜತ್ರುವಿನ ಪಕ್ಕದಲ್ಲಿ ಒಂದು ಹೊಸ ಅಂಗದ 579 00:47:26,928 --> 00:47:28,805 ಇರುವಿಕೆಯನ್ನು ಗುರುತಿಸಿದ್ದಾರೆ. 580 00:47:28,888 --> 00:47:31,849 12ರಿಂದ 19 ವಯಸ್ಸಿನ ಹುಡುಗಿಯರಲ್ಲಿ ಸಹಜವಾಗಿ ಹುಟ್ಟುತ್ತದೆ, 581 00:47:32,058 --> 00:47:34,561 ಮತ್ತು ಈ ಸಾಮರ್ಥ್ಯವನ್ನು ವರ್ಗಾಯಿಸಬಹುದಾಗಿದೆ. 582 00:47:34,644 --> 00:47:39,357 ಈ ಅಂಗವು ಹೃದಯದ ಕೆಲವು ವಿದ್ಯುತ್ ಸಂಜ್ಞೆಗಳನ್ನು ಅನುಕರಿಸುತ್ತಿರುವಂತಿದೆ. 583 00:47:39,816 --> 00:47:41,776 ಇದು ಯಾಕೆ ಹುಟ್ಟಿಕೊಂಡಿತೋ ನಮಗೆ ಗೊತ್ತಿಲ್ಲ. 584 00:47:41,859 --> 00:47:46,823 ಈ ಶಕ್ತಿಯ ಸಾಮರ್ಥ್ಯ ಮತ್ತು ಉದ್ದೇಶ ನಮಗೆ ಗೊತ್ತಿಲ್ಲ. 585 00:47:47,615 --> 00:47:51,869 ಬರುವ ತಿಂಗಳುಗಳಲ್ಲಿ ಈ ಪ್ರಶ್ನೆಗಳು ನಮ್ಮೆಲ್ಲರನ್ನೂ ಕಾಡಲಿವೆ. 586 00:47:54,080 --> 00:47:57,584 ನಮಗೆ ಗೊತ್ತಿರುವ ಈ ಪ್ರಪಂಚ ಮುಂದೆ ಹೀಗಿಲ್ಲದಿರಬಹುದು. 587 00:48:02,130 --> 00:48:04,007 …ವಿದ್ಯುತ್ ಉತ್ಪಾದಿಸುತ್ತಾ… 588 00:48:04,090 --> 00:48:07,260 -…ಹಗ್ಗದಂತಹ ಅಂಗವು… -…ನೂರಾರು ಸಾವಿರಾರು ಎಲೆಕ್ಟ್ರೋಸೈಟ್ಗಳು… 589 00:48:07,343 --> 00:48:10,263 ವಿದ್ಯುತ್ತನ್ನು ಉತ್ಪಾದಿಸಿ ಬಿಡುಗಡೆ ಮಾಡಬಲ್ಲಂತಹ ಜೀವಾಣುಗಳು. 590 00:48:10,346 --> 00:48:13,725 ಇದು ಕೇವಲ 12ರಿಂದ 19 ವಯಸ್ಸಿನ ಹೆಣ್ಣುಮಕ್ಕಳನ್ನು ಮಾತ್ರ ಬಾಧಿಸಿದೆ. 591 00:48:13,808 --> 00:48:15,768 ಕೇವಲ ಹುಡುಗಿಯರು, ಅದೃಷ್ಟವಶಾತ್. 592 00:48:15,935 --> 00:48:21,274 ಈ ಮೊದಲು ವಿದ್ಯುತ್ ಮೀನುಗಳಲ್ಲಿ ಮಾತ್ರ ನಾವು ನೋಡಿರುವಂಥ ಅಂಗ ಇದು. 593 00:48:21,524 --> 00:48:25,737 ಇದು ಕೇವಲ… ಅಂದರೆ… ಮುಂದುವರೆಸಿ. 594 00:48:25,820 --> 00:48:27,947 ಈ ಹುಡುಗಿಯರಿಗೆ ಬೆಂಬಲ ಸಿಗುವುದು ತುಂಬಾ ಮುಖ್ಯ. 595 00:48:28,031 --> 00:48:31,492 ಅಗತ್ಯ ಬಿದ್ದರೆ ಬಂಧಿಸಲಾಗುವುದು. 596 00:48:31,576 --> 00:48:33,578 ಮರಣದಂಡನೆಯ ಶಿಕ್ಷೆ. 597 00:48:33,661 --> 00:48:34,954 ಅರಿವಳಿಕೆಗಳು. 598 00:48:35,246 --> 00:48:36,623 ಸೈನಿಕಾಡಳಿತದ ಅನುಷ್ಠಾನ. 599 00:48:36,706 --> 00:48:38,416 ನಾವು ಕಾರ್ಯಶೀಲರಾಗಬೇಕು. 600 00:50:52,800 --> 00:50:54,802 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 601 00:50:54,886 --> 00:50:56,888 ಸೃಜನಶೀಲ ಮೇಲ್ವಿಚಾರಕರು: ವಿವೇಕ್