1 00:00:06,632 --> 00:00:08,968 ಹೇ. ಹೇ. 2 00:00:11,137 --> 00:00:12,221 ಎದ್ದೇಳು. 3 00:00:13,180 --> 00:00:14,807 ವಿವಾಹೋತ್ಸವದ ಶುಭಾಶಯಗಳು. 4 00:00:18,644 --> 00:00:21,897 ವಿವಾಹೋತ್ಸವದ ಶುಭಾಶಯಗಳು. ಸಮಯ ಎಷ್ಟಾಗಿದೆ? 5 00:00:21,981 --> 00:00:25,151 ಮುಂಚೆಯೇ. ಕ್ಷಮಿಸು. ಕೆಲಸಕ್ಕೆ ಮುನ್ನ ಓಟಕ್ಕೆ ಹೋಗಬೇಕು ಅಂದುಕೊಂಡೆ. 6 00:00:26,652 --> 00:00:28,487 ಹಾಂ, ತುಂಬಾ ಬೆವರು ಬರುತ್ತೆ. 7 00:00:29,488 --> 00:00:31,240 ಇವತ್ತಂತೂ ನನ್ನ ದಿನ ಭಯಂಕರವಾಗಿದೆ. 8 00:00:32,074 --> 00:00:37,204 ನಾನು ನಿನಗೆ ನೇರವಾಗಿ ಹೇಳಬೇಕೆಂದುಕೊಂಡೆ, ನೀನು ಹೊರಡುವ ಮುಂಚೆ… 9 00:00:38,956 --> 00:00:39,915 ನಿನ್ನ ಪ್ರೀತಿಸುವೆ. 10 00:00:41,667 --> 00:00:44,253 -ಮತ್ತು ಇಂದು ರಾತ್ರಿ ವೈನ್ ಕುಡಿಯೋಣ. -ಹೌದಾ? 11 00:00:45,254 --> 00:00:49,759 ವಯಸ್ಕರ ವಿಚಾರ ಮಾತಾಡೋಣ. ಕೆಲಸ ಅಥವಾ ಮಕ್ಕಳ ಬಗ್ಗೆಯಾಗಲಿ ಅಲ್ಲ. 12 00:00:49,842 --> 00:00:50,801 ಅಬ್ಬಾ, ಸದ್ಯ. 13 00:00:50,968 --> 00:00:54,096 ಆಮೇಲೆ ಸಂಭೋಗ ನಡೆಸೋಣ. 14 00:00:55,347 --> 00:00:56,515 ಏನು ಮಾಡೋದು? 15 00:00:58,142 --> 00:01:03,981 ಸರಿ. ಮಕ್ಕಳನ್ನು ಕಳಿಸಿ ಆಮೇಲೆ ನಾನು ತಯಾರಾಗುವೆ. 16 00:01:05,900 --> 00:01:09,862 ದೇವರೇ, ನಿನ್ನ ಉಪಾಯ ನನಗೆ ಹಿಡಿಸಿತು. ಆದರೆ ನೀನು ಇನ್ನೂ ಹೆಚ್ಚು ಹಿಡಿಸಿದೆ. 17 00:01:13,157 --> 00:01:13,991 -ಏನು? -ದೇವರೇ. 18 00:01:14,200 --> 00:01:16,827 -ಇದೇನು ತಮಾಷೆಯೇ? -ಏನು ಹಾಳಾದ್ದು ನಡೆಯುತ್ತಿದೆ? 19 00:01:16,911 --> 00:01:18,370 -ಏನು ನಡೆಯುತ್ತಿದೆ? -ಛೆ. 20 00:01:32,009 --> 00:01:35,304 ಜೋಸ್, ಏನಾಯ್ತು? ಅಯ್ಯೋ, ದೇವರೇ. ಆರಾಮವಾಗಿದ್ದಿಯಾ? 21 00:01:35,387 --> 00:01:36,305 ನನ್ನ ಮುಟ್ಟಬೇಡಿ. 22 00:01:36,388 --> 00:01:39,391 ನಾನು ನೋಡ್ತೀನಿ. ನೋಡಿಕೊಳ್ಳಿ. ಹಿಂದೆ ಹೋಗು, ಚಿನ್ನ. 23 00:01:44,021 --> 00:01:46,065 ಅಲಾರ್ಮ್ ಹೊಡೆಯುತ್ತಿದೆ. ಬೆಂಕಿ ಹತ್ತಿದೆಯಾ? 24 00:01:46,148 --> 00:01:48,526 -ಇನ್ನಿಲ್ಲ. -ಚೆನ್ನಾಗಿದ್ದೇವೆ. ಧನ್ಯವಾದ, ಫ್ರಾಂಕ್. 25 00:01:48,943 --> 00:01:50,986 -ಮನೆ ಯಾಕೆ ಕಿರುಚುತ್ತಿದೆ? 26 00:01:51,070 --> 00:01:52,404 ಜೋಸ್ ಅದನ್ನು ಸುಡಲು ನೋಡಿದಳು. 27 00:01:53,322 --> 00:01:55,908 -ಹದಿಹರೆಯ-ಹಾರ್ಮೋನ್ ಏರುಪೇರು. -ಬಾಯಿ ಮುಚ್ಚು, ಮ್ಯಾಟಿ. 28 00:01:55,991 --> 00:01:59,036 ಸರಿ. ಎಲ್ಲವೂ ಚೆನ್ನಾಗಿದೆ. ನಿಯಂತ್ರಣ ಪಡೆದಿದ್ದೇವೆ. 29 00:01:59,119 --> 00:02:00,454 ತಯಾರಾಗಿ. ತಡವಾಗಿದೆ. 30 00:02:00,538 --> 00:02:04,083 -ಏನು ಹೇಳುತ್ತಿರುವೆ? ಇಲ್ಲಿ ಅನಾಹುತವೇ ಆಗಿದೆ. -ಇದು ಸ್ವಲ್ಪ ಅತಿಯಾಯಿತು. 31 00:02:07,002 --> 00:02:09,213 -ಜೋಸ್, ಏನಾಯ್ತು? -ನಂಗೊತ್ತಿಲ್ಲ. 32 00:02:18,055 --> 00:02:22,393 -ಹಾಯ್. ಆಂಗ್ಲದಲ್ಲಿ ಮಾತನಾಡಬಹುದೇ? -ಚಿನ್ನ, ನಮ್ಮ ಮದುವೆಯಾಗಿ ಎಷ್ಟು ವರ್ಷಗಳಾದವು? 33 00:02:22,476 --> 00:02:25,646 ಇಪ್ಪತ್ತು ವರ್ಷ, ಒಂದು ಪದ ಕಲಿತಿಲ್ಲ? ರೊಸೆಟ್ಟ ಸ್ಟೋನ್ ಕೊಡಲಿಲ್ಲವೇ? 34 00:02:25,729 --> 00:02:29,441 ಆಕೆಗೆ ಸಮಯವಿಲ್ಲ. ಶಿಶುಗಳಿಗೆ ಮುತ್ತಿಟ್ಟು ರಿಬ್ಬನ್ ಕತ್ತರಿಸುತ್ತಿದ್ದಾರೆ. 35 00:02:29,692 --> 00:02:32,987 ಹೇ. ಹೇ. ಜೋಸ್. ಅಮ್ಮನನ್ನು ಹಾಗೆ ಮಾತನಾಡಿಸಬೇಡ. 36 00:02:33,070 --> 00:02:35,781 ಹೇ. ಏನಾಗುತ್ತಿದೆ ನಿನಗೆ? 37 00:02:43,455 --> 00:02:44,582 ಇದು ಹೆಲೆನ್. ಕ್ಷಮಿಸಿ. 38 00:02:44,665 --> 00:02:45,541 -ಹಾಂ. -ಕ್ಷಮಿಸಿ. 39 00:02:45,624 --> 00:02:46,584 ಇರಲಿ ಬಿಡು. 40 00:02:46,959 --> 00:02:50,504 -ಮುಖ್ಯವಾದ ವಿಷಯವಿರಲಿ. -ಪ್ರಪಂಚವೇ ಹೊತ್ತಿ ಉರಿಯುತ್ತಿದೆ. 41 00:02:51,672 --> 00:02:54,508 ನೀವಿಲ್ಲಿ ಬರಬೇಕು. ಈಗಲೇ. 42 00:02:56,343 --> 00:03:01,223 ದಿ ಪವರ್ 43 00:03:02,683 --> 00:03:06,020 ತುರ್ತು ಸೇವೆಗಳು ತಮ್ಮ ಈ ವರ್ಷದ ಅಧಿಕ ಸಮಯದ ಬಜೆಟ್ ತಲುಪುತ್ತಿವೆ. 44 00:03:06,103 --> 00:03:08,439 ಯಾರಾದರೂ ಹೆಚ್ಚಿನ ಹಣವಿರುವವರನ್ನು ಸಂಪರ್ಕಿಸಬೇಕು. 45 00:03:08,522 --> 00:03:12,192 -ಗವರ್ನರ್ ಜೊತೆ ಸಭೆ ಮಾಡಿಸಿ. ಇನ್ನೇನು? -ಪ್ಯೂಜೆಟ್ ಸೌಂಡ್ ಎನರ್ಜಿ. 46 00:03:12,276 --> 00:03:16,196 ವಿದ್ಯುತ್ ವ್ಯತ್ಯಯ, ಸುಟ್ಟ ಗ್ರಿಡ್'ಗಳು, ಫ್ಯೂಸ್ ಡಬ್ಬಿಗಳು. ಸಲಕರಣೆಗಳ ವೈಫಲ್ಯ ಅಲ್ಲ. 47 00:03:16,405 --> 00:03:19,617 ಹೊರಗಿನ ಸಂಸ್ಥೆಯ ಮೂಲಕ ಅದನ್ನು ಪರಿಶೀಲಿಸೋಣ, ದಯವಿಟ್ಟು. 48 00:03:19,825 --> 00:03:22,953 ಬೀಕನ್ ಹಿಲ್ಲಲ್ಲಿ ಮತ್ತೊಂದು ಬೆಂಕಿ ಅವಘಡ. ಉಪಹಾರ ಮಂದಿರದಲ್ಲಿ. 49 00:03:23,037 --> 00:03:27,124 ನಿಯಂತ್ರಣದಲ್ಲಿದೆ ಎಂದು ಮುಖ್ಯಸ್ಥರು ಹೇಳಿದ್ದರೂ, ಈಗ ಪಕ್ಕದ ಕಟ್ಟಡಕ್ಕೆ ಬೆಂಕಿ ಹಬ್ಬಿದೆ. 50 00:03:27,207 --> 00:03:29,376 ಮೂವರ ಮರಣ, ನಿವಾಸಿಗಳು ಕಾಣೆಯಾಗಿದ್ದಾರೆ. 51 00:03:29,460 --> 00:03:33,464 ಇನ್ನೊಬ್ಬ ಹದಿಹರೆಯದ ಹುಡುಗಿ. ಕುಟುಂಬದವರು ಇದೊಂದು ಅವಘಡ ಎನ್ನುತ್ತಿದ್ದಾರೆ. 52 00:03:33,839 --> 00:03:38,719 ಆಕೆಯ ತಂದೆಯ ಪ್ರಕಾರ ಬೆಂಕಿಯು ಅವಳ ಕೈಗಳಿಂದ ಬಂತಂತೆ. ಹೀಗೇ ಹೇಳಿದರು. 53 00:03:39,261 --> 00:03:41,805 ಬೀಕನ್ ಹಿಲ್ಲಲ್ಲಿ ಹೆಚ್ಚಾಗಿ ಚೀನಾದ ವಲಸಿಗರೇ ಇದ್ದಾರೆ. 54 00:03:41,931 --> 00:03:44,558 ಅನುವಾದ ಮಾಡುವಾಗ ಏನಾದರೂ ತಪ್ಪು ಸಂಭವಿಸಿರಬಹುದಾ? 55 00:03:44,642 --> 00:03:45,559 ಸಾಧ್ಯವಿದೆ. 56 00:03:45,643 --> 00:03:48,187 -ನಿಮಗೆ ಮಂಡಾರಿನ್ ಬರುತ್ತಾ? -ಕ್ಯಾಂಟನೀಸ್ ಸಹ. ನೋಡುವೆ. 57 00:03:48,270 --> 00:03:51,815 ಸರಿ, ಭರ್ಜರಿಯಾಗಿದೆ. ಎಲ್ಲರೂ ಭರ್ಜರಿ ಕೆಲಸ ಮಾಡಿದ್ದೀರಿ. ಧನ್ಯವಾದ. 58 00:03:51,982 --> 00:03:54,526 ಎಲ್ಲರ ಬಳಿಯೂ ಕಳಿಸುವ ಆದೇಶ ಇದೆ, ಅಲ್ವಾ? 59 00:03:54,693 --> 00:03:56,654 ಏನಿದು? ವಾರದಲ್ಲಿ 12ನೇ ಅಗ್ನಿ ಅವಘಡವೇ? 60 00:03:58,822 --> 00:04:00,282 ಏನು ನಡೆಯುತ್ತಿದೆ? 61 00:04:02,117 --> 00:04:04,870 ಹದಿಹರೆಯದ ಹುಡುಗಿಯರು ಎಲ್ಲಕ್ಕೂ ಬೆಂಕಿ ಹಚ್ಚುತ್ತಿದ್ದಾರೆ. 62 00:04:05,120 --> 00:04:08,123 ನನಗೆ ಆಶ್ಚರ್ಯವಿಲ್ಲ. ಅವರು ಬೆಳೆಯುತ್ತಿರುವ ಪ್ರಪಂಚವೇ ಹಾಗಿದೆ. 63 00:04:08,207 --> 00:04:12,044 ಹಾಂ. ನನಗೂ ಕೆಲವೊಮ್ಮೆ ಏನಕ್ಕಾದರೂ ಬೆಂಕಿ ಹಚ್ಚಬೇಕು ಅನ್ಸುತ್ತೆ. 64 00:04:12,628 --> 00:04:17,841 ಬೆಂಕಿ, ಹುಡುಗಿಯರು, ವಿದ್ಯುತ್ ವ್ಯತ್ಯಯಗಳು. ಅವುಗಳಿಗೆ ಏನಾದರೂ ಸಂಬಂಧವಿದೆ ಅನ್ಸುತ್ತಾ? 65 00:04:18,801 --> 00:04:20,010 ನಾನು ಪತ್ತೆ ಮಾಡುವೆ. 66 00:04:36,402 --> 00:04:38,821 ಹೇ, ಜೋಸ್. ನನ್ನನ್ನು ಕ್ಷಮಿಸು… 67 00:04:41,365 --> 00:04:44,368 ನಮ್ಮಮ್ಮ. ಸಾಮಾನ್ಯ ವ್ಯಕ್ತಿಯಂತೆ ಸಂದೇಶ ಕಳಿಸಲು ಆಕೆಗೆ ಆಗಲ್ವೇ? 68 00:04:44,952 --> 00:04:48,539 ಹುಡುಗಿಯರು ಮಾಡುತ್ತಿರುವ ವಿಚಿತ್ರ ವಿದ್ಯುತ್ ಕ್ರಿಯೆಯ ಬಗ್ಗೆ ಕೇಳಿರುವೆಯಾ? 69 00:04:49,331 --> 00:04:52,251 ಅಂದರೆ, ಹಾಂ. ಒಂಥರಾ. ಯಾಕೆ? ಅದರ ಬಗ್ಗೆ ನೀನೇನು ಕೇಳಿರುವೆ? 70 00:04:52,334 --> 00:04:55,087 -ಅದರಿಂದಲೇ ಆಗುತ್ತೆ ಅನ್ಸುತ್ತೆ. -ಯಾವುದು, ಸಂದೇಶಗಳಿಂದಲೇ? 71 00:04:55,170 --> 00:05:00,759 ಇಲ್ಲ. ಹುಡುಗಿಯರು, ಗೊತ್ತಲ್ಲ, ತಮ್ಮೊಂದಿಗೇ ಆಟವಾಡುವುದು. ವೈಬ್ರೇಟರ್ಗಳೊಂದಿಗೆ. 72 00:05:03,554 --> 00:05:08,017 ಸರಿ. ಅದರ ಬಗ್ಗೆ ನಾನಿನ್ನೂ ಕೇಳಿಲ್ಲ. ಆದರೆ ವಿಶ್ವ ನಾಗರಿಕತೆಯ ಬಗ್ಗೆ ಪರೀಕ್ಷೆ ಇದೆ. 73 00:05:08,100 --> 00:05:11,979 ಹಾಗಾಗಿ ಮತ್ತೆ ಸಿಗುವೆ. ಸರಿ. ಹೇ, ಕ್ವಿನ್. ಕ್ಯಾಟ್ ಎಲ್ಲಿ? 74 00:05:12,062 --> 00:05:15,024 ಪರೀಕ್ಷೆ ಇದೆ ಅಂತ ತಪ್ಪಿಸಿಕೊಂಡಿರಬೇಕು. ನೀನು ಓದಿರುವೆಯಾ? 75 00:05:15,566 --> 00:05:19,987 ಹಾಂ, ಒಂಥರಾ. ಗೊತ್ತಿಲ್ಲ. ಫ್ರೆಂಚ್ ಕ್ರಾಂತಿಯ ಇಡೀ ಅಧ್ಯಾಯವೇ? 76 00:05:20,529 --> 00:05:24,658 -ಅದನ್ನು ಜೀವನದಲ್ಲಿ ಹೇಗೆ ಬಳಸಲಿ? -ಹೌದಲ್ವಾ? ಪಕ್ಕಾ ಅನುತ್ತೀರ್ಣಳಾಗುತ್ತೇನೆ. 77 00:05:33,000 --> 00:05:36,253 -ಈಗ ನೋಡು. ಪರೀಕ್ಷೆ ಇಲ್ಲ. -ಆಹಾ, ದೇವರೇ. ಸಕ್ಕತ್ತಾಗಿದೆ. 78 00:05:36,628 --> 00:05:38,088 ಬಾ, ಬಾ, ಬಾ. 79 00:05:41,759 --> 00:05:42,593 ಹೇ. 80 00:05:42,676 --> 00:05:45,929 ಇವರು ರಾಬ್ ಲೋಪೆಜ್. ಈ ಪರೀಕ್ಷೆಯ ಉಸ್ತುವಾರಿ ಇವರೇ. 81 00:05:46,638 --> 00:05:47,639 ಭೇಟಿ ಸಂತೋಷವಾಯಿತು. 82 00:05:47,806 --> 00:05:52,144 ಅವರು ನಿನ್ನ ಗಾಯದ ಕಲೆಗಳನ್ನು ನೋಡಲಿದ್ದಾರೆ, ನೀನು ಸರಿ ಅಂದರೆ, ಸಾರಾ. 83 00:05:52,227 --> 00:05:53,062 ಸರಿ. 84 00:05:55,397 --> 00:05:58,400 ಮತ್ತೆ, ಸಾರಾ, ಚೆನ್ನಾಗಿದ್ದೀಯಾ? 85 00:05:58,734 --> 00:06:01,028 -ಹಾಂ. -ಒಳ್ಳೆಯದು, ಒಳ್ಳೆಯದು, ಒಳ್ಳೆಯದು. 86 00:06:02,321 --> 00:06:05,407 ನಿನ್ನ ಕಷ್ಟದ ಬಗ್ಗೆ ಕೇಳಿ ನನಗೆ ತುಂಬಾ ನೋವಾಯಿತು. 87 00:06:06,450 --> 00:06:10,245 ಆದರೆ ನಾವು ಸರಿ ಮಾಡಲಾಗದ್ದು ಖಂಡಿತ ಅಲ್ಲ ಎಂದು ಅಂದುಕೊಳ್ಳುವೆ. 88 00:06:11,663 --> 00:06:12,706 ನೋಡು. ನಂಗೊತ್ತು. 89 00:06:12,790 --> 00:06:16,460 ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಚಿಂತಿಸುತ್ತಾರೆಂದು ನನಗೆ ಗೊತ್ತು. 90 00:06:16,710 --> 00:06:19,129 ಎಲ್ಲದರ ಬಗ್ಗೆಯೂ. ಸರಿ. ನೋಡಲೇ? 91 00:06:21,757 --> 00:06:22,800 ಸರಿ. 92 00:06:28,597 --> 00:06:29,431 ಸರಿ. 93 00:06:39,983 --> 00:06:42,528 ಅಷ್ಟು ಚಿಕ್ಕ ದೇಹಕ್ಕೆ ಎಷ್ಟೊಂದು ಔಷಧಿಗಳು. 94 00:06:43,153 --> 00:06:45,155 ಭಾವನೆಗಳನ್ನು ನಿಭಾಯಿಸಲು ಕಷ್ಟಪಡುತ್ತಾಳೆ. 95 00:06:46,198 --> 00:06:48,826 -ಅದರಲ್ಲೂ ಅವಳಿಗೆ ಕೋಪ ಬಂದಾಗ. -ಸರಿ. 96 00:06:48,909 --> 00:06:52,162 ಮತ್ತು ಆಕೆಗೆ ಮಧ್ಯಂತರ ಸ್ಫೋಟಕ ಅಸ್ವಸ್ಥತೆ ಇದೆಯೇ? 97 00:06:52,496 --> 00:06:56,166 ಹೌದು. ಎರಡು ವರ್ಷಗಳ ಹಿಂದೆ ಸಾರಾಗೆ ಈ ಯಾವ ಸಮಸ್ಯೆಗಳೂ ಇರಲಿಲ್ಲ. 98 00:06:57,668 --> 00:07:00,796 -ಏನಾದರೂ ನಡೀತಾ? -ಏನೂ ಇಲ್ಲ, ನಮಗೆ ಗೊತ್ತಿದ್ದಂತೆ. 99 00:07:02,631 --> 00:07:06,051 ಅವಳ ಕಷ್ಟದ ಹದಿಹರೆಯದ ವಯಸ್ಸಿನ ತೊಳಲಾಟಗಳಷ್ಟೇ. 100 00:07:06,385 --> 00:07:09,930 ನನ್ನನ್ನು ನಂಬಿ, ಅದರ ಬಗ್ಗೆ ತಿಳಿದಿರುವೆ. ನನಗೂ ಆ ವಯಸ್ಸಿನ ಮಗಳಿದ್ದಾಳೆ. 101 00:07:10,180 --> 00:07:14,685 ನನ್ನ ಮಗಳಿಗೆ 17. ನೀವು ಅವಳ ಭಾವನೆಗಳ ಬಗ್ಗೆ ಅವಳೊಂದಿಗೆ ಮಾತನಾಡುವಾಗ ಏನು ಹೇಳುತ್ತಾಳೆ? 102 00:07:14,768 --> 00:07:18,605 ಮಾತನಾಡೋದೇ? ಸಾರಾ ಮಾತನಾಡಲ್ಲ. ಕಿರುಚುತ್ತಾಳೆ. 103 00:07:19,189 --> 00:07:21,692 ನನ್ನನ್ನು ದ್ವೇಷಿಸುತ್ತಾಳೆ. ಎಲ್ಲರನ್ನೂ ಅಷ್ಟೇ. 104 00:07:22,484 --> 00:07:24,778 ಕ್ಷಮಿಸಿ. ತಗೊಳ್ಳಿ. 105 00:07:29,992 --> 00:07:34,329 ನೋಡೋಣ. ನಮ್ಮಲ್ಲಿ ಡೆಪಕೋಟ್, ಟೆಗ್ರೆಟೋಲ್, ಟೋಪಮ್ಯಾಕ್ಸ್, ಎಬಿಲಿಫೈ, 106 00:07:34,496 --> 00:07:37,291 ರಿಸ್ಪರ್ಡಾಲ್, ಪಿಆರ್ಎನ್ ಫೀನೋಬಾರ್ಬಿಟಾಲ್... 107 00:07:37,374 --> 00:07:39,376 ಹಾಂ, ಎಲ್ಲವನ್ನೂ ಪ್ರಯತ್ನಿಸಿದ್ದೇವೆ. 108 00:07:41,837 --> 00:07:45,174 ಆದರೆ ಆಕೆಯ ಕಲೆಗಳು ಅದರಿಂದಲೇ, ಅಲ್ವಾ? ಔಷಧಗಳಿಂದ? 109 00:07:45,257 --> 00:07:48,302 ಅವುಗಳಿಂದ ಆಕೆಗೆ ಅಡ್ಡ ಪರಿಣಾಮಗಳು ಮತ್ತು ಪ್ರತಿಕ್ರಿಯೆಗಳಾಗಿವೆಯೇ? 110 00:07:48,385 --> 00:07:50,721 ಈ ಯಾವುದೇ ಔಷಧಗಳು, ಜೊತೆಯಾಗಿ ಸಹ, 111 00:07:50,804 --> 00:07:52,306 ಇದನ್ನು ಮಾಡಿರದಿರಬಹುದು. 112 00:07:53,182 --> 00:07:57,686 ಕ್ಷಮಿಸಿ. ಈ ಕಲೆಗಳ ಮಾದರಿ ತುಂಬಾ ವಿಭಿನ್ನವಾಗಿದೆ. 113 00:07:57,769 --> 00:08:02,441 ಇದು ಲಿಕ್ಟೆನ್ಬರ್ಗ್ ರೇಖಾಚಿತ್ರ. ಇದು ವಿಶಿಷ್ಟವಾಗಿ ವಿದ್ಯುತ್ ಸುಡುವಿಕೆಯಿಂದ ಆಗುತ್ತೆ. 114 00:08:03,734 --> 00:08:08,405 ಸಾರಾಗೆ ವಿದ್ಯುತ್ ಆಘಾತ ಉಂಟಾಗಿತ್ತಾ? ನಿಮಗೆ ಗೊತ್ತಿಲ್ಲದ ಯಾವುದಾದರೂ ಅವಘಡ? 115 00:08:08,572 --> 00:08:12,242 ಇಲ್ಲ. ಇಲ್ಲ. ಅಂದರೆ, ಇಲ್ಲ ಅನ್ಸುತ್ತೆ. 116 00:08:12,451 --> 00:08:15,746 ಅಂಥದ್ದು ನಡೆದಿದ್ದರೆ ನನಗೆ ಹೇಳುತ್ತಿದ್ದಳು, ಅಲ್ವಾ? 117 00:08:17,539 --> 00:08:23,212 ಕೆಲ್ಲಿ, ನನ್ನನ್ನು ಕ್ಷಮಿಸಿ. ಇದು ಸೂಕ್ಷ್ಮ ಅಂತ ನಂಗೊತ್ತು, ಆದರೂ ನಾನು ಕೇಳಲೇಬೇಕು. 118 00:08:25,130 --> 00:08:27,174 ಅವಳಿಗೆ ಯಾರೂ ತೊಂದರೆ ಕೊಡುತ್ತಿಲ್ಲವಷ್ಟೇ? 119 00:08:27,674 --> 00:08:31,887 ಇಲ್ಲ. ಇಲ್ಲ. ನನಗೆ ಗೊತ್ತಿದ್ದಂತೆ ಇಲ್ಲ. 120 00:08:33,055 --> 00:08:35,933 ಕೇವಲ ಜಗಳಗಳು. ಸಾಮಾನ್ಯ ಆಟದ ಮೈದಾನದ ವಿಚಾರಗಳು. 121 00:08:36,892 --> 00:08:39,061 ಹುಡುಗಿಯರೊಂದಿಗೆ. ಬೇರೆ ಹುಡುಗಿಯರೊಂದಿಗೆ. 122 00:08:41,480 --> 00:08:42,314 ಸರಿ. 123 00:08:46,151 --> 00:08:48,111 ಕಾರ್ಪೇಥಿಯಾದ ಬೀದಿಗಳು ಉರಿಯುತ್ತಿವೆ. 124 00:08:48,195 --> 00:08:52,282 ಈ ಬೆಂಕಿಗಳು ಆಕಸ್ಮಿಕವಲ್ಲ. ಇವು ವಿಧ್ವಂಸಕತೆ ಮತ್ತು ಅರಾಜಕತಾ ಕೃತ್ಯಗಳಾಗಿವೆ. 125 00:08:52,366 --> 00:08:53,825 ದುಷ್ಕರ್ಮಿಗಳಿಗೆ 126 00:08:54,826 --> 00:08:56,411 ಮರಣದಂಡನೆ ವಿಧಿಸಲಾಗುತ್ತದೆ. 127 00:08:56,662 --> 00:09:00,165 ಇವರು ಕೇವಲ ಸಣ್ಣ ಹೆಣ್ಣು ಮಕ್ಕಳಲ್ಲ. ಇವರು ಭಯೋತ್ಪಾದಕಿಯರು. 128 00:09:00,249 --> 00:09:05,128 ನಿಮ್ಮ ನಿಷ್ಠ ಅಧ್ಯಕ್ಷನಾಗಿ ನ್ಯಾಯ ಮತ್ತು ನೀತಿಯನ್ನು ಎತ್ತಿ ಹಿಡಿಯುವೆ. ದೇವರು ನೆರವಾಗಲಿ. 129 00:09:06,046 --> 00:09:06,922 ಹಾಳಾಗಿ ಹೋಗಿ. 130 00:09:20,102 --> 00:09:22,145 {\an8}ಕ್ರೀಡಾ ವಿಶೇಷ 1999 131 00:09:22,229 --> 00:09:24,106 {\an8}ಈ ವರ್ಷ, ಅಕ್ಟೋಬರ್ 1999ರಲ್ಲಿ, 132 00:09:24,189 --> 00:09:25,899 {\an8}ಇನ್ಸ್ಟಿಟ್ಯೂಟ್ ಫಾರ್ ಜಿಮ್ನಾಸ್ಟಿಕ್ಸ್ ಎಕ್ಸಲೆನ್ಸ್ 133 00:09:25,983 --> 00:09:29,069 {\an8}ಪ್ರಪಂಚದ 71 ದೇಶಗಳಿಂದ ಅತ್ಯುತ್ತಮ ಜಿಮ್ನಾಸ್ಟುಗಳು 134 00:09:29,152 --> 00:09:31,571 ಟಿಯಾಂಜಿನ್, ಚೀನಾದಲ್ಲಿ ಒಟ್ಟಾಗಿ ಸೇರಿ, 135 00:09:31,947 --> 00:09:34,741 ಅಂತಿಮ ಪ್ರಶಸ್ತಿಗೆ ಇದು ವೇದಿಕೆಯಾಗಲಿದೆ. 136 00:09:35,117 --> 00:09:37,828 ಸಿಡ್ನಿ ಒಲಿಂಪಿಕ್ಸಿನಲ್ಲಿ ಪ್ರತಿಷ್ಠಿತ ಚಿನ್ನ. 137 00:09:38,996 --> 00:09:41,498 ಅದಕ್ಕೂ ಮೊದಲು ರಾಷ್ಟ್ರೀಯ ಸ್ಪರ್ಧೆಗಳು ಬರುತ್ತವೆ. 138 00:09:41,748 --> 00:09:45,627 ಮತ್ತು ಕಾರ್ಪೇಥಿಯಾದಲ್ಲಿ ಒಂದು ಆಶ್ಚರ್ಯಕರ ಹೊಸ ಪ್ರತಿಭೆ ಉದಯಿಸುತ್ತಿದೆ. 139 00:09:46,044 --> 00:09:50,424 {\an8}ಎಲ್ಲವೂ ಅರ್ಹತಾ ಸುತ್ತಿನಲ್ಲಿ ನನ್ನ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ, ಸುಲಭವಾಗಿ ಗೆಲ್ಲಬಲ್ಲೆ. 140 00:09:52,676 --> 00:09:55,012 ಎರಡು ವರ್ಷ ವಯಸ್ಸಿನಿಂದ ತರಬೇತಿ ಪಡೆಯುತ್ತಿದ್ದೇನೆ. 141 00:09:55,345 --> 00:09:58,932 ಮತ್ತು ನಾನೇ ಶ್ರೇಷ್ಠಳಾಗಬೇಕು. ನನ್ನ ದೇಶಕ್ಕೆ ಹೆಮ್ಮೆ ಆಗಬೇಕು. 142 00:10:00,017 --> 00:10:02,644 ಹಾಗೆಯೇ, ನನ್ನ ತಂಗಿ, ಜೋಯಾ. 143 00:10:02,853 --> 00:10:05,689 -ಮತ್ತು ನಿಮ್ಮ ತಾಯಿ? -ಖಂಡಿತ. 144 00:10:06,982 --> 00:10:09,359 ಕಾರ್ಪೇಥಿಯಾದ ಪತ್ರಿಕೋದ್ಯಮದ ಪ್ರೀತಿ ಪಾತ್ರಳು, 145 00:10:09,609 --> 00:10:13,363 ಟಿಯಾಂಜಿನ್ ಪರೀಕ್ಷೆಯಲ್ಲಿ ತಂಡಕ್ಕೆ ಆಯ್ಕೆಯಾಗುತ್ತಾಳಾ ಕಾದು ನೋಡಬೇಕಿದೆ. 146 00:10:13,822 --> 00:10:15,866 {\an8}ಮತ್ತೊಮ್ಮೆ ನಿಮ್ಮ ಹೆಸರನ್ನು ಹೇಳುವಿರಾ? 147 00:10:16,366 --> 00:10:20,037 ನನ್ನ ಹೆಸರು ಟಾಟಿಯಾನಾ ದೋನಿಚ್ ಮತ್ತು ನನ್ನ ವಯಸ್ಸು 15. 148 00:10:20,245 --> 00:10:21,246 ಕಟ್. 149 00:11:25,602 --> 00:11:28,021 ಇಲ್ಲಿ ಧೈರ್ಯವಾಗಿ ಮುಖವನ್ನು ತೋರಿಸುತ್ತಿರುವೆ. 150 00:11:29,356 --> 00:11:32,067 -ನನ್ನಪ್ಪ ನಿನ್ನ ಕೊಂದುಹಾಕುತ್ತಾರೆ. -ಆಕೆ ಹೇಗಿದ್ದಾಳೆ? 151 00:11:34,945 --> 00:11:37,155 ಆಕೆ ಹೇಗಿದ್ದಾಳೆ ಅನ್ಸುತ್ತೆ, ತುಂಡೆ? 152 00:11:37,781 --> 00:11:38,657 ದಯವಿಟ್ಟು. 153 00:11:40,409 --> 00:11:42,202 -ದೇವರೇ. -ಧನ್ಯವಾದ. 154 00:11:45,205 --> 00:11:47,999 ಎಲ್ಲಾ ಮುಗಿದಿದೆ. ಧನ್ಯವಾದ, ಸರ್. 155 00:12:02,514 --> 00:12:03,682 ನನ್ನನ್ನು ನೋಡು. 156 00:12:05,475 --> 00:12:06,601 ನ್ದುಡಿ? 157 00:12:09,813 --> 00:12:10,897 ನನ್ನನ್ನು ನೋಡು. 158 00:12:27,747 --> 00:12:29,583 ನಾನು ಸಿಲುಕಿರುವ ತೊಂದರೆ ನಿನಗೆ ಗೊತ್ತಾ? 159 00:12:33,753 --> 00:12:38,633 -ಕ್ಷಮಿಸು. -ನನ್ನ ತಂದೆ ಭೂತ ಬಿಡಿಸಬೇಕೆಂತಿದ್ದಾರೆ. 160 00:12:41,928 --> 00:12:43,722 ಯಾರೂ ಬರಬಾರದು ಎಂದು ಹೇಳಿದ್ದಾರೆ. 161 00:12:51,354 --> 00:12:53,398 ನಿನಗೇನಾಯಿತು ಅಂತ ತಿಳಿದುಕೊಳ್ಳುವೆ. 162 00:12:54,524 --> 00:12:55,692 ಇದು ಏನು ಅಂತ. 163 00:13:41,363 --> 00:13:42,822 ಅವನಿಗೆ ಅದು ಆಗಬೇಕಾಗಿತ್ತು. 164 00:13:46,910 --> 00:13:49,913 ಸ್ವರ್ಗದಲ್ಲಿರುವ ನಮ್ಮ ತಂದೆ... 165 00:13:50,205 --> 00:13:52,666 ಆ ಪಿತೃವು ನಿನಗೇನು ಮಾಡಿದ್ದಾರೆ? 166 00:13:55,418 --> 00:13:57,295 ನಿನ್ನನ್ನು ಕಾಪಾಡಲು ಯಾರೂ ಬಂದಿಲ್ಲ. 167 00:13:59,089 --> 00:14:00,757 ನೀನು ಹುಟ್ಟಿದ ಕ್ಷಣದಿಂದ, 168 00:14:00,840 --> 00:14:03,510 ಈ ಪ್ರಪಂಚವು ನಿನಗೆ ಹತಾಶೆಯ ಬದಲು ಬೇರೇನೂ ಕೊಟ್ಟಿಲ್ಲ. 169 00:14:36,543 --> 00:14:38,378 ಈಗ ಒಳ್ಳೆಯವಳಾಗಿರುವುದನ್ನು ನಿಲ್ಲಿಸೋಣ. 170 00:14:42,382 --> 00:14:43,758 ನಿನಗೆ ಬೇಕಾದ್ದು ಪಡೆದುಕೋ. 171 00:14:54,019 --> 00:14:57,063 ಈ ವ್ಯಕ್ತಿಯನ್ನು ಕಂಡರೆ, ದಯವಿಟ್ಟು 911ಗೆ ಕರೆ ಮಾಡಿ. 172 00:14:57,689 --> 00:14:59,274 ಕ್ಲೈಡ್ ಒಳ್ಳೆಯ ವ್ಯಕ್ತಿಯಾಗಿದ್ರು. 173 00:14:59,774 --> 00:15:03,403 {\an8}ಸೌಲ್ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚಿಗೆ ವರ್ಷಗಳ ಸೇವೆ ನೀಡಿದರು. ವರ್ಷಗಳು. 174 00:15:05,322 --> 00:15:07,115 ಅವರು ಈ ರೀತಿ ಸಾಯಬೇಕಿರಲಿಲ್ಲ. 175 00:15:07,198 --> 00:15:09,534 ಅನುಮಾನಾಸ್ಪದ ಸಾವಿನ ನಂತರ ತಪ್ಪಿಸಿಕೊಂಡಿರುವ ಹದಿಹರೆಯದವಳು 176 00:15:11,620 --> 00:15:13,872 -ಪೊಲೀಸರು... -ಪ್ರಶ್ನೆ ಸಾಕು. 177 00:15:14,289 --> 00:15:18,084 ...17 ವರ್ಷದ ಆ್ಯಲಿಸನ್ ಮಾಂಟ್ಗೊಮೆರಿ ಈ ಕೊಲೆಯ ಪ್ರಮುಖ ಶಂಕಿತೆ, 178 00:15:18,168 --> 00:15:20,629 ಸಾರ್ವಜನಿಕರಿಗೆ ಅವಳ ಬಳಿ ಸುಳಿಯದಿರಲು ಹೇಳಿದ್ದಾರೆ, 179 00:15:20,712 --> 00:15:23,089 ಯಾಕೆಂದರೆ ಅವಳು ತುಂಬಾ, ತುಂಬಾ ಅಪಾಯಕಾರಿ. 180 00:16:27,237 --> 00:16:28,154 ಕ್ಷಮಿಸಿ. 181 00:16:35,537 --> 00:16:36,413 ಮೊಂಕ್ ಅಂಡ್ ಸನ್ಸ್ 182 00:16:37,330 --> 00:16:39,916 -ಇನ್ನೇನು ಮುಚ್ಚುತ್ತಿದ್ದೇವೆ. -ನೀನು ಹೊಸಬನೇ? 183 00:16:40,291 --> 00:16:44,421 ನನ್ನ ಅಪ್ಪನನ್ನು ನೋಡಬೇಕು. ನಾನು ಬರ್ನಿ ಮೊಂಕ್ ಅವರ ಮಗಳು. 184 00:16:49,175 --> 00:16:51,594 -ಜರುಗು. -ನೀನದನ್ನು ಒಳಗೆ ತರಬಾರದು. 185 00:16:59,352 --> 00:17:02,147 -ಓಯ್, ಓಯ್. -ಇನ್ನೊಂದು ನಿಮಿಷದಲ್ಲಿ ಬರ್ತೀನಿ. 186 00:17:02,230 --> 00:17:05,984 -ಅವನು ಯಾವನು ಹೊರಗಡೆ ಇರುವವನು? -ಮೇಲೆ ಬಲಗಡೆಗೆ ಹೋಗಿ. 187 00:17:06,067 --> 00:17:09,821 ಆತ ಅಲ್ಲಿರುತ್ತಾರೆ, ಮೇಡಂ, ಆಯ್ತಾ? ಅದು ಹೇಗಿದೆ? 188 00:17:09,904 --> 00:17:11,948 ಅಮ್ಮನ ಬಗ್ಗೆ ಪೊಲೀಸರು ಏನು ಹೇಳಿದರು? 189 00:17:12,031 --> 00:17:14,868 -ನೀನು ಹೀಗೆ ಬರಲಾಗದು. ಕೆಲಸದಲ್ಲಿದ್ದೇವೆ. -ನಾನು ನೋಡುವೆ. 190 00:17:15,744 --> 00:17:18,788 -ನೀನು ಹೇಗಿರುವೆ? -ನನ್ನ ತಾಯಿಯನ್ನು ಕೊಂದವನನ್ನು ಹುಡುಕಬೇಕು. 191 00:17:18,872 --> 00:17:22,250 -ಅವರ ಮುಖಗಳನ್ನು ನೋಡಿದೆ. ನೆರವಾಗುವೆ. -ಕೇಳು, ರಾಕ್ಸ್. ನನ್ನ ಮಾತು ಕೇಳು. 192 00:17:23,084 --> 00:17:28,214 ನಡೆದದ್ದರ ಬಗ್ಗೆ ನನ್ನನ್ನು ದಯವಿಟ್ಟು ಕ್ಷಮಿಸು. ಈಗ, ಅವಳ ನೆನಪು ಕಾಡುತ್ತೆ. ನಮಗೂ ಅಷ್ಟೇ. 193 00:17:28,506 --> 00:17:32,177 ಆದರೆ ರಿಕ್ಕಿ ಸರಿ ಹೇಳಿದ. ಇದೊಂದು ವ್ಯವಹಾರ. ಕೆಳಗಡೆ ಗ್ರಾಹಕರಿದ್ದಾರೆ. 194 00:17:32,260 --> 00:17:36,139 ನಿನ್ನ ವ್ಯವಹಾರದಿಂದ ಆಕೆಯನ್ನು ಕೊಂದರೇ? ನಿನ್ನ ಹಿಂದೆ ಬಿದ್ದಿದ್ದರೇ? ಸೇಡೇನು? 195 00:17:36,723 --> 00:17:39,350 ಇಲ್ಲ. ಕಳ್ಳತನದಲ್ಲಿ ನಡೆದ ಅನಾಹುತ ಅಂತ ಹೇಳಿದರು. 196 00:17:39,434 --> 00:17:41,728 ಗೂಬೆ ನನ್ನ ಮಕ್ಕಳು ತಪ್ಪಾದ ಮನೆಗೆ ನುಗ್ಗಿದರು. 197 00:17:43,104 --> 00:17:45,899 "ಈ ಹುಡುಗಿ ಇಲ್ಲಿ ಇರಬಾರದಿತ್ತು" ಅಂತ ಹೇಳಿದರು. 198 00:17:46,316 --> 00:17:47,859 ನಾನು ಯಾರೆಂದು ಗೊತ್ತಿರುವ ಹಾಗೆ. 199 00:17:48,485 --> 00:17:52,614 ಅವರು ಸ್ಥಳವನ್ನು ವೀಕ್ಷಿಸುತ್ತಿದ್ದಿರಬಹುದು. ನೀನು ಹೋಗಿ ಬರುವುದನ್ನು ಗಮನಿಸಿರಬಹುದು. 200 00:17:54,616 --> 00:17:58,661 ಹೇಳ್ತೀನಿ ಕೇಳು. ನಾವದನ್ನು ನೋಡಿಕೊಳ್ಳುತ್ತೇವೆ. ಆಯ್ತಾ? ಆಣೆ ಮಾಡ್ತೀನಿ. 201 00:18:00,663 --> 00:18:03,333 ಅವರು ಸಾಯಬೇಕು. ನೀನು ಅವರನ್ನು ಕೊಲ್ಲುವಾಗ ನಾನಲ್ಲಿರಬೇಕು. 202 00:18:03,416 --> 00:18:07,796 ಯಾರೂ ಯಾರನ್ನೂ ಕೊಲ್ಲುವುದಿಲ್ಲ. ನಾನಿದನ್ನು ಪೊಲೀಸರ ಜೊತೆ ನಿಭಾಯಿಸುತ್ತೇನೆ. 203 00:18:07,879 --> 00:18:12,050 -ಇದು ಸರಿಯಾದ ತನಿಖೆ. -ನೀನು ಯಾವಾಗಿನಿಂದ ಪೊಲೀಸರನ್ನು ನಂಬುತ್ತಿರುವೆ? 204 00:18:12,133 --> 00:18:15,678 ನನಗೆ ನೋವಾಗಿಲ್ಲ ಅಂದುಕೊಂಡೆಯಾ? ನಿನ್ನ ತಾಯಿಯನ್ನು ಪ್ರೀತಿಸುತ್ತಿದ್ದೆ. 205 00:18:16,554 --> 00:18:19,432 ಎಲ್ಲವನ್ನೂ ನೋಡಿಕೊಳ್ಳುತ್ತಿರುವೆ, ಆದರೆ ನಾವು ಹುಷಾರಾಗಿರಬೇಕು. 206 00:18:19,516 --> 00:18:20,850 ಎಲ್ಲೆಡೆಯೂ ಪೊಲೀಸರಿದ್ದಾರೆ. 207 00:18:20,934 --> 00:18:23,728 ಮತ್ತು ನೀನು ಮೂರ್ಖತನ ಪ್ರದರ್ಶಿಸುವುದು ಬೇಡ, ಪುಟ್ಟಿ. 208 00:18:25,480 --> 00:18:26,439 ಕೇಳಿಸ್ತಾ ಏನು? 209 00:18:28,650 --> 00:18:30,860 ಆಯ್ತು. ಹೊರಡುವ ಸಮಯ. 210 00:18:33,988 --> 00:18:35,740 ಟೆರ್ರಿ, ರಾಕ್ಸಿಯನ್ನು ಕಳಿಸಿಕೊಡು. 211 00:18:38,159 --> 00:18:39,285 ಅದೇ ನಾನು ಹೇಳಿದ್ದು. 212 00:18:39,828 --> 00:18:45,083 ಗೊತ್ತು. ಅವನು ಬುಧವಾರ ಅಂದ, ಹಾಗಾಗಿ ಅವನ ಕರೆಗಾಗಿ ಕಾದು ಕುಳಿತಿರುವೆ. 213 00:18:45,959 --> 00:18:49,379 ನನಗೆ ಗೊತ್ತಿಲ್ಲ, ಕೇಟ್ಲಿನ್. ಬದಲಾಗುತ್ತಾನೆ ಅಂತ ಯಾಕಂದುಕೊಳ್ಳಬೇಕು? 214 00:18:49,504 --> 00:18:53,800 ಯಾವ ರೀತಿಯ ಅಸಂಬದ್ಧ ಮಕ್ಕಳಾಟವನ್ನು ನಾನು ಈ ಬೇವರ್ಸಿಯ ಮುಂದೆ ತೆಗೆದಿರಿಸಿ ಮುಕ್ತಳಾಗಲಿ? 215 00:18:56,302 --> 00:19:01,349 ಓ, ದೇವರೇ. ಸರಿ, ನೋಡು. ನಾನು ಹೊರಡಬೇಕು. ಆಯ್ತು. 7:30. 216 00:19:03,434 --> 00:19:06,396 -ಇದನ್ನು ಅಡ ಇಡಬೇಕು. -ಪರ್ವಾಗಿಲ್ವೇ. 217 00:19:08,231 --> 00:19:12,151 -ಇದು ಯಾವುದದ್ದಾದರೂ ಭಾಗವೇ? -ಕತ್ತಿನ ಹಾರದಲ್ಲಿ ಇದ್ದದ್ದು. 218 00:19:16,114 --> 00:19:17,824 ಕತ್ತಿನ ಹಾರ, ಅಂತೀಯಾ? 219 00:19:22,328 --> 00:19:25,707 ಸರಿ, ಇದರ ಮೇಲೆ ಸ್ವಲ್ಪ ತರಚಿದೆ. 220 00:19:32,964 --> 00:19:34,507 ನಿನಗೆ $100 ಕೊಡುವೆ. 221 00:19:35,633 --> 00:19:38,761 -ಅದು ನಿಜವಾದ ಮಾಣಿಕ್ಯ. -ನಿನಗೆ $100 ಕೊಡ್ತೀನಿ ಅಂದೆ. 222 00:19:39,137 --> 00:19:40,555 ಆ ಹಾವು ಮೀನುಗಳು ನೆನಪಿವೆಯೇ? 223 00:19:41,639 --> 00:19:44,434 ಮೀನುಗಳು ತಮ್ಮ ಬಾಯಿಯೊಳಗೇ ಈಜುವಂತೆ ಮಾಡಿದವು. 224 00:19:47,186 --> 00:19:50,481 ಇಲ್ಲ, ಇಲ್ಲ, ಇಲ್ಲ. ನನ್ನ ಹಣವನ್ನು ಮಾದಕ ವ್ಯಸನಿಗೆ ನೀಡುವುದಿಲ್ಲ. 225 00:19:50,690 --> 00:19:52,442 -ಅದು ಇದೆ… -ಇಲ್ಲ, ನೀನು ವ್ಯಸನಿಯೇ. 226 00:19:52,942 --> 00:19:56,905 ಕ್ಷಮಿಸಿ. ನನಗೆ ತಲೆ ತಿರುಗುತ್ತೆ. ನಾನೊಬ್ಬ ರಕ್ತದಾನಿ. 227 00:19:56,988 --> 00:20:00,658 -ಈಗೇನು ಮಾಡಿದೆ? -ರಕ್ತ. ಪಿಂಟಿಗೆ 50 ಕೊಡ್ತಾರೆ. 228 00:20:02,869 --> 00:20:06,748 -ಆಮೇಲೆ ಬಿಸ್ಕತ್ತು ತಿನ್ನುವುದನ್ನು ಮರೆತೆ. -ಅಯ್ಯೋ, ದೇವರೇ. ಸರಿ. 229 00:20:06,831 --> 00:20:09,876 -ಸರಿ, ಕೂರು. ಕೂರು. -ಪರವಾಗಿಲ್ಲವೇ? 230 00:20:09,959 --> 00:20:12,754 ಖಂಡಿತ. ಹೋಗಿ ಆ ಕುರ್ಚಿಯಲ್ಲಿ ಕುಳಿತುಕೋ. 231 00:20:17,800 --> 00:20:22,639 -ಕುಡಿಯಲು ನನಗೇನಾದರೂ ಕೊಡುವಿರಾ? -ಖಂಡಿತ. ಅಯ್ಯೋ ಪಾಪ. 232 00:20:29,854 --> 00:20:30,855 ಕ್ರಿಸ್ಮಸ್ ವಿಶೇಷಗಳು! 233 00:20:30,939 --> 00:20:33,066 ನಿನ್ನ ಬಳಿ ಇರುವುದು ಯಾವುದೇ ಬಂದೂಕಿಗಿಂತ ಉತ್ತಮ. 234 00:20:33,900 --> 00:20:36,778 -ನೀನೇ ನೋಡುವೆ. -ತಗೋ, ಪುಟ್ಟಿ. ಸ್ವಲ್ಪ ಜ್ಯೂಸ್ ಕುಡಿ. 235 00:20:42,158 --> 00:20:43,117 ಬಿಸ್ಕೆಟ್ ಬೇಕಾ? 236 00:20:46,621 --> 00:20:47,538 ಅಯ್ಯೋ. 237 00:20:49,415 --> 00:20:51,751 ಇನ್ನೊಂದು ನಿಮಿಷದಲ್ಲಿ ಬರ್ತೀನಿ, ಬಿಲ್ಲಿ. 238 00:20:52,001 --> 00:20:53,211 ಸುಮ್ಮನೆ ನೋಡುತ್ತಿದ್ದೆ. 239 00:21:06,099 --> 00:21:09,477 ಇಂಥ ನಿಜವಾದ ಮಾಣಿಕ್ಯಕ್ಕೆ ಖಂಡಿತ ಹೆಚ್ಚೇ ಬೆಲೆ ಇರುತ್ತೆ... 240 00:21:11,813 --> 00:21:13,606 $150. 241 00:21:15,316 --> 00:21:16,150 ಧನ್ಯವಾದ. 242 00:21:19,779 --> 00:21:21,990 ನಿನ್ನಿಂದ ನಾನು ಹುಚ್ಚಿಯಂತೆ ಕಾಣುತ್ತೇನೆ. 243 00:21:22,532 --> 00:21:24,784 ನೀನು ಹೋಗಬೇಕಾದ ಕಡೆ ಹೋಗಲು ನೆರವಾಗುತ್ತಿದ್ದೇನೆ. 244 00:21:24,867 --> 00:21:27,996 -ಮತ್ತು ಅದು ಎಲ್ಲಿದೆ? -ನೀನದನ್ನು ನೋಡಿದಾಗ ನಿನಗೇ ಗೊತ್ತಾಗುತ್ತೆ. 245 00:21:28,287 --> 00:21:29,580 ಆಯ್ತು, ಸರಿ. 246 00:21:59,485 --> 00:22:00,528 ಹೇಳು ನನಗೆ. 247 00:22:01,446 --> 00:22:06,451 ನ್ದುಡಿಗೆ ಏನು ತೊಂದರೆ ಆಗಿದೆ? ಜನ ಅವಳನ್ನು ಮಾಟಗಾತಿ ಎನ್ನುತ್ತಿದ್ದಾರೆ. 248 00:22:06,534 --> 00:22:09,245 -ಮಾಟಗಾತಿ ಅಲ್ಲ ಅಂತ ನಿಂಗೊತ್ತು. -ಅವಳ ತಂದೆಗೆ ಹೇಳು. 249 00:22:16,210 --> 00:22:19,047 ನೀನು ಇತ್ತೀಚಿಗೆ ನನಗೆ ಅರ್ಥವಾಗೋದೇ ಇಲ್ಲ. 250 00:22:21,674 --> 00:22:25,428 ಜುಜು ಅಪಾಯಕಾರಿ ಅಂತ ನಿಂಗೊತ್ತು. ಇವುಗಳೊಂದಿಗೆ ಏಕೆ ಆಡುತ್ತಿರುವೆ? 251 00:22:25,511 --> 00:22:26,763 ನಾನು ಯೋಚಿಸುತ್ತಿರಲಿಲ್ಲ. 252 00:22:28,389 --> 00:22:30,475 ನಾನೊಂದು ಕಥೆಯನ್ನು ಅರಸುತ್ತಿದ್ದೆ. 253 00:22:32,393 --> 00:22:34,896 -ಕ್ಷಮಿಸು. -ನೀನು ಇದನ್ನು ಸರಿಪಡಿಸಬೇಕು. 254 00:22:35,813 --> 00:22:38,441 ನಿನ್ನ ಸಹೋದರಿಯೊಂದಿಗೆ ಇದರ ಬಗ್ಗೆ ಮಾತನಾಡಬೇಡ. 255 00:22:38,524 --> 00:22:40,777 ಅವಳಿಗೆ ಯಾವುದೇ ದುರಾಲೋಚನೆ ಬರುವುದು ಬೇಡ. 256 00:22:41,194 --> 00:22:42,403 ನಾನು ಹೇಳಿದ್ದು ಕೇಳಿಸ್ತಾ? 257 00:22:49,744 --> 00:22:50,620 ಪರವಾಗಿಲ್ಲ. 258 00:23:13,226 --> 00:23:15,019 ಅಪ್ಲೋಡ್ ಮಾಡಲು ವಿಡಿಯೋಗಳನ್ನು ಎಳೆದು ಬಿಡಿ ವಿದ್ಯುತ್ ಹುಡುಗಿಯರು???? 259 00:23:21,651 --> 00:23:24,362 {\an8}ದಯವಿಟ್ಟು ನೆರವಾಗಿ!! ಇದು ಏನಂತ ಯಾರಿಗಾದರೂ ಗೊತ್ತಾ? 260 00:23:38,501 --> 00:23:43,506 ನಮ್ಮ ಒಬ್ಬ ಸಹಾಯಕರಿಗೆ ಸಿಕ್ಕಿತು. ಯಾರೋ ಹುಡುಗ ನೈಜೀರಿಯಾದಲ್ಲಿ ಪ್ರಕಟಿಸಿದ್ದು. 261 00:23:44,006 --> 00:23:47,426 ತುಂಡೆ ಓಜೋ. 12 ಹಿಂಬಾಲಕರಿರುವ ವ್ಲಾಗರ್. 262 00:23:48,344 --> 00:23:51,556 ಸ್ನ್ಯಾಪ್ಚಾಟ್ ಇರುವ ಯಾರಾದರೂ ಇದನ್ನು ಮಾಡಬಲ್ಲರು, ಅಲ್ವಾ? 263 00:23:52,265 --> 00:23:56,227 -ಒಂಥರಾ, ಫಿಲ್ಟರ್ ಏನಾದರೂ ಇರಬಹುದೇ? -ದೇವರೇ, ಎಷ್ಟು ನೈಜವಾಗಿದೆ. 264 00:23:56,519 --> 00:23:58,312 ಮತ್ತು ನೀವು ಕಾಮೆಂಟುಗಳನ್ನು ನೋಡಬೇಕು. 265 00:23:58,396 --> 00:24:01,858 ಅದು ತಮಗಾಗುತ್ತಿದೆ ಎಂದು ಎಷ್ಟೋ ಮಕ್ಕಳು ಬರೆದುಕೊಂಡಿದ್ದಾರೆ. 266 00:24:01,941 --> 00:24:06,237 ಅಥವಾ ಹಿಂದೆ ನೋಡಿದ್ದೇವೆಂದು. ಅವರ ಕೈಗಳಿಂದ ವಿದ್ಯುತ್ ಹೊರಬರುವುದು. 267 00:24:07,947 --> 00:24:10,408 -ಎಲ್ಲಾ ಹದಿಹರೆಯದ ಹುಡುಗಿಯರೇ? -ನಾನು ನೋಡಿದಂತೆ, ಹೌದು. 268 00:24:12,660 --> 00:24:16,080 -ಗವರ್ನರ್ ಡ್ಯಾಂಡನ್ ಏನಾದರೂ ಹೇಳಿದ್ರಾ? -ದಿನವೆಲ್ಲಾ ಸಭೆಗಳಲ್ಲಿದ್ದಾರೆ. 269 00:24:16,164 --> 00:24:20,001 ಕರ್ಮವೇ. ಸೆನೇಟ್ ಪ್ರಚಾರ ನಡೆಯುತ್ತಿದೆ. ನಿಧಿ ಸಂಗ್ರಹದಲ್ಲಿದ್ದಾರೆ. 270 00:24:20,084 --> 00:24:24,547 ಇಂದು ರಾತ್ರಿ ತಮ್ಮ ಬಂಗಲೆಯಲ್ಲಿ ದಾನಿಗಳಿಗೆ ಔತಣ ಇದೆ ಅಂತ ಅವರ ಸಹಾಯಕರು ಹೇಳಿದರು. 271 00:24:25,756 --> 00:24:27,133 ಥೂ. 272 00:24:27,800 --> 00:24:32,388 ನಾನು ನನ್ನ ಹಾಳಾದ ವಿವಾಹೋತ್ಸವದಂದು ಹಾಳಾದ ಒಲಿಂಪಿಯಾಗೆ ಹೋಗಬೇಕಾಗಿದೆ. 273 00:24:34,182 --> 00:24:36,601 ರಾಬ್'ಗೆ ಕರೆ ಮಾಡಿ ನನಗೆ ತಡವಾಗುತ್ತೆ ಅಂತ ಹೇಳುವೆಯಾ? 274 00:24:36,684 --> 00:24:41,856 -ಖಂಡಿತ. ನನಗೊಂದು ಉಪಕಾರ ಮಾಡಿ? -ಸರಿ, ಮೇರಿ ಪಾಪಿನ್ಸ್. ಏನಿವು? 275 00:24:41,939 --> 00:24:46,152 ಡ್ಯಾಂಡನ್'ರ ಜೊತೆ ಮಾಧ್ಯಮದವರು ಇದ್ದರೆ. ಆ ಚಪ್ಪಲಿ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಬಂದಿತ್ತು. 276 00:24:46,527 --> 00:24:49,280 -ತುಂಬಾ ಬೆಲೆಬಾಳುವಂಥದ್ದು. -ಈ ಚಪ್ಪಲಿಗಳೇ? 277 00:24:49,363 --> 00:24:54,118 ಇವಕ್ಕೆ $800 ಕೊಟ್ಟೆನಲ್ಲ? "ಮಹತ್ವಾಕಾಂಕ್ಷೆ ಉಳ್ಳವಳಾಗಿ ನಾನು ಕಾಣಬೇಕು" ಅಂತ ನೀನಂದಿದ್ದಕ್ಕೆ. 278 00:24:54,202 --> 00:24:56,871 ಕ್ಷಮಿಸಿ. ಪ್ರಚಲಿತ ಶೈಲಿಗಳು ತುಂಬಾ ಬದಲಾಗುತ್ತಿರುತ್ತವೆ. 279 00:24:59,415 --> 00:25:00,583 ಇವೇನೂ ಕೆಟ್ಟದಾಗಿಲ್ಲ. 280 00:25:03,628 --> 00:25:04,712 ಸರಿ. 281 00:25:06,464 --> 00:25:08,966 -ನೋಯುತ್ತವೆ. -ಕಾಸಿಗೆ ತಕ್ಕಂತೆ ಕಜ್ಜಾಯ, ಎನ್ನುವೆ. 282 00:25:09,091 --> 00:25:12,595 ಗೊತ್ತಾ, ಗವರ್ನರ್ ಡ್ಯಾಂಡನ್ $1000 ಬೆಲೆಯ ಫೆರ್ರಗಮೋಸ್ ತೊಡುತ್ತಾರೆ. 283 00:25:12,678 --> 00:25:17,225 ಯಾರೂ ಏನೂ ಹೇಳಲ್ಲ. ನನ್ನ ಚಪ್ಪಲಿಯ ಚಿಂತೆಯಿದ್ದವರು ತಮ್ಮ ಕೆಲಸವನ್ನು ನೋಡಿಕೊಳ್ಳಲಿ. 284 00:25:22,855 --> 00:25:25,483 ವಿಶ್ವ ನಾಗರಿಕತೆಯ ಪರೀಕ್ಷೆ ಹೇಗಾಯಿತು? ಹೇಗೆ ಮಾಡಿದೆ? 285 00:25:26,609 --> 00:25:29,570 -ಪರವಾಗಿಲ್ಲ. -ಪರವಾಗಿಲ್ವಾ? ಬರೀ ಪರವಾಗಿಲ್ವಾ? 286 00:25:30,112 --> 00:25:32,156 -ಹಾಂ. -ಸರಿ. 287 00:25:36,160 --> 00:25:38,037 ಅರ್ಥ ಆಯ್ತಲ್ಲ, ಜೋಸ್? 288 00:25:39,288 --> 00:25:40,748 ಅರ್ಥ ಆಯ್ತಲ್ಲ, ಜೋಸ್? 289 00:25:41,707 --> 00:25:43,125 ಅರ್ಥ ಆಯ್ತಲ್ಲ, ಜೋಸ್? 290 00:25:46,587 --> 00:25:48,923 ನಾನು ಎಷ್ಟು ಒಳ್ಳೆಯವನು ಎಂಬ ಮೋಜಿನ ಪರಿಚಯ ಇಲ್ಲಿದೆ 291 00:25:49,048 --> 00:25:51,676 ನಿಮ್ಮಮ್ಮನಿಗೆ ಹೇಳು, ಅಪ್ಪನಿಗೆ ಹೇಳು ಟೆಲಿಗ್ರಾಂ ಕಳಿಸು 292 00:25:51,759 --> 00:25:54,262 ನಾನು ಎನರ್ಜೈಸರ್ ಇದ್ದಂತೆ ನೋಡಿ, ಹೆಚ್ಚು ಕಾಲ ಬಾಳುವೆ 293 00:25:54,345 --> 00:25:57,265 ನನ್ನ ತಂಡ ಎಂದಿಗೂ ಸೋಲಲ್ಲ ಯಾಕೆಂದರೆ ನಾವು ಒಟ್ಟಿಗೆ ನಿಲ್ಲುವೆವು 294 00:25:57,348 --> 00:25:59,016 ಹಾಂ, ಹಾಂ. 295 00:26:04,647 --> 00:26:08,901 ಓ, ದೇವರೇ. ನಾನು ನಿನ್ನ ವಯಸ್ಸಿನವನಾಗಿದ್ದಾಗ ಇಂಥ ಸಂಗೀತವನ್ನು ಕೇಳುತ್ತಿದ್ದೆ. 296 00:26:09,527 --> 00:26:12,905 ಆಗ ನನಗೆ ತುಂಬಾ ಚೆನ್ನಾಗಿತ್ತು. ಓ, ದೇವರೇ. 297 00:26:13,239 --> 00:26:16,784 ನೀನೂ ಯಾವಾಗಲಾದರೂ ಕೇಳಬೇಕು. ನಿನಗೆ ಇಷ್ಟವಾಗಬಹುದು. 298 00:26:17,159 --> 00:26:20,663 ಅವರ ಸಂಗೀತದಲ್ಲಿ ಮಜಾ ಒಂದೇ ಅಲ್ಲದೆ ಸಾಮಾಜಿಕ ಕಳಕಳಿಯೂ ಇತ್ತು. 299 00:26:20,746 --> 00:26:23,249 "ಅರಿವು" ಬರುವ ಮುನ್ನವೇ ಅರಿವು ಮೂಡಿಸಿದವರು. 300 00:26:23,541 --> 00:26:27,837 ಮತ್ತು ಮಾದರಿಗಳು. ಅಬ್ಬಾ, ದೇವರೇ. ಎಲ್ಲವೂ ಇತ್ತು. ವಿಶ್ವ ಸಂಗೀತವನ್ನು ಬಳಸಿದ್ದರು. 301 00:26:27,920 --> 00:26:31,632 ಜಾಜ್. ಅಂದರೆ, ಈಗ ಎಲ್ಲರೂ ಮಾದರಿ ಪಡೆಯುತ್ತಾರೆ ಅಂತ ಗೊತ್ತು, ಆದರೆ ಆಗ… 302 00:26:33,801 --> 00:26:37,221 ಸರಿ, ಗೊತ್ತಾಯ್ತು. ನಾನೊಬ್ಬ ದಡ್ಡ ಅಪ್ಪ. ಬಾಯಿ ಮುಚ್ಚಿಕೊಂಡು ಗಾಡಿ ಓಡಿಸುವೆ. 303 00:26:40,558 --> 00:26:41,600 ಅಯ್ಯೋ. 304 00:26:43,394 --> 00:26:44,437 ಏನಿದು ದರಿದ್ರ? 305 00:26:47,273 --> 00:26:50,651 -ಅಯ್ಯೋ, ಪುಟ್ಟಿ. ಆರಾಮವಾಗಿದ್ದೀಯಾ? -ಆರಾಮವಾಗಿದ್ದೇನೆ. 306 00:26:51,068 --> 00:26:52,236 ಅದೇನದು? 307 00:26:53,446 --> 00:26:56,824 ಗೊತ್ತಿಲ್ಲ. ಸ್ಥಿರ ವಿದ್ಯುತ್ ಆಘಾತ ಆಗಿರಬಹುದು. 308 00:26:59,327 --> 00:27:02,538 ಜೋಸ್, ಮೈಕ್ರೋವೇವ್ ಜೊತೆಯೂ ಇದೇ ನಡೆಯಿತಾ? 309 00:27:05,374 --> 00:27:06,751 -ಜೋಸ್? -ಇಲ್ಲ. 310 00:27:07,251 --> 00:27:08,502 -ನನಗೆ ಹೇಳು. -ಇಲ್ಲ. 311 00:27:08,586 --> 00:27:12,673 ದೇವರೇ. ನಿನ್ನ ದಡ್ಡ ಸಂಗೀತದಂತೆ ನಿನ್ನ ಸ್ಟಿರಿಯೋ ಕೂಡ ಹಳೆಯದಾಗಿರಬಹುದು. 312 00:27:13,299 --> 00:27:14,342 ಜೋಸ್. 313 00:27:50,169 --> 00:27:54,715 ರೈಬಿನಾ, ಸಸ್ಸಾಟೀನಾ. ದೊಡ್ಡ ಹುಡುಗರು, ಸುಂದರ ಹುಡುಗಿಯರು. 314 00:27:54,965 --> 00:27:59,261 ದೊಡ್ಡ ಹುಡುಗರು, ಸುಂದರ ಹುಡುಗಿಯರು. ರೈಬಿನಾ, ಸಸ್ಸಾಟೀನಾ. 315 00:28:14,193 --> 00:28:15,152 ಆರಾಮ ಇದ್ದೀಯಾ? 316 00:28:17,029 --> 00:28:19,156 -ಏನು ತೊಂದರೆ? -ಶುರುವಾಗುತ್ತಿಲ್ಲ. 317 00:28:19,573 --> 00:28:21,575 -ನಾನು ನೋಡಲೇ? -ಒಬ್ಬರು ಬರುತ್ತಿದ್ದಾರೆ. 318 00:28:23,077 --> 00:28:27,289 ನಿನ್ನನ್ನು ಕಡೆಗಣಿಸುತ್ತಿರುವ ಇನ್ನೊಬ್ಬ ಗಂಡಸು ಅಷ್ಟೇ. ಬೇರೇನೂ ವಿಶೇಷವಿಲ್ಲ. 319 00:28:27,873 --> 00:28:29,875 -ಎಲ್ಲಿಗೆ ಹೊರಟಿದ್ದೀರಿ? -ಆಹಾರದ ಬ್ಯಾಂಕು. 320 00:28:29,959 --> 00:28:32,086 ಸುಮ್ಮನಿರಿ, ಎಲ್ಲರಿಗೂ ನಮ್ಮ ವಿಷಯ ಹೇಳುವುದು. 321 00:28:32,211 --> 00:28:35,172 ನಾನು ಕಾರುಗಳ ಸುತ್ತಲೇ ಬೆಳೆದೆ. ನನ್ನ ತಂದೆ ಒಬ್ಬ ಮೆಕ್ಯಾನಿಕ್. 322 00:28:35,256 --> 00:28:37,466 ನಿನ್ನ ಜೇಬಿನೊಳಗೆ ಜಂಪರ್ ತಂತಿಗಳು ಇವೆಯೇ? 323 00:28:37,758 --> 00:28:38,759 ಹಾಂ, ಇರಬಹುದು. 324 00:28:40,970 --> 00:28:45,224 -ಎಲ್ಲಿಂದ ಬಂದೆ, ಒಬ್ಬಳೇ? -ಬಸ್ ತಪ್ಪಿತು. 325 00:28:47,351 --> 00:28:49,478 ನನಗೆ ಸಹಾಯವಾಗಲು ನೀನು ಏನು ಮಾಡಬೇಕು ಗೊತ್ತಾ? 326 00:28:49,562 --> 00:28:52,690 ನಾನು ಶುರು ಮಾಡಿದರೆ ಆ ಎಕ್ಸಲೆರೇಟರ್ ತಂತಿ ಕದಲುತ್ತಾ ಹೇಳು. 327 00:29:00,739 --> 00:29:01,699 ತಯಾರಾ? 328 00:29:05,911 --> 00:29:07,913 -ಏನೂ ಇಲ್ವಾ? -ಮತ್ತೆ ಪ್ರಯತ್ನಿಸಿ. 329 00:29:12,710 --> 00:29:13,586 ಮತ್ತೊಮ್ಮೆ. 330 00:29:14,795 --> 00:29:16,672 -ಈಕೆ ಮಾಂತ್ರಿಕಳೇನು? -ಅವಳು ಮಾಟಗಾತಿ. 331 00:29:16,755 --> 00:29:18,048 -ಏನಾದರೂ ಬಂತಾ? -ಮತ್ತೆ. 332 00:29:18,132 --> 00:29:21,010 -ಹುಡುಗಿಯರು ಮಾಂತ್ರಿಕರಾಗಲ್ಲ. -ಹುಡುಗಿಯರು ಏನಾದರೂ ಆಗಬಲ್ಲರು. 333 00:29:21,135 --> 00:29:22,219 ಇನ್ನೊಂದು ಸಲ. 334 00:29:34,315 --> 00:29:35,483 ಏನು ಮಾಡಿದೆ ನೀನು? 335 00:29:38,652 --> 00:29:40,696 -ಇಲ್ಲ, ಆರಾಮವಾಗು. ಉಸಿರಾಡು. -ಸುಟ್ಟಳು. 336 00:29:40,779 --> 00:29:42,031 -ಅಪ್ಪ. -ಏನಾಗುತ್ತಿದೆ? 337 00:29:42,114 --> 00:29:44,450 -ನನಗೆ ನೋವು ಮಾಡಿದಳು. -ನನ್ನ ಮಕ್ಕಳಿಂದ ದೂರವಿರು. 338 00:29:44,533 --> 00:29:48,245 -ಬಿಸಿ ಎಂಜಿನ್ ಮೇಲೆ ಕೈ ಇಟ್ಟಳು. -ನನ್ನ ಮಕ್ಕಳಿಂದ ದೂರ ಹೋಗು. 339 00:29:48,329 --> 00:29:50,831 -ನನ್ನನ್ನು ಮುಟ್ಟಬೇಡಿ. -ಅಪ್ಪ. ಅಪ್ಪ. 340 00:29:51,165 --> 00:29:52,166 ಛೆ. 341 00:29:52,249 --> 00:29:55,920 -ಕಾರು ಹತ್ತೋಣ. -ಅಪ್ಪ. ಅಪ್ಪ. 342 00:29:56,462 --> 00:29:57,296 ಆರಾಮ ಇದ್ದೀಯಾ? 343 00:29:57,379 --> 00:30:00,382 -ಅಪ್ಪ. ಅಪ್ಪ. -ಆಯ್ತು, ಮಕ್ಕಳೇ. ಏನೂ ಪರವಾಗಿಲ್ಲ. 344 00:30:05,804 --> 00:30:08,390 ನನ್ನ ಮಾತನ್ನು ನೀನು ಕೇಳದಿದ್ದರೆ ಹೀಗೆಯೇ ಆಗುತ್ತೆ. 345 00:30:17,441 --> 00:30:18,275 ಏಯ್. 346 00:30:32,122 --> 00:30:37,086 ದರಿದ್ರ. ಏನು ಮಾಡಿದೆ ನೀನು? ಸರಿಯಾಗಿ ಸೈಕಲ್ ತುಳಿಯಲು ಬರುವುದಿಲ್ಲವೇ? 347 00:30:37,378 --> 00:30:41,507 ದಡ್ಡ ಹುಡುಗಿ. ಏನಿದು ದರಿದ್ರ? 348 00:31:16,709 --> 00:31:20,296 -ನಿನ್ನನ್ನೇ ನೋಡುತ್ತಿರುತ್ತಾನೆ. -ಯಾಕಂದ್ರೆ ನೀನವನನ್ನೇ ನೋಡುತ್ತಿರುತ್ತೀಯಾ. 349 00:31:22,590 --> 00:31:25,259 -ಅಲ್ಲಿಗೆ ಹೋಗು. -ಖಂಡಿತ ಇಲ್ಲ. 350 00:31:25,676 --> 00:31:27,344 ಯಾಕೆ? ನಿನಗೇನು ಭಯ? 351 00:31:27,511 --> 00:31:30,556 ಅವನು ಬ್ರೀ ಡಿಯಾಜ್ ಜೊತೆ ಇದ್ದವನು. ನನಗೆ ಅವಳಷ್ಟು ವಯ್ಯಾರ ಇಲ್ಲ. 352 00:31:31,932 --> 00:31:35,603 ಜೋಸ್, ನೋಡು. ಇದು ಡಿಸ್ನೀ ಆನ್ ಐಸ್ ಅಲ್ಲ. ಸುಮ್ಮನೆ ಹೋಗಿ… 353 00:31:35,686 --> 00:31:37,688 ಸುಮ್ಮನಿರು. ದೇವರೇ. 354 00:31:41,400 --> 00:31:44,903 ಒಂದು ವಾರದ ಹಿಂದೆ, ನನ್ನ ಜೀವನ ಹತ್ತರಲ್ಲಿ ನಾಲ್ಕಂತೆ ಇತ್ತು. 355 00:31:47,448 --> 00:31:50,618 -ಈಗ ಏಳಂತಿದೆ. -ಏಳು? 356 00:31:51,702 --> 00:31:53,829 ನಾವು ವಿದ್ಯುದಾಘಾತ ಕೊಡಬಲ್ಲೆವು. 357 00:31:55,539 --> 00:32:00,753 ಏನನ್ನು ಬೇಕಾದರೂ ಸಿಡಿಸಬಲ್ಲೆವು. ಏನು, ಏಳಾ? ಇಲ್ಲ. ಹತ್ತು ಅನ್ನು. 358 00:32:02,004 --> 00:32:03,797 ಸರಿಯಾದ ಹತ್ತು ಕಣೆ. 359 00:32:29,782 --> 00:32:31,492 -ಮಾರ್ಗೋ. -ಡೇನಿಯಲ್. 360 00:32:31,867 --> 00:32:34,662 -ತಡವಾಗಿದೆ. -ನನ್ನ ಕಚೇರಿಯಿಂದ ಕರೆ ಮಾಡಿದೆ. ತುಂಬಾನೇ. 361 00:32:42,961 --> 00:32:45,297 -ಧನ್ಯವಾದ. -ಇದನ್ನು ಸ್ಟಡಿಗೆ ಒಯ್ಯೋಣ. 362 00:32:45,381 --> 00:32:46,215 ಖಂಡಿತ. 363 00:32:47,132 --> 00:32:50,803 ಎಲ್ಲರೂ, ಈಕೆ ಮೇಯರ್ ಮಾರ್ಗೋ ಕ್ಲೆಯರಿ-ಲೋಪೆಜ್. 364 00:32:51,178 --> 00:32:54,932 -ಅಡಚಣೆಗಾಗಿ ಕ್ಷಮಿಸಿ. -ನಿಮ್ಮನ್ನು ಬಿಟ್ಟು ಆಕೆಯ ಸೇರಿಸಿಕೊಳ್ಳಬೇಕೇ? 365 00:32:55,015 --> 00:32:56,975 ಐದು ನಿಮಿಷದ ವಿರಾಮ. ಈಗ ಬಂದೆ. 366 00:33:01,480 --> 00:33:05,401 ಅಲ್ಲಿ ಅನಾಹುತವೇ ನಡೆಯುತ್ತಿದ್ದರೆ ನೀವಿಲ್ಲಿ ಪೋಕರ್ ಆಡಿಕೊಂಡಿರೋದು ನಂಬೋಕಾಗುತ್ತಿಲ್ಲ. 367 00:33:05,484 --> 00:33:06,402 ಹೌದು. 368 00:33:06,485 --> 00:33:11,323 ನಿಮ್ಮ ವಸತಿ ಮತ್ತು ಸಾಕ್ಷರತಾ ಕಾರ್ಯಕ್ರಮಗಳಿಗೆ ಹಣ ಸುರಿಯುವವರೊಂದಿಗೆ. 369 00:33:11,824 --> 00:33:12,908 ಅದು ರಾಜಕೀಯ. 370 00:33:13,575 --> 00:33:16,870 ಜೀವನಗಳನ್ನೇ ಬದಲಾಯಿಸುವ ಒಪ್ಪಂದಗಳು ಪೋಕರ್ ಮೇಜುಗಳ ಮೇಲೆ ನಡೆಯುತ್ತವೆ. 371 00:33:17,830 --> 00:33:20,040 -ಗಟ್ಟಿ ಕಂಬೂಚ? -ಹಾಂ, ಖಂಡಿತ. ಧನ್ಯವಾದ. 372 00:33:25,838 --> 00:33:26,672 ಧನ್ಯವಾದ. 373 00:33:37,391 --> 00:33:41,562 ಮತ್ತೆ, ನಿಮ್ಮ ಸಂದೇಶಗಳು ಸಿಕ್ಕವು, ಮತ್ತು ನಿಮಗೆ ಬೆಳಗ್ಗೆಯೇ ಕರೆ ಮಾಡಲಿದ್ದೆ. 374 00:33:41,645 --> 00:33:45,023 -ನನ್ನಿಂದ ಏನಾಗಬೇಕು? -ಮೊದಲು, ನೀವು ಕರೆಗಳನ್ನು ಉತ್ತರಿಸಬೇಕು. 375 00:33:45,107 --> 00:33:48,485 -ನಾವೊಂದು ಸಂಕಷ್ಟದಲ್ಲಿದ್ದೇವೆ. -ಆರಿಸಲು ಬಹಳಷ್ಟು ಬೆಂಕಿ ಇವೆ. 376 00:33:48,569 --> 00:33:51,238 ಕೆಲವು ನಿಜವಾಗಿಯೂ ಆದರೆ "ಸಂಕಷ್ಟ" ಅನ್ನುವುದು ದೊಡ್ಡ ಪದವೇ. 377 00:33:51,321 --> 00:33:54,616 ದಯವಿಟ್ಟು "ಡ್ಯಾಡಿ ಡ್ಯಾಂಡನ್ ಎಲ್ಲವನ್ನೂ ನೋಡಿಕೊಳ್ಳುತ್ತಾನೆ" ಎನ್ನಬೇಡಿ. 378 00:33:55,033 --> 00:33:57,786 ಪ್ರಚಾರದ ಜೊತೆಗೆ ದೃಷ್ಟಿಯನ್ನೂ ನಿಭಾಯಿಸಬೇಕು ಅಂತಿದ್ದೀರಿ… 379 00:33:57,870 --> 00:33:59,329 ಇದು ನನ್ನ ಪ್ರಚಾರದ ಬಗ್ಗೆ ಅಲ್ಲ. 380 00:33:59,413 --> 00:34:02,040 ಇದು ನೀವು ಮಧ್ಯರಾತ್ರಿ ನನ್ನ ಮನೆಗೆ ಬಂದು, 381 00:34:02,124 --> 00:34:04,334 "ಆಕಾಶವೇ ಬೀಳುತ್ತಿದೆ" ಅನ್ನೋದು. ಏನು ಗೊತ್ತಾ? 382 00:34:04,877 --> 00:34:07,921 ಆಕಾಶ ಯಾವಾಗಲೂ ಬೀಳುತ್ತಿರುತ್ತದೆ. ಯಾಕೆಂದರೆ ಆಳುವುದು ಅಂದರೆ ಅದೇ. 383 00:34:08,839 --> 00:34:11,091 ನೀವು ಅದನ್ನು ಸರಿಯಾಗಿ ನಿಭಾಯಿಸಲು ಏನು ಮಾಡಬೇಕು? 384 00:34:11,467 --> 00:34:14,261 ನನ್ನ ಇಎಂಎಸ್ ಸೇವೆಗಳು ಮುಗಿದಿವೆ. ತುರ್ತು ಧನ ಸಹಾಯ ಬೇಕು. 385 00:34:15,012 --> 00:34:16,221 ಬೇರೆ ಏನಾದರೂ ಇದೆಯೇ? 386 00:34:18,515 --> 00:34:19,641 ಸರಿ. 387 00:34:21,852 --> 00:34:25,606 ನಿಮಗೊಂದು ತೋರಿಸಬೇಕು, ಆದರೆ ಅದು ವಿಚಿತ್ರವಾಗಿ ಕಾಣುತ್ತದೆ, ಆಯ್ತಾ? 388 00:34:25,689 --> 00:34:27,941 ಆದರೆ ಸುಮ್ಮನೆ ನೋಡಿ. ಸುಮ್ಮನೆ ವೀಕ್ಷಿಸಿ. 389 00:34:35,741 --> 00:34:40,746 ನನ್ನ ಪ್ರಕಾರ ನಡೆಯುತ್ತಿರುವುದೆಲ್ಲವೂ, ಇದೇನೇ ಆಗಿದ್ದರೂ ಇದಕ್ಕೆ ಸಂಬಂಧಿಸಿರಬಹುದು. 390 00:34:42,039 --> 00:34:44,041 -ಮಾರ್ಗೋ... -ನಂಗೊತ್ತು, ನಂಗೊತ್ತು. 391 00:34:47,795 --> 00:34:49,379 ಅದು ಯೂಸರ್ನಲ್ಲಿ ಬಂದ ದೃಶ್ಯ. 392 00:34:49,505 --> 00:34:52,591 ಹೌದು. ಎಲ್ಲಾ ವರದಿಗಳೊಂದಿಗೆ ಇದೊಂದಕ್ಕೆ ಅರ್ಥ ಇರುವಂತೆ ಇದೆ. 393 00:34:52,758 --> 00:34:56,053 -ನೀವು ಒತ್ತಡದಲ್ಲಿದ್ದೀರಿ. -ಒತ್ತಡದಲ್ಲಿರುವೆ. ನನ್ನ ನಗರ ಉರಿಯುತ್ತಿದೆ. 394 00:34:56,261 --> 00:34:59,264 -ನಿಮ್ಮ ವಿವಾಹೋತ್ಸವ ಅಲ್ಲವೇ? -ಹೌದು. 395 00:34:59,890 --> 00:35:01,934 -ಎಷ್ಟು ಕಾಲವಾಯಿತು? -ಇಪ್ಪತ್ತು ವರ್ಷಗಳು. 396 00:35:02,017 --> 00:35:06,605 ಮೆಚ್ಚುವಂಥದ್ದೇ. ಇಂತಹ ಸಮತೋಲನ ರಾಜಕೀಯದಲ್ಲಿ ಸಿಗುವುದು ಕಷ್ಟ. 397 00:35:07,606 --> 00:35:10,150 ಇದನ್ನು ನನ್ನ ತಂಡ ಪರಿಶೀಲಿಸುತ್ತದೆ, ಸದ್ದಿಲ್ಲದೆ. 398 00:35:10,234 --> 00:35:13,403 ಮತ್ತು ಅದು ನಡೆಯುವಾಗ, ನೀವು ತಾಳ್ಮೆಯಿಂದ ಸದ್ದಿಲ್ಲದೆ ಕಾಯುವಿರಿ. 399 00:35:14,363 --> 00:35:17,491 ಅದೇ ಸಮಯದಲ್ಲಿ, ನಿಮಗೆ ಬೇಕಾದ ಧನ ಸಹಾಯವನ್ನು ಹೊಂದಿಸುವೆ. 400 00:35:17,616 --> 00:35:18,450 ಧನ್ಯವಾದ. 401 00:35:19,034 --> 00:35:24,665 ಆದರೆ, ಮಾರ್ಗೋ, ನಾನಿದನ್ನು ನಿಮ್ಮ ಮತ್ತು ನಿಮ್ಮ ವೃತ್ತಿಯ ಮೇಲಿನ ಕಾಳಜಿಯಿಂದ ಹೇಳುತ್ತಿರುವೆ. 402 00:35:25,541 --> 00:35:28,210 ಸಮಾಧಾನವಾಗಿರಿ. ಮನೆಗೆ ಹೋಗಿ. ಪತಿಯೊಂದಿಗೆ ಸಮಯ ಕಳೆಯಿರಿ. 403 00:35:30,879 --> 00:35:32,297 ಆಯ್ತು. ಸರಿ ಹೇಳಿದಿರಿ. 404 00:35:35,425 --> 00:35:38,345 -ಧನ್ಯವಾದ. -ಹೇ. ಪರವಾಗಿಲ್ಲ. 405 00:35:38,470 --> 00:35:42,391 ನಾನು ಮಾಡುವವರೆಗೂ ನೀವು ಮಾಡಿದರೆ, ನಿಮ್ಮ ಸೆರಗನ್ನು ನೆನೆಸಬೇಕಾಗಿಲ್ಲ. 406 00:35:43,725 --> 00:35:47,396 -ಏನನ್ನು ಮಾಡುವುದು? -ನಾನು ಹೇಳುವುದು ನಿಮಗೆ ಗೊತ್ತಿದೆ. 407 00:35:49,356 --> 00:35:53,235 ಹಾಂ. ಹಾಂ. ನೀವು ಹೇಳುವುದು ನನಗೆ ಸರಿಯಾಗಿ ಗೊತ್ತಿದೆ. 408 00:36:00,284 --> 00:36:01,243 ಛೆ. 409 00:36:06,707 --> 00:36:08,959 ಥಾಯ್ ಆಹಾರದಲ್ಲಿ ಮಿಕ್ಕಿರೋದು ಇಷ್ಟೇ. 410 00:36:10,544 --> 00:36:12,754 ತಡವಾಗಿ ತಿಳಿಸಿದೆ. ನನ್ನನ್ನು ಕ್ಷಮಿಸು. 411 00:36:12,838 --> 00:36:15,799 ನಮ್ಮ ಫ್ರೆಂಚ್ ತಾಣದಲ್ಲಿ ಜಾಗ ಕಾಯ್ದಿರಿಸಿದ್ದೆ. ಮಾಡಿದ್ದೆ. 412 00:36:15,883 --> 00:36:20,429 ನನಗೆ ಹಸಿವಾಗಿದೆ, ಮತ್ತು ಇದು ನಿಜಕ್ಕೂ ಚೆನ್ನಾಗಿದೆ. ತುಂಬಾ ಧನ್ಯವಾದ. 413 00:36:20,512 --> 00:36:23,432 ನನ್ನನ್ನು ಕ್ಷಮಿಸು. 414 00:36:24,349 --> 00:36:28,353 -ಅದರ ಬಗ್ಗೆ ಚಿಂತಿಸಬೇಡ, ಚಿನ್ನ. -ಫ್ರೆಂಚ್ ಆಹಾರದಿಂದ ನನಗೆ ವಾಯು ಬಾಧಿಸುತ್ತದೆ. 415 00:36:30,814 --> 00:36:34,568 -ಆ ಹೂಗಳನ್ನು ಎಲ್ಲಿಂದ ತಂದೆ? -ಪಕ್ಕದ ಮನೆಯವರ ಅಂಚೆ ಪೆಟ್ಟಿಗೆ ಪಕ್ಕ ಡಬ್ಬಿ. 416 00:36:34,651 --> 00:36:37,863 ಮಕ್ಕಳ ಮರಳಿನ ಡಬ್ಬಿಯಲ್ಲಿ ಬೆಕ್ಕು ಹೇಸಿಗೆ ಮಾಡುತ್ತಿತ್ತು. ನ್ಯಾಯವೇ. 417 00:36:37,946 --> 00:36:39,740 ನಿಜವೇ. ಖಂಡಿತ ನ್ಯಾಯವೇ. 418 00:36:40,866 --> 00:36:44,828 -ಅಯ್ಯೋ. ಏನಾಯಿತು? -ಇಂಟರ್ನೆಟ್ ನನ್ನ ಶೂಗಳನ್ನು ದ್ವೇಷಿಸುತ್ತದೆ. 419 00:36:45,621 --> 00:36:49,708 -ಮತ್ತು ನನ್ನ ಮುಖವನ್ನು. -ಮುಟ್ಟಬೇಡ. ನಾನು ನೋಡುವೆ. 420 00:36:51,877 --> 00:36:55,130 ಮತ್ತೆ ನಿನ್ನ ದಿನ ಹೇಗಿತ್ತು? ಏನಾದರೂ ಆಸಕ್ತಿಕರವಾದದ್ದು ನಡೆಯಿತೇ? 421 00:36:56,340 --> 00:37:01,762 ಇಲ್ಲ. ಇಲ್ಲ. ಇಲ್ಲ. ನನ್ನ ದಿನದ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. 422 00:37:01,929 --> 00:37:04,473 ಸರಿ. ಮತ್ತೆ ಯಾವುದರ ಬಗ್ಗೆ ಮಾತನಾಡುವೆ? 423 00:37:07,059 --> 00:37:10,812 ನಿನ್ನ ಅಲಂಕಾರದ ಬಗ್ಗೆ. ಹಾಂ, ಅದರ ಬಗ್ಗೆ ಮಾತಾಡೋಣ, ಡಾ. ಲೋಪೆಜ್. 424 00:37:10,896 --> 00:37:13,190 ಸರಿ. ಸರಿ, ಅಮ್ಮ. 425 00:37:14,524 --> 00:37:15,567 ತಗೋ. 426 00:37:25,619 --> 00:37:28,121 ಇಲ್ಲ. ಏನು ಗೊತ್ತಾ? ನಿನ್ನ ದಿನದ ಬಗ್ಗೆ ಮಾತಾಡೋಣ. 427 00:37:29,164 --> 00:37:33,710 ಇಲ್ಲ. ನನಗೆ ಇಷ್ಟವಿಲ್ಲ. ನನ್ನ ದಿನದ ಬಗ್ಗೆ ಯಾಕೆ ಮಾತನಾಡಬೇಕು? 428 00:37:33,794 --> 00:37:37,214 ನೀನು ನಿನ್ನ ಧ್ವನಿಯಿಂದ ಮುದ್ದಾಗಿ ಕಾಣುವ ಪ್ರಯತ್ನ ಮಾಡಿದರೂ, 429 00:37:37,297 --> 00:37:39,591 ಏನೋ ನಡೆಯುತ್ತಿದೆ ಅಂತ ನನಗೆ ಗೊತ್ತಾಗುತ್ತೆ, ಆಯ್ತಾ? 430 00:37:39,675 --> 00:37:41,093 ಒತ್ತಿಟ್ಟುಕೊಳ್ಳುತ್ತಿರುವೆ. 431 00:37:41,176 --> 00:37:43,053 ಆ ದರಿದ್ರವನ್ನು ಹೇಳಿಕೊಳ್ಳದಿದ್ದರೆ, 432 00:37:43,136 --> 00:37:46,390 ಅದು ಎಲ್ಲಾ ಕಡೆ ಸಿಡಿದು ನಮ್ಮ ರಾತ್ರಿಯನ್ನು ಹಾಳು ಮಾಡುತ್ತದೆ. ಆಯ್ತಾ? 433 00:37:50,519 --> 00:37:53,814 ಕ್ಷಮಿಸು. ಕ್ಷಮಿಸು. ಗೊತ್ತಾ, ಇಂದು ಒಬ್ಬ ರೋಗಿಯನ್ನು ನೋಡಿದೆ. 434 00:37:54,523 --> 00:37:58,652 ಒಬ್ಬ ಪಾಪದ ಹದಿಹರೆಯದ ಹುಡುಗಿ. ಅವಳಲ್ಲಿ ತುಂಬಾ ಕೋಪವಿತ್ತು. ವಿಚಿತ್ರವಾಗಿತ್ತು. 435 00:37:59,069 --> 00:38:02,489 ಅವಳಿಗೆ ಅತಿಯಾದ ಔಷಧಗಳನ್ನು ಕೊಟ್ಟರೂ, ಇನ್ನೂ ಕೋಪಗೊಳ್ಳುತ್ತಲೇ ಇದ್ದಳು. 436 00:38:03,532 --> 00:38:04,574 ಗೊತ್ತಿಲ್ಲ. 437 00:38:05,617 --> 00:38:08,870 ಇತ್ತೀಚೆಗೆ ಇಡೀ ಪ್ರಪಂಚವೇ ಕುದಿಯುತ್ತಿರುವಂತೆ ಅನಿಸುತ್ತಿದೆ. 438 00:38:08,954 --> 00:38:12,666 ಅದಕ್ಕಾಗಿಯೇ ನೀನು ಅದನ್ನು ಹೇಳಿಕೊಳ್ಳಬೇಕು. ಆಯ್ತಾ? 439 00:38:13,959 --> 00:38:18,880 ನನಗಾಗಲ್ಲ. ನನ್ನ ಮುಖ, ಒಂದೇ ಒಂದು ಕ್ಷಣ, ಅತಿಯಾದ ಕೋಪದಲ್ಲಿ ಕಂಡರೂ, 440 00:38:18,964 --> 00:38:24,136 ನಾನು ಭಾವನಾತ್ಮಕತೆ, ಅತಾರ್ಕಿಕತೆ, ಉನ್ಮಾದದಿಂದಿದ್ದು ಆಯ್ಕೆಯಾಗಲು ಅನರ್ಹಳು. 441 00:38:24,219 --> 00:38:26,054 ತಪ್ಪು. ಇದು ನಮ್ಮ ಜಾಗ. 442 00:38:26,138 --> 00:38:29,516 ಮತ್ತು ನಾನು ನಿನ್ನ ಗಂಡ. ನೀನಿಲ್ಲಿ ಕೋಪಗೊಳ್ಳಬಹುದು ಎಂದು ಹೇಳುವೆ, ಆಯ್ತಾ? 443 00:38:29,766 --> 00:38:32,686 ಮತ್ತೆ ಕೆಂಡ ಉರಿಯಲಿ. ಹೇಳು. ಸರಿಯಾಗಿ ಕೋಪಗೊಳ್ಳು. 444 00:38:34,855 --> 00:38:35,731 ಸರಿ. 445 00:38:40,110 --> 00:38:43,739 ಈ ನಗರದಲ್ಲಿ ಏನೋ ನಡೆಯುತ್ತಿದೆ. ನಿಜವಾದದ್ದನ್ನು ಹೇಳುತ್ತಿದ್ದೇನೆ, ಆಯ್ತಾ? 446 00:38:44,573 --> 00:38:47,868 ಹಾಗಿರುವಂತೆಯೇ, ಮೊಬೈಲ್ ಫೋನುಗಳು ಮತ್ತು ಲಿಖಿತ ಸಂದೇಶಗಳು ಮತ್ತು 447 00:38:48,118 --> 00:38:50,203 ಈಮೇಲು ಮತ್ತು ಪ್ಯಾನೋಗ್ರಾಂ ಯುಗದಲ್ಲಿ, 448 00:38:50,287 --> 00:38:54,541 ಎರಡು ನಿಮಿಷಗಳ ಕಾಲ ಆತನ ಗಮನ ಸೆಳೆಯಲು ನಾನು ದರಿದ್ರ ಒಲಿಂಪಿಯಾಗೆ ಹೋಗಿ ಬರಬೇಕಾಯಿತು. 449 00:38:55,042 --> 00:38:57,711 -ಆಮೇಲೆ, ಆತ ನನಗೇನು ಹೇಳಿದ ಗೊತ್ತಾ? -ಇಲ್ಲ. ಏನು? 450 00:38:58,128 --> 00:39:03,091 ಆತ ನನ್ನ ಸೆರಗನ್ನು ಒದ್ದೆ ಮಾಡಿಕೊಳ್ಳಬೇಡ ಎಂದು ಹೇಳಿದ. 451 00:39:04,593 --> 00:39:07,512 ನನ್ನ ಹೆಂಡತಿಯ ಸೆರಗಿನ ಬಗ್ಗೆ ಅವನು ಮಾತನಾಡುವುದು ಬೇಡ. 452 00:39:07,596 --> 00:39:09,598 -ಅವನ ತಿಕ ಒದೆಯಬೇಕಾ? -ತಡಿ. ನೀನು ಒದೆಯಲಿಲ್ವಾ? 453 00:39:09,765 --> 00:39:13,769 -ಅಂದುಕೊಂಡೆ. ಅವನನ್ನು ಬೀಳಿಸುತ್ತಿದ್ದೆ. -ನೀನು ಮಾಡಬಲ್ಲೆ ಎಂದು ಗೊತ್ತು. 454 00:39:13,894 --> 00:39:17,230 ನೀನೇನು ಹೇಳಿದೆ? ನೀನೇನೋ ಹೇಳಿರುತ್ತೀಯಾ ಅಂತ ನನಗೆ ಗೊತ್ತು. 455 00:39:17,314 --> 00:39:21,485 ಏನೂ ಇಲ್ಲ. ನಾನು ರಾಜಕೀಯದಲ್ಲಿರುವ ಹೆಣ್ಣು. ದಿನವೆಲ್ಲಾ ನನ್ನನ್ನು ದಬಾಯಿಸುತ್ತಾನೆ. 456 00:39:21,568 --> 00:39:25,280 -ನಾನದನ್ನು ಸಹಿಸಿಕೊಳ್ಳಬೇಕು. -ಅವನಿಗೆ ನೀನೆಂದರೆ ಭಯ. ಆಯ್ತಾ? 457 00:39:25,363 --> 00:39:28,617 ಯಾಕೆಂದರೆ ನೀನು ಅವನಿಗಿಂತ ಸಮರ್ಥಳು ಮತ್ತು ಅರ್ಹಳು ಅಂತ. 458 00:39:28,700 --> 00:39:31,036 ಅದಕ್ಕಾಗಿಯೇ ದಬಾಯಿಸಿ ಬಾಯಿ ಮುಚ್ಚಿಸುತ್ತಾನೆ. 459 00:39:31,119 --> 00:39:34,706 -ನೀನು ಅವನನ್ನು ಗೆಲ್ಲಲು ಬಿಡಬೇಡ. -ಈಗಾಗಲೇ ಗೆದ್ದಿದ್ದಾನೆ. 460 00:39:34,790 --> 00:39:37,918 ನನಗೆ ಒಳ್ಳೆಯ ಊಟ ಮಾಡಿ ನನ್ನ ಗಂಡನ ಜೊತೆ ಸಂಭೋಗಿಸಬೇಕಿತ್ತು ಅಷ್ಟೇ. 461 00:39:38,335 --> 00:39:39,503 ಸರಿ, ಅಲ್ಲೇ ಇರು. 462 00:39:41,254 --> 00:39:43,799 -ಏನು ಮಾಡು… -ತಡಿ. ಬೇಡ… 463 00:39:49,054 --> 00:39:49,971 ತಗೋ. 464 00:39:52,349 --> 00:39:55,435 ಏನು ಇದು? ಒಂಥರಾ… 465 00:39:55,602 --> 00:39:57,521 ಇದು ಉಡುಗೊರೆಯೇ? ಅಥವಾ… 466 00:39:58,730 --> 00:40:02,901 ಇದೇ. ನಿನ್ನ ಹುಚ್ಚು ತಾಯಿ ಕೊಟ್ಟ ಮದುವೆಯ ಉಡುಗೊರೆ. 467 00:40:04,111 --> 00:40:07,072 ಒಡೆದುಹಾಕು. ಹಾಂ, ಹೊಡಿ. 468 00:40:08,281 --> 00:40:10,117 ಒಡೆದುಹಾಕು. ನಿಜವಾಗಿ ಹೇಳುತ್ತಿರುವೆ. 469 00:40:33,974 --> 00:40:38,687 ಓ, ದೇವರೇ. ಅಬ್ಬಬ್ಬಾ. ಅದಂತೂ ತುಂಬಾ ಚೆನ್ನಾಗನಿಸಿತು. 470 00:40:39,062 --> 00:40:40,438 ಹೌದಾ? ಚೆನ್ನಾಗಿತ್ತಾ? 471 00:40:41,148 --> 00:40:43,984 -ಸರಿ. ಮತ್ತೊಮ್ಮೆ ಮಾಡುವೆ. -ಬೇಡ, ಬೇಡ, ಬೇಡ. 472 00:40:46,319 --> 00:40:48,530 ಐಕಿಯಾದ ಹೆಚ್ಚಿನವುಗಳನ್ನು ತರುವೆ. ಇಲ್ಲ. 473 00:40:50,031 --> 00:40:51,950 -ಬೇಗ. -ಉತ್ಸಾಹದಲ್ಲಿರುವೆ. ನನಗೆ ಇಷ್ಟವೇ. 474 00:41:04,296 --> 00:41:06,506 ವಿಶ್ವದೆಲ್ಲೆಡೆ ಮಹಾ ಅಗ್ನಿ ಅವಘಡಗಳು 475 00:41:06,590 --> 00:41:09,384 ಉದ್ಯಾನಗಳು, ಉದ್ಯಮಗಳು, ಮನೆಗಳು ಮತ್ತು ಶಾಲೆಗಳ ಸುಡುತ್ತಿವೆ. 476 00:41:09,593 --> 00:41:13,013 ಅಧಿಕಾರಿಗಳು ಇಲ್ಲೊಂದು ವಿಲಕ್ಷಣ ಸಂಬಂಧವನ್ನು ಕಂಡುಹಿಡಿದಿದ್ದಾರೆ. 477 00:41:13,930 --> 00:41:17,017 ಹುಡುಗಿಯರು, ಕೆಲವರಿಗೆ ಕೇವಲ 12 ವರ್ಷ, ಇದಕ್ಕೆ ಕಾರಣ ಇರಬಹುದು. 478 00:41:18,226 --> 00:41:20,353 ಇವು ಬೇಕಾಗಿ ಮಾಡಲಾದ ಅಗ್ನಿಸ್ಪರ್ಶಗಳೇ? 479 00:41:20,979 --> 00:41:24,107 ಸಾಮಾಜಿಕ ಜಾಲತಾಣದ ಬೆಂಕಿ ಹಾಕುವ ಸವಾಲಿನ ಅನಾಹುತವೇ? 480 00:41:25,192 --> 00:41:26,693 ಬಿಡುವಿಲ್ಲದ ಅಗ್ನಿಶಾಮಕ ದಳದವರು 481 00:41:26,776 --> 00:41:30,614 ವಿಶ್ವದಾದ್ಯಂತ ಬೆಂಕಿಯೊಂದಿಗೆ ಸೆಣೆಸಾಡುತ್ತಾ ಉತ್ತರಗಳಿಗೆ ಹುಡುಕುತ್ತಿದ್ದಾರೆ. 482 00:41:30,947 --> 00:41:35,035 ಕಾರ್ಪೇಥಿಯಾದಲ್ಲಿ ಅಧ್ಯಕ್ಷ ಮೋಸ್ಕಲೆವ್ ಈ ಹೆಂಗಸರನ್ನು ಭಯೋತ್ಪಾದಕರೆಂದು ಘೋಷಿಸಿ 483 00:41:35,118 --> 00:41:37,787 ಬೆಂಕಿ ಹಚ್ಚುವವರಿಗೆ ಮರಣದಂಡನೆ ಶಿಕ್ಷೆ ಎಂದು ಎಚ್ಚರಿಸಿದ್ದಾರೆ. 484 00:41:37,913 --> 00:41:40,749 ಅವರು ಹುಡುಗಿಯರು, ವಿಕ್ಟರ್. ತಮಾಷೆ ಮಾಡ್ತಿರೋ ತುಂಟಿಯರು. 485 00:41:42,334 --> 00:41:44,878 ಚಿಂತಿಸಲು ಬೇರೆ ಪ್ರಮುಖ ವಿಚಾರಗಳಿವೆಯಲ್ಲ ನಿನಗೆ? 486 00:41:45,212 --> 00:41:49,257 ನನ್ನ ದೇಶದಲ್ಲಿ ಏನು ನಡೆಯುತ್ತಿದೆ ಎಂದು ನನಗೇ ಗೊತ್ತಿಲ್ಲ ಅಂದುಕೊಂಡೆಯಾ? 487 00:41:49,341 --> 00:41:52,844 …ಹಲವಾರು ಪ್ರದೇಶಗಳಲ್ಲಿ ನಿರಂತರವಾಗಿ ಎರಡನೇ ರಾತ್ರಿಯೂ ವಿದ್ಯುತ್ ಇಲ್ಲದಂತಾಗಿದೆ. 488 00:41:52,928 --> 00:41:54,596 ಉದ್ಯಮಗಳು ತಮ್ಮ ಬಾಗಿಲನ್ನು ಮುಚ್ಚಿವೆ 489 00:41:54,679 --> 00:41:57,724 ಮತ್ತು ಕುಟುಂಬಗಳು ಒಳಗಡೆಯೇ ದೀಪದ ಬೆಳಕಿನಲ್ಲಿ ಕೂತಿವೆ. 490 00:41:57,933 --> 00:42:02,395 ರಸ್ತೆಯ ದೀಪಗಳೂ ಕಾರ್ಯನಿರ್ವಹಿಸದೆ, ಸಂಪೂರ್ಣ ನಗರಗಳು ಕತ್ತಲುಮಯವಾಗುತ್ತಿವೆ. 491 00:42:03,438 --> 00:42:05,232 ಹಾಗಿರುವಂತೆಯೇ, ಚೀನಾದ ಜೆನ್ಜಿಯುನಲ್ಲಿ, 492 00:42:05,732 --> 00:42:09,027 ಮೊಬೈಲ್ ಫೋನುಗಳನ್ನು ತಯಾರಿಸುವ ಕಾರ್ಖಾನೆಯೊಂದು ಕೋಟ್ಯಾಂತರ ಡಾಲರುಗಳಷ್ಟು 493 00:42:09,110 --> 00:42:11,655 ವಸ್ತು ನಷ್ಟ ವಿದ್ಯುತ್ ಅವಘಡದಿಂದ ಆಯ್ತೆಂದು ಘೋಷಿಸಿತು. 494 00:42:11,738 --> 00:42:12,656 ಏನು? 495 00:42:13,782 --> 00:42:15,992 ನಿಮಗಾಗಿ ಬಂದಿದ್ದಾರೆ, ಶ್ರೀಮತಿ ಮೋಸ್ಕಲೆವ್. 496 00:42:17,786 --> 00:42:18,912 ನಿಮ್ಮ ತಾಯಿ. 497 00:42:29,798 --> 00:42:31,216 ಅಲ್ಲಿ ಕಕ್ಕಸಿನ ವಾಸನೆ ಬರುತ್ತೆ. 498 00:42:31,508 --> 00:42:35,595 ಸಂದರ್ಶನಗಳಲ್ಲಿ ಅಷ್ಟೆಲ್ಲಾ ಆಶಾವಾದಿಯಾಗಬೇಡ. ಅವರು ನಿನ್ನನ್ನು ಮೆಚ್ಚಲ್ಲ. 499 00:42:35,845 --> 00:42:39,724 ನೀನು ಕೃತಜ್ಞಳಾಗಿರಬೇಕು. ಅವರು ನಿನ್ನನ್ನು ನೋಡಿದ್ದು ಆಶ್ಚರ್ಯವೇ. 500 00:42:39,808 --> 00:42:42,352 ನಾನು ಶ್ರೇಷ್ಠಳು. ಅದಕ್ಕಾಗಿ ನನ್ನ ಸಂದರ್ಶನ ಮಾಡಿದರು. 501 00:42:42,811 --> 00:42:45,438 ಅಯ್ಯೋ ದೇವರೇ! ನನ್ನ ಮಾತನ್ನು ಕೇಳುತ್ತಿರುವೆಯಾ? 502 00:42:46,064 --> 00:42:49,609 ಅಷ್ಟೆಲ್ಲಾ ತಗೋಬೇಡ. ನಿನ್ನ ಅಕ್ಕನಿಗೆ ಅಭ್ಯಾಸವಿದೆ. 503 00:42:51,569 --> 00:42:54,364 ಸ್ವಲ್ಪ ನಮ್ರತೆ ತೋರಿಸು. ನೀನು ಈಗ ಚಿಕ್ಕವಳಲ್ಲ. 504 00:42:54,531 --> 00:42:57,117 -ನಾನು ಕೆಲಸ ಮಾಡಲ್ಲ… -ನಾವು… 505 00:42:57,200 --> 00:43:00,078 ಇದು ನಿನ್ನ ಬಗ್ಗೆ ಅಲ್ಲ. 506 00:43:01,079 --> 00:43:06,042 ನಾವಿಬ್ಬರೂ ಮೂರು ಕೆಲಸಗಳನ್ನು ನಿಭಾಯಿಸಿಕೊಂಡು, ಇಷ್ಟೊತ್ತು ಕಷ್ಟಪಟ್ಟು, 507 00:43:06,126 --> 00:43:09,629 ನಿನ್ನ ತರಬೇತಿಗಾಗಿ ಹಣ ಪಾವತಿಸುತ್ತಿದ್ದರೆ ಅಹಂಕಾರದಿಂದ ಹಾಳು ಮಾಡಿಕೊಳ್ಳಬೇಡ. 508 00:43:10,630 --> 00:43:13,425 ನಿನ್ನಲ್ಲಿ ಅದೆಲ್ಲಾ ಇರುವವರೆಗೂ ನೀನು ಲಾಗ ಹಾಕಲಾಗದು. 509 00:43:15,093 --> 00:43:18,013 ಆಯ್ತು. ಆಯ್ತು. ಅರ್ಥವಾಯಿತು. ಆಶಾವಾದಿ ಆಗಬಾರದು. 510 00:43:18,388 --> 00:43:19,431 ಅಲ್ಲ. ಅಲ್ಲ. 511 00:43:19,639 --> 00:43:24,602 ಖಂಡಿತ ಆಶಾವಾದಿಯಾಗಿರು. ಖಂಡಿತವಾಗಲೂ. 512 00:43:24,978 --> 00:43:27,397 ನೀನು ಆಶಾವಾದಿಯಾಗಿರಬೇಕು, 513 00:43:27,480 --> 00:43:30,358 ಆದರೆ ನೀನು ಆಶಾವಾದಿ ಎಂದು ಅವರಿಗೆ ತೋರಿಸಿಕೊಳ್ಳಬಾರದು. 514 00:43:30,775 --> 00:43:36,406 ಅವರಿಗೆ ಇಷ್ಟವಾಗದು. ನೀನು ಮುದ್ದಾದ ಹುಡುಗಿಯಂತೆಯೇ ಇರಬೇಕು. 515 00:43:50,628 --> 00:43:51,671 ಹಾಸಿಗೆ. 516 00:44:09,439 --> 00:44:11,816 ನೀನು ಕೆಲಸ ಮಾಡಿಸಿಕೊಂಡಿರುವೆ. 517 00:44:15,653 --> 00:44:17,155 ಶೋಕಿ ಮುಂಡೆ. 518 00:44:30,085 --> 00:44:32,128 ನನಗೇನೂ ಕೊಡುವುದಿಲ್ಲವೇನು? 519 00:44:38,385 --> 00:44:41,930 -ನೀನು ಕ್ರೂರಿ. -ನಿನ್ನಿಂದಲೇ ಕಲಿತದ್ದು. 520 00:44:46,184 --> 00:44:51,106 ನಿನ್ನ ತಂದೆ ಸತ್ತಿದ್ದಾರೆ. ಆತ ಸತ್ತು ನನಗೆ ಏನನ್ನೂ ಬಿಟ್ಟು ಹೋಗಿಲ್ಲ. 521 00:44:51,940 --> 00:44:53,650 ಮನೆಯಲ್ಲೊಂದು ಕಾಳೂ ಇಲ್ಲ. 522 00:44:56,403 --> 00:45:00,865 ಜೀವನ ಈಗ ಕಷ್ಟವಾಗಿದೆ. ಕೆಲಸವೂ ಇಲ್ಲ. 523 00:45:03,910 --> 00:45:05,453 ನನಗೆ ಬದುಕಲು ಏನೂ ಇಲ್ಲ. 524 00:45:08,373 --> 00:45:14,045 ಮೂರು ವಾರಗಳಿಂದ ಸರಿಯಾಗಿ ಏನನ್ನೂ ತಿಂದಿಲ್ಲ. ನನಗೆ ಸ್ನಾನ ಮಾಡಲು ಜಾಗವಿಲ್ಲ. 525 00:45:15,922 --> 00:45:17,882 ಮತ್ತು ನನ್ನ ಕಾಲ್ಬೆರಳ ಊತ. 526 00:45:19,175 --> 00:45:23,012 ನನ್ನ ಕಾಲ್ಬೆರಳ ಊತವನ್ನು ನೋಡು. 527 00:45:23,096 --> 00:45:25,598 ಅವುಗಳನ್ನು ದೂರ ಇರಿಸು. 528 00:45:27,725 --> 00:45:28,810 ದರಿದ್ರದ್ದು. 529 00:45:29,727 --> 00:45:32,147 ನನ್ನ ಪಾಲನ್ನು ಕೇಳಲು ಬಂದಿರುವೆ. 530 00:45:38,027 --> 00:45:38,903 ಸರಿ. 531 00:45:44,284 --> 00:45:45,827 ಅಪ್ಪ ಸತ್ತನಾ? 532 00:45:48,538 --> 00:45:49,581 ಆತನ ಹೃದಯ? 533 00:45:50,331 --> 00:45:51,249 ಕುಡಿ. 534 00:45:52,876 --> 00:45:56,171 ಮತ್ತು ಆತನ ಒಬ್ಬ ಮಗಳೂ ಶವಸಂಸ್ಕಾರಕ್ಕೆ ಬರಲಿಲ್ಲ. 535 00:45:57,005 --> 00:45:59,007 ಎಲ್ಲವನ್ನೂ ನಾನೇ ಮಾಡಿದೆ. 536 00:46:02,719 --> 00:46:04,429 ಜೋಯಾ ಏನಾದರೂ ಹೇಳಿದಳಾ? 537 00:46:05,930 --> 00:46:08,850 ಇನ್ನೂ ಇಲ್ಲ. ಇಷ್ಟೆಲ್ಲಾ ವರ್ಷಗಳಾದರೂ ಏನೂ ಇಲ್ಲ. 538 00:46:11,102 --> 00:46:14,314 ನೀನು ಅವಳಿಗೆ ಕಳಿಸಿದ ಆಭರಣಗಳೆಲ್ಲವನ್ನೂ ಮರಳಿಸಿದಳು ಎಂದು ಗೊತ್ತು. 539 00:46:23,490 --> 00:46:27,410 ನೀನು ನಿನ್ನ ಕುಟುಂಬವನ್ನು ಮರೆತಿಲ್ಲ. ನನಗೆ ಗೊತ್ತಿತ್ತು. 540 00:46:27,535 --> 00:46:30,580 -ನೀನು ಹೊರಡಬೇಕು. -ಆದರೆ ನಾನು ಈಗಷ್ಟೇ ಬಂದೆ. 541 00:46:30,830 --> 00:46:32,916 ನೀನು ಹೊರಡಬೇಕು. ರುಸ್ಲಾನ್! 542 00:46:33,166 --> 00:46:36,920 ಟಾಟಿಯಾನಾ. ಟಾಟಿಯಾನಾ, ಅಯ್ಯೋ, ದೇವರೇ, ನನಗೆ ಸಹಾಯ ಬೇಕು. 543 00:46:37,795 --> 00:46:41,799 ನನ್ನನ್ನು ಇರಲು ಬಿಡು, ಸ್ವಲ್ಪ ವಿರಮಿಸಲು. 544 00:46:43,551 --> 00:46:47,263 ಆ ಎಲ್ಲಾ ವರ್ಷಗಳು ನೀನು ನನಗೆ ನೆರವಾದಂತೆ ನಾನು ನಿನಗೆ ನೆರವಾಗುವೆ. 545 00:46:47,347 --> 00:46:48,223 ಧನ್ಯವಾದ. 546 00:46:49,557 --> 00:46:50,767 ಅದು ಅಲ್ಲವೇ ಅಲ್ಲ. 547 00:46:51,476 --> 00:46:52,393 ಬಾ. ಬಾ. 548 00:46:54,479 --> 00:46:58,608 ಹಾಗೆ ಹೇಗೆ ಹೇಳುವೆ? ನಿನ್ನಲ್ಲಿರುವುದನ್ನೆಲ್ಲಾ ನೋಡು! 549 00:46:58,816 --> 00:47:01,027 ಇದಕ್ಕೆ ನಾನೇನನ್ನೂ ತ್ಯಾಗ ಮಾಡಿಲ್ಲ ಅಂದುಕೊಂಡೆಯಾ? 550 00:47:04,948 --> 00:47:06,074 ಕಳಿಸು ಆಕೆಯನ್ನು ಹೊರಗೆ. 551 00:47:06,824 --> 00:47:08,701 ವಿದಾಯ ಹೇಳುವುದಿಲ್ಲವೇ, ಅಮ್ಮ? 552 00:47:08,868 --> 00:47:11,746 ನಿನ್ನ ಹೊಸ ಮೂಗು ದರಿದ್ರವಾಗಿದೆ. 553 00:47:14,874 --> 00:47:18,503 ರುಸ್ಲಾನ್, ಕೇಕನ್ನು ಬಿಸಾಡು. 554 00:47:51,327 --> 00:47:52,412 ನನ್ನಲ್ಲಿದೆ, ಅಪ್ಪ. 555 00:47:54,581 --> 00:47:55,498 ನಾನು ಮಾಡಬಲ್ಲೆ. 556 00:47:58,459 --> 00:47:59,794 ಬೇರೆ ಹುಡುಗಿಯರ ನೋಡಿರುವೆ. 557 00:47:59,877 --> 00:48:03,464 ನಿನಗೆ ಹೇಳುವೆ, ಅವರು ನನ್ನಂತಲ್ಲ. ನನ್ನಲ್ಲಿ ಅದು ತುಂಬಾ ಇದೆ. 558 00:48:55,683 --> 00:48:58,061 ಇದು ನನಗೆ ಯಾಕೆ ಆಗುತ್ತಿದೆ? 559 00:49:04,275 --> 00:49:05,318 ಯಾಕೆ? 560 00:49:23,378 --> 00:49:26,089 ಯಾಕೆ? ಯಾಕೆ? 561 00:49:27,632 --> 00:49:28,549 ಯಾಕೆ? 562 00:49:41,604 --> 00:49:44,273 ಯಾಕೆಂದರೆ ಪ್ರಪಂಚಕ್ಕೆ ಒಂದು ಕ್ರಾಂತಿಯ ಅವಶ್ಯಕತೆ ಇದೆ. 563 00:49:48,152 --> 00:49:51,072 ಮತ್ತು ನೀನು ಅದರ ಧ್ವನಿಯಾಗಲಿರುವೆ. 564 00:50:22,395 --> 00:50:24,689 ಉತ್ತಮ ಭವಿಷ್ಯ ನಿನ್ನ ಕೈಗಳಲ್ಲಿದೆ. 565 00:50:57,930 --> 00:51:01,100 ಇನ್ನೂ ನೋಡುತ್ತಿದ್ದೀರಾ? 566 00:51:16,574 --> 00:51:20,077 ಹೆಲೆನ್. ಏನಾದರೂ ಮುಖ್ಯವಾದದ್ದು ಇಲ್ಲದಿದ್ದರೆ ಆಕೆ ಕರೆ ಮಾಡುವುದಿಲ್ಲ. 567 00:51:20,161 --> 00:51:21,078 ಸರಿ. 568 00:51:23,164 --> 00:51:24,165 ಹಲೋ? 569 00:51:29,962 --> 00:51:30,963 ಏನು? 570 00:54:09,038 --> 00:54:11,040 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 571 00:54:11,123 --> 00:54:13,125 ಸೃಜನಶೀಲ ಮೇಲ್ವಿಚಾರಕರು: ವಿವೇಕ್