1 00:00:12,805 --> 00:00:15,141 ಸಮುದಾಯದಲ್ಲಿ ಸೇವಾ ಕಾರ್ಯಗಳಿಗೆ ಹೆಸರು ಮಾಡಿದ್ದ ವೈದ್ಯೆಯೊಬ್ಬರು 2 00:00:15,224 --> 00:00:17,893 ಸ್ಥಳೀಯ ಹಣ್ಣಿನ ಮಾರ್ಕೆಟಿನಲ್ಲಿ ಪಾದಚಾರಿಗಳ ಒಂದು ಗುಂಪಿನ ಮೇಲೆ ವಾಹನ ಹರಿಸಿ 3 00:00:17,977 --> 00:00:19,520 ಮೂವರನ್ನು ಕೊಂದು ಐವರಿಗೆ ಗಾಯಗೊಳಿಸಿದ್ದರು. 4 00:00:20,563 --> 00:00:23,524 ದೀರ್ಘ ಶಿಫ್ಟ್ ನಂತರ, ಮನೆಗೆ ಮರಳುವ ಮುನ್ನ ವೈದ್ಯೆ ಕೆಲವೊಮ್ಮೆ ತಮ್ಮ ಕೊಠಡಿಯಲ್ಲಿ 5 00:00:23,607 --> 00:00:24,650 ನಿದ್ದೆ ಮಾಡುತ್ತಿದ್ದರು. 6 00:00:24,734 --> 00:00:26,527 ಈ ನಿರ್ದಿಷ್ಟ ದಿನ, ಆಕೆ ಹಾಗೆ ಮಾಡಲಿಲ್ಲ. 7 00:00:27,653 --> 00:00:28,612 ತಮ್ಮ ಮಗಳ ಜನ್ಮದಿನ 8 00:00:28,696 --> 00:00:31,490 ಪಾರ್ಟಿಗೆ ಹೋಗುವಾಗ ಗಾಡಿ ಚಲಾಯಿಸುತ್ತಲೇ ನಿದ್ದೆಗೆ ಜಾರಿದ್ದರು. 9 00:00:31,574 --> 00:00:34,201 ಆ ದಿನ ಆಕೆ ಪಾರ್ಟಿಗೆ ಹೋಗಲಿಲ್ಲ ಮತ್ತು ತನ್ನ ಮಗಳ ಹುಟ್ಟುಹಬ್ಬವನ್ನು 10 00:00:34,285 --> 00:00:36,078 ಎಂದಿಗೂ ಆಚರಿಸಲಿಲ್ಲ. 11 00:00:36,787 --> 00:00:39,165 ಆ ದಿನ ಬೇರೊಂದು ವಿಧದ ವಾರ್ಷಿಕೋತ್ಸವವಾಯಿತು. 12 00:00:39,248 --> 00:00:41,667 ವೈದ್ಯೆ ನೆನೆಯಲು ಬಯಸದಂತಹ ದಿನ. 13 00:00:43,961 --> 00:00:47,798 ಮೂವರು ಪೈಲಟುಗಳಿದ್ದ ಸಣ್ಣ ವಿಮಾನ ಸ್ಕೀ ಲಿಫ್ಟಿಗೆ ತೀರಾ ಸನಿಹದಲ್ಲಿ ಹಾರಿತು. 14 00:00:48,215 --> 00:00:50,676 ಆ ದಿನ ದಟ್ಟ ಮಂಜು ಗೋಚರತೆಯನ್ನು ಬಾಧಿಸಿತ್ತು. 15 00:00:50,760 --> 00:00:53,554 ಪರ್ವತದ ಮೇಲೆ, ಕೆಳಗೆ ಸ್ಕೀ ಪಟುಗಳನ್ನು ಹೊತ್ತ ಗೊಂಡೊಲ ಅವರ ಕಣ್ಣಿಗೆ ಬೀಳಲಿಲ್ಲ, 16 00:00:53,637 --> 00:00:56,265 ವಿಮಾನದ ಬಲ ರೆಕ್ಕೆ ಉಕ್ಕಿನ ತಂತಿಗಳನ್ನು ತುಂಡರಿಸಿತು. 17 00:00:56,599 --> 00:00:58,809 ಕೇಬಲ್ ಕಾರು 264 ಅಡಿ ಆಳಕ್ಕೆ ಬಿದ್ದು 18 00:00:58,893 --> 00:01:01,020 ಅದರಲ್ಲಿದ್ದ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. 19 00:01:04,398 --> 00:01:07,401 ನಂತರ, ಒಬ್ಬ ಪೈಲಟ್ ಸಂತ್ರಸ್ತರ ಕುಟುಂಬಗಳನ್ನು ಸಂಪರ್ಕಿಸಲು ಯತ್ನಿಸಿದರು, 20 00:01:07,485 --> 00:01:09,278 ಆದರೆ ಯಾರೂ ಕರೆಗಳಿಗೆ ಉತ್ತರಿಸಲಿಲ್ಲ. 21 00:01:13,115 --> 00:01:15,409 12 ವರ್ಷದ ಬಾಲಕನೊಬ್ಬ ತನ್ನ ಅವಳಿ ಸೋದರನಿಗೆ ಉಂಟುಮಾಡಿದ 22 00:01:15,493 --> 00:01:18,788 ಸಿ7 ಬೆನ್ನು ಹುರಿ ಗಾಯದಿಂದ ಆತ ಕುತ್ತಿಗೆ ಕೆಳಭಾಗ ದೇಹದ ಸ್ವಾಧೀನ ಕಳೆದುಕೊಂಡ. 23 00:01:19,580 --> 00:01:21,665 ಗುದ್ದಾಡದಂತೆ ತಾಯಿಯ ಎಚ್ಚರಿಕೆಗಳ ಹೊರತಾಗಿ, 24 00:01:21,749 --> 00:01:24,168 ಹುಡುಗರ ಆಟ ಸಾಮಾನ್ಯವಾಗಿರಲಿಲ್ಲ. 25 00:01:24,251 --> 00:01:26,796 ಯಾವ ಕಾಫಿ ಟೇಬಲ್ ಮೇಲೆ ಆತ ಬಿದ್ದನೋ ಅದು ಯಾವತ್ತೂ ಅಲ್ಲಿಯೇ ಇತ್ತು. 26 00:01:28,297 --> 00:01:30,549 ಅವಳಿಗಳು ತದ್ರೂಪಿಗಳಾಗಿದ್ದರು, ಆದರೆ ಆ ಹಂತದ ನಂತರ 27 00:01:30,633 --> 00:01:32,968 ಅವರ ಜೀವನಗಳಲ್ಲಿ ಒಂದೇ ರೀತಿಯದ್ದು ಏನೂ ಇರಲಿಲ್ಲ. 28 00:01:34,011 --> 00:01:36,430 ಈ ಕಥೆಗಳು ಯಾವತ್ತೂ ಸಂತ್ರಸ್ತರ ಮೇಲೆ ಗಮನ ಕೇಂದ್ರೀಕರಿಸುತ್ತವೆ. 29 00:01:36,514 --> 00:01:39,433 ಈ ತೊಂದರೆಗೆ ಕಾರಣನಾದ ವ್ಯಕ್ತಿಯನ್ನು ಯಾವತ್ತೂ ಉಲ್ಲೇಖಿಸಲಾಗುವುದಿಲ್ಲ. 30 00:01:39,975 --> 00:01:43,187 ತನ್ನ ಸ್ವಂತ ಸೋದರನಿಗೆ ಈ ರೀತಿ ಮಾಡಿದವನ ಬಗ್ಗೆ, ಚಲಾಯಿಸುತ್ತಾ ನಿದ್ದೆ ಹೋದ ಚಾಲಕನ ಬಗ್ಗೆ 31 00:01:43,646 --> 00:01:45,272 ಅಥವಾ ಕೇಬಲ್ ಕಾರು ಅಪಘಾತಕ್ಕೆ ಕಾರಣರಾದ 32 00:01:45,356 --> 00:01:47,525 ಪೈಲಟುಗಳ ಬಗ್ಗೆ ಯಾರೂ ತಿಳಿಯಲು ಬಯಸುವುದಿಲ್ಲ. 33 00:01:49,527 --> 00:01:51,695 ಕೃತ್ಯವೆಸಗಿದವರ ಬಗ್ಗೆ ನನಗೆ ತಿಳಿಯಬೇಕಿದೆ... 34 00:01:51,779 --> 00:01:53,072 ಎಲ್ಲವೂ ವೇಗವಾಗಿ ನಡೆದು ಹೋಯಿತು. 35 00:01:53,155 --> 00:01:56,075 ದುರಂತಗಳಿಗೆ ಕಾರಣರಾದ ಜನರ ಬಗ್ಗೆ ನನಗೆ ತಿಳಿಯಬೇಕಿದೆ... 36 00:01:59,161 --> 00:02:00,538 ನನ್ನಂತಹ ಜನರು. 37 00:02:03,415 --> 00:02:04,667 ಅವರನ್ನು ಎಂದಿಗೂ ಕ್ಷಮಿಸಲಾಗುವುದೇ? 38 00:02:07,002 --> 00:02:08,587 ಅವರು ಮುಂದೆ ಸಾಗುವರೇ? 39 00:02:11,507 --> 00:02:14,802 ನಾನೇನು ಮಾಡಿದೆ ಎಂಬುದನ್ನು ನಾ ಯೋಚಿಸದ ಕ್ಷಣವಿಲ್ಲ. 40 00:02:16,428 --> 00:02:19,098 ನಿನ್ನ ಬಗ್ಗೆ ನಾ ಯೋಚಿಸದ ಕ್ಷಣವಿಲ್ಲ. 41 00:02:21,141 --> 00:02:22,560 ನೀನೇನು ಮಾಡುತ್ತಿರುವೆ ಎಂದು... 42 00:02:23,477 --> 00:02:24,812 ನೀ ಹೇಗೆ ಇರುವೆ ಎಂದು... 43 00:02:25,896 --> 00:02:27,731 ನೀ ಹೇಗೆ ಬದುಕುತ್ತಿರುವೆ ಎಂದು... 44 00:02:29,191 --> 00:02:31,652 ನಾ ನಿನ್ನ ಜೀವನ ಸಂಪೂರ್ಣ ಛಿದ್ರಗೊಳಿಸಿರುವಾಗ. 45 00:02:48,711 --> 00:02:54,717 {\an8}ಎಕ್ಸ್ಪಾಟ್ಸ್ 46 00:02:54,800 --> 00:02:58,053 ನಾ ಹೂ ಮಾರಾಟಗಾರರೊಂದಿಗೆ ಮಾತನಾಡಿದ್ದೆ... ಎಲ್ಲಾ ಏರ್ಪಾಟು ಮುಗಿದಿವೆ 47 00:02:58,137 --> 00:03:00,890 ನಾಳೆ ಬೆಳಿಗ್ಗೆ ಮೊದಲು ತಲುಪಿಸಲಾಗುತ್ತದೆ ಆದರೆ ಖಾತ್ರಿಪಡಿಸಿ 48 00:03:00,973 --> 00:03:02,683 ಭೇಟಿಯಾಗಲು ಬೆಳಿಗ್ಗೆ ಯಾರಾದರೂ ಇರುವರೆಂದು. 49 00:03:02,766 --> 00:03:05,561 ಆ ಬ್ಯಾನರ್ ಹಾಕುವ ಬಗ್ಗೆ ಸ್ಥಳದವರ ಜೊತೆ ಮಾತನಾಡಿದೆಯಾ? 50 00:03:05,644 --> 00:03:09,148 ಅವುಗಳನ್ನು ನಿರ್ಗಮನ ದ್ವಾರಗಳಿಂದ ಹೊರಗಿಡುವವರೆಗೆ ಸಮಸ್ಯೆಯಿಲ್ಲ. 51 00:03:09,231 --> 00:03:10,441 ಅದ್ಭುತವಾಗಿದೆ. 52 00:03:10,524 --> 00:03:12,985 ನಿಮಗೆ ಪರಿಶೀಲಿಸಲು ಅಂತಿಮ ಮೆನು ಇಲ್ಲಿದೆ. 53 00:03:13,861 --> 00:03:16,530 ಆಂಟನಿ'ಸ್ ಅತ್ಯುತ್ತಮವೆಂದು ಪರಿಗಣಿತವಾಗಿದೆ. 54 00:03:16,614 --> 00:03:18,949 ನೀವು ಹಾಂಕಾಂಗಿಗೆ ಏಕೆ ಬಂದಿರೆಂದು ಕೇಳಬಹುದೇ? 55 00:03:19,575 --> 00:03:22,828 ನನ್ನ ಗಂಡನ ಕಂಪನಿ ಅವರನ್ನು ವಿದೇಶಕ್ಕೆ ಕಳಿಸಿದೆ. ಸಾಮಾನ್ಯ, ಅಲ್ಲವೇ? 56 00:03:25,122 --> 00:03:26,248 ನೀವು ಕೆಲಸದಲ್ಲಿದ್ದೀರಾ? 57 00:03:26,832 --> 00:03:29,293 ಮಾಡ್ತಿದ್ದೆ. ಮಾಡ್ತಿರುವೆ. 58 00:03:31,462 --> 00:03:32,546 ನಾನು ಗೃಹಿಣಿಯಲ್ಲ. 59 00:03:34,173 --> 00:03:36,508 ಕ್ಷಮಿಸಿ, ನಾನು... ಹಾಗಂದುಕೊಂಡಿಲ್ಲ... 60 00:03:36,592 --> 00:03:38,594 ಕ್ಷಮಿಸಿ. ಅದು ನನಗೆ ಕಷ್ಟಕರ ವಿಚಾರ. 61 00:03:40,220 --> 00:03:41,764 ಲ್ಯಾಂಡ್ಸ್ಕೇಪ್ ಆರ್ಕಿಟೆಕ್ಚರ್ ಕೆಲಸ. 62 00:03:41,847 --> 00:03:43,974 ಜನರಿಗೆ ತೋಟಗಳನ್ನು ವಿನ್ಯಾಸಗೊಳಿಸುತ್ತೇನೆ. 63 00:03:44,058 --> 00:03:46,560 ಇಲ್ಲಿ ಮಾಡಲು ಕಷ್ಟ. ಯಾರ ಬಳಿಯೂ ಜಾಗವಿಲ್ಲ. 64 00:03:47,686 --> 00:03:49,146 ಹೌದು, ಅದು ಹಾಂಕಾಂಗ್. 65 00:03:51,231 --> 00:03:52,942 ಎಷ್ಟು ಒಳ್ಳೆಯ ಹುಡುಗ. 66 00:03:53,025 --> 00:03:56,570 ಅವನ ವಯಸ್ಸಿನ ಸೋದರಳಿಯ ನನಗಿದ್ದಾನೆ, ಈ ರೀತಿ ಸುಮ್ಮನೆ ಅವನನ್ನು ಕೂರಿಸಲು ಸಾಧ್ಯವಿಲ್ಲ. 67 00:04:00,699 --> 00:04:03,035 ನೀವೇನು ಹೇಳುತ್ತೀರಿ? 68 00:04:05,204 --> 00:04:06,497 ಅವನು ಒಳ್ಳೆಯ ಹುಡುಗ. 69 00:04:09,041 --> 00:04:10,084 ನನ್ನ ಅರ್ಥ ಮೆನು. 70 00:04:13,295 --> 00:04:16,006 -ಚಿಂತೆಯಿಲ್ಲ. -ನಿಮ್ಮದು ಮುಗಿಯಿತೇ? ನನಗೆ ಮನೆಗೆ ಹೋಗಬೇಕು. 71 00:04:16,090 --> 00:04:19,134 ಬಹುತೇಕ. ತಿಳಿಯಲು ನಮಗೆ ಇನ್ನೂ ಒಂದೆರಡು ವಿಚಾರಗಳಿವೆ, ಸರಿಯೇ? 72 00:04:19,927 --> 00:04:24,723 -ಇನ್ನು ಕೆಲವು ನಿಮಿಷಗಳಷ್ಟೇ. -ವಾವ್, ನಿಮ್ಮ ಮಗಳು ತುಂಬಾ ಚೆಲುವೆ. 73 00:04:24,807 --> 00:04:27,685 ನಿಮ್ಮಂತೆಯೇ ಕಾಣುತ್ತಾಳೆ. ನಿಮಗೆ ಇವರಿಬ್ಬರು ಮಾತ್ರವೇ? 74 00:04:30,562 --> 00:04:31,480 ಮಾರ್ಗರೆಟ್? 75 00:04:32,231 --> 00:04:35,776 -ಅಂತಿಮ ಅತಿಥಿಗಳ ಪಟ್ಟಿಯನ್ನು ನೋಡಬಹುದೇ? -ಹೌದು, ಖಂಡಿತ. 76 00:04:36,360 --> 00:04:39,321 ಅದನ್ನು ಮುದ್ರಿಸಿಲ್ಲ, ಇಲ್ಲಿ ನನ್ನ ಐಪ್ಯಾಡ್ನಲ್ಲಿ ನೋಡಬಹುದು. 77 00:04:40,114 --> 00:04:41,782 ಇವೆರಲ್ಲರೂ ದೃಢೀಕರಿಸಿದ ಜನರು. 78 00:04:41,865 --> 00:04:45,869 ಕೆಲವೊಮ್ಮೆ, ಕೊನೆ ಕ್ಷಣದಲ್ಲಿ ನಾಪತ್ತೆ ಆಗ್ತಾರೆ, ಇಲ್ಲಿ ಹಾಗಾಗದು ಅಂದುಕೊಂಡಿದ್ದೇನೆ. 79 00:04:45,953 --> 00:04:47,329 ಬಹಳಷ್ಟು ಜನರಿದ್ದಾರೆ. 80 00:04:47,413 --> 00:04:51,458 ಇದು ತುಂಬಾ ಎಂದು ಅಂದುಕೊಂಡರೆ, ಕಳೆದ ವಾರ ನಾವು ಯೋಜಿಸಿದ್ದ ವಿವಾಹ ನೋಡಬೇಕಿತ್ತು. 81 00:04:51,542 --> 00:04:52,960 ಅರ್ಧದಷ್ಟು ನಗರ ಅಲ್ಲಿತ್ತು. 82 00:04:53,544 --> 00:04:56,046 ದೊಡ್ಡ ಪಾರ್ಟಿ ಆಯೋಜಿಸುವುದು ಸದಾ ಭಯ ಹುಟ್ಟಿಸುತ್ತದೆ, 83 00:04:56,130 --> 00:04:59,675 ಆದರೆ ನಿಮಗೆ ಅಗತ್ಯವಿರುವ ಬೆಂಬಲ ನೀಡಲು ನನ್ನ ತಂಡ ಅಲ್ಲಿರಲಿದೆ. 84 00:04:59,758 --> 00:05:01,218 ನಾವು ತುಂಬಾ ಪಾರ್ಟಿ ಆಯೋಜಿಸಿದ್ದೇವೆ, 85 00:05:01,301 --> 00:05:03,637 ನನ್ನನ್ನು ನಂಬಿ, ನಗರದ ಅತ್ಯುತ್ತಮ ಸ್ಥಳ ನಿಮಗಿದೆ. 86 00:05:03,846 --> 00:05:07,474 ಈ ಸ್ಥಳದಲ್ಲಿ ಕಡಿಮೆಗಿಂತ ಹೆಚ್ಚು ಜನರಿರುವುದು ಒಳ್ಳೆಯದು, 87 00:05:07,558 --> 00:05:10,519 ತುಂಬಾ ಕಡಿಮೆ ಜನರಿದ್ದರೆ ಸ್ವಲ್ಪ ಬೇಸರವಾಗಬಹುದು. 88 00:05:11,103 --> 00:05:14,064 ಏನಿದ್ದರೂ, ಇದು ನಿಮ್ಮ ಗಂಡನ 50ನೇಯದ್ದು, ಅದು ಆಚರಿಸುವ ವಿಚಾರ, 89 00:05:14,148 --> 00:05:16,316 ಎಲ್ಲಾ ಯೋಜಿಸುವಿಕೆಗಳು ಮುಗಿದಾಗ, 90 00:05:16,400 --> 00:05:18,694 ನೀವು ಅದ್ಭುತವಾಗಿ ಸಮಯ ಕಳೆಯಲಿದ್ದೀರಿ. 91 00:05:18,777 --> 00:05:22,448 -ನೀವು ಹೇಳಿದ್ದು ಸರಿಯೆಂದು ಆಶಿಸುವೆ. -ಅದು ಚಂದದ ಪಾರ್ಟಿ ಆಗಲಿದೆ. 92 00:05:22,531 --> 00:05:24,742 -ನಾವು ಮನೆಗೆ ಹೋಗಬೇಕು. -ಸರಿ. 93 00:05:25,409 --> 00:05:26,410 ಹೋಗೋಣ, ಡೈಸಿ. 94 00:05:27,161 --> 00:05:28,829 ಎಷ್ಟು ಸುಂದರ ಚಿತ್ರ. 95 00:05:29,329 --> 00:05:32,166 ಅದು ನೀನಿರಬೇಕು, ನಿನ್ನ ಸೋದರಿ, ಮತ್ತು ನಿನ್ನ ತಾಯಿ? 96 00:05:32,374 --> 00:05:33,584 ಮತ್ತೆ ಅವರು ಯಾರು? 97 00:05:33,667 --> 00:05:34,501 ಅವನು ಗಸ್. 98 00:05:34,585 --> 00:05:37,337 -ಗಸ್ ಯಾರು? -ಡೈಸಿ, ಹೋಗೋಣ. 99 00:05:37,421 --> 00:05:38,630 ಕ್ಷಮಿಸಿ, ನಾವು ತೆರಳಬೇಕು. 100 00:05:39,381 --> 00:05:40,382 ಧನ್ಯವಾದ. 101 00:05:40,716 --> 00:05:41,550 -ಆಯಿತು. -ಹೋಗೋಣ. 102 00:05:42,384 --> 00:05:43,218 ಬೈ. 103 00:05:53,812 --> 00:05:56,899 ದಿ ಪೀಕ್ 104 00:06:27,096 --> 00:06:30,307 -ನನಗೆ ಗೊತ್ತು, ಆದರೆ ನಾನು ಸಹಾಯ ಮಾಡಲಾಗದು. -ಏಕಿಲ್ಲ? 105 00:06:31,016 --> 00:06:32,643 ಏಕಂದ್ರೆ, ಇದು ನಿಮ್ಮ ಪ್ರಾಜೆಕ್ಟ್. 106 00:06:32,726 --> 00:06:34,520 ಆಂಟಿ ಹಿಲರಿ! ಬಾಗಿಲು ಹಿಡಿದುಕೊಳ್ಳಿ! 107 00:06:34,812 --> 00:06:36,814 -ಬಾಗಿಲು ಹಿಡಿದುಕೊಳ್ಳಿ, ದಯವಿಟ್ಟು. -ಓಡಬೇಡಿ. 108 00:06:36,897 --> 00:06:38,607 ಮಕ್ಳೇ, ನಾನೇನು ಹೇಳಿದೆ... 109 00:06:55,165 --> 00:06:56,291 ನೀವು... 110 00:06:57,501 --> 00:07:00,295 ನಾಳೆ ಕ್ಲಾರ್ಕ್ ಜನ್ಮದಿನಾಚರಣೆಗೆ ಆಮಂತ್ರಣ ಸಿಕ್ಕಿದೆಯೇ? 111 00:07:03,257 --> 00:07:06,343 ಹೌದು. ನಮಗೆ ಬರಲು ಸಾಧ್ಯವಿಲ್ಲ. ನಮಗೆ... ನಮಗೆ ಬೇರೆ ಕಾರ್ಯಕ್ರಮವಿದೆ. 112 00:07:07,010 --> 00:07:08,720 ನಮ್ಮ ಶುಭಕಾಮನೆಗಳನ್ನು ಕ್ಲಾರ್ಕ್ ಗೆ ತಿಳಿಸಿ. 113 00:07:08,804 --> 00:07:09,763 ನನಗೆ ಅರ್ಥವಾಗಿದೆ. 114 00:07:13,183 --> 00:07:15,435 ನನಗೆ ಗೊತ್ತು, ವಿಷಯಗಳು... 115 00:07:20,983 --> 00:07:21,984 ಅಂದರೆ ನಾನು... 116 00:07:25,070 --> 00:07:26,697 ನೀನು ಬಂದಿದ್ದರೆ ತುಂಬಾ ಒಳ್ಳೆಯದಿತ್ತು. 117 00:07:31,034 --> 00:07:32,411 ನಾನು ಡೇವಿಡ್ ಜೊತೆ ಮಾತನಾಡುವೆ. 118 00:07:50,387 --> 00:07:52,306 -ಎಸ್ಸಿ, ನಾವು ಮನೆಗೆ ಬಂದೆವು. -ಹಾಯ್, ಎಸ್ಸಿ. 119 00:07:52,389 --> 00:07:53,724 -ಹಲೋ. -ಹೇ. 120 00:07:53,807 --> 00:07:55,434 -ಹಾಯ್, ಎಸ್ಸಿ. -ಅಜ್ಜಿ, ಅಜ್ಜ. 121 00:07:55,517 --> 00:07:57,853 ಕ್ಷಮಿಸಿ, ಅವರು ಈಗ ಬಂದರು. ನಾನು... 122 00:07:57,936 --> 00:07:59,229 -ಚಿಂತೆಯಿಲ್ಲ. -ಹಾಯ್, ಅಜ್ಜ. 123 00:07:59,313 --> 00:08:02,232 ನೀವು ಇಂದು ಹೋಟೆಲಿನಲ್ಲಿ ವಿಶ್ರಾಂತಿ ಪಡೆಯುವಿರಿ ಅಂದುಕೊಂಡೆ. 124 00:08:02,316 --> 00:08:04,985 -ನಮಗೆ ಬೇಜಾರಾಯಿತು, ಮಕ್ಕಳನ್ನು ನೋಡಬೇಕಿತ್ತು. -ಅಂಕಲ್ ಪೀಟರ್ ಎಲ್ಲಿ? 125 00:08:05,110 --> 00:08:08,238 -ಅವನು ಮಲಗಿದ್ದಾನೆ. ಅವನಿಗೆ ಜೆಟ್ ಲ್ಯಾಗ್. -ನಂಗೆೆ ಹಸಿವಾಗುತ್ತಿದೆ. 126 00:08:08,322 --> 00:08:09,156 ಆಸ್ಟ್ರೇಲಿಯಾ ಶೋಧ ಪ್ರದೇಶ 127 00:08:09,239 --> 00:08:10,449 ಸ್ವಲ್ಪ ತಾಜಾ ಹಣ್ಣು ತಂದಿರುವೆ. 128 00:08:10,532 --> 00:08:11,366 -ಮ್ಯಾಂಗೊ! -ವಾಹ್! 129 00:08:11,491 --> 00:08:13,452 ನಿಲ್ಲಿ. ಕೈತೊಳೆಯಿರಿ. 130 00:08:13,535 --> 00:08:15,662 ಎಸ್ಸಿ, ಮನೆಗೆ ಬಂದ ನಂತರ ಅವರು ಕೈತೊಳೆಯುವಂತೆ ನೋಡಿಕೋ. 131 00:08:15,746 --> 00:08:17,456 -ಆಯಿತು, ಮ್ಯಾ'ಮ್. -ಧನ್ಯವಾದ, ಎಸ್ಸಿ. 132 00:08:18,123 --> 00:08:20,751 ಇಂತಹ ಕೆಟ್ಟದ್ದನ್ನು ನೋಡಲು ಆಕೆಗೆ ಏಕೆ ಅನುಮತಿಸುವೆ? 133 00:08:21,668 --> 00:08:25,464 ಆಕೆಗೆ ಸುದ್ದಿಯೆಂದರೆ ಅಚ್ಚುಮೆಚ್ಚು. ಅದರ ಬಗ್ಗೆ ನನಗೇನೂ ಮಾಡಲು ಸಾಧ್ಯವಿಲ್ಲ. 134 00:08:27,299 --> 00:08:29,092 ಜಿಂಗ್, ನನ್ನ ಕಪ್ಗಳನ್ನು ತೆಗೆದೆಯಾ? 135 00:08:29,176 --> 00:08:32,804 ಅದನ್ನು ಆ ಕ್ಯಾಬಿನೆಟಿನಲ್ಲಿ ಇರಿಸಿದೆ. ಅಲ್ಲಿಯೇ ಅದು ಸರಿ. 136 00:08:36,099 --> 00:08:38,268 ಈ ಪಾರ್ಟಿ ಒಳ್ಳೆಯ ಐಡಿಯಾ ಎಂದು ನನಗನಿಸದು. 137 00:08:38,352 --> 00:08:39,895 -ತುಂಬಾ ಬೇಸರ ಮೂಡಿಸ್ತದೆ. -ಒಪ್ತೇನೆ. 138 00:08:39,978 --> 00:08:44,191 ನಾವು ಇಲ್ಲಿ ಒಂದು ರೀತಿಯ ಸಹಜತೆ ಮೂಡಿಸಲು ಯತ್ನಿಸುತ್ತಿರುವೆವು. 139 00:08:44,274 --> 00:08:46,318 ಆದರೆ ಮಾರ್ಗರೆಟ್, ನಿಮ್ಮ ಜೀವನ ಇನ್ನು ಸಹಜವಲ್ಲ. 140 00:08:46,401 --> 00:08:48,278 -ಎಲ್ಲಾ ಮಾವಿನ ಹಣ್ಣ ತಿನ್ನಬೇಡ. -ಹಾಗೆಂದು ಏಕೆ ನಟಿಸಬೇಕು? 141 00:08:48,362 --> 00:08:49,738 ಹೇ, ಯಾರಿಗೆ ಆಟ ಆಡಬೇಕು? 142 00:08:49,821 --> 00:08:51,698 -ಒಂದು ಆಟ ಆಡೋಣ. -ನಾವು ಟಿವಿ ನೋಡುತ್ತಿದ್ದೇವೆ. 143 00:09:00,666 --> 00:09:02,960 ಅಮ್ಮಾ? ನಾನು ಚಾಕಲೇಟ್ ಹಾಲು ಕುಡಿಯಲೇ? 144 00:09:06,171 --> 00:09:08,590 ಆಯಿತು. ಸರಿ, ಸರಿ, ಖಂಡಿತ. 145 00:09:10,133 --> 00:09:11,885 -ಫಿಲಿಪ್? -ಏನು? 146 00:09:12,427 --> 00:09:13,428 ಯಾರು... 147 00:09:15,430 --> 00:09:17,599 ಈ ಚಿತ್ರದಲ್ಲಿ ಯಾರಿದ್ದಾರೆ? 148 00:09:18,767 --> 00:09:19,726 ಅದು ಏಸು ಕ್ರಿಸ್ತ. 149 00:09:20,811 --> 00:09:23,146 ಏಸು ಕ್ರಿಸ್ತ? ಏಕೆ ಕ್ರಿಸ್ತನ ಚಿತ್ರ ಬಿಡಿಸುವೆ? 150 00:09:24,481 --> 00:09:26,650 ಅವನ ಚಿತ್ರ ನೀನು ಬಿಡಿಸುವುದು ಬೇಕಿಲ್ಲ, ಸರಿಯಾ? 151 00:09:26,733 --> 00:09:27,943 ಸರಿ, ಅಮ್ಮಾ. 152 00:09:32,447 --> 00:09:35,075 ಹೇ, ಮಗು. ಇಲ್ಲಿ ಬಾ. 153 00:09:41,707 --> 00:09:43,917 ನಿನ್ನನ್ನು ತುಂಬಾ ಪ್ರೀತಿಸುವೆ. 154 00:09:44,751 --> 00:09:45,919 ಅದು ನಿನಗೆ ಗೊತ್ತಲ್ಲವೇ? 155 00:09:46,753 --> 00:09:48,005 ನಾನೂ ನಿನ್ನ ತುಂಬಾ ಪ್ರೀತಿಸುವೆ. 156 00:09:57,639 --> 00:09:58,974 ಹೋಗಿ ಚಾಕಲೇಟ್ ಹಾಲು ಕುಡಿ. 157 00:09:59,558 --> 00:10:00,642 ಧನ್ಯವಾದ, ಅಮ್ಮಾ. 158 00:10:09,192 --> 00:10:13,947 "ದೇವರು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮನ್ನು ಪ್ರತಿದಿನ ಸುರಕ್ಷಿತವಾಗಿರಿಸಲಿ. 159 00:10:15,115 --> 00:10:17,617 -ದೇವರು ನಿಮ್ಮ ಜೊತೆಗಿರಲಿ. -ನಿನ್ನ ಜೊತೆಗೂ ಇರಲಿ. 160 00:10:17,701 --> 00:10:20,662 "ದೇವರ ಉಪಸ್ಥಿತಿ ಮತ್ತು ಪ್ರೀತಿ ನಿಮ್ಮನ್ನು ಸುತ್ತುವರಿದಿದೆ ಎಂದು ತಿಳಿಯಿರಿ." 161 00:10:20,912 --> 00:10:23,373 "ದೇವರ ದಯೆ ಸದಾ ಇರಲಿದೆ." 162 00:10:23,957 --> 00:10:27,753 ತಾಯಿ ಕೋಳಿಯಂತೆ, ದೇವರು ಆಕೆಯ ರೆಕ್ಕೆಗಳಡಿ ನಿಮಗೆ ಆಶ್ರಯ ನೀಡುತ್ತಾನೆ. 163 00:10:28,962 --> 00:10:33,050 ಮಾನವ ಜನಾಂಗದ ಮೇಲಿನ ನಿನ್ನ ಪ್ರೀತಿಯಲ್ಲಿ ದೇವರು ಸದಾ ನೆಲೆಸಿದ್ದಾನೆ. 164 00:10:33,133 --> 00:10:35,427 ನೀ ನಿನ್ನ ಪುತ್ರ ಏಸುವನ್ನು ಕಳಿಸಿದೆ 165 00:10:36,053 --> 00:10:40,432 ಈ ಭೂಮಿಯಲ್ಲಿ ನಡೆದಾಗ ಇಲ್ಲಿರುವ ಮನುಷ್ಯರಂತೆಯೇ ಇದ್ದ. 166 00:10:41,725 --> 00:10:43,477 ನಮ್ಮಂತೆಯೇ ಆತನೂ ಕಷ್ಟಪಟ್ಟವನು. 167 00:10:44,936 --> 00:10:47,898 ಆತ ನೋವು ಮತ್ತು ಭಯ ಅನುಭವಿಸಿದವನು. 168 00:10:56,907 --> 00:11:00,285 -ಕೆಟ್ಟ ಹುಡುಗಿಯಾಗಿದ್ದೆ, ಅಲ್ಲವೇ, ಬನ್ನಿ? -ನಾನು ತುಂಬಾ ಕೆಟ್ಟವಳಾಗಿದ್ದೆ. 169 00:11:00,410 --> 00:11:03,747 -ನೀನು ಶಿಕ್ಷೆಗೆ ಅರ್ಹಳು. -ನಿಜವಾಗಿಯೂ. ನನಗೆ ಹೊಡಿ. 170 00:11:03,830 --> 00:11:06,041 -ಏನು ಮಾಡಬೇಕು? -ನನಗೆ ಹೊಡಿ, ಡರ್ಕ್. 171 00:11:07,876 --> 00:11:10,295 ಇನ್ನೂ ಜೋರಾಗಿ. ಹೊಡಿ. 172 00:11:14,633 --> 00:11:15,467 ನಂತರ ಭೇಟಿಯಾಗುವೆ. 173 00:11:17,302 --> 00:11:19,012 -ನಂತರ ಭೇಟಿಯಾಗುವೆ ಎಂದೆ. -ಸರಿ. 174 00:11:25,268 --> 00:11:27,062 "ಡರ್ಕ್" ಯಾವ ರೀತಿಯ ಹೆಸರು? 175 00:11:29,689 --> 00:11:31,191 ಅದು ಬಿಳಿಯ ವ್ಯಕ್ತಿಯ ಹೆಸರು. 176 00:11:31,400 --> 00:11:36,947 ಚೆಟ್ ಅಥವಾ ಟಕ್ಕರ್ ಅಥವಾ ಸ್ಕೀಟ್ ಅಥವಾ ಡೇವಿಡ್ ಥರ. 177 00:11:40,492 --> 00:11:42,661 ಕೊರಿಯನ್ನರಿಗೆ ಸಹ ಸಾಕಷ್ಟು ವಿಚಿತ್ರ ಹೆಸರುಗಳಿವೆ. 178 00:11:42,744 --> 00:11:48,166 -ಉರಿ, ಯುಕಿ, ಸುಕಿ ರೀತಿ. -ಅವುಗಳು ಜಪಾನಿ ಹೆಸರುಗಳು. 179 00:11:48,250 --> 00:11:50,877 ನಿಜವಾಗಿ, ಅಲ್ಲ. ಸುಕಿ ಹೆಸರಿನ ಕೊರಿಯನ್ ಹುಡುಗಿ ನನಗೆ ಗೊತ್ತು. 180 00:11:51,670 --> 00:11:52,629 ನಿನಗೆ ಗೊತ್ತಿತ್ತು ಖಂಡಿತ. 181 00:12:00,929 --> 00:12:01,763 ಸರಿ. 182 00:12:01,847 --> 00:12:03,473 ನಂತರ ಭೇಟಿಯಾಗುವೆ, ಡರ್ಕ್. 183 00:12:21,074 --> 00:12:21,992 ಎಷ್ಟು? 184 00:12:22,492 --> 00:12:23,577 60. 185 00:12:31,209 --> 00:12:32,169 ತಗೊಳ್ಳಿ. 186 00:12:39,134 --> 00:12:40,177 ಧನ್ಯವಾದ. 187 00:15:40,231 --> 00:15:41,941 ಈ ಬಸ್ ದೇವಸ್ಥಾನದ ರಸ್ತೆ ಮೂಲಕ ಸಾಗುತ್ತದೆಯೇ? 188 00:15:42,025 --> 00:15:44,944 ಮರೆತುಬಿಡು. ಮುಂದಿನ ಸ್ಟಾಪಿನಲ್ಲಿ ಇಳಿಯೋಣ. 189 00:15:46,154 --> 00:15:47,447 ನಾವು ತಪ್ಪಾದ ಬಸ್ ಹತ್ತಿದ್ದೇವೆಯೇ? 190 00:15:47,906 --> 00:15:49,240 ನನಗೆ ಹಾಗನಿಸುತ್ತಿಲ್ಲ. 191 00:15:50,700 --> 00:15:51,534 ಯುವತಿ. 192 00:15:51,826 --> 00:15:53,662 ಈ ಬಸ್ ದೇವಸ್ಥಾನದ ರಸ್ತೆಯಲ್ಲಿ ನಿಲ್ಲುತ್ತದೆಯೇ? 193 00:15:55,455 --> 00:15:56,915 ನಾನು ಕೊರಿಯನ್. 194 00:15:58,375 --> 00:15:59,668 ಅಲ್ಲಿ ನಿಲುಗಡೆ ಇದೆಯೇ? 195 00:15:59,751 --> 00:16:00,960 ಆಕೆ ಕೊರಿಯನ್. 196 00:16:01,461 --> 00:16:02,879 ಕೊರಿಯನ್? 197 00:16:02,962 --> 00:16:04,297 ಆಕೆೆ ಕ್ಯಾಂಟೊನೀಸ್ ಮಾತನಾಡುವುದಿಲ್ಲವೇ? 198 00:16:04,547 --> 00:16:05,799 ಇಲ್ಲ ಅನಿಸುತ್ತದೆ. 199 00:16:05,882 --> 00:16:07,550 ಆಕೆ ಕೊರಿಯನ್ ಎಂದು ಹೇಳಿದಳು. 200 00:16:15,892 --> 00:16:16,726 ಹೇ, ಪೂರಿ. 201 00:16:16,810 --> 00:16:18,645 ಡ್ರೈ ಕ್ಲೀನಿಂಗ್ ತಗೊಂಡೆಯಾ? 202 00:16:18,728 --> 00:16:19,979 ರಾತ್ರಿಯ ಪಾರ್ಟಿಗೆ ಅದು ಬೇಕಿದೆ. 203 00:16:20,063 --> 00:16:21,564 ಸ್ಯಾಮ್ ಅದನ್ನು ಈಗ ಪಿಕಪ್ ಮಾಡುತ್ತಾನೆ. 204 00:16:22,482 --> 00:16:24,234 ಓಹ್, ಮತ್ತು ಪೂರಿ... 205 00:16:24,484 --> 00:16:26,986 -ಪೀನಟ್ ತುಂಬಾ ಬೊಗಳುತ್ತಿದೆಯೇ? -ಹೌದು, ಮ್ಯಾ'ಮ್. 206 00:16:27,070 --> 00:16:28,279 ಬೆಳಿಗ್ಗೆಯಿಂದ ಬೊಗಳುತ್ತಿದೆ. 207 00:16:32,784 --> 00:16:33,618 ಧನ್ಯವಾದ. 208 00:16:41,084 --> 00:16:45,171 ಮರ್ಸಿ! ನೀನು ಬರುತ್ತೀಯೆಂದು ನನಗನಿಸಿರಲಿಲ್ಲ. ಕುಳಿತುಕೋ, ಕುಳಿತುಕೋ. 209 00:16:45,255 --> 00:16:46,256 ಧನ್ಯವಾದ. 210 00:16:46,381 --> 00:16:48,007 ನಿಮಗೆ ನನ್ನ ಸ್ನೇಹಿತೆ ಮರ್ಸಿ ಗೊತ್ತಲ್ಲ? 211 00:16:48,091 --> 00:16:50,051 ಹಾಯ್. ನಾನು ಲೂಸಿಯಾ. ನಾವು ಭೇಟಿಯಾಗಿಲ್ಲ. 212 00:16:50,135 --> 00:16:52,262 -ಹಾಯ್. -ಮರ್ಸಿ, ನೀನೇನು ಮಾಡುತ್ತಿರುವೆ? 213 00:16:52,345 --> 00:16:53,930 ನಾನು ಫಿಲೇನಳ ಸ್ನೇಹಿತೆ. 214 00:16:54,848 --> 00:16:57,267 ನಾನು ಇನ್ನೂ ಕೆಲ ಕೆಲಸಗಳನ್ನು ಮಾಡುತ್ತೇನೆ. 215 00:16:57,350 --> 00:16:59,185 ನಾನು ಹಾಂಕಾಂಗ್ ಪೋಸ್ಟ್ ಗೆ ಬರೆಯುತ್ತಿದ್ದೆ. 216 00:16:59,269 --> 00:17:02,814 ನಾನು ಹೋಸ್ಟೆಸ್ ಆಗಿದ್ದೆ, ಆದರೆ ನನ್ನ ಬಾಸ್ ಬಹಳಷ್ಟು ಕಿರುಕುಳ ನೀಡಿದ. ಅದಕ್ಕೆ ತೊರೆದೆ. 217 00:17:03,606 --> 00:17:05,483 ಟ್ಯೂಷನ್ ಕೊಡುತ್ತಿದ್ದ ಶ್ರೀಮಂತ ಹುಡುಗನಿದ್ದ, 218 00:17:05,567 --> 00:17:08,486 ಆದರೆ ಅಮ್ಮ ಸೈಕೊ ಆಗಿದ್ದಳು, ನನ್ನನ್ನು ಕಿತ್ತೆಸೆದಳು, ಈಗ ನಾನು 219 00:17:08,570 --> 00:17:12,240 -ಒಂದಿಷ್ಟು ಕೇಟರಿಂಗ್ ಕೆಲಸ ಮಾಡುತ್ತಿರುವೆ. -ಚೆನ್ನಾಗಿದೆ... 220 00:17:20,248 --> 00:17:23,293 -ನಿನಗೆ ಶಾಂಪೇನ್ ಬೇಕೇ? -ನನಗೆ ಒಂದು ಫ್ರೆಂಚ್ 75 ದೊರೆಯಬಹುದೇ? 221 00:17:23,376 --> 00:17:26,129 -ಖಂಡಿತ. -ನನಗೂ ಫ್ರೆಂಚ್ 75 ತುಂಬಾ ಇಷ್ಟ. 222 00:17:26,212 --> 00:17:27,422 ಅದ್ಭುತ! 223 00:17:27,505 --> 00:17:30,008 -ಅದರಲ್ಲಿ ಶಾಂಪೇನ್ ಇದೆಯಲ್ಲವೇ? -ಮತ್ತು ಜಿನ್ ಹಾಗೂ ನಿಂಬೆ. 224 00:17:30,091 --> 00:17:32,761 ಓ, ದೇವರೇ, ಅದು ಅದ್ಭುತ. ಅವುಗಳಲ್ಲೊಂದನ್ನು ತೆಗೆದುಕೊಳ್ಳಬಹುದೇ? 225 00:17:32,844 --> 00:17:33,845 -ಖಂಡಿತ. -ಧನ್ಯವಾದ. 226 00:17:33,928 --> 00:17:35,555 -ಖಂಡಿತ. -ಧನ್ಯವಾದ. 227 00:17:35,638 --> 00:17:36,514 ಧನ್ಯವಾದ. 228 00:17:37,098 --> 00:17:40,101 -ಕಾಕ್ಟೇಲ್ ಬಗ್ಗೆ ನಿನಗೆ ಇಷ್ಟು ಹೇಗೆ ಗೊತ್ತು? -ಅದು ಕೇವಲ... 229 00:17:40,185 --> 00:17:43,813 -ಆಕೆ ಕಾಲೇಜಿನಲ್ಲಿ ಬಹಳಷ್ಟು ಕುಡಿಯುತ್ತಿದ್ದಳು. -ನಾವು ಬಹಳಷ್ಟು ಕುಡಿಯುತ್ತಿದ್ದೆವು. 230 00:17:43,897 --> 00:17:45,607 ಇಲ್ಲ, ನೀನು ನಶೆಯ ಕಥೆಗಳನ್ನು ಹೊಂದಿದ್ದೀಯಾ. 231 00:17:45,690 --> 00:17:48,443 -ನಾನೂ ಕೆಲವು ಕೇಳಿದ್ದೇನೆ. ನೀನು... -ಇಲ್ಲ! ಇಲ್ಲ, ಇಲ್ಲ, ಇಲ್ಲ. 232 00:17:48,526 --> 00:17:49,986 -ಇಲ್ಲ, ಖಂಡಿತ ಆಕೆಗೆ ಹೇಳಿಲ್ಲ. -ಏನು? 233 00:17:50,069 --> 00:17:50,904 -ಫಿಲೇನ! -ಏನು? 234 00:17:59,454 --> 00:18:00,538 ನಾನು ಸಹಾಯ ಮಾಡುವೆ. 235 00:18:04,876 --> 00:18:06,628 ಪಾರ್ಟಿ ಬಗ್ಗೆ ಖುಷಿಯಾಗ್ತಿದೆಯೇ? 236 00:18:07,754 --> 00:18:08,755 ನಂಗೆ ಹಾಗನಿಸುತ್ತದೆ. 237 00:18:09,964 --> 00:18:12,217 ಚೆನ್ನಾಗಿ ಆನಂದಿಸು ಆಯಿತಾ? 238 00:18:16,679 --> 00:18:19,390 -ಫ್ರೆಂಚ್ ಬ್ರೈಡ್ಸ್ ಹಾಕೋಣವೇ? -ನನಗೆ ಆರು ವರ್ಷ ಅಲ್ಲ, ಅಮ್ಮಾ. 239 00:18:20,266 --> 00:18:21,893 ನಾನು ನನ್ನ ಹೆಡ್ ಬ್ಯಾಂಡ್ ಅನ್ನೇ ಧರಿಸುವೆ. 240 00:18:25,480 --> 00:18:26,606 ಸರಿ. 241 00:18:31,110 --> 00:18:34,989 ವಾವ್. ಚಂದದ ಡ್ರೆಸ್. 242 00:18:36,825 --> 00:18:37,992 ನಿನಗೆ ಹೇಗನಿಸುತ್ತದೆ? 243 00:18:40,161 --> 00:18:41,162 ವಯಸ್ಸಾದಂತೆ. 244 00:18:43,540 --> 00:18:44,624 ಚೆನ್ನಾಗಿ ಕಾಣಿಸುತ್ತಿರುವೆ. 245 00:18:48,586 --> 00:18:49,796 ಚೆನ್ನಾಗಿರುವೆ ತಾನೇ? 246 00:18:50,421 --> 00:18:52,340 ನಿನ್ನ ಹೆತ್ತವರು ಹೇಳಿದ್ದು ಸರಿ ಅನಿಸುತ್ತದೆಯೇ? 247 00:18:54,551 --> 00:18:55,593 ಪಾರ್ಟಿ ಬಗ್ಗೆ. 248 00:18:57,095 --> 00:18:58,304 ನಾವು ಕಾಯಬೇಕಿತ್ತೇ? 249 00:18:59,305 --> 00:19:01,516 ನಾವು ಜೀವನ ಆನಂದಿಸಬೇಕೆಂದು ಡಾ. ಸ್ಟೈನ್ ಹೇಳಿದ್ದರು. 250 00:19:01,599 --> 00:19:03,184 ಸರಿ ತಾನೇ? ಅದೊಂದೇ ಮಾರ್ಗವಿರುವುದು. 251 00:19:03,268 --> 00:19:04,394 ಒಂದು ಪಾದ ಇನ್ನೊಂದರ ಮುಂದೆ. 252 00:19:05,937 --> 00:19:08,398 ಹೇ. ಅದನ್ನು ಗಸ್ ಗೆ ದ್ರೋಹವೆಂದು ನಾವು ತಿಳಿಯಲಾಗದು... 253 00:19:08,481 --> 00:19:12,569 -ಅಮ್ಮಾ! ಅಮ್ಮಾ! ನಿಲ್ಲಿಸು! -ಅಮ್ಮಾ! ನಿಲ್ಲಿಸು ಅದನ್ನು! 254 00:19:12,652 --> 00:19:14,362 -ಅಮ್ಮಾ! -ನಿಲ್ಲಿಸು! 255 00:19:14,445 --> 00:19:17,991 -ಅಮ್ಮಾ! ನನ್ನ ಶೋ ನೋಡಲು ಆಕೆ ಬಿಡುತ್ತಿಲ್ಲ! -ಅದನ್ನು ನಿಲ್ಲಿಸು! ನಿಲ್ಲಿಸು! ನಿಲ್ಲಿಸು! 256 00:19:18,074 --> 00:19:21,119 ಫಿಲ್, ಮಗು, ನೀನು ತಯಾರಾಗಬೇಕು. ನಾವು ತಡವಾಗಲಿರುವೆವು. ಅದನ್ನು ನನಗೆ ಕೊಡು. 257 00:19:23,121 --> 00:19:24,581 ಅಮ್ಮಾ, ನಾನೀಗಾಗಲೇ ಸಿದ್ಧಳಾಗಿರುವೆ! 258 00:19:24,664 --> 00:19:26,082 ಇದು ಸಾಕಷ್ಟು ಒತ್ತಡಕಾರಕ. 259 00:19:26,165 --> 00:19:28,626 ನಾ ಗಮನಿಸುತ್ತಿರುವೆ, ಅವರಿನ್ನೂ ವಿಮಾನವನ್ನು ಪತ್ತೆಮಾಡಿಲ್ಲ. 260 00:19:28,710 --> 00:19:31,045 ನಂಗೆ ಸಿಕ್ತು. ಹೋಗೋಣ. 261 00:19:31,129 --> 00:19:32,672 ಅವರಿಗೆ ಅದು ಸಿಗ್ತದೆ, ಅಲ್ಲವೇ? 262 00:19:32,755 --> 00:19:35,758 ನಂಗೊತ್ತಿಲ್ಲ. ಹುಡುಕ್ತಾ ಇದ್ದಾರೆ. ಸಿಗ್ತದೆ. ನಾವು ಹೋಗೋಣ. 263 00:19:46,644 --> 00:19:47,478 ರಾತ್ರಿ ಭೇಟಿ ಸಾಧ್ಯವಿಲ್ಲ. ನಂಗೆ ಶಿಫ್ಟ್ ಇದೆ. 264 00:19:47,562 --> 00:19:48,980 ಆಕೆಯ ಇನ್ಸ್ಟಾಗ್ರಾಂ ಕಾಣ್ತಿಲ್ಲ. 265 00:19:49,063 --> 00:19:50,315 ನೀನು ಕೂಡ ಅದನ್ನು ಮಾಡಿದೆ. 266 00:19:51,024 --> 00:19:53,276 -ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮ! -ಆಕೆ ಸರಿ ಮಾಡಿದ್ದಾಳೆ. 267 00:19:53,359 --> 00:19:54,193 -ಆಕೆಗೆ ಹುಚ್ಚು -ಇಲ್ಲ 268 00:19:54,277 --> 00:19:57,989 -ಡರ್ಕ್ ಯಾರು? -ಅದು ಅವನ ನಿಜ ಹೆಸರಲ್ಲ. 269 00:19:58,072 --> 00:19:59,282 ಅದೊಂದು ರೀತಿಯ ಆಂತರಿಕ ಜೋಕ್. 270 00:19:59,365 --> 00:20:01,492 ನಿಲ್ಲು, ಈ ವ್ಯಕ್ತಿ ಯಾರು? 271 00:20:01,576 --> 00:20:03,036 -ಡರ್ಕ್? -ಅವನ ನಿಜ ಹೆಸರೇನು? 272 00:20:03,703 --> 00:20:07,290 -ಅವನೊಬ್ಬ ವ್ಯಕ್ತಿ. -ಬಿಳಿಯ ವ್ಯಕ್ತಿ? ಗೊತ್ತಾಗುತ್ತದೆ. 273 00:20:07,373 --> 00:20:10,501 ಹಾಗೆ ಹೇಳಬೇಡ, ಶೆಲ್ಲಾಕ್. ಖಂಡಿತ ಈ ಹಿಂದೆ ಬಿಳಿಯರನ್ನು ಡೇಟ್ ಮಾಡಿರುವೆ. 274 00:20:10,585 --> 00:20:12,587 ಕೆಲವು ಡೇಟಿಂಗ್ ಹೋಗಿದ್ದೆ, ಅದು ಬೇರೆ. 275 00:20:13,254 --> 00:20:15,465 ಇದು ಕೂಡ ಏನೂ ಗಂಭೀರವಲ್ಲ. ನಾವು ಮಜಾ ಮಾಡುತ್ತಿರುವೆವು. 276 00:20:16,132 --> 00:20:19,427 -ಸರಿ. -ಕ್ಷಮಿಸಿ, ನಾನು ತೆರಳಬೇಕು, ಸ್ನೇಹಿತರೇ. 277 00:20:19,510 --> 00:20:22,472 -ಏನು? ಈಗಲೇ? -ಡರ್ಕ್ ನನ್ನು ಕಾಯಿಸಲು ಸಾಧ್ಯವಿಲ್ಲ. 278 00:20:23,056 --> 00:20:26,184 ಈ ವ್ಯಕ್ತಿ ಯಾರೆಂದು ನೀ ಹೇಳ್ತಿಲ್ಲ ಎಂದು ನಂಗೆ ನಂಬ್ಲಿಕಾಗ್ತಿಲ್ಲ! 279 00:20:26,643 --> 00:20:28,311 ಅವ ಚೆನ್ನಾಗಿರಬೇಕು! 280 00:20:28,853 --> 00:20:29,687 ನನ್ನನ್ನು ನಂಬಿ. 281 00:20:30,563 --> 00:20:33,441 ಮತ್ತೆ ಕರೆ ಮಾಡ್ತೇನೆ! ನಂಗೆ ಎಲ್ಲಾ ತಿಳೀಬೇಕಿದೆ. 282 00:20:33,775 --> 00:20:35,693 ಈ ವ್ಯಕ್ತಿಯನ್ನು ಆಕೆ ಉಲ್ಲೇಖಿಲ್ಲ, ಇದು ವಿಚಿತ್ರ. 283 00:20:35,777 --> 00:20:37,278 ಯಾರೆಂದು ಯೋಚಿಸ್ತಿದ್ದೇನೆ. 284 00:20:47,914 --> 00:20:49,165 ಏನನ್ನು ನೋಡುತ್ತಿರುವೆ? 285 00:20:50,416 --> 00:20:52,877 ಕ್ರಿಸ್ಟೋಫರನ ನಾಯಿ ಸತತ ಬೊಗಳುತ್ತಿದೆ. 286 00:20:55,338 --> 00:20:56,339 ಛೀ 287 00:21:17,235 --> 00:21:20,822 -ಹೇ, ಏನು ಮಾಡುತ್ತಿರುವೆ? -ನೀನು ಅದನ್ನು ಧರಿಸುವೆಯಾ? 288 00:21:22,115 --> 00:21:24,283 ನಾನೇನು ಧರಿಸಿದರೂ ಯಾರಿಗೇನು? 289 00:21:24,367 --> 00:21:27,078 ಜನರು ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಎಂದು ಯೋಚಿಸಲು ಈಗ ತಡವಾಗಿದೆ. 290 00:21:27,161 --> 00:21:28,705 ನಿನ್ನ ಬಗ್ಗೆ ಯಾರೂ ಏನೂ ಅಂದ್ಕೊಂಡಿಲ್ಲ. 291 00:21:31,165 --> 00:21:32,041 ಏನು? 292 00:21:32,125 --> 00:21:34,377 304 ನಲ್ಲಿರುವ ಮಹಿಳೆ ನನ್ನನ್ನೇ ದಿಟ್ಟಿಸುತ್ತಿದ್ದಾಳೆ. 293 00:21:34,460 --> 00:21:35,545 ಟಿಲ್ಡಾ? 294 00:21:41,134 --> 00:21:42,343 ನಿನಗೆ ಹುಚ್ಚು. 295 00:22:04,407 --> 00:22:08,578 -ಹೇ, ನಿನ್ನ ರಜೆ ಹೇಗಿತ್ತು? -ಯಾವ ರಜೆ? 296 00:22:08,661 --> 00:22:11,330 ಏಳು ದಿನ ಸತತ ಕೆಲಸ ಮಾಡಿದ್ದೇನೆ, ಇವತ್ತನ್ನ ಸೇರಿಸದೆ. 297 00:22:11,414 --> 00:22:12,665 ನನ್ನ ಇಡೀ ದೇಹ ನೋಯುತ್ತಿದೆ. 298 00:22:12,749 --> 00:22:14,834 ಇಂದು ನಾ ಸ್ವಲ್ಪ ಮದ್ಯ ಸೇವಿಸಿದೆ, ಒಂದಿಡೀ ದಿನದ ವೇತನ 299 00:22:14,917 --> 00:22:17,420 -ನಂಗೆ ವೆಚ್ಚವಾಯಿತು. ಹಾಗೆ... -ಅದಕ್ಕೆ ಈಗಲೂ ಕೇವಿಯರ್ ಬೇಕಿದೆ. 300 00:22:17,503 --> 00:22:18,379 -ಅದನ್ನು ನಕಲಿಸು. -ಸರಿ. 301 00:22:20,673 --> 00:22:21,507 ಸಾಲ್ಮನ್ ಟಾರ್ಟರೆ? 302 00:22:23,634 --> 00:22:24,635 ಸಾಲ್ಮನ್ ಟಾರ್ಟರೆ? 303 00:22:27,555 --> 00:22:29,182 -ಸಾಲ್ಮನ್ ಟಾರ್ಟರೆ? -ಹಲೋ? 304 00:22:30,058 --> 00:22:32,518 ಹಲೋ. ಏನಿದು? 305 00:22:34,437 --> 00:22:35,438 ಸಾಲ್ಮನ್ ಟಾರ್ಟರೆ. 306 00:22:36,230 --> 00:22:39,442 ಇದರಲ್ಲಿ ಏನಿದೆ? ಇದು ಗ್ಲೂಟನ್ ಹೊಂದಿದೆಯಾ? 307 00:22:41,069 --> 00:22:44,655 ಅದು ವಾಂಟೊನ್ ಕ್ರಿಸ್ಪ್, ಅದಕ್ಕೆ... ಹೌದು. ಅದನ್ನು ಹಿಟ್ಟಿನಿಂದ ಮಾಡಲಾಗಿದೆ. 308 00:22:54,123 --> 00:22:56,000 ಇದಕ್ಕೆ ಹೋಗಲು ನೀ ಖಚಿತವಾಗಿ ಬಯಸುವೆಯಾ? 309 00:22:56,084 --> 00:22:59,712 ನಂಗೊತ್ತಿಲ್ಲ. ಮಾರ್ಗರೆಟ್ ನಿಂಗೆ ಮಾಡಿರೋದು ಸರಿಯಲ್ಲ. 310 00:22:59,796 --> 00:23:03,257 ನಾವು ಆತ್ಮೀಯರಾಗಿದ್ದೆವು. ಈಗ ಒಂದು ಕೊಠಡಿಯಲ್ಲಿರಲು ಆಗದು. 311 00:23:03,341 --> 00:23:05,676 ಒತ್ತಡ ಬೇಡ. ಅವರು ಒಂದೇ ಕಟ್ಟಡದಲ್ಲಿ ವಾಸಿಸುತ್ತಾರೆ, 312 00:23:05,760 --> 00:23:08,262 ಪ್ರತಿ ಬಾರಿ ಅವರನ್ನು ತಪ್ಪಿಸಿ ಸಾಕಾಗಿದೆ. 313 00:23:13,267 --> 00:23:14,227 ಏನು? 314 00:23:15,353 --> 00:23:16,687 ಮದ್ಯದ ವಾಸನೆ ಮೂಗಿಗೆ ಬಡಿಯುತ್ತಿದೆ. 315 00:23:19,524 --> 00:23:20,942 ನಾನು ಬಿಯರ್ ಸೇವಿಸಿದೆ. 316 00:23:22,568 --> 00:23:24,862 ಅಬ್ಬಾ, ಇದು ಪಾರ್ಟಿ ಅಲ್ಲವೇ? ನಾನು ಆರಂಭಿಸಿದ್ದೇನೆ. 317 00:23:24,946 --> 00:23:26,781 ನೀನು ನಿಲ್ಲಿಸುವೆ ಎಂದು ಹೇಳಿದ್ದೆ, ಡೇವಿಡ್. 318 00:23:26,864 --> 00:23:29,075 ನೀನು ಆ ರಾತ್ರಿ ಮದ್ಯ ಸೇವಿಸದೇ ಇದ್ದಿದ್ದರೆ, ಪ್ರಾಯಶಃ... 319 00:23:31,953 --> 00:23:35,498 -ಪ್ರಾಯಶಃ ಏನು? -ಅಂದರೆ ನೀನು ಸುಳ್ಳು ಹೇಳಿರದೇ ಇದ್ದರೆ 320 00:23:35,581 --> 00:23:38,000 ನೀನೆಲ್ಲಿ ಹೋಗಿದ್ದೆ ಎಂದು, ನೀನು ಸತ್ಯ ಹೇಳಿದ್ದರೆ... 321 00:23:38,084 --> 00:23:39,210 ಈಗ ಅದು ನನ್ನ ತಪ್ಪು, ಅಲ್ಲವೇ? 322 00:23:39,293 --> 00:23:41,921 ಇಲ್ಲ, ಖಂಡಿತ ಇಲ್ಲ. ನನ್ನಾಸೆ ಏನೆಂದರೆ... 323 00:23:44,882 --> 00:23:47,552 ಅದನ್ನು ಮರೆತು ಬಿಡೋಣ, ಸರಿಯೇ? ನನಗೆ... ನನಗೆ ಜಗಳ ಬೇಕಿಲ್ಲ. 324 00:23:51,597 --> 00:23:53,724 ನೀನು ಹೇಳಿದ್ದು ಸರಿ. ಸುಳ್ಳು ಹೇಳಿ ಸಾಕಾಗಿದೆ. 325 00:23:56,352 --> 00:23:57,770 ಇನ್ನು ನನ್ನಿಂದ ಸಾಧ್ಯವಿಲ್ಲ. 326 00:23:58,521 --> 00:24:01,357 -ಸ್ಯಾಮ್, ಬದಿಗೆ ನಿಲ್ಲಿಸುವೆಯಾ, ಪ್ಲೀಸ್? -ಏನು? ಏನು ಮಾಡುತ್ತಿರುವೆ? 327 00:24:01,440 --> 00:24:03,901 -ಸ್ಯಾಮ್, ಕಾರು ನಿಲ್ಲಿಸು. -ಬೇಡ. ಕಾರು ನಿಲ್ಲಿಸಬೇಡ, ಸ್ಯಾಮ್. 328 00:24:03,985 --> 00:24:05,653 ನನ್ನನ್ನು ಹೊರಗೆ ಬಿಡು. ನನಗೆ ಸಾಧ್ಯವಿಲ್ಲ. 329 00:24:05,736 --> 00:24:08,281 -ನೀನೇನು ಹೇಳುತ್ತಿರುವೆ? -ದಯವಿಟ್ಟು, ಸ್ಯಾಮ್, ನಿನ್ನಲ್ಲಿ ಬೇಡುವೆ. 330 00:24:08,364 --> 00:24:10,324 -ಕಾರು ನಿಲ್ಲಿಸುವೆಯಾ, ಪ್ಲೀಸ್? -ಬೇಡ, ಸ್ಯಾಮ್. 331 00:24:10,408 --> 00:24:12,034 -ಕಾರು ನಿಲ್ಲಿಸು! -ಹೀಗೆ ಮಾಡಲಾಗದು. 332 00:24:12,118 --> 00:24:14,537 ಪಾರ್ಟಿ ಬಗ್ಗೆ? ಅವರು ನಮ್ಮ ನಿರೀಕ್ಷೆಯಲ್ಲಿದ್ದಾರೆ. 333 00:24:15,788 --> 00:24:17,498 ಏನು ಮಾಡುತ್ತಿರುವೆ? ಚಲಾಯಿಸುತ್ತಿರು. 334 00:24:19,375 --> 00:24:21,919 ಡೇವಿಡ್, ಒಬ್ಬಂಟಿಯಾಗಿ ನಾನು ಆ ಪಾರ್ಟಿಗೆ ಹೋಗುವಂತೆ ಮಾಡಬೇಡ. 335 00:24:22,086 --> 00:24:24,005 ಹಾಗಿದ್ದರೆ ಹೋಗಬೇಡ. ಹೋಗಬೇಡ. 336 00:24:28,342 --> 00:24:31,971 ನೋಡು, ನಾನು ಅಲ್ಲಿಗೆ ಹೋಗಿ ವಾಪಸಾಗುವೆ, ನಿನ್ನನ್ನು ಮನೆಯಲ್ಲಿ ಭೇಟಿಯಾಗುವೆ, ಸರಿಯೇ? 337 00:24:32,054 --> 00:24:35,266 ನಿಲ್ಲು, ಎಲ್ಲಿ... ಎಲ್ಲಿಗೆ ಹೋಗುತ್ತಿರುವೆ? ಎಷ್ಟು ಹೊತ್ತಿಗೆ ವಾಪಸಾಗುವೆ? 338 00:24:50,656 --> 00:24:53,159 -ಜನ್ಮದಿನದ ಶುಭಾಶಯ, ಕ್ಲಾರ್ಕ್. -ಧನ್ಯವಾದ. ಆಗಮಿಸಿದ್ದಕ್ಕೆ ಧನ್ಯವಾದ. 339 00:24:53,242 --> 00:24:54,076 ಧನ್ಯವಾದ. 340 00:24:55,453 --> 00:24:56,662 ನನಗೆ ಹಸಿವಾಗುತ್ತಿದೆ. 341 00:24:56,746 --> 00:24:59,373 -ನಿನಗೆ ಇನ್ನಷ್ಟು ಆಹಾರ ಬೇಕೇ? -ಆಹಾರ ಚೆನ್ನಾಗಿಲ್ಲ. 342 00:24:59,457 --> 00:25:00,541 ಹಾಗಿಲ್ಲ, ಅಮ್ಮಾ. 343 00:25:00,625 --> 00:25:03,294 ಚೆನ್ನಾಗಿರುವುದೆಂದರೆ ಶ್ರಿಂಪ್ ಕಾಕ್ಟೇಲ್ ಮಾತ್ರ. 344 00:25:03,377 --> 00:25:06,255 ನಮ್ಮ 25ನೇ ವಾರ್ಷಿಕೋತ್ಸವದ ಆಹಾರ ನೆನಪಿತ್ತೇ, ಆ್ಯಂಡಿ? 345 00:25:07,006 --> 00:25:08,758 ಅದು ಸ್ವಾದಿಷ್ಟವಾಗಿತ್ತು. ಅತ್ಯುತ್ತಮ. 346 00:25:09,050 --> 00:25:12,094 ನೋಡಿದೆಯಾ? ನೀವು ಪಾರ್ಟಿ ಆಯೋಜಿಸಲು ಮನಗೆ ಬಂದಿದ್ದರೆ, 347 00:25:12,178 --> 00:25:14,972 -ನಾವು ಅದೇ ಕೇಟರರ್ ಅನ್ನು ನೇಮಿಸಬಹುದಿತ್ತು. -ಅಮ್ಮಾ, ಈಗ ಬೇಡ. 348 00:25:15,056 --> 00:25:18,351 -ಶಾಶ್ವತವಾಗಿ ವಾಪಸ್ ಬನ್ನಿ ಅಂತಿಲ್ಲ. -ಆದರೆ ನಿಂಗೆ ಅದೇ ಬೇಕೆಂದು ನಮಗೆ ಗೊತ್ತು. 349 00:25:18,434 --> 00:25:21,270 ನಾನು ಹಾಗೆ ಅಂದುಕೊಂಡಿದ್ದರೆ ಹಾಗೆಯೇ ಹೇಳುತ್ತಿದ್ದೆ. 350 00:25:21,354 --> 00:25:23,648 -ನೀನು ಅದನ್ನು ಬಹಳಷ್ಟು ಸಾರಿ ಹೇಳಿರುವೆ, ಜಿಂಗ್. -ಹೇ. 351 00:25:23,773 --> 00:25:24,982 ಪ್ಲೀಸ್... 352 00:25:25,066 --> 00:25:27,985 ನಿಮ್ಮ ವಾಗ್ವಾದ ಕೇಳಲು ನಾನು ಫಿಲೆಡೆಲ್ಫಿಯಾದಿಂದ ಬಂದಿಲ್ಲ. 353 00:25:28,069 --> 00:25:30,905 -ಹೇ, ಇದನ್ನು ಇಲ್ಲಿ ಮಾಡಬಾರದೇ? -ಮನೆಗೆ ಹೋದ ನಂತರ ಚರ್ಚಿಸೋಣ. 354 00:25:30,988 --> 00:25:34,075 ಚರ್ಚಿಸಲು ಏನೂ ಇಲ್ಲ. ನಾವು ಹಾಂಕಾಂಗ್ ತೊರೆಯುವುದಿಲ್ಲ. 355 00:25:39,080 --> 00:25:42,792 -ಛೀ. ಚೆನ್ನಾಗಿಲ್ಲ. -ಹಾಗಿದ್ದರೆ ತಿನ್ನಬೇಡ. 356 00:25:43,918 --> 00:25:47,255 -ನನಗೆ ತುಂಬಾ ಹಸಿವಾಗುತ್ತಿದೆ. -ನಿನಗೆ ಸ್ವಲ್ಪ ಶ್ರಿಂಪ್ ಕಾಕ್ಟೇಲ್ ಪಡೆಯೋಣ. 357 00:25:51,259 --> 00:25:52,176 ಆಕೆ ಹಠವಾದಿ. 358 00:25:53,678 --> 00:25:58,432 ನಡೆದಿರುವುದನ್ನೆಲ್ಲಾ ಗಮನಿಸಿದಾಗ, ಮಕ್ಕಳು ಮನೆಯಲ್ಲಿರಬೇಕೆಂದು ಅವರು ಬಯಸುತ್ತಾರೆ. 359 00:25:59,767 --> 00:26:02,436 -ಸ್ವಲ್ಪ ಸಮತೋಲನದಿಂದಿರುತ್ತೆ. -ಇದು ಅವರ ಮನೆ. 360 00:26:03,104 --> 00:26:05,523 ನನ್ನ... ಕ್ಷಮಿಸು, ಪೀಟರ್. ನಿನಗೆ ಜೋರು ಮಾಡುವ ಉದ್ದೇಶವಿರಲಿಲ್ಲ. 361 00:26:05,606 --> 00:26:08,192 ಚಿಂತೆಯಿಲ್ಲ. ನಾನು ಹೋಗಿ... 362 00:26:08,985 --> 00:26:10,528 ಸ್ವಲ್ಪ ಶ್ರಿಂಪ್ ಕಾಕ್ಟೇಲ್ ಪಡೆಯುವೆ. 363 00:26:14,824 --> 00:26:16,784 ಹೇ. ಅವರು ಇಲ್ಲಿ ಇನ್ನೂ ಕೆಲ ದಿನ ಮಾತ್ರ ಇರುವರು. 364 00:26:18,369 --> 00:26:20,871 ಸರಿ. ಅವರ ಬಗ್ಗೆ ಅಲ್ಲ, ಹಾಗೆಯೇ... 365 00:26:23,582 --> 00:26:26,502 -ಮಕ್ಕಳು ಆನಂದಿಸುತ್ತಿದ್ದಾರೆ. -ಹೌದು. 366 00:26:32,967 --> 00:26:34,385 ಎಲ್ಲಾ ಚೆನ್ನಾಗಿದೆಯಲ್ಲ? 367 00:26:35,678 --> 00:26:37,722 ಹೌದು. ಹೌದು, ನಾನು ಚೆನ್ನಾಗಿರುವೆ. 368 00:26:38,889 --> 00:26:42,351 -ಆ ಚಿತ್ರದ ಬಗ್ಗೆ ಯೋಚಿಸದೇ ಇರಲು ಆಗುತ್ತಿಲ್ಲ. -ಅದು ಕೇವಲ ಚಿತ್ರ. 369 00:26:42,435 --> 00:26:45,604 ಅವನ ತಲೆಯಲ್ಲಿ ಏಸು ಕ್ರಿಸ್ತ ಏಕಿರುತ್ತಾನೆ ಎಂದು ಅರ್ಥವಾಗುತ್ತಿಲ್ಲ. ನಾವು ಧಾರ್ಮಿಕರಲ್ಲ. 370 00:26:45,688 --> 00:26:49,900 -ಪ್ರಾಯಶಃ, ಬ್ರಯಾನ್ ಹೇಳಿರಬೇಕು. -ಮಹೋನಿಗಳು? ಅವರು ಬೌದ್ಧರು. 371 00:26:49,984 --> 00:26:52,737 ಪ್ರಾಯಶಃ ಆತನ ಇತರ ಸ್ನೇಹಿತರಿರಬೇಕು. ಅದು ಯಾರಾದರೂ ಆಗಿರಬಹುದು. 372 00:26:52,820 --> 00:26:53,904 ಅದು ಹೇಗೆ ಮುಖ್ಯ? 373 00:26:53,988 --> 00:26:56,532 ನೀನು ಈ ವಿಚಾರ ಏಕೆ ಮಾತನಾಡುವೆ ಎಂದು ತಿಳಿಯುತ್ತಿಲ್ಲ. 374 00:26:56,615 --> 00:26:58,784 ನಾವು ಪಾರ್ಟಿಯಲ್ಲಿ ಎಲ್ಲಾ ಸ್ನೇಹಿತರೊಂದಿಗೆ ಇದ್ದೇವೆ. 375 00:26:58,868 --> 00:27:02,413 -ನೀನು ಹೇಳಿದ್ದು ಸರಿ. ನನ್ನನ್ನು ಕ್ಷಮಿಸು. -ಚಿಂತೆಯಿಲ್ಲ. 376 00:27:02,496 --> 00:27:05,458 ಹೇ. ಖುಷಿಯಾಗಿ ಸಮಯ ಕಳೆಯಲು ದಯವಿಟ್ಟು ಯತ್ನಿಸುವೆಯಾ? 377 00:27:06,625 --> 00:27:08,419 ಖಂಡಿತಾ. ಮಾತು ಕೊಡುತ್ತೇನೆ. 378 00:27:10,379 --> 00:27:11,839 ಲವ್ ಯೂ. 379 00:27:12,631 --> 00:27:13,591 ಸರಿ. 380 00:27:20,806 --> 00:27:23,059 -ಕೆಲಸದಿಂದ ನೇರವಾಗಿ ಬಂದೆಯಾ? -ಏನು? 381 00:27:23,351 --> 00:27:24,310 ಇಲ್ಲ! ಇದು... 382 00:27:26,270 --> 00:27:27,938 ಸಿದ್ಧಗೊಳ್ಳುವಾಗ ಸ್ವಲ್ಪ ತಳಮಳವಾಯಿತು. 383 00:27:28,022 --> 00:27:29,815 ಹೇಗಿರಲಿದೆ ಎಂದು ತಿಳಿದಿರಲಿಲ್ಲ. 384 00:27:29,899 --> 00:27:33,486 ಅದು ಸಂಭ್ರಮಾಚರಣೆ ಆಗಲಿದೆಯೇ ಎಂದು. 385 00:27:33,569 --> 00:27:35,196 ಇದು ಜನ್ಮದಿನದ ಪಾರ್ಟಿ. 386 00:27:35,279 --> 00:27:37,865 ಹೌದು... ನಾನೇನು ಮಾತನಾಡುತ್ತಿರುವೆ ಎಂದು ನಿನಗೆ ಗೊತ್ತು. 387 00:27:43,371 --> 00:27:44,997 ನೋಡು. ಆಕೆ ಅಲ್ಲಿದ್ದಾಳೆ. 388 00:27:45,581 --> 00:27:49,085 ಅವ್ಳು ಹೇಗೆ ಇಷ್ಟನ್ನೆಲ್ಲಾ ಸಹಿಸ್ಕೊಳ್ತಿದ್ದಳೋ, ಗೊತ್ತಿಲ್ಲ. 389 00:27:49,668 --> 00:27:51,629 ಹಾಗೇನಾದರೂ ನನಗಾಗಿದ್ದರೆ... 390 00:27:52,797 --> 00:27:54,090 ನಾನು ಆತ್ಮಹತ್ಯೆ ಮಾಡ್ಕೋತಿದ್ದೆ. 391 00:27:55,132 --> 00:27:58,135 ಇದು 2014. ಅವರು ವಿಮಾನ ಕಳೆದುಕೊಳ್ಳುವುದು ಹೇಗೆ ಸಾಧ್ಯ? 392 00:27:58,219 --> 00:27:59,804 ಸಮುದ್ರ ವಿಸ್ತಾರವಾಗಿದೆ.. 393 00:27:59,929 --> 00:28:01,180 -ಚಿಕನ್ ಡಂಪ್ಲಿಂಗ್? -ಬೇಡ. 394 00:28:01,263 --> 00:28:03,849 ಭಯ ಹುಟ್ಟಿಸುತ್ತದೆ ಹಾಗೆ ನಾಪತ್ತೆಯಾಗುತ್ತಾರೆ ಎಂದು ಯೋಚಿಸುವಾಗ. 395 00:28:09,146 --> 00:28:10,272 ಎಕ್ಸ್ಕ್ಯೂಸ್ ಮಿ. 396 00:28:12,983 --> 00:28:16,737 ಅದೇನು? ಬೇಡ ಬಿಡಿ, ಧನ್ಯವಾದ. 397 00:28:19,156 --> 00:28:20,324 ಅದು ಚಾಕಲೇಟ್ ಹಾಲೇ? 398 00:28:23,452 --> 00:28:24,995 ನಾನು ಇನ್ನೂ ಸ್ವಲ್ಪ ತೆಗೆದುಕೊಳ್ಳಲೇ? 399 00:28:53,566 --> 00:28:57,862 ಜನ್ಮದಿನದ ಶುಭಾಶಯ ಕ್ಲಾರ್ಕ್ 50 400 00:29:28,726 --> 00:29:30,561 ಮಾರ್ಗರೆಟ್? ನಂಗನಿಸ್ತದೆ... 401 00:29:35,649 --> 00:29:37,526 ಮಾರ್ಗರೆಟ್? ಮಾರ್ಗರೆಟ್, ಹಾಯ್. 402 00:29:37,610 --> 00:29:42,114 ನನ್ನನ್ನು ಪಾರ್ಟಿಯಲ್ಲಿ ಕರೆಸಿದ್ದಕ್ಕೆ ಧನ್ಯವಾದ ಹೇಳಲು ಬಯಸುವೆ, ನಾನು... ಮಾರ್ಗರೆಟ್! 403 00:29:45,326 --> 00:29:46,911 ಹೋಗು. ಹೋಗು. 404 00:30:02,760 --> 00:30:07,014 ಇಲ್ಲಿದ್ದೀಯಾ. ಅವುಗಳು ಇನ್ನಷ್ಟು ನಿನ್ನ ಬಳಿ ಇವೆಯೇ... ಅವೇನು? 405 00:30:17,441 --> 00:30:18,609 ನೀನು ಮಾರ್ಗರೆಟಳನ್ನು ನೋಡಿದೆಯಾ? 406 00:30:19,818 --> 00:30:20,778 ಮರ್ಸಿ? 407 00:30:22,363 --> 00:30:24,198 ಮಾರ್ಗರೆಟ್! ಅಲ್ಲಿರುವೆ. 408 00:30:26,033 --> 00:30:27,535 -ಮಾರ್ಗರೆಟ್? -ಆಕೆ ಇಲ್ಲೇಕೆ ಬಂದಿರುವಳು? 409 00:30:27,618 --> 00:30:28,452 ಯಾರು? 410 00:30:30,704 --> 00:30:32,623 ಮರ್ಸಿ. ಆಕೆ ಇಲ್ಲೇನು ಮಾಡುತ್ತಿದ್ದಾಳೆ? 411 00:30:32,706 --> 00:30:34,083 -ಗೆಳತಿಯರು ಇಲ್ಲಿದ್ದಾರೆ. -ಇಲ್ಲ... 412 00:30:34,166 --> 00:30:36,126 ಆಕೆ ಸ್ನೇಹಿತೆಯಲ್ಲ, ಆಕೆ ಅಲ್ಲ... 413 00:30:36,210 --> 00:30:37,878 ಭಾಷಣಗಳಿಗೆ ನಿನ್ನ ವೇದಿಕೆ ಹತ್ತಿಸಬೇಕು. 414 00:30:37,962 --> 00:30:39,630 ಕ್ಲಾರ್ಕ್ಗೆ ನೀನು ನಿಜವಾಗಿಯೂ ಬೇಕು. 415 00:30:39,713 --> 00:30:40,631 ನನಗೆ ಅದನ್ನು ಕೊಡು. 416 00:30:40,714 --> 00:30:42,049 ಬಂದಿದ್ದಕ್ಕೆ ಎಲ್ಲರಿಗೂ ಧನ್ಯವಾದ. 417 00:30:42,466 --> 00:30:45,594 ನಿಮ್ಮನ್ನೆಲ್ಲಾ ನೋಡಿ ಖುಷಿಯಾಗಿದೆ. 418 00:30:46,178 --> 00:30:48,556 ನಿಮ್ಮಲ್ಲಿ ಹಲವರನ್ನು ನೋಡದೆ ತುಂಬಾ ಸಮಯವಾಗಿದೆ, ಮತ್ತು... 419 00:30:50,516 --> 00:30:54,562 ಪಾರ್ಟಿ ಆಯೋಜಿಸುವುದೂ ನಮಗೆ ಒಂದು ರೀತಿ ವಿಚಿತ್ರ ಅನಿಸುತ್ತದೆ, ಅದಕ್ಕಿಂತ ಹೆಚ್ಚಾಗಿ... 420 00:30:55,104 --> 00:30:57,731 ನನ್ನ ಮುದಿ ವಯಸ್ಸನ್ನು ಆಚರಿಸುವುದಕ್ಕಿಂತ ಹೆಚ್ಚು... 421 00:30:59,233 --> 00:31:01,193 ಈ ಅವಕಾಶವನ್ನು ನಾವು ಬಳಸಿ... 422 00:31:02,236 --> 00:31:05,239 ನಿಮಗೆಲ್ಲಾ ಧನ್ಯವಾದ ಹೇಳಬಯಸಿದೆವು, 423 00:31:05,823 --> 00:31:07,616 ಕಳೆದ ವರ್ಷ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ... 424 00:31:08,576 --> 00:31:12,746 ನಡೆದಿರುವುದಕ್ಕೆ, ಮತ್ತು ಪ್ರಾಯಶಃ ನಮ್ಮ ಜೀವನಗಳ ಅತ್ಯಂತ ಕಷ್ಟಕರ ಸಮಯದಲ್ಲಿ. 425 00:31:14,832 --> 00:31:18,168 -ಪಾಪ ಮಾರ್ಗರೆಟ್ ಅಸಂತುಷ್ಟಳಾಗಿರುವಂತಿದೆ. -ಆಕೆಗೆ ಬಹಳಷ್ಟು ಔಷಧಿ ನೀಡಿರಬೇಕು. 426 00:31:18,544 --> 00:31:20,838 ನಿನಗೆ ಗೊತ್ತು, ಅಂತಹ ಲಕ್ಷ ಪ್ರಕರಣಗಳಿರಬಹುದು. 427 00:31:20,921 --> 00:31:23,257 ಈ ಪ್ರಕರಣ ಇಷ್ಟೊಂದು ಗಮನ ಪಡೆಯಲು ಒಂದೇ ಕಾರಣ 428 00:31:23,340 --> 00:31:25,217 ಅವರು ಅಷ್ಟು ಅಂದ ಆಗಿರುವುದು. 429 00:31:25,301 --> 00:31:29,805 ಅಂದರೆ, ಯಾರೂ ಅದನ್ನು ಹೇಳಲು ಬಯಸುವುದಿಲ್ಲ, ಆದರೆ ನಮಗೆಲ್ಲಾ ಗೊತ್ತು. ಅದು... 430 00:31:29,888 --> 00:31:32,182 -ನನಗೆ ಹೋಗಬೇಕು. -ಏನು? ಆಗಲೇ? 431 00:31:34,184 --> 00:31:36,228 ಆಕೆಯನ್ನು ಈ ರೀತಿ ನೋಡುವುದು ಕಷ್ಟಕರ. 432 00:31:36,353 --> 00:31:38,230 ಪ್ರತಿ ಹೂವು ಮುಖ್ಯ. 433 00:31:38,314 --> 00:31:39,982 ಹಾಂಗ್ ಕಾಂಗ್ನಲ್ಲಿ ಏಕಿರುವರು ತಿಳಿದಿಲ್ಲ. 434 00:31:40,065 --> 00:31:41,942 ಅಂದರೆ, ಅವರು ಮನೆಗೆ ಹೋಗಬೇಕು. 435 00:31:42,359 --> 00:31:44,653 ...ಆಘಾತಕರ. 436 00:31:46,238 --> 00:31:47,239 ನನ್ನನ್ನು ಕ್ಷಮಿಸು. 437 00:31:48,741 --> 00:31:51,118 ಜೀವನ ಸಂಪೂರ್ಣ ಗುರುತು ಹಿಡಿಯದಂತಾದಾಗ. 438 00:31:52,453 --> 00:31:54,246 ನಾನು ಹೇಳುವ ಕೊನೆಯ ವಿಷಯವೇನೆಂದರೆ... 439 00:31:58,208 --> 00:31:59,209 ನಿನ್ನ ಪ್ರೀತಿಸ್ತೇವೆ, ಗಸ್. 440 00:32:00,961 --> 00:32:02,755 ನಿನ್ನ ನೆನಪು ಬಹಳಷ್ಟಾಗುತ್ತಿದೆ, ಗೆಳೆಯಾ. 441 00:32:04,423 --> 00:32:05,507 ನೀನೆಲ್ಲಿಯೇ ಇದ್ದರೂ. 442 00:32:08,010 --> 00:32:08,886 ಧನ್ಯವಾದ. 443 00:32:09,720 --> 00:32:12,056 -ಜನ್ಪದಿನದ ಶುಭಾಶಯ. -ಜನ್ಮದಿನದ ಶುಭಾಶಯ. 444 00:32:12,431 --> 00:32:14,933 -ನಾನು ಆಕೆಯನ್ನು ನೋಡಿದೆ. ಆಕೆ ಇಲ್ಲಿದ್ದಾಳೆ. -ಯಾರು? ಏನು? 445 00:32:15,017 --> 00:32:18,896 -ಮರ್ಸಿ! ಮರ್ಸಿ! ಆಕೆ ಇಲ್ಲಿದ್ದಾಳೆ! -ನೀನೇನು ಮಾತನಾಡುತ್ತಿರುವೆ? ಇಲ್ಲಿ ಬಾ. 446 00:32:19,229 --> 00:32:21,857 ಆಕೆ ನಮಗೇಕೆ ಹಾಗೆ ಮಾಡುವಳು? ಹೇಗೆ? 447 00:32:21,940 --> 00:32:25,527 ಸರಿ. ಸರಿ. ಆರಾಮದಿಂದಿರು. ಸಾಕಷ್ಟು ಕುಡಿದಿರುವೆ. ಆರಾಮವಾಗಿರು. 448 00:32:25,611 --> 00:32:27,321 -ಶಾಂಪೇನ್ ಅಲ್ಲ. -ಕೂತ್ಕೊ. 449 00:32:27,404 --> 00:32:28,781 -ಕುಳಿತುಕೊಳ್ಳೋಣ. ಪ್ಲೀಸ್. -ಕ್ಲಾರ್ಕ್. 450 00:32:28,864 --> 00:32:31,283 -ಆಕೆ ಇಲ್ಲಿದ್ದಾಳೆ. ನಮ್ಮ ಪಾರ್ಟಿಯಲ್ಲಿ. ಈಗ. -ಆಕೆ ಇಲ್ಲಿಲ್ಲ. 451 00:32:31,367 --> 00:32:34,662 -ನಾನು ನೋಡಿದೆ... ನನಗೇನೂ ಹುಚ್ಚಲ್ಲ. ನಾನು... -ಆಕೆ ಇಲ್ಲಿಲ್ಲ! 452 00:32:37,539 --> 00:32:38,874 ಮಾರ್ಗರೆಟ್. ಮಾರ್ಗರೆಟ್! 453 00:32:43,754 --> 00:32:46,298 ಏಕೆ? ನೀನೇಕೆ ಇಲ್ಲಿರುವೆ? 454 00:32:47,132 --> 00:32:48,258 ನನ್ನ ಕ್ಷಮಿಸಿ? 455 00:32:48,676 --> 00:32:52,471 ಸರಿ. ಸರಿ. ಮಾರ್ಗರೆಟ್. 456 00:32:52,805 --> 00:32:53,889 ಕ್ಷಮಿಸಿ, ಎಲ್ಲರೂ. 457 00:33:28,799 --> 00:33:32,386 ಒಲಿವಿಯ: ಓ ದೇವರೇ ನೀನು ಇದನ್ನು ನಂಬುವುದಿಲ್ಲ. ಮಾರ್ಗರೆಟ್ ಸಂಪೂರ್ಣವಾಗಿ ತಾಳ್ಮೆ ಕಳೆದುಕೊಂಡಳು. 458 00:33:32,469 --> 00:33:34,430 ಒಲಿವಿಯ: ಈಗಷ್ಟೇ ವೇಟ್ರೆಸ್ ಮೇಲೆ ಹರಿಹಾಯ್ದಳು! 459 00:33:41,145 --> 00:33:42,646 -ಅದು ಹೇಗೆ ಸಾಧ್ಯ? -ಅಮ್ಮಾ! 460 00:33:42,730 --> 00:33:44,231 -ಆಕೆ ಇಲ್ಲಿಗೇಕೆ ಬರುತ್ತಾಳೆ? -ನಿಲ್ಲು! 461 00:33:44,314 --> 00:33:47,943 ಇದು ಅರ್ಥಹೀನ ಎಂದು ಅನಿಸಬಹುದು, ಜಿಂಗ್, ಆದರೆ ಆಕೆಯನ್ನು ನೋಡಿದೆ. ನಾನು ನೋಡಿದೆ, ಆಯ್ತಾ? 462 00:33:48,026 --> 00:33:49,278 ಆಕೆ ಇಲ್ಲಿದ್ದಳು. 463 00:33:49,361 --> 00:33:50,446 ಮಾರ್ಗರೆಟ್? 464 00:33:50,529 --> 00:33:51,488 ಹಿಲರಿ! 465 00:33:51,572 --> 00:33:52,406 ಏನಾಗಿಲ್ಲ ತಾನೇ? 466 00:33:52,489 --> 00:33:55,534 ನೀನು ಬಂದೆ. ಬರುವೆ ಎಂದು ಅಂದುಕೊಂಡಿರಲಿಲ್ಲ. 467 00:33:55,909 --> 00:33:56,744 ಹೌದು, ಈಗಷ್ಟೇ ನೋಡಿದೆ... 468 00:33:56,827 --> 00:33:59,163 ನಾವು ಮನಗೆ ಹೋಗಬೇಕು. ಕ್ಯಾಬ್ ಕರೆಸಬಹುದೇ? 469 00:33:59,246 --> 00:34:01,206 ಕಾರಿನಲ್ಲಿ ಹೋಗಿ, ನಾವು ಬೇರೆ ವಾಹನ ಕರೆಸುವೆವು. 470 00:34:01,290 --> 00:34:03,375 -ಬೇಡ, ನೀವು ಕೊಂಡು ಹೋಗಿ. -ಬೇಡ. ಬೇಡ, ಬೇಡ, ಬೇಡ. 471 00:34:03,459 --> 00:34:04,543 ನಿನ್ನೊಂದಿಗೆ ನಾನು ಬರಬಹುದೇ? 472 00:34:04,626 --> 00:34:06,086 ಖಂಡಿತ. 473 00:34:07,004 --> 00:34:07,838 ಖಂಡಿತವಾಗಿಯೂ? 474 00:34:10,799 --> 00:34:13,635 -ಸರಿ. ಹೋಗೋಣ. -ಸ್ಯಾಮ್ ಹೊರಗಿದ್ದಾನೆ. 475 00:34:14,178 --> 00:34:15,012 ಹೋಗೋಣ. 476 00:34:47,002 --> 00:34:49,046 ನಾನು ಆಕೆಯನ್ನು ನೋಡಿದೆ. ನೋಡಿದೆ. 477 00:34:49,588 --> 00:34:53,967 ನಾನು ಆಕೆಯನ್ನು ನೋಡಿದೆ. ಅಲ್ಲವೇ? ಅಲ್ಲವೇ? 478 00:34:58,680 --> 00:34:59,890 ದೇವರೇ! 479 00:35:01,350 --> 00:35:03,769 ನಾನು ಹುಚ್ಚಿಯಾಗುತ್ತಿದ್ದೇನೆಂದು ಅನಿಸುತ್ತದೆಯೇ? 480 00:35:03,852 --> 00:35:04,937 ಹೇ! ಇಲ್ಲ. 481 00:35:06,313 --> 00:35:08,482 -ನನಗೆ ಹುಚ್ಚೆಂದು ಅಂದುಕೊಂಡಿರಯಾ? -ಇಲ್ಲ. 482 00:35:14,613 --> 00:35:17,366 -ಏನು? -ನೀನು ನಿಜವಾಗಿಯೂ ವೇಟ್ರೆಸ್ಗೆ ಹಲ್ಲೆಗೈದೆಯಾ? 483 00:35:19,284 --> 00:35:23,330 -ನನ್ನನ್ನು ಕ್ಷಮಿಸು. -ಹೌದು, ಪಾರ್ಟಿ ಮಧ್ಯೆ. 484 00:35:23,872 --> 00:35:27,251 -ಪ್ರಾಯಶಃ ನಾನು ಭೂತಗಳನ್ನು ನೋಡುತ್ತಿದ್ದೇನೆ. -ಇಲ್ಲ. 485 00:35:27,626 --> 00:35:29,294 ಹೇ, ಹೇ, ಹೇ, ಹೇ, ಹೇ. 486 00:35:32,631 --> 00:35:35,843 ನೀನು ಅನುಭವಿಸಿದ ಕಷ್ಟವನ್ನು ಯಾರೂ ಅನುಭವಿಸಬಾರದು. 487 00:35:42,558 --> 00:35:44,393 ನನಗೆ ಹಸಿವಾಗುತ್ತಿದೆ. 488 00:35:45,727 --> 00:35:48,564 -ಆಹಾರ ಕೆಟ್ಟದ್ದಾಗಿತ್ತು. -ತುಂಬಾ ಕೆಟ್ಟದ್ದಾಗಿತ್ತು. 489 00:35:50,774 --> 00:35:53,235 ನಾನು ಏನೂ ಹೇಳಲು ಬಯಸಲಿಲ್ಲ. ನನ್ನ ಕ್ಷಮಿಸು. 490 00:35:53,318 --> 00:35:56,864 -ಎಷ್ಟು ಕೆಟ್ಟದ್ದಾಗಿತ್ತು, ನಾನೇನೂ ತಿಂದಿಲ್ಲ. -ನಾನು ಬ್ರೆಡ್ ಸ್ಟಿಕ್ ತಿಂದೆ. 491 00:35:59,157 --> 00:36:02,619 ನೀನು ಈ ಹಿಂದೆ ಇಲ್ಲಿಗೆ ಯಾವಾಗ ಬಂದಿದ್ದೆ? ಪುರುಷನೊಂದಿಗೆಯೇ? 492 00:36:04,037 --> 00:36:07,124 -ಇಲ್ಲ, ನನಗನಿಸುತ್ತದೆ ಅದೇ ಅಂತ. -ಇಲ್ಲ. ಇಲ್ಲ. ಅದರ ನಂತರ. 493 00:36:07,207 --> 00:36:08,041 ಏನು? 494 00:36:08,917 --> 00:36:11,044 ಅದು ಸೆಸಿಲಿ ಬ್ರೌನ್ ಪ್ರದರ್ಶನದ ನಂತರ. 495 00:36:12,296 --> 00:36:13,964 ಅದು ಕೊನೆಯ ಬಾರಿಯೇ? 496 00:36:14,840 --> 00:36:18,594 ದೇವರೇ. ಅದು ಸರಿ. ಅದು ಬಹಳ ಹಿಂದೆ. 497 00:36:18,677 --> 00:36:19,553 ನಂಗೊತ್ತು. 498 00:36:19,636 --> 00:36:22,097 ಆ ಬಿಳಿ ಸುಂದರ ವ್ಯಕ್ತಿ ನಮ್ಮನ್ನು ಹಿಂಬಾಲಿಸಿದ್ದು ನೆನಪಿದೆಯೇ? 499 00:36:22,180 --> 00:36:24,600 -ಆತ ನಿನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ. -ಇಲ್ಲ. 500 00:36:25,893 --> 00:36:29,271 -ಕಮಾನ್. ನೀನು... -ನಾಯಿಮರಿಯಂತೆ ನಿನ್ನನ್ನು ಹಿಂಬಾಲಿಸುತ್ತಿದ್ದ. 501 00:36:30,522 --> 00:36:34,943 ಹೈಸ್ಕೂಲ್ ಪದವಿಯಷ್ಟೇ ಆತ ಮುಗಿಸಿರಬೇಕು. ಆತ ರಯನ್ ಗೋಸ್ಲಿಂಗ್ ಥರ ಕಾಣಿಸುತ್ತಿದ್ದ. 502 00:36:35,903 --> 00:36:37,029 ಒಳ್ಳೆಯ ನೆನಪುಗಳು. 503 00:36:53,337 --> 00:36:54,212 ಏನು? 504 00:37:01,261 --> 00:37:02,763 ನನ್ನ ವಿವಾಹ ಮುರಿದು ಬಿತ್ತು ಅನಿಸುತ್ತದೆ. 505 00:37:06,683 --> 00:37:07,517 ನನ್ನ ಕ್ಷಮಿಸು. 506 00:37:13,065 --> 00:37:16,318 ಸಂಪೂರ್ಣ ಭಿನ್ನ ಜೀವನ ಜೀವಿಸುವ ಬಗ್ಗೆ ಯಾವತ್ತಾದರೂ ಊಹಿಸಿದ್ದೆಯಾ? 507 00:37:17,945 --> 00:37:19,780 ಸಂಪೂರ್ಣ ಭಿನ್ನ ವ್ಯಕ್ತಿಯಾಗುವುದು. 508 00:37:21,323 --> 00:37:22,282 ಸದಾ. 509 00:37:28,580 --> 00:37:32,250 ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ, ಆದರೆ ಅವರನ್ನು ತೊರೆಯಬೇಕೆಂಬ ಆಸೆಯಿದೆ. 510 00:37:35,379 --> 00:37:37,756 ನಂಗೆ ಕೌಲೂನಿನಲ್ಲಿ ಅಪಾರ್ಟ್ಮೆಂಟ್ ಸಿಕ್ಕಿತು. 511 00:37:39,591 --> 00:37:42,302 ಕೆಲವೊಮ್ಮೆ ಒಬ್ಬಂಟಿಯಾಗಿರಬೇಕು ಅನಿಸುತ್ತದೆ, ಗೊತ್ತೇ? 512 00:37:42,636 --> 00:37:46,807 ಅಲ್ಲಿ ನಾನು ಯಾರ ಪತ್ನಿ, ಅಥವಾ ಯಾರ ತಾಯಿ ಆಗಿರಬಾರದು. 513 00:37:49,101 --> 00:37:51,853 ಅಲ್ಲಿ ನನ್ನನ್ನು ದುರಂತದಿಂದ ವ್ಯಾಖ್ಯಾನಿಸಲಾಗುವುದಿಲ್ಲ, 514 00:37:51,937 --> 00:37:55,607 ಮತ್ತು ನಾನು ಮೂವರಲ್ಲ, ಇಬ್ಬರ ತಾಯಿಯೆಂದು ನೆನಪಿಸಲಾಗುವುದಿಲ್ಲ. 515 00:38:01,530 --> 00:38:03,532 ನೀನು ಯಾವತ್ತೂ ಅವನ ತಾಯಿ ಆಗಿರುವೆ, ಮಾರ್ಗರೆಟ್. 516 00:38:10,622 --> 00:38:13,208 ಒಮ್ಮೆ ನನಗೆ ಪ್ರೀತಿಯಾಯಿತು, ಅದು ಮಜಾ ಆಗಿತ್ತು 517 00:38:14,751 --> 00:38:17,295 ಆದರೆ ಬಹು ಬೇಗನೇ ತಿಳಿಯಿತು ಗಾಜಿನ ಹೃದಯ ಎಂದು 518 00:38:18,839 --> 00:38:20,465 ಇದಕ್ಕೆ ನೀನು ಕ್ಯಾರಿಯೋಕೆ ಹಾಡಿದೆ. 519 00:38:21,591 --> 00:38:22,467 ನಾನು ಹಾಡಿದ್ದೆ. 520 00:38:27,681 --> 00:38:28,807 ಇದಕ್ಕೆ ವಿವಸ್ತ್ರಳಾದೆ. 521 00:38:33,437 --> 00:38:36,440 ಓಮ್ಮೆ ನಾ ಪ್ರೀತಿಸ್ತಿದ್ದೆ, ಅದು ದೈವೀಕ ಆಗಿತ್ತು 522 00:38:37,566 --> 00:38:40,277 ಶೀಘ್ರ ಮನಸ್ಸು ಕಳೆದುಕೊಳ್ಳಲಾರಂಭಿಸಿದೆ 523 00:38:41,737 --> 00:38:45,866 ಅದು ನಿಜವೆಂದು ಅನಿಸುತ್ತಿತ್ತು, ನಾನು ಕುರುಡಿಯಾಗಿದ್ದೆ 524 00:38:45,949 --> 00:38:48,702 ಬಹಳ ಅಪನಂಬಿಕೆ, ಪ್ರೀತಿ ಹಿಂದೆ ಸರಿಯಿತು 525 00:38:52,330 --> 00:38:53,498 ಈ ನಡುವೆ 526 00:38:53,582 --> 00:38:54,499 ಕಮಾನ್. 527 00:38:54,583 --> 00:38:58,128 ಖುಷಿಯಾಗಿದೆ ನಾನು ಚೆನ್ನಾಗಿದ್ದೇನೆ. 528 00:38:58,211 --> 00:39:02,340 ಪ್ರೀತಿಯೆಂಬುದು ಗೊಂದಲಕಾರಿ ಅಲ್ಲಿ ಮನಃಶಾಂತಿಯಿಲ್ಲ 529 00:39:02,424 --> 00:39:06,344 ನಿನ್ನನ್ನು ಕಳೆದುಕೊಳ್ಳುವ ಭಯ ನನಗಿದ್ದರೆ ಅದು ಒಳ್ಳೆಯದಲ್ಲ 530 00:39:06,428 --> 00:39:09,014 ನೀನು ಮಾಡುವಂತೆ ಹಾಸ್ಯ ಮಾಡುವೆ 531 00:40:07,322 --> 00:40:08,156 ಏನು? 532 00:40:09,199 --> 00:40:10,200 ಏನಾಯಿತು? 533 00:40:15,163 --> 00:40:16,081 ಏನು? 534 00:40:17,249 --> 00:40:19,000 ನನ್ನನ್ನು ಮಾರ್ಕೆಟಿಗೆ ಕರೆದುಕೊಂಡು ಹೋಗು. 535 00:40:21,461 --> 00:40:22,587 ದಯವಿಟ್ಟು. 536 00:41:54,137 --> 00:41:55,222 ತೆರಳುವ ಸಮಯವಾಗಿದೆ. 537 00:41:58,141 --> 00:42:00,852 ಪರವಾಗಿಲ್ಲ. ಪರವಾಗಿಲ್ಲ. 538 00:42:39,224 --> 00:42:42,060 -ಏನು ನಡೆಯುತ್ತಿದೆ? -ನನಗೆ ಗೊತ್ತಿಲ್ಲ. 539 00:42:43,645 --> 00:42:44,479 ಹಾಯ್! 540 00:42:44,729 --> 00:42:49,025 -ಏನು? ಏನು? ಏನು... -ಮಾರ್ಗರೆಟ್, ಸಮಾಧಾನ. 541 00:42:49,109 --> 00:42:52,320 -ಅದು... ಅದು ನನ್ನ ಮಕ್ಕಳೇ? -ಇಲ್ಲ, ನಿಲ್ಲು! ನಿಲ್ಲು. 542 00:42:55,073 --> 00:42:56,032 ಕಾರಿನಲ್ಲೇ ಇರು. 543 00:42:56,116 --> 00:42:57,450 ಏನು ನಡೀತಿದೆ ಎಂದು ತಿಳಿತೇನೆ. 544 00:43:21,725 --> 00:43:25,937 -ಏನಿದು? ಏನಾಯಿತು? ಏನು... -ನನ್ನ ನೆರೆಮನೆಯವರು. ನನ್ನ ನೆರೆಮನೆಯವರು. 545 00:43:27,480 --> 00:43:30,567 ಆತ ಅಪಾರ್ಟ್ಮೆಂಟಿನಲ್ಲಿ ಸತ್ತಿರುವುದನ್ನು ಅವರು ಕಂಡರು. 546 00:43:33,236 --> 00:43:34,571 ದೇವರೇ. 547 00:43:47,083 --> 00:43:48,626 ಇಂದು ರಾತ್ರಿ ಬಂದಿದ್ದಕ್ಕಾಗಿ ಧನ್ಯವಾದ. 548 00:43:51,671 --> 00:43:53,840 ನಿನ್ನ ಮದುವೆ ಉಳಿಯಬೇಕೆಂದು ನೀನು ಬಯಸುವೆ ಗೊತ್ತು, 549 00:43:53,923 --> 00:43:57,427 ಆದರೆ ನಿಜವೇನೆಂದರೆ, ಯಾವುದೇ ಸಂಬಂಧಗಳನ್ನು ಉಳಿಸುವುದಿಲ್ಲ. 550 00:43:57,510 --> 00:43:58,678 ಡೇವಿಡ್ ಹೇಳುವ ಸುಳ್ಳುಗಳು. 551 00:44:03,558 --> 00:44:07,520 ನಿನಗೆ ಎಲ್ಲವೂ ಗೊತ್ತೆಂದು ತಿಳಿದಿರುವೆ, ಮಾರ್ಗರೆಟ್, ಆದರೆ ನಿನಗೆ ಗೊತ್ತಿಲ್ಲ. 552 00:45:14,879 --> 00:45:18,466 ಮ್ಯಾ'ಮ್? ಮನೆಗೆ ಬಂದಿರಿ. ಏನಾದರೂ ತರಲೇ? 553 00:45:18,883 --> 00:45:20,802 ಇಲ್ಲ. ಪರವಾಗಿಲ್ಲ. ಧನ್ಯವಾದ, ಪೂರಿ. 554 00:45:21,594 --> 00:45:22,679 ಡೇವಿಡ್ ಮನೆಗೆ ಬಂದರೇ? 555 00:45:23,096 --> 00:45:23,930 ಇಲ್ಲ, ಮ್ಯಾ'ಮ್. 556 00:45:25,682 --> 00:45:28,768 ಸರಿ. ಧನ್ಯವಾದ. ನೀನು ಮಲಗು. 557 00:45:29,352 --> 00:45:30,228 ಸರಿ, ಮ್ಯಾ'ಮ್. 558 00:45:49,414 --> 00:45:50,415 ನೀ ಮಾಡಿದೆಯಾ? 559 00:45:50,790 --> 00:45:51,749 ಇಲ್ಲ. 560 00:45:52,000 --> 00:45:54,335 ಇಡೀ ವಿಚಾರ... 561 00:45:54,544 --> 00:45:56,463 ...ಆತ ಸತ್ತನೆಂದು ನಂಬಲು ಸಾಧ್ಯವಿಲ್ಲ... 562 00:45:57,130 --> 00:45:59,215 ವಯಸ್ಸಾಗಿತ್ತು ಅಲ್ಲವೇ? 563 00:45:59,507 --> 00:46:00,341 ನಾನು... 564 00:46:01,843 --> 00:46:04,304 ನಾನು... 565 00:46:12,687 --> 00:46:13,688 ಏಕೆ ಕರೆ ಮಾಡಿಲ್ಲ? 566 00:46:29,120 --> 00:46:29,954 ಫಿಲ್? 567 00:46:30,955 --> 00:46:32,415 ಫಿಲ್, ಏನು ಮಾಡುತ್ತಿರುವೆ? 568 00:49:16,579 --> 00:49:18,581 ಉಪ ಶೀರ್ಷಿಕೆ ಅನುವಾದ: ಜಯಶ್ರೀ 569 00:49:18,665 --> 00:49:20,667 ಸೃಜನಶೀಲ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ