1 00:00:06,966 --> 00:00:10,010 -ಇದು ನಾನು ಕೆಲಸ ಮಾಡುವ ಕ್ಲಬ್. -ಇದು ನ್ಯೂ ಯಾರ್ಕ್ ವಿಳಾಸ. 2 00:00:10,010 --> 00:00:12,304 ಅಲ್ಲಿಗೆ ಬಂದಾಗ ಭೇಟಿ ಮಾಡು. ಸುತ್ತಲೂ ತೋರಿಸುವೆ. 3 00:00:12,304 --> 00:00:14,598 ಈ ಹಿಂದೆ ಡೈಸಿ ಜೋನ್ಸ್ ದ ಸಿಕ್ಸಲ್ಲಿ... 4 00:00:14,890 --> 00:00:15,766 ಅದು ನನ್ನ ಧ್ವನಿ. 5 00:00:15,766 --> 00:00:17,476 ನಾನು ಇಲ್ಲಿಂದ ಹೊರಗೆ ಹೋಗಬೇಕು. 6 00:00:17,476 --> 00:00:19,019 -ಎಲ್ಲಿಗೆ? -ನ್ಯೂ ಯಾರ್ಕಿಗೆ. 7 00:00:19,019 --> 00:00:21,355 ಪಾರ್ಟಿಯಲ್ಲಿ ಆ ಹೆಂಗಸು ಹೇಳಿದ್ದನ್ನು ಹೇಳಿದೆ. 8 00:00:22,982 --> 00:00:24,024 ಆ ಹೆಂಗಸಾ? 9 00:00:24,775 --> 00:00:26,569 ಮತ್ತು ಹಾಗೇನೇ, ಅವಳು ಹೊರಟುಹೋದಳು. 10 00:00:28,154 --> 00:00:30,906 ನಮ್ಮ ಬ್ಯಾಂಡಿನ ಹೊಸ ಸದಸ್ಯೆ ಡೈಸಿ ಜೋನ್ಸನ್ನು ಸ್ವಾಗತಿಸೋಣ. 11 00:00:32,491 --> 00:00:34,577 ಬ್ಯಾಂಡ್ ಯಾಕೆ ಸೇರಬೇಕು ಎಂದುಕೊಂಡೆ? 12 00:00:34,577 --> 00:00:36,662 -ನಿನಗಾಗಿ. -ನಾನು ಯಾಕೆ? 13 00:00:36,662 --> 00:00:38,038 ನೀ ಗೊತ್ತಿರುವೆ ಅನ್ಸುತ್ತೆ. 14 00:00:40,791 --> 00:00:42,960 -ನೀನು ಯೋಚಿಸುವಂತೆ ಅಲ್ಲ, ಬಿಡು. -ಸರಿ. 15 00:00:42,960 --> 00:00:47,173 ಪ್ರತಿ ಹಾಡೂ ಬಿಲ್ಲಿಯಿಂದ ಡೈಸಿಗೆ, ಡೈಸಿಯಿಂದ ಬಿಲ್ಲಿಗೆ ಬರೆದಿರುವ ಒಗಟಿನ ಸಂದೇಶ. 16 00:00:47,173 --> 00:00:48,507 ನೀನೆಲ್ಲಾ ಉತ್ತಮಪಡಿಸುವೆ. 17 00:00:49,049 --> 00:00:51,260 ನಮ್ಮಿಬ್ಬರ ಮಧ್ಯೆ ಏನೂ ಇಲ್ಲ ಅಂತ ನನಗೆ ಹೇಳು. 18 00:00:51,260 --> 00:00:52,636 ನಾನು ಹುಚ್ಚಿನಾ ಹೇಳು. 19 00:00:54,263 --> 00:00:55,973 ಜೊತೆಯಲ್ಲಿ ಇದ್ದೀರಂತ ನಂಬಿದ್ದೆ. 20 00:00:55,973 --> 00:00:58,392 -ಇಲ್ಲ ಅಂತ ಹೇಗೆ ತಿಳಿದೆ? -ಬಿಲ್ಲಿ ಪ್ರಕಾರ ಇಲ್ಲ. 21 00:00:58,392 --> 00:00:59,560 ನೀನೊಬ್ಬ ಸುಳ್ಳ. 22 00:01:01,395 --> 00:01:03,522 ನಿಮ್ಮ ಕಥೆಯಲ್ಲಿ ನನ್ನ ಮಗಳನ್ನು ಸೇರಿಸಬೇಡಿ. 23 00:01:03,522 --> 00:01:04,648 ಸ್ವಾರಸ್ಯದ್ದು ಕೊಡು. 24 00:01:04,648 --> 00:01:06,776 ಅವನಿಗೆ ನಿನ್ನ ಮೇಲೆ ನಿಜವಾದ ಭಾವನೆ ಇಲ್ಲ. 25 00:01:06,776 --> 00:01:09,820 -ಸಂಗೀತಕ್ಕಾಗಿ ಅಂದ. -ಇಲ್ಲಿರುವ ಮಹಿಳೆಯನ್ನು ನೋಡಬೇಕಿದೆ. 26 00:01:09,820 --> 00:01:10,738 ಪಾಸ್ಪೋರ್ಟ್ ಅಮೇರಿಕಾದ ಸಂಯುಕ್ತ ಸಂಸ್ಥಾನಗಳು 27 00:01:10,738 --> 00:01:12,865 ಗ್ರೀಸಲ್ಲಿ ಎಷ್ಟು ಕಾಲ ಇರಲು ಬಯಸಿದ್ದೀರಾ? 28 00:01:12,865 --> 00:01:15,409 ಏನಂದ್ರೆ, ನಾನು ಅಷ್ಟೆಲ್ಲಾ ಮುಂದೆ ಆಲೋಚನೆ ಮಾಡಲ್ಲ. 29 00:02:10,339 --> 00:02:12,925 {\an8}ಡೈಸಿ ಜೋನ್ಸ್ ದ ಸಿಕ್ಸ್ 30 00:02:22,226 --> 00:02:27,231 7/10 "ಶೀ'ಸ್ ಗಾನ್" 31 00:02:36,866 --> 00:02:39,201 ನ್ಯೂ ಯಾರ್ಕ್ 32 00:02:39,201 --> 00:02:41,871 {\an8}1975 (2 ವರ್ಷಗಳ ಹಿಂದೆ) 33 00:02:43,664 --> 00:02:44,915 ಕ್ಷಮಿಸಿ, ತುಂಬಿದೆ. 34 00:02:46,375 --> 00:02:47,626 ಬರ್ನಿಗಾಗಿ ಹುಡುಕುತ್ತಿರುವೆ. 35 00:02:48,002 --> 00:02:49,712 ನಾನು ಅವಳ ಗೆಳತಿಯಂತೆ. 36 00:03:23,579 --> 00:03:24,955 ಬಂದಿದ್ದು ನಂಬಕ್ಕಾಗ್ತಿಲ್ಲ. 37 00:03:25,789 --> 00:03:27,458 ನೋಡಬೇಕು ಅಂತ ನೀನೇ ಹೇಳಿದೆ, ಅದಕ್ಕೆ... 38 00:03:30,836 --> 00:03:32,546 ನೀನೂ ತಮಾಷೆ ಮಾಡುತ್ತಿರಲಿಲ್ಲ. 39 00:03:33,464 --> 00:03:34,340 ನಿಜವಾಗಿ ಹೇಳಿದೆ. 40 00:03:39,553 --> 00:03:41,430 ನಿನಗೆ ನಾನು ಹೇಳಿದ ಅಚ್ಚರಿ ನೆನಪಿದೆಯೇ? 41 00:03:56,362 --> 00:03:57,529 ನನಗೆ ಅರ್ಥವಾಗುತ್ತಿಲ್ಲ. 42 00:03:58,739 --> 00:04:02,368 ನೀನು ಕಳಿಸಿದ ಧ್ವನಿಯನ್ನು ತೆಗೆದುಕೊಂಡೆ, ಜನರಿಗಾಗಿ ಸ್ವಲ್ಪ ಸಂಗೀತ ಹಾಕಿದೆ, 43 00:04:02,368 --> 00:04:04,495 ಮತ್ತು ಅವರಿಗಿದು ಸಾಕಾಗುತ್ತಿಲ್ಲ. 44 00:04:06,330 --> 00:04:07,581 ನೋಡು. 45 00:04:08,499 --> 00:04:09,875 ನಿನ್ನ ಅಭಿಮಾನಿಗಳು. 46 00:04:29,561 --> 00:04:32,982 ನಾನು ಸಾಮಾನ್ಯವಾಗಿ ಬೇರೆಯವರ ಜೊತೆ ಮಲಗಲ್ಲ. 47 00:04:35,442 --> 00:04:36,652 ನೀನು ಭಾವನಾರಹಿತಳು ಅಂತಲೇ? 48 00:04:37,736 --> 00:04:39,905 ಅವರನ್ನು ಹಾಸಿಗೆಯಿಂದ ಒದೆಯುತ್ತೀಯಾ? 49 00:04:39,905 --> 00:04:41,115 ಇಲ್ಲ, ನಾನು... 50 00:04:45,327 --> 00:04:46,245 ಹೌದು. 51 00:04:57,047 --> 00:04:59,174 ಅದನ್ನು ನೋಡು. ಅವರಿಗೆ ಸಾಹಿತ್ಯವೂ ಗೊತ್ತಿದೆ. 52 00:05:00,551 --> 00:05:03,012 ಅವರನ್ನು ನಿಜವಾಗಿ ಹುಚ್ಚೆಬ್ಬಿಸುವುದು ಯಾವುದು ಗೊತ್ತಾ? 53 00:05:11,937 --> 00:05:13,605 ನನ್ನ ಸುಂದರ ಸೋದರರೇ, 54 00:05:14,148 --> 00:05:17,026 ನನ್ನ ಪ್ರೀತಿಯ ಸಹೋದರಿಯರೇ, 55 00:05:18,277 --> 00:05:20,279 ಇಲ್ಲಿ ಬಂದಿದ್ದಾಳೆ, ಸಾಕ್ಷಾತ್, 56 00:05:20,612 --> 00:05:23,115 ನಮ್ಮ ಲೇಡಿ ಸಿಮೋನ್. 57 00:05:39,631 --> 00:05:42,801 ನಾನು ಬೇಜಾರಿನಲ್ಲಿದ್ದಾಗ ನನಗೆ ಕಾಣುತ್ತಿರಲಿಲ್ಲ 58 00:05:43,343 --> 00:05:46,555 ಪ್ರಪಂಚ ಒಂದು ಕತ್ತಲ ಜಾಗವಾಗಿತ್ತು ಆದರೆ ನೀನು ನನಗೆ ತೋರಿಸಿದೆ 59 00:05:46,555 --> 00:05:49,808 ನಿನ್ನ ಬೆಳಕನ್ನು ನನ್ನ ಜೀವನವನ್ನು ಹೇಗೆ ಬದುಕಬೇಕೆಂದು 60 00:05:50,142 --> 00:05:53,979 ಮತ್ತು ನೀನು ನನ್ನನ್ನು ಮೋಡಿ ಮಾಡಿದೆ 61 00:05:53,979 --> 00:05:57,858 ಈಗ ನಾನು ಹಾಡಬೇಕು ನನಗೆ ಬೇಡವೆಂದರೂ 62 00:05:58,067 --> 00:06:01,653 ಹೇಳಲು ನನಗೆ ಏನೂ ಉಳಿದಿಲ್ಲ ಆದರೆ 63 00:06:01,820 --> 00:06:03,947 ನಿನಗೆ ಪ್ರೀತಿಯಾಗಿದೆ ಅಂತ ಮಾತ್ರ ಹೇಳಬೇಡ 64 00:06:05,449 --> 00:06:09,912 ಯಾಕಂದ್ರೆ ನಿನಗೆ ಗೊತ್ತು ಅದು ಸಾಕಾಗಲ್ಲ ಅಂತ ನಿನಗೆ ಗೊತ್ತು 65 00:06:12,289 --> 00:06:13,999 ರಾತ್ರಿಯೆಲ್ಲಾ ಹಾಡುತ್ತಿದ್ದೆ. 66 00:06:14,625 --> 00:06:17,002 ವಿಚಿತ್ರ ಏನೆಂದರೆ ಅವರು ಹಾಡಲು ಬಿಡುತ್ತಿದ್ದರು. 67 00:06:17,002 --> 00:06:17,920 ಮತ್ತೊಮ್ಮೆ? 68 00:06:18,629 --> 00:06:20,297 ಇದನ್ನು ಎಷ್ಟು ಸಲ ಮಾಡಬೇಕು? 69 00:06:20,297 --> 00:06:22,216 ಎಷ್ಟು ಸಲ ಆಗುತ್ತೋ ಅಷ್ಟು ಸಲ. 70 00:06:22,966 --> 00:06:24,593 ನಿನಗೆ ಇರುವುದೇ ಒಂದು ಹಾಡು. 71 00:06:28,680 --> 00:06:30,182 ನಾವು ಅದರ ಮೇಲೆ ಕೆಲಸ ಮಾಡಬೇಕು. 72 00:06:31,558 --> 00:06:33,018 ಮಾಡಬೇಕೇನೋ. 73 00:06:33,477 --> 00:06:34,394 ನಿಲ್ಲಿಸು. 74 00:06:35,562 --> 00:06:36,855 ಜನ ನೋಡುತ್ತಿದ್ದಾರೆ. 75 00:06:37,898 --> 00:06:40,275 ಕ್ಷಮಿಸು. ಇನ್ನೊಮ್ಮೆ. 76 00:06:41,985 --> 00:06:46,740 ಯಾಕಂದ್ರೆ ನಿನಗೆ ಗೊತ್ತು ಅದು ಸಾಕಾಗಲ್ಲ ಅಂತ ನಿನಗೆ ಗೊತ್ತು 77 00:06:47,825 --> 00:06:50,702 ನಾನದನ್ನು ಗುಟ್ಟಾಗಿ ಇಡಬಯಸುತ್ತೇನೆ. ಅಷ್ಟೇ. 78 00:06:52,579 --> 00:06:54,289 ನಿನಗೆ ಯಾವುದರ ಬಗ್ಗೆ ಅಷ್ಟು ಭಯ? 79 00:06:58,502 --> 00:06:59,545 ಗೊತ್ತಾಗಲ್ವಾ ಏನು? 80 00:07:00,879 --> 00:07:01,797 ನೋಡು. 81 00:07:04,466 --> 00:07:07,469 ನಾವು ಹುಷಾರಾಗಿರಬೇಕಾದ ಜಾಗ ಯಾವಾಗಲೂ ಇದ್ದೇ ಇರುತ್ತೆ. 82 00:07:09,555 --> 00:07:12,766 ಆದರೆ ಕ್ಲಬ್ಬಿನಲ್ಲಿ, ನಮ್ಮ ಜನರೊಂದಿಗೆ, ಚಿನ್ನ... 83 00:07:13,851 --> 00:07:16,228 ಹೇಳು, ಅಲ್ಲಿ ಕುಣಿಯಲಾಗದಿದ್ದರೆ, ಮತ್ತೆ ಬೇರೆಲ್ಲಿ? 84 00:07:19,314 --> 00:07:22,943 ಇಷ್ಟು ಒಳ್ಳೆಯ ಅನುಭವ ಕೊಡುವುದನ್ನು ಮುಚ್ಚಿಡಲು ನನಗಿಷ್ಟವಿಲ್ಲ. 85 00:07:27,239 --> 00:07:28,157 ಸರಿ ಹೇಳಿದ್ದಳು. 86 00:07:28,866 --> 00:07:29,950 ನಾನು ಅವಿತುಕೊಂಡಿದ್ದೆ. 87 00:07:31,201 --> 00:07:33,579 ನಿಲ್ಲಲು ನಾನಿನ್ನೂ ತಯಾರಿರಲಿಲ್ಲ. 88 00:07:35,664 --> 00:07:38,125 ಹಾಗಾಗಿ ನನ್ನ ಭಾವನೆಗಳನ್ನೆಲ್ಲಾ ಸಂಗೀತದೊಳಗೆ ಹಾಕಿದೆ. 89 00:07:38,792 --> 00:07:42,171 ನಾನು ಮುಕ್ತಳು ಅಂತ ಜನ ಅಂತಾರೆ 90 00:07:45,924 --> 00:07:49,136 ಆದರೆ ನನ್ನ ಬಗ್ಗೆ ನಿನಗೆ ಗೊತ್ತಿಲ್ಲ 91 00:07:49,887 --> 00:07:53,974 ನಾನು ಮಾಡಿದ ಮೇಲೆ, ಆ ಹಾಡು... 92 00:07:55,475 --> 00:07:56,435 ಸುಮ್ಮನೆ... 93 00:07:57,936 --> 00:07:58,937 ಕೆಲಸ ಮಾಡಿತು. 94 00:08:06,111 --> 00:08:09,406 ನಾನು ಮುಕ್ತಳು ಅಂತ ಜನ ಅಂತಾರೆ 95 00:08:13,285 --> 00:08:16,330 ಆದರೆ ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ 96 00:08:16,872 --> 00:08:18,790 ಅಂದರೆ ಆಗ ಹಾಗೆಯೇ ಇದ್ದಿದ್ದು. 97 00:08:19,833 --> 00:08:21,877 ಎಲ್ಲವನ್ನೂ ನಾವೇ ಮಾಡಬೇಕಿತ್ತು. 98 00:08:22,544 --> 00:08:23,545 ಮನ್ರೋ ರೆಕಾರ್ಡ್ಸ್ 99 00:08:23,545 --> 00:08:25,380 ಸಣ್ಣ ಲೇಬಲ್ ಮೂಲಕ 100 00:08:25,380 --> 00:08:29,384 ಗೊತ್ತಿದ್ದ ಪ್ರತಿ ಡಿಜೆಗೂ ನಮ್ಮ ಕೈಯಾರೆ ಕೊಟ್ಟೆವು. 101 00:08:31,136 --> 00:08:32,638 ದೇವರೇ, ಮಜಾ ಇತ್ತು. 102 00:08:34,264 --> 00:08:37,643 ನಾನು ಮತ್ತು ಬರ್ನಿ ರಾತ್ರಿಗೆ ನಾಲ್ಕು ಪ್ರದರ್ಶನಗಳನ್ನು ನೀಡುತ್ತಿದ್ದೆವು. 103 00:08:39,645 --> 00:08:42,606 ಮಿಡ್ಟೌನ್ ಕ್ಲಬ್ಬುಗಳಲ್ಲಿ ಪ್ರಸಿದ್ಧರು ಕುಣಿಯುವ ಜಾಗಗಳಲ್ಲಿ. 104 00:08:42,606 --> 00:08:46,276 ಆದರೆ ಬೇಗ ನಿನ್ನ ತಪ್ಪಿನ ಬಗ್ಗೆ ನಿನಗೆ ಅರಿವಾಗುತ್ತದೆ 105 00:08:46,902 --> 00:08:48,946 ಸೆಂಟ್ರಲ್ ನ್ಯೂ ಜೆರ್ಸಿಯ ರೋಲರ್ ಡಿಸ್ಕೋಗಳು. 106 00:08:49,363 --> 00:08:52,741 ಯಾಕಂದ್ರೆ ಜೊತೆಯಾಗಿ ಇದು ನಮ್ಮ ಕಡೆಯ ರಾತ್ರಿ 107 00:08:52,741 --> 00:08:57,621 ಎರಡು ಹಾಡು ಹಾಡಿದರೆ ಸಾಕು, ಜನ ಹುಚ್ಚೆದ್ದುಬಿಡುತ್ತಿದ್ದರು. 108 00:08:57,913 --> 00:09:00,415 ನನಗೆ ಯಾವುದೇ ಗಂಡು ಬೇಕಿಲ್ಲ 109 00:09:02,334 --> 00:09:06,922 ಭರವಸೆ ಕೊಟ್ಟ ಜಾಗಕ್ಕೆ ಕರೆದೊಯ್ಯಲು 110 00:09:06,922 --> 00:09:09,633 ಆದರೆ ನಮ್ಮ ರಾತ್ರಿಗಳು ಮುಗಿಯುತ್ತಿದ್ದದ್ದು ಬೆಟರ್ ಡೇಸಲ್ಲಿ. 111 00:09:09,633 --> 00:09:13,136 ಹಾಗಾಗಿ ಸುತ್ತ ಬಾ ಬೇಕಾದುದನ್ನು ಹೇಳು 112 00:09:13,136 --> 00:09:15,806 ಅವರಿಗೆ ಈ ಹಾಡಿನ ಬಗ್ಗೆ ನಿಜವಾಗಿ ಗೊತ್ತಿತ್ತು. 113 00:09:16,348 --> 00:09:20,060 ನನ್ನನ್ನು ಮತ್ತು ನನ್ನ ಸ್ನೇಹಿತರನ್ನು ಬಂಡಾಯಗಾರರು ಎಂದು ಕರೆದು 114 00:09:24,022 --> 00:09:27,985 ನನ್ನ ಈಗಿರುವ ಪರಿಸ್ಥಿತಿ 115 00:09:30,946 --> 00:09:35,033 ಅದು ನನ್ನ ಈಗಿರುವ ಗುರಿಯಂತಲ್ಲ 116 00:09:35,033 --> 00:09:37,077 ನನ್ನ ಗುರಿ ಏನೆಂದರೆ 117 00:09:38,412 --> 00:09:42,499 ಒತ್ತಡದ ಅಡಿಯಿರುವ ವಜ್ರ ನಾನು 118 00:09:42,749 --> 00:09:45,752 ಅವಳೊಂದಿಗೆ ಕುಣಿಯುವಷ್ಟು ಆರಾಮವಾಗಿ ನಾನಿಲ್ಲದಿದ್ದಿರಬಹುದು. 119 00:09:46,003 --> 00:09:49,631 ಒತ್ತಡದ ಅಡಿಯಿರುವ ವಜ್ರ ನಾನು 120 00:09:50,299 --> 00:09:54,428 ಆದರೆ ಜೊತೆಯಾಗಿ ಸಂಗೀತ ಮಾಡುವುದು, ಎಲ್ಲರನ್ನೂ ಕುಣಿಸುವುದು, 121 00:09:55,304 --> 00:09:57,347 ಅದು ಎರಡನೆಯ ಅದ್ಭುತವಾಗಿತ್ತು. 122 00:10:03,603 --> 00:10:04,604 ಹಲೋ? 123 00:10:05,856 --> 00:10:07,065 ಹಾಂ, ಒಂದು ಕ್ಷಣ. 124 00:10:08,358 --> 00:10:09,526 ನಿನಗೇನೆ. 125 00:10:13,822 --> 00:10:15,532 -ಹಲೋ? -ಹೇ, ಸಿಮೋನ್. 126 00:10:15,949 --> 00:10:17,326 ಹೇ, ಟೆಡ್ಡಿ. 127 00:10:17,326 --> 00:10:18,535 ಅದು ಯಾರು? 128 00:10:19,995 --> 00:10:21,413 ಅದು ನನ್ನ ರೂಂಮೇಟ್ ಅಷ್ಟೇ. 129 00:10:21,872 --> 00:10:23,165 ನನ್ನ ಹುಡುಗಿ ಹೇಗಿದ್ದಾಳೆ? 130 00:10:23,707 --> 00:10:25,459 ಕ್ಲಬ್ಬುಗಳಿಗೆ ಕಿಚ್ಚು ಹಚ್ತಿದ್ದಾಳಾ? 131 00:10:25,459 --> 00:10:28,378 ಒಂದು ರಾತ್ರಿಗೆ ಮೂರು, ಕೆಲವೊಮ್ಮೆ ನಾಲ್ಕು. 132 00:10:29,588 --> 00:10:30,839 ನಿನ್ನ ಬಗ್ಗೆ ಹೆಮ್ಮೆ. 133 00:10:30,839 --> 00:10:32,507 ಲಾ-ಲಾ ಲ್ಯಾಂಡಲ್ಲಿ ಹೇಗಿದೆ? 134 00:10:32,507 --> 00:10:35,218 ಏನಂದ್ರೆ, ನಾನು ನಿನಗೆ ಕರೆ ಮಾಡಿದ್ದು ಅದೇ ಕಾರಣಕ್ಕೆ. 135 00:10:35,218 --> 00:10:37,763 ಇತ್ತೀಚೆಗೆ ಡೈಸಿ ಜೊತೆ ಮಾತಾಡಿದ್ಯಾ? 136 00:10:37,763 --> 00:10:39,222 ಇಲ್ಲ, ಕೆಲವು ವಾರಗಳೇ ಆದವು. 137 00:10:39,681 --> 00:10:41,183 ಯಾಕೆ? ಎಲ್ಲವೂ ಸರಿ ಇದೆಯೇ? 138 00:10:41,183 --> 00:10:42,267 ಬಹುಶಃ. 139 00:10:43,060 --> 00:10:45,395 ರೆಕಾರ್ಡ್ ಬಿಡುಗಡೆ ಪಾರ್ಟಿ ಇತ್ತು. ಅವಳು ಬರಲಿಲ್ಲ. 140 00:10:45,395 --> 00:10:46,730 ಡೈಸಿ ಹಾಗೇನೇ ಬಿಡು. 141 00:10:47,147 --> 00:10:48,940 ನಿನಗೇನಾದರೂ ಗೊತ್ತಿದೆಯಾ ಅಂತ? 142 00:10:48,940 --> 00:10:50,275 ಇಲ್ಲ, ಗೊತ್ತಿಲ್ಲ. 143 00:10:50,901 --> 00:10:53,153 ಏನೂ ಇರಲ್ಲ ಅನ್ಸುತ್ತೆ. 144 00:10:53,153 --> 00:10:54,488 ಅವಳು ಟೂರ್ ಮಿಸ್ ಮಾಡಲ್ಲ. 145 00:10:54,488 --> 00:10:56,365 ಏನಾದರೂ ಗೊತ್ತಾದರೆ ಹೇಳ್ತಿಯ ತಾನೇ? 146 00:10:56,365 --> 00:10:57,449 ಹೌದು, ಖಂಡಿತ. 147 00:10:57,824 --> 00:10:58,867 ಆಯ್ತು, ಪುಟ್ಟಿ. 148 00:10:59,659 --> 00:11:00,577 ಬೈ. 149 00:11:09,419 --> 00:11:10,670 "ರೂಂಮೇಟ್ ಅಷ್ಟೇ." 150 00:11:11,338 --> 00:11:13,173 ಬಾಯಿ ಮುಚ್ಚು. ಬಾಯಿ ಮುಚ್ಚು! 151 00:11:13,173 --> 00:11:15,258 ಡೈಸಿ ಮತ್ತು ನಾನು ಸಂಪರ್ಕದಲ್ಲಿದ್ದೇವೆ, 152 00:11:15,258 --> 00:11:17,928 ಆದರೆ ಪ್ರತಿದಿನ ಮಾತಾಡುತ್ತಿರಲಿಲ್ಲ, ಮತ್ತು... 153 00:11:17,928 --> 00:11:19,888 ಅದರ ಬಗ್ಗೆ ನಾನು ಏನೂ ಯೋಚಿಸಲಿಲ್ಲ. 154 00:11:19,888 --> 00:11:21,473 ನನ್ನದೇ ಆದವು ನನಗೆ ಇದ್ದವು. 155 00:11:21,473 --> 00:11:23,141 ಹೀಟ್ವೇವ್ - ದಿ ಟ್ರ್ಯಾಂಪ್ಸ್ ಚಿಕ್ - ಸಿಮೋನ್ ಜಾಕ್ಸನ್ 156 00:11:25,435 --> 00:11:26,770 ಸಿಮೋನ್. ಸಿಮೋನ್. 157 00:11:27,229 --> 00:11:28,146 ಸಿಮೋನ್. 158 00:11:28,146 --> 00:11:30,232 ಮತ್ತೆ, ಸಹಾರಾದಲ್ಲಿ ಯಾರಿರ್ತಾರೆ? 159 00:11:30,899 --> 00:11:33,151 ಲೆಸ್ಲೀ, ಲೀನಾ, ಆ್ಯಲಿಸ್. 160 00:11:33,151 --> 00:11:35,529 ಆ್ಯಲಿಸ್? ಆ್ಯಲಿಸ್ ಬರೋದೇ ಇಲ್ಲ. 161 00:11:36,822 --> 00:11:38,698 -ಧನ್ಯವಾದ. -ಮತ್ತು... 162 00:11:39,491 --> 00:11:41,535 ಏನು? ಮುಖ ಯಾಕೆ ಹಾಗೇ ಮಾಡ್ಕೋತಿದ್ದೀಯಾ? 163 00:11:41,535 --> 00:11:44,121 ನಿನಗೆ ಹೇಳಬೇಕಾ ಇಲ್ವಾ ಗೊತ್ತಿಲ್ಲ. 164 00:11:44,121 --> 00:11:45,455 ಸರಿ, ಹೇಳು. 165 00:11:47,165 --> 00:11:48,166 ಬರ್ನಿ. 166 00:11:49,876 --> 00:11:51,128 ಧನ್ಯವಾದ. 167 00:11:51,128 --> 00:11:52,337 ಹೇಳು. 168 00:11:52,671 --> 00:11:54,464 ಹೇಳು. ಹೇಳು, ಹೇಳು. 169 00:11:59,886 --> 00:12:02,389 ಸಾಲಸೌಲಿನ ಕಾರ್ಯಕಾರಿಗಳು ಕ್ಲಬ್ಬಲ್ಲಿ ಭೇಟಿಯಾಗ್ತಾರೆ. 170 00:12:02,389 --> 00:12:03,932 ರೆಕಾರ್ಡ್ ಮುದ್ರಿಸಲಿದ್ದಾರೆ. 171 00:12:04,349 --> 00:12:07,018 ಓ, ದೇವರೇ, ಅದು ಅದ್ಭುತ! 172 00:12:07,561 --> 00:12:09,229 -ಹೌದಲ್ವಾ? -ಅದು ಅದ್ಭುತ. 173 00:12:10,605 --> 00:12:11,731 -ಮಿಸ್ ಜಾಕ್ಸನ್? -ಹಾಂ? 174 00:12:11,731 --> 00:12:13,984 -ನಿಮಗಾಗಿ ಟೆಲಿಗ್ರಾಂ. -ಧನ್ಯವಾದ, ಕ್ಲೋಯ್. 175 00:12:22,826 --> 00:12:23,660 ಏನು? 176 00:12:24,411 --> 00:12:25,871 ಏನು? ಏನಾಯ್ತು? 177 00:12:25,871 --> 00:12:29,249 ನನಗೆ ನೀನು ಬೇಕು ಡೈಸಿ 178 00:12:29,791 --> 00:12:33,628 ಅದರ ಹೆಸರು ಹೈಡ್ರಾ, ಹೀಡ್ರಾ. ಗ್ರೀಸಲ್ಲಿ ಯಾವುದೋ ದ್ವೀಪವಂತೆ. 179 00:12:34,796 --> 00:12:36,423 ನೀನು ಅಲ್ಲಿಗೆ ಹೋಗುವೆಯಾ? 180 00:12:36,882 --> 00:12:38,133 ಇಂದು ರಾತ್ರಿ? ಹಾಗೇನೇ? 181 00:12:39,634 --> 00:12:41,052 ತಡಿ, ನಮ್ಮ ಪ್ರದರ್ಶನಗಳ ಗತಿ? 182 00:12:42,387 --> 00:12:43,930 ಅವಳಿಗೆ ಬೇರೆ ಯಾರೂ ಇಲ್ಲ. 183 00:12:44,639 --> 00:12:46,641 ಅವಳು ಜೈಲಿನಲ್ಲಿರಬಹುದು. ಅವಳು... 184 00:13:04,034 --> 00:13:06,161 ನೀನೊಬ್ಬಳೇ ಗ್ರೀಸಿಗೆ ಹೋಗುವುದು ಬೇಡ. 185 00:13:36,900 --> 00:13:40,320 ಹೈಡ್ರಾ 186 00:13:44,449 --> 00:13:45,450 ಹಾಯ್, ಗೊತ್ತಾ... 187 00:13:45,450 --> 00:13:47,827 ಅಲ್ಲಿಗೆ ಹೋಗಲು ಯಾವುದಾದರೂ ಟ್ಯಾಕ್ಸಿ ಸಿಗುತ್ತಾ? 188 00:13:47,827 --> 00:13:49,496 ಟ್ಯಾಕ್ಸಿ. ಟ್ಯಾಕ್ಸಿ. 189 00:13:51,414 --> 00:13:52,499 ಟ್ಯಾಕ್ಸಿ. 190 00:13:58,505 --> 00:13:59,923 ಇವುಗಳಲ್ಲೇ ಒಂದು ಇರಬಹುದು. 191 00:14:03,134 --> 00:14:04,469 -ಅಥವಾ ಆ ಬಾಗಿಲು... -ಸಿಮೋನ್! 192 00:14:04,469 --> 00:14:05,428 ಹೌದಾ? 193 00:14:05,428 --> 00:14:06,429 ಸಿಮೋನ್! 194 00:14:11,851 --> 00:14:14,062 -ಓ, ದೇವರೇ. -ಓ, ದೇವರೇ, ನೀನು ಬಂದೆ. 195 00:14:14,062 --> 00:14:15,730 -ಹೌದು. -ಬಂದಿದ್ದು ನಂಬಲಾಗ್ತಿಲ್ಲ. 196 00:14:15,730 --> 00:14:17,774 -ಹಾಯ್, ಬರ್ನಿ. -ಹೇ. ಹಾಂ. 197 00:14:17,774 --> 00:14:19,025 ಡೈಸಿ. ಹಾಯ್. 198 00:14:19,025 --> 00:14:21,653 -ಆರಾಮಿದ್ದೀಯಾ? -ಖಂಡಿತ ಚೆನ್ನಾಗಿದ್ದೀನಿ. ನನಗೇನಾಗಿದೆ? 199 00:14:22,362 --> 00:14:24,739 ನೀನು ಕಾಣೆಯಾಗಿ ವಾರಗಟ್ಟಲೆ ಯಾರನ್ನೂ ಸಂಪರ್ಕಿಸಿಲ್ಲ, 200 00:14:24,739 --> 00:14:26,700 ಮತ್ತು ನನಗೆ ಇದನ್ನು ಬರೆದೆ. 201 00:14:27,576 --> 00:14:28,618 ಜಾಮೀನಿಗಾಗಿ ಹಣ ತಂದೆ. 202 00:14:30,579 --> 00:14:32,581 ಕ್ಷಮಿಸು. ನಾನು... 203 00:14:32,581 --> 00:14:36,376 ಇದು ಗಾಬರಿ ಹುಟ್ಟಿಸುವಂತೇನೋ ಕಾಣುತ್ತೆ, ಆದರೆ ನಾನು... 204 00:14:36,376 --> 00:14:37,627 ನಿನಗೇನೂ ತೊಂದರೆ ಇಲ್ವಾ? 205 00:14:38,003 --> 00:14:39,129 ನನಗೇನೂ ತೊಂದರೆ ಇಲ್ಲ. 206 00:14:41,131 --> 00:14:42,465 ಮದುವೆಯಾಗುತ್ತಿದ್ದೇನೆ. 207 00:14:45,051 --> 00:14:46,094 ನಿಕ್ಕಿ? 208 00:14:47,262 --> 00:14:48,346 ನಿಕ್ಕಿ! 209 00:14:50,432 --> 00:14:51,683 ಅವರು ಬಂದರು. 210 00:14:53,184 --> 00:14:54,102 ನಿಕ್ಕಿ? 211 00:14:56,813 --> 00:14:59,983 ಸಿಮೋನ್, ಬರ್ನಿ, ಈತ ನನ್ನ ಭಾವಿ ಪತಿ. 212 00:15:01,693 --> 00:15:02,986 ನಿಕ್ಕಿ ಫಿಟ್ಜ್ಪ್ಯಾಟ್ರಿಕ್. 213 00:15:03,570 --> 00:15:05,947 ಸಂತೋಷವಾಯಿತು. ನಿಮ್ಮ ಬಗ್ಗೆ ತುಂಬಾ ಕೇಳಿದ್ದೇನೆ. 214 00:15:05,947 --> 00:15:07,490 ದಯವಿಟ್ಟು, ಬನ್ನಿ ಒಳಗೆ. 215 00:15:07,490 --> 00:15:09,618 ಆರಾಮವಾಗಿರಿ. ನಿಮಗೆ ಡ್ರಿಂಕ್ ತರುತ್ತೇನೆ. 216 00:15:13,788 --> 00:15:16,374 ನಾನು ಹೋಟೆಲ್ ರೂಮಲ್ಲಿ, ಮತಿ ಕಳೆದುಕೊಂಡು ಕೂತಿದ್ದಾಗ, 217 00:15:16,374 --> 00:15:20,295 ಗ್ರೀಸ್ ಗೆ ಹೋಗೋಣ ಅನ್ನೋ ಯೋಚನೆ ಬಂತು. 218 00:15:28,553 --> 00:15:30,597 ನಿಮಗಿದು ಹುಚ್ಚುತನ ಅನಿಸಬಹುದು, 219 00:15:30,597 --> 00:15:32,932 ಆದರೆ ನಾನು ಹಿಂದೆ ಭೇಟಿಯಾದವರಂತಲ್ಲ ಇವನು. 220 00:15:32,932 --> 00:15:35,393 ಈ ಕ್ಷಣದಲ್ಲಿ ಮುಕ್ತವಾಗಿ ಬದುಕುತ್ತಾನೆ. 221 00:15:36,394 --> 00:15:39,356 ನನ್ನ ಜೊತೆಗಾತಿ ಇಲ್ಲದೆ ನಾನು ಮದುವೆಯಾಗುವುದಿಲ್ಲ ಅಂದೆ. 222 00:15:40,732 --> 00:15:42,233 ಅದಕ್ಕೆ ಕಾಗದ ಬರೆದೆ. 223 00:15:44,527 --> 00:15:47,322 ಹಾಗಿದ್ರೆ ಮುಂದಿನ ಸಲ ಫೋನ್ ಮಾಡು. 224 00:15:50,659 --> 00:15:53,119 ತಗೊಳ್ಳಿ. ಇದು ಶುರುಮಾಡಲು ಅಷ್ಟೇ. 225 00:15:53,787 --> 00:15:54,829 ಧನ್ಯವಾದ. 226 00:15:58,208 --> 00:16:00,085 ದ ಸಿಕ್ಸ್ ಬಗ್ಗೆ ಏನನ್ಸುತ್ತೆ? 227 00:16:01,836 --> 00:16:04,714 ಆರು? ಯಾವುದರಲ್ಲಿ ಆರು? 228 00:16:08,760 --> 00:16:10,261 ನೀವು ಅವಳ ಸಂಗೀತ ಕೇಳಿಲ್ವಾ? 229 00:16:11,721 --> 00:16:12,972 ನಿನ್ನ ಕವಿ ಅಂದುಕೊಂಡೆ. 230 00:16:14,557 --> 00:16:17,769 ನನಗೆ ಸಂಗೀತದಲ್ಲಿ ಹೇಳಿಕೊಳ್ಳುವಷ್ಟು ಅಭಿರುಚಿ ಏನೂ ಇಲ್ಲ. 231 00:16:18,353 --> 00:16:21,648 ಆದರೆ ಅವಳು ಹಾಡುವುದನ್ನು ಕೇಳಿದ್ದೇನೆ, ಅವಳ ಧ್ವನಿ... ಮೋಹಕ. 232 00:16:27,654 --> 00:16:30,115 ನಾನು ತಿಂದಿರುವ ಅತ್ಯುತ್ತಮ ರುಚಿ ಇದೇ ಇರಬೇಕು. 233 00:16:31,491 --> 00:16:32,826 ಮತ್ತೆ, ಇದು ನಿಮ್ಮ ಮನೆಯಾ? 234 00:16:34,285 --> 00:16:35,954 ಒಂದು ರೀತಿ, ಹೌದು. ಹೌದು. 235 00:16:35,954 --> 00:16:38,164 ಹೆಚ್ಚಿನ ಸಮಯ ಇಲ್ಲಿಯೇ ಕಳೆಯುತ್ತೇನೆ. 236 00:16:38,707 --> 00:16:40,959 ಆದರೆ ನನ್ನ ಮನೆಗಳು ರೋಮ್ 237 00:16:40,959 --> 00:16:44,671 ಮತ್ತು ಐರ್ಲೆಂಡಿನಲ್ಲಿ ಇವೆ, ಅಲ್ಲಿ ನನಗೆ ಕೆಲವು ಜವಾಬ್ದಾರಿಗಳಿವೆ. 238 00:16:46,589 --> 00:16:48,091 ನೀವೇನು ಮಾಡುತ್ತೀರಿ, ನಿಕ್ಕಿ? 239 00:16:48,091 --> 00:16:49,884 ನಾನೊಬ್ಬ ವಿದ್ಯಾರ್ಥಿ... 240 00:16:50,802 --> 00:16:52,137 ಪ್ರಬಂಧ ಬರೆಯುತ್ತಿದ್ದೇನೆ. 241 00:16:52,137 --> 00:16:54,013 ಇದು ನಿಮ್ಮ ಸ್ವಂತ ಮನೆಯಾ? 242 00:16:55,306 --> 00:16:56,224 ಹೌದು. 243 00:16:58,226 --> 00:17:01,438 ಮತ್ತು ನಿಮಗೆ ರೋಮ್ ಹಾಗೂ ಐರ್ಲೆಂಡಿನಲ್ಲೂ ಮನೆಗಳಿವೆಯಾ? 244 00:17:02,564 --> 00:17:04,023 ಅವರಿಗೆ ಹೇಳಿಬಿಡು. 245 00:17:06,484 --> 00:17:11,614 ನನ್ನ ಕುಟುಂಬದವರು ಐರ್ಲೆಂಡಿನಲ್ಲಿ ಅಧಿಕಾರರಹಿತ ರಾಜಮನೆತನದವರು. 246 00:17:11,614 --> 00:17:13,324 ತಡಿ, ತಡಿ. ನೀನು ರಾಜಕುಮಾರನಾ? 247 00:17:13,783 --> 00:17:15,368 ಅದಕ್ಕೆ ನಾನು ಯಾರಿಗೂ ಹೇಳಲ್ಲ. 248 00:17:15,368 --> 00:17:19,706 ಆತನ ಕುಟುಂಬ ಐರ್ಲೆಂಡಿನಲ್ಲಿ 13ನೇ ಶತಮಾನದಷ್ಟು ಹಳೆಯದು, ಅವರಿಗೊಂದು ಅರಮನೆಯಿದೆ. 249 00:17:19,706 --> 00:17:23,168 ಅರಮನೆ, ಹೌದು, ನಮಗೊಂದು ಅರಮನೆ ಇದೆ. ಹಳೆಯ, ಶಿಲೀಂಧ್ರ ಹಿಡಿದಿರುವ ಅರಮನೆ. 250 00:17:24,544 --> 00:17:27,922 ಅದಕ್ಕೇನೂ ಅರ್ಥವಿಲ್ಲ ಬಿಡಿ. ಸಣ್ಣ ರಾಜಮನೆತನ ಅಷ್ಟೇ. 251 00:17:29,966 --> 00:17:31,009 ನಿಮ್ಮ ವಿವಾಹಕ್ಕೆ. 252 00:17:31,384 --> 00:17:32,385 -ಚಿಯರ್ಸ್. -ಚಿಯರ್ಸ್. 253 00:17:32,385 --> 00:17:33,344 ಚಿಯರ್ಸ್. 254 00:18:15,470 --> 00:18:16,721 ನಿನ್ನ ಗಿಟಾರಿಗೆ ಏನಾಯಿತು? 255 00:18:16,721 --> 00:18:19,557 ಪೊಲೀಸರು ಪರಿಶೀಲನೆ ಮಾಡುತ್ತಿದ್ದಾಗ ನನ್ನ ಪದಾರ್ಥ ಒಳಗಿತ್ತು, 256 00:18:19,557 --> 00:18:20,934 ಅದನ್ನು ಅಲ್ಲೇ ಬಿಟ್ಟೆ. 257 00:18:22,227 --> 00:18:24,020 ಆಮೇಲೆ ನಿಕ್ಕಿ ಇದನ್ನು ಕೊಡಿಸಿದ. 258 00:18:25,313 --> 00:18:27,941 -ರೆಕಾರ್ಡಿಂಗ್ ಮಾಡುತ್ತಾ ನೀನು ಉತ್ತಮಗೊಂಡೆ. -ಗೊತ್ತು. 259 00:18:33,446 --> 00:18:34,739 ನನಗೆ ಊಹಿಸಲಾಗುತ್ತಿಲ್ಲ. 260 00:18:34,739 --> 00:18:36,032 ಅಲ್ಲಿರೋ ರಾಜಕುಮಾರ... 261 00:18:37,033 --> 00:18:41,287 ನಿನ್ನ ಬ್ಯಾಂಡ್ ಸದಸ್ಯರ ಜೊತೆ ಇಕ್ಕಟ್ಟಿನ ಟೂರ್ ಬಸ್ಸೊಳಗೆ ಏಳು ತಿಂಗಳು ಮಲಗುವುದು. 262 00:18:41,621 --> 00:18:42,914 ಎಂಟು ತಿಂಗಳು. 263 00:18:46,251 --> 00:18:48,378 -ಅವನು ಬರಬೇಕಿಲ್ಲ. -ಯಾಕೆ? 264 00:18:52,382 --> 00:18:54,175 ಯಾಕಂದ್ರೆ ನಾನು ವಾಪಸ್ ಹೋಗಲ್ಲ. 265 00:18:58,680 --> 00:18:59,597 ಡೈಸಿ. 266 00:19:08,147 --> 00:19:09,190 ಇದನ್ನಾದರೂ ನೋಡಿದೆಯಾ? 267 00:19:09,774 --> 00:19:14,445 {\an8}ಇನ್ನೇನು ಅತ್ತೇಬಿಟ್ಟೆ. ಪತ್ರಿಕೆಯ ಮಾರಾಟಗಾರ ನನಗೆ ತಲೆ ಕೆಡುತ್ತಿದೆ ಅಂದುಕೊಂಡ. 268 00:19:14,863 --> 00:19:16,739 ಹೌದು, ನೋಡಿದೆ. ಅದನ್ನು ನೋಡಿದೆ. 269 00:19:17,949 --> 00:19:18,950 ಮತ್ತು ಅದನ್ನು ಓದಿದೆ. 270 00:19:23,913 --> 00:19:28,167 ನನಗೆ ಬೇಕಿರುವುದೆಲ್ಲ ಇಲ್ಲಿಯೇ ಇರುವಾಗ, ನಾನಲ್ಲಿಗೆ ವಾಪಸ್ ಯಾಕೆ ಹೋಗಲಿ, ಸಿಮೋನ್? 271 00:19:32,964 --> 00:19:35,508 -ಬಿಡು. ತಮಾಷೆ ಮಾಡಬೇಡ. -ನಿಜವಾಗಲೂ. 272 00:19:39,762 --> 00:19:40,680 ಅದು ನೀನು... 273 00:19:41,431 --> 00:19:43,099 ರೋಲಿಂಗ್ ಸ್ಟೋನ್ ಮುಖಪುಟದಲ್ಲಿ. 274 00:19:49,606 --> 00:19:50,607 ಇಲ್ಲ, ನಾನಲ್ಲ. 275 00:20:11,294 --> 00:20:13,504 {\an8}ಡೈಸಿ ಜೋನ್ಸ್ ದ ಸಿಕ್ಸ್ 276 00:20:17,133 --> 00:20:18,885 {\an8}ಪ್ರೇಮ, ಕಾಮ ದ್ವೇಷ - ಅಮೆರಿಕಾದ ಮುಂದಿನ ಅದ್ಭುತ ಬ್ಯಾಂಡಿನ ಸಂಕೀರ್ಣ ಸಂಬಂಧ 277 00:20:26,476 --> 00:20:29,062 {\an8}"ಅಂಥ ಸಂಗೀತ ಮೊದಲೇ ಇತ್ತು... ಅದರಲ್ಲಿನ ವಿಶೇಷವೇ ಡೈಸಿ." 278 00:20:33,191 --> 00:20:36,986 {\an8}ಬಿಲ್ಲಿ ನನಗೆ ಹೇಳಿದ, "ಡೈಸಿಯಂಥ ಪ್ರತಿಭೆ ಡೈಸಿಯಿಂದಲೇ ವ್ಯರ್ಥವಾಗುತ್ತಿದೆ." 279 00:20:43,952 --> 00:20:45,328 ವ್ಯಸನಿ 280 00:20:45,745 --> 00:20:47,413 ತಲೆನೋವು 281 00:20:47,413 --> 00:20:49,540 ಸ್ವಾರ್ಥಿ 282 00:21:00,051 --> 00:21:00,969 ಹಾಯ್. 283 00:21:09,769 --> 00:21:11,479 ನಿನ್ನನ್ನು ಮದುವೆಯಾಗಲು ಕಾಯಲಾರೆ. 284 00:21:51,561 --> 00:21:53,646 ಹೇ, ನಿಕ್ಕಿ ನಿಕ್. ಎಂದಿನಂತೆ ತಡ. 285 00:21:53,646 --> 00:21:55,648 ಫ್ರೆಡ್ಡಿ, ದ್ವೀಪದ ಸಮಯ ಪಾಲಿಸುತ್ತಿರುವೆ. 286 00:21:59,277 --> 00:22:02,447 ಹೇ, ಗೆಳೆಯ! ಈ ಕಡೆ ಬಾ! 287 00:22:09,620 --> 00:22:11,539 ಈ ರಾಕ್ಷಸ ನಿನಗೆ ಗೊತ್ತಿದ್ದಾನೆ. 288 00:22:12,373 --> 00:22:14,042 ಯಾವುದೇ ಕಾರಣಕ್ಕೂ ಮಾತನಾಡಿಸಬೇಡ. 289 00:22:20,298 --> 00:22:21,716 -ಈತ ಜಾರ್ಜಿಯೊಸ್. -ಹಾಯ್. 290 00:22:21,716 --> 00:22:24,510 ಅದ್ಭುತ ಚಿತ್ರಕಲೆ ಬಿಡಿಸುತ್ತಾನೆ, ಚಿನ್ನದ ಎಲೆಗಳ ಮೇಲೆ. 291 00:22:24,886 --> 00:22:26,888 -ಹಾಯ್. ನಿಮ್ಮ ಭೇಟಿ ಸಂತೋಷ. -ನನಗೂ. 292 00:22:26,888 --> 00:22:28,681 ಮತ್ತು ಈತ ಪೆಟ್ರೋಸ್. 293 00:22:29,682 --> 00:22:31,142 ಸಭೆಯನ್ನು ಅಲಂಕರಿಸಿದ್ದಾನೆ. 294 00:22:32,268 --> 00:22:35,313 ಇದು ಮಲಾನಾ ಮಾಲು. ಒಳ್ಳೆ ಗುಣಮಟ್ಟ. 295 00:22:36,898 --> 00:22:41,944 ಇದರ ಅದ್ಭುತ ಮತ್ತಿನಲ್ಲಿ ನಾನು ಒಂದು ಮಹಾಕಾವ್ಯದ 28 ಚರಣಗಳನ್ನೇ ಬರೆದುಬಿಟ್ಟೆ. 296 00:22:43,154 --> 00:22:46,157 ಡೈಸಿ ಕವಿಯಿತ್ರಿ, ನಿಮ್ಮಿಬ್ಬರಿಗೂ ಒಳ್ಳೆ ಹೊಂದಾಣಿಕೆಯಾಗುತ್ತದೆ. 297 00:22:46,157 --> 00:22:49,243 -ಸರಿ, ಅದನ್ನು ನೋಡೋಣ. -ಯಾವುದರ ಬಗ್ಗೆ ಬರೆಯುವೆ, ಡೈಸಿ? 298 00:22:50,119 --> 00:22:53,206 ನಾನು ಯಾವುದರ ಬಗ್ಗೆ... ಬೇಕಾದರೂ ಬರೆಯುತ್ತೇನೆ. 299 00:22:54,123 --> 00:22:56,375 ಹೆಚ್ಚಾಗಿ ಒಂಟಿತನದ ಬಗ್ಗೆ ಬರೆಯುತ್ತಾಳೆ. 300 00:22:56,876 --> 00:22:58,628 -ನೀವು ಏನು ಬರೆಯುತ್ತೀರಿ? -ಎಲ್ಲಾ. 301 00:22:59,128 --> 00:23:00,880 ಪ್ರೀತಿ, ಹುಚ್ಚುತನ... 302 00:23:02,340 --> 00:23:03,925 ಹೆಚ್ಚಾಗಿ ಪ್ರೀತಿ, ಹುಚ್ಚುತನ. 303 00:23:03,925 --> 00:23:06,094 ಕಾವ್ಯಕ್ಕೆ ಪೆಟ್ರೋಸಿಗೆ ಬಹುಮಾನ ಸಿಕ್ಕಿತು. 304 00:23:06,094 --> 00:23:07,220 ಅಬ್ಬಾ! 305 00:23:08,054 --> 00:23:09,639 -ನಾಲ್ಕು ವರ್ಷಗಳ ಹಿಂದೆ? -ಹೌದು. 306 00:23:10,098 --> 00:23:11,599 ಅದರ ನಂತರ ಪ್ರಕಟಿಸಲೇ ಇಲ್ಲ. 307 00:23:11,599 --> 00:23:13,392 ಯಾಕೆ ನೀವು ಪ್ರಕಟಿಸಲಿಲ್ಲ? 308 00:23:13,768 --> 00:23:16,896 ಹಾಗೇನಿಲ್ಲ. ದುಡ್ಡುಬಾಕರಿಗೆ ಇಲ್ಲ ಅಂತ ಹೇಳಿದೆ ಅಷ್ಟೇ. 309 00:23:17,271 --> 00:23:18,815 ಆದರೂ ಪ್ರತಿದಿನ ಬರೆಯುತ್ತೇನೆ. 310 00:23:19,440 --> 00:23:20,691 ಜನ ಹೇಗೆ ಓದುತ್ತಾರೆ? 311 00:23:21,400 --> 00:23:23,903 ನಮ್ಮ ಮನೆಗೆ ಬನ್ನಿ. ಬಾಗಿಲು ಸದಾ ತೆರೆದಿರುತ್ತದೆ. 312 00:23:26,197 --> 00:23:27,573 ಕ್ಷಮಿಸಿ. ಅರ್ಥ ಆಗಲಿಲ್ಲ. 313 00:23:27,573 --> 00:23:30,201 ಅದನ್ನು ಮಾಡುವ ಉದ್ದೇಶವೇ 314 00:23:30,201 --> 00:23:33,454 ಅದನ್ನು ಎಲ್ಲರೂ ನೋಡಿ, ಕೇಳಿ, ಹಂಚಿಕೊಳ್ಳಲಿ... ಅಂತ ಅಲ್ವಾ? 315 00:23:34,455 --> 00:23:37,041 ಇಲ್ಲ, ಇಲ್ಲ. ಮಾಡುವುದರಲ್ಲೇ ನಿಜವಾದ ಉದ್ದೇಶ ಅಡಗಿದೆ. 316 00:23:37,041 --> 00:23:38,709 ಸಂತೋಷ ಆಗಿರುವುದು ಅದರಲ್ಲೇ. 317 00:23:39,085 --> 00:23:41,420 ನಮ್ಮ ಕೆಲಸ ಕೇವಲ ಆನಂದವಾಗಿರುವುದು. 318 00:23:42,130 --> 00:23:44,590 ಮಿಕ್ಕಿದ್ದೆಲ್ಲಾ ಕೇವಲ ಪ್ರಶಂಸೆ ಅಷ್ಟೇ. 319 00:23:46,801 --> 00:23:48,636 ಆತ ಸರಿ ಹೇಳಿದ ಗೊತ್ತಾ? 320 00:23:48,636 --> 00:23:50,346 ನಿಮ್ಮ ಕೆಲಸಕ್ಕೆ ಬೆಲೆ ಇದೆ ಅಂತ 321 00:23:50,346 --> 00:23:53,641 ಬೇರೆಯವರು ಹೇಳಲು ಬಿಡಬೇಡಿ, ಹಾಗೆ ಮಾಡಿದರೆ ನಿಮ್ಮ ಜುಟ್ಟು ಹಿಡೀತಾರೆ. 322 00:23:54,976 --> 00:23:56,644 ಈಗ ನನಗಾಗಿಯಷ್ಟೇ ಬರೆಯುತ್ತೇನೆ. 323 00:23:57,186 --> 00:24:00,773 ನನ್ನ ಸ್ನೇಹಿತರಿಗಾಗಿ. ಅಲೆಗಳಿಗಾಗಿ. ಇನ್ನೂ ಪರಿಶುದ್ಧವಾಗಿರುತ್ತೆ. 324 00:24:21,377 --> 00:24:23,462 ನಿಕ್ಕಿಯನ್ನು ಇಷ್ಟು ಸಂತೋಷವಾಗಿ ನೋಡೇ ಇಲ್ಲ. 325 00:24:24,088 --> 00:24:25,590 ಹೌದು. ಅದನ್ನೇ ನಾನು ಹೇಳಿದ್ದು. 326 00:24:26,090 --> 00:24:28,342 ಯಾವಾಗಲೂ ಸಂತೋಷವಾಗಿರುವಂತೆ ಕಾಣುತ್ತಾನೆ. 327 00:24:31,095 --> 00:24:32,013 ಅಲ್ವಾ? 328 00:24:35,099 --> 00:24:37,476 ಕಾರು ಅಪಘಾತದಲ್ಲಿ ನಿಕ್ಕಿಯ ತಂದೆ-ತಾಯಿ ಸತ್ತರು. 329 00:24:38,227 --> 00:24:40,855 ನಂತರ ಬಹಳ ಕಾಲ, ಆತ ಒಂಟಿಯಾಗಿ ಉಳಿದಿದ್ದ. 330 00:24:41,272 --> 00:24:42,481 ತೀರಾ ಇತ್ತೀಚಿನವರೆಗೂ. 331 00:24:44,066 --> 00:24:46,402 ಅವನು ತನ್ನ ಜೀವನವನ್ನು ಟೆಲಿಸ್ಕೋಪಿನಲ್ಲಿ, 332 00:24:47,111 --> 00:24:50,531 ದೂರದಿಂದ ನೋಡುತ್ತಿರುವಂತೆ ಅನಿಸುತ್ತಿತ್ತು. 333 00:24:51,908 --> 00:24:55,411 ಈಗ, ನಿನ್ನ ಜೊತೆ ಅವನು ಮತ್ತೆ ಬದುಕಲು ಆರಂಭಿಸಿದ್ದಾನೆ ಅಂತ ಕಾಣುತ್ತೆ. 334 00:25:14,889 --> 00:25:17,642 ಆಕಾಶ ಹೀಗೆ ಕಾಣುತ್ತೆ ಅಂತ ಗೊತ್ತೇ ಇರಲಿಲ್ಲ. 335 00:25:18,893 --> 00:25:20,478 ಬೆಳೆದಿದ್ದು ನಗರದಲ್ಲಿ ನೋಡು. 336 00:25:22,897 --> 00:25:24,690 ಬೇರೆ ಗ್ರಹದ ಮೇಲೆ ಇದ್ದೇವೆ ಅನ್ಸುತ್ತೆ. 337 00:25:26,525 --> 00:25:28,903 ಒಂದು ರೀತಿ ಹಾಗೆಯೇ ಇದೆ. 338 00:25:30,279 --> 00:25:33,115 -ಅಂದರೆ, ನಮ್ಮನ್ನು ಬಲ್ಲವರು ಇಲ್ಲಿ ಯಾರೂ ಇಲ್ಲ. -ಇಲ್ಲ. 339 00:25:33,115 --> 00:25:36,410 ಮತ್ತು ನಮಗಿಷ್ಟ ಬಂದಂತೆ ನಾವು ಮಾಡಬಹುದು. 340 00:25:37,745 --> 00:25:39,163 ಚಿಂತಿಸಬೇಕಾಗಿಲ್ಲ. 341 00:25:41,832 --> 00:25:44,126 ಆದರೆ ಮರಳಿ ಮನೆಗೆ ಹೋಗಬೇಕು ಅನ್ನುವುದೇ ಸಮಸ್ಯೆ. 342 00:25:47,463 --> 00:25:49,340 ಇದನ್ನು ಮನೆಯಲ್ಲಿಯೂ ಮಾಡಬಹುದಲ್ಲ? 343 00:25:53,010 --> 00:25:54,804 ಹೇ, ನಿನಗೊಂದು ಹೇಳಲೇ? 344 00:25:58,015 --> 00:25:59,392 ನಾನು ನಿನ್ನ ಪ್ರೀತಿಸುತ್ತೇನೆ. 345 00:26:05,022 --> 00:26:07,316 ನೀನು ಮರಳಿ ಏನೂ ಹೇಳಬೇಕಾಗಿಲ್ಲ. 346 00:26:11,404 --> 00:26:12,822 ನಿನಗೆ ಗೊತ್ತಿದ್ದರೆ ಸಾಕು. 347 00:26:20,121 --> 00:26:21,372 ಎಲ್ಲರೂ ನಿನ್ನ ಮೆಚ್ಚಿದರು. 348 00:26:21,372 --> 00:26:22,498 ಖಂಡಿತವಾಗಲೂ. 349 00:26:22,999 --> 00:26:25,668 -ನನ್ನನ್ನು ಮೆಚ್ಚಿದ್ದು ಆಶ್ಚರ್ಯ ಆಯ್ತಾ? -ತುಂಬಾನೇ. 350 00:26:28,379 --> 00:26:29,422 ಅದ್ಭುತವಾಗಿತ್ತು. 351 00:26:30,256 --> 00:26:31,257 ತುಂಬಾ ಸಂತೋಷವಾಗಿದೆ. 352 00:26:36,220 --> 00:26:38,264 ನಿನ್ನ ತಂದೆ-ತಾಯಿ ಬಗ್ಗೆ ಯಾಕೆ ಹೇಳಲಿಲ್ಲ? 353 00:26:42,351 --> 00:26:43,436 ನಿಜವಾಗಿ ಕ್ಷಮಿಸು. 354 00:26:44,812 --> 00:26:45,813 ಕ್ಷಮೆ ಏನೂ ಬೇಡ. 355 00:26:47,023 --> 00:26:48,566 ಇಲ್ಲಿದ್ದೇನೆ, ನಿನ್ನೊಂದಿಗೆ. 356 00:26:49,108 --> 00:26:50,526 ನನಗಷ್ಟೇ ಸಾಕು. 357 00:26:51,777 --> 00:26:53,696 ಅಷ್ಟೇ ಸಾಕಾ ಅಂತ ನನಗೆ ಗೊತ್ತಿಲ್ಲ. 358 00:27:04,123 --> 00:27:06,083 ಆಮೇಲೆ ಬಹಳ ಕಾಲ ಬೇಜಾರಿನಲ್ಲಿದ್ದೆ, 359 00:27:07,126 --> 00:27:09,503 ಆದರೆ ನಂತರ ನನ್ನ ಬೇಜಾರು ಒಂದು ಆಯ್ಕೆಯಾಗಿ ಉಳಿಯಿತು. 360 00:27:10,755 --> 00:27:13,591 ಮತ್ತೆ ನಿನಗೆ ಸಮಸ್ಯೆಯಾದರೆ, ತೊಂದರೆಯಾದರೆ ಏನು ಮಾಡುವೆ, 361 00:27:13,591 --> 00:27:15,176 ಸುಮ್ಮನೆ ನಿರ್ಲಕ್ಷಿಸುವೆಯಾ? 362 00:27:16,385 --> 00:27:18,012 ಜೀವನದ ಒಳ್ಳೆ ಸಂಗತಿಗಳನ್ನು ನೋಡುವೆ. 363 00:27:20,348 --> 00:27:22,683 ನಿನ್ನನ್ನು ನೋಡಿದರೆ ಎಲ್ಲ ಮಾಯವಾಗುತ್ತದೆ. 364 00:27:28,773 --> 00:27:30,274 ಬೌದ್ಧರು ಹೇಳುವಂತೆ, 365 00:27:31,484 --> 00:27:32,943 "ನೋವು ಸಹಜವೇ, ಆದರೆ 366 00:27:33,611 --> 00:27:35,029 "ನರಳುವುದು ಒಂದು ಆಯ್ಕೆ." 367 00:27:41,160 --> 00:27:43,120 ನಮ್ಮದೊಂದು ಕಲಾತ್ಮಕ... 368 00:27:45,664 --> 00:27:47,750 ಮತ್ತು ಭಾವನಾತ್ಮಕ ಬಂಧವಾಗಿತ್ತು. 369 00:27:48,167 --> 00:27:51,712 ಅವನಿಗೆ ಅನುಮತಿಸಿದೆ, ಮತ್ತು ಅವನು ನನ್ನ ತಲೆ ಕೆಡಿಸಿದ. 370 00:27:54,131 --> 00:27:57,802 ನಾವಿಬ್ಬರೂ ಆತ್ಮಬಂಧುಗಳೇನೋ ಅಂತ ಅಂದುಕೊಂಡಿದ್ದೆ... 371 00:27:59,303 --> 00:28:01,389 ನಾನೂ ಆತ್ಮಬಂಧು ಕಂಡುಕೊಂಡೆ ಎಂದುಕೊಂಡೆ. 372 00:28:02,306 --> 00:28:05,184 ಫ್ರಾನ್ಚೆಸ್ಕಾ. ನಮ್ಮಲ್ಲಿ ಬಹಳ ಸಾಮ್ಯವಿತ್ತು. 373 00:28:06,602 --> 00:28:07,770 ನನಗನ್ಸುತ್ತೆ... 374 00:28:08,896 --> 00:28:11,774 ಕನ್ನಡಿಯನ್ನು ನೋಡಿ ಆತ್ಮಬಂಧು ಅಂದುಕೊಳ್ಳುವುದು ಸುಲಭ. 375 00:28:14,151 --> 00:28:15,069 ಇರಬಹುದು. 376 00:28:20,116 --> 00:28:21,450 ಅವನು ಕನ್ನಡಿಯಂತಿರಬಹುದು. 377 00:28:32,461 --> 00:28:35,381 ನಿಮಗಿದ್ದ ಆ ಬಂಧ... 378 00:28:38,050 --> 00:28:39,677 ಈಗ ಇಲ್ಲ, ಅಲ್ವಾ? 379 00:29:05,911 --> 00:29:08,789 ನಿನ್ನೊಂದಿಗೆ ಇಲ್ಲಿಗೆ ಬಂದಳು. ಇದು ಗಂಭೀರವಾಗಿ ಕಾಣುತ್ತೆ. 380 00:29:08,789 --> 00:29:10,207 -ಇರಬಹುದು. -ಆದರೆ? 381 00:29:18,090 --> 00:29:20,593 ನನಗೆ ಸಣ್ಣ ಕ್ಲಬ್ಬುಗಳಲ್ಲೇ ಇರುವುದು ಬೇಡ, ಡೈಸಿ. 382 00:29:22,470 --> 00:29:23,679 ನಿನ್ನ ಬಳಿ ಇರುವುದು ಬೇಕು. 383 00:29:24,763 --> 00:29:26,056 ಎರಡೂ ಇರಬಹುದಲ್ವಾ? 384 00:29:28,559 --> 00:29:30,102 ನಿನ್ನನ್ನು ಒಂದು ಕೇಳಲೇ? 385 00:29:32,104 --> 00:29:34,273 ನೀನೇನು ಮಾಡುತ್ತಿರುವೆ ನಿನಗೆ ಗೊತ್ತಿದೆಯಾ? 386 00:29:36,650 --> 00:29:38,402 ಕಳೆದ ಬಾರಿ ನಾವು ಮಾತಾಡಿದಾಗ, 387 00:29:38,402 --> 00:29:40,654 ನಿನ್ನ ಹೃದಯ ಒಡೆಯುವ ಸ್ಥಿತಿಯಲ್ಲಿತ್ತು. 388 00:29:40,654 --> 00:29:43,240 ಎಷ್ಟೋ ಕಾಲದ ಹಿಂದೆ ಅನ್ಸುತ್ತೆ. 389 00:29:43,657 --> 00:29:44,742 ಆದರೆ ಆಗಿರಲಿಲ್ಲ. 390 00:29:46,660 --> 00:29:47,703 ಒಂದು ತಿಂಗಳ ಹಿಂದೆ. 391 00:29:47,703 --> 00:29:49,371 ನಾನಿಲ್ಲಿದ್ದೇನೆ, ಸಿಮೋನ್. 392 00:29:52,208 --> 00:29:54,960 ಬಿಲ್ಲಿ ಬೇಸರ ತರಿಸುತ್ತಾನೆ, ನಿಕ್ಕಿ ಸಂತೋಷಪಡಿಸುತ್ತಾನೆ. 393 00:29:57,046 --> 00:30:00,466 ನನಗೆ ಸಂತೋಷವಾಗಿದ್ದರೆ ಸಾಕು. 394 00:30:02,843 --> 00:30:05,846 ಒಂದೇ ಒಂದು ಸಲ, ಸಂತೋಷಪಡುವವಳು ನಾನಾಗಬೇಕು ಅನಿಸುತ್ತಿದೆ. 395 00:30:05,846 --> 00:30:08,015 ಅಂದರೆ, ನಿನಗದು ಅರ್ಥವಾಗುತ್ತಿಲ್ಲವೇ? 396 00:30:16,857 --> 00:30:17,816 ಸರಿ. 397 00:30:19,026 --> 00:30:20,319 ಉಂಗುರಗಳನ್ನು ಕೊಡಿ. 398 00:30:44,009 --> 00:30:45,553 -ಹಾಯ್. -ಹಾಯ್. 399 00:30:46,804 --> 00:30:49,056 ಈಗ ಅವರಿಬ್ಬರೂ ಒಂದಾಗಲಿ, 400 00:30:49,056 --> 00:30:51,892 ಅವರು ಮತ್ತು ದೇವರ ನಡುವೆ ಪ್ರಮಾಣ ಮಾಡಿ ಸ್ವೀಕರಿಸಲಿ. 401 00:30:54,895 --> 00:30:56,730 ಈಗ ತಮ್ಮ ಧ್ವನಿಯನ್ನು 402 00:30:57,606 --> 00:31:00,651 ಆಕಾಶ ಕೇಳಲಿ, ಅಲೆಗಳು ಆಲಿಸಲಿ. 403 00:31:13,747 --> 00:31:17,293 ಏನಂದರೆ, ನನ್ನ ಜೀವನದಲ್ಲಿ ತುಂಬಾ ಪೆದ್ದು ಕೆಲಸಗಳನ್ನು ಮಾಡಿದ್ದೇನೆ. 404 00:31:18,752 --> 00:31:22,256 ನಿಜವಾಗಲೂ ಪೆದ್ದು. ನಾನು ಸಾಯುವವರೆಗೂ ಪರಿತಪಿಸುವಂಥ ಕೆಲಸಗಳು. 405 00:31:24,967 --> 00:31:26,719 ಆದರೆ ಆ ದಿನ ಮಾತ್ರ ಪರಿತಪಿಸಲ್ಲ. 406 00:31:56,957 --> 00:31:58,250 ಬಾ. 407 00:32:00,210 --> 00:32:02,296 -ಆಗಲೇ ಹೊರಡಬೇಕಾ? -ಇಲ್ಲ. 408 00:32:25,110 --> 00:32:26,320 ಹೇ. 409 00:32:29,490 --> 00:32:31,075 ನಾನೂ ನಿನ್ನನ್ನು ಪ್ರೀತಿಸುವೆ. 410 00:32:33,202 --> 00:32:34,119 ಅಲ್ವಾ ಮತ್ತೆ. 411 00:32:36,497 --> 00:32:38,457 ಈಗಲಾದರೂ ಅರ್ಥಮಾಡಿಕೊಂಡೆ ಅನ್ನೋದು ಸಂತೋಷ. 412 00:33:13,992 --> 00:33:16,328 -ಅಭಿನಂದನೆಗಳು. -ಧನ್ಯವಾದಗಳು. 413 00:33:17,162 --> 00:33:18,163 ಚಿಯರ್ಸ್. 414 00:33:27,464 --> 00:33:31,135 -ವಿಚಿತ್ರ ಅನ್ಸುತ್ತೆ ಅಲ್ವಾ? -ಇಲ್ಲ, ಇಲ್ಲ, ಇಲ್ಲ, ಇಲ್ಲ. ಹಾಗೇನಿಲ್ಲ. 415 00:33:32,845 --> 00:33:34,346 ತಕ್ಷಣ ಆದಂತೆ ಅನಿಸಿತು. 416 00:33:34,346 --> 00:33:36,056 ಹೌದು. ಹೌದು. ನಿಜವೇ. 417 00:33:39,143 --> 00:33:41,145 ವಿಚಿತ್ರ ಅಂದರೆ ಎಂದೆಂದಿಗೂ ಇಲ್ಲಿಯೇ ಇರುವುದು. 418 00:33:41,145 --> 00:33:44,648 ಅವಳು ಪ್ರಥಮ ಸ್ಥಾನಕ್ಕೆ ಕರೆದೊಯ್ದ ಬ್ಯಾಂಡ್ ಜೊತೆಗೆ ಹೋಗುವುದಲ್ಲ. 419 00:33:47,317 --> 00:33:49,361 ಏನು ಮಾಡೋದಂತ ಡೈಸಿಗೆ ಯಾರೂ ಹೇಳಬೇಕಾಗಿಲ್ಲ. 420 00:33:51,947 --> 00:33:53,574 ಸರಿ, ಈಗ ನೀವು ಅವಳ ಪತಿ. 421 00:33:54,032 --> 00:33:56,076 ಅವಳಿಗೆ ಸ್ವಲ್ಪ ಬುದ್ಧಿ ಹೇಳಿ. 422 00:33:58,662 --> 00:33:59,747 ಪ್ರಯತ್ನಿಸಬಲ್ಲೆ. ಹೌದು. 423 00:34:05,043 --> 00:34:06,628 ಬುದ್ಧಿ ಯಾರು ನಿರ್ಧರಿಸುತ್ತಾರೆ? 424 00:34:08,255 --> 00:34:10,549 ಏನು ತ್ಯಜಿಸುತ್ತಿದ್ದಾಳೆ ನಿಮಗೆ ಗೊತ್ತಿಲ್ಲ. 425 00:34:11,884 --> 00:34:14,887 ಅವಳಿಗೆ ಇದು ಎಷ್ಟು ಬೇಕು ಅಂತ. ಅವಳಿಗೆ ಇದು ಎಷ್ಟು ಇಷ್ಟ ಅಂತ. 426 00:34:15,387 --> 00:34:16,972 ಪೆಟ್ರೋಸ್ ಸರಿಯಾಗೇ ಹೇಳಿದ್ದ. 427 00:34:18,557 --> 00:34:21,602 ಸಂಗೀತ ಮಾಡಲು... ನಮಗೆ ಪ್ರೇಕ್ಷಕರು ಬೇಕಾಗಿಲ್ಲ... 428 00:34:21,602 --> 00:34:23,061 ಡೈಸಿ ಪೆಟ್ರೋಸ್ ಥರ ಅಲ್ಲ. 429 00:34:23,937 --> 00:34:27,024 ವಾರಾಂತ್ಯದಲ್ಲಿ ಖುಷಿಗೆ ಕವನ ಬರೆಯುವ ನಿನ್ನ ಗೆಳೆಯರಂತೆ ಅಲ್ಲ ಅವಳು. 430 00:34:27,024 --> 00:34:28,484 ಖುಷಿಯಾಗಿದ್ದೇನೆ ಅಂತಾಳೆ. 431 00:34:31,403 --> 00:34:33,322 ಅವಳು ಖುಷಿಯಾಗಿರುವುದು ನಿಮಗೆ ಬೇಡವಾ? 432 00:34:35,991 --> 00:34:37,993 ಹೇ. ಇಲ್ಲೇನು ನಡೆಯುತ್ತಿದೆ? 433 00:34:41,288 --> 00:34:42,372 ಏನಂತೀರಿ... 434 00:34:42,956 --> 00:34:44,708 -ಸ್ವಲ್ಪ ಆ್ಯಸಿಡ್ ಮಾಡೋಣ... -ಹೌದಾ? 435 00:34:44,708 --> 00:34:46,084 ...ಆ ಬಂಡೆಗಳವರೆಗೆ ಈಜೋಣ? 436 00:34:46,084 --> 00:34:48,045 ಸದ್ಯ ಇದು ಒಳ್ಳೆಯ ಉಪಾಯ ಅನಿಸುತ್ತಿಲ್ಲ... 437 00:34:48,045 --> 00:34:49,588 -ಆಗಬಹುದು. -ಒಳ್ಳೆಯದು. ಸರಿ. 438 00:35:08,273 --> 00:35:10,526 ಸಿಮೋನ್ ಖುಷಿಯಾಗಿಲ್ಲ ಅಂತ ಕಾಣುತ್ತಿದೆ. 439 00:35:10,526 --> 00:35:11,944 ಖಂಡಿತ ಇಲ್ಲ. 440 00:35:13,737 --> 00:35:15,239 ಹಾಗೆ ಯಾಕೆ ಹೇಳುವೆ? 441 00:35:15,239 --> 00:35:16,824 ಏನಿಲ್ಲ, ಅದು ಸುಮ್ಮನೆ... 442 00:35:17,783 --> 00:35:19,368 ಅವಳು ನನ್ನನ್ನು ಒಪ್ಪಿದಂತಿಲ್ಲ. 443 00:35:19,368 --> 00:35:22,287 ಹಾಗೇನಿರಲ್ಲ. ಅವಳಿಗೆ ನಿನ್ನ ಪರಿಚಯ ಇಲ್ಲ ಅಷ್ಟೇ. 444 00:35:22,287 --> 00:35:25,707 ವೈಯಕ್ತಿಕವಾಗಿ ಏನೂ ಇಲ್ಲ, ನೀನು... ಅವಳಿಗೆ ಮಾತ್ರ ಬೇಕಂತೆ. 445 00:35:27,251 --> 00:35:28,627 ಏನು ಹೇಳುತ್ತಿರುವೆ? 446 00:35:32,381 --> 00:35:33,298 ಡೈಸಿ... 447 00:35:37,594 --> 00:35:38,929 ನಿನ್ನ ಪ್ರೀತಿಸುತ್ತಾಳೆ. 448 00:35:42,766 --> 00:35:43,684 ಅದು ಹುಚ್ಚುತನ. 449 00:35:44,560 --> 00:35:45,853 ನಿನಗದು ಕಾಣುತ್ತಿಲ್ಲವೇ? 450 00:35:46,854 --> 00:35:48,689 ನಿನ್ನ ನೋಡುವುದು, ಹಿಂಬಾಲಿಸುವ ರೀತಿ. 451 00:35:48,689 --> 00:35:51,692 ಸುಮ್ಮನೆ ನೀನು ಕೇಳಿದ್ದಕ್ಕೆ ಅವಳು ಅರ್ಧ ಜಗತ್ತನ್ನು 452 00:35:51,692 --> 00:35:52,860 ದಾಟಿ ಬಂದಿದ್ದಾಳೆ. 453 00:35:52,860 --> 00:35:55,279 ಅವಳು ಕಾಗದ ಬರೆದಿದ್ದರೆ ನಾನೂ ಅದೇ ಮಾಡ್ತಿದ್ದೆ... 454 00:35:55,279 --> 00:35:57,656 ಅದು ಅವಳ ತಪ್ಪಲ್ಲ. ತಪ್ಪಂತ ಹೇಳುತ್ತಿಲ್ಲ. ಅಂದರೆ... 455 00:35:59,157 --> 00:36:00,868 ನೀನಂದ್ರೆ ಯಾರಿಗೆ ಪ್ರೀತಿ ಹುಟ್ಟಲ್ಲ? 456 00:36:25,267 --> 00:36:26,935 ನೀನು ಈಗಲೇ ಹೊರಡುತ್ತಿಲ್ಲ ತಾನೇ? 457 00:36:31,023 --> 00:36:32,107 ಬೇಗನೆ. 458 00:36:33,901 --> 00:36:35,402 ಜೊತೆಯಲ್ಲಿ ತಿಂಡಿ ತಿನ್ನೋಣ. 459 00:36:36,236 --> 00:36:37,404 ಕೊನೆಯ ಸಲ ಈಜಲು ಹೋಗೋಣ. 460 00:36:37,404 --> 00:36:38,614 ಇನ್ನೂ ಒಳ್ಳೆಯ ಉಪಾಯ ಇದೆ. 461 00:36:40,324 --> 00:36:41,742 ಇನ್ನೊಂದು ವಾರ ಜಾಸ್ತಿ ಇರು. 462 00:36:45,954 --> 00:36:48,081 ನಾವು ಹೆಚ್ಚಿಗೆ ಸಮಯ ಕಳೆಯಲೇ ಇಲ್ಲ, ಸಿಮೋನ್. 463 00:36:48,999 --> 00:36:51,293 ದ್ವೀಪದ ಇನ್ನೊಂದು ಬದಿಗೆ ಹೋಗಿಯೇ ಇಲ್ಲ. 464 00:36:56,381 --> 00:36:58,717 ಇನ್ನೊಂದು ವಾರ. ಬರ್ನಿಗೂ ಇಷ್ಟವಾಗುತ್ತೆ. 465 00:37:00,344 --> 00:37:01,511 ನಾನು ನಿಜವಾಗಿ ಹೋಗಬೇಕು. 466 00:37:01,970 --> 00:37:04,848 -ನೀನೇನೂ ಮಾಡಬೇಕಿಲ್ಲ. -ಇಲ್ಲ. 467 00:37:07,476 --> 00:37:08,936 ಪ್ರದರ್ಶನಗಳು ನಿಗದಿಯಾಗಿವೆ. 468 00:37:10,187 --> 00:37:11,396 ಮತ್ತು ಖರ್ಚುಗಳಿವೆ. 469 00:37:11,939 --> 00:37:13,023 ಜವಾಬ್ದಾರಿಗಳಿವೆ. 470 00:37:15,525 --> 00:37:17,611 ಸ್ವಲ್ಪ ಚಹಾ ಮಾಡುವೆ. 471 00:37:22,950 --> 00:37:25,285 ನೀನು ಮಜವಾಗಿರುತ್ತಿದ್ದೆ. ಏನಾಯ್ತೋ ಗೊತ್ತಿಲ್ಲ. 472 00:37:25,827 --> 00:37:26,703 ಮತ್ತೆ... 473 00:37:28,789 --> 00:37:30,624 ನಮ್ಮಂಥವರಿಗೆ ಕೆಲಸ ಇರುತ್ತೆ, ಡೈಸಿ. 474 00:37:32,000 --> 00:37:36,171 ನಿನಗೆ ಸಿಕ್ಕಿರುವ ಅರ್ಧದಷ್ಟು ಅವಕಾಶಗಳಿಗೆ ನಮ್ಮಂಥವರು ಅತ್ಯಂತ ಶ್ರಮ ಪಡಬೇಕಾಗುತ್ತದೆ. 475 00:37:37,339 --> 00:37:38,924 ನಿನಗೇನಾಗಿದೆಯೋ ಗೊತ್ತಿಲ್ಲ. 476 00:37:38,924 --> 00:37:39,925 ನನಗಾ? 477 00:37:40,634 --> 00:37:41,551 ಹೌದು. 478 00:37:46,974 --> 00:37:48,600 ನಮ್ಮ ಮೊದಲ ಭೇಟಿ ನೆನಪಿದೆಯಾ? 479 00:37:54,106 --> 00:37:56,942 ನೀನು ಪುಸ್ತಕ ಹಿಡಿದು ನಡೆಯುತ್ತಿದ್ದ 480 00:37:58,151 --> 00:38:00,070 ನಾಚುವ ಹುಡುಗಿಯಾಗಿದ್ದೆ. 481 00:38:01,947 --> 00:38:04,408 -ಹಾಡು ಹಾಡಲು ಅಂಜುತ್ತಿದ್ದೆ. -ಹೌದು, ನೆನಪಿದೆ. 482 00:38:04,408 --> 00:38:06,952 -ನಾನು ಏನು ಹೇಳಿದೆ? -ವೇದಿಕೆ ಮೇಲೆ ಹಾಡಲು ಹೇಳಿದೆ. 483 00:38:06,952 --> 00:38:08,203 ನಾನು ಅದನ್ನೇ ಮಾಡಿದೆ. 484 00:38:09,121 --> 00:38:10,205 ನನಗೆ ಬೇಸರವಾಯಿತು. 485 00:38:10,205 --> 00:38:11,915 ನಿನಗಿಲ್ಲಿ ಸಂತೋಷ ಸಿಗುತ್ತೆ ಅಂತೀಯಾ? 486 00:38:13,083 --> 00:38:15,210 ಡೈಸಿ, ನಾನು ನಿನ್ನನ್ನು ಬಲ್ಲೆ. 487 00:38:15,794 --> 00:38:17,713 ಕೇವಲ ಬರೆಯಲು ನೀನು ಸಂಗೀತ ಬರೆಯುವುದಿಲ್ಲ. 488 00:38:17,713 --> 00:38:20,716 ನಿನ್ನನ್ನು ಎಲ್ಲರೂ ಆಲಿಸಬೇಕು, ನೀನು ಸಂಪರ್ಕ ಸಾಧಿಸಬೇಕು. 489 00:38:20,716 --> 00:38:22,509 -ನಾನು ವಾಪಸ್ ಹೋಗಲ್ಲ. -ನೀನು ಹೋಗಬೇಕು. 490 00:38:22,509 --> 00:38:26,513 -ಆಗಲ್ಲ. -ನಿನಗೆ ಪ್ರಥಮ ಸ್ಥಾನದ ಹಾಡಿದೆ. ಆಲ್ಬಮ್... 491 00:38:26,513 --> 00:38:28,890 ಬೇಕಾಗಿಲ್ಲ. ನನಗೆ ಅದ್ಯಾವುದೂ ಬೇಕಾಗಿಲ್ಲ! 492 00:38:28,890 --> 00:38:31,810 ಹೌದು, ಬೇಕಿದೆ. ಆದರೆ ನಿನಗೆ ಬಿಲ್ಲಿ ಡನ್ ಕಂಡರೆ ಭಯವಿದೆ. 493 00:38:31,810 --> 00:38:33,311 ನೀನು ನನ್ನ ಪ್ರೀತಿಸುತ್ತೀಯಾ? 494 00:38:35,689 --> 00:38:36,940 ಅದಕ್ಕೇನಾ ಇದೆಲ್ಲಾ? 495 00:38:50,746 --> 00:38:51,705 ಸಿಮೋನ್. 496 00:38:52,622 --> 00:38:53,665 ಹೇ, ನಾನು... 497 00:39:03,925 --> 00:39:04,926 ಸಿಮೋನ್! 498 00:39:15,187 --> 00:39:16,104 ನನ್ನನ್ನು ಕ್ಷಮಿಸು. 499 00:39:21,485 --> 00:39:22,944 ನಿನ್ನನ್ನು ಪ್ರೀತಿಸುತ್ತೇನೆ. 500 00:39:25,197 --> 00:39:28,200 ಪ್ರೀತಿಯೆಂದರೆ ಏನು ಅಂತ ಹೇಳ್ತೀನಿ, ನಿನಗೆ ಗೊತ್ತೇ ಇಲ್ಲ. 501 00:39:31,119 --> 00:39:32,704 ನಮಗೆ ಯಾರಾದರೂ ನಿಜವನ್ನು ಹೇಳಿದಾಗ, 502 00:39:34,956 --> 00:39:36,541 ಅದನ್ನು ಕೇಳಲೂ ಇಷ್ಟವಿಲ್ಲದಿದ್ದಾಗ. 503 00:39:39,628 --> 00:39:41,880 ನಿನ್ನನ್ನು ಪ್ರೀತಿಸುವೆ, ಅದಕ್ಕಾಗಿ ನಿಜ ಹೇಳುವೆ. 504 00:39:45,425 --> 00:39:47,177 ನೀನೊಬ್ಬ ದೊಡ್ಡ ಸ್ವಾರ್ಥಿ. 505 00:40:13,870 --> 00:40:16,414 ನೀನು ಇದರ ಬಗ್ಗೆ ಹೇಳಲೇ ಇಲ್ಲ. 506 00:40:17,749 --> 00:40:19,501 ನಿನ್ನ ಜನಪ್ರಿಯತೆ ಗೊತ್ತಿರಲಿಲ್ಲ. 507 00:40:31,096 --> 00:40:32,347 ಅವಳು ಹೇಳಿದ್ದು ಕೇಳಿದೆ. 508 00:40:35,475 --> 00:40:36,726 ಈ ಸಂಪರ್ಕದ ಬಯಕೆ. 509 00:40:40,981 --> 00:40:41,982 ಇದು ನಿಜವೇ? 510 00:40:46,278 --> 00:40:47,195 ಡೈಸಿ, 511 00:40:47,654 --> 00:40:48,864 ಅವಳು ಸರಿ ಹೇಳಿರಬಹುದು. 512 00:40:49,865 --> 00:40:51,116 ಬಹುಶಃ ನೀನು ವಾಪಸ್ ಹೋಗಬೇಕು. 513 00:40:52,576 --> 00:40:54,828 ನಾನು ಹೋಗಬೇಕು. ಆದರೆ... 514 00:40:55,704 --> 00:40:57,122 ನೋವು ತಿನ್ನಲು ಇಷ್ಟವಿಲ್ಲ. 515 00:41:02,627 --> 00:41:03,461 ಹೇ. 516 00:41:06,464 --> 00:41:08,091 ಈ ಸಲ ಹಾಗೆಯೇ ಇರಲ್ಲ. 517 00:41:17,601 --> 00:41:20,270 ನಿನಗೆ ಬೇರೆ ಯಾರೂ ತೊಂದರೆ ಕೊಡಲು ನಾನು ಬಿಡಲ್ಲ. 518 00:41:33,325 --> 00:41:36,411 ಬಿಸಿ ಮುಂದುವರಿಯುವಂತೆ ಆಕಾಶದಲ್ಲಿ ಒಂದು ಮೋಡವೂ ಕಾಣುತ್ತಿಲ್ಲ... 519 00:41:36,411 --> 00:41:38,413 ಲಾಸ್ ಏಂಜಲೆಸ್ 520 00:41:41,791 --> 00:41:43,835 ಮನೆಗಿಂತ ವಿಭಿನ್ನವಾಗಿ ಏನೂ ಕಾಣುತ್ತಿಲ್ಲ. 521 00:41:45,378 --> 00:41:49,216 ಕಡಲತೀರಗಳು, ತಾಳೆ ಮರಗಳು, ಬೆಟ್ಟಗಳು. 522 00:41:49,216 --> 00:41:53,345 ನೀನು ನನ್ನನ್ನು ಪರಿತಪಿಸಿದರೆ ನಾನು ನಿನ್ನನ್ನು ಪರಿತಪಿಸುವೆ 523 00:41:56,806 --> 00:41:57,724 ಡೈಸಿ? 524 00:41:57,724 --> 00:42:01,102 ನಿನಗೆ ಸಾರಾಯಿ ಮೇಲೇನೇ ಹಿಡಿತ ಇರಲ್ಲ ನಿನಗೆ ಸತ್ಯದ ಮೇಲೂ ಹಿಡಿತ ಇದ್ದಂತೆ ಕಾಣಲ್ಲ 525 00:42:01,102 --> 00:42:03,438 ಇದು ನೀನೇನಾ? 526 00:42:03,438 --> 00:42:08,860 ವ್ಯವಸ್ಥೆಯೊಳಗಿನ ವೈಫಲ್ಯ ನಾನು ಹೊಡೆಯಲು ಪೂರ್ಣವಾಗಿ ತಯಾರಿರುವೆ 527 00:42:10,028 --> 00:42:11,696 ಸ್ವಲ್ಪ ಹೊತ್ತಿನಲ್ಲೇ ಗೊತ್ತಾಗುತ್ತೆ. 528 00:42:11,696 --> 00:42:16,451 ಧಾರಾಳವಾಗಿ ನನ್ನನ್ನು ಪರಿತಪಿಸು ಆದರೆ ನಾನು ಮಾತ್ರ ಈ ಮೈಕ್ ಬಿಡಲ್ಲ 529 00:44:06,019 --> 00:44:08,021 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 530 00:44:08,021 --> 00:44:10,106 ಸೃಜನಶೀಲ ಮೇಲ್ವಿಚಾರಕರು: Vivek