1 00:00:07,049 --> 00:00:09,176 ಈ ಹಿಂದೆ ಡೈಸಿ ಜೋನ್ಸ್ ದ ಸಿಕ್ಸಲ್ಲಿ... 2 00:00:09,176 --> 00:00:10,302 ಯಾವ ಸ್ಟೇಷನ್ ಇದು? 3 00:00:10,302 --> 00:00:11,262 ಅಯ್ಯೋ, ದೇವರೇ! 4 00:00:12,054 --> 00:00:13,055 ಅಯ್ಯೋ, ದೇವರೇ. 5 00:00:13,055 --> 00:00:14,181 ದಿ ಸಿಕ್ಸ್ (ಡೈಸಿ ಜೋನ್ಸ್ ಸಹಯೋಗದೊಂದಿಗೆ) 6 00:00:15,224 --> 00:00:17,935 ಡೈಮಂಡ್ ಹೆಡ್ ಫೆಸ್ಟಿವಲ್ ಸೇರಲು ನಮಗೆ ಆಹ್ವಾನ ಬಂದಿತು. 7 00:00:17,935 --> 00:00:21,856 ದಿ ಸಿಕ್ಸ್ ಅವರನ್ನು ಬರಮಾಡಿಕೊಳ್ಳೋಣ. 8 00:00:22,648 --> 00:00:25,401 ಅವರಿಗೆ ಪಟ್ಟಿಯಲ್ಲಿ ಬೇಕಾಗಿದ್ದದ್ದು ಖಂಡಿತ ನಾವಷ್ಟೇ ಅಲ್ಲ. 9 00:00:25,401 --> 00:00:27,695 ಡೈಸಿ! ಡೈಸಿ! ಡೈಸಿ! 10 00:00:27,695 --> 00:00:29,613 ನಿಮ್ಮ ಮೊದಲ ಸಿಂಗಲ್ ನಂಬರ್ ಒನ್ ಆಗಿದೆ. 11 00:00:29,613 --> 00:00:31,073 ಮತ್ತೊಮ್ಮೆ ಯಾವಾಗ ಪ್ರದರ್ಶನ? 12 00:00:31,073 --> 00:00:32,950 ಅದು ಈ ಸಲ ಮಾತ್ರ. 13 00:00:33,367 --> 00:00:35,077 ನೀನೊಬ್ಬ ನಿಜವಾದ ನೀಚ, ಅಲ್ವಾ? 14 00:00:36,370 --> 00:00:37,621 ನನ್ನ ಪ್ರಕಾರ ನೀನು ಅದ್ಭುತ. 15 00:00:38,205 --> 00:00:39,915 ನಮ್ಮ ಮಧ್ಯೆ ಅಂತೂ ನಡೆಯಲ್ಲ, ಅಲ್ವಾ? 16 00:00:41,459 --> 00:00:42,835 ನೀನು ಬ್ಯಾಂಡಲ್ಲಿದ್ದೀಯಾ? 17 00:00:42,835 --> 00:00:44,503 -ಹಾಯ್. ನಾನು ಕ್ಯಾರೋಲಿನ್. -ಗ್ರಹಮ್. 18 00:00:45,171 --> 00:00:48,674 ನೀನು ಮತ್ತು ಡೈಸಿ, ನೀನು ಹೋಗಬೇಕಿರುವ ಕಡೆ ಹೋಗಲು ಬೇಕಿರುವುದು ಅದೇನೇ. 19 00:00:48,674 --> 00:00:49,633 ಗೊತ್ತು. 20 00:00:49,633 --> 00:00:52,344 ಸರಿ, ನಿಮ್ಮ ಬ್ಯಾಂಡ್ ನಾನು ಸೇರಬೇಕೇನು? 21 00:01:47,107 --> 00:01:49,652 {\an8}ಡೈಸಿ ಜೋನ್ಸ್ ದ ಸಿಕ್ಸ್ 22 00:02:33,946 --> 00:02:37,283 ಶುಭೋದಯ, ಮಿಸ್ ಜೋನ್ಸ್. ಬೆಳಿಗ್ಗೆ ಎಬ್ಬಿಸಲು ನೀವು ಹೇಳಿದಿರಿ. 23 00:02:47,126 --> 00:02:48,210 ಸಮಯ ಎಷ್ಟಾಗಿದೆ? 24 00:02:54,091 --> 00:02:55,593 ನೀನು ಹೋಗುವ ಸಮಯವಾಗಿದೆ, ಚಿನ್ನ. 25 00:02:58,220 --> 00:03:01,140 -ಅಪ್ಪ. -ಹೇ. 26 00:03:01,724 --> 00:03:04,768 ಹೇ. ಶುಭೋದಯ, ಸುಂದರಿ. 27 00:03:05,144 --> 00:03:07,062 ಹಲೋ. ಶುಭೋದಯ. 28 00:03:08,856 --> 00:03:10,482 ತಿಂಡಿ ತಿಂತೀಯಾ? 29 00:03:11,358 --> 00:03:13,444 ಇಲ್ಲ. ನಾನು ಸ್ನಾನ ಮಾಡಿ ಹೊರಡಬೇಕು. 30 00:03:14,737 --> 00:03:16,572 ಮರಳಿ ಎಷ್ಟೊತ್ತಿಗೆ ಬರ್ತೀಯಾ? 31 00:03:17,990 --> 00:03:22,661 ಚೆನ್ನಾಗಿ ನಡೆದರೆ, ಗೊತ್ತಿಲ್ಲ, ರಾತ್ರಿ ಊಟದ ಸಮಯಕ್ಕೆ ಬರುವೆ. 32 00:03:22,661 --> 00:03:24,079 ಚೆನ್ನಾಗಿ ಆಗದಿದ್ದರೆ? 33 00:03:25,539 --> 00:03:28,626 ಚೆನ್ನಾಗಿ ಆಗದಿದ್ದರೆ, ಆಗ ರಾತ್ರಿ ತುಂಬಾ ಹೊತ್ತು ಆಗಬಹುದು. 34 00:03:29,293 --> 00:03:30,711 -ಸರಿ. -ಸರಿ. 35 00:03:50,981 --> 00:03:54,485 ಸೌಂಡ್ ಸಿಟಿ 36 00:04:12,044 --> 00:04:16,966 5/10 "ಫೈರ್" 37 00:04:19,718 --> 00:04:22,972 ನವೆಂಬರ್ 9 1975 38 00:04:26,058 --> 00:04:27,977 -ಹಾಯ್. -ಹಾಯ್. 39 00:04:30,062 --> 00:04:34,400 ಮತ್ತೆ, 9ರಿಂದ 36ರವರೆಗೆ ಝೂಮ್ ಮಾಡುವ ಲೆನ್ಸ್ ಇದರಲ್ಲಿ ಇದೆ. 40 00:04:35,567 --> 00:04:36,652 ತಿಂಡಿ ಮಾಡಿ ತಂದಿರುವೆ. 41 00:04:39,530 --> 00:04:41,365 {\an8}ಏನನ್ನು ಬಯಸಬೇಕೋ ನಮಗೆ ಗೊತ್ತಿರಲಿಲ್ಲ. 42 00:04:41,365 --> 00:04:42,449 {\an8}ಕರೆನ್ ಸಿರ್ಕೊ ಕೀಬೋರ್ಡ್ಸ್ 43 00:04:43,492 --> 00:04:46,453 -ಮತ್ತೆ ಕಾಲುಗಳು, ಕಣೋ. -ಲೋ, ಗೊತ್ತೋ. 44 00:04:46,453 --> 00:04:48,747 -ನನಗೆ ಕಾಲಿಷ್ಟ. -ಹೇ, ಡೈಸಿ. 45 00:04:48,747 --> 00:04:49,957 ಅದು ನಿಜವೇ. 46 00:04:49,957 --> 00:04:51,041 ಹಾಯ್. 47 00:04:51,041 --> 00:04:55,629 ಮತ್ತು ಆ ಕಾಲುಗಳನ್ನು ನೋಡಿ ಸ್ವಲ್ಪ ವಿಚಲಿತನಾದೆ ಅಷ್ಟೇ. 48 00:04:55,629 --> 00:04:56,880 ವಾರೆನ್, ಅಲ್ವಾ? 49 00:04:57,798 --> 00:04:58,632 ಹಾಂ. 50 00:04:58,632 --> 00:05:01,427 ನಿನ್ನನ್ನು ಉದ್ರೇಕಿಸುವುದು ನನ್ನ ಕೆಲಸವಲ್ಲ, ಗೊತ್ತಲ್ಲ. 51 00:05:03,387 --> 00:05:05,347 ಈಗ ಗೊತ್ತಾಯಿತು. 52 00:05:05,347 --> 00:05:06,473 ಒಳ್ಳೆಯದು. 53 00:05:08,851 --> 00:05:13,272 ಸರಿ, ಎಲ್ಲರೂ, ನಾವು ಶುರು ಮಾಡುವ ಮೊದಲು ಕೆಲವು ವಿಚಾರಗಳನ್ನು ಹೇಳಬೇಕು. 54 00:05:13,272 --> 00:05:16,358 ಮೊದಲಿಗೆ, ನಮ್ಮ ಬ್ಯಾಂಡಿನ ಹೊಸ ಸದಸ್ಯೆ ಇದ್ದಾರೆ, 55 00:05:16,358 --> 00:05:18,610 ಹಾಗಾಗಿ ಡೈಸಿ ಜೋನ್ಸನ್ನು ಸ್ವಾಗತಿಸೋಣ. 56 00:05:18,610 --> 00:05:20,821 -ಹಾಂ. -ಅದ್ಭುತ. 57 00:05:20,821 --> 00:05:21,905 ಸುಸ್ವಾಗತ. 58 00:05:22,239 --> 00:05:25,034 ಇಲ್ಲಿ ಬಂದು ನಮ್ಮೊಂದಿಗೆ ಇದನ್ನು ಮಾಡುವುದಕ್ಕೆ ಧನ್ಯವಾದಗಳು. 59 00:05:25,034 --> 00:05:26,452 ಕರೆದಿದ್ದಕ್ಕೆ ಧನ್ಯವಾದಗಳು. 60 00:05:26,452 --> 00:05:28,829 ಮತ್ತೆ, ಏನು, ನಾಲ್ಕು ವಾರ ಆಯ್ತಾ? 61 00:05:28,829 --> 00:05:29,830 ಒಂದು ಹಾಡು ಬರೆದೆ. 62 00:05:30,622 --> 00:05:33,667 ಏನಂದ್ರೆ, ನಿಮ್ಮ ಮುಂದೆ ಹಾಡಲು 20 ಹಾಡುಗಳನ್ನು ಬರೆದಿರುವೆ. 63 00:05:33,667 --> 00:05:36,754 ಕ್ಷಮಿಸು. ನಿನಗೆ ಅಡಚಣೆ ಮಾಡುವುದು ನನ್ನ ಉದ್ದೇಶವಲ್ಲ. 64 00:05:36,754 --> 00:05:38,881 -ತುಂಬಾ ಉತ್ಸುಕಳಾಗಿದ್ದೇನೆ, ಅದಕ್ಕೆ... -ಸರಿ. 65 00:05:44,595 --> 00:05:45,471 ಏನು? 66 00:05:45,471 --> 00:05:48,057 {\an8}ಹಾಡುಗಳು ಬರೆದು ಹಾಡಲು ತಯಾರಿದ್ದವು. 67 00:05:48,057 --> 00:05:49,266 {\an8}ಬಿಲ್ಲಿ ಡನ್ ಪ್ರಮುಖ ಗಾಯಕ/ಗೀತರಚನೆಕಾರ 68 00:05:49,892 --> 00:05:52,519 ಸರಿ, ಡೈಸಿ, ಶುಭವಾರ್ತೆ ಏನೆಂದರೆ, 69 00:05:53,270 --> 00:05:58,317 ನಮ್ಮ ಬಳಿ ಈಗಾಗಲೇ ಆಲ್ಬಮ್ಮಿಗಾಗಿ 13 ಹಾಡುಗಳಿವೆ, ಹಾಗಾಗಿ... ಹಾಂ. 70 00:05:58,317 --> 00:06:00,819 ನಾವು ನಿನಗಾಗಿ ನುಡಿಸುತ್ತೇವೆ. ನೀನು ಕೇಳಿದ ನಂತರ, 71 00:06:00,819 --> 00:06:05,491 ಅವುಗಳ ಬಗ್ಗೆ ಏನನಿಸುತ್ತೆ ನೋಡು ಅಥವಾ ಏನಾದರೂ ಸೇರಿಸಬೇಕೇ ನೋಡು. 72 00:06:05,491 --> 00:06:06,950 {\an8}ಅಂದ್ರೆ, ಊಹಿಸಲು ಪ್ರಯತ್ನಿಸಿ. 73 00:06:06,950 --> 00:06:09,369 ಅದಕ್ಕಿಂತ ಒಳ್ಳೆಯ ರೀತಿ ಹೇಳಲಾಗಲಿಲ್ಲ. 74 00:06:09,953 --> 00:06:12,414 ಡೈಸಿಗಾಗಿ ಹೊಸದನ್ನು ನುಡಿಸೋಣ. 75 00:06:12,414 --> 00:06:13,665 ಹಾಂ. 76 00:06:15,292 --> 00:06:17,294 ನಿನಗಿದು ಇಷ್ಟವಾಗಬಹುದು. 77 00:06:17,294 --> 00:06:21,048 ಊಹಿಸಲು ಬಿಡು. ಇದು ಮಳೆಯಲ್ಲಿ ನಿನ್ನ ಹೆಂಡತಿಯ ಬಗ್ಗೆ. 78 00:06:23,050 --> 00:06:24,760 {\an8}ವಾರೆನ್ ರೋಜಸ್ ಡ್ರಮ್ಸ್ 79 00:06:24,760 --> 00:06:25,928 {\an8}ಅಯ್ಯೋ, ದೇವರೇ. 80 00:06:25,928 --> 00:06:26,970 {\an8}ಎಡ್ಡಿ ರೌಂಡ್ ಟ್ರೀ ಬೇಸ್ 81 00:06:26,970 --> 00:06:29,473 {\an8}ಅದರ ಹೆಸರು "ಶಿ'ಸ್ ದಿ ಸ್ಟಾರ್ಮ್" ಅನ್ಸುತ್ತೆ. 82 00:06:29,473 --> 00:06:30,474 {\an8}ನಿಜವಾಗಿ. 83 00:06:34,478 --> 00:06:37,356 ತಮಾಷೆಯಾಗಿದೆಯೇ? ಕ್ಷಮಿಸು. ಏನಾದರೂ ಹೇಳುವುದಿತ್ತಾ? 84 00:06:38,482 --> 00:06:44,154 ನಿನ್ನ ಹೆಂಡತಿಯ ಕುರಿತಾದ ಪ್ರೇಮಗೀತೆಗಳಿಗೆ ಕೋರಸ್ ಹಾಡಲು ನಾನಿಲ್ಲಿ ಬಂದಿಲ್ಲ. ಆಯ್ತಾ? 85 00:06:45,364 --> 00:06:49,868 ನಾವು ಬ್ಯಾಂಡಿನಲ್ಲಿ ಇದ್ದೇವೆ ಅಂದ್ರೆ, ಈ ಆಲ್ಬಮ್ ನಿನ್ನದಷ್ಟೇ ಅಲ್ಲದೆ, 86 00:06:49,868 --> 00:06:53,163 ನನ್ನದು, ಕರೆನ್ದು, ಗ್ರಹಮ್ದು, ವಾರೆನ್ದು, 87 00:06:53,163 --> 00:06:54,748 ಮತ್ತು ಅವನದೂ ಆಗಿರಬೇಕು. 88 00:06:56,208 --> 00:06:57,376 ಗೊತ್ತಾ? 89 00:06:57,376 --> 00:06:59,670 ನಾನು ಹೇಳುತ್ತಿದ್ದುದನ್ನೇ ಹೇಳುತ್ತಿದ್ದಳು. 90 00:06:59,670 --> 00:07:02,297 ಒಂದು ಮಾರ್ಗದ ಬಗ್ಗೆಯಾದರೂ ನಾವು ಮಾತನಾಡಬಾರದಾ? 91 00:07:02,297 --> 00:07:06,552 ರೆಕಾರ್ಡಿಗೋಸ್ಕರ ನಿನ್ನ ಬಳಿ ಏನಾದರೂ ದೊಡ್ಡ ಉಪಾಯ, ಯೋಜನೆ ಇದೆಯೇ, ಅಥವಾ... 92 00:07:06,552 --> 00:07:07,970 ಅಂದ್ರೆ, ನಾನು ಒಪ್ಪುತ್ತೇನೆ. 93 00:07:08,679 --> 00:07:11,598 ಏನು? ಇದು ಒಳ್ಳೆಯ ಚರ್ಚೆ ಅನ್ಸುತ್ತೆ. 94 00:07:11,598 --> 00:07:13,350 -ನನಗೇನನ್ಸುತ್ತೆ ಗೊತ್ತಾ? -ದೇವರೇ. 95 00:07:13,350 --> 00:07:15,519 ಇದು ರಾಕ್ ಅಂಡ್ ರೋಲ್ ರೆಕಾರ್ಡ್ ಆಗಬೇಕು. 96 00:07:15,519 --> 00:07:18,021 ಧನ್ಯವಾದ, ಎಡ್ಡಿ. ನಿನ್ನ ಅಭಿಪ್ರಾಯಕ್ಕೆ ಧನ್ಯವಾದ. 97 00:07:18,021 --> 00:07:19,523 ಇಲ್ಲ, ನಿಜವಾಗಿಯೂ. 98 00:07:20,315 --> 00:07:23,402 ಇದು ಖಂಡಿತ ರಾಕ್ ಅಂಡ್ ರೋಲ್ ಆಗಲಿದೆ. ಮತ್ತೇನು? 99 00:07:23,402 --> 00:07:24,695 ಆದರೆ ಆಗಿದೆಯಾ? 100 00:07:24,695 --> 00:07:30,325 ಯಾಕಂದ್ರೆ ಇದರಲ್ಲಿ ಬಹುತೇಕ ಹಾಡುಗಳು ಪಾಪ್ ಸಂಗೀತದಂತೆ ಕೇಳಿಸುತ್ತವೆ. 101 00:07:31,034 --> 00:07:35,664 ಸನ್ನಿ ಮತ್ತು ಶೆರ್ ಹಾಡುಗಳಂತೆ, ಗೊತ್ತಾ? ನಾವೇನು ಪಾಪ್ ಬ್ಯಾಂಡಾ ಅಥವಾ... ಅಲ್ವಾ? 102 00:07:35,664 --> 00:07:39,293 ಅಂದರೆ, ರಾಕ್ ಅಂಡ್ ರೋಲ್ ಆಕಾಂಕ್ಷೆ, ನೋವು, ಕೋಪದ ಬಗ್ಗೆ ಆಗಿರಬೇಕು. 103 00:07:39,835 --> 00:07:43,672 ಪರಿಚಯವಿಲ್ಲದ ಹುಡುಗಿಯ ಜೊತೆ ಮಲಗುವುದು, ಹೆಂಡತಿಯನ್ನು ಪ್ರೀತಿಸದಿರುವುದು. 104 00:07:46,175 --> 00:07:48,969 -ತಪ್ಪು ತಿಳಿಯಬೇಡ, ಬಿಲ್ಲಿ. -ಅದನ್ನೇ ಹೇಳಬೇಕೆಂದುಕೊಂಡೆ. 105 00:07:48,969 --> 00:07:51,430 -ಆಫ್ರಿಕಾದ ಡ್ರಮ್ಸ್ ಹಾಕಿದ್ರೆ? -ಒಳ್ಳೆ ಉಪಾಯ. 106 00:07:51,430 --> 00:07:53,307 ಧ್ವನಿ, ಪಿಯಾನೋದೊಂದಿಗೆ ಮಾಡಬಹುದು. 107 00:07:53,307 --> 00:07:55,726 ಒಂದು ಸಲ ನನ್ನದೇ ಬೇಸ್ ಬರೆಯಬೇಕೆಂದುಕೊಂಡಿರುವೆ. 108 00:07:55,726 --> 00:07:57,811 -ಒಳ್ಳೆಯದು. -ಅತ್ಯಂತ ದರಿದ್ರ ಉಪಾಯ. 109 00:07:57,811 --> 00:07:59,021 ಯಾವುದು ಕೆಟ್ಟ ಉಪಾಯ? 110 00:07:59,479 --> 00:08:01,148 ನೀವೇ ನನ್ನನ್ನು ಕರೆದಿದ್ದು. 111 00:08:01,148 --> 00:08:03,609 ಅದು ತಪ್ಪಾಗಿರಬಹುದು, ಡೈಸಿ. 112 00:08:04,151 --> 00:08:05,277 ಮುಗಿಯಿತಾ? 113 00:08:06,486 --> 00:08:07,404 ಆಯ್ತಾ? 114 00:08:07,404 --> 00:08:11,325 ದೇವರೇ, ಸಣ್ಣ ಮಕ್ಕಳ ಹಾಗೆ ಆಡುತ್ತಿದ್ದೀರಿ. 115 00:08:11,325 --> 00:08:15,579 ನೀವಿಬ್ಬರೇ ಎಲ್ಲಿಗಾದರೂ ಹೋಗಿ ಯಾವುದರ ಮೇಲಾದರೂ ಕೆಲಸ ಮಾಡಿ. ಇದು ಹೇಗೆ? 116 00:08:15,579 --> 00:08:17,664 ಏನೇ ಇರಲಿ, ಬಾಗಿಲು ಅಲ್ಲಿಯೇ ಇದೆ. 117 00:08:17,664 --> 00:08:21,084 ಹಾಗಾಗಿ ಮುಚ್ಕೊಂಡು ಇಲ್ಲಿಂದ ಹೋಗಿ, ಯಾಕಂದ್ರೆ ನನಗೆ ಮಾಡಲು ಕೆಲಸ ಇದೆ. 118 00:08:23,045 --> 00:08:24,296 ತೊಲಗಿ ಮೊದಲು. 119 00:08:27,090 --> 00:08:28,217 ಬನ್ನಿರಿ. 120 00:08:34,348 --> 00:08:35,724 ಮತ್ತೆ, ನಾವು? 121 00:08:36,433 --> 00:08:37,601 ನನಗೇನಾಗಬೇಕಿಲ್ಲ. 122 00:08:38,727 --> 00:08:40,771 -ಮತ್ತೆ, ಎಲ್ಲಿಗೆ ಹೋಗೋಣ? -ಆ್ಯಪಲ್ ಪ್ಯಾನ್. 123 00:08:41,480 --> 00:08:43,315 -ಏನು? -ನನಗೆ ಹಸಿವಾಗಿದೆ. 124 00:08:43,774 --> 00:08:47,027 -ಬೆಳಿಗ್ಗೆ 10:00 ಆಗಿದೆ. -ಹಸಿವಿನಲ್ಲಿ ನಾನು ಕೆಲಸ ಮಾಡಲಾರೆ. 125 00:09:10,842 --> 00:09:12,511 -ಸುಮ್ಮನೆ ಇರ್ತೀಯಾ? -ಒಳ್ಳೆಯ ಹಾಡು. 126 00:09:12,511 --> 00:09:14,930 -ಇದು ನನ್ನ ಕಾರು. -ಅಯ್ಯೋ, ದೇವರೇ. 127 00:09:16,473 --> 00:09:18,225 ನಮಸ್ಕಾರ. ಏನು ಬೇಕು? 128 00:09:18,225 --> 00:09:21,645 ಎರಡು ಹಿಕರಿ ಬರ್ಗರ್ಸ್, ಮೀಡಿಯಂ ರೇರ್, ಮತ್ತು ಎರಡು ಸೈಡ್ ಫ್ರೈಸ್. 129 00:09:21,645 --> 00:09:23,480 ನೀನು ನನಗೆ ಹೇಳಬೇಕಿಲ್ಲ. 130 00:09:23,480 --> 00:09:25,482 ಹೌದು, ನಾನು ಹೇಳಲಿಲ್ಲ. 131 00:09:30,529 --> 00:09:32,698 ಹಾಂ, ನನಗೂ ಅದನ್ನೇ ಕೊಡಿ. 132 00:09:32,698 --> 00:09:33,907 ಈಗ ತಂದೆ. 133 00:09:41,748 --> 00:09:45,544 ನೋಡು, ನಾವಿಬ್ಬರೂ ಯಾವಾಗಲೂ ಜಗಳವಾಡುತ್ತಿದ್ದರೆ ಯಾವುದೇ ಪ್ರಯೋಜನವಿಲ್ಲ. 134 00:09:46,003 --> 00:09:47,629 ಹೌದಾ, ನಿನಗೆ ಹೇಗೆ ಗೊತ್ತು? 135 00:09:48,672 --> 00:09:49,506 ಏನು? 136 00:09:49,506 --> 00:09:52,718 ಜಗಳದ ಬಗ್ಗೆ ನಿನಗೇನು ಗೊತ್ತು? ನಿನ್ನ ವಿರುದ್ಧ ಯಾರೂ ನಿಲ್ಲಲ್ಲ. 137 00:09:57,097 --> 00:09:58,682 ನಿನ್ನನ್ನೊಂದು ಪ್ರಶ್ನೆ ಕೇಳಲೇ? 138 00:09:58,682 --> 00:10:01,435 -ಧಾರಾಳವಾಗಿ. -ನಿನಗೆ ಯಾಕೆ ನಿನ್ನ ಹೆಂಡತಿಯ ಬಗ್ಗೆ ಹುಚ್ಚು? 139 00:10:01,435 --> 00:10:03,020 -ಏನು? -ಕೆಮೀಲ ಒಳ್ಳೆಯವಳೇ, 140 00:10:03,020 --> 00:10:05,439 ಆದರೆ ಬೇರೆ ವಿಚಾರವಾಗಿ ನೀನ್ಯಾಕೆ ಹಾಡು ಬರೆಯಲ್ಲ? 141 00:10:05,439 --> 00:10:09,443 ಅವಳು ನಿನ್ನನ್ನು ಬಿಟ್ಟು ಹೋಗುವ ಭಯವೇ ಅಥವಾ ನಿನಗೆ ಬೇರೇನೂ ಬರುವುದಿಲ್ಲವೇ? 142 00:10:09,443 --> 00:10:11,695 -ಅದು ಯಾಕಂತ... -ಡೈಸಿ. 143 00:10:11,695 --> 00:10:13,947 -ಏನಾದರೂ ತಪ್ಪು ಮಾಡಿದ್ಯಾ? -ಡೈಸಿ. 144 00:10:14,323 --> 00:10:16,575 ನಿನ್ನೊಂದಿಗೆ ಇದರ ಬಗ್ಗೆ ಮಾತನಾಡುವುದಿಲ್ಲ. 145 00:10:16,575 --> 00:10:17,701 -ಸರಿ. -ಸರಿ. 146 00:10:20,537 --> 00:10:23,457 ಸರಿ, ಇಬ್ಬರಿಗೂ ಎರಡು ಹಿಕರಿ ಬರ್ಗರ್ಗಳು. 147 00:10:27,461 --> 00:10:28,795 ಫ್ರೈಸ್. 148 00:10:32,424 --> 00:10:33,592 -ಆನಂದಿಸಿ. -ಧನ್ಯವಾದಗಳು. 149 00:10:36,762 --> 00:10:39,181 ಭವ್ಯವಾದದ್ದನ್ನು ಕಂಡೆ 150 00:10:50,859 --> 00:10:52,235 ಈ ಹಾಡೆಂದರೆ ಇಷ್ಟವೇ? 151 00:10:53,278 --> 00:10:54,738 "ಸ್ಟಂಬಲ್ಡ್ ಆನ್ ಸಬ್ ಲೈಮ್"? 152 00:10:54,738 --> 00:10:57,115 -ಈ ಹಾಡು ಎಲ್ಲರಿಗೂ ಇಷ್ಟ. -ನಾನೇ ಬರೆದದ್ದು. 153 00:10:57,115 --> 00:10:59,659 -ನೀನೇ ಬರೆದದ್ದು ಅಂದರೆ? -ನಾನೇ ಬರೆದದ್ದು. 154 00:10:59,659 --> 00:11:01,912 -"ಹನೀಕೂಂಬ್" ಬರೆದಂತೆಯಾ? -ಹಾಗೇನೇ. 155 00:11:02,496 --> 00:11:04,289 -ಸರಿ. -ನಾನೇ ಸಾಹಿತ್ಯ ರಚಿಸಿದ್ದು. 156 00:11:05,290 --> 00:11:07,626 ರಾಗದ ಭಾಗ. ಬಹುತೇಕ ರಾಗದ ಭಾಗ. 157 00:11:09,336 --> 00:11:12,422 ಈ ಹಾಡನ್ನು ಕೇಳು. ವ್ಯಾಟ್ ಸ್ಟೋನ್ ಇದನ್ನು ಬರೆಯಬಲ್ಲ ಅಂತೀಯಾ? 158 00:11:29,439 --> 00:11:32,234 ಇದೊಂದು ಅತ್ಯುತ್ತಮ ಹಾಡು, ಡೈಸಿ. 159 00:11:33,193 --> 00:11:34,152 ಸರಿ, ಕಣಪ್ಪ. 160 00:11:35,112 --> 00:11:37,989 ನಿನಗೀಗ ಇಷ್ಟವಾಗಿರುವುದರಿಂದ ದುಷ್ಟನ ಹಾಗೆ ಆಡುವುದು ಬಿಡು. 161 00:11:41,368 --> 00:11:43,620 ನಿಜವಾಗಲೂ ಬರಲ್ವಾ ನೀನು? 162 00:11:43,620 --> 00:11:45,080 ನಾನು ಈಗಾಗಲೇ ನೋಡಿದ್ದೇನೆ. 163 00:11:45,914 --> 00:11:47,707 ಹೌದು. ಒಂದು ಸಲ ನೋಡಿದ್ದೀಯ. 164 00:11:47,707 --> 00:11:51,086 ರೋಲರ್ಬಾಲನ್ನು ಅಷ್ಟು ಸಲ ನೋಡಿದರೆ ಸಾಕು. 165 00:11:51,086 --> 00:11:53,839 ನಿನಗೆ ಕಲಾಭಿರುಚಿ ಇದ್ದರೆ ಅಲ್ವೋ, ತಮ್ಮ. 166 00:11:53,839 --> 00:11:55,715 ಅದೊಂದು ಮಹೋನ್ನತ ದೃಶ್ಯಕಾವ್ಯ. 167 00:11:55,715 --> 00:11:58,009 ಸರಿ, ಎರಡನೆಯ ಬಾರಿ ಆನಂದಿಸಿ, ಮಹನೀಯರೇ. 168 00:11:58,802 --> 00:11:59,886 ಖಂಡಿತ. 169 00:12:03,723 --> 00:12:05,934 -ಎಲ್ಲಿಗೆ ಹೊರಟಿದ್ದೀರಿ? -ಸಿನಿಮಾಗೆ. 170 00:12:05,934 --> 00:12:07,060 ಮತ್ತೆ ರೋಲರ್ಬಾಲಾ? 171 00:12:07,602 --> 00:12:09,896 -ಅದೊಂದು ಅದ್ಭುತ ಚಿತ್ರ. -ಹೇ! 172 00:12:17,821 --> 00:12:21,533 ಹೇ, ಇವತ್ತು ನಿನ್ನ ಜೊತೆ ಕಡಲ ತೀರಕ್ಕೆ ಹೋಗೋಣ ಅಂದುಕೊಳ್ಳುತ್ತಿದ್ದೆ. 173 00:12:25,996 --> 00:12:27,122 ಅಂದರೆ, ಯಾಕೆ ಬೇಡ? 174 00:12:28,331 --> 00:12:29,833 ನನಗೆ ಬೇರೇನೂ ಕೆಲಸವಿಲ್ಲ. 175 00:12:33,879 --> 00:12:34,880 ಸರಿ. 176 00:12:38,717 --> 00:12:39,676 ಗ್ರಹಮ್. 177 00:12:45,515 --> 00:12:46,892 ಆರಾಮಿದ್ದೀವಿ ತಾನೇ? 178 00:12:48,727 --> 00:12:49,728 ಖಂಡಿತವಾಗಲೂ ಇದ್ದೇವೆ. 179 00:12:52,606 --> 00:12:54,774 ಚೆನ್ನಾಗಿದ್ದೇವೆ. ಆಯ್ತಾ? 180 00:12:55,692 --> 00:12:56,776 ಸರಿ. 181 00:12:59,279 --> 00:13:01,364 -ಹೋಗಿ ನನ್ನ ವಸ್ತುಗಳನ್ನು ತರುವೆ. -ಸರಿ. 182 00:13:09,539 --> 00:13:11,583 -ಹೇ. -ಹೇಗಿದ್ದೀಯಾ? 183 00:13:11,583 --> 00:13:13,793 -ಆರಾಮ. ನೀನು? -ಸಿಕ್ತಾ? ಚೆನ್ನಾಗಿದ್ದೇನೆ. 184 00:13:14,211 --> 00:13:15,170 ಹಾಂ. 185 00:13:18,340 --> 00:13:20,175 -ಸರಿ. -ಬರ್ತಿದ್ದೀಯಾ? 186 00:13:20,175 --> 00:13:22,010 ನೀವು ಹೋಗಿ ಬನ್ನಿ. 187 00:13:22,010 --> 00:13:23,136 ಆರಾಮ ಇದ್ದೀಯಾ? 188 00:13:23,136 --> 00:13:25,722 ಹಾಂ, ಹೀಗಂತ ನನಗೆ ಗೊತ್ತಿರಲಿಲ್ಲ... 189 00:13:25,722 --> 00:13:28,058 ಇಲ್ಲ, ಪರವಾಗಿಲ್ಲ. ಹಾಂ. ಹತ್ತು. 190 00:13:28,391 --> 00:13:30,602 ನೋಡಿದ್ಯಾ? ವಿಚಿತ್ರವಾಗಿ ಆಡಬೇಡ. 191 00:13:32,354 --> 00:13:33,480 ಹೋಗೋಣ. 192 00:13:34,397 --> 00:13:35,440 ಸರಿ. 193 00:13:41,863 --> 00:13:44,407 -ಇದು ಯಾರ ಮನೆ? -ನೀನು ಮುಂಚೆ ಇಲ್ಲಿಗೆ ಬಂದಿಲ್ವಾ? 194 00:13:47,494 --> 00:13:49,246 ಬಂದಿದ್ದೀನಿ ಅನ್ನೋಕಾಗಲ್ಲ. 195 00:13:49,246 --> 00:13:51,373 -ಸರಿ, ಮತ್ತೆ... -ಡೈಸಿ? 196 00:13:51,373 --> 00:13:52,666 ಏನು? 197 00:13:53,542 --> 00:13:54,668 ಕೀಲಿಕೈ... 198 00:13:55,126 --> 00:13:58,088 -ಏನು ಮಾಡುತ್ತಿರುವೆ? -ಬೀಗದ ಕೈ ಹುಡುಕುತ್ತಿರುವೆ, ಬಿಲ್ಲಿ. 199 00:14:01,675 --> 00:14:03,468 -ದೇವರೇ... -ಡೈಸಿ? 200 00:14:06,721 --> 00:14:09,683 ಕಾನೂನುಬಾಹಿರವಾದದ್ದನ್ನು ಮಾಡುತ್ತಿದ್ದೇವೆ ಅನಿಸುತ್ತಿದೆ? 201 00:14:10,475 --> 00:14:12,686 -ಇದು ರಾಕ್ ಅಂಡ್ ರೋಲ್ ಹಾಗೆ ಇಲ್ಲ. -ಆಯ್ತು. 202 00:14:34,958 --> 00:14:36,251 ಸರಿ. 203 00:14:46,803 --> 00:14:47,887 ಪರವಾಗಿಲ್ಲವೇ. 204 00:15:22,464 --> 00:15:23,548 ಯಾವುದಿದು? 205 00:15:24,132 --> 00:15:26,343 ನನ್ನ ತಮ್ಮ ಸುಮ್ಮನೆ ಏನೋ ನುಡಿಸುತ್ತಿದ್ದ. 206 00:15:30,430 --> 00:15:33,099 -ಮತ್ತೆ, ಇದನ್ನು ಹೇಗೆ ಮಾಡುವುದು? -ಏನು ಹಾಗಂದರೆ? 207 00:15:33,099 --> 00:15:35,935 -ಅಂದರೆ, ನಿನ್ನ ವಿಧಾನ ಹೇಗೆ? -ನನ್ನ ವಿಧಾನವೇ? 208 00:15:35,935 --> 00:15:37,312 ಹೌದು, ಹಾಡುಗಳನ್ನು ಬರೆಯಲು. 209 00:15:38,855 --> 00:15:40,315 ನೋಡ್ತಿದ್ದೀಯಲ್ಲ. 210 00:15:44,736 --> 00:15:46,738 ನೀನು ಕುಡಿಯಲ್ಲಂತ ನಿನ್ನ ಹೆಂಡತಿ ಹೇಳಿದಳು. 211 00:15:46,738 --> 00:15:48,865 ಇದರಿಂದ ನಿನಗೆ ತೊಂದರೆಯೇ? 212 00:15:49,908 --> 00:15:50,950 ಪರವಾಗಿಲ್ಲ. 213 00:15:55,372 --> 00:15:57,499 ಬೇರೆಯವರೊಂದಿಗೆ ಹೇಗೆ ಬರೆಯಬೇಕೋ ಗೊತ್ತಿಲ್ಲ. 214 00:15:57,499 --> 00:15:59,334 ನನಗೂ ಅಷ್ಟೇ. ನಿಜವಾಗಿಯೂ. 215 00:15:59,334 --> 00:16:00,377 ನಾವೇನು ಮಾಡೋಣ? 216 00:16:09,719 --> 00:16:11,596 ಕನಿಷ್ಠಪಕ್ಷ ಇದನ್ನು ನೋಡು, ಆಯ್ತಾ? 217 00:16:12,222 --> 00:16:14,015 ಎಲ್ಲವೂ ನನ್ನ ಹೆಂಡತಿಯ ಬಗ್ಗೆ ಅಲ್ಲ. 218 00:16:21,189 --> 00:16:22,774 ಸರಿ, ಬೇರೆಯದನ್ನು ಆರಿಸಿಕೋ. 219 00:16:28,530 --> 00:16:30,907 ಏನು ಗೊತ್ತಾ? ಅದನ್ನು ಕೊಡು. ಪರವಾಗಿಲ್ಲ. 220 00:16:31,825 --> 00:16:33,576 ಏನಾದರೂ ಹೊಸದನ್ನು ಶುರು ಮಾಡೋಣ. 221 00:16:50,468 --> 00:16:51,302 ಸರಿ. 222 00:16:52,387 --> 00:16:53,263 ಏನು? 223 00:16:55,223 --> 00:16:56,099 ಏನು? 224 00:16:58,351 --> 00:17:00,270 ಈಗೇನು ಸಮಸ್ಯೆ? 225 00:17:00,270 --> 00:17:02,230 ಏನೂ ಇಲ್ಲ. ಅದು... 226 00:17:03,773 --> 00:17:04,816 ಏನು? 227 00:17:05,358 --> 00:17:09,654 ನನಗೆ ಪ್ರಕೃತಿಯ ಬಗ್ಗೆ, ದೃಶ್ಯಗಳ ಬಗ್ಗೆ ಹಿಡಿಸಲ್ಲ, ಅದು... 228 00:17:11,156 --> 00:17:11,990 ಸರಿ. 229 00:17:11,990 --> 00:17:14,951 ಕೆಲವರಿಗೆ ಅದು ಹಿಡಿಸಬಹುದು, ಆದರೆ ನನಗಲ್ಲ. 230 00:17:15,368 --> 00:17:16,911 ಇದೇನು ಸಾಹಿತ್ಯವೇ? 231 00:17:16,911 --> 00:17:18,329 ಹೌದು, ಇದು ಸಾಹಿತ್ಯವೇ. 232 00:17:18,329 --> 00:17:21,666 ಇವು ಆಲೋಚನೆಗಳು, ತುಣುಕುಗಳು, ನನ್ನ ರಚನೆಗಳು. 233 00:17:21,666 --> 00:17:24,043 -"ಅಗ್ನಿಮಾರುತದಲ್ಲಿ ಗಾಳಿಪಟಗಳು". -ಅದು ಉಪಮೆ. 234 00:17:24,043 --> 00:17:26,671 -ಯಾವುದಕ್ಕೆ? -ನಿಯಂತ್ರಣವಿಲ್ಲದೆ ಇರುವುದಕ್ಕೆ. 235 00:17:26,671 --> 00:17:28,339 ಮತ್ತೆ ಹಾಗೆಯೇ ಹೇಳು. 236 00:17:29,799 --> 00:17:33,344 -ಕೆಲವೊಮ್ಮೆ ಅನಿಸಿದ್ದನ್ನು ಹೇಳಿದರೆ ಒಳ್ಳೆಯದು. -ಅನಿಸಿದ್ದನ್ನೇ ಹೇಳುವೆ. 237 00:17:33,344 --> 00:17:34,512 -ಹೌದಾ? -ಹೇಳಬಲ್ಲೆ. 238 00:17:34,512 --> 00:17:36,931 ನೀನೊಬ್ಬ ತಲೆಕೆಟ್ಟವನು. ಇದು ಹೇಗಿದೆ? 239 00:17:39,726 --> 00:17:41,478 ಇದೊಂದು ರೀತಿ ಪರವಾಗಿಲ್ಲ. 240 00:17:45,565 --> 00:17:48,902 ಸರಿ. ಮತ್ತೊಮ್ಮೆ ಆ ರಿಫ್ ನುಡಿಸು. ನಿನ್ನ ತಮ್ಮನ ರಿಫ್ ನುಡಿಸು. 241 00:17:54,365 --> 00:17:55,408 ಸರಿ. 242 00:19:09,065 --> 00:19:11,401 -ವಿರಾಮ ತೆಗೆದುಕೊಳ್ಳುತ್ತಿದ್ದೇವಾ? -ಇಲ್ಲ. 243 00:19:11,943 --> 00:19:13,319 ಬರೆಯುತ್ತಿದ್ದೇವೆ. 244 00:19:43,892 --> 00:19:46,603 ನೀನು ರಾಕ್ ಬ್ಯಾಂಡಿನಲ್ಲಿರುವುದು ತುಂಬಾ ಚೆನ್ನಾಗಿದೆ. 245 00:19:48,354 --> 00:19:50,815 ಒಬ್ಬ ಹೆಣ್ಣಾಗಿ. ಇಂಥದ್ದನ್ನು ನಾವು ನೋಡುವುದೇ ಇಲ್ಲ. 246 00:19:51,608 --> 00:19:52,942 ವಿಪರ್ಯಾಸವಾದರೂ ನಿಜವೇ. 247 00:19:56,863 --> 00:19:58,781 ನಿನಗೆ ಯಾವ ರೀತಿಯ ಸಂಗೀತ ಇಷ್ಟ? 248 00:19:58,781 --> 00:20:00,992 ಸ್ವಲ್ಪ ಎಲ್ಲಾ ರೀತಿಯದ್ದೂ ಅನ್ನಬಹುದು. 249 00:20:03,244 --> 00:20:04,954 ಬ್ಯಾರಿ ಮ್ಯಾನಿಲೋ ಅಂತೂ ಅದ್ಭುತ. 250 00:20:07,123 --> 00:20:08,374 ತುಂಬಾ ಸುಂದರವಾಗಿದ್ದೀಯ. 251 00:20:10,627 --> 00:20:13,963 '73ರಲ್ಲಿ ಮಿಸ್ ಟೀನ್ ಅರಿಜೋನಾ ಆಗಿದ್ದೆ. 252 00:20:14,380 --> 00:20:16,507 -ಅಭಿನಂದನೆಗಳು. -ಧನ್ಯವಾದ. 253 00:20:17,050 --> 00:20:18,509 ಈಗೇನು ಮಾಡ್ತೀಯಾ? 254 00:20:18,509 --> 00:20:20,929 ಯುಸಿ ಸ್ಯಾಂಟಾ ಬಾರ್ಬರಾದಲ್ಲಿ ವಿದ್ಯಾರ್ಥಿನಿ. 255 00:20:21,429 --> 00:20:22,513 ಪೂರ್ವ ವೈದ್ಯಕೀಯ. 256 00:20:23,640 --> 00:20:25,141 ವೈದ್ಯೆಯಾಗುತ್ತೀಯಾ? 257 00:20:25,141 --> 00:20:26,643 ಮನೋವೈದ್ಯೆ. 258 00:20:28,603 --> 00:20:30,521 ನಿನಗೆ ಗ್ರಹಮ್ ಅಂದರೆ ಇಷ್ಟವೇ? 259 00:20:31,105 --> 00:20:32,065 ಹಾಂ. 260 00:20:32,482 --> 00:20:35,318 ಸತ್ಯ ಹೇಳು. ಅವನು ರಾಕ್ಸ್ಟಾರ್ ಆಗಿರೋದಕ್ಕಾ? 261 00:20:35,318 --> 00:20:36,986 ಗಿಟಾರ್ ಹಿಡಿದಿದ್ದಾನೆ ಅಂತಲಾ? 262 00:20:36,986 --> 00:20:38,529 ಹಾಗಂತೇನಿಲ್ಲ. 263 00:20:40,907 --> 00:20:41,824 ಮತ್ತೆ ಯಾಕೆ? 264 00:20:44,077 --> 00:20:46,037 ಅವನು ತುಂಬಾ ಒಳ್ಳೆಯ ಹುಡುಗ. 265 00:20:48,122 --> 00:20:49,916 ಮತ್ತೆ, ಏನಂದ್ರೆ... 266 00:20:51,918 --> 00:20:54,545 -ಏನು? -ಅವನು ತುಂಬಾ ಸೆಕ್ಸಿ ಅಂತ. 267 00:20:56,673 --> 00:20:57,590 ಹೌದಾ? 268 00:20:59,926 --> 00:21:01,302 ಏನು ಮಾತಾಡುತ್ತಿದ್ದೀರಿ? 269 00:21:01,302 --> 00:21:03,054 -ಏನಿಲ್ಲ. -ಏನಿಲ್ಲ. 270 00:21:03,054 --> 00:21:05,056 ಸರ್ಫಿಂಗ್ ಕಲಿಯಲು ಯಾರಿಗೆ ಇಷ್ಟ? 271 00:21:05,056 --> 00:21:08,434 ಹುಚ್ಚಾ ನಿನಗೆ? ಉಚ್ಚೆಯಂಥ ಆ ಗಲೀಜು ನೀರಿನಲ್ಲಿ ನಾನು ಇಳಿಯುವುದಿಲ್ಲ. 272 00:21:08,434 --> 00:21:09,894 -ಬಾ. -ನಾನು ಬರ್ತೀನಿ. 273 00:21:09,894 --> 00:21:10,979 -ಹೌದಾ? -ಹೌದು. 274 00:21:11,688 --> 00:21:15,274 ಸರಿ. ಆಮೇಲೆ ಮುಳುಗಬೇಡ, ಸಿರ್ಕೊ. ನಮಗೆ ಕೀಬೋರ್ಡ್ ವಾದಕಿ ಬೇಕು. 275 00:21:15,274 --> 00:21:16,526 ಇಬ್ಬರೂ ಮಜಾ ಮಾಡಿ. 276 00:21:16,526 --> 00:21:18,361 ಸರಿ. ಹೋಗಿ ಬರ್ತೀವಿ. 277 00:22:14,625 --> 00:22:17,003 ನನ್ನ ಸ್ವಂತ ದುಡ್ಡಿನಿಂದ ಖರೀದಿಸಿದ ಮೊದಲ ರೆಕಾರ್ಡ್. 278 00:22:17,712 --> 00:22:21,382 ಹೇಳ್ತೀನಿರು. ನಿನ್ನದು ಒಂಥರಾ ಚೆನ್ನಾಗಿತ್ತು, 279 00:22:22,008 --> 00:22:24,719 ಎವರ್ಲಿ ಬ್ರದರ್ಸ್ ಥರ. 280 00:22:27,722 --> 00:22:29,140 ಫ್ಯಾಟ್ಸ್ ಡಾಮಿನೋ? 281 00:22:29,849 --> 00:22:30,892 ಅಲ್ಲ. 282 00:22:31,851 --> 00:22:32,935 ಲಿಟಲ್ ರಿಚರ್ಡ್? 283 00:22:33,519 --> 00:22:34,979 -ಅಲ್ಲ. -ಮತ್ತೆ ಯಾವುದು? 284 00:22:39,942 --> 00:22:42,445 "(ಹೌ ಮಚ್ ಈಸ್) ದಟ್ ಡಾಗೀ ಇನ್ ದ ವಿಂಡೋ?" 285 00:22:42,904 --> 00:22:45,531 ನೀನು ಯಾರಿಗಾದರೂ ಹೇಳಿದರೆ, ಇಲ್ಲ ಎನ್ನುತ್ತೇನೆ. 286 00:22:45,531 --> 00:22:46,824 ರೆಕಾರ್ಡ್ ಆರಿಸುವೆಯಾ? 287 00:22:48,785 --> 00:22:49,786 ಸರಿ. 288 00:22:58,461 --> 00:22:59,462 ತಗೋ. 289 00:23:00,129 --> 00:23:01,798 -ಸರಿ. -ಯಾವುದು? 290 00:23:03,299 --> 00:23:05,009 ಮೊದಲ ಹಾಡು ತುಂಬಾ... 291 00:23:05,927 --> 00:23:07,220 ಏನು? 292 00:23:08,221 --> 00:23:09,847 ನನ್ನ ಮೊದಲ ಪ್ರೇಮ. 293 00:23:10,515 --> 00:23:11,682 ಆಸಕ್ತಿಕರವಾಗಿದೆ. 294 00:23:22,860 --> 00:23:28,199 ನಾನು ಹೋಗಲಾಗುವ ಪ್ರಪಂಚ ಒಂದಿದೆ 295 00:23:28,199 --> 00:23:33,204 ನನ್ನ ರಹಸ್ಯಗಳನ್ನು ಹೇಳುವಂಥದ್ದು 296 00:23:34,872 --> 00:23:38,126 ನನ್ನ ಕೋಣೆಯೊಳಗೆ 297 00:23:39,460 --> 00:23:41,963 -ನಿನಗೀ ಹಾಡು ಗೊತ್ತಾ? -ನನಗೀ ಹಾಡು ಗೊತ್ತು. 298 00:23:41,963 --> 00:23:43,881 ನನ್ನ ಕೋಣೆಯೊಳಗೆ 299 00:23:44,423 --> 00:23:47,468 ನನ್ನ ಕೋಣೆಯೊಳಗೆ 300 00:23:49,637 --> 00:23:52,890 ಈ ಪ್ರಪಂಚದಲ್ಲಿ ನಾನು... 301 00:23:55,935 --> 00:23:57,937 -ಭುಜಗಳನ್ನು ಅಲುಗಾಡಿಸು. -ಸರಿ. 302 00:23:57,937 --> 00:24:01,941 ನೀನು ಒಂದು ಸ್ಟೆಪ್ ಅಷ್ಟೇ ಮಾಡಬೇಕು. ಒಂದು. ಹಾಗೆ. 303 00:24:01,941 --> 00:24:04,652 -ದೇಹವನ್ನು ಜರುಗಿಸು. -ಸರಿ. 304 00:24:08,364 --> 00:24:10,032 ನಾವು ಸ್ನೇಹಿತರಾಗಿರಬೇಕಿಲ್ಲ. 305 00:24:13,369 --> 00:24:17,290 ಆದರೆ ನಾವು ಜೊತೆಯಾಗಿ ಬರೆಯಬೇಕೆಂದರೆ, ಅಪರಿಚಿತರಾಗಿರಲಾಗುವುದಿಲ್ಲ. 306 00:24:20,126 --> 00:24:22,003 ನನ್ನನ್ನು ಏನಾದರೂ ಕೇಳು. 307 00:24:22,003 --> 00:24:23,921 ನನ್ನನ್ನು ಏನು ಬೇಕಾದರೂ ಕೇಳು. 308 00:24:25,923 --> 00:24:27,300 ನೀನು ನನಗೆ ನಿಜ ಹೇಳುವೆಯಾ? 309 00:24:28,301 --> 00:24:30,553 ಖಂಡಿತ. ಆಣೆ ಮಾಡಿ ಹೇಳ್ತೀನಿ. 310 00:24:32,513 --> 00:24:33,514 ಸರಿ. 311 00:24:37,768 --> 00:24:39,604 ದಿನದಲ್ಲಿ ಎಷ್ಟು ಮಾತ್ರೆ ತಗೋತೀಯ? 312 00:24:39,604 --> 00:24:41,355 ಇದನ್ನು ನೀನು ಕೇಳಬೇಕಾ? 313 00:24:42,315 --> 00:24:44,275 -ಉತ್ತರ ಹೇಳು. -ನಂಗೊತ್ತಿಲ್ಲ. 314 00:24:44,275 --> 00:24:45,443 ಏನಾದರೂ ಅಂದೆ. 315 00:24:45,443 --> 00:24:47,695 ನನಗೆ ಗೊತ್ತಿಲ್ಲ. ನಾನು ಎಣಿಸುವುದಿಲ್ಲ. 316 00:24:47,695 --> 00:24:49,488 ಅದು ಸಮಸ್ಯೆ ಅನ್ಸಲ್ವಾ? 317 00:24:49,488 --> 00:24:51,657 ಯಾಕೆ? ಅದನ್ನು ವೈದ್ಯರೇ ಹೇಳಿದ್ದು. 318 00:24:51,657 --> 00:24:54,327 -ನಿಲ್ಲಿಸಲಾಗದಿದ್ದರೆ ಸಮಸ್ಯೆ. -ನಿಲ್ಲಿಸಬಲ್ಲೆ. 319 00:24:54,327 --> 00:24:56,996 ಶೌಚಾಲಯದಲ್ಲಿ ಎಸೆಯುತ್ತೇನೆ. ನನಗೇನೂ ಅನಿಸುವುದಿಲ್ಲ. 320 00:24:59,165 --> 00:25:00,875 ನಿನ್ನನ್ನು ನಂಬಲಾಗುವುದಿಲ್ಲ. 321 00:25:24,065 --> 00:25:25,858 ಬೇರೆ ಏನು ತಿಳಿದುಕೊಳ್ಳಬೇಕು? 322 00:25:32,114 --> 00:25:34,367 ಬ್ಯಾಂಡ್ ಯಾಕೆ ಸೇರಬೇಕು ಎಂದುಕೊಂಡೆ? 323 00:25:34,367 --> 00:25:35,618 ನಿನಗಾಗಿ. 324 00:25:39,789 --> 00:25:40,831 ನಾನು ಯಾಕೆ? 325 00:25:41,540 --> 00:25:43,125 ನೀನು ಗೊತ್ತಿರುವಂತೆ ಅನಿಸುತ್ತೆ. 326 00:25:43,918 --> 00:25:46,045 ನಮ್ಮಿಬ್ಬರಿಗೂ ದೀರ್ಘಕಾಲದ ಪರಿಚಯ ಇರುವಂತೆ. 327 00:25:46,045 --> 00:25:50,091 ನೀನು ನನಗೆ ಗೊತ್ತಿರುವುದು ಹೇಗೆ ಅಂತ ಹೇಳಲು ಗೊತ್ತಿಲ್ಲ. 328 00:25:52,301 --> 00:25:54,512 ನಿನಗೆ ಹೀಗೆ ಯಾವಾಗಲೂ ಆಗುತ್ತಾ? 329 00:25:55,680 --> 00:25:56,597 ಇಲ್ಲ. 330 00:25:59,475 --> 00:26:01,102 ಇನ್ನೊಂದು, ಆಮೇಲೆ ನಾನು ಕೇಳುವೆ. 331 00:26:06,941 --> 00:26:07,942 ಸರಿ. 332 00:26:16,075 --> 00:26:17,994 ಕೈಯನ್ನು ಹೇಗೆ ಕೊಯ್ದುಕೊಂಡೆ ಹೇಳು. 333 00:26:17,994 --> 00:26:19,495 ನಿನಗೆ ಹೇಳಿದೆ. 334 00:26:19,495 --> 00:26:21,998 -ನಿನ್ನ ತಂದೆ ತಾಯಿಯ ಮನೆಗೆ ನುಗ್ಗುವಾಗಲೇ? -ಹೌದು. 335 00:26:22,415 --> 00:26:24,375 ನಿಜವಾಗಲೂ ಪ್ರಯತ್ನಿಸಿದೆಯಾ? 336 00:26:26,627 --> 00:26:27,878 ಅರ್ಥ ಆಗಲಿಲ್ಲ. 337 00:26:29,714 --> 00:26:33,676 ದೇಶದ ನಂಬರ್ ಒನ್ ಹಾಡು ನನ್ನದಾಗಿತ್ತು, ಅವರಿಗೆ ಹೇಳಬೇಕು ಎಂದುಕೊಂಡೆ. 338 00:26:33,676 --> 00:26:35,094 ಆದರೆ ಅವರು ಇರಲಿಲ್ಲ. 339 00:26:35,761 --> 00:26:36,929 ಇಲ್ಲ. 340 00:26:38,139 --> 00:26:40,641 -ಬೇರೆ ಕಡೆ ಹೊರಟುಹೋದರು. -ಏನು? 341 00:26:45,396 --> 00:26:46,856 ನಿನಗೆ ಹೇಳದೆ 342 00:26:48,107 --> 00:26:49,483 ಬೇರೆ ಕಡೆ ಹೊರಟುಹೋದರು. 343 00:26:53,904 --> 00:26:56,907 ಅಯ್ಯೋ, ಡೈಸಿ, ಇಷ್ಟು ವಿಷಾದಕರ ಸುದ್ದಿ ನಾನೆಲ್ಲೂ ಕೇಳಿಲ್ಲ. 344 00:26:57,366 --> 00:27:01,579 ಆದರೆ, ಬಿಲ್ಲಿ, ನಿನಗೆ ಹೇಳಲು ಇಷ್ಟವಿಲ್ಲ, ಆದರೆ ಜೀವನ ಪೂರ್ತಿ ವಿಷಾದಗಳೇ ಇವೆ. 345 00:27:01,579 --> 00:27:05,291 ನನಗೆ ಬೇಜಾರಾದಾಗ ಮಾತ್ರೆ ತಗೋತೀನಿ. ನೀನೇನು ಮಾಡುತ್ತೀಯ? 346 00:27:11,088 --> 00:27:12,089 ನಂಗೊತ್ತಿಲ್ಲ. 347 00:27:14,592 --> 00:27:17,261 ಅಂದರೆ, ನಾನೂ ಅದನ್ನೇ ಮಾಡುತ್ತಿದ್ದೆ. 348 00:27:17,261 --> 00:27:19,430 ಆದರೆ ನನಗನಿಸುತ್ತೆ ನಾನು... 349 00:27:20,639 --> 00:27:21,640 ಏನು? 350 00:27:24,769 --> 00:27:26,354 ನನಗದು ಅನುಭವಕ್ಕೆ ಬರುತ್ತಿದೆ 351 00:27:29,357 --> 00:27:30,232 ಅನ್ಸುತ್ತೆ. 352 00:27:31,942 --> 00:27:34,070 ನಾನು ಕೇಳಿದ ಅತ್ಯಂತ ವಿಷಾದಕರ ಸಂಗತಿ ಇದು. 353 00:27:44,622 --> 00:27:47,166 -ಗೊತ್ತಾಯ್ತು. -ಏನು ಗೊತ್ತಾಯ್ತು? 354 00:27:47,166 --> 00:27:51,295 ಏನಾಗಬೇಕಂದುಕೊಂಡಿದ್ದ ಬಗ್ಗೆ ಹಾಡುಗಳನ್ನು ಬರೆಯುತ್ತೀಯ, ಏನಾಗಿರುವೆ ಅಲ್ಲ. 355 00:27:53,672 --> 00:27:55,341 ನೀನು ಹಾಗೆ ಮಾಡದಿದ್ದರೆ? 356 00:27:55,925 --> 00:27:59,595 ಅಷ್ಟೇನೂ ಒಳ್ಳೆಯವನಲ್ಲದವನ ಬಗ್ಗೆ ನೀನು ಹಾಡುಗಳನ್ನು ಬರೆದರೆ, 357 00:27:59,595 --> 00:28:03,599 ಎಲ್ಲರಿಗೂ ನಿರಾಸೆ ಮೂಡಿಸುವವನು ಮತ್ತು ಬಯಸಬಾರದ್ದನ್ನು ಬಯಸುವವನ ಬಗ್ಗೆ? 358 00:28:05,559 --> 00:28:07,478 ಅಂಥ ಹಾಡನ್ನು ಯಾರು ಕೇಳುವರು? 359 00:28:07,478 --> 00:28:08,604 ನಾನು ಕೇಳುವೆ. 360 00:28:11,899 --> 00:28:13,401 ಎಲ್ಲರೂ ಕೇಳುವರು. 361 00:28:18,447 --> 00:28:21,492 -ಆರಾಮವಾಗಿರು. ಆಯ್ತಾ? -ನನಗೆ ಆರಾಮವಾಗಿರುವುದು ಗೊತ್ತಿಲ್ಲ. 362 00:28:21,951 --> 00:28:25,830 -ನಾನು ಇಂಗ್ಲೆಂಡಿನವಳು. -ನೀನು ಆರಾಮಿದ್ದೀಯ, ಅಲ್ವಾ? ನಾನಿದ್ದೇನೆ. 363 00:28:28,040 --> 00:28:29,625 ಅವಳು ಒಳ್ಳೆಯವಳು. 364 00:28:29,625 --> 00:28:31,001 ಹೌದು, ನಿಜವೇ. 365 00:28:32,044 --> 00:28:33,254 ಅಂದವಾಗಿದ್ದಾಳೆ ಕೂಡ. 366 00:28:33,838 --> 00:28:35,047 ಹೌದು, ಅನ್ನಬಹುದು. 367 00:28:35,923 --> 00:28:37,341 ಏನು ಮಾತನಾಡುತ್ತೀರಿ? 368 00:28:38,509 --> 00:28:40,719 -ಕರೆನ್? -ಏನು? 369 00:28:40,928 --> 00:28:44,098 -ಅವಳನ್ನು ದಡ್ಡಿ ಎನ್ನುತ್ತಿರುವೆಯಾ? -ಇಲ್ಲ. ಇಲ್ಲ! 370 00:28:44,098 --> 00:28:46,350 ಅವಳು ರೋಡ್ಸ್ ಪಂಡಿತೆ ಇದ್ದಂತೆ. 371 00:28:46,350 --> 00:28:50,229 ನಿಮ್ಮಿಬ್ಬರಿಗೂ ಏನಾದರೂ ಸಮಾನ ಆಸಕ್ತಿಗಳು ಇವೆಯೇ ಎಂದು ಕೇಳುತ್ತಿದ್ದೇನೆ. 372 00:28:51,605 --> 00:28:56,777 ಹಾಂ. ಅಂದರೆ, ಇವೆ. ಇವೆ ಅನ್ಸುತ್ತೆ. 373 00:28:56,777 --> 00:29:02,616 ಆಗಲೇ ಅವಳ ಜೊತೆ ಮಾತನಾಡುತ್ತಿದ್ದಾಗ ಅವಳು ಬ್ಯಾರಿ ಮ್ಯಾನಿಲೋ ಅಭಿಮಾನಿ ಅಂತ ಗೊತ್ತಾಯ್ತು. 374 00:29:03,742 --> 00:29:04,869 ತಮಾಷೆ ಮಾಡಬೇಡ. 375 00:29:13,878 --> 00:29:16,672 ನಾವು ಕೇವಲ ಮೂರು ನಾಲ್ಕು ಬಾರಿ ಹೊರಗೆ ಹೋಗಿದ್ದೇವೆ, 376 00:29:17,423 --> 00:29:22,386 ಮತ್ತು, ನಿಜ ಹೇಳಬೇಕೆಂದರೆ, ನಾವು ಜಾಸ್ತಿ ಮಾತಾಡಲ್ಲ, ಗೊತ್ತಾಯ್ತಲ್ಲ? 377 00:29:22,386 --> 00:29:24,972 -ಹೌದು. ಹೌದು, ಗೊತ್ತಾಯ್ತು. -ಹಾಂ. 378 00:29:24,972 --> 00:29:26,974 ಏನೇ ಇದ್ದರೂ ಹೆಚ್ಚಿಗೆ ಮಾತಿಲ್ಲ. 379 00:29:26,974 --> 00:29:29,101 -ಅರ್ಥ ಆಯ್ತು. -ಸಂಭೋಗದ ಕಾರಣದಿಂದ. 380 00:29:29,101 --> 00:29:30,811 ಧನ್ಯವಾದ, ಗ್ರಹಮ್. ಅರ್ಥವಾಯಿತು. 381 00:29:32,354 --> 00:29:34,899 -ದೇವರೇ. -ಅಲೆ ಬಂತು. ನೀನು ರೆಡಿನಾ? 382 00:29:35,441 --> 00:29:37,568 -ಇಲ್ಲ. -ತಡವಾಗಿದೆ. ತಯಾರಾಗು. 383 00:29:37,568 --> 00:29:39,111 -ಹೊಟ್ಟೆಯ ಮೇಲೆ. -ದೇವರೇ. 384 00:29:39,111 --> 00:29:41,530 -ಹೊಟ್ಟೆಯ ಮೇಲೆ. ಬೀಸು. -ಅಯ್ಯೋ, ದೇವರೇ. 385 00:29:41,530 --> 00:29:43,699 ಬೀಸು. ಬೀಸು. ಹೋಗು, ಹೋಗು, ಹೋಗು. 386 00:29:47,912 --> 00:29:48,787 ದೇವರೇ. 387 00:30:01,717 --> 00:30:03,552 -ನೀನು ರೆಡಿನಾ? -ಯಾವುದಕ್ಕೆ ರೆಡಿ? 388 00:30:03,552 --> 00:30:05,387 -ಹೋಗೋಣ ನೀರಿಗೆ? -ಬೇಡ, ಬೇಡ, ಬೇಡ. 389 00:30:05,387 --> 00:30:06,597 ರೆಡಿನಾ? ಬಾ. 390 00:30:17,399 --> 00:30:20,861 -ಇಷ್ಟ ಆಯ್ತಾ? -ಹೌದು, ಆದರೆ ಎಲ್ಲಿಗೆ ಹೋಗುತ್ತೆ? 391 00:30:20,861 --> 00:30:25,282 ನಾನು ಮಾಡುತ್ತಿದ್ದ ರೀತಿಯಲ್ಲಿ ಅದು ಎಲ್ಲಿಗೋ ಹೋಗುವಂತಿತ್ತು. 392 00:30:25,282 --> 00:30:28,827 ನೀನು ಬರೆದ ಸಾಲುಗಳಿಗೆ ಇದು ಚೆನ್ನಾಗಿ ಹೊಂದುತ್ತೆ ಅನ್ಸುತ್ತೆ. 393 00:30:28,827 --> 00:30:30,246 -ಸರಿ. -ಪ್ರಯತ್ನಿಸಿ ನೋಡು. 394 00:30:30,246 --> 00:30:31,163 ಸರಿ. 395 00:30:31,163 --> 00:30:33,082 ಗಂಟೆಗಳು ಅದರ ಸುತ್ತಲೇ ಗಿರಕಿ ಹೊಡೆದು, 396 00:30:33,082 --> 00:30:36,794 ಕಾರ್ಡ್ಸ್ ಮತ್ತು ರಾಗ ಬದಲಾಯಿಸಿ, ಅದು ಸಿಗುವವರೆಗೂ ಪ್ರಯತ್ನಿಸಿದೆವು. 397 00:30:36,794 --> 00:30:38,212 ಮತ್ತೆ ಸಿ ಗೆ. 398 00:30:48,222 --> 00:30:50,349 ಅದು ಸರಿ ಬಂದಾಗ ಆಗುವ ಅನುಭವವೇ ಬೇರೆ. 399 00:30:50,349 --> 00:30:53,852 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 400 00:30:53,852 --> 00:30:56,063 ನಾವಿಬ್ಬರೂ ಕೆಳಗೆ ಹೋಗಬಾರದು. 401 00:30:56,063 --> 00:30:57,731 -ಅದನ್ನು ಪ್ರಯತ್ನಿಸೋಣ. -ಸರಿ. 402 00:30:57,731 --> 00:30:59,024 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 403 00:30:59,024 --> 00:30:59,984 ಹಾಗೆ. 404 00:31:15,916 --> 00:31:19,461 ಆಯ್ತು, ಆದರೆ ಅವನು ಆ ಹಾಡನ್ನು ಬರೆಯಲಿಲ್ಲ. 405 00:31:19,461 --> 00:31:20,588 ಅದು ಯಾರಿಗೆ ಬೇಕು? 406 00:31:20,963 --> 00:31:25,384 ಆದರೆ, ಕ್ಯಾರೋಲಿನ್, ಅದು... ಆ ಹಾಡಿನ ಹೆಸರೇ "ನಾನು ಹಾಡುಗಳನ್ನು ಬರೆಯುವೆ." 407 00:31:25,384 --> 00:31:27,595 ಅದರಿಂದ ನಿನಗೆ ಏನೂ ಸಮಸ್ಯೆ ಅನ್ಸಲ್ವಾ? 408 00:31:27,595 --> 00:31:30,848 -ಯಾರು ಬರೆದರೂ ಅದು ಒಳ್ಳೆಯ ಹಾಡೇ. -ಸ್ವಲ್ಪ ಸಹಾಯ ಮಾಡ್ತೀಯಾ? 409 00:31:30,848 --> 00:31:33,142 ಅದರಲ್ಲಿ ನಿನಗೆ ಏನಿಷ್ಟ? 410 00:31:33,142 --> 00:31:35,936 ಗೊತ್ತಿಲ್ಲ. ಪದಗಳು? ಅವನ ಧ್ವನಿ? 411 00:31:37,104 --> 00:31:38,897 ಅಂದರೆ, ನಿಜವಾಗಿ ಹೇಳು. 412 00:31:40,774 --> 00:31:42,901 ಹೇ, ನೋಡು, ಯಾವುದೇ ಉತ್ತರ ತಪ್ಪಲ್ಲ. 413 00:31:42,901 --> 00:31:45,863 -ನಾನು ಹಾಗೆ ಹೇಳಲ್ಲ. -ತುಂಬಾ ಕೇಳಬೇಕೆನಿಸುವ ಹಾಡು. 414 00:31:47,031 --> 00:31:48,240 ನನಗೆ ಸಂತೋಷ ಕೊಡುತ್ತೆ. 415 00:31:49,825 --> 00:31:51,619 ಪಾಪ್ ಸಂಗೀತ ಇರುವುದೇ ಹಾಗಲ್ಲವೇ? 416 00:31:51,619 --> 00:31:54,747 ಅದು ನಿಮ್ಮ ಜೀವನವನ್ನೇನೂ ಬದಲಾಯಿಸಬೇಕಿಲ್ಲ. 417 00:31:55,956 --> 00:31:56,957 ಇದೊಳ್ಳೆ ಚೆನ್ನಾಗಿದೆ. 418 00:31:56,957 --> 00:31:59,960 -ಯಾವುದೇ ತಪ್ಪು ಉತ್ತರ ಇಲ್ಲ ಅಂದೆ? -ಹೋಗೋಲೋ. 419 00:32:03,172 --> 00:32:04,340 ಬ್ಯಾರಿ ಮ್ಯಾನಿಲೋ. 420 00:32:08,969 --> 00:32:10,596 ಅವರಿನ್ನೂ ವಾಪಸ್ ಬಂದಿಲ್ವಾ? 421 00:32:13,349 --> 00:32:16,518 ದೇವರೇ, ಒಂದೇ ದಿನದಲ್ಲಿ ರೋಲರ್ಬಾಲ್ ಎಷ್ಟು ಸಲ ನೋಡಬಹುದು? 422 00:32:20,105 --> 00:32:22,399 -ನನ್ನನ್ನು ಒಳಗೆ ಬಿಡ್ತೀಯಾ? -ಏನು? ಯಾಕೆ? 423 00:32:22,399 --> 00:32:24,860 ಗೊತ್ತಿಲ್ಲ. ಮನೆಯಲ್ಲಿ ಯಾರಾದರೂ ಇದ್ದರೆ? 424 00:32:25,486 --> 00:32:28,113 -ಎಂಥವರು? -ಗೊತ್ತಿಲ್ಲ. ಕಳ್ಳರು? 425 00:32:28,781 --> 00:32:29,907 -ಕಳ್ಳರಾ? -ಹಾಂ. 426 00:32:29,907 --> 00:32:32,201 ಈ ನಡುವೆ ತುಂಬಾ ಕಳ್ಳತನ ಆಗುತ್ತಿದೆ. 427 00:32:33,243 --> 00:32:36,997 -ನಾನು ಯಾವುದೂ ಕೇಳಿಲ್ಲವಲ್ಲ. -ಸುಮ್ಮನೆ ಒಳಗಡೆ ಬಿಡ್ತೀಯಾ? 428 00:32:36,997 --> 00:32:40,084 -ಹೋಗಲಿ ಒಳಗಡೆ ಬಿಡು. -ಹಾಂ. ಸರಿ. ಆಯ್ತು. 429 00:32:40,084 --> 00:32:41,627 ದೇವರೇ. 430 00:32:41,627 --> 00:32:43,504 -ಒಂದು ಕ್ಷಣ ಬರ್ತೀನಿ. -ಸರಿ. 431 00:32:50,719 --> 00:32:52,846 ಮತ್ತೆ, ಎಲ್ಲವೂ ಸರಿ ಇದ್ದಂತಿದೆ. 432 00:33:14,576 --> 00:33:16,078 ಬಹುಶಃ ನಾನು... 433 00:33:17,996 --> 00:33:20,165 ನನ್ನ ಸರ್ಫ್ಬೋರ್ಡ್ ತರಬೇಕು. 434 00:33:29,883 --> 00:33:35,806 ದೂರದಲ್ಲಿ ಅದು ನನ್ನೆಡೆ ಕೈ ಬೀಸುತ್ತಿದೆ ಮರಳಿನಲ್ಲಿ ಮರೀಚಿಕೆಯಂತೆ 435 00:33:36,974 --> 00:33:41,478 ನಾವು ರಹಸ್ಯಗಳ ಹಂಚಿಕೊಳ್ಳುತ್ತಿರುವುದಿರಬಹುದು ಯಾರಿಗೂ ಅರ್ಥವಾಗದಂತೆ 436 00:33:41,478 --> 00:33:42,938 ಯಾಕೆ "ಅದು" ಅಂತೀವಿ? 437 00:33:42,938 --> 00:33:45,691 "ದೂರದಲ್ಲಿ ಅದು ನನ್ನೆಡೆ ಕೈ ಬೀಸುತ್ತಿದೆ." "ಅದು" ಏನು? 438 00:33:47,317 --> 00:33:49,737 -ನಮ್ಮ ಭವಿಷ್ಯ. -ದೂರದಲ್ಲಿ ಏನು ಕಾಣುತ್ತಿದೆ? 439 00:33:49,737 --> 00:33:52,156 "ನೀವು" ಅಥವಾ "ನಾವು" ಯಾಕಾಗಬಾರದು? 440 00:33:52,156 --> 00:33:53,532 -"ನಾವು" ಸರಿ. -ಹೌದು. 441 00:33:53,532 --> 00:33:54,992 -"ನಾವು" ಚಂದ. -ಅದ್ಭುತ. 442 00:33:54,992 --> 00:33:56,493 -ಪ್ರಯತ್ನಿಸೋಣ. -"ನಾವು" ಹಾಕು. 443 00:33:57,077 --> 00:33:57,911 ಸರಿ. 444 00:33:59,496 --> 00:34:00,664 ನಾವು ಕೈ ಬೀಸುವುದು... 445 00:34:00,664 --> 00:34:02,374 -ಪ್ರಯತ್ನಿಸು. -ಆಯ್ತು. ಸರಿ. 446 00:34:03,459 --> 00:34:05,836 ಒಂದು, ಎರಡು, ಮೂರು, ನಾಲ್ಕು. 447 00:34:06,211 --> 00:34:12,050 ದೂರದಲ್ಲಿ ನಾವು ಕೈ ಬೀಸುವುದು ಕಂಡೆ ಮರಳಿನಲ್ಲಿ ಮರೀಚಿಕೆಯಂತೆ 448 00:34:13,385 --> 00:34:18,807 ನಾವು ರಹಸ್ಯಗಳ ಹಂಚಿಕೊಳ್ಳುತ್ತಿರುವುದಿರಬಹುದು ಯಾರಿಗೂ ಅರ್ಥವಾಗದಂತೆ 449 00:34:19,224 --> 00:34:20,225 ನನಗಿಷ್ಟವಾಯಿತು. 450 00:34:20,225 --> 00:34:25,564 ನೀನೀಗ ನನ್ನ ತಲೆಯ ಮೇಲೆ ಕುಳಿತಿರುವೆ ಯಾಕಿಷ್ಟು ಕಷ್ಟ ಮಾಡುತ್ತಿರುವೆ? 451 00:34:25,564 --> 00:34:27,191 ಈಗ ಹಾಡಿನಂತೆ ಕೇಳಿಸುತ್ತಿದೆ. 452 00:34:27,191 --> 00:34:29,193 ನನ್ನ ಮನಸ್ಸು ಮುರಿಯಬೇಡ ನನ್ನ... 453 00:34:29,193 --> 00:34:32,988 ನನ್ನ ಮನಸ್ಸು ಮುರಿದು ಬಿಡಬೇಡ ನೀನೆಲ್ಲಿರುವೆ ಹೇಳುವೆಯಾ? 454 00:34:33,530 --> 00:34:36,116 -ಸರಿ. -ಸರಿ. ಈ ಭಾಗ... 455 00:34:36,116 --> 00:34:38,619 -ನಾವು ಇದನ್ನು ಮತ್ತೆ ಮಾಡಬೇಕು. -ಯಾಕೆ? 456 00:34:38,619 --> 00:34:39,912 ಇದು ಡಿಸ್ನಿಲ್ಯಾಂಡ್. 457 00:34:39,912 --> 00:34:41,830 -ಇದು ಡಿಸ್ನಿಲ್ಯಾಂಡ್ ಅಲ್ಲ. -ಹೌದು. 458 00:34:41,830 --> 00:34:44,374 ಇದು ಸಕಾರಾತ್ಮಕ. ಆಶಯವುಳ್ಳದ್ದು. 459 00:34:44,374 --> 00:34:47,544 -ಆಶಯ ಇದ್ದರೆ ಏನಂತೆ? -ನಾವು ಅದರ ಬಗ್ಗೆ ಬರೆಯುತ್ತಿಲ್ಲ. 460 00:34:47,544 --> 00:34:50,756 ಕೆಟ್ಟದಾಗುವ ಕೆಲಸಗಳನ್ನು ಏಕೆ ಮಾಡುತ್ತೇವೆ, ಪ್ರಯೋಜನವಿಲ್ಲದಿದ್ದರೂ 461 00:34:50,756 --> 00:34:54,426 ಏಕೆ ಮಾಡುತ್ತಿರುತ್ತೇವೆ ಎಂಬುದರ ಬಗ್ಗೆ ಹಾಡು ಬರೆಯುತ್ತಿದ್ದೇವೆ. 462 00:34:54,426 --> 00:34:56,386 ನಾನು ಒಪ್ಪುವುದಿಲ್ಲ. 463 00:34:56,386 --> 00:34:58,263 ನೀನು ತಪ್ಪಾಗಿರುವೆ, ಹಾಗಾಗಿ... 464 00:35:00,098 --> 00:35:02,810 ಯಾರೋ ನಿನಗೆ ನೋವುಂಟು ಮಾಡಿದ್ದಾರೆ, ಅಲ್ವಾ? 465 00:35:05,521 --> 00:35:07,064 ಅಂದರೆ ಏನರ್ಥ? 466 00:35:07,064 --> 00:35:08,190 ಏನು? 467 00:35:08,190 --> 00:35:10,567 ನಿನ್ನ ಬಗ್ಗೆ ತಪ್ಪಾಗಿ ತಿಳಿದಿದ್ದೆ, ಅಷ್ಟೇ. 468 00:35:12,110 --> 00:35:15,155 -ನೀನು ಹೀಗಂತ ಅಂದುಕೊಂಡಿರಲಿಲ್ಲ... -ಏನು? 469 00:35:17,074 --> 00:35:18,200 ಅಂದರೆ, ನೊಂದವಳು. 470 00:35:36,260 --> 00:35:37,135 ಡೈಸಿ. 471 00:35:43,225 --> 00:35:46,478 ನನ್ನ ಮಾತಿನ ಅರ್ಥ ಅದಲ್ಲ. ಡೈಸಿ. 472 00:35:54,236 --> 00:35:55,279 ಡೈಸಿ. 473 00:35:59,241 --> 00:36:00,951 ಡೈಸಿ, ನನ್ನನ್ನು ಕ್ಷಮಿಸು, ಆಯ್ತಾ? 474 00:36:02,452 --> 00:36:03,620 ಅಯ್ಯೋ. 475 00:36:23,265 --> 00:36:24,391 ನೋಡು, 476 00:36:25,767 --> 00:36:27,102 ನನ್ನನ್ನು ಕ್ಷಮಿಸು. 477 00:36:30,022 --> 00:36:31,857 ನಾನು ಹೇಳಿದ್ದು ಏನಂದ್ರೆ ನಮ್ಮಲ್ಲಿ 478 00:36:34,568 --> 00:36:36,653 ಅಂದುಕೊಂಡಿದ್ದಕ್ಕಿಂತ ಸಾಮ್ಯತೆಯಿದೆ. 479 00:36:38,614 --> 00:36:39,615 ಅದು ಹೇಗೆ? 480 00:36:41,450 --> 00:36:44,161 ನನ್ನ ತಂದೆ ಕೂಡ ಹೇಳದೆ ಕೇಳದೆ ಹೊರಟುಹೋದರು. 481 00:36:47,915 --> 00:36:48,999 ನನಗಾಗ ಎಂಟು ವರ್ಷ. 482 00:36:52,169 --> 00:36:54,796 ಅವರ ಬಗ್ಗೆ ಹೆಚ್ಚು ಯೋಚಿಸದಿರಲು ಪ್ರಯತ್ನಿಸುತ್ತೇನೆ, 483 00:36:59,009 --> 00:37:03,013 ಆದರೆ ನಾನು ಮಾಡುವುದೆಲ್ಲವೂ ಅವರಿಗೆ ಪಶ್ಚಾತ್ತಾಪ ತರಲಿ ಎಂದು ಬಯಸುತ್ತೇನೆ. 484 00:37:13,774 --> 00:37:15,025 ನಾನು ನೊಂದವಳಲ್ಲ. 485 00:37:20,364 --> 00:37:21,657 ನಾನು ಕೂಡ ಅಷ್ಟೇ. 486 00:37:34,628 --> 00:37:35,921 ಛೆ. 487 00:37:38,757 --> 00:37:40,759 ನನ್ನ ಮನೆಯೊಳಗೆ ಹೇಗೆ ಬಂದ್ರಿ? 488 00:37:42,886 --> 00:37:43,929 ಬಾಗಿಲಿನಿಂದ. 489 00:37:50,644 --> 00:37:52,688 ಮುದ್ದುಗಳೇ, ಮನೆಗೆ ಬಂದಿರುವೆ. 490 00:37:56,942 --> 00:37:59,987 ಹೇ. ಬಿಲ್ಲಿ ಏನಾದರೂ ಕರೆ ಮಾಡಿದ್ನಾ? 491 00:38:02,489 --> 00:38:03,615 ಇಲ್ಲ. 492 00:38:07,119 --> 00:38:08,203 ಹಲೋ? 493 00:38:10,205 --> 00:38:11,164 ಸರಿ. 494 00:38:14,626 --> 00:38:16,086 ಹಾಂ, ಸರಿ. ಪರವಾಗಿಲ್ಲ. 495 00:38:20,757 --> 00:38:21,925 ಈಗಲೇ ಬರ್ತೀನಿ. 496 00:38:26,680 --> 00:38:28,098 ಅದು ಟೆಡ್ಡಿ. 497 00:38:29,391 --> 00:38:30,559 ಏನಂದರು? 498 00:38:32,519 --> 00:38:36,982 ನನಗೆ ಇನ್ನು ತಡೆಯಲಾಗಲಿಲ್ಲ. ನಾನು... ನಾನಂತೂ... 499 00:38:37,858 --> 00:38:39,568 -ಹಾಯ್. -ಹಾಯ್. 500 00:38:40,986 --> 00:38:44,072 ಹೇ, ಗ್ರಹಮ್. ನೀನು ಯಾವಾಗಲೂ ನುಡಿಸುತ್ತಿದ್ದ ರಿಫ್ ಗೊತ್ತಲ್ಲ? 501 00:38:44,072 --> 00:38:46,158 ಹೌದು. ಏನಾದ್ರೂ ಬರೆದ್ರಾ? 502 00:38:46,158 --> 00:38:48,160 ಕುಳಿತುಕೋ. ನಿನಗಿದು ಇಷ್ಟವಾಗಬಹುದು. 503 00:38:48,785 --> 00:38:51,830 ಅವರು ಮೊದಲ ಬಾರಿ ನಿಜವಾಗಲೂ ಜೊತೆಯಾಗಿ ಬರೆದ ಹಾಡು ಅದು. 504 00:38:52,539 --> 00:38:54,291 ಈಗಲೂ ನನಗೆ ಅಚ್ಚುಮೆಚ್ಚು. 505 00:38:54,291 --> 00:38:59,546 ನಾನು ನಂಬಲಾಗಲಿಲ್ಲ ಅಂತಲ್ಲ ನಾನು ನಂಬುವುದಿಲ್ಲ ಅಂತಲ್ಲ 506 00:38:59,546 --> 00:39:01,173 ಒಂದೆರಡು ಸಲ ನುಡಿಸಿದೆವು. 507 00:39:01,298 --> 00:39:05,677 ಆ ಸಮಯಕ್ಕೆ ಪ್ರತಿ ಸುಳ್ಳೂ ನಿಜವೇ, ಚಿನ್ನ ಅದುವೇ ರೋಚಕತೆ 508 00:39:07,220 --> 00:39:08,889 ನನಗೆ ನಿರಾಸೆ ಮೂಡಿಸಲಿದ್ದರೆ... 509 00:39:08,889 --> 00:39:13,310 ಮುಂದೆ ಯಾವುದೂ ಈಗ ಇರುವಂತೆ ಇರುವುದಿಲ್ಲ ಎಂಬ ಭಾವನೆ ಕಾಡಿತು. 510 00:39:14,061 --> 00:39:15,228 ಅದಂತೂ ನಿಜವಾಗಲೂ 511 00:39:17,647 --> 00:39:18,940 ಅದ್ಭುತ ದಿನವಾಗಿತ್ತು. 512 00:39:20,901 --> 00:39:22,736 ಆಮೇಲೆ ಡಿ ಮೇಜರಿಗೆ ಹೋಗುತ್ತಾ? 513 00:39:24,237 --> 00:39:28,325 ಹೌದು, ಗೊತ್ತು. ಆದರೆ ನನ್ನನ್ನು ನಂಬು, ಸರಿ ಹೊಂದುತ್ತೆ. ಆಯ್ತಾ? 514 00:39:29,076 --> 00:39:33,288 ಅದರ ಜೊತೆ ನೀನು ಪ್ರಯೋಗ ಮಾಡಬೇಕಿದ್ದರೆ, ಧಾರಾಳವಾಗಿ ಮಾಡು. 515 00:39:35,040 --> 00:39:38,293 -ಇದನ್ನು ನಾವು ರೆಕಾರ್ಡ್ ಮಾಡಬೇಕಾ? -ಹೌದು. 516 00:39:38,293 --> 00:39:41,379 -ಇದರ ಹೆಸರೇನು? -"ಆರಾಮವಾಗಿ ನಿರಾಸೆ ಮೂಡಿಸು." 517 00:40:01,233 --> 00:40:04,694 ಹಗಲುಗನಸಿನಲ್ಲಿ ಕಳೆದುಹೋಗಿದ್ದೆ 518 00:40:04,694 --> 00:40:07,239 ತುಂಬಾ ಹೊತ್ತಿನಿಂದ ಎದ್ದಿರುವೆ 519 00:40:08,240 --> 00:40:11,243 ನನ್ನ ಕಣ್ಣುಗಳೇನೋ ತೆರೆದಿವೆ ಆದರೆ ನನ್ನ ಹೃದಯ ಕುಸಿಯುತ್ತಿದೆ 520 00:40:11,243 --> 00:40:13,787 ದಿನಗಳು ಕಳೆದಂತೆ ಆಳವಾಗಿ 521 00:40:14,913 --> 00:40:18,375 ನಾನು ನಂಬಲಾಗಲಿಲ್ಲ ಅಂತಲ್ಲ 522 00:40:18,375 --> 00:40:21,670 ನಾನು ನಂಬುವುದಿಲ್ಲ ಅಂತಲ್ಲ 523 00:40:21,670 --> 00:40:26,341 ಆ ಸಮಯಕ್ಕೆ ಪ್ರತಿ ಸುಳ್ಳೂ ನಿಜವೇ, ಚಿನ್ನ ಅದುವೇ ರೋಚಕತೆ 524 00:40:28,468 --> 00:40:32,514 ನಿರಾಸೆ ಮೂಡಿಸಲಾರೆಯಾ, ನಿರಾಸೆ ಮೂಡಿಸಲಾರೆಯಾ ಆರಾಮವಾಗಿ ಮೂಡಿಸಲಾರೆಯಾ 525 00:40:32,514 --> 00:40:34,724 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 526 00:40:35,934 --> 00:40:39,312 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 527 00:40:39,312 --> 00:40:41,773 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 528 00:40:42,732 --> 00:40:46,486 ನೀನು ಹೊರಡುವಾಗ ನನ್ನನ್ನು ಪ್ರೀತಿಸುವೆ ಅಂತ ಹೇಳಬೇಡ 529 00:40:46,486 --> 00:40:49,156 ಈಗಲೇ ನೀನು ಹೊರಡುವುದಿದ್ದರೆ 530 00:40:49,823 --> 00:40:53,451 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 531 00:40:53,451 --> 00:40:56,079 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 532 00:41:04,629 --> 00:41:10,051 ದೂರದಲ್ಲಿ ನಾವು ಕೈ ಬೀಸುವುದು ಕಂಡೆ ಮರಳಿನಲ್ಲಿ ಮರೀಚಿಕೆಯಂತೆ 533 00:41:11,636 --> 00:41:16,808 ನಾವು ರಹಸ್ಯಗಳ ಹಂಚಿಕೊಳ್ಳುತ್ತಿರುವುದಿರಬಹುದು ಯಾರಿಗೂ ಅರ್ಥವಾಗದಂತೆ 534 00:41:18,351 --> 00:41:21,062 ನೀನೀಗ ನನ್ನ ತಲೆಯ ಮೇಲೆ ಕುಳಿತಿರುವೆ 535 00:41:21,938 --> 00:41:24,357 ಯಾಕಿಷ್ಟು ಕಷ್ಟ ಮಾಡುತ್ತಿರುವೆ? 536 00:41:25,108 --> 00:41:29,362 ನನ್ನ ಮನಸ್ಸು ಮುರಿದು ಬಿಡಬೇಡ ನೀನೆಲ್ಲಿರುವೆ ಹೇಳುವೆಯಾ? 537 00:41:30,113 --> 00:41:33,074 ಅದರ ಉತ್ತಮ ಗುಣ ಏನೆಂದರೆ ಎಲ್ಲರಿಗೂ ಭಾಗವಹಿಸುವ ಅವಕಾಶವಿತ್ತು. 538 00:41:33,074 --> 00:41:35,911 ಕೇವಲ ಬಿಲ್ಲಿಯ ಪ್ರದರ್ಶನ ಮಾತ್ರ ಆಗಿರಲಿಲ್ಲ. 539 00:41:37,829 --> 00:41:39,372 ಡೈಸಿ ನಮಗಾಗಿ ಹಾಗೆ ಮಾಡಿದಳು. 540 00:41:39,372 --> 00:41:42,626 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 541 00:41:42,626 --> 00:41:44,920 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 542 00:41:45,879 --> 00:41:49,466 ನೀನು ಹೊರಡುವಾಗ ನನ್ನನ್ನು ಪ್ರೀತಿಸುವೆ ಅಂತ ಹೇಳಬೇಡ 543 00:41:49,466 --> 00:41:51,968 ಈಗಲೇ ನೀನು ಹೊರಡುವುದಿದ್ದರೆ 544 00:41:53,053 --> 00:41:56,723 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 545 00:41:56,723 --> 00:41:59,100 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 546 00:42:14,074 --> 00:42:17,452 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 547 00:42:17,452 --> 00:42:19,871 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 548 00:42:22,249 --> 00:42:24,751 ಅವರು ಒಬ್ಬರನ್ನೊಬ್ಬರು ಉತ್ತಮಪಡಿಸುತ್ತಿದ್ದರು. 549 00:42:24,751 --> 00:42:26,878 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 550 00:42:27,921 --> 00:42:31,549 ನೀನು ಹೊರಡುವಾಗ ನನ್ನನ್ನು ಪ್ರೀತಿಸುವೆ ಅಂತ ಹೇಳಬೇಡ 551 00:42:31,549 --> 00:42:33,969 ಈಗಲೇ ನೀನು ಹೊರಡುವುದಿದ್ದರೆ 552 00:42:35,929 --> 00:42:37,722 ಹಾಗಾಗದಿರುವವರೆಗಂತೂ ಖಂಡಿತ. 553 00:42:38,348 --> 00:42:40,725 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 554 00:43:08,962 --> 00:43:10,588 ಅಬ್ಬಾ, ದೇವರೇ. 555 00:43:11,798 --> 00:43:15,010 ಇದು ಅತ್ಯುತ್ತಮವಾಗಿತ್ತು, ಅಲ್ವಾ? ನಿಮಗೇನನಿಸುತ್ತೆ? 556 00:43:19,514 --> 00:43:21,141 ನಾನೊಬ್ಬ ಮಹಾಮೇಧಾವಿ. 557 00:43:25,478 --> 00:43:26,688 ನಿನಗಾಗಿ ಒಂದು ಮಾಡು. 558 00:43:42,871 --> 00:43:45,248 -ಸಮಯ ಎಷ್ಟಾಗಿದೆ? -ತಡವಾಗಿದೆ. 559 00:43:47,917 --> 00:43:49,669 ಕ್ಷಮಿಸು. ಅಷ್ಟು ಕೆಟ್ಟದಾಗಿತ್ತಾ? 560 00:45:57,589 --> 00:45:59,591 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 561 00:45:59,591 --> 00:46:01,676 ಸೃಜನಶೀಲ ಮೇಲ್ವಿಚಾರಕರು ವಿವೇಕ್