1 00:00:07,007 --> 00:00:09,927 ಈ ಹಿಂದೆ ಡೈಸಿ ಜೋನ್ಸ್ ದಿ ಸಿಕ್ಸಲ್ಲಿ... 2 00:00:11,011 --> 00:00:12,722 ನಿನ್ನ ಬಳಿ ಒಂದು ಒಳ್ಳೆ ಹಾಡಿದೆ. 3 00:00:12,722 --> 00:00:14,807 ನಮಗೆ ಇನ್ನೂ ಹತ್ತು ಬೇಕಿದೆ. 4 00:00:14,807 --> 00:00:17,101 ಇವರೇನಾ ವಿಶ್ವವಿಖ್ಯಾತ ರಾಕ್ ಸ್ಟಾರ್ ಬಿಲ್ಲಿ ಡನ್? 5 00:00:17,101 --> 00:00:20,521 ನಿಲ್ಲಿಸಿಬಿಡುತ್ತಾನೆ, ಎಲ್ಲವೂ ಮೊದಲಿನಂತೆಯೇ ಆಗುತ್ತೆ ಅಂದುಕೊಂಡೆ. 6 00:00:23,774 --> 00:00:26,736 -ಇದು ನಾನು ಕೆಲಸ ಮಾಡುವ ಕ್ಲಬ್. -ಇದು ನ್ಯೂ ಯಾರ್ಕ್ ವಿಳಾಸ. 7 00:00:26,736 --> 00:00:30,656 ಇಡೀ ಕ್ಯಾಲಿಫೋರ್ನಿಯಾದಲ್ಲಿ ಪ್ರತಿ ಗಾಯಕನನ್ನೂ ನೋಡಿದ್ದೇವೆ ಅನ್ಸುತ್ತೆ. 8 00:00:30,656 --> 00:00:31,949 ಎಲ್ಲರನ್ನೂ ಅಲ್ಲ. 9 00:00:31,949 --> 00:00:34,618 ಏನೂ ನಡೆದೇ ಇಲ್ಲದಂತೆ ನೀನು ಇಲ್ಲಿಗೆ ಬರಲಾಗದು. 10 00:00:34,618 --> 00:00:38,205 ನೀನು ಆ ಪ್ರವಾಸವನ್ನು ರದ್ದು ಮಾಡಿದಾಗ ತುಂಬಾ ಕಳೆದುಹೋಯಿತು. 11 00:00:38,205 --> 00:00:40,916 ಇದು ಮಾತ್ರ ಬೇಡ, ಟೆಡ್ಡಿ. ಆಯ್ತಾ? ಕ್ಷಮಿಸು. 12 00:00:40,916 --> 00:00:42,084 ಇದು ಯಾವ ಹಾಡು? 13 00:00:42,084 --> 00:00:46,547 ಇದು ಏನೋ ಅಂದುಕೊಂಡಿದ್ದೆ, ಆದರೆ... ಇದರೊಂದಿಗೆ ನೀನೇನು ಮಾಡುವೆ? 14 00:00:46,547 --> 00:00:49,008 ಡೈಸಿ ಜೋನ್ಸ್. ಬಿಲ್ಲಿ ಡನ್. 15 00:00:49,008 --> 00:00:50,176 ನನಗೆ ನಿಮ್ಮ ಹಾಡು ಇಷ್ಟ. 16 00:00:50,176 --> 00:00:52,344 ನಾನು ಬರೆದ ಹಾಡನ್ನು ಹಾಳು ಮಾಡುತ್ತಿರುವಂತಿದೆ. 17 00:00:52,344 --> 00:00:54,638 ನೀನು ಒಳ್ಳೆ ಹಾಡು ಬರೆದೆ, ಅತ್ಯುತ್ತಮವಾದದ್ದಲ್ಲ. 18 00:00:54,638 --> 00:00:56,891 ನಿನ್ನ ಮಾದರಿ ನಂತರ ಮೂಲಗೀತೆ ಪ್ರಯತ್ನಿಸೋಣ. 19 00:00:56,891 --> 00:00:58,350 ನಾವು ವಾದ ಮಾಡಬೇಕಿಲ್ಲ. 20 00:01:01,395 --> 00:01:05,483 ಒಳ್ಳೆಯದನ್ನು ಕೆಟ್ಟದನ್ನಾಗಿ ಮಾಡಬಹುದು 21 00:01:07,943 --> 00:01:09,862 -ಮತ್ತೆ, ಹೇಗಿತ್ತು? -ದುಃಸ್ವಪ್ನದಂತೆ. 22 00:01:10,738 --> 00:01:13,491 ಬಹುಶಃ ನನ್ನ ಜೀವನದ ಅತ್ಯುತ್ತಮ ದಿನ. 23 00:02:07,878 --> 00:02:10,422 {\an8}ಡೈಸಿ ಜೋನ್ಸ್ ದಿ ಸಿಕ್ಸ್ 24 00:02:24,270 --> 00:02:26,230 -ಸರಿ. -ಓ, ದೇವರೇ. 25 00:02:27,231 --> 00:02:29,066 ನಮ್ಮ ಕೈ ತಪ್ಪಿ ಹೋಯಿತೇ? 26 00:02:29,066 --> 00:02:30,943 ಇರು. ಅದು... 27 00:02:31,277 --> 00:02:33,279 -ಲೋ. ಲೋ. -ಅಯ್ಯೋ. 28 00:02:33,279 --> 00:02:34,572 ಯಾವ ಸ್ಟೇಷನ್ ಇದು? 29 00:02:34,905 --> 00:02:36,240 -ಏನು? -ಯಾವ ಸ್ಟೇಷನ್? 30 00:02:36,240 --> 00:02:37,366 ಏನು? 31 00:02:37,366 --> 00:02:40,202 -ಯಾವ ರೇಡಿಯೋ ಸ್ಟೇಷನ್? -ಇದು ಕೆ ಎಚ್ ಜೆ. 32 00:02:40,202 --> 00:02:42,204 ಧನ್ಯವಾದ. 33 00:02:42,204 --> 00:02:45,916 ರೇಡಿಯೋದಲ್ಲಿ ಅದು ನಾವೇ. ಜೋರಾಗಿ ಕೇಳಿ. ಈಗ ತುಂಬಾ ಚೆನ್ನಾಗಿದೆ. 34 00:02:45,916 --> 00:02:48,127 ಸುಲಭ ಇರಲೆಂದುಕೊಂಡೆ, ಆದರೆ ಇಲ್ಲ 35 00:02:48,127 --> 00:02:51,839 -"ಲುಕ್ ಅಟ್ ಅಸ್ ನವ್" ಇರುವುದು ಇದರಲ್ಲೇನಾ? -ಈಗ ಇದೆ. 36 00:02:51,839 --> 00:02:54,174 ಅಯ್ಯೋ, ನನ್ನ ಬಳಿ ಹೆಚ್ಚು ಇಲ್ಲ. 37 00:02:55,551 --> 00:02:56,802 ಛೆ. 38 00:02:58,137 --> 00:02:59,138 ಹೇ. 39 00:03:00,055 --> 00:03:02,975 -ಧನ್ಯವಾದಗಳು. -ಪರವಾಗಿಲ್ಲ. 40 00:03:04,768 --> 00:03:06,645 ಈಗ ನಾವು ಎಲ್ಲಿ ನಿಲ್ಲುವೆವು? 41 00:03:06,645 --> 00:03:08,272 ಏಳು ಎಂಟು ಒಂಬತ್ತು 42 00:03:08,898 --> 00:03:11,692 ಚಿನ್ನ, ಚಿನ್ನ, ಚಿನ್ನ 43 00:03:11,859 --> 00:03:15,571 ನೀನಾರೆಂದು ಯಾರಿಗೂ ಗೊತ್ತಿಲ್ಲ 44 00:03:18,657 --> 00:03:22,411 ಮತ್ತಿದು ನಿನ್ನ ಯೋಜನೆಯಾಗಿದ್ದರೆ 45 00:03:22,411 --> 00:03:25,039 ನನಗೆ ಹೇಳು, ಯಾಕೆಂದು ಹೇಳು 46 00:03:25,456 --> 00:03:28,417 ಕತ್ತಲಲ್ಲಿ ನೀ ರೋದಿಸುತ್ತಿರುವೆ 47 00:03:28,667 --> 00:03:29,710 ಅಯ್ಯೋ, ದೇವರೇ! 48 00:03:31,128 --> 00:03:32,254 ಅಯ್ಯೋ, ದೇವರೇ. 49 00:03:33,255 --> 00:03:36,175 "ಲುಕ್ ಅಟ್ ಅಸ್ ನವ್ (ಹನೀಕೂಂಬ್)" ದಿ ಸಿಕ್ಸ್ (ಡೈಸಿ ಜೋನ್ಸ್ ಸಹಯೋಗದೊಂದಿಗೆ) 50 00:03:36,175 --> 00:03:38,844 ಸುಲಭ ಇರಲೆಂದುಕೊಂಡೆ, ಆದರೆ ಇಲ್ಲ 51 00:03:38,844 --> 00:03:41,305 ಗೀತೆ 4: ಐ ಸಾ ದಿ ಲೈಟ್ 52 00:03:41,305 --> 00:03:43,807 ಮತ್ತೆ, ಚಿನ್ನ 53 00:03:44,892 --> 00:03:46,185 ಹೇ, ಪಾಪು. 54 00:03:46,602 --> 00:03:47,728 ಓ, ದೇವರೇ. 55 00:03:49,313 --> 00:03:50,856 ನಾವು ಅದನ್ನು ಕೇಳುತ್ತಿದ್ದೆವು. 56 00:03:51,565 --> 00:03:54,568 {\an8}ನಾನು ಆಶಯ ಮತ್ತು ಬದುಕುವುದರ ಬಗ್ಗೆ ಹಾಡನ್ನು ಬರೆದೆ... 57 00:03:54,568 --> 00:03:56,737 {\an8}ಬಿಲ್ಲಿ ಡನ್ ಪ್ರಮುಖ ಗಾಯಕ/ಗೀತರಚನೆಕಾರ 58 00:03:56,737 --> 00:03:58,781 {\an8}...ಪ್ರೇಮದ ಪ್ರಯತ್ನಶೀಲತೆಯ ಬಗ್ಗೆ, 59 00:03:59,990 --> 00:04:05,913 ಆದರೆ ಅವಳು ಅದನ್ನು ಅನುಮಾನದ ಆಚರಣೆ, ಅನಿಶ್ಚಿತತೆಯ ಬಗ್ಗೆ ಮಾಡಿದಳು. 60 00:04:08,082 --> 00:04:11,335 ಅಂದರೆ, ನಾನಂತೂ ಆ ಹಾಡನ್ನು ದ್ವೇಷಿಸಲು ಆರಂಭಿಸಿದೆ. 61 00:04:12,920 --> 00:04:15,339 ಮತ್ತು, ಹಾಗೆ ಇದ್ದದ್ದು ನಾನೊಬ್ಬನೇ ಅನ್ಸುತ್ತೆ. 62 00:04:15,339 --> 00:04:17,549 ಪಾಪದ ಮಗುವಿಗೆ ನಂಬರ್ ಒನ್ ಹಾಡು ಸಿಕ್ಕಿದೆ. 63 00:04:18,175 --> 00:04:19,468 ಎಷ್ಟು ಕಷ್ಟವೋ ಏನೋ. 64 00:04:19,468 --> 00:04:23,722 ನಿನಗೆ ಕೂಡ ಇದನ್ನು ಕಂಡರೆ ಉರಿಯುತ್ತೆ ಅಲ್ವಾ, ಜೂಲ್ಸ್? ಜೂಲ್ಸ್ ಕೂಡ ಒಪ್ಪುತ್ತಾಳೆ. 65 00:04:23,722 --> 00:04:25,724 ಏನೋ ಘಮಘಮ ಅನಿಸುತ್ತಿದೆ. 66 00:04:26,350 --> 00:04:27,851 ನೀನು ಕಾಯಬಹುದು. 67 00:04:27,851 --> 00:04:30,229 ನಮಗೂ ಸ್ವಲ್ಪ ಉಳಿಸು! 68 00:04:30,229 --> 00:04:34,233 ಅವರು ಹಿಂದಿನ ಮನೆಯಲ್ಲಿ ಇರುತ್ತಾರೆ, ಕೆಮೀಲ ನಿಮಗೆ ತಿನ್ನಿಸದಿರಲು. 69 00:04:34,233 --> 00:04:36,568 ಕೊನೆಯದಾಗಿ ಅಂಚೆಗಳನ್ನು ನೋಡಿದ್ದು ಯಾವಾಗ? 70 00:04:36,568 --> 00:04:38,779 -ಅದು ನಿನ್ನ ಕೆಲಸ ಅಂದುಕೊಂಡೆ. -ನನ್ನ ಕೆಲಸ? 71 00:04:38,779 --> 00:04:43,283 ಅಲ್ಲದೆ, ಸಿಂಕಿನಲ್ಲಿರುವ ಆ ರಾಶಿ. ಅದು ಬೆಳೆಯುತ್ತಿದೆ. ಹೇ. 72 00:04:49,790 --> 00:04:52,376 -ಎಲ್ಲರೂ. -ಏನು? 73 00:04:53,502 --> 00:04:56,547 ಇವು ಏನಂತ ಯಾರಿಗಾದರೂ ಗೊತ್ತೇ? 74 00:04:58,007 --> 00:04:58,882 ಏನು? 75 00:05:00,134 --> 00:05:01,301 ಇದು ನನ್ನದಾ? 76 00:05:03,137 --> 00:05:04,221 -ಛೆ! -ತೆಗೆ. 77 00:05:04,221 --> 00:05:05,305 ಏನು? 78 00:05:07,057 --> 00:05:08,767 ನಾನು ಶ್ರೀಮಂತ! ನಾನು ಶ್ರೀಮಂತ! 79 00:05:08,767 --> 00:05:10,019 {\an8}ವಾರೆನ್ ರೋಜಸ್ ಡ್ರಮ್ಸ್ 80 00:05:10,019 --> 00:05:11,937 {\an8}ಆ ಕಾಲದಲ್ಲಿ $600 ಅಂದರೆ ದೊಡ್ಡ ಮೊತ್ತ. 81 00:05:11,937 --> 00:05:13,689 ಓ, ದೇವರೇ. 82 00:05:15,733 --> 00:05:20,946 ಬಹುತೇಕ ಹಾಡುಗಳನ್ನು ನಾನೇ ಬರೆದರೂ, ಲಾಭವನ್ನು ಸಮಾನವಾಗಿ ಹಂಚಿಕೊಂಡೆವು. 83 00:05:20,946 --> 00:05:25,325 "ಯಾಕಾಗಬಾರದು?" ಎಂದುಕೊಂಡೆ. ಎಷ್ಟೇ ಆದರೂ ನಾವೊಂದು ಕುಟುಂಬ. 84 00:05:26,118 --> 00:05:27,244 {\an8}ಗ್ರಹಮ್ ಡನ್ ಪ್ರಮುಖ ಗಿಟಾರ್ ವಾದಕ 85 00:05:27,369 --> 00:05:29,371 {\an8}ನಾನು ಮೊದಲು ಖರೀದಿಸಿದ್ದು? ಸರ್ಫ್ ಬೋರ್ಡ್. 86 00:05:29,371 --> 00:05:30,622 {\an8}ಎಡ್ಡಿ ರೌಂಡ್ ಟ್ರೀ ಬೇಸ್ ವಾದಕ 87 00:05:30,622 --> 00:05:32,875 {\an8}ಎರಡು ಆ್ಯಂಪುಗಳು, ಫಜ್ ಪೆಡಲ್. 88 00:05:32,875 --> 00:05:34,251 {\an8}ಕರೆನ್ ಸಿರ್ಕೊ ಕೀಬೋರ್ಡ್ಸ್ 89 00:05:34,251 --> 00:05:35,919 {\an8}ಸ್ಟಾಕ್ ಮಾರ್ಕೆಟ್, ಖಂಡಿತವಾಗಿ. 90 00:05:35,919 --> 00:05:40,049 ವೆನಿಸ್ಸಿನ ಅಂಗಡಿಯಲ್ಲಿ ಒಂದು ಸುಂದರವಾದ ತುಪ್ಪಳದ ಕೋಟ್ ಇತ್ತು. 91 00:05:44,178 --> 00:05:45,596 -ತಡಿ. -ಹೌದು. 92 00:05:45,596 --> 00:05:49,308 ಬಿಲ್ಲಿ, ತಡಿ. ನಮಗಾಗಿ ಮನೆಯನ್ನು ಕೊಂಡೆಯಾ? 93 00:05:50,392 --> 00:05:53,187 -ತಡಿ. ಇರು. -ಹಾಗಲ್ಲ, ಮನೆ ಬಾಡಿಗೆಗೆ ಪಡೆದೆ. 94 00:05:57,483 --> 00:05:58,650 ಓ, ಬಿಲ್ಲಿ. 95 00:05:58,650 --> 00:06:01,153 ದೊಡ್ಡ ಮನೆಯನ್ನೇ ನೋಡುತ್ತಿದ್ದೆ, 96 00:06:01,153 --> 00:06:03,405 -ಆದರೆ ಅದು ಹಾಗೆ-- -ತುಂಬಾ ಚೆನ್ನಾಗಿದೆ. 97 00:06:06,492 --> 00:06:07,493 ಹೌದಾ? 98 00:06:08,827 --> 00:06:10,454 ಇದರಲ್ಲಿ ಏನು ಚೆನ್ನಾಗಿದೆ? 99 00:06:14,875 --> 00:06:16,376 ಇದು ನಮ್ಮದು ಎಂಬುದು. 100 00:06:21,799 --> 00:06:23,300 ಮತ್ತೇರಲು ಎಷ್ಟು ಸಮಯ ಬೇಕು? 101 00:06:24,593 --> 00:06:26,220 ವ್ಯಕ್ತಿಯ ಮೇಲೆ ಅವಲಂಬಿತವಾಗುತ್ತದೆ. 102 00:06:29,098 --> 00:06:30,182 ಬಾರೋ. 103 00:06:31,391 --> 00:06:36,438 ಆಣ್ವಿಕ ಮಟ್ಟದಲ್ಲಿ, ನನಗನಿಸುವುದು, ನಾನು ಮತ್ತು ಈ ಕಣಿವೆ... 104 00:06:39,817 --> 00:06:41,318 ನಾವು ಒಂದೇ ಅಂತ. 105 00:06:43,195 --> 00:06:44,613 ವಾರೆನ್ನಿಗೆ ಏರುತ್ತಿದೆ. 106 00:06:47,199 --> 00:06:49,743 ಹಾಂ, ನನಗೇನೂ ಅನಿಸುತ್ತಿಲ್ಲ. ಅಂದರೆ... 107 00:06:56,583 --> 00:06:58,210 ಇದನ್ನು ಹೇಗೆ ಹೇಳಲಿ? 108 00:06:58,210 --> 00:07:00,420 ಬಿಲ್ಲಿ ಮತ್ತು ಕೆಮೀಲ ಹೊರಹೋದ ಮೇಲೆ, 109 00:07:00,420 --> 00:07:05,050 ನಮಗೆಲ್ಲರಿಗೂ ಸ್ವಲ್ಪ ಆರಾಮ ಎನಿಸಿದಂತೆ ಆಯಿತು. 110 00:07:06,009 --> 00:07:07,177 ಅಯ್ಯೋ. 111 00:07:09,972 --> 00:07:11,306 ಹೃದಯವೇ ಗೊತ್ತಾಗುತ್ತಿಲ್ಲ. 112 00:07:18,063 --> 00:07:19,523 ಬಡಿದುಕೊಳ್ಳುತ್ತಿದೆ. 113 00:07:20,065 --> 00:07:21,358 ಖಚಿತವಾ? 114 00:07:23,527 --> 00:07:24,736 ಹಾಂ. 115 00:07:25,571 --> 00:07:27,990 ಹಾಂ, ಖಚಿತವಾಗಿ. 116 00:07:30,075 --> 00:07:31,618 ನಿನ್ನ ಕೈ ತೆಗೆಯಬೇಡ. 117 00:07:32,828 --> 00:07:34,621 ಸರಿ, ತೆಗೆಯಲ್ಲ. 118 00:07:39,793 --> 00:07:41,503 ಡ್ರಗ್ಸ್ ತುಂಬಾ ಮಿಸ್ ಮಾಡ್ಕೋತೀನಿ. 119 00:07:41,503 --> 00:07:43,881 ನಾನು ಸ್ಟುಡಿಯೋಗೆ ವಾಪಸ್ ಹೋಗಬೇಕಿತ್ತು. 120 00:07:43,881 --> 00:07:47,426 ಹೊಸ ಆಲ್ಬಮ್ ತರಬೇಕಿತ್ತು, ಹೊಸ ಚಟುವಟಿಕೆಗಳು, ಗೊತ್ತಾ? 121 00:07:48,802 --> 00:07:50,846 ಆದರೆ ಆ ಹಾಡು ಮಾತ್ರ ನಿಲ್ಲಲೇ ಇಲ್ಲ. 122 00:07:51,263 --> 00:07:55,309 ಹವಾಯಿಯ ಡೈಮಂಡ್ ಹೆಡ್ ಫೆಸ್ಟಿವಲ್ ಪಟ್ಟಿಗೆ ಸೇರಲು ನಮಗೆ ಆಹ್ವಾನ ಬಂದಿತು. 123 00:07:55,976 --> 00:07:57,769 ನಮಗದು ಮೊದಲ ಶೋ, ಯಾವಾಗಿನಿಂದ ಅಂದರೆ... 124 00:08:00,647 --> 00:08:01,773 ಅಂದರೆ... 125 00:08:04,443 --> 00:08:06,361 ಹೇ, ಸ್ಟೀವ್ ಮಿಲ್ಲರ್ ಬ್ಯಾಂಡ್? 126 00:08:06,361 --> 00:08:09,948 -ದಿ ಡೆಡ್? ಅಯ್ಯೋ, ಇವರೆಲ್ಲ ಇದ್ದಾರಾ? -ನಾವೆಲ್ಲಿದ್ದೇವೆ? 127 00:08:09,948 --> 00:08:11,450 ಇಲ್ಲಿದ್ದೀವಿ, ತಮ್ಮ. 128 00:08:12,826 --> 00:08:14,161 ನೋಡು ಇದನ್ನು. 129 00:08:17,289 --> 00:08:18,457 ನೋಡ್ರೋ. 130 00:08:20,667 --> 00:08:21,960 ನೋಡೋ, ಮಗಾ. 131 00:08:24,838 --> 00:08:27,424 ಒವಾಹು 132 00:08:33,263 --> 00:08:35,390 ಮಧ್ಯಾಹ್ನ 1:00ಕ್ಕೆ ನಮ್ಮ ಪ್ರದರ್ಶನವಿತ್ತು. 133 00:08:36,099 --> 00:08:38,518 ಆದರೂ, ಕನಿಷ್ಠ ನಮಗೆ ಆಹ್ವಾನವಾದರೂ ಸಿಕ್ಕಿತ್ತು. 134 00:08:54,826 --> 00:08:56,662 -ಹೇ. -ಹೇ. 135 00:08:56,662 --> 00:08:58,705 -ಆರಾಮಿದ್ದೀಯಾ? -ಹಾಂ, ಆರಾಮಿದ್ದೀನಿ. 136 00:08:59,414 --> 00:09:01,500 ತುಂಬಾ ಕಾಲ ಆಗಿದೆ, ಗೊತ್ತಾ? 137 00:09:02,584 --> 00:09:06,129 ಶಬ್ದ ಪರೀಕ್ಷೆ ನಡೆಸಲು ಅವಕಾಶ ಸಿಗಲಿಲ್ಲ. ನಮಗೆ ಹೆಚ್ಚು ಸಮಯ ಇದ್ದಿದ್ದರೆ... 138 00:09:06,129 --> 00:09:08,632 ಹೇ, ಇದು ನಿನ್ನಿಂದ ಆಗುತ್ತೆ. 139 00:09:17,683 --> 00:09:19,226 ಎಲ್ಲರೂ ಹತ್ತಿರಕ್ಕೆ ಬನ್ನಿ. 140 00:09:25,065 --> 00:09:27,025 -ಸುಡುಬಿಸಿಲು. -ರೆಡಿನಾ? 141 00:09:27,025 --> 00:09:29,444 -ಯಾವುದಕ್ಕೆ ವಾದನ? -ರಾಬರ್ಟೋ ಕ್ಲೆಮೆಂಟೆ. 142 00:09:29,444 --> 00:09:31,905 -ಇದು ಅಮ್ಮನಿಗಾಗಿ. -ಉಚಿತ ಬಿಯರ್. 143 00:09:31,905 --> 00:09:34,825 ಅವರಿಗೆ ಪಟ್ಟಿಯಲ್ಲಿ ಬೇಕಾಗಿದ್ದದ್ದು ಖಂಡಿತ ನಾವಷ್ಟೇ ಅಲ್ಲ. 144 00:09:34,825 --> 00:09:37,077 ಮೂರರಲ್ಲಿ "ಪಿಟ್ಸ್ ಬರ್ಗ್". ರೆಡಿನಾ? 145 00:09:37,077 --> 00:09:39,997 -ಒಂದು, ಎರಡು, ಮೂರು... -ಪಿಟ್ಸ್ ಬರ್ಗ್! 146 00:09:46,378 --> 00:09:48,880 ಜೋಸೆಫ್ ಸ್ಟೀವೆನ್ಸನ್ಗೆ ಜೋರಾಗಿ ಚಪ್ಪಾಳೆ! 147 00:09:50,716 --> 00:09:53,927 -ಮತ್ತೆ, ಹೇಗೆನಿಸುತ್ತಿದೆ? ಭಯಾನಾ? -ಇಲ್ಲ. 148 00:09:54,386 --> 00:09:57,180 -ಇಷ್ಟು ಜನರ ಮುಂದೆ ಮುಂಚೆ ಹಾಡಿದ್ದೀಯಾ? -ಇಲ್ಲ. 149 00:09:58,932 --> 00:10:01,643 ಸರಿ, ಮತ್ತೆ, ತುಂಬಾ ಉತ್ಸಾಹ ಇದೆ. 150 00:10:01,643 --> 00:10:05,689 ಅದರ ಬಗ್ಗೆ ಚಿಂತಿಸಬೇಡ. ಸುಮ್ಮನೆ ಹೋಗಿ ಹಾಡು... 151 00:10:05,689 --> 00:10:08,900 ನನಗೆ ಧೈರ್ಯ ತುಂಬುತ್ತಿರುವೆಯಾ, ನಿನಗಾ? ನಾನು ಆರಾಮವಾಗಿದ್ದೇನೆ. 152 00:10:12,446 --> 00:10:16,158 ಅದನ್ನು ನಾಲ್ಕನೆಯದಾಗಿ ಹಾಡುತ್ತಿದ್ದೇವೆ. ನೀನು ಬಂದಾಗ ಪರಿಚಯಿಸುವೆ. 153 00:10:16,158 --> 00:10:19,036 -ಸರಿ, ಆಗಬಹುದು. -ಸರಿ! 154 00:10:20,537 --> 00:10:25,417 ಈಗ ಬರುವ ಮುಂದಿನ ಬ್ಯಾಂಡ್ ತಮ್ಮ "ಲುಕ್ ಅಟ್ ಅಸ್ ನವ್" ಹಾಡಿನಿಂದ ಮನಗೆದ್ದಿದ್ದಾರೆ. 155 00:10:28,879 --> 00:10:32,924 ದಿ ಸಿಕ್ಸ್ ಅವರನ್ನು ಬರಮಾಡಿಕೊಳ್ಳೋಣ. 156 00:10:33,550 --> 00:10:34,593 ಹಾಯ್, ಡೈಸಿ. 157 00:10:53,653 --> 00:10:56,156 ಹೇಳು, ತಮಾಷೆ ಮಾಡಬೇಡ 158 00:10:57,282 --> 00:10:59,409 ನೀನು ತಮಾಷೆಯನ್ನೂ ಅರ್ಥಮಾಡಿಕೊಳ್ಳಲಾರೆ 159 00:11:00,952 --> 00:11:03,622 ದೋಣಿ ಮುಳುಗದೆಂದು ನೀನು ಆಣೆ ಮಾಡುವೆ 160 00:11:03,622 --> 00:11:07,292 ಆದರೆ ಅದಕ್ಕೆ ತೇಲಲು ನೀನು ಬಿಡುವೆಯಾ? 161 00:11:08,335 --> 00:11:11,505 ಸೂರ್ಯ ನಿನ್ನ ಮೇಲೆ ಮಿಂಚುತ್ತಿರುವನು 162 00:11:11,922 --> 00:11:15,342 ಚಂದ್ರ ದೊಡ್ಡದಾಗಿ ಬೆಳೆಯುತ್ತಿರುವನು 163 00:11:15,926 --> 00:11:19,137 ಈಗ ಬಂದು ಸ್ವಿಚ್ ಬದಲಾಯಿಸು, ಚಿನ್ನ 164 00:11:19,388 --> 00:11:22,474 ಬಂದು ಟ್ರಿಗರ್ ಒತ್ತು 165 00:11:32,109 --> 00:11:35,112 ಆರಂಭಿಸಲು ಈಗ ತುಂಬಾ ತಡವಾಗಿದೆ 166 00:11:39,533 --> 00:11:42,577 ಆರಂಭಿಸಲು ಈಗ ತುಂಬಾ ತಡವಾಗಿದೆ 167 00:12:04,850 --> 00:12:08,061 ಡೈಸಿ, ಡೈಸಿ, ಹೇ, ನಾಲ್ಕನೆಯದು ಅಂದೆ. 168 00:12:15,819 --> 00:12:18,280 ಅವಳು ಖಂಡಿತ ಬೇಕಾಗಿ ಮಾಡಿದಳು. 169 00:12:18,280 --> 00:12:21,366 ನಾನು ತುಂಬಾ ತಾಳ್ಮೆ ಇರುವ ವ್ಯಕ್ತಿಯಲ್ಲ. 170 00:12:25,662 --> 00:12:28,832 ನಾನಾರೆಂದು ನನಗೆ ಗೊತ್ತಿಲ್ಲ 171 00:12:29,458 --> 00:12:31,751 ಚಿನ್ನ, ಚಿನ್ನ, ಚಿನ್ನ 172 00:12:32,586 --> 00:12:35,797 ನೀನಾರೆಂದು ನಿನಗೆ ಗೊತ್ತೇನು? 173 00:12:39,509 --> 00:12:42,471 ಇದು ನಮ್ಮ ಕೈ ಮೀರಿದೆಯೇನು? 174 00:12:43,180 --> 00:12:45,348 ಹೇಳು, ಹೇಳು, ಹೇಳು 175 00:12:46,016 --> 00:12:48,477 ಇಷ್ಟು ದೂರ ಹೇಗೆ ಬಂದೆವೆಂದು 176 00:12:49,478 --> 00:12:52,105 ಬಹಳ ಕಾಲದ ಹಿಂದೆ ಬಿಡಿಸಿಕೊಂಡೆವೇನು? 177 00:12:52,772 --> 00:12:55,692 ನಮಗೆ ತಿಳಿಯದ್ದು ತುಂಬಾ ಇದೆಯೇನು? 178 00:12:56,985 --> 00:13:00,447 ಸುಲಭ ಇರಲೆಂದುಕೊಂಡೆ, ಆದರೆ ಇಲ್ಲ 179 00:13:06,495 --> 00:13:10,332 ಒಳ್ಳೆಯದನ್ನು ಕೆಟ್ಟದನ್ನಾಗಿ ಮಾಡಬಹುದು 180 00:13:13,418 --> 00:13:16,505 ಒಳ್ಳೆಯದನ್ನು ಕೆಟ್ಟದನ್ನಾಗಿ ಮಾಡಬಹುದು 181 00:13:17,005 --> 00:13:20,425 ಈಗ ನಾವು ಎಲ್ಲಿ ನಿಲ್ಲುವೆವು? 182 00:13:20,842 --> 00:13:23,553 ಚಿನ್ನ, ಚಿನ್ನ, ಚಿನ್ನ 183 00:13:23,929 --> 00:13:27,557 ನೀನಾರೆಂದು ಯಾರಿಗೂ ಗೊತ್ತಿಲ್ಲ 184 00:13:30,852 --> 00:13:34,481 ಮತ್ತಿದು ನಿನ್ನ ಯೋಜನೆಯಾಗಿದ್ದರೆ 185 00:13:34,773 --> 00:13:37,025 ನನಗೆ ಹೇಳು, ಯಾಕೆಂದು ಹೇಳು 186 00:13:37,734 --> 00:13:40,445 ಕತ್ತಲಲ್ಲಿ ನೀ ರೋದಿಸುತ್ತಿರುವೆ 187 00:13:41,196 --> 00:13:43,782 ಬಹಳ ಕಾಲದ ಹಿಂದೆ ಬಿಡಿಸಿಕೊಂಡೆವು 188 00:13:44,783 --> 00:13:47,327 ನಾವು ಸೋತೆವು, ಆದರೆ ಅದನ್ನು ಬಿಡಲಾಗಲಿಲ್ಲ 189 00:13:48,411 --> 00:13:51,831 ಸುಲಭ ಇರಲೆಂದುಕೊಂಡೆ, ಆದರೆ ಇಲ್ಲ 190 00:13:52,207 --> 00:13:55,418 ಹಾಗಾಗಿ, ಚಿನ್ನ 191 00:13:57,963 --> 00:14:01,925 ಒಳ್ಳೆಯದನ್ನು ಕೆಟ್ಟದನ್ನಾಗಿ ಮಾಡಬಹುದು 192 00:14:04,636 --> 00:14:08,682 ಒಳ್ಳೆಯದನ್ನು ಕೆಟ್ಟದನ್ನಾಗಿ ಮಾಡಬಹುದು 193 00:14:23,029 --> 00:14:25,782 ಇಲ್ಲಿಗೆ ಹೇಗೆ ಬಂದೆವು? ಇಲ್ಲಿಂದ ಹೇಗೆ ಹೊರಹೋಗುವುದು? 194 00:14:26,157 --> 00:14:28,451 ನೋಡಬೇಕೆನಿಸುವಂಥದ್ದು ಆಗಿದ್ದೆವು 195 00:14:29,077 --> 00:14:32,205 ಮತ್ತೆ, ನಮ್ಮನ್ನೀಗ ನೋಡುವೆಯಾ? 196 00:14:32,205 --> 00:14:35,959 ಓ, ಚಿನ್ನ, ನಮ್ಮನ್ನೀಗ ನೋಡು 197 00:14:36,126 --> 00:14:38,044 ಓ, ಚಿನ್ನ, ನಮ್ಮನ್ನೀಗ ನೋಡು 198 00:14:43,133 --> 00:14:47,721 ಇಲ್ಲಿಗೆ ಹೇಗೆ ಬಂದೆವು? ಇಲ್ಲಿಂದ ಹೇಗೆ ಹೊರಹೋಗುವುದು? 199 00:14:51,057 --> 00:14:55,895 ನಾವು ಮಾಡುತ್ತಿರುವುದು ಕೆಲಸ ಮಾಡುತ್ತಿಲ್ಲ 200 00:15:07,032 --> 00:15:10,493 ಇಲ್ಲಿಗೆ ಹೇಗೆ ಬಂದೆವು? ಇಲ್ಲಿಂದ ಹೇಗೆ ಹೊರಹೋಗುವುದು? 201 00:15:10,493 --> 00:15:13,246 ನೋಡಬೇಕೆನಿಸುವಂಥದ್ದು ಆಗಿದ್ದೆವು 202 00:15:13,538 --> 00:15:17,250 ಓ, ಚಿನ್ನ, ನಮ್ಮನ್ನೀಗ ನೋಡು 203 00:15:17,584 --> 00:15:20,462 ಚಿನ್ನ, ನಮ್ಮನ್ನೀಗ ನೋಡು 204 00:15:23,214 --> 00:15:27,302 ಒಳ್ಳೆಯದನ್ನು ಕೆಟ್ಟದನ್ನಾಗಿ ಮಾಡಬಹುದು 205 00:15:30,305 --> 00:15:34,225 ಒಳ್ಳೆಯದನ್ನು ಕೆಟ್ಟದನ್ನಾಗಿ ಮಾಡಬಹುದು 206 00:15:43,318 --> 00:15:44,903 ಡೈಸಿ ಜೋನ್ಸ್, ಎಲ್ಲರೂ. 207 00:15:48,948 --> 00:15:52,619 ಆಗ ಅವಳು ಸ್ಟೇಜಿನಿಂದ ಕೆಳಗೆ ಇಳಿಯಬೇಕಾಗಿತ್ತು. 208 00:15:53,620 --> 00:15:56,498 ಡೈಸಿ! ಡೈಸಿ! ಡೈಸಿ! 209 00:16:02,128 --> 00:16:04,547 ನಾನು ಇನ್ನೊಂದು ಹಾಡಲು ಇರಬೇಕಾ? 210 00:16:09,219 --> 00:16:11,221 ಅವರು ನನ್ನನ್ನು ಹೋಗಲು ಬಿಡಲಿಲ್ಲ. 211 00:16:39,749 --> 00:16:42,127 ಮನುಷ್ಯನನ್ನು ಚಂದ್ರನ ಮೇಲೆ ಕಳುಹಿಸಿದೆ 212 00:16:42,502 --> 00:16:44,796 ದೂರವಾಣಿಯಲ್ಲಿ ಮಾತು ತರಿಸಿದೆ 213 00:16:45,505 --> 00:16:47,841 ಚಕ್ರಕ್ಕೆ ಎಣ್ಣೆ ಹಚ್ಚಿದೆ 214 00:16:48,299 --> 00:16:50,969 ಬಂಡೆಗೆ ಕತ್ತಿಯನ್ನು ಮಸೆದೆ 215 00:16:50,969 --> 00:16:54,055 ದಕ್ಷಿಣದ ನಕ್ಷತ್ರಗಳನ್ನು ಬೆಳಗಿಸಿದೆ 216 00:16:54,055 --> 00:16:56,433 ವಿಧರ್ಮಿಗಳಿಗೆ ಶಾಂತಿಯನ್ನು ತಂದೆ 217 00:16:56,433 --> 00:16:59,769 ಆಮೇಲೆ ಪೊದೆಯಲ್ಲಿದ್ದ ಹಕ್ಕಿಯನ್ನು ಹೊಡೆದೆ 218 00:16:59,769 --> 00:17:02,272 ಆಮೇಲೆ ಯಾರೋ ಪೊಲೀಸರನ್ನು ಕರೆದರು 219 00:17:02,439 --> 00:17:04,315 ನಿನ್ನ ಉದ್ದೇಶ ಅದಲ್ಲ ಅಂತ ನನಗೆ ಗೊತ್ತು 220 00:17:04,315 --> 00:17:07,110 ನಿನ್ನ ಉದ್ದೇಶ ಅದಲ್ಲ ಅಂತ ನನಗೆ ಗೊತ್ತು 221 00:17:07,360 --> 00:17:13,324 ಯಾಕಂದ್ರೆ ನೀನು ತಿರುಗಲಾರೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ 222 00:17:13,867 --> 00:17:18,747 ತಿರುಗಲಾರೆ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ 223 00:17:20,081 --> 00:17:23,877 ತಿರುಗಿ ನನ್ನ ಮುಖ ನೋಡಿ ಅದನ್ನು ಹೇಳು 224 00:17:25,795 --> 00:17:30,008 ತಿರುಗಿ ನನ್ನ ಮುಖ ನೋಡಿ ಅದನ್ನು ಹೇಳು 225 00:17:31,843 --> 00:17:34,637 ಸರಿ, ಇದು ಕೇವಲ ನನ್ನ ಅಭಿಪ್ರಾಯವಾ ಅಥವಾ... 226 00:17:34,637 --> 00:17:36,431 -ನೀನಷ್ಟೇ ಅಲ್ಲ, ಕಣೋ. -ಹೇಳಪ್ಪ. 227 00:17:37,015 --> 00:17:38,600 ನೀನು ಅದ್ಭುತವಾಗಿ ಹಾಡಿದೆ. 228 00:17:38,600 --> 00:17:41,478 ನೀನು ಕದಲಿದ ಪ್ರತಿ ಸಲವೂ ಅವರು ಹುಚ್ಚೆದ್ದು ಹೋದರು. 229 00:17:41,478 --> 00:17:44,022 ಒಬ್ಬ ಹುಡುಗಿ ನನಗೆ ತೋರಿಸಿದಳು. ಅಂಗಿಯನ್ನು ಎತ್ತಿ. 230 00:17:44,022 --> 00:17:46,065 -ನಿನ್ನ ಜೊತೆ ಮಾತಾಡಬಹುದಾ? -ಹಾಂ. 231 00:17:48,067 --> 00:17:52,030 ನಾಲ್ಕನೆಯದನ್ನು ಹಾಡುವೆವು ಅಂತ ಹೇಳಿದೆ. ನಿನಗೆ ಕೇಳಿಸಿತಾ ಅಥವಾ ತಿರಸ್ಕರಿಸಿದೆಯಾ? 232 00:17:52,155 --> 00:17:55,700 ಮೂರು ಹಾಡಿದಿರಿ ಅಂದುಕೊಂಡೆ, ಯಾಕಂದ್ರೆ ಎಲ್ಲವೂ ಒಂದೇ ರೀತಿ ಕೇಳುತ್ತೆ. 233 00:17:56,367 --> 00:17:57,494 ಸರಿ. 234 00:18:00,246 --> 00:18:03,958 ನಿಮ್ಮ ಮೊದಲ ಸಿಂಗಲ್ ನಂಬರ್ ಒನ್ ಆಗಿದೆ. ಇದನ್ನು ಹೇಗೆ ಮೀರಿಸುತ್ತೀರಿ? 235 00:18:04,667 --> 00:18:08,046 ಅಂದರೆ, ಇದು ನಮ್ಮ ಮೊದಲ ಸಿಂಗಲ್ ಅಲ್ಲ, ಆದರೆ... 236 00:18:08,046 --> 00:18:11,049 ನಮ್ಮದೊಂದು ಆಲ್ಬಮ್ ಬಂದಿದೆ, ಸೆವೆನ್ ಏಟ್ ನೈನ್. 237 00:18:11,549 --> 00:18:12,675 ಹಾಡು ಇರುವಂಥದ್ದು. 238 00:18:12,675 --> 00:18:16,888 ಎಲ್ಲರಿಗೂ ಹಾಡು ಇಷ್ಟವಾಗಿರುವುದು ನಮಗೆ ಸಂತೋಷ ತಂದಿದೆ, ಇಲ್ಲಿರಲು ಸಂತೋಷವಾಗಿದೆ-- 239 00:18:16,888 --> 00:18:21,768 ಹೌದು, ನಿಜ, ಅವರು ನಮ್ಮ ಸಾಲುಗಳನ್ನು ಹಾಡುವುದು ಕಂಡದ್ದು ಖುಷಿಯಾಯಿತು. 240 00:18:22,602 --> 00:18:23,978 ಅದು ತುಂಬಾನೇ ಅದ್ಭುತ. 241 00:18:23,978 --> 00:18:26,564 ನೀವು ಮತ್ತೊಮ್ಮೆ ಯಾವಾಗ ಪ್ರದರ್ಶನ ಕೊಡಲಿದ್ದೀರಿ? 242 00:18:27,398 --> 00:18:29,359 ಡೈಸಿಗೆ ಅವಳದೇ ಕಾರ್ಯಕ್ರಮಗಳು ಇವೆ, 243 00:18:29,359 --> 00:18:32,195 ಮತ್ತು ನಾವು ಒಟ್ಟಿಗೆ ಮಾಡಲು ನೋಡುತ್ತಿಲ್ಲ... 244 00:18:33,196 --> 00:18:36,574 ನೋಡಿ, ಅವಳು ನಮ್ಮ ಹಾಡು ಹಾಡಿದ್ದು ನಮಗೆ ಇಷ್ಟವಾಯಿತು, 245 00:18:36,574 --> 00:18:39,911 ಆದರೆ ಅದು ಈ ಸಲ ಮಾತ್ರ, ಹಾಗಾಗಿ... 246 00:18:40,703 --> 00:18:43,373 ಅಯ್ಯೋ, ಇದನ್ನು ಕೇಳಲು ನನಗಂತೂ ಬೇಜಾರಾಗುತ್ತಿದೆ. 247 00:18:45,500 --> 00:18:48,253 -ಧನ್ಯವಾದ. -ನಿಮ್ಮ ಸಮಯಕ್ಕಾಗಿ ಧನ್ಯವಾದ. 248 00:18:48,253 --> 00:18:50,630 ನೀನೊಬ್ಬ ನಿಜವಾದ ನೀಚ, ಅಲ್ವಾ? 249 00:18:50,630 --> 00:18:53,299 -ಏನು? -ನಿನ್ನ ಹಾಡನ್ನು ಹಾಡುವುದಾ? 250 00:18:53,299 --> 00:18:55,802 -ನಾನು ನಿನ್ನ ಹೆಸರನ್ನು ಹೇಳಿದೆ. -ಏನೂ ಹೇಳಲಿಲ್ಲ. 251 00:18:55,802 --> 00:18:59,180 -ನೀನು ಹಾಡಿದ್ದು ನನ್ನ ಪದಗಳನ್ನು. -ಏನು ಗೊತ್ತಾ? 252 00:19:00,765 --> 00:19:02,141 ನಿನಗೆ ಒಳ್ಳೆಯ ಜೀವನ ಸಿಗಲಿ. 253 00:19:07,689 --> 00:19:08,606 ಬೋಳಿಮಗನೆ. 254 00:19:16,698 --> 00:19:17,824 ಕರೆನ್. 255 00:19:19,117 --> 00:19:23,079 ಗೊತ್ತಾ, ಇದು ಪ್ರಪಂಚದ ಅತ್ಯಂತ ಹುಚ್ಚು ವಿಷಯ ಆಗಿರಲಿಕ್ಕಿಲ್ಲ. 256 00:19:23,830 --> 00:19:25,039 ಏನು? 257 00:19:25,832 --> 00:19:29,085 -ಬಿಲ್ಲಿ... -ಅಲ್ಲಿ ಹಿಂದೆ ನಡೆದದ್ದು ನೋಡಿದ್ಯಾ? 258 00:19:31,170 --> 00:19:36,175 ಹೌದು. ಅದ್ಭುತವಾಗಿತ್ತು. ಜನ ನಮ್ಮನ್ನು ಇಷ್ಟಪಟ್ಟರು. ಅವಳನ್ನು ಇಷ್ಟಪಟ್ಟರು. 259 00:19:36,175 --> 00:19:39,387 ಬೇರೆ ಹಾಡು ಹಾಡುವಾಗ ಬಂದು ಅವಳು ಹೋಗಲೇ ಇಲ್ಲ. 260 00:19:40,471 --> 00:19:43,808 ಎಲ್ಲಾ ಸಮಯದಲ್ಲಿ ಎಲ್ಲರ ಗಮನ ಅವಳ ಮೇಲೆಯೇ ಇರಬೇಕು ಎಂದುಕೊಂಡಳು. 261 00:19:43,808 --> 00:19:46,436 ನೀವಿಬ್ಬರೂ ಒಟ್ಟಿಗೆ ಇದ್ದರೆ ಅದೇನೋ ಆಗುತ್ತೆ. 262 00:19:46,436 --> 00:19:48,396 ಇಡೀ ಹಾಡನ್ನು ತಾನೇ ಬರೆದದ್ದು ಎಂದಳು. 263 00:19:48,396 --> 00:19:51,441 ಎಲ್ಲರೂ ಹಾಡುವ ಸಾಲುಗಳನ್ನಂತೂ ಅವಳೇ ಬರೆದದ್ದು. 264 00:19:52,942 --> 00:19:55,945 ಅವಳಿಗೆ ಪ್ರತಿಭೆ ಇಲ್ಲ ಎನ್ನುತ್ತಿಲ್ಲ. ನಾನು ಹೇಳೋದು... 265 00:19:56,738 --> 00:20:00,283 ಅವಳು ಒಂಥರಾ ಪಟಾಕಿ ಇದ್ದಂಗೆ. ನಾನು ಹೇಳೋದು... 266 00:20:03,119 --> 00:20:04,245 ಏನು? 267 00:20:05,747 --> 00:20:07,123 ನಾನು ಹೇಳುವುದು ಏನೆಂದರೆ... 268 00:20:09,375 --> 00:20:11,210 ಅವಳನ್ನು ನಾವು ಇರಿಸಿಕೊಳ್ಳಲಾರೆವು. 269 00:20:14,547 --> 00:20:17,592 ತನಗೊಬ್ಬರ ಅವಶ್ಯಕತೆ ಇದೆ ಎಂದು ಬಿಲ್ಲಿ ಎಂದಿಗೂ ಒಪ್ಪಲ್ಲ. 270 00:20:21,930 --> 00:20:23,848 ಇದು ನಮ್ಮಿಬ್ಬರಲ್ಲಿ ಇದ್ದ ಒಂದೇ ಗುಣ. 271 00:20:28,937 --> 00:20:30,730 ಏನಂದ್ರೆ ನನಗೆ ಉರಿದಿತ್ತು. 272 00:20:30,855 --> 00:20:34,817 ಕೋಪವು ಒಂದು ಅತ್ಯುತ್ತಮ ಪ್ರಚೋದಕ. 273 00:20:37,403 --> 00:20:38,404 ಥೂ. 274 00:20:45,328 --> 00:20:46,746 ಎಂಥ... 275 00:20:47,330 --> 00:20:50,041 ನೀನಿಂಥ ಹುಡುಗ 276 00:20:52,502 --> 00:20:54,712 ಬಿಡುವಿಲ್ಲದ ಧೂಮಪಾನ. 277 00:20:57,966 --> 00:21:01,219 ನೀನೊಬ್ಬ ನೀಚ 278 00:21:01,219 --> 00:21:02,220 ನೀನೊಬ್ಬ ನೀಚ. 279 00:21:07,016 --> 00:21:08,434 ಓ, ಹಾಂ 280 00:21:11,020 --> 00:21:13,398 ಮಹಿಳೆಯರೇ ಮತ್ತು ಮಹಾಶಯರೇ, ದಿ ಶಾಂಟೆರೆಲ್ಸ್. 281 00:21:16,567 --> 00:21:18,820 ನಾನು ಮಾಡಲಾಗುವುದೆಲ್ಲವೂ 282 00:21:19,028 --> 00:21:23,116 ನಾನು ಮಾಡಲಾಗುವುದೆಲ್ಲವೂ ಕಾಯುವುದಷ್ಟೇ 283 00:21:23,282 --> 00:21:25,159 ಕಾಯುವುದಷ್ಟೇ 284 00:21:25,660 --> 00:21:28,538 ಮತ್ತು ನನಗೆ ಅರ್ಥವಾಗದಿದ್ದರೆ 285 00:21:28,913 --> 00:21:32,291 ಚಿನ್ನ, ನಾನಿನ್ನೂ ಅರ್ಥ ಮಾಡಿಕೊಳ್ಳಬಲ್ಲೆ 286 00:21:33,126 --> 00:21:34,544 ಅರ್ಥ ಮಾಡಿಕೊಳ್ಳಬಲ್ಲೆ 287 00:21:35,336 --> 00:21:36,671 ಹಾಂ 288 00:21:36,921 --> 00:21:38,214 ಅದು... 289 00:21:39,590 --> 00:21:41,175 ಅದು ನನ್ನ ಧ್ವನಿ. 290 00:21:42,218 --> 00:21:44,804 -ಅವನನ್ನು ಕೊಂದುಹಾಕುವೆ. -ಡೈಸಿ. 291 00:21:44,804 --> 00:21:47,390 ಅವರು ನಿನ್ನ ಧ್ವನಿಯನ್ನು ಉಪಯೋಗಿಸಲಾಗದು. ಅದು ಅನ್ಯಾಯ! 292 00:21:49,600 --> 00:21:52,687 ಡೈಸಿ. ಡೈಸಿ, ಬೇಡ, ಬೇಡ, ಬೇಡ. ಇರು, ಇರು, ಇರು. 293 00:21:52,687 --> 00:21:55,064 -ಅವನ ಹಲ್ಲು ಉದುರಿಸುವೆ. -ಡೈಸಿ. 294 00:21:55,064 --> 00:21:57,608 -ಅವನ ಸ್ಟುಡಿಯೋ ಸುಟ್ಟುಹಾಕುವೆ. -ಡೈಸಿ. 295 00:21:58,901 --> 00:22:00,069 ನನಗೆ ಕೀಗಳನ್ನು ಕೊಡು. 296 00:22:05,283 --> 00:22:08,745 ನಿನ್ನನ್ನು ಪ್ರೀತಿಸುವೆ. ಬೀಗದ ಕೈ ಕೊಡು. 297 00:22:15,626 --> 00:22:18,212 ಎರಡು ನಿಮಿಷ ಅವನ ತೊಡೆಯ ಮೇಲೆ ನಾನು ಕೂರಬಹುದಿತ್ತು. 298 00:22:18,212 --> 00:22:21,340 -ಹಾಳಾಗಲಿ, ಸಿಮೋನ್. -ಗೊತ್ತು. ಏನಂದ್ರೆ ಅದು... 299 00:22:22,967 --> 00:22:25,178 ನಾನು ಇಲ್ಲಿಂದ ಹೊರಗೆ ಹೋಗಬೇಕು ಅಷ್ಟೇ. 300 00:22:26,554 --> 00:22:29,891 ಇಲ್ಲಿಂದ ಹೋಗುವುದಾ? ಅಂದ್ರೆ, ಏನು... ಎಲ್ಲಿಗೆ? 301 00:22:32,435 --> 00:22:33,770 ನ್ಯೂ ಯಾರ್ಕಿಗೆ. 302 00:22:36,856 --> 00:22:39,192 ಪಾರ್ಟಿಯಲ್ಲಿ ಆ ಹೆಂಗಸು ಹೇಳಿದ್ದನ್ನು ಹೇಳಿದೆ. 303 00:22:40,610 --> 00:22:41,611 ಆ ಹೆಂಗಸಾ? 304 00:22:44,322 --> 00:22:45,406 ಅದು... 305 00:22:47,408 --> 00:22:49,702 ಅವಳು ಅದರ ಬಗ್ಗೆ ಹೇಳುವ ರೀತಿ, ಅದು... 306 00:22:49,702 --> 00:22:52,205 -ಏನು? -ವಿಭಿನ್ನ. 307 00:22:55,708 --> 00:22:57,794 ಬಹುಶಃ ನನಗೆ ಅದೇ ಬೇಕೇನೋ, ಗೊತ್ತಾ? 308 00:23:00,254 --> 00:23:03,674 ಹೊಸ ಸನ್ನಿವೇಶ. ಹೊಸ ಆರಂಭ. 309 00:23:07,845 --> 00:23:09,764 ನಾನು ಯಾರೆಂದು ಯಾರಿಗೂ ಗೊತ್ತಿರದ ಕಡೆ. 310 00:23:15,728 --> 00:23:17,146 ನಿನಗಿದು ಹುಚ್ಚುತನ ಅನಿಸಬಹುದು. 311 00:23:17,146 --> 00:23:18,815 ನನಗೆ ಹುಚ್ಚುತನ ಅನಿಸಲ್ಲ. 312 00:23:21,901 --> 00:23:24,195 ಬಿಲ್ಲಿ ಡನ್ ಮತ್ತು ಮಿಕ್ಕವರ ಜೊತೆ 313 00:23:24,195 --> 00:23:28,282 ನಾನು ಸ್ಟೇಜ್ ಮೇಲಿದ್ದಾಗ ನನಗೊಂದು ಘಟನೆ ನಡೆಯಿತು, 314 00:23:29,742 --> 00:23:33,162 ಆಗ ನನಗೊಂದು ಉನ್ಮಾದ ಏರಿತು, ಗೊತ್ತಾ? 315 00:23:35,623 --> 00:23:37,416 ಮತ್ತು 25 ನಿಮಿಷಗಳವರೆಗೆ, 316 00:23:40,628 --> 00:23:43,673 ನಾನು ಅಷ್ಟು ಸಂತೋಷ ಅನುಭವಿಸಿರಲೇ ಇಲ್ಲ. 317 00:23:47,593 --> 00:23:51,139 ಆ ಹೆಂಗಸು ನಿನಗೆ ಪ್ರತಿ ಸಲ ಕರೆ ಮಾಡಿದಾಗ ನಿನ್ನ ಮುಖದ ಮೇಲೆ 318 00:23:52,348 --> 00:23:56,519 ನಾನು ಅದನ್ನೇ ನೋಡುವೆ. 319 00:24:05,153 --> 00:24:09,198 ನಮಗೆ ಪ್ರತಿ ಸಲ ಹೀಗೆಯೇ ಅನ್ನಿಸಿದರೆ, ನಮಗಿಬ್ಬರಿಗೂ, 320 00:24:09,574 --> 00:24:11,993 ಎಷ್ಟೇ ಹುಚ್ಚುತನ ಆದರೂ ಪರವಾಗಿಲ್ಲ, ನಾವು ಮಾಡಲೇಬೇಕು. 321 00:24:22,920 --> 00:24:24,255 ಹಾಗಾಗಿ, ಅದನ್ನೇ ಮಾಡಿದೆ. 322 00:24:26,549 --> 00:24:28,217 ಬಸ್ 323 00:24:30,011 --> 00:24:31,888 ನ್ಯೂ ಯಾರ್ಕ್ 324 00:24:38,769 --> 00:24:39,812 ಇದೇನೇ. 325 00:24:42,982 --> 00:24:45,651 ನೀನಿಲ್ಲದೆ ಏನು ಮಾಡ್ತೀನೋ ಗೊತ್ತಿಲ್ಲ. 326 00:24:47,403 --> 00:24:49,071 ನಾನು ನಿನ್ನನ್ನು ಬಿಡುವುದೇ ಇಲ್ಲ. 327 00:24:51,616 --> 00:24:52,825 ಆಯ್ತು. 328 00:24:53,784 --> 00:24:54,952 ಹೊರಡಬೇಕು. 329 00:24:57,914 --> 00:25:00,917 ಪ್ರಪಂಚದಲ್ಲಿ ನನಗಿದ್ದ ನಿಜವಾದ ಸ್ನೇಹಿತೆ ಅವಳೊಬ್ಬಳೇ. 330 00:25:01,834 --> 00:25:03,461 ಅಲ್ಲಿ ತಲುಪಿದಾಗ ನನಗೆ ಕರೆ ಮಾಡು. 331 00:25:05,838 --> 00:25:07,840 ಮತ್ತು ಹಾಗೇನೇ, ಅವಳು ಹೊರಟುಹೋದಳು. 332 00:25:08,966 --> 00:25:11,928 ಶೇಟೋ ಮಾರ್ಮೊಂಟ್ ಹೋಟೆಲ್ 333 00:25:22,980 --> 00:25:26,525 ಜನರ ಮಧ್ಯೆ ಇರುವುದರಿಂದ ಒಂಟಿತನ ಕಡಿಮೆಯಾಗುತ್ತೆ ಎಂದುಕೊಂಡೆ, 334 00:25:28,069 --> 00:25:30,238 ಅದಕ್ಕಾಗಿ ಹೋಟೆಲಿಗೆ ಹೋದೆ. 335 00:25:32,406 --> 00:25:33,491 ತಪ್ಪಾಗಿ ಯೋಚಿಸಿದೆ. 336 00:25:49,840 --> 00:25:51,968 ನೀನಿಂಥ ಹುಡುಗ 337 00:25:51,968 --> 00:25:56,889 ನಿನ್ನ ಹಾಸಿಗೆಯ ಮೇಲೆ ವರ್ಜಿನ್ ಮೇರಿ ಇದ್ದಾಳೆ 338 00:26:00,935 --> 00:26:03,062 ಮತ್ತು ನೀನಿಂಥ ಹುಡುಗ 339 00:26:03,062 --> 00:26:08,150 ನಿನ್ನ ತಲೆಯಲ್ಲಿ ನೂರು ದ್ವಂದ್ವಾರ್ಥಗಳು ಇವೆ 340 00:26:12,571 --> 00:26:16,242 ನಿನ್ನ ನಾಟಕೀಯ ವರ್ತನೆ ನಿನ್ನನ್ನು ಕೆಳಗೆಳೆಯುತ್ತೆ 341 00:26:16,242 --> 00:26:18,494 ಚಿತ್ರಕಲೆಯಿಂದ ನಿನ್ನ ಕಣ್ಣು ಬರಿದಾಗುತ್ತೆ 342 00:26:18,494 --> 00:26:20,871 {\an8}ಬಿಲ್ಬೋರ್ಡ್ ಹಾಟ್ 100 ಲುಕ್ ಅಟ್ ಅಸ್ ನವ್ (ಹನೀಕೂಂಬ್) 343 00:26:20,871 --> 00:26:23,165 {\an8}ದೇಶದ ನಂಬರ್ ಒನ್ ಹಾಡು ನನ್ನದಾಗಿತ್ತು. 344 00:26:25,084 --> 00:26:29,463 ಅದನ್ನು ಸಂಭ್ರಮಿಸಲು ನನ್ನ ಜೊತೆ ಒಬ್ಬರೂ ಇರಲಿಲ್ಲ. 345 00:26:29,463 --> 00:26:32,383 ನಾನು ಅದೇ ರೀತಿಯ ಹುಡುಗ 346 00:26:35,511 --> 00:26:38,264 ನಾನು ಅದೇ ರೀತಿಯ ಹುಡುಗ 347 00:26:44,186 --> 00:26:45,563 ಹೇ! 348 00:26:49,483 --> 00:26:50,735 ಓ, ದೇವರೇ! 349 00:26:53,279 --> 00:26:55,281 ಇದು ನನ್ನ ಮನೆ. 350 00:26:55,781 --> 00:26:57,658 ನನ್ನ ತಂದೆ ತಾಯಿಯ ಮನೆ. 351 00:26:58,117 --> 00:27:02,371 ನಿಮ್ಮನ್ನು ಬಂಧಿಸಿದ್ದರು, ಅಲ್ವಾ? ನಿಮ್ಮ ಚಿಕ್ಕಂದಿನ ಮನೆಗೆ ಒಳನುಗ್ಗಿದ್ದಕ್ಕಾಗಿ? 352 00:27:02,371 --> 00:27:05,458 ಸತ್ಯವಲ್ಲದ ಎಷ್ಟೋ ಸಂಗತಿಗಳನ್ನು ನನ್ನ ಬಗ್ಗೆ ಬರೆಯುತ್ತಾರೆ. 353 00:27:21,682 --> 00:27:23,642 ಅವರು ತಪ್ಪು ಮಾಡಿದರು ಮತ್ತು... 354 00:27:23,642 --> 00:27:27,188 ನಾನು ಇಲ್ಲಿ ಇರಲೇಬಾರದು. ಏನಂದ್ರೆ, ಅವರು... 355 00:27:28,814 --> 00:27:31,692 -ನಾನು... -ನೀನು ನನಗೆ ಏನನ್ನೂ ವಿವರಿಸಬೇಕಾಗಿಲ್ಲ. 356 00:27:34,445 --> 00:27:38,366 ನನಗೆ ಕುತೂಹಲವಷ್ಟೇ. ನನ್ನನ್ನು ಯಾಕೆ ಕರೆಸಿದೆ? ನೀನು ಇಲ್ಲಿಯವಳೇ, ಅಲ್ವಾ? 357 00:27:38,366 --> 00:27:39,700 ನಿನಗೆ ಜನ ಗೊತ್ತಿರಬಹುದು. 358 00:27:41,369 --> 00:27:44,455 ನಾನು ಮಂಗಳಗ್ರಹದವಳು, ಕರೆನ್. ನನ್ನವರು ಯಾರೂ ಇಲ್ಲ. 359 00:27:47,958 --> 00:27:50,753 ಅವಳಿಗೆ ನನ್ನ ನಂಬರ್ ಹೇಗೆ ಸಿಕ್ಕಿತು ಅಂತಲೂ ಗೊತ್ತಿಲ್ಲ. 360 00:27:53,547 --> 00:27:56,801 ಇಡೀ ಅಲ್ಬಮ್ ನನ್ನ ತಲೆಯಲ್ಲಿ ಈಗಾಗಲೇ ಯೋಚಿಸಿಟ್ಟಿದ್ದೇನೆ. 361 00:27:56,801 --> 00:27:59,303 ಒಳ್ಳೆಯದು. ಅದನ್ನು ಹೇಗೆ ಕೇಳುತ್ತಿದ್ದೀಯಾ? 362 00:27:59,303 --> 00:28:02,640 ನನಗೆ ದೊಡ್ಡದಾದ, ಎಲೆಕ್ಟ್ರಿಕ್ ಗಿಟಾರುಗಳು, ಎಷ್ಟೊಂದು ಹಾರ್ಮೋನಿಗಳು, 363 00:28:02,640 --> 00:28:04,725 ಕುಣಿಸುವಂಥ ರಾಗಗಳನ್ನು ಹಾಡುವುದು ಬೇಕು. 364 00:28:04,725 --> 00:28:08,854 ನನಗೆ ಸಾಕಾಗಿದೆ, ಟೆಡ್ಡಿ. ಗಾಯಕಿ-ಗೀತರಚನೆಗಾರ್ತಿ ಆಗಿರುವುದು ಸಾಕಾಗಿದೆ. 365 00:28:12,691 --> 00:28:15,861 -ಏನು? -ನನ್ನ ಕೆಲವು ಸ್ನೇಹಿತರು ಕೂಡ ಹಾಗೇನೇ. 366 00:28:18,155 --> 00:28:19,698 ದಿ ಸಿಕ್ಸ್ ಬಗ್ಗೆ ಮಾತಾಡ್ತಿಲ್ಲ. 367 00:28:19,698 --> 00:28:20,991 -ಒಳ್ಳೆಯದು. -ಒಳ್ಳೆಯದಾ? 368 00:28:21,742 --> 00:28:25,287 ಹೌದು, ಹೇಗಿದ್ದರೂ ಅವರು ನಿನಗೆ ಸರಿ ಹೊಂದಲ್ಲ. 369 00:28:26,247 --> 00:28:28,082 ಹೌದು, ನಾನಂತೂ ಖಂಡಿತ ಸರಿ ಹೊಂದಲ್ಲ. 370 00:28:35,005 --> 00:28:36,006 ಯಾಕಿಲ್ಲ? 371 00:28:37,842 --> 00:28:40,219 ದಿ ಸಿಕ್ಸ್ ನನಗೆ ಯಾಕೆ ಸರಿ ಹೊಂದಲ್ಲ ಅಂತೀರಿ? 372 00:28:40,219 --> 00:28:43,472 ನಾವು ಜೊತೆಯಲ್ಲಿ ಬೇಸಿಗೆಯ ಅತಿದೊಡ್ಡ ಗೀತೆಯನ್ನು ರಚಿಸಿದೆವು. 373 00:28:43,472 --> 00:28:46,851 ಡೈಸಿ, ನೀನು ಕೇವಲ ಒಬ್ಬ ಸಂಗೀತಗಾರ್ತಿ, 374 00:28:46,851 --> 00:28:50,438 ಅಥವಾ ಗೀತರಚನೆಗಾರ್ತಿ, ಅಥವಾ ಕೇವಲ ಒಳ್ಳೆಯ ಪ್ರದರ್ಶಕಿ ಅಲ್ಲ. 375 00:28:52,064 --> 00:28:55,317 ನೀನೊಬ್ಬ ಮುಂಚೂಣಿಯ ವ್ಯಕ್ತಿ. 376 00:28:57,069 --> 00:29:00,531 ಅವರ ಬಳಿ ಈಗಾಗಲೇ ಒಬ್ಬ ಇದ್ದಾನೆ. ಹೇಳಿದ್ದು ಅರ್ಥವಾಯಿತಲ್ಲ? 377 00:29:00,531 --> 00:29:03,576 ಹೌದು. ಅವನಿಗೆ ಹಂಚಿಕೊಳ್ಳಲು ಇಷ್ಟವಿಲ್ಲ. ಗೊತ್ತಾಯ್ತು. 378 00:29:05,744 --> 00:29:06,745 ಖಂಡಿತ. 379 00:29:10,666 --> 00:29:12,626 ಮತ್ತೊಮ್ಮೆ ಯಾವಾಗ ಪ್ರದರ್ಶನ ಕೊಡಲಿದ್ದೀರಿ? 380 00:29:12,626 --> 00:29:15,754 ಡೈಸಿಗೆ ಅವಳದೇ ಕಾರ್ಯಕ್ರಮಗಳು ಇವೆ, 381 00:29:15,754 --> 00:29:18,549 ಮತ್ತು ನಾವು ಒಟ್ಟಿಗೆ ಮಾಡಲು ನೋಡುತ್ತಿಲ್ಲ... 382 00:29:19,508 --> 00:29:23,095 ನೋಡಿ, ಅವಳು ನಮ್ಮ ಹಾಡು ಹಾಡಿದ್ದು ನಮಗೆ ಇಷ್ಟವಾಯಿತು, 383 00:29:23,095 --> 00:29:26,265 ಆದರೆ ಅದು ಈ ಸಲ ಮಾತ್ರ, ಹಾಗಾಗಿ... 384 00:29:27,683 --> 00:29:30,060 ಅಯ್ಯೋ, ಇದನ್ನು ಕೇಳಲು ನನಗಂತೂ ಬೇಜಾರಾಗುತ್ತಿದೆ. 385 00:29:30,060 --> 00:29:32,855 ಈಗ ಹವಾಮಾನದ ಬಗ್ಗೆ ನೋಡುವುದಾದರೆ, ಸ್ವಲ್ಪ ಮಂದವಾದ... 386 00:29:32,855 --> 00:29:34,607 ಮುಖ ಯಾಕೆ ಹಾಗಿದೆ? 387 00:29:36,233 --> 00:29:37,359 ಏನೂ ಇಲ್ಲ. 388 00:29:37,985 --> 00:29:40,362 -ಏನು? ಏನು? -ಏನೂ ಇಲ್ಲ. ನಾನು ಸುಮ್ಮನೆ... 389 00:29:40,362 --> 00:29:43,240 -ಹೇಳು. -ಅವಳಿಗೆ ಶ್ರೇಯಸ್ಸು ಸಲ್ಲಿಸಬಹುದಾಗಿತ್ತು. 390 00:29:43,240 --> 00:29:44,408 ಅಲ್ವಾ? 391 00:29:48,496 --> 00:29:52,082 ಸರಿ. ಮತ್ತೆ ನಿನಗೆ ಬೇಡವಾದರೆ ನನ್ನ ಅಭಿಪ್ರಾಯ ಕೇಳಬೇಡ. 392 00:29:54,460 --> 00:29:57,254 ನಿನ್ನನ್ನು ಪ್ರೀತಿಸುವೆ. ರಾತ್ರಿಯ ಪಾರ್ಟಿಗೆ ರೆಡಿಯಾಗುವೆ. 393 00:29:57,254 --> 00:30:00,090 ರಾಕ್ ಸ್ಟಾರ್ ಆಗಲು ಸ್ವಲ್ಪ ಅಹಂಕಾರ ಇರಬೇಕು. 394 00:30:00,090 --> 00:30:02,134 ಅಲ್ವಾ? ಅದರಿಂದಲೇ ಅವರ ವರ್ಚಸ್ಸು. 395 00:30:03,594 --> 00:30:07,515 ಆದರೆ ಅವನ ಅಹಂಕಾರ ಆತ ಮಹಾನ್ ಆಗೋದನ್ನು ತಡೆಯಲು ನಾನು ಬಿಡುತ್ತಿರಲಿಲ್ಲ. 396 00:30:07,515 --> 00:30:09,975 ಮತ್ತೆ, ನೀವೇನು ಮಾಡಿದಿರಿ? 397 00:30:12,853 --> 00:30:16,148 ಹಾಂ, ಎಲ್ಲರಿಗೂ ಆಗಾಗ ಸ್ವಲ್ಪ ಪ್ರೋತ್ಸಾಹ ಬೇಕಾಗುತ್ತೆ. 398 00:30:17,191 --> 00:30:20,861 -ಎಲ್ಲರ ಅಭಿಪ್ರಾಯ ಕಲೆ ಹಾಕೋಣ. -ಡೈಸಿ ಬ್ಯಾಂಡ್ ಸೇರಬೇಕು ಅಂತಾನಾ? 399 00:30:20,861 --> 00:30:23,864 ಹೌದು, ಬಿಲ್ಲಿ ಆಲೋಚನೆ ಏನು ಅಂತಲ್ಲ, ನಿನ್ನ ಆಲೋಚನೆ ಏನು ಅಂತ. 400 00:30:23,864 --> 00:30:27,993 ಅಂದ್ರೆ, ಬಿಲ್ಲಿಗೆ ಒಳ್ಳೆಯದು ಅನಿಸಿದ್ದು ನನಗೂ ಒಳ್ಳೆಯದೇ. 401 00:30:27,993 --> 00:30:31,622 ದೇವರೇ. ಸಾಕು. ಅಯ್ಯೋ, ದೇವರೇ, ನನ್ನ ಜಾಕೆಟ್ ತೊಡಿಸು. 402 00:30:31,622 --> 00:30:34,542 -ಅದು ನಿಲ್ಲಲ್ಲ. -ನನಗೆ ಭುಜಗಳು ಬೇಕು. ಅದೇ ಲುಕ್ಕು. 403 00:30:34,542 --> 00:30:37,169 -ಅದು ನಿಲ್ಲಲ್ಲ. -ಯಾವ ಪ್ರಶ್ನೆಗಳನ್ನೂ ಕೇಳಬೇಡ. 404 00:30:37,169 --> 00:30:38,504 ಹೋಗು, ಹೋಗು. 405 00:30:45,302 --> 00:30:47,304 -ಹಲೋ? -ಹಲೋ. 406 00:30:48,305 --> 00:30:50,891 ಅಯ್ಯೋ, ದೇವರೇ. ತಡಿ. ಮೊದಲು ಬಂದಿದ್ದು ನಾವೇನಾ? 407 00:30:50,891 --> 00:30:54,061 ಹೌದು, ನೀವೇ, ಮತ್ತು ಸದ್ಯ, ನಾನಿನ್ನೂ ತಯಾರಾಗಿಯೇ ಇಲ್ಲ. 408 00:30:54,061 --> 00:30:58,399 ಕರೆನ್, ನನಗೊಂದು ದೊಡ್ಡ ಉಪಕಾರ ಮಾಡುವೆಯಾ? ಇವುಗಳನ್ನು ಟೇಬಲ್ ಮೇಲೆ ಹರಡು. 409 00:30:58,399 --> 00:30:59,358 ಹಾಂ. 410 00:30:59,358 --> 00:31:01,902 ಮೇಲೆ ಕಲ್ಲು ಇಡು ಇಲ್ಲಾ ಹಾರಿಕೊಂಡು ಹೋಗುತ್ತವೆ. 411 00:31:01,902 --> 00:31:03,779 -ಸರಿ. ಕಲ್ಲುಗಳು. -ಧನ್ಯವಾದ. 412 00:31:12,705 --> 00:31:13,789 ಹಾಯ್. 413 00:31:14,290 --> 00:31:15,416 ಹಲೋ. 414 00:31:15,958 --> 00:31:18,002 ಮತ್ತೆ, ಅದರ ಬಗ್ಗೆ ಮಾತಾಡೋಣ? 415 00:31:18,002 --> 00:31:19,461 ಯಾವುದರ ಬಗ್ಗೆ? 416 00:31:19,461 --> 00:31:21,255 ನಿಮ್ಮಿಬ್ಬರ ಮಧ್ಯೆ ಏನು ನಡೆಯುತ್ತಿದೆ? 417 00:31:21,672 --> 00:31:23,048 -ಏನಿಲ್ಲ. -ಏನಿಲ್ವಾ? 418 00:31:24,758 --> 00:31:27,720 -ಸರಿ. -ಇಲ್ಲ, ನಾನು ನಿನ್ನ ಜೊತೆ ಮಾತಾಡಲ್ಲ. 419 00:31:27,720 --> 00:31:29,179 -ನನ್ನ ಸಲಹೆ ಬೇಕಾ? -ಬೇಡ. 420 00:31:29,179 --> 00:31:30,681 -ಅವಳಿಗೆ ಹೇಳು. -ಇಲ್ಲ. 421 00:31:30,681 --> 00:31:33,267 ಅರೆ. ಮಹಾ ಅಂದ್ರೆ ಏನಾಗುತ್ತೆ? 422 00:31:33,267 --> 00:31:37,896 ಬ್ಯಾಂಡ್ ಮುರಿಯುತ್ತೆ, ಎಲ್ಲರೂ ನನ್ನನ್ನು ದ್ವೇಷಿಸುತ್ತಾರೆ ಮತ್ತು ನಾನು ಮೂರ್ಖನಾಗುವೆ... 423 00:31:40,316 --> 00:31:41,942 ನನಗೇನೋ ಒಳ್ಳೇದೇ ಅನ್ಸುತ್ತೆ. 424 00:31:43,110 --> 00:31:44,778 ದೇವ್ರೇ, ಈ ಜಾಗ ಸುಂದರವಾಗಿದೆ. 425 00:31:44,778 --> 00:31:46,363 -ನಿನಗೊಂದು ಬೇಕಾ? -ಹಾಂ. 426 00:31:46,363 --> 00:31:48,616 -ಸರಿ. -ನಾನು ದೂರ ಹೋಗಬೇಕು... 427 00:31:48,616 --> 00:31:49,617 ಹಾಂ, ನಿಜ. 428 00:31:52,786 --> 00:31:54,622 -ಹೇ. -ಹೇ. 429 00:31:55,539 --> 00:31:58,083 -ಆರಾಮಾ? -ಹಾಂ, ಆರಾಮೇ. 430 00:32:01,795 --> 00:32:03,005 ಮುಂದೇನು? 431 00:32:09,928 --> 00:32:11,930 ಕ್ರಾಸ್ಬಿ ಅಲ್ಲೇ ಇರುತ್ತಿದ್ದದ್ದು. 432 00:32:11,930 --> 00:32:15,392 ಅಲ್ಲೇ, ಲುಕೌಟ್ ಬೆಟ್ಟದ ಮೇಲೆ, ಮಾಮಾ ಸಿ ಅಲ್ಲೇ ಇದ್ದಿದ್ದು. 433 00:32:15,392 --> 00:32:16,894 ಈಗಲ್ಲಿ ಯಾರು ಇರುತ್ತಾರೆ? 434 00:32:17,353 --> 00:32:18,771 ಡಾ. ಕೆಸ್ಟೆನ್ಬಾಮ್. 435 00:32:18,771 --> 00:32:21,357 ಆತ ಪಾದಗಳ ತಜ್ಞ. ತುಂಬಾ ಒಳ್ಳೆಯ ವ್ಯಕ್ತಿ. 436 00:32:23,025 --> 00:32:26,070 -ಯಾರಿಗೆ ಬಾಯಾರಿಕೆ? -ಹಾಂ. ಒಳಗೆ ಹೋಗೋಣ, ಗುರು. 437 00:32:37,247 --> 00:32:38,082 ಹಲೋ. 438 00:32:41,210 --> 00:32:42,795 ಮತ್ತೆ, ಇನ್ನೂ ಭಯಾನಾ? 439 00:32:44,338 --> 00:32:47,549 ನೀನು ಬಂದವರಿಗೆ ಪಾನೀಯ ಕೊಡಬೇಕು, ಅಲ್ವಾ? 440 00:32:47,549 --> 00:32:50,302 ಹೌದು, ಕೊಡಬೇಕು. ಹೌದು, ಧನ್ಯವಾದ. 441 00:33:20,165 --> 00:33:21,250 ಛೆ! 442 00:33:29,216 --> 00:33:30,592 ನಮಸ್ಕಾರ. ಕ್ಷಮಿಸಿ. 443 00:33:32,177 --> 00:33:34,722 ಸರಿ. ನಿನಗೆ ಚಿಂತೆಯಿಲ್ಲ. 444 00:33:43,313 --> 00:33:44,815 ನೀನು ತುಂಬಾ ಕೆಟ್ಟವಳು. 445 00:33:48,110 --> 00:33:51,155 -ಡೈಸಿ. ದೇವರೇ. -ಹಾಯ್. 446 00:33:51,155 --> 00:33:54,908 -ಹಾಯ್. ನೀನು ಬರುವೆ ಎಂದುಕೊಳ್ಳಲಿಲ್ಲ. -ನಾನೊಂದು ಅನಾನಸ್ ತಂದೆ. 447 00:33:54,908 --> 00:33:59,163 ಹವಾಯಿಯನ್ ಏರ್ಲೈನ್ಸ್ ವಿಮಾನದ ಪತ್ರಿಕೆಯ ಪ್ರಕಾರ ಇದು ಗೃಹಪ್ರವೇಶದ ಉಡುಗೊರೆ. 448 00:33:59,163 --> 00:34:00,247 ಸುಂದರವಾಗಿದೆ. 449 00:34:00,247 --> 00:34:02,708 ವೈನ್ ತಂದಿದ್ದೆ, ಆದರೆ ಅದನ್ನು ಕೆಳಗೆ ಬೀಳಿಸಿದೆ. 450 00:34:02,708 --> 00:34:06,920 ಪರವಾಗಿಲ್ಲ. ನಮ್ಮ ಬಳಿ ವೈನ್ ಮತ್ತು ಬಿಯರ್ ಇದೆ. ನಿನಗೇನು ಬೇಕು? ನಿನಗೇನಾದರೂ ಬೇಕಾ? 451 00:34:06,920 --> 00:34:10,799 ಅಡುಗೆ ಮನೆಯ ಹಿಂದೆ ಇಡೀ ಬಾರ್ ಇದೆ. ಹೋಗಿ ಬ್ಯಾಂಡಿಗೆ ಹಾಯ್ ಹೇಳು. 452 00:34:10,799 --> 00:34:11,925 ಹಾಯ್, ಬಿಲ್ಲಿ. 453 00:34:13,093 --> 00:34:14,094 ಕ್ಯಾಮ್. 454 00:34:15,387 --> 00:34:18,265 -ಅವಳು ಇಲ್ಲೇನು ಮಾಡುತ್ತಿದ್ದಾಳೆ? -ಅವಳನ್ನು ನಾನೇ ಕರೆದೆ. 455 00:34:18,390 --> 00:34:21,101 -ಯಾಕೆ? -ಬರ್ತಾಳಾ ಅಂತ ನೋಡೋಕೆ. 456 00:34:21,643 --> 00:34:24,605 ಮತ್ತು ನಾನು ಅವಳನ್ನು ನೋಡಬೇಕಿತ್ತು. 457 00:34:47,085 --> 00:34:48,712 ಹೇ. ನಾನು... 458 00:34:53,425 --> 00:34:56,011 ನಾನು ನಿನ್ನನ್ನು ಕ್ಷಮೆ ಕೇಳಬೇಕು ಅನ್ಸುತ್ತೆ. 459 00:34:56,011 --> 00:34:57,346 ಅನ್ಸುತ್ತಾ? 460 00:34:59,890 --> 00:35:02,851 ಫೆಸ್ಟಿವಲ್ ಆದ ಮೇಲೆ ಕೆಲವು ಮಾತುಗಳನ್ನು ಹೇಳಿದೆ, 461 00:35:04,645 --> 00:35:06,522 ಮತ್ತು ಅದಕ್ಕಾಗಿ ನನ್ನನ್ನು ಕ್ಷಮಿಸು. 462 00:35:09,483 --> 00:35:12,319 ಏನೇ ಆದರೂ, ನಮ್ಮ ಜೊತೆ ಹಾಡಿದ್ದಕ್ಕೆ ಧನ್ಯವಾದ. 463 00:35:13,612 --> 00:35:16,740 ಜನರು ತುಂಬಾ ಇಷ್ಟಪಟ್ಟರು, ಹಾಗಾಗಿ... 464 00:35:17,574 --> 00:35:18,617 ಪರವಾಗಿಲ್ಲ. 465 00:35:20,285 --> 00:35:21,912 ಇಂದು ಬಂದಿದ್ದಕ್ಕೆ ಧನ್ಯವಾದ. 466 00:35:25,290 --> 00:35:27,084 ನಿನ್ನ ಕೈಗೆ ಏನಾಯಿತು? 467 00:35:27,793 --> 00:35:29,211 ಕೊಯ್ದುಕೊಂಡೆ. 468 00:35:31,255 --> 00:35:33,674 ನಮ್ಮ ಅಪ್ಪ ಅಮ್ಮನ ಮನೆ ಬಾಗಿಲು ಮುರಿಯಲು ನೋಡಿದೆ. 469 00:35:35,551 --> 00:35:38,303 ಆದರೆ ಅವರು ಅಲ್ಲಿ ಇರಲಿಲ್ಲ ಅಂತ ಕಾಣುತ್ತೆ. 470 00:35:38,303 --> 00:35:41,723 ಡೈಸಿ ತುಂಬಾ ಪ್ರತಿಭಾವಂತೆ. ಅದರ ಬಗ್ಗೆ ಎರಡು ಮಾತಿಲ್ಲ. 471 00:35:42,266 --> 00:35:44,226 ಮತ್ತೆ, ಯಾವುದರ ಬಗ್ಗೆ ಮಾತಿತ್ತು? 472 00:35:49,189 --> 00:35:55,112 ಗೊತ್ತಾ, ನಾವು ಹೆಚ್ಚಿನ ಸಂಗೀತ ನುಡಿಸುವ ಬಗ್ಗೆ ತುಂಬಾ ಜನ ಮಾತನಾಡುತ್ತಿದ್ದಾರೆ. 473 00:35:55,445 --> 00:35:56,572 ಹೌದಾ? 474 00:35:59,157 --> 00:36:00,742 ಅದರ ಬಗ್ಗೆ ನಿನಗೇನನ್ಸುತ್ತೆ? 475 00:36:01,994 --> 00:36:04,830 ಸರಿ, ನಿಮ್ಮ ಬ್ಯಾಂಡ್ ನಾನು ಸೇರಬೇಕೇನು? 476 00:36:09,293 --> 00:36:10,669 ಅಂದ್ರೆ, ಖಂಡಿತವಾಗಿ. 477 00:36:11,879 --> 00:36:12,963 ಯಾಕೆ? 478 00:36:18,760 --> 00:36:20,095 ನಾನು ಅದನ್ನೇ ಅಂದುಕೊಂಡೆ. 479 00:36:24,850 --> 00:36:30,105 ಡೈಸಿ? ಡೈಸಿ, ಒಂದು ನಿಮಿಷ ತಡಿ. ಹೇ. 480 00:36:30,105 --> 00:36:31,773 ನನಗೊಂದು ಟ್ಯಾಕ್ಸಿ ಕರೆಸುವೆಯಾ? 481 00:36:34,443 --> 00:36:37,571 -ಸ್ವಲ್ಪ ಒಳಗಡೆ ಬರ್ತೀಯಾ? -ಅವನಿಗೆ ನಾನು ಬರುವುದು ಇಷ್ಟವಿಲ್ಲ. 482 00:36:37,988 --> 00:36:39,990 ಪರವಾಗಿಲ್ಲ. ನನಗೆ ನೀನು ಇರಬೇಕು. 483 00:36:41,033 --> 00:36:43,160 ನೀನು ನನ್ನ, ನನ್ನ ಕುಟುಂಬದ ಜೀವನ ಬದಲಾಯಿಸಿದೆ. 484 00:36:43,160 --> 00:36:45,787 ನೀನಿಲ್ಲದಿದ್ದರೆ ನಮಗೆ ಈ ಮನೆ ಸಿಗುತ್ತಿರಲಿಲ್ಲ. 485 00:36:47,497 --> 00:36:50,876 ನೋಡು, ಇದು ತುಂಬಾ ಒಳ್ಳೆಯದು ಮತ್ತು ಸಂತೋಷವೇ, 486 00:36:50,876 --> 00:36:53,879 ಅವನೆಂದರೆ ನನಗೆ ಇಷ್ಟವಿಲ್ಲ, ಮತ್ತು ನನಗೆ ಬೇರೆ ಜಾಗ ಇದೆ. 487 00:36:53,879 --> 00:36:55,213 ಇಲ್ಲ, ನಿನಗಿಲ್ಲ. 488 00:36:56,173 --> 00:36:57,633 ಅಂದ್ರೆ, ಗೊತ್ತಿಲ್ಲ. 489 00:36:57,633 --> 00:37:00,761 ಇರಬಹುದೇನೋ. ನೀನು ಬಟ್ಟೆ ಹಾಕಿಕೊಂಡು 490 00:37:00,761 --> 00:37:04,097 ಒಂದು ಟ್ಯಾಕ್ಸಿ ಕರೆಸಿ, ನಮಗಾಗಿ ಒಂದು ಅನಾನಸ್ ತಂದು 491 00:37:04,097 --> 00:37:06,767 ಸುಮ್ಮನೆ ಹಾಯ್ ಹೇಳಿ ಹೋಗಲು ಬಂದಿರಬಹುದೇನೋ. 492 00:37:07,684 --> 00:37:11,980 ಅಥವಾ ನಿನ್ನಲ್ಲಿನ ಒಂದು ಭಾಗ ಇದು ಎಲ್ಲಿ ಹೋಗಬಹುದು ಅಂತ ನೋಡಲು ಬಂದಿರಬಹುದೇನೋ. 493 00:37:13,482 --> 00:37:18,195 ನೀನು ಈಗ ಹೊರಟರೆ, ನಿನಗೆ ಎಂದಿಗೂ ತಿಳಿಯದು. ನಮಗೂ ತಿಳಿಯಲ್ಲ. 494 00:37:21,406 --> 00:37:23,241 ನಿನ್ನನ್ನು ಪಡೆದದ್ದು ಅವನ ಅದೃಷ್ಟ. 495 00:37:26,703 --> 00:37:29,539 ನಿನ್ನ ಗಿಟಾರ್ ಫಿಲ್ಸ್ ಬಂದಾಗ, ಹೇಗಿರುತ್ತೆ ಅಂದ್ರೆ... 496 00:37:31,416 --> 00:37:34,711 ಹೇ, ಏನಾಯ್ತು? ಪವರ್ ಹೋಯ್ತು. ಕೆಮೀಲ? 497 00:37:35,629 --> 00:37:36,755 ಇಲ್ಲಿದೆ. 498 00:37:38,215 --> 00:37:42,386 ನಮ್ಮಮ್ಮನಿಗೆ ಭೂಕಂಪ ಅಂದರೆ ತುಂಬಾ ಭಯ, ಅದಕ್ಕೆ ಇವುಗಳನ್ನು ಖರೀದಿಸುವಂತೆ ಹೇಳಿದರು. 499 00:37:43,303 --> 00:37:45,722 -ತಗೋ. ಹಚ್ಚುತ್ತೇನೆ, ನೀನು ಕೊಡ್ತೀಯಾ? -ಆಗಬಹುದು. 500 00:37:47,474 --> 00:37:48,642 ಚೆನ್ನಾಗಿದೆ. 501 00:38:16,294 --> 00:38:17,713 ಪರವಾಗಿಲ್ಲ. 502 00:38:18,171 --> 00:38:21,049 ಪರವಾಗಿಲ್ಲ. ಹೇ. ಹೇ. 503 00:38:21,425 --> 00:38:22,592 ಪರವಾಗಿಲ್ಲ. 504 00:38:28,140 --> 00:38:29,307 ಪರವಾಗಿಲ್ಲ. 505 00:38:32,019 --> 00:38:33,145 ಪರವಾಗಿಲ್ಲ. 506 00:38:33,895 --> 00:38:35,063 ಏನಾದ್ರೂ ಕುಡೀತೀಯಾ? 507 00:38:36,481 --> 00:38:38,483 ವಿಚಿತ್ರವಾಗಿದೆ. ಬೇರೆ ದಿನ ಬಿಟ್ಟು ಇಂದು. 508 00:38:40,610 --> 00:38:42,863 ಓ, ನಾನು... ಅಳುತ್ತಿದ್ದಳು, ಅದಕ್ಕೆ ನಾನು... 509 00:38:43,739 --> 00:38:46,366 ಹೇ, ಪಾಪು. ಹೇ. ಬಾ ಇಲ್ಲಿ. 510 00:38:48,785 --> 00:38:52,330 ಪರವಾಗಿಲ್ಲ. ಪವರ್ ಹೋದರೆ ನಿನಗೆ ಭಯವೇ, ಮುದ್ದು? 511 00:38:54,082 --> 00:38:55,292 ಪರವಾಗಿಲ್ಲ. 512 00:38:55,292 --> 00:38:59,212 ನೀನು ನನ್ನೊಂದಿಗೆ ಇರಬೇಕು ಇಲ್ಲಿ, ಯಾಕಂದ್ರೆ ನನಗೂ ಭಯವೇ. 513 00:39:02,007 --> 00:39:03,800 ನೀನಂದ್ರೆ ಅವಳಿಗೆ ಇಷ್ಟ ಅನ್ಸುತ್ತೆ. 514 00:39:05,969 --> 00:39:08,555 -ಧನ್ಯವಾದ. ಒಳ್ಳೆಯದಾಯಿತು. -ಸರಿ. 515 00:39:34,372 --> 00:39:40,295 ಪಾಪ ನಮ್ಮ ತಾತ ಆತನ ಮಾತುಗಳಿಗೆಲ್ಲಾ ನಗುತ್ತಿದ್ದೆ 516 00:39:40,670 --> 00:39:46,676 ಆತ ಕಟು ವ್ಯಕ್ತಿ ಎಂದುಕೊಂಡಿದ್ದೆ ಹೆಂಗಸರ ಬಗ್ಗೆ ಮಾತನಾಡುತ್ತಿದ್ದ 517 00:39:47,594 --> 00:39:52,849 ನಿನ್ನನ್ನು ಬಲೆಗೆ ಬೀಳಿಸಿ, ಉಪಯೋಗಿಸಿಬಿಡುತ್ತಾರೆ ನಿನಗೆ ಗೊತ್ತಾಗುವ ಮುಂಚೆ 518 00:39:53,934 --> 00:39:59,189 ಪ್ರೀತಿ ಕುರುಡು ಮತ್ತು ನೀನು ತುಂಬಾ ಒಳ್ಳೆಯವನು ಅದನ್ನು ಎಂದಿಗೂ ತೋರಿಸಿಕೊಳ್ಳಬೇಡ 519 00:40:00,148 --> 00:40:04,194 ನನಗೆ ಈಗ ಗೊತ್ತಿರುವುದು ಆಗ ಗೊತ್ತಾಗಬೇಕಿತ್ತು 520 00:40:04,736 --> 00:40:06,488 ನಾನು ಚಿಕ್ಕವನಿದ್ದಾಗ 521 00:40:06,488 --> 00:40:10,575 ನನಗೆ ಈಗ ಗೊತ್ತಿರುವುದು ಆಗ ಗೊತ್ತಾಗಬೇಕಿತ್ತು 522 00:40:11,284 --> 00:40:12,828 ನನಗೆ ಶಕ್ತಿ ಇದ್ದಾಗ 523 00:40:12,828 --> 00:40:18,291 ನೀನು ಅವಳ ತುಟಿ ಕೇಳಿದರೆ, ಕೆನ್ನೆ ಸಿಗುತ್ತದೆ ನೀನೆಲ್ಲಿರುವೆ ಎಂದುಕೊಳ್ಳುವೆ 524 00:40:18,834 --> 00:40:21,795 ಇನ್ನೂ ಸ್ವಲ್ಪ ಬೇಕಾದರೆ ಆಗ ಅವಳು ನಿದ್ದೆ ಮಾಡಿರುತ್ತಾಳೆ 525 00:40:22,045 --> 00:40:25,048 ನೀನು ನಕ್ಷತ್ರಗಳೊಂದಿಗೆ ಮಿಂಚುತ್ತಿರುತ್ತೀಯ 526 00:40:25,674 --> 00:40:31,263 ಪಾಪದ ಮೊಮ್ಮಗನೇ ನಿನಗೆ ಹೇಳಲು ಏನೂ ಉಳಿದಿಲ್ಲ 527 00:40:31,888 --> 00:40:37,561 ನೀನು ನನ್ನಂತೆಯೇ ಕಲಿಯಬೇಕು ಅದೂ ಕಷ್ಟಪಟ್ಟು 528 00:40:50,991 --> 00:40:55,787 ನನಗೆ ಈಗ ಗೊತ್ತಿರುವುದು ಆಗ ಗೊತ್ತಾಗಬೇಕಿತ್ತು 529 00:40:55,787 --> 00:40:57,539 ನಾನು ಚಿಕ್ಕವನಿದ್ದಾಗ 530 00:40:57,539 --> 00:41:02,127 ನನಗೆ ಈಗ ಗೊತ್ತಿರುವುದು ಆಗ ಗೊತ್ತಾಗಬೇಕಿತ್ತು 531 00:41:02,127 --> 00:41:04,671 ನನಗೆ ಶಕ್ತಿ ಇದ್ದಾಗ 532 00:41:14,598 --> 00:41:18,059 ಇಷ್ಟು ಕಾಲ ನಾನು ಏನನ್ನು ಹೇಳುತ್ತಿದ್ದೆ? 533 00:41:18,059 --> 00:41:21,563 -ಮಾಡಿದೆ, ಆಯ್ತಾ? -ಅನುಭವಿಸಿದೆಯಾ? ಕೇಳಿದೆಯಾ? 534 00:41:21,563 --> 00:41:24,900 -ಆಯ್ತು. ಹೌದು, ನೀನೇ ಸರಿ. -ಎಷ್ಟು ಚೆನ್ನಾಗಿತ್ತು. 535 00:41:27,152 --> 00:41:28,153 ಏನು? 536 00:41:35,535 --> 00:41:37,329 ಕ್ಷಮಿಸು. ಕ್ಷಮಿಸು. 537 00:41:37,329 --> 00:41:38,914 ಇಲ್ಲ, ನಾನು... 538 00:41:38,914 --> 00:41:42,125 ಇಲ್ಲ. ನನಗೆ ಆಶ್ಚರ್ಯವಾಯಿತು. 539 00:41:45,587 --> 00:41:48,590 ಅಂದ್ರೆ, ನಿನಗೆ ಗೊತ್ತಾ, ನಾನು ಯಾವಾಗಲೂ... 540 00:41:50,842 --> 00:41:54,512 -ದಿ ಸ್ಟೇರ್ಕೇಸಲ್ಲಿನ ಮೊದಲ ರಾತ್ರಿಯಿಂದ. -ನಂಗೊತ್ತು. 541 00:41:57,432 --> 00:41:59,517 ನಮ್ಮ ಮಧ್ಯೆ ಅಂತೂ ನಡೆಯಲ್ಲ, ಅಲ್ವಾ? 542 00:42:03,104 --> 00:42:04,606 ನನ್ನ ಪ್ರಕಾರ ನೀನು ಅದ್ಭುತ. 543 00:43:01,913 --> 00:43:02,831 ಹೇ. 544 00:43:04,749 --> 00:43:05,959 ನೀನು ಬ್ಯಾಂಡಲ್ಲಿದ್ದೀಯಾ? 545 00:43:07,877 --> 00:43:10,171 -ಹಾಂ. ಹಾಂ. -ಅಂದುಕೊಂಡೆ. 546 00:43:10,171 --> 00:43:12,132 -ಹಾಯ್. ನಾನು ಕ್ಯಾರೋಲಿನ್. -ಗ್ರಹಮ್. 547 00:43:32,152 --> 00:43:33,445 ಹಾಯ್. 548 00:43:34,279 --> 00:43:35,405 ಕ್ಷಮಿಸು. 549 00:43:45,915 --> 00:43:48,001 ಗೊತ್ತಾ, ಎಂಜಿನ್ ಅಷ್ಟೇ ಅಲ್ಲ. 550 00:43:49,961 --> 00:43:51,838 ನೀನು ಅವಳಿಗೆ ಸುರಕ್ಷಿತ ಎನಿಸುವೆ. 551 00:43:57,052 --> 00:43:58,178 ಹಾಂ. 552 00:44:01,014 --> 00:44:02,557 ಒಂದು ಮಾತು ಹೇಳಲಾ? 553 00:44:04,142 --> 00:44:05,185 ಹಾಂ. 554 00:44:06,353 --> 00:44:08,730 -ಬಿಲ್ಲಿ, ನೀನು ಮತ್ತು ಡೈಸಿ... -ಗೊತ್ತು. 555 00:44:08,855 --> 00:44:12,692 ಅಲ್ಲ, ನಿನಗೆ ಖಚಿತವಾಗಿ ಬೇಕಿರುವುದು ಅದೇ. 556 00:44:13,610 --> 00:44:16,154 ನೀನು ಹೋಗಬೇಕಿರುವ ಕಡೆ ಹೋಗಲು ಬೇಕಿರುವುದು ಅದೇನೇ. 557 00:44:16,154 --> 00:44:17,655 ಗೊತ್ತು. ಗೊತ್ತು. 558 00:44:21,493 --> 00:44:23,036 ಗೊತ್ತು. 559 00:44:32,879 --> 00:44:35,632 ನನ್ನನ್ನು ನೋಡು. ನನ್ನನ್ನು ನೋಡು. 560 00:44:37,300 --> 00:44:38,510 ಏನು? 561 00:44:39,552 --> 00:44:41,846 ಏನೇ ಆದರೂ ನಿನ್ನನ್ನು ಪ್ರೀತಿಸುವೆ. 562 00:44:43,306 --> 00:44:45,475 -ಆಯ್ತಾ? -ಆಯ್ತು. 563 00:44:51,064 --> 00:44:54,943 ಆ ಮಾಯ್ ಟಾಯಲ್ಲೇನು ಹಾಕಿದೆ? 564 00:44:55,819 --> 00:44:57,570 -ದೇವರೇ. -ಶುಭೋದಯ. 565 00:45:09,249 --> 00:45:10,208 ಏನು? 566 00:45:11,042 --> 00:45:15,880 ಇದನ್ನು ಹೇಳಬೇಕಾ ಗೊತ್ತಿಲ್ಲ, ಆದರೂ ಇರಲಿ ಅಂತ ಹೇಳುತ್ತೇನೆ. 567 00:45:18,591 --> 00:45:22,971 ಬಿಲ್ಲಿ ಮತ್ತು ನಾನು, ಮತ್ತು ವಾರೆನ್ ಮತ್ತು ಗ್ರಹಮ್, ಮತ್ತು ಎಡ್ಡಿ ಮತ್ತು ಕರೆನ್, 568 00:45:23,847 --> 00:45:29,227 ಗೊತ್ತಾ, ನಾವೊಂದು ಕುಟುಂಬ, ಡೈಸಿ. ಗೊತ್ತಾ? 569 00:45:29,227 --> 00:45:32,439 ಮತ್ತು ಕುಟುಂಬಗಳು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾರೆ. 570 00:45:33,398 --> 00:45:34,566 ಹೌದಾ? 571 00:45:39,988 --> 00:45:42,115 ನನ್ನ ಅನುಭವದಲ್ಲಿ ಹಾಗಾಗಿಲ್ಲ. 572 00:45:44,075 --> 00:45:46,786 ಆದರೆ, ಇದರಲ್ಲಿ ಹಾಗೇ ಇದೆ. 573 00:45:47,954 --> 00:45:52,584 ನಾವು ನಿನ್ನನ್ನು ನೋಡಿಕೊಳ್ಳುತ್ತೇವೆ, ನೀನು ನಮ್ಮನ್ನು ನೋಡಿಕೋ. ಆಯ್ತಾ? 574 00:46:07,307 --> 00:46:08,600 ನಂಬಿಕೆ ಸುಲಭವಲ್ಲ. 575 00:46:09,309 --> 00:46:12,604 ಏನಂದ್ರೆ, ನಾವು ಮಾಡಬಹುದಾದ ಅತ್ಯಂತ ಕಷ್ಟದ ಕೆಲಸ ಅದು. 576 00:46:12,604 --> 00:46:15,607 ಆದರೆ ಅದಿಲ್ಲದೆ ನಮ್ಮ ಬಳಿ ಏನೂ ಇರಲ್ಲ. 577 00:46:18,359 --> 00:46:20,278 ಹಾಗಾಗಿ, ಅವರನ್ನು ನಂಬಲು ನಿರ್ಧರಿಸಿದೆ. 578 00:46:23,031 --> 00:46:24,616 ನಾನು ತಪ್ಪು ಮಾಡಿದ್ನಾ? 579 00:46:28,745 --> 00:46:30,330 ನಂಗೊತ್ತಿಲ್ಲ. ನೀವೇ ಹೇಳಿ. 580 00:48:10,179 --> 00:48:12,181 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 581 00:48:12,181 --> 00:48:14,267 ಸೃಜನಶೀಲ ಮೇಲ್ವಿಚಾರಕರು Vivek